Tag: ಕಬ್ಬಿಣ

  • ಸರ್ಕಾರಿ ಅಧಿಕಾರಿಗಳೆಂದು ಗ್ರಾಮಸ್ಥರನ್ನೇ ಯಾಮಾರಿಸಿ ಹಾಡಹಗಲೇ ಸೇತುವೆ ಕದ್ರು!

    ಸರ್ಕಾರಿ ಅಧಿಕಾರಿಗಳೆಂದು ಗ್ರಾಮಸ್ಥರನ್ನೇ ಯಾಮಾರಿಸಿ ಹಾಡಹಗಲೇ ಸೇತುವೆ ಕದ್ರು!

    ಪಾಟ್ನಾ: ಸರ್ಕಾರಿ ಅಧಿಕಾರಿಗಳೆಂದು ಸುಳ್ಳು ಹೇಳಿ ಹಾಡಹಗಲೇ 60 ಅಡಿ ಕಬ್ಬಿಣದ ಸೇತುವೆಯನ್ನು ಕದ್ದ ವಿಚಿತ್ರ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ನಡೆದಿದೆ.

    ರಾಜ್ಯ ನೀರಾವರಿ ಇಲಾಖೆಯ ಅಧಿಕಾರಿಗಳೆಂದು ಹೇಳಿಕೊಂಡು ಬಿಹಾರದ ರೋಹ್ತಾಸ್ ಜಿಲ್ಲೆಯ ಅಮಿಯಾವರ್ ಗ್ರಾಮಕ್ಕೆ ಕೆಲ ಕಳ್ಳರು ಬಂದಿದ್ದಾರೆ. ಅಲ್ಲಿ ಅವರು 1972ರಲ್ಲಿ ಅರ್ರಾ ಕಾಲುವೆ ಮೇಲೆ ನಿರ್ಮಿಸಲಾದ ಸೇತುವೆಯನ್ನು ಗಮನಿಸಿದ್ದಾರೆ. ಇದು ಈಗ ತುಂಬಾ ಹಳೆಯದಾಗಿದೆ ಮತ್ತು ಅಪಾಯಕಾರಿ ಆಗಿದೆ. ಇದರಿಂದಾಗಿ ಇವೆಲ್ಲವನ್ನು ತೆರವುಗೊಳಿಸಿ ಹೊಸದನ್ನು ನಿರ್ಮಿಸಬೇಕು ಎಂದು ಗ್ರಾಮಸ್ಥರನ್ನು ನಂಬಿಸಿದ್ದಾರೆ.

    ಇದಕ್ಕೆ ಸ್ಥಳೀಯ ಗ್ರಾಮಸ್ಥರು ಒಪ್ಪಿಗೆಯನ್ನು ಸೂಚಿಸಿದ್ದಾರೆ. ಏಕೆಂದರೆ ಅವರು ಈ ಸೇತುವೆಯನ್ನು ಬಳಸುತ್ತಿರಲಿಲ್ಲ. ಬದಲಿಗೆ ಪಕ್ಕದ ಕಾಂಕ್ರಿಟ್ ಸೇತುವೆಯನ್ನು ಬಳಸುತ್ತಿದ್ದರು. ಇದರಿಂದಾಗಿ ಕಳ್ಳರು ಸೇತುವೆ ಕದಿಯಲು ಗ್ರಾಮಸ್ಥರು ಹಾಗೂ ಸ್ಥಳೀಯ ಆಡಳಿತದವರ ಸಹಾಯವನ್ನು ಪಡೆದಿದ್ದಾರೆ. ಜೊತೆಗೆ ಬುಲ್ಡೋಜರ್, ಗ್ಯಾಸ್ ಕಟ್ಟರ್ ಬಳಸಿ ಸೇತುವೆಯನ್ನು ಕೆಡವಿದ್ದಾರೆ. ಈ ಕೆಲಸ ಮಾಡಿ ಮುಗಿಸಲು ಮೂರು ದಿನ ತೆಗೆದುಕೊಂಡಿದ್ದಾರೆ. ನಂತರ ಸ್ಕ್ರ್ಯಾಪ್ ಮೆಟಲ್ ಅನ್ನು ಹೊತ್ತೊಯ್ದಿದ್ದಾರೆ. ಇದನ್ನೂ ಓದಿ: ಚುನಾವಣೆ ಗೆಲ್ಲಲು ಹಿಜಬ್, ಹಲಾಲ್ ಸಾಲದು, ಉತ್ತಮ ಆಡಳಿತವೂ ಬೇಕು: ಬೊಮ್ಮಾಯಿಗೆ ಕಿವಿ ಹಿಂಡಿದ ಹೈಕಮಾಂಡ್

    ಈ ಬಗ್ಗೆ ನಸ್ರಿಗಂಜ್ ಎಸ್‍ಎಚ್‍ಒ ಸುಭಾಷ್ ಕುಮಾರ್ ಮಾತನಾಡಿ, ನೀರಾವರಿ ಇಲಾಖೆ ಅಧಿಕಾರಿಗಳಿಂದ ದೂರು ಸ್ವೀಕರಿಸಿದ್ದೇವೆ. ಅದರಂತೆ ಅಪರಿಚಿತರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದೇವೆ. ಆರೋಪಿಗಳ ಗುರುತು ಪತ್ತೆಗೆ ರೇಖಾಚಿತ್ರ ರಚಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಂತಹ ಯಾವುದೇ ವಸ್ತುಗಳ ಬಗ್ಗೆ ಮಾಹಿತಿ ತಿಳಿದರೆ ಕೂಡಲೇ ತಿಳಿಸಲು ಸ್ಕ್ರ್ಯಾಪ್ ಡೀಲರ್‌ಗಳಿಗೆ ಎಚ್ಚರಿಕೆ ನೀಡಿದ್ದೇವೆ. ಸೇತುವೆ 60 ಅಡಿ ಉದ್ದ ಮತ್ತು 12 ಅಡಿ ಎತ್ತರವಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಎಲ್ಲಾ ಸಂಸ್ಥೆಗಳು ಆರ್‌ಎಸ್‌ಎಸ್‌ ಹಿಡಿತದಲ್ಲಿವೆ: ರಾಹುಲ್‌ ಗಾಂಧಿ ವಾಗ್ದಾಳಿ

  • ಗಾಜಿನಿಂದ ಕುತ್ತಿಗೆ ಕೊಯ್ದುಕೊಂಡ ಶಿವಮೊಗ್ಗದ ಖೈದಿ

    ಶಿವಮೊಗ್ಗ: ಖೈದಿಯೊಬ್ಬನು ಗ್ರಂಥಾಲಯದ ಕಬ್ಬಿಣದ ರ್ಯಾಕ್‍ಗೆ ಅಳವಡಿಸಿದ ಗಾಜಿನಿಂದ ಕುತ್ತಿಗೆ ಕೊಯ್ದುಕೊಂಡ ಘಟನೆ ನಗರದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

    ತೀರ್ಥಹಳ್ಳಿ ಮೂಲದ ಮಹಮ್ಮದ್ ನೌಷದ್ (34) ಕುತ್ತಿಗೆ ಕೊಯ್ದುಕೊಂಡ ಖೈದಿ. ಗಾಂಜಾ ಪ್ರಕರಣದಲ್ಲಿ ಜ.7ರಂದು ಬಂಧನಕ್ಕೆ ಒಳಗಾಗಿದ್ದ. ಇದನ್ನೂ ಓದಿ: ಕಾಶ್ಮೀರದಲ್ಲಿ ನಿರ್ಮಾಣವಾಗ್ತಿದೆ ಐಫೆಲ್ ಟವರ್‍ಗಿಂತ ಎತ್ತರದ ಬ್ರಿಡ್ಜ್

    ಗಾಂಜಾ ಹಾಗೂ ಮದ್ಯ ವ್ಯಸನಿಯಾಗಿದ್ದ ನೌಷದ್‍ನನ್ನು ನೋಡಲು ಕಾರಾಗೃಹಕ್ಕೆ ಯಾರೂ ಬರುತ್ತಿರಲಿಲ್ಲ. ಜಾಮೀನು ಕೊಡಿಸುತ್ತಿಲ್ಲ ಅಂತ ಮನನೊಂದಿದ್ದ. ಗಾಯಗೊಂಡ ಖೈದಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ತೆಂಕಪೇಟೆಯಲ್ಲೊಬ್ಬ ಮ್ಯಾಗ್ನೆಟ್ ಮ್ಯಾನ್

    ತೆಂಕಪೇಟೆಯಲ್ಲೊಬ್ಬ ಮ್ಯಾಗ್ನೆಟ್ ಮ್ಯಾನ್

    ಉಡುಪಿ: ಜಿಲ್ಲೆಯ ತೆಂಕಪೇಟೆಯ ನಿವಾಸಿಯೊಬ್ಬರ ಮೈಗೆ ಕಬ್ಬಿಣ ಸ್ಟೀಲ್ ಇಂಡೋಲಿಯಂ ವಸ್ತುಗಳು ಅಂಟುತ್ತದೆ. ಇದೊಂದು ಕೌತುಕ.. ವಿಸ್ಮಯ.. ಮೈಯ್ಯಲ್ಲಿ ಅಯಸ್ಕಾಂತೀಯ ಶಕ್ತಿಯಿದೆ. ಹೀಗಂತ ಒಂದು ವೀಡಿಯೋ ಉಡುಪಿಯಲ್ಲಿ ಶೇರ್ ಆಗುತ್ತಿದೆ.

    ವೈರಲ್ ಆಗುತ್ತಿರುವ ವೀಡಿಯೋದಲ್ಲಿರುವ ವ್ಯಕ್ತಿ ರಾಮದಾಸ್ ಶೆಟ್ ಎಂದು ಗುರುತಿಸಲಾಗಿದ್ದು, ಉಡುಪಿಯ ತೆಂಕಪೇಟೆ ಪೂರ್ಣಪ್ರಜ್ಞ ಕಾಲೇಜು ಸಮೀಪದವರಾಗಿದ್ದಾರೆ. ಟಿವಿಯಲ್ಲಿ ಈ ಹಿಂದೆ ಪ್ರಸಾರವಾದ ವೀಡಿಯೋಗಳನ್ನು ನೋಡಿ, ಮನೆಯಲ್ಲೇ ಇದ್ದ ರಾಮದಾಸ್ ತನ್ನನ್ನು ಪ್ರಯೋಗಕ್ಕೆ ಒಳಪಡಿಸಿದ್ದಾರೆ. ಈ ವೇಳೆ ಕೆಲವೊಂದು ವಸ್ತುಗಳು ಅವರ ದೇಹಕ್ಕೆ ಅಂಟಿಕೊಂಡಿದ್ದು, ಅವರಿಗೆ ಆಶ್ಚರ್ಯವಾಗಿದೆ.

    ಕೊರೊನಾ ವಿರುದ್ಧ ವ್ಯಾಕ್ಸಿನ್ ತೆಗೆದುಕೊಂಡ ಮೇಲೆ ಹೀಗಾಗಿದೆ ಎಂದು ವೀಡಿಯೋ ವೈರಲಾಗಿದೆ. ವ್ಯಾಕ್ಸಿನ್ ಪಡೆಯೋ ಮೊದಲು ಈ ರೀತಿ ರಾಮದಾಸ್ ಯಾವುದೇ ಪ್ರಯತ್ನ ನಡೆಸಿಲ್ವಂತೆ. ಹಾಗಾಗಿ ವ್ಯಾಕ್ಸಿನ್‍ಗೂ ಈ ಬೆಳವಣಿಗೆಗೂ ಸಂಬಂಧ ಇಲ್ಲ ಎಂದೂ ಹೇಳಲಾಗುತ್ತಿದೆ. ದೆಹಲಿ ಮತ್ತು ಪಂಜಾಬ್‍ನಲ್ಲಿ ನಡೆದ ಇಂತಹ ಘಟನೆಯ ಬಗ್ಗೆ ಈಗಾಗಲೇ ತಜ್ಞರು, ಅಭಿಪ್ರಾಯ ವ್ಯಕ್ತಪಡಿಸಿದ್ದು ವ್ಯಾಕ್ಸಿನ್ ಪಡೆಯುವುದರಿಂದ ಈ ರೀತಿ ಆಗುವುದಿಲ್ಲ ಯಾವುದೇ ಆತಂಕ ಬೇಡ ಎಂದು ಸ್ಪಷ್ಟಪಡಿಸಿದ್ದರು. ಕೆಲವು ವ್ಯಕ್ತಿಗಳ ಮೈಗುಣಕ್ಕೆ ಹೀಗಾಗುತ್ತದೆ. ಈ ಬಗ್ಗೆ ಸಂಶೋಧನೆ ಆಗಬೇಕು ಎಂದು ಹಲವರು ಅಭಿಪ್ರಾಯಪಡುತ್ತಿದ್ದಾರೆ. ಇದನ್ನೂ ಓದಿ: ಅಪರೂಪದ ಬಿಳಿ ನಾಗರಹಾವು ಪ್ರತ್ಯಕ್ಷ – ರಸ್ತೆಯಲ್ಲಿಯೇ ಕೈ ಮುಗಿದ ಜನ

  • ಕಬ್ಬಿಣದ ಅದಿರು ರಫ್ತಿಗೆ ಅವಕಾಶ ನೀಡುವಂತೆ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ

    ಕಬ್ಬಿಣದ ಅದಿರು ರಫ್ತಿಗೆ ಅವಕಾಶ ನೀಡುವಂತೆ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ

    ಬೆಂಗಳೂರು: ರಾಜ್ಯದಿಂದ ವಿದೇಶಕ್ಕೆ ಕಬ್ಬಿಣದ ಅದಿರು ರಫ್ತು ಮಾಡಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವುದರಿಂದ ಸುಪ್ರೀಂಕೋರ್ಟ್ ನಲ್ಲಿ ವಿಧಿಸಿರುವ ನಿಷೇಧವನ್ನು ತೆರವುಗೊಳಿಸುವಂತೆ ಮೇಲ್ಮನವಿ ಅರ್ಜಿ ಹಾಕಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ತೀರ್ಮಾನಿಸಿದೆ. ಉನ್ನತಾಧಿಕಾರಿಗಳ ಸಮಿತಿ(ಸಿಇಸಿ)ಯ ಅಭಿಪ್ರಾಯ ಪಡೆದು ಕಬ್ಬಿಣದ ಅದಿರು ರಫ್ತು ಮಾಡಲು ವಿಧಿಸಿರುವ ನಿಷೇಧವನ್ನು ತೆರವು ಮಾಡುವಂತೆ ಮನವಿ ಮಾಡಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

    ಗುರುವಾರ ವಿಕಾಸಸೌಧದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಬಳಿಕ ಸಚಿವರು ಸುದ್ದಿಗೋಷ್ಠಿ ನಡೆಸಿದರು. ವಿದೇಶಕ್ಕೆ ರಫ್ತು ಮಾಡುವ ಸಂಬಂಧ ಅಭಿಪ್ರಾಯ ಕೇಳಲಾಗಿತ್ತು. ಕರ್ನಾಟಕದಿಂದ ಕಬ್ಬಿಣದ ಅದಿರನ್ನು ವಿದೇಶಕ್ಕೆ ರಫ್ತು ಮಾಡುವ ವಿಚಾರದಲ್ಲಿ ಕೇಂದ್ರದಿಂದ ಯಾವುದೇ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿದರು.

    ದೇಶದ ಯಾವುದೇ ರಾಜ್ಯಗಳಲ್ಲೂ ವಿದೇಶಕ್ಕೆ ಕಬ್ಬಿಣದ ಅದಿರು ರಫ್ತು ಮಾಡಲು ನಿಷೇಧ ಹೇರಿಲ್ಲ. ಕರ್ನಾಟಕದಲ್ಲಿ ಮಾತ್ರ ಇರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಬರುತ್ತಿದ್ದ ವರಮಾನವು ನಿಂತು ಹೋಗಿದೆ. ಕೇಂದ್ರ ಸರ್ಕಾರವೂ ನಮಗೆ ಸಂಪೂರ್ಣವಾದ ಸಹಕಾರವನ್ನು ನೀಡುತ್ತಿದೆ. ನ್ಯಾಯಾಲಯದಲ್ಲಿ ಕಾನೂನಿನ ನೆರವು ನೀಡುವುದಾಗಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ನಮ್ಮ ನಿಲುವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸರ್ಕಾರಕ್ಕೆ ಹೆಚ್ಚಿನ ವರಮಾನ ತಂದುಕೊಡುವ ಪ್ರಮುಖ ಮೂಲವು ಇದಾಗಿದೆ. ಈ ಎಲ್ಲ ಅಂಶಗಳನ್ನು ಪ್ರಹ್ಲಾದ್ ಜೋಶಿ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ರಾಜ್ಯದ ನಿಲುವಿಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಮಾಹಿತಿ ನೀಡಿದರು. ಅದಿರು ರಫ್ತು ಮಾಡುವ ಸರ್ಕಾರದ ನಿಲುವನ್ನು ಸಿಇಸಿಯವರೆಗೂ ಮನವರಿಕೆ ಮಾಡಿಕೊಡಲಾಗುವುದು. ಕಾನೂನಿನ ಇತಿಮಿತಿಯಲ್ಲೇ ಮಾಡಲಿದ್ದೇವೆ ಎಂದು ಪುನರುಚ್ಚರಿಸಿದರು.

    ದಿನದ 24 ಗಂಟೆಯವರೆಗೆ ಮೈನಿಂಗ್‍ಗೆ ಅವಕಾಶ ಇದೆ. ಸಾಗಾಣಿಕೆಗೆ ಮಾತ್ರ 12 ಗಂಟೆ ಇದೆ. ಇದರಿಂದ ನಮ್ಮ ಕಾರ್ಖಾನೆಯವರಿಗೆ ಸಮಸ್ಯೆಯಾಗಿದೆ ಎಂದು ಮನವಿ ಬಂದಿದೆ. ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಗಣಿ ಕಂಪನಿಗಳಿಂದ ಸಂಗ್ರಹಣೆ ಮಾಡಿರುವ ರಾಯಲ್ಟಿ ಹಣವೂ ಸುಪ್ರೀಂಕೋರ್ಟ್ ನಲ್ಲಿದೆ. ಇದನ್ನು ಬಳಸಿಕೊಂಡು ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಡೆಸಬಹುದು. ಇದನ್ನು ರಾಜ್ಯಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ಹೇಳಿದರು.

    ಪ್ರಸ್ತುತ ರಾಜ್ಯದಲ್ಲಿ 35 ದಶಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಉತ್ಪಾದನೆಯಾಗುತ್ತದೆ. 2030ರ ವೇಳೆಗೆ ಇದನ್ನು 70 ದಶಲಕ್ಷ ಮೆಟ್ರಿಕ್ ಟನ್ ಗೆ ಕೊಂಡೊಯ್ಯುವ ಗುರಿ ಹಾಕಿಕೊಳ್ಳಲಾಗಿದೆ. 100 ಮೈನಿಂಗ್ ಹೊಸದಾಗಿ ಮಾಡುವ ಬಗ್ಗೆ ಗುರಿಹೊಂದಲಾಗಿದೆ. 3 ಸಾವಿರ ಅರ್ಜಿಗಳು ಬಂದಿವೆ. ಅದನ್ನು ತ್ವರಿತವಾಗಿ ವಿಲೇವಾರಿ ಮಾಡಲು ನಿರ್ಧಾರ ಮಾಡಲಾಗಿದೆ. ಆತ್ಮ ನಿರ್ಭರ್ ಅಡಿಯಲ್ಲಿ 500 ಮೈನಿಂಗ್ ಮಾಡಲು ನಿರ್ದೇಶನ ಮಾಡಲಾಗಿದೆ. ಎರಡು ವರ್ಷದಲ್ಲಿ 100 ಮೈನಿಂಗ್ ಮಾಡಲು ಶ್ರಮ ವಹಿಸುತ್ತೇವೆ ಎಂದು ಸಚಿವ ನಿರಾಣಿ ತಿಳಿಸಿದರು.

    ರಾಜ್ಯದಲ್ಲಿ ಮೈನಿಂಗ್ ಸಂಪನ್ಮೂಲ ಚೆನ್ನಾಗಿದೆ, ಗೋಲ್ಡ್ ಮೈನಿಂಗ್ ರಾಜ್ಯದಲ್ಲಿ ಚೆನ್ನಾಗಿದೆ. ಖನಿಜ ಸಂಪತ್ತನ್ನು ಉಪಯೋಗಿಸಿಕೊಳ್ಳಲು ಸಲಹೆ ಬಂದಿದೆ. ರಾಜ್ಯದಲ್ಲಿ ಒಟ್ಟು ಎಷ್ಟು ಪ್ರಮಾಣದಲ್ಲಿ ಅದಿರು ಇದೆ ಎಂಬುದು ಯಾರಿಗೂ ಸರಿಯಾಗಿ ತಿಳಿಯುತ್ತಿಲ್ಲ. ಹೀಗಾಗಿ ಇದನ್ನು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲು ಇಲಾಖೆ ತೀರ್ಮಾನಿಸಿದೆ. ಎಲ್ಲಿ, ಎಷ್ಟು ಪ್ರಮಾಣದಲ್ಲಿದೆ? ಇದರ ಗುಣಮಟ್ಟ ಇತ್ಯಾದಿಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಸಮೀಕ್ಷೆ ನಡೆಸುತ್ತೇವೆ ಎಂದರು.

    ಯಡಿಯೂರಪ್ಪ ನಮ್ಮ ನಾಯಕರು
    ನಾಯಕತ್ವ ಬದಲಾವಣೆ ನನಗೆ ಗೊತ್ತಿಲ್ಲ. ಬಿಎಸ್‍ವೈ ಇಳಿ ವಯಸ್ಸಿನಲ್ಲಿಯೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಇಳಿ ವಯಸ್ಸಿನಲ್ಲಿ ಇಷ್ಟು ಕೆಲಸ ಮಾಡುತ್ತಿದ್ದಾರೆ. ಅವರ ಅನುಭವವನ್ನು ರಾಜ್ಯಕ್ಕೆ ಧಾರೆ ಎರೆದಿದ್ದಾರೆ. ಮುಂದಿನ ಎರಡು ವರ್ಷದವರೆಗೆ ಅವರೇ ಮುಂದುವರೆಯಬೇಕು. ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಸಿಎಂ ಸೀಟು ಖಾಲಿ ಇಲ್ಲ, ಇದ್ದಿದ್ದರೆ ಮಾತನಾಡಬಹುದಿತ್ತು. ಆದರೆ ಬಿಎಸ್‍ವೈ ಆ ಸ್ಥಾನದಲ್ಲಿ ಇದ್ದಾರೆ ಎನ್ನುವ ಮೂಲಕ ನಾಯಕತ್ವ ಬದಲಾವಣೆಯನ್ನು ತಳ್ಳಿಹಾಕಿದರು.

    ನಾವು ಕೊರೊನಾ ಸಂಬಂಧ, ನಮ್ಮ ಇಲಾಖೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೇವೆ. ಹೈ ಕಮಾಂಡ್ ಯಾವ ನಿರ್ಧಾರ ತೆಗೆದುಕೊಂಡರೂ ನಾವು ಬದ್ಧ ಎಂದು ಗೊಂದಲಗಳಿಗೆ ತೆರೆಎಳೆದರು. ಮುಂದಿನ ಚುನಾವಣೆಯಲ್ಲಿ ಎಮ್‍ಎಲ್‍ಎ ಸೀಟ್ ಕೊಡುವುದಿಲ್ಲ ಎಂದು ಪಕ್ಷ ತೀಮಾ9ನ ಮಾಡಿದರೆ ಅದಕ್ಕೂ ಬದ್ಧ. ನಮ್ಮ ಪಕ್ಷ ಏನೇ ಹೇಳಿದರೂ ಕೇಳುತ್ತೇವೆ ಎಂದು ಸ್ಪಷ್ಟಪಡಿಸಿದರು.

  • ಕಬ್ಬಿಣದ ಬಳಕೆ ಇಲ್ಲ – ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ

    ಕಬ್ಬಿಣದ ಬಳಕೆ ಇಲ್ಲ – ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ

    ಅಯೋಧ್ಯೆ: ರಾಮ ಜನ್ಮಭೂಮಿಯಲ್ಲಿ ರಾಮನ ದೇವಾಲಯ ನಿರ್ಮಾಣ ಕಾರ್ಯ ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿದೆ.

    ರಾಮ ಮಂದಿರ ದೇವಾಲಯ ಸಂಬಂಧ ಮಾಹಿತಿ ನೀಡಲೆಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಹೆಸರಿನಲ್ಲಿ ಟ್ವಿಟ್ಟರ್‌ನಲ್ಲಿ ಖಾತೆಯನ್ನು ತೆರೆಯಲಾಗಿದೆ.

     

    ರಾಮ ಮಂದಿರ ದೇವಾಲಯದ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ(ಸಿಬಿಆರ್‌ಐ), ಮದ್ರಾಸ್‌ ಐಐಟಿ ಮತ್ತು ಎಲ್‌ ಆಂಡ್‌ ಟಿ ಕಂಪನಿಯ ಎಂಜಿನಿಯರ್‌ಗಳು ಈಗ ಮಂದಿರ ನಿರ್ಮಾಣವಾಗುವ ಭಾಗದಲ್ಲಿರುವ ಮಣ್ಣನ್ನು ಪರೀಕ್ಷಿಸುತ್ತಿದ್ದಾರೆ. 36-40 ತಿಂಗಳ ಒಳಗಡೆ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಟ್ವೀಟ್‌ ಮಾಡಿ ತಿಳಿಸಿದೆ.

    ಎರಡನೇ ಟ್ವೀಟ್‌ನಲ್ಲಿ, ಭಾರತದ ಪ್ರಾಚೀನ ಮತ್ತು ಸಾಂಪ್ರದಾಯಿಕ ನಿರ್ಮಾಣ ತಂತ್ರಗಳನ್ನು ಅನುಸರಿಸಿ ಮಂದಿರವನ್ನು ನಿರ್ಮಿಸಲಾಗುವುದು. ಭೂಕಂಪ, ಬಿರುಗಾಳಿ ಮತ್ತು ಇತರ ನೈಸರ್ಗಿಕ ವಿಕೋಪಗಳ ಸಂಭವಿಸಿದರೂ ಅದನ್ನು ತಡೆಯಬಲ್ಲ ಸಾಮರ್ಥ್ಯ ಇರುವ ದೇವಾಲಯವನ್ನು ಕಟ್ಟಲಾಗುತ್ತದೆ. ಮಂದಿರ ನಿರ್ಮಾಣದಲ್ಲಿ ಕಬ್ಬಿಣ ಬಳಕೆ ಮಾಡುವುದಿಲ್ಲ ಎಂದು ತಿಳಿಸಿದೆ.

    ಈ ಟ್ವೀಟ್‌ಗೆ ಜನರು ಕಬ್ಬಿಣ ಇಲ್ಲದೇ ದೇವಾಲಯವನ್ನು ಹೇಗೆ ನಿರ್ಮಾಣ ಮಾಡಲಾಗುತ್ತದೆ ಎಂದು ಕೇಳುತ್ತಿದ್ದಾರೆ. ಇದಕ್ಕೆ ಕೆಲವರು ಹಿಂದಿನ ಕಾಲದ ದೇವಾಲಯದಲ್ಲಿ ಕಬ್ಬಿಣದ ಬಳಕೆ ಇರಲಿಲ್ಲ. ಕಬ್ಬಿಣದ ಬಳಕೆ ಮಾಡಿದರೆ ಹಲವು ವರ್ಷಗಳ ಬಳಿಕ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ. ಈ ಹಿಂದೆ ನಿರ್ಮಾಣವಾದ ದೇವಾಲಯಗಳಲ್ಲಿ ಕಬ್ಬಿಣ ಇರಲಿಲ್ಲ. ಕಲ್ಲುಗಳನ್ನು ಬಳಸಿ ನಿರ್ಮಿಸಿದ ದೇವಾಲಯ ನೂರಾರು ವರ್ಷಗಳ ಕಾಲ ಬಾಳಿಕೆ ಬಂದಿದೆ ಎಂದು ಉತ್ತರಿಸಿದ್ದಾರೆ.

    ಭೂಕಂಪ ಸಂಭವಿಸಿದರೂ ದೇವಾಲಯಕ್ಕೆ ಯಾವುದೇ ಹಾನಿ ಆಗದೇ ಇರುವ ಅತ್ಯುನ್ನತ ಮತ್ತು ಸಾಂಪ್ರದಾಯಿಕ ತಂತ್ರಜ್ಞಾನವನ್ನು ಬಳಸಿ ರಾಮ ಮಂದಿರವನ್ನು ನಿರ್ಮಿಸಲಾಗುತ್ತದೆ.

    ಯಾವುದೇ ದೊಡ್ಡ ಕಟ್ಟಡವನ್ನು ನಿರ್ಮಿಸಿದಾಗ ಆ ಪ್ರದೇಶದಲ್ಲಿ ಎಷ್ಟು ಪ್ರಮಾಣದ ಭೂಕಂಪ ಸಂಭವಿಸಬಹುದು? ಎಷ್ಟು ತೀವ್ರತೆಯ ಭೂಕಂಪ ಸಂಭವಿಸಿದರೆ ಯಾವ ರೀತಿ ಹಾನಿಯಾಗಬಹುದು ಎಂಬುದನ್ನು ಲೆಕ್ಕಾಚಾರ ಹಾಕಿ ನಿರ್ಮಾಣ ಮಾಡಲಾಗುತ್ತದೆ. ಈ ಲೆಕ್ಕಾಚಾರವನ್ನು ರಾಮಮಂದಿರ ನಿರ್ಮಾಣಕ್ಕೂ ಮಾಡಲಾಗಿದೆ.

    ರಿಕ್ಟರ್ ಮಾಪಕದಲ್ಲಿ 10ರಷ್ಟು ತೀವ್ರತೆ ದಾಖಲಾದರೂ ದೇವಾಲಯಕ್ಕೆ ಹಾನಿಯಾಗದಂತೆ ನಿರ್ಮಾಣ ಮಾಡಲಾಗುತ್ತದೆ. ಮಂದಿರ ನಿರ್ಮಾಣ ಸ್ಥಳದಲ್ಲಿ 200 ಅಡಿ ಅಗೆದು ಭೂಸಾರ ಪರೀಕ್ಷೆ ಮಾಡಲಾಗಿದೆ. ಸಾವಿರ ವರ್ಷವಾದರೂ ನಾಶವಾಗದ ರೀತಿಯಲ್ಲಿ ಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಆಗಾಗ ಭೂಕಂಪ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಜಪಾನ್‌ ದೇಶದಲ್ಲಿ ದೊಡ್ಡ ಕಟ್ಟಡವನ್ನು ನಿರ್ಮಾಣ ಮಾಡುವಾಗ ಇವುಗಳನ್ನು ಜಾಸ್ತಿ ಲೆಕ್ಕಾಚಾರ ಹಾಕಲಾಗುತ್ತದೆ.

    ಅಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲನ್ಯಾಸ ಮಾಡಿದ್ದರು‌.

  • ಪರವಾನಿಗೆ ಇಲ್ಲದ ಲಕ್ಷಾಂತರ ಮೌಲ್ಯದ ಗ್ರಾನೈಟ್, ಕಬ್ಬಿಣ ವಶ

    ಪರವಾನಿಗೆ ಇಲ್ಲದ ಲಕ್ಷಾಂತರ ಮೌಲ್ಯದ ಗ್ರಾನೈಟ್, ಕಬ್ಬಿಣ ವಶ

    ನೆಲಮಂಗಲ: ಪರವಾನಗಿ ಇಲ್ಲದೆ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಗ್ರಾನೈಟ್ ಮತ್ತು ಕಬ್ಬಿಣ ಸಾಗಿಸುತ್ತಿದ್ದ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.

    ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣ ಬಳಿಯ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಖಚಿತ ಮಾಹಿತಿ ಮೇರೆಗೆ ಕಾರ್ಯಚರಣೆ ಮಾಡಿದ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಲಾರಿಗಳನ್ನು ಪರಿಶೀಲನೆ ಮಾಡಿ ದಾಖಲೆಗಳು, ಪರವಾನಗಿ ಇಲ್ಲದೆ ಇರುವ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ಮುಖಾಂತರ ಬೆಂಗಳೂರಿನಿಂದ ಪುಣೆ ಮಹಾರಾಷ್ಟ್ರಕ್ಕೆ ಲಾರಿಗಳು ಹೋಗುತ್ತಿದ್ದವು. ನೆಲಮಂಗಲ ಟೌನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆದಿದೆ.

  • ಓವರ್ ಡ್ಯೂಟಿ ಮಾಡಿ ನಂಬಿಕೆ ಗಿಟ್ಟಿಸಿ, ಲೋಡ್‍ಗಟ್ಟಲೇ ಕಬ್ಬಿಣ ಸಾಗಿಸಿದ ಸೆಕ್ಯೂರಿಟಿಗಳು

    ಓವರ್ ಡ್ಯೂಟಿ ಮಾಡಿ ನಂಬಿಕೆ ಗಿಟ್ಟಿಸಿ, ಲೋಡ್‍ಗಟ್ಟಲೇ ಕಬ್ಬಿಣ ಸಾಗಿಸಿದ ಸೆಕ್ಯೂರಿಟಿಗಳು

    ಬೆಂಗಳೂರು: ಸೆಕ್ಯುರಿಟಿ ಕೆಲಸ ಅರಸಿ ಅಸ್ಸಾಂನಿಂದ ಸಿಲಿಕಾನ್ ಸಿಟಿಗೆ ಬಂದಿದ್ದ ಆರೋಪಿಗಳು, ಸಮಯವನ್ನೂ ಲೆಕ್ಕಿಸದೆ ಹೆಚ್ಚುವರಿ ಕೆಲಸ ಮಾಡಿ ಮಾಲೀಕನ ನಂಬಿಕೆ ಗಿಟ್ಟಿಸಿಕೊಂಡು ನಂತರ ರಾತ್ರೋ ರಾತ್ರಿ ಲೋಡ್‍ಗಟ್ಟಲೇ ಕಬ್ಬಿಣವನ್ನು ಸಾಗಿಸುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ.

    ಹೆಚ್‍ಎಎಲ್ ಬಳಿಯ ಹೊಂಬಾಳೆ ಕನ್‍ಸ್ಟ್ರಕ್ಷನ್ ಹಾಗೂ ಕಶ್ಯಪ್ ಗ್ರೂಪ್ ಕಂಪನಿಗಳಲ್ಲಿ ಕಬ್ಬಿಣ ಸಾಗಿಸಿದ್ದ ಆರೋಪಿಗಳಾದ ಸಲ್ಮಾನ್, ಮಂಜಿತ್, ರಂಜಿತ್ ಹಾಗೂ ಪಪ್ಪು ಖತರ್ನಾಕ್ ಸೆಕ್ಯುರಿಟಿ ಗಾರ್ಡ್ ಗಳನ್ನು ಹೆಚ್‍ಎಎಲ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 14 ಲಕ್ಷ ರೂ. ಮೌಲ್ಯದ 14 ಟನ್ ಕಬ್ಬಿಣವನ್ನು ವಶಪಡಿಸಿಕೊಳ್ಳಲಾಗಿದೆ.

    ಸೆಕ್ಯುರಿಟಿ ಕೆಲಸ ಅರಸಿ ಅಸ್ಸಾಂನಿಂದ ಸಿಲಿಕಾನ್ ಸಿಟಿಗೆ ಬರುತ್ತಿದ್ದ ಆರೋಪಿಗಳು, ನಿರ್ಮಾಣ ಹಂತದ ದೊಡ್ಡ ಕಟ್ಟಡಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ನಂತರ ಕೆಲಸದ ಅವಧಿ ಪೂರ್ಣಗೊಂಡರೂ, ಮನೆಗೆ ತೆರಳದೇ ಹೆಚ್ಚುವರಿ ಕೆಲಸ ಮಾಡುತ್ತಿದ್ದರು. ಈ ಕೆಲಸಕ್ಕೆ ಹೆಚ್ಚುವರಿ ಸಂಬಳವನ್ನೂ ಕೇಳುತ್ತಿರಲಿಲ್ಲ. ಇದರಿಂದಾಗಿ ಮಾಲೀಕರಿಗೆ ಸೆಕ್ಯುರಿಟಿ ಗಾರ್ಡ್ ಗಳ ಮೇಲೆ ಅಪಾರ ನಂಬಿಕೆ ಬಂದಿತ್ತು. ಹೀಗೆ ನಂಬಿಕಸ್ಥರಂತೆ ವರ್ತಿಸಿ ರಾತ್ರೋ ರಾತ್ರಿ ಲಾರಿಯಲ್ಲಿ ಲೋಡ್ ಗಟ್ಟಲೇ ಕಬ್ಬಿಣವನ್ನು ಸಾಗಿಸಿದ್ದರು.

  • ಕಬ್ಬಿಣದ ಹಾರೆಯಿಂದ ಹೊಡೆದು ಪತ್ನಿಯ ಹತ್ಯೆಗೈದ ಪತಿ

    ಕಬ್ಬಿಣದ ಹಾರೆಯಿಂದ ಹೊಡೆದು ಪತ್ನಿಯ ಹತ್ಯೆಗೈದ ಪತಿ

    ಕಲಬುರಗಿ: ಕ್ಷುಲ್ಲಕ ವಿಚಾರಕ್ಕೆ ಪತಿಯೇ ಪತ್ನಿಯನ್ನು ಕಬ್ಬಿಣದ ಹಾರೆಯಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಹೀರಾಪುರ ಗ್ರಾಮದಲ್ಲಿ ನಡೆದಿದೆ.

    ಹೀರಾಪುರ ಗ್ರಾಮದ ಸವಿತ (35) ಕೊಲೆಯಾದ ದುರ್ದೈವಿ. ಗುರುವಾರ ತಡರಾತ್ರಿ ಸವಿತ ಹಾಗೂ ಪತಿ ಸಂತೋಷ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದೆ. ಈ ವೇಳೆ ಕುಪಿತಗೊಂಡ ಸಂತೋಷ್ ಮನೆಯಲ್ಲಿದ್ದ ಕಬ್ಬಿಣದ ಹಾರೆಯಿಂದ ಸವಿತಾರ ತಲೆಗೆ ಹೊಡೆದು, ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹತ್ಯೆ ಬಳಿಕ ಪತಿ ಪರಾರಿಯಾಗಿದ್ದಾನೆ.

    ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ದಂಪತಿ ಮಧ್ಯೆ ಯಾವುದೋ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು, ಕೊಲೆಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ಸಂಬಂಧ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತಿಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ವ್ಯಕ್ತಿಯ ಹೊಟ್ಟೆಯಿಂದ 263 ನಾಣ್ಯ, ಚೈನ್, ಶೇವಿಂಗ್ ಬ್ಲೇಡ್‍ಗಳನ್ನ ಹೊರತೆಗೆದ ವೈದ್ಯರು

    ವ್ಯಕ್ತಿಯ ಹೊಟ್ಟೆಯಿಂದ 263 ನಾಣ್ಯ, ಚೈನ್, ಶೇವಿಂಗ್ ಬ್ಲೇಡ್‍ಗಳನ್ನ ಹೊರತೆಗೆದ ವೈದ್ಯರು

    ಭೋಪಾಲ್: ಮಧ್ಯಪ್ರದೇಶ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆವೊಂದನ್ನ ಮಾಡಿದ್ದು, ವ್ಯಕ್ತಿಯೊಬ್ಬರ ಹೊಟ್ಟೆಯಿಂದ ಒಂದು ಚೈನ್, 263 ನಾಣ್ಯಗಳು ಹಾಗೂ ಶೇವಿಂಗ್ ಬ್ಲೇಡ್‍ಗಳು ಸೇರಿ ಒಟ್ಟು 5 ಕೆಜಿಯಷ್ಟು ಕಬ್ಬಿಣವನ್ನ ಹೊರತೆಗೆದಿದ್ದಾರೆ.

    ಇಲ್ಲಿನ ರೇವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಇಲ್ಲಿನ ಸಾತ್ನಾ ಜಿಲ್ಲೆಯ ಸೋಹಾವಲ್ ನಿವಾಸಿಯಾದ 32 ವರ್ಷದ ಮೊಹಮ್ಮದ್ ಮಕ್ಸೂದ್‍ಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ನವೆಂಬರ್ 18ರಂದು ಸಂಜಯ್ ಗಾಂಧಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಎಕ್ಸ್-ರೇ ಹಾಗೂ ಇನ್ನಿತರೆ ಪರೀಕ್ಷೆಗಳನ್ನ ಮಾಡಿದ ನಂತರ ಮಕ್ಸೂದ್ ಅವರ ಹೊಟ್ಟೆನೋವಿಗೆ ಕಾರಣ ಪತ್ತೆ ಮಾಡಿದೆವು. 6 ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮಾಡಿ 10-12 ಶೇವಿಂಗ್ ಬ್ಲೇಡ್‍ಗಳು, 4 ದೊಡ್ಡ ಸೂಜಿಗಳು, ಒಂದು ಚೈನ್ ಹಾಗೂ 263 ನಾಣ್ಯಗಳನ್ನ ಹೊರತೆಗೆದರು. ಜೊತೆಗೆ ಗ್ಲಾಸ್ ಪೀಸ್‍ಗಳು ಇದ್ದವು. ಒಟ್ಟು 5 ಕೆಜಿ ತೂಕದ ವಸ್ತುಗಳನ್ನ ಮಕ್ಸೂದ್ ಅವರ ಹೊಟ್ಟೆಯಿಂದ ಶುಕ್ರವಾರದಂದು ಹೊರತೆಗೆಯಲಾಗಿದೆ ಎಂದು ಆಸ್ಪತ್ರೆಯ ವೈದ್ಯರಾದ ಡಾ ಪ್ರಿಯಾಂಕ್ ಶರ್ಮಾ ಹೇಳಿದ್ದಾರೆ.

    ರೇವಾ ಗೆ ಕರೆತರುವ ಮುನ್ನ ಮಕ್ಸೂದ್ ಅವರು ಸಾತ್ನಾದಲ್ಲಿ 6 ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದರು. ಅವರ ಮನಸ್ಥಿತಿ ಸರಿಯಿರಲಿಲ್ಲ. ಹೀಗಾಗಿ ಯಾರಿಗೂ ಗೊತ್ತಿಲ್ಲದಂತೆ ಈ ವಸ್ತುಗಳನ್ನ ನುಂಗಿರಬಹುದು ಎಂದು ಡಾ. ಶರ್ಮಾ ಹೇಳಿದ್ದಾರೆ.

    ಸದ್ಯ ಮಕ್ಸೂದ್ ಚೇತರಿಸಿಕೊಳ್ಳುತ್ತಿದ್ದು, ತಜ್ಞ ವೈದ್ಯರ ತಂಡ ಅವರನ್ನ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

  • ಮಾವ ಶಾಸಕ, ಸೋದರಳಿಯ ಕಳ್ಳ- ಕಬ್ಬಿಣ ಕಳ್ಳರಿಗೆ ಬಳ್ಳಾರಿ ಪೊಲೀಸರ ಕೋಳ

    ಮಾವ ಶಾಸಕ, ಸೋದರಳಿಯ ಕಳ್ಳ- ಕಬ್ಬಿಣ ಕಳ್ಳರಿಗೆ ಬಳ್ಳಾರಿ ಪೊಲೀಸರ ಕೋಳ

    ಬಳ್ಳಾರಿ: ಮಾವ ಶಾಸಕ, ಆದ್ರೆ ಶಾಸಕರ ಸೋದರಳಿಯ ಮಾತ್ರ ಮಹಾಕಳ್ಳ. ಶಾಸಕರ ಹೆಸರು ಬಳಸಿಕೊಂಡು ಜಿಂದಾಲ್ ಕಾರ್ಖಾನೆಯಲ್ಲಿ ಟ್ರಾನ್ಸ್ ಪೋರ್ಟ್ ಏಜೆನ್ಸಿ ಮಾಡುತ್ತಿದ್ದ ಗುಂಪೊಂದು ಸ್ಲಾಗ್ ಹೆಸರಿನಲ್ಲಿ ಜಿಂದಾಲ್ ಕಾರ್ಖಾನೆಯಿಂದಲೇ ಮಿದು ಕಬ್ಬಿಣವನ್ನು ಕಳ್ಳತನ ಮಾಡುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸಿ ಕಳ್ಳರನ್ನ ಅರೆಸ್ಟ್ ಮಾಡಿದ್ದಾರೆ.

    ಜಿಂದಾಲ್ ಉದ್ಯೋಗಿಗಳ ಜೊತೆ ಸಿಂಧನೂರ ಶಾಸಕ ಹಂಪನಗೌಡ ಬಾದರ್ಲಿ ಸೋದರಳಿಯ ಯರ್ರಿಸ್ವಾಮಿ ಹಾಗೂ ಇನ್ನಿತರ ಹತ್ತು ಜನರ ವಿರುದ್ಧ ಜಿಂದಾಲ್ ಕಾರ್ಖಾನೆ ಆಡಳಿತ ಮಂಡಳಿ ತೋರಣಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ಪ್ರಕರಣದ ತನಿಖೆ ನಡೆಸಿದ ತೋರಣಗಲ್ ಪೊಲೀಸರು ನಾಲ್ವರು ಜಿಂದಾಲ್ ಸಿಬ್ಬಂದಿ ಸೇರಿದಂತೆ 7 ಜನರನ್ನು ಬಂಧಿಸಿದ್ದು ಇನ್ನೂ ಮೂವರಿಗೆ ಬಲೆ ಬೀಸಿದ್ದಾರೆ.

    ಹಂಪನಗೌಡ ಬಾದರ್ಲಿ

    ಪ್ರಕರಣಕ್ಕೆ ಸಂಬಧಿಸಿದಂತೆ 2 ಲಾರಿಗಳನ್ನು ಜಪ್ತಿ ಮಾಡಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದು ಇದೊಂದು ಬಹುದೊಡ್ಡ ಹಗರಣವಾಗಿರುವ ಶಂಕೆ ವ್ಯಕ್ತವಾಗಿದೆ.