Tag: ಕಬ್ಬಿಣ

  • ಪಾರ್ಕ್ ನಲ್ಲಿ ಆಟವಾಡುತ್ತಿದ್ದಾಗ ತಲೆಗೆ ಕಬ್ಬಿಣದ ರಾಡ್ ಬಿದ್ದು ಬಾಲಕಿ ದುರ್ಮರಣ!

    ಪಾರ್ಕ್ ನಲ್ಲಿ ಆಟವಾಡುತ್ತಿದ್ದಾಗ ತಲೆಗೆ ಕಬ್ಬಿಣದ ರಾಡ್ ಬಿದ್ದು ಬಾಲಕಿ ದುರ್ಮರಣ!

    ಬೆಂಗಳೂರು: ಬಿಬಿಎಂಪಿ ಪಾರ್ಕ್‍ನಲ್ಲಿ ಬಾಲಕಿಯೊಬ್ಬಳ ತಲೆ ಮೇಲೆ ಕಬ್ಬಿಣದ ರಾಡ್ ಬಿದ್ದು ದಾರುಣ ಸಾವನ್ನಪ್ಪಿದ್ದಾಳೆ.

    ಬೆಂಗಳೂರಿನ ಕೆ.ಆರ್.ಪುರಂನ ಎಂವಿಜೆ ಲೇಔಟ್ ನಿವಾಸಿ ಬಾಬು ಹಾಗೂ ವಿಜಯಾ ದಂಪತಿಯ ಪುತ್ರಿ ಪ್ರಿಯಾ ಶನಿವಾರ ಸಂಜೆ ಆಟ ಆಡಲು ತೆರಳಿದ್ದಳು. ಈ ವೇಳೆ ಪಾರ್ಕ್‍ನಲ್ಲಿದ್ದ ಕಬ್ಬಿಣದ ರಾಡ್ ತುಂಡಾಗಿ ಪ್ರಿಯಾಳ ತಲೆ ಮೇಲೆ ಬಿದ್ದಿದೆ.

    ರಾಡ್ ಬಿದ್ದ ರಭಸಕ್ಕೆ ರಕ್ತಸಿಕ್ತ ಮಡುವಿನಲ್ಲಿ ಒದ್ದಾಡಿ ಪ್ರಿಯಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಮಕ್ಕಳ ಉದ್ಯಾನವನದಲ್ಲಿ ಆಟಿಕೆ ವಸ್ತುಗಳ ನಿರ್ಮಾಣ ಕಾಮಗಾರಿ ನಡೀತಿತ್ತು. ನಿರ್ಮಾಣ ಹಂತದಲ್ಲಿರುವಾಗಲೇ ಸಿಬ್ಬಂದಿ ಮಕ್ಕಳಿಗೆ ಆಟವಾಡಲು ಅನುವು ಮಾಡಿಕೊಟ್ಟಿದ್ದಕ್ಕೆ ಈ ಮಗು ಸಾವನ್ನಪ್ಪಿದೆ ಅನ್ನೋ ಆರೋಪವೂ ಕೇಳಿ ಬಂದಿದೆ.

    ಇನ್ನು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಹಾದೇವಪುರ ಠಾಣೆ ಪೊಲೀಸ್ರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಪಾರ್ಕ್ ಉಸ್ತುವಾರಿ ವಹಿಸಿಕೊಂಡಿದ್ದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.