Tag: ಕಮಲ

  • ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಮಲ ಪ್ರದರ್ಶಿಸಿದ ಮಕ್ಕಳು – ಶಾಸಕ ಶಿವಲಿಂಗೇಗೌಡ ಗರಂ

    ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಮಲ ಪ್ರದರ್ಶಿಸಿದ ಮಕ್ಕಳು – ಶಾಸಕ ಶಿವಲಿಂಗೇಗೌಡ ಗರಂ

    – ಮಕ್ಕಳನ್ನು ಹೇಗೆ ಉದ್ಧಾರ ಮಾಡ್ತೀರಾ ಅಂತಾ ಶಿಕ್ಷಕರಿಗೆ ತರಾಟೆ

    ಹಾಸನ: ಅರಸೀಕೆರೆಯ (Arasikere) ಶಾಲೆಯೊಂದರಲ್ಲಿ (School) ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ಗರಂ ಆಗಿದ್ದಾರೆ.

    ಗಣರಾಜ್ಯೋತ್ಸವ (Republic Day) ಅಂಗವಾಗಿ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭ ಶಾಲಾ ಮಕ್ಕಳು ನೃತ್ಯ ಪ್ರದರ್ಶನವೊಂದರಲ್ಲಿ ಭಾರತದ ರಾಷ್ಟ್ರೀಯ ಹೂವು ಕಮಲದ ಚಿತ್ರವನ್ನು ಪ್ರದರ್ಶಿಸಿದ್ದರು. ಇದರಿಂದ ಶಾಸಕ ಶಿವಲಿಂಗೇಗೌಡ, ತಹಸೀಲ್ದಾರ್ ಸಂತೋಷ್ ಹಾಗೂ ಸಾರ್ವಜನಿಕರು ಕೆಂಡಾಮಂಡಲವಾಗಿದ್ದು, ಶಾಲಾ ಶಿಕ್ಷಕಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ; ಮೊದಲ ಪಟ್ಟಿ ರಿಲೀಸ್

    ಶಾಲಾ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕ, ಕಮಲ ಯಾವ ಪಕ್ಷದ ಚಿಹ್ನೆ? ಯಾವ ಸೀಮೆ ನಾಗರಿಕರು ನೀವು? ಮಕ್ಕಳನ್ನು ಹೇಗೆ ಉದ್ಧಾರ ಮಾಡ್ತೀರಾ ಎಂದು ಕೋಪಗೊಂಡಿದ್ದಾರೆ. ಈ ವೇಳೆ ಶಾಲಾ ಶಿಕ್ಷಕಿ, ಕಮಲ ಒಂದು ಪಕ್ಷದ ಚಿಹ್ನೆ ಹೇಗೆ ಆಗುತ್ತೆ ಸರ್? ನೀವು ಹೀಗೆ ಮಾತನಾಡಿದರೆ ಸರಿ ಹೋಗಲ್ಲ ಸರ್ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: 2024ರಲ್ಲಿ ಅಣು ಬಾಂಬ್ ಸ್ಫೋಟಗೊಳ್ಳುವ ಸಾಧ್ಯತೆ ಇದೆ: ಕೋಡಿಮಠ ಸ್ವಾಮೀಜಿ ಭವಿಷ್ಯ

    ಇದರಿಂದ ಸಿಟ್ಟುಗೊಂಡ ಶಾಸಕರು, ಏನು ಸರಿ ಹೋಗಲ್ಲ? ನಿಮಗೆ ನೋಟಿಸ್ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ತಹಸೀಲ್ದಾರ್ ಸಂತೋಷ್ ಮಧ್ಯಪ್ರವೇಶಿಸಿ ಒಂದು ಧರ್ಮ, ಒಂದು ಪಕ್ಷದ ಚಿಹ್ನೆ ಹೈಲೆಟ್ ಮಾಡಬಾರದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಕಿ ಲಕ್ಷ್ಮಿ, ನಿನ್ನೆ-ಮೊನ್ನೆ ನೃತ್ಯ ನೋಡಿದವರು ನೋಡಿದರೆ ಅದನ್ನು ಬಳಸುತ್ತಿರಲಿಲ್ಲ. ಸಭೆಯಲ್ಲಿ ಸೂಚನೆ ನೀಡಿದ್ದರೆ ಚಿಹ್ನೆ ಬಳಸುತ್ತಿರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಂಘಟನೆ ಕೆಲಸದಲ್ಲಿ ತೊಡಗಿಸಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡ್ತೇನೆ: ಜಗದೀಶ್ ಶೆಟ್ಟರ್

    ಇದಕ್ಕೆ ಪ್ರತ್ಯುತ್ತರ ಕೊಟ್ಟ ಶಾಸಕ ಶಿವಲಿಂಗೇಗೌಡ, ಇವರು ಎಂತದ್ದಾನ್ನಾದರೂ ತೋರಿಸಿಕೊಳ್ಳಲಿ ನನಗೇನು? ಅಲ್ಲಿ ಯಾವನೋ ಕುಳಿತಿರುತ್ತಾನೆ. ಬಿಜೆಪಿ ಚಿಹ್ನೆ ತೋರಿಸುತ್ತಿದ್ದಾರೆ ಎಂದು ಕಲ್ಲು ತೂರಿದರೆ ಮುಂದೆ ಆಗುವುದನ್ನು ನೋಡಬೇಕು. ಇದು ರಾಷ್ಟ್ರೀಯ ಹಬ್ಬ ಎಂದು ಸಿಡಿಮಿಡಿಗೊಂಡಿದ್ದಾರೆ. ಅತ್ಯುತ್ತಮ ನೃತ್ಯಕ್ಕಾಗಿ ಶಾಲಾ ಮಕ್ಕಳು ಮೊದಲ ಬಹುಮಾನ ಪಡೆದಿದ್ದರು. ಶಾಸಕರ ಆಕ್ಷೇಪದ ನಂತರ ತಾಲೂಕು ಆಡಳಿತ ನಾಲ್ಕನೇ ಬಹುಮಾನ ನೀಡಿದೆ. ಇದನ್ನೂ ಓದಿ: ಗಣೇಶ್ ಭಟ್ ಕೆತ್ತಿರೋ ವಿಗ್ರಹವನ್ನು ರಾಮದೇವರ ಬೆಟ್ಟಕ್ಕೆ ನೀಡುವಂತೆ ಇಕ್ಬಾಲ್ ಹುಸೇನ್ ಪತ್ರ

  • ಬಾಲ`ರಾಮ’ನ ಪಾದ ಸೇರಿತು `ಕಮಲ’..!

    ಬಾಲ`ರಾಮ’ನ ಪಾದ ಸೇರಿತು `ಕಮಲ’..!

    ಅಯೋಧ್ಯೆ: ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಇಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ (Ram Mandir) ಭವ್ಯವಾಗಿ ನೆರವೇರಿತು. ಮಧ್ಯಾಹ್ನ 12:29:08 ಸೆಕೆಂಡ್‌ನಿಂದ 12:30:34 ರವರೆಗಿನ 84 ಸೆಕೆಂಡ್‌ಗಳ ಶುಭ ಅಭಿಜಿನ್ ಲಗ್ನದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನಾ ಮಹೋತ್ಸವ ನೆರವೇರಿತು. ಶ್ರೀರಾಮೋತ್ಸವದ ಪ್ರಧಾನ ಯಜಮಾನ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ, ಮಂತ್ರಘೋಷಗಳ ನಡುವೆ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಿದೆ.

    ಮೋದಿ ಕೈಯಲ್ಲಿತ್ತು ಕಮಲ!
    ಗರ್ಭಗುಡಿಯನ್ನು ಪ್ರವೇಶಿಸಿದ ಮೋದಿ ಕಮಲದ ಹೂವನ್ನು (Lotus Flower) ತೆಗೆದುಕೊಂಡು ಅನುಷ್ಠಾನ ವಿಧಿವಿಧಾನ ಆರಂಭಿಸಿದರು. ಇವೆಲ್ಲ ಕಾರ್ಯಗಳ ಬಳಿಕ ಮೋದಿ ಅವರು ಕಮಲದ ಹೂವನ್ನು ಬಾಲರಾಮನ ಪಾದಕ್ಕೆ ಸಮರ್ಪಿಸಿದರು. ನಂತರ ಮೋದಿ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆರತಿ ಬೆಳಗಿದರು. ನಂತರ ಮೋದಿ ಬಾಲರಾಮನ ಮುಂದೆ ಸಾಷ್ಟಾಂಗ ವಂದಿಸಿದರು. ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯುವ ಸಮಯ ಗೊತ್ತಾ..?

    ಈ ವೇಳೆ ದೇವಸ್ಥಾನ ಒಳಗೆ ಮತ್ತು ಹೊರಗೆ ಸೇರಿದ್ದವರು ಶ್ರೀರಾಮ, ಜಯರಾಮ ಘೋಷಣೆ ಕೂಗಿದರು. ಸೇನಾ ಹೆಲಿಕಾಪ್ಟರ್ ಮೂಲಕ ಮಂದಿರದ ಮೇಲೆ ಪುಷ್ಪವೃಷ್ಟಿಯನ್ನೂ ಮಾಡಲಾಯಿತು. ಇದನ್ನೂ ಓದಿ: 35 ನಿಮಿಷದ ಭಾಷಣದಲ್ಲಿ 114 ಬಾರಿ ರಾಮ ನಾಮ ಸ್ಮರಿಸಿದ ಮೋದಿ!

  • ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂ ಕೀಳಲು ಕೆರೆಗೆ ಇಳಿದ ತಂದೆ-ಮಗ ಸಾವು

    ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂ ಕೀಳಲು ಕೆರೆಗೆ ಇಳಿದ ತಂದೆ-ಮಗ ಸಾವು

    ಚಿಕ್ಕಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂವು ಕೀಳಲು ಹೋಗಿ ಕೆರೆಗೆ ಇಳಿದಿದ್ದ ತಂದೆ ಹಾಗೂ ಮಗ (Father-Son) ಸಾವನ್ನಪ್ಪಿರುವ ದಾರುಣ ಘಟನೆ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಭೂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತಂದೆ ಪುಟ್ಟರಾಜು (42) ಹಾಗೂ ಮಗ ಕೇಶವ (14) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ ದುರ್ದೈವಿಗಳು. ಮೃತರು ದೊಡ್ಡಬಳ್ಳಾಪುರದ ಶಾಂತಿನಗರದ ನಿವಾಸಿಗಳು. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ವ್ಯಾಪಾರಕ್ಕಾಗಿ ಬುಧವಾರ ಸಂಜೆ ಭೂಚನಹಳ್ಳಿ ಬಳಿಯ ಕೆರೆಗೆ ತಾವರೆ ಹೂ ಕೀಳಲು ಹೋಗಿದ್ದರು.

    ಕೆರೆಯ ದಡದಲ್ಲಿ ಮೊಬೈಲ್, ಚಪ್ಪಲಿ ಬಿಟ್ಟು ತಾವರೆ ಹೂ ಕೀಳಲು ತಂದೆ, ಮಗ ಮುಂದಾದಾಗ ಅವಘಡ ಸಂಭವಿಸಿದೆ. ಮತ್ತೊಬ್ಬ ತಾವರೆ ಹೂ ಮಾರಾಟಗಾರ ಕೆರೆಯ ಬಳಿ ಹೋದಾಗ ಇಬ್ಬರು ಕೆರೆಯಲ್ಲಿ ಮುಳುಗಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಹೃದಯಾಘಾತದಿಂದ ಪೊಲೀಸ್ ಕಾನ್ಸ್‌ಟೇಬಲ್ ಸಾವು

    ಇದೀಗ ಅಗ್ನಿಶಾಮಕ ದಳ ಸಿಬ್ಬಂದಿ ಕೆರೆಯಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಘಟನೆ ಬಗ್ಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯ ಆರೋಪ- 5 ವರ್ಷದ ಬಾಲಕಿ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಿ20 ಲೋಗೋದಲ್ಲಿ ಕಮಲ – ಉದ್ದೇಶಪೂರ್ವಕವಾಗಿ ಬಿಜೆಪಿ ತನ್ನ ಲೋಗೋ ತುರುಕಿದೆ ಎಂದ ಕಾಂಗ್ರೆಸ್‌

    ಜಿ20 ಲೋಗೋದಲ್ಲಿ ಕಮಲ – ಉದ್ದೇಶಪೂರ್ವಕವಾಗಿ ಬಿಜೆಪಿ ತನ್ನ ಲೋಗೋ ತುರುಕಿದೆ ಎಂದ ಕಾಂಗ್ರೆಸ್‌

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi) ಅನಾವರಣ ಮಾಡಿದ G20 ಶೃಂಗಸಭೆಯ ಲೋಗೋಕ್ಕೆ ಈಗ ಕಾಂಗ್ರೆಸ್‌(Congress) ಆಕ್ಷೇಪ ಎತ್ತಿದೆ.

    ಈ ಲೋಗೋದಲ್ಲಿ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಪಕ್ಷದ ಚಿನ್ಹೆಯಾದ ಕಮಲವನ್ನು(Lotus) ತುರುಕಿದೆ. ಇದು ಆಘಾತಕಾರಿ ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಈ ಹಿಂದೆ ಖುದ್ದು ನೆಹರೂ ಅವರು, ಕಾಂಗ್ರೆಸ್ ಪಕ್ಷದ ಚಿನ್ಹೆ ಬಳಸುವ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಆದರೆ ಈಗ ಎಲ್ಲೆಲ್ಲಿ ಅವಕಾಶ ಸಿಗುತ್ತೋ ಅಲ್ಲೆಲ್ಲ ಬಿಜೆಪಿ ತಮ್ಮ ಪಕ್ಷದ ಪ್ರಚಾರ ಮಾಡಿಕೊಳ್ಳುತ್ತಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.

    ಇದಕ್ಕೆ ಬಿಜೆಪಿ(BJP) ರಾಜೀವ್ ಹೆಸರಿನ ಅರ್ಥ ಗೊತ್ತೆ? ಕಮಲ್‍ನಾಥ್ ಹೆಸರಿನಿಂದ ಕಮಲ ತೆಗೆಯುತ್ತೀರಾ ಎಂದು ಪ್ರಶ್ನಿಸಿ ಕಾಲೆಳೆದಿದೆ. ಕಮಲ ನಮ್ಮ ರಾಷ್ಟ್ರೀಯ ಹೂವು. ಇದು ಲಕ್ಷ್ಮಿಯ ಆಸನವೂ ಹೌದು. ನೀವು ರಾಷ್ಟ್ರೀಯ ಹೂವನ್ನು ವಿರೋಧಿಸುತ್ತೀರಾ? ರಾಷ್ಟ್ರೀಯ ಪುಷ್ಪಕ್ಕೆ ಅಪಮಾನ ಮಾಡುತ್ತೀರಾ? ಇಲ್ಲಿ ನಿಮಗೆ ಅಜೆಂಡಾ ಇದ್ದಂತಿಲ್ಲ. ಬಿಜೆಪಿಯ ಎಲ್ಲಾ ಕೆಲಸಗಳನ್ನು ಟೀಕಿಸುವುದೇ ನಿಮ್ಮ ಅಜೆಂಡಾ ಆಗಿದೆ ಎಂದು ತಿರುಗೇಟು ನೀಡಿದೆ. ಇದನ್ನೂ ಓದಿ: ನನ್ನ ತೇಜೋವಧೆ ಆಗ್ತಿದೆ – ವಿವಾದಿತ ಹೇಳಿಕೆಯನ್ನು ಹಿಂಪಡೆದ ಸತೀಶ್ ಜಾರಕಿಹೊಳಿ

    ಭಾರತವು ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿನರೇಂದ್ರ ಮೋದಿ ಅವರು ಜಿ20 ಅಧ್ಯಕ್ಷ ಗಾದಿಯ ಲೋಗೊ, ಥೀಮ್(ಘೋಷವಾಕ್ಯ) ಮತ್ತು ವೆಬ್‌ಸೈಟ್ ಅನಾವರಣಗೊಳಿಸಿದ್ದರು.

    ಭೂಮಿಯನ್ನು ಕಮಲದೊಂದಿಗೆ ಜೋಡಿಸಲಾಗಿರುವ ಲೋಗೋ ಮತ್ತು ವಸುದೈವ ಕುಟುಂಬಕಂ(ವಿಶ್ವವೇ ಕುಟುಂಬ) ಘೋಷವಾಕ್ಯ ಬಿಡುಗಡೆ ಮಾಡಿ ಅದರ ಅರ್ಥವನ್ನು ವಿವರಿಸಿದ್ದರು.

    ಮೋದಿ ಹೇಳಿದ್ದು ಏನು?
    ಜಿ20 ಲೋಗೋದಲ್ಲಿನ ಕಮಲದ ಚಿಹ್ನೆಯು ಈ ಸಮಯದಲ್ಲಿ ಭರವಸೆಯ ಪ್ರಾತಿನಿಧಿಯಾಗಿದೆ. ಎಷ್ಟೇ ಪ್ರತಿಕೂಲ ಸಂದರ್ಭಗಳಿದ್ದರೂ ಕಮಲ ಅರಳುತ್ತಲೇ ಇರುತ್ತದೆ. ಜಗತ್ತು ಆಳವಾದ ಬಿಕ್ಕಟ್ಟಿನಲ್ಲಿದ್ದರೂ, ನಾವು ಇನ್ನೂ ಪ್ರಗತಿ ಸಾಧಿಸಬಹುದು ಮತ್ತು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಬಹುದು.

    ಭಾರತೀಯ ಸಂಸ್ಕೃತಿಯಲ್ಲಿ, ಜ್ಞಾನ ಮತ್ತು ಸಮೃದ್ಧಿಯ ದೇವತೆಗಳಿಬ್ಬರೂ ಕಮಲದ ಮೇಲೆ ಕುಳಿತಿದ್ದಾರೆ. ಇದು ಇಂದು ಜಗತ್ತಿಗೆ ಅತ್ಯಂತ ಅಗತ್ಯವಾಗಿದೆ. ನಮ್ಮ ಪರಿಸ್ಥಿತಿಗಳನ್ನು ಜಯಿಸಲು ನಮಗೆ ಸಹಾಯ ಮಾಡುವ ಹಂಚಿದ ಜ್ಞಾನ. ಕೊನೆಯ ಮೈಲಿನಲ್ಲಿರುವ ಕೊನೆಯ ವ್ಯಕ್ತಿಯನ್ನು ತಲುಪುವ ಹಂಚಿಕೆಯ ಸಮೃದ್ಧಿ. ಅದಕ್ಕಾಗಿಯೇ ಜಿ20 ಲಾಂಛನದಲ್ಲಿ ಭೂಮಿಯನ್ನು ಕಮಲದ ಮೇಲೆ ಇರಿಸಲಾಗಿದೆ.

    ಲಾಂಛನದಲ್ಲಿರುವ ಕಮಲದ ಏಳು ದಳಗಳು ಮಹತ್ವಪೂರ್ಣವಾಗಿವೆ. ಆ ದಳಗಳು ಏಳು ಖಂಡಗಳನ್ನು ಪ್ರತಿನಿಧಿಸುತ್ತದೆ. ಸಂಗೀತದಲ್ಲಿ ಏಳು ಸ್ವರಗಳಿದ್ದು, ಈ ಸ್ವರಗಳು ಒಟ್ಟಿಗೆ ಸೇರಿದಾಗ, ಅವು ಪರಿಪೂರ್ಣ ಸಾಮರಸ್ಯವನ್ನು ಸೃಷ್ಟಿಸುತ್ತವೆ. ಈ ರೀತಿಯಾಗಿ ಎಲ್ಲ ದೇಶಗಳು ಸಾಮರಸ್ಯದಿಂದ ಒಂದಾಗಿ ಅಭಿವೃದ್ಧಿಯಾಗಬೇಕು.

    ಪ್ರಸ್ತುತ ಅಧ್ಯಕ್ಷ ಸ್ಥಾನ ವಹಿಸಿರುವ ಇಂಡೋನೇಷ್ಯಾದಿಂದ ಡಿಸೆಂಬರ್ 1 ರಂದು ಭಾರತ ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಪೀಕರ್ ಕಾಂಗ್ರೆಸ್ ಏಜೆಂಟ್‍ರಂತೆ ವರ್ತಿಸುತ್ತಿದ್ದಾರೆ: ಶೋಭಾ ಕರಂದ್ಲಾಜೆ

    ಸ್ಪೀಕರ್ ಕಾಂಗ್ರೆಸ್ ಏಜೆಂಟ್‍ರಂತೆ ವರ್ತಿಸುತ್ತಿದ್ದಾರೆ: ಶೋಭಾ ಕರಂದ್ಲಾಜೆ

    ಬೆಂಗಳೂರು: ವಿಶ್ವಾಸಮತ ಮಂಡಿಸದೆ ಕಾಲಹರಣ ಮಾಡುವ ಮೂಲಕ ಸಿಎಂ ಹಾಗೂ ಸ್ಪೀಕರ್ ನಾಟಕವಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ವಿಶ್ವಾಸಮತಯಾಚನೆ ಮಾಡುತ್ತೇನೆಂದು ಅಧಿವೇಶನ ಆರಂಭಿಸಿದರು. ಆದರೆ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಕಾಲಹರಣ ಮಾಡುತ್ತಿದ್ದಾರೆ. ಈ ಮೂಲಕ ಸಮಯ ಮುಂದೂಡುವ ಕೆಲಸ ಮಾಡಿ, ಸದನದಲ್ಲಿ ಗಲಭೆ ಏಳುವಂತೆ ಮಾಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.

    ಒಂದೆಡೆ ಸಂವಿಧಾನಾತ್ಮಕವಾಗಿ ಹಾಗೂ ನಿಯಮಬದ್ಧವಾಗಿ ನೀಡಿದ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸುತ್ತಿಲ್ಲ. ಇನ್ನೊಂದೆಡೆ ಸದನದಲ್ಲಿ ವಿಶ್ವಾಸಮತಯಾಚನೆಗೆ ಅವಕಾಶ ನೀಡದೆ, ಕಾಲಹರಣ ಮಾಡುತ್ತಿದ್ದಾರೆ. ಈ ಮೂಲಕ ಸ್ಪೀಕರ್ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.

    ಸದನದಲ್ಲಿ ವಿಶ್ವಾಸಮತಯಾಚೆನೆಗೆ ಅವಕಾಶ ನೀಡದೆ, ಸ್ಪೀಕರ್ ಮುಖ್ಯಮಂತ್ರಿ ಸೇರಿ ನಾಟಕ ಆಡುತ್ತಿದ್ದಾರೆ. ಸ್ಪೀಕರ್ ಕಾಂಗ್ರೆಸ್ ಏಜೆಂಟ್‍ರಂತೆ ವರ್ತಿಸುತ್ತಿದ್ದಾರೆ. ಸ್ಪೀಕರ್ ಪ್ರಮಾಣಿಕವಾಗಿ ಇಂದೇ ವಿಶ್ವಾಸಮತ ಸಾಬೀತು ಮಾಡಲು ನಿರ್ದೇಶನ ನೀಡಬೇಕು ಎಂದರು.

  • ಕಮಲದಲ್ಲಿ ‘ಮಲ’ವೂ ಇದೆ, ಸಂವಿಧಾನ ವಿರೋಧಿಸಿದ ಬಾಯಿಬುಡಕರು ಸಂಸದರಾಗಿದ್ದಾರೆ – ಕುಂವೀ

    ಕಮಲದಲ್ಲಿ ‘ಮಲ’ವೂ ಇದೆ, ಸಂವಿಧಾನ ವಿರೋಧಿಸಿದ ಬಾಯಿಬುಡಕರು ಸಂಸದರಾಗಿದ್ದಾರೆ – ಕುಂವೀ

    ಚಿತ್ರದುರ್ಗ: ಕಮಲದಲ್ಲಿ ‘ಮಲ’ವೂ ಇದೆ, ಕಮಲವು ಇದೆ ಎಂದು ಚಿತ್ರದುರ್ಗದಲ್ಲಿ ಸಾಹಿತಿ ಕುಂ. ವೀರಭದ್ರಪ್ಪ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ದೊಡ್ಡ ಮಟ್ಟದಲ್ಲಿ ವಿರೋಧಿಸಿದ ಬಾಯಿಬಡುಕರು ಈಗ ಸಂಸದರಾಗಿದ್ದಾರೆ. ಇದು ಪ್ರಜಾಪ್ರಭುತ್ವದ ವೇಷದಲ್ಲಿ ಸರ್ವಾಧಿಕಾರಿ ಶಕ್ತಿಗಳು ಪ್ರವೇಶ ಮಾಡುತ್ತಿದೆ. ಒಂದಾನೊಂದು ಕಾಲದಲ್ಲಿ ನನಗೆ ಕಮಲದ ಮೇಲೆ ಗೌರವ ಇತ್ತು. ಕಮಲದಲ್ಲಿ ಎರಡು ಪದ ಇದೆ. ಒಂದು ಕಮಲದಲ್ಲಿ ‘ಮಲ’ವೂ ಇದೆ, ಕಮಲವು ಇದೆ ಎಂದು ಹೇಳಿ ವ್ಯಂಗ್ಯವಾಡಿದರು.

    ಈಗ ಮಲಬದ್ಧತೆ ಆದರೆ ದೇಹದ ಆರೋಗ್ಯ ಹಾಳಾಗುತ್ತದೆ. ಹಾಗೆಯೇ ಕಮಲ ಒಂದು ದೇಶಕ್ಕೆ ಅಪಾಯವಾಗಲಿದೆ. ಅಲ್ಲದೆ ಮಲಬದ್ಧತೆಯಿಂದ ದೇಹದ ಆರೋಗ್ಯ ನಾಶವಾಗುತ್ತೋ, ದೇಹದ ಸಮತೋಲನ ಏರುಪೇರಾಗುತ್ತಾದೋ ಹಾಗೆಯೇ ಕಮಲದಿಂದ ಒಂದು ದೇಶದ ಆಡಳಿತ ವ್ಯವಸ್ಥೆ ಹಾಳಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ನಮ್ಮ ಪ್ರಾದೇಶಿಕ ಭಾಷೆಗಳು ಬಹಳ ಅಭದ್ರ ಸ್ಥಿತಿಯಲ್ಲಿ ಇದೆ. ಇಲ್ಲಿ ಕನ್ನಡ ಇದೆ, ಕರ್ನಾಟಕದಲ್ಲಿ ಅಸ್ಮಿತೆಯನ್ನು ನಾವು ಕಾಪಾಡಬೇಕು. ಆದರೆ ಈ ಪ್ರಾದೇಶಿಕ ಭಾಷೆಗಳ ಅಸ್ಮಿತೆಯನ್ನು ಧಕ್ಕೆ ತರುವಂತಹ ಒಂದು ವಾತಾವರಣವನ್ನು ಹಿಂದಿ ಭಾಷೆಯನ್ನು ಹೇರುವ ಮೂಲಕ ಕೇಂದ್ರ ಸರ್ಕಾರ ನಿರ್ಮಾಣ ಮಾಡುತ್ತಿದೆ ಎಂದು ದೂರಿದರು.

  • SSLC ಪರೀಕ್ಷೆ ಬರೆದ ಭಾರತದ ಕೊನೆಯ ಗ್ರಾಮದ ಮೊದಲ ವಿದ್ಯಾರ್ಥಿನಿ..!

    SSLC ಪರೀಕ್ಷೆ ಬರೆದ ಭಾರತದ ಕೊನೆಯ ಗ್ರಾಮದ ಮೊದಲ ವಿದ್ಯಾರ್ಥಿನಿ..!

    ಜೈಪುರ: ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಬಾರ್ಮೇರ್ ಸಮೀಪದ ಭಿಲಾನ್ ಕಿ ಧಾನಿ ಎಂಬ ಕುಗ್ರಾಮವನ್ನು ದೇಶದ ಕೊನೆಯ ಗ್ರಾಮ ಎಂದು ಗುರುತಿಸಲಾಗಿದೆ. ಇಲ್ಲಿನ ಬಾಲಕಿಯೊಬ್ಬಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಡೆದು, ಜನರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

    ಕಮಲ (16) ಭಾರತದ ಕೊನೆಯ ಗ್ರಾಮದಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಆಗಮಿಸಿದ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆ ಪಡೆದಿದ್ದಾಳೆ. ಈ ಗ್ರಾಮದಲ್ಲಿ ಸಾಕ್ಷರತೆಯ ಪ್ರಮಾಣ ಶೇ.20ಕ್ಕಿಂತ ಕಡಿಮೆ ಇದೆ. ಅಲ್ಲದೆ ಗಡಿಭಾಗದಲ್ಲಿರುವ ಕಾರಣಕ್ಕೆ ಈ ಗ್ರಾಮದಲ್ಲಿ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಓದಲು ಶಾಲೆಗೆ ಕಳುಹಿಸುವುದಿಲ್ಲ. ಆದರೆ ಕಮಲ ಈ ನಿರ್ಬಂಧಗಳನ್ನು ಮೀರಿ ಶಾಲೆಗೆ ಹೋಗಿ 10ನೇ ತರಗತಿ ಪರೀಕ್ಷೆ ಬರೆದ ಮೊದಲ ವಿದ್ಯಾರ್ಥಿನಿ ಎಂಬ ಕೀರ್ತಿ ಪಡೆದಿದ್ದಾಳೆ.

    ಮರುಭೂಮಿಯ ಮಧ್ಯದಲ್ಲಿರುವ ಈ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಿದೆ. ಆದರೆ ಈಗ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಹೆಚ್ಚಿನ ಶಿಕ್ಷಣಕ್ಕೆ ಇಲ್ಲಿನ ಮಕ್ಕಳು 6-7 ಕಿ.ಮೀ. ದೂರದಲ್ಲಿರುವ ಗದ್ರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರೌಢಶಾಲೆಗೆ ಹೋಗಬೇಕು. ಆದರಿಂದ ಇಷ್ಟು ದೂರ ಹೆಣ್ಣು ಮಕ್ಕಳು ಹೋಗುವುದು ಸುರಕ್ಷಿತವಲ್ಲ. ಅದರಲ್ಲೂ ಈ ಗ್ರಾಮವಿರುವುದು ಗಡಿ ಪ್ರದೇಶದಲ್ಲಿ, ಹೀಗಾಗಿ ಹೆಣ್ಣುಮಕ್ಕಳಿಗೆ ಭದ್ರತೆ ಇರುವುದಿಲ್ಲ ಎಂಬ ಪೋಷಕರ ನಿರ್ಬಂಧದಿಂದ ದಶಕಗಳಿಂದ ಶೇ.90ರಷ್ಟು ಹೆಣ್ಣುಮಕ್ಕಳು ಶಾಲೆಯಿಂದ ದೂರವಿದ್ದಾರೆ.

    ಈ ಗ್ರಾಮದಲ್ಲಿ ಒಟ್ಟು 123 ಮನೆಗಳಿವೆ. ಭದ್ರತೆ ಭೀತಿಯಿಂದ ತಮ್ಮ ಹೆಣ್ಣು ಮಕ್ಕಳನ್ನು ದೂರದ ಶಾಲೆಗೆ ಕಳುಹಿಸದೆ ವಿದ್ಯಾಭ್ಯಾಸಕ್ಕೆ ಹೆತ್ತವರು ನಿಷೇಧ ಹೇರಿದ್ದಾರೆ. ಆದರೆ ಕಮಲಾಳ ಪೋಷಕರು ಮಾತ್ರ ಇದನ್ನೆಲ್ಲ ಮೀರಿ ತಮ್ಮ ಮಗಳನ್ನು ಪ್ರೌಢ ಶಾಲೆಗೆ ಧೈರ್ಯದಿಂದ ಕಳುಹಿಸಿದ್ದಾರೆ. ಆದರಿಂದ ಗ್ರಾಮದಿಂದ ರಾಜ್ಯ ಬೋರ್ಡ್ ಪರೀಕ್ಷೆ ಎದುರಿಸಿದ ಮೊದಲ ವಿದ್ಯಾರ್ಥಿನಿ ಎಂಬ ಮೆಚ್ಚುಗೆಗೆ ಕಮಲ ಪಾತ್ರಳಾಗಿದ್ದಾಳೆ.

    9ನೇ ತರಗತಿಯಲ್ಲಿದ್ದಾಗ ರಾಜಶ್ರೀ ಯೋಜನೆಯಿಂದ ಉಚಿತ ಸೈಕಲ್ ಪಡೆದಿದ್ದೆ. ಆಗಿನಿಂದಲೂ ಸೈಕಲ್‍ನಲ್ಲೇ ಶಾಲೆಗೆ ಹೋಗಿ ಬರುತ್ತಿರುವೆ. ಅಲ್ಲದೆ ಕಳೆದ 6 ವರ್ಷದಿಂದ 7-8 ವಿದ್ಯಾರ್ಥಿನಿಯರು ಮಾತ್ರ ಶಾಲೆಗೆ ಆಗಮಿಸುತ್ತಿದ್ದಾರೆ, ಉಳಿದ ಹೆಣ್ಣುಮಕ್ಕಳಲು ವಿದ್ಯೆಯಿಂದ ದೂರ ಉಳಿದಿದ್ದಾರೆ. ಈ ಗ್ರಾಮದಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ಮೊದಲ ವಿದ್ಯಾರ್ಥಿನಿ ಆಗಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಆದರೆ ಈ ಸಾಧನೆ ಮಾಡಿದ ಕೊನೆಯ ವಿದ್ಯಾರ್ಥಿನಿ ನಾನಾಗಬಾರದು. ನಮ್ಮ ಗ್ರಾಮದ ಎಲ್ಲಾ ಹೆಣ್ಣುಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆಯಬೇಕು ಎಂದು ಕಮಲ ಆಶಿಸಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಮಲದ ಗುರುತಿಗೆ ಮತ ಹಾಕುವಂತೆ ಮತಯಾಚನೆ ಮಾಡ್ತೀವಿ: ರಾಮನಗರ ಬಿಜೆಪಿ ಮುಖಂಡರು

    ಕಮಲದ ಗುರುತಿಗೆ ಮತ ಹಾಕುವಂತೆ ಮತಯಾಚನೆ ಮಾಡ್ತೀವಿ: ರಾಮನಗರ ಬಿಜೆಪಿ ಮುಖಂಡರು

    ರಾಮನಗರ: ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿ ಚಂದ್ರಶೇಖರ್ ಕೈ ಕೊಟ್ಟ ಹಿನ್ನೆಲೆಯಲ್ಲಿ ಕಮಲದ ಗುರುತಿಗೆ ಮತ ನೀಡುವಂತೆ ಮಾತಯಾಚನೆ ಮಾಡಲು ಮುಖಂಡರು ಹಾಗೂ ಕಾರ್ಯಕರ್ತರು ನಿರ್ಧರಿಸಿದ್ದಾರೆ.

    ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ರಾತ್ರೋ ರಾತ್ರಿ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಅಭ್ಯರ್ಥಿಗೆ ಬೆಂಬಲ ಸೂಚಿಸಿ, ಬಿಜೆಪಿ ಕೈಕೊಟ್ಟ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರ ತುರ್ತು ಸಭೆಯನ್ನು ನಗರದ ಬಿಜೆಪಿ ಕಚೇರಿಯಲ್ಲಿ ಕರೆಯಲಾಗಿತ್ತು. ತುರ್ತು ಸಭೆಗೆ ರಾಮನಗರ ಜಿಲ್ಲಾಧ್ಯಕ್ಷ ಎಂ. ರುದ್ರೇಶ್, ರಾಜ್ಯ ಕಾರ್ಯದರ್ಶಿ ಮುನಿರಾಜುಗೌಡ ಹಾಗೂ ಮಾಜಿ ಸಚಿವ ಸೋಮಶೇಖರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.

    ಸಭೆಯ ನಂತರ ಮಾತನಾಡಿದ ಮುನಿರಾಜು ಗೌಡ, ರಾಮನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಹೊರ ಹೋಗಿರಬಹುದು. ಆದರೆ ಮತದಾರರಲ್ಲಿ ಕಮಲದ ಗುರುತಿಗೆ ಮತ ನೀಡಿ ಅಂತಾ ಮತದಾರರಲ್ಲಿ ಮನವಿ ಮಾಡುತ್ತೇವೆ. ಬಹಿರಂಗ ಪ್ರಚಾರ ಮುಗಿದ ಹಿನ್ನೆಲೆಯಲ್ಲಿ ಮನೆ, ಮನೆಗೆ ತೆರಳಿ ಬಿಜೆಪಿಗೆ ಮತ ಹಾಕಿ ಎಂದು ಮತಯಾಚನೆ ನಡೆಸುತ್ತೇವೆ. ನಮಗೋಸ್ಕರವಲ್ಲದಿದ್ದರೂ ಅಭ್ಯರ್ಥಿ ವಿರುದ್ಧ ಹೋರಾಟಕ್ಕಾದರೂ ಈ ರೀತಿ ನಾವು ಮಾಡುತ್ತೇವೆ. ಕಲ್ಲುಬಂಡೆಗಳಂತಿರುವ ಡಿಕೆ ಸಹೋದರರು, ಮಣ್ಣಿನ ಮಕ್ಕಳ ಸಹವಾಸ ಮಾಡಿದ್ದಾರೆ. ಅವರಿಗೆ ಗೊತ್ತಿಲ್ಲ ಕಲ್ಲಿನ ಜೊತೆ ಮಣ್ಣಿನ ಅಡಿ ಅವರು ಸಿಲುಕಿಕೊಳ್ಳುತ್ತಾರೆ ಎಂದರು.

    ಬಿಜೆಪಿ ಮಾಜಿ ಶಾಸಕ ಸಿ.ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿ, ಚಂದ್ರಶೇಖರ್ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವ ಮೂಲಕ, ಬಿಜೆಪಿ ಹಾಗೂ ಪಕ್ಷಕ್ಕೆ ಮತ ಹಾಕಲು ಸಿದ್ಧರಿದ್ದ ಮತದಾರರಿಗೆ ಮೋಸ ಮಾಡಿದ್ದಾರೆ. ಈಗ ಅವರು ಬಿಜೆಪಿಗೆ ಕೈ ಕೊಟ್ಟಿರಬಹುದು, ಆದರೆ ಮುಂಬರುವ ದಿನಗಳಲ್ಲಿ ಅವರು ರಾಜಕೀಯವಾಗಿ ಸಾಕಷ್ಟು ಅನುಭವಿಸುತ್ತಾರೆ. ನಂಬಿಕೆ ದ್ರೋಹಿಗಳಿಗೆ ಹಾಗೂ ಕಾಂಗ್ರೆಸ್ ಸಂಸ್ಕೃತಿ ಬೆಳೆಸಿಕೊಂಡವರಿಗೆ ಸರಿಯಾದ ಪಾಠವಾಗಲಿದೆ ಎಂದು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv