Tag: ಕಬ್ಬನ್ ಪಾರ್ಕ್

  • ಕಬ್ಬನ್ ಪಾರ್ಕ್ ನಲ್ಲಿ ರೊಮ್ಯಾನ್ಸ್ ಮಾಡುವ ಪ್ರೇಮಿಗಳೇ ಹುಷಾರ್..!

    ಕಬ್ಬನ್ ಪಾರ್ಕ್ ನಲ್ಲಿ ರೊಮ್ಯಾನ್ಸ್ ಮಾಡುವ ಪ್ರೇಮಿಗಳೇ ಹುಷಾರ್..!

    ಬೆಂಗಳೂರು: ಕಬ್ಬನ್ ಪಾರ್ಕ್ ಗೆ ಹೋದರೆ ಸಾಕು ಪ್ರೇಮಿಗಳು ಪಕ್ಕ-ಪಕ್ಕ ಕುಳಿತುಕೊಂಡು ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯಗಳು ಕಾಣಸಿಗುತ್ತವೆ. ಕಬ್ಬನ್ ಪಾರ್ಕ್ ಗೆ ಹೋಗುವ ಪ್ರೇಮಿಗಳು ಇನ್ನು ಮುಂದೆ ಹುಷಾರಾಗಿರಬೇಕು.

    ಹೌದು… ಖಾಲಿ ಜಾಗ ಸಿಕ್ಕರೆ ಸಾಕು ಪ್ರೇಮಿಗಳು ಪ್ರೇಮ ಸಲ್ಲಾಪದಲ್ಲಿ ತೊಡಗಿಕೊಳ್ಳುತ್ತಾರೆ. ಈಗ ಅದಕ್ಕೆಲ್ಲಾ ತೋಟಗಾರಿಕೆ ಇಲಾಖೆ ಬ್ರೇಕ್ ಹಾಕಲು ಮುಂದಾಗಿದೆ. ಕಬ್ಬನ್ ಪಾರ್ಕ್ ನಲ್ಲಿ ಭದ್ರತೆ ಮತ್ತು ಅನೈತಿಕ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇವುಗಳಿಗೆ ಬ್ರೇಕ್ ಹಾಕಲು ತೋಟಗಾರಿಕಾ ಇಲಾಖೆ 120 ಸಿಸಿಟಿವಿ ಅಳವಡಿಕೆಗೆ ಮುಂದಾಗಿದೆ.

    ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ, ಸಂಸದ ಪಿ.ಸಿ ಮೋಹನ್ ಅವರು 1 ಕೋಟಿ ರೂಪಾಯಿ ಅನುದಾನದಲ್ಲಿ ಸಿಸಿಟಿವಿ ಅಳವಡಿಕೆ ಮಾಡಿಸುತ್ತಿದ್ದಾರೆ. ಪ್ರಥಮ ಹಂತದಲ್ಲಿ 60 ಲಕ್ಷ ರೂಪಾಯಿ ಅನುದಾನದಲ್ಲಿ ಕಾಮಗಾರಿ ಶುರು ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಸಿಸಿಟಿವಿ ಸೇರಿದಂತೆ ಶೌಚಾಲಯ ನಿರ್ಮಾಣ ಕಾಮಗಾರಿಗಳಿಗೂ ಚಾಲನೆ ನೀಡಲಿದ್ದಾರೆ. ಸದ್ಯದಲ್ಲೇ ಸಿಸಿಟಿವಿ ಅಳವಡಿಕೆ ಕಾರ್ಯ ಶುರು ಮಾಡಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕೋಪಯೋಗಿ ಇಲಾಖೆಯಿಂದ ಕಬ್ಬನ್ ಪಾರ್ಕ್ ಗೆ ಸ್ಕೆಚ್..!

    ಲೋಕೋಪಯೋಗಿ ಇಲಾಖೆಯಿಂದ ಕಬ್ಬನ್ ಪಾರ್ಕ್ ಗೆ ಸ್ಕೆಚ್..!

    ಬೆಂಗಳೂರು: ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ಹೋಟೆಲ್ ನಿರ್ಮಾಣಕ್ಕೆ ಅನುಮತಿ ನೀಡುವ ಮೂಲಕ ಪಾರ್ಕ್‍ಗೆ ಲೋಕೋಪಯೋಗಿ ಇಲಾಖೆ ಸ್ಕೆಚ್ ಹಾಕಿರುವುದು ಇದೀಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

    ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ಹೆಚ್ಚು ಬಿಲ್ಡಿಂಗ್  ಗಳ ನಿರ್ಮಾಣ ನಿಷಿದ್ಧವಾಗಿದೆ. ಆದರೂ, ಅಕ್ರಮ ಕಟ್ಟಡ, ಹೋಟೆಲ್‍ಗಳ ನಿರ್ಮಾಣಕ್ಕೆ ಇಲಾಖೆ ಅನುಮತಿ ನೀಡಿದೆ. ಇದ್ರಿಂದ ಕಬ್ಬನ್ ಪಾರ್ಕ್ ಗೆ ತೊಂದರೆಯಾಗ್ತಿದೆ ಎಂದು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ನಿಂದ ಲೋಕೋಪಯೋಗಿ ಇಲಾಖೆ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.

    ಬೆಂಗಳೂರಿನಲ್ಲಿ ಇದೀಗ ಉಳಿದಿರುವ ಪ್ರಮುಖ ಉದ್ಯಾನವನಗಳೆಂದರೆ ಲಾಲ್ ಬಗ್ ಮತ್ತು ಕಬ್ಬನ್ ಪಾರ್ಕ್. ಇತ್ತೀಚೆಗೆ ಕಬ್ಬನ್ ಪಾರ್ಕ್ ನಲ್ಲಿ ಕೆಲವೊಂದು ಸರ್ಕಾರಿ ಕಟ್ಟಡಗಳು ಹಾಗೂ ಅಂಗಡಿಗಳು ತಲೆ ಎತ್ತುತ್ತಿವೆ. ಅದರಲ್ಲೂ ಕೂಡ ಲೋಕೋಪಯೋಗಿ ಸಚಿವರಾಗಿರುವ ಎಚ್ ಡಿ ರೇವಣ್ಣ ಅವರು ಅಧಿಕಾರಿ ಸ್ವೀಕರಿಸಿದ ನಂತರ ಇನ್ನೂ ಹೆಚ್ಚಾಗಿದೆ ಅಂತ ಪರಿಸರವಾದಿ ಸಾಯಿದತ್ತ ಆರೋಪಿಸಿದ್ದಾರೆ.

    ನಗರದ ಹೃದಯಭಾಗದಲ್ಲಿರುವಂತದ್ದು ಕಬ್ಬನ್ ಪಾರ್ಕ್ ಒಂದೇ. ಹೀಗಾಗಿ ಇದೀಗ ಸರ್ಕಾರವೇ ಈ ಒಂದು ಉದ್ಯಾನವನವನ್ನು ನಾಶ ಮಾಡಲು ಹೊರಟಿರುವುದು ನಿಜಕ್ಕೂ ದುರದೃಷ್ಟಕರವಾಗಿದೆ. ಇನ್ನು ಮುಂದಾದರೂ ಕೂಡ ಕಬ್ಬನ್ ಪಾರ್ಕ್ ನಲ್ಲಿ ಯಾವುದೇ ರೀತಿಯ ಕಟ್ಟಡಗಳು ಆಗದೇ ಇರುವಂತೆ ನೋಡಿಕೊಳ್ಳಬೇಕು. ಇತ್ತೀಚೆಗೆ ನಗರದ ವಾತಾವರಣ ಕೂಡ ಹದಗೆಡುತ್ತಿದ್ದು, ಈ ಒಂದು ಉದ್ಯಾನವನವನ್ನು ಸಂರಕ್ಷಿಸುವ ಕಾರ್ಯ ಮಾಡಬೇಕು ಅಂತ ಅವರು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಎಚ್‍ಎಎಲ್ ಸಿಬ್ಬಂದಿ ಜೊತೆ ಸಂವಾದ: ಶನಿವಾರದ ರಾಹುಲ್ ಕಾರ್ಯಕ್ರಮದ ಪಟ್ಟಿ ಇಲ್ಲಿದೆ

    ಎಚ್‍ಎಎಲ್ ಸಿಬ್ಬಂದಿ ಜೊತೆ ಸಂವಾದ: ಶನಿವಾರದ ರಾಹುಲ್ ಕಾರ್ಯಕ್ರಮದ ಪಟ್ಟಿ ಇಲ್ಲಿದೆ

    ಬೆಂಗಳೂರು: `ದೇಶದ ರಕ್ಷಣಾ ವ್ಯವಸ್ಥೆಗೆ ಎಚ್‍ಎಎಲ್ ಕೊಡುಗೆ’ ಎಂಬ ಶೀರ್ಷಿಕೆಯಡಿ ಶನಿವಾರ ಹಮ್ಮಿಕೊಂಡಿರುವ ಸಂವಾದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ

    ಕಬ್ಬನ್ ಪಾರ್ಕ್ ನ ಮಿನ್ಕ್ಸ್ ಸ್ಕ್ವೇರ್ ಬಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹೆಚ್‍ಎಎಲ್ ನ ನಿವೃತ್ತ ಹಾಗೂ ಹಾಲಿ ಸಿಬ್ಬಂದಿ ಸೇರಿದಂತೆ ಸುಮಾರು ನೂರು ಜನರೊಂದಿಗೆ ರಾಹುಲ್ ಗಾಂಧಿ ಒಂದರಿಂದ ಎರಡು ಗಂಟೆಗಳ ಕಾಲ ಸಂವಾದ ನಡೆಸಲಿದ್ದಾರೆ.

    ಮಧ್ಯಾಹ್ನ 1.55ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ರಾಹುಲ್ ಗಾಂಧಿ ನೇರವಾಗಿ ಕುಮಾರಕೃಪಾ ಅತಿಥಿಗೃಹಕ್ಕೆ ಅಗಮಿಸುತ್ತಾರೆ. 2.30ಕ್ಕೆ ಅಗಮಿಸುವ ಅವರು ಪಕ್ಷದ ಆಯ್ದ ಕೆಲವು ನಾಯಕರ ಜೊತೆ ಸಭೆ ನಡೆಸುತ್ತಾರೆ. ಸಂಜೆ 3.30ಕ್ಕೆ ಕಬ್ಬನ್ ಪಾರ್ಕ್ ನ ಮಿನ್ಕ್ಸ್ ಸ್ಕ್ವೇರ್ ಬಳಿ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಸಂಜೆ 5 ರವರೆಗೆ ಇಲ್ಲಿದ್ದು, 6 ಗಂಟೆಗೆ ಮರಳಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

    ಈಗಾಗಲೇ ರಾಹುಲ್ ಗಾಂಧಿ ಪಕ್ಷದ ನಾಯಕರಿಗೆ ಎಚ್‍ಎಎಲ್ ಕುರಿತು ಸಮಗ್ರ ಮಾಹಿತಿ ಕಲೆ ಹಾಕಿ ತಮಗೆ ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಎಲ್ಲ ಮಾಹಿತಿಗಳನ್ನು ರಾಹುಲ್ ಗಾಂಧಿಗೆ ಒದಗಿಸಲಾಗಿದೆ. ಅದನ್ನು ಆಧರಿಸಿ ಅವರು ಸಂವಾದ ನಡೆಸುವ ಸಾಧ್ಯತೆ ಇದೆ.

    ಸಂವಾದ ಯಾಕೆ?
    ಕೇಂದ್ರ ಸರ್ಕಾರದ ರಫೇಲ್ ಯುದ್ಧ ವಿಮಾನ ಖರೀದಿ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ನಡೆಸುತ್ತಿದೆ. ಎಚ್‍ಎಎಲ್‍ಗೆ ಧಕ್ಕಬೇಕಿದ್ದ ಈ ಖರೀದಿ ಟೆಂಡರ್, ದೇಶದ ಖಾಸಗಿ ಕಂಪನಿ ಪಾಲಾಗಿದೆ. ರಿಲಯನ್ಸ್ ಸಂಸ್ಥೆ ಇದರ ಪಾಲುದಾರನಾಗಿದ್ದು, ಯುದ್ಧ ವಿಮಾನ ಸಿದ್ಧಪಡಿಸುವ ಅನುಭವ ಇಲ್ಲದ ಕಂಪನಿಗೆ ಡೀಲ್ ನೀಡಲಾಗಿದೆ. ಅಲ್ಲದೇ ಇದರ ಮೊತ್ತವನ್ನು ಕೂಡ ತಿಳಿಸುತ್ತಿಲ್ಲ. ಎಲ್ಲವನ್ನೂ ಗುಪ್ತವಾಗಿಡಲಾಗಿದೆ. ಇಲ್ಲೊಂದು ದೊಡ್ಡ ವಂಚನೆಯಾಗಿದೆ ಎಂದು ರಾಹುಲ್ ಗಾಂಧಿ ನಿರಂತರ ಆರೋಪ ಮಾಡುತ್ತ ಬಂದಿದ್ದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇದನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಳ್ಳುವ ಉದ್ದೇಶದ ಹಿನ್ನೆಲೆಯಲ್ಲಿ ಈ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

     

  • ಕಾಮುಕರ ಅಡ್ಡೆಯಾದ ಕಬ್ಬನ್ ಪಾರ್ಕ್ – ಹುಡ್ಗಿಯರೇ ಜೋಪಾನ

    ಕಾಮುಕರ ಅಡ್ಡೆಯಾದ ಕಬ್ಬನ್ ಪಾರ್ಕ್ – ಹುಡ್ಗಿಯರೇ ಜೋಪಾನ

    ಬೆಂಗಳೂರು: ವಿಧಾನಸೌಧ ಪಕ್ಕ ಇರುವ ಕಬ್ಬನ್ ಪಾರ್ಕ್ ಈಗ ಪೋಲಿ ಕಾಮುಕರಿಂದಾಗಿ ಡರ್ಟಿ ಪಾರ್ಕ್ ಆಗಿ ಬದಲಾಗಿದ್ದು, ಹುಡುಗಿಯರು ಕಬ್ಬನ್ ಪಾರ್ಕ್ ಗೆ ಹೋಗೋ ಮುನ್ನ ಜೋಪಾನವಾಗಿರಿ.

    ಕಬ್ಬನ್ ಪಾರ್ಕಿನಲ್ಲಿ ಕಾಮುಕರ ಕಾಟ ಹೆಚ್ಚಾಗಿದ್ದು, ಪಾರ್ಕ್ ಗೆ ಹೋಗುವ ಹುಡುಗಿಯರನ್ನು ಕಾಮುಕರು ಟಾರ್ಗೆಟ್ ಮಾಡುತ್ತಿದ್ದಾರೆ. ಪಾರ್ಕ್ ನಲ್ಲೇ ಕಾಮುಕರು ಡ್ರಗ್ಸ್ ಮತ್ತು ಗಾಂಜಾ ಸೇವಿಸುತ್ತಿದ್ದು, ಅದರ ಮತ್ತಿನಲ್ಲಿ ಕಬ್ಬನ್ ಪಾರ್ಕ್ ಗೆ ಬರುವ ಹುಡುಗಿಯರು ಇವರ ಕಣ್ಣಿಗೆ ಬಿದ್ದರೆ, ಅವರನ್ನು ವಿಷಲ್ ಹೊಡೆದು ಕರಿಯುತ್ತಿದ್ದಾರೆ. ಒಂದು ವೇಳೆ ಯಾಕೋ ವಿಷಲ್ ಹೊಡಿತಿಯಾ ಅಂತ ಹುಡುಗಿಯರು ತಿರುಗಿ ಬಿದ್ದರೆ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಬೆದರಿಕೆಯನ್ನು ಒಡ್ಡುತ್ತಿದ್ದಾರೆ.

    ಗುಂಪು ಗುಂಪನಲ್ಲಿ ಬಂದು ಡ್ರಗ್ಸ್ ತಗೊಂಡು ಮತ್ತಲ್ಲಿರುವ ಪೋಲಿ ಹೈಕ್ಳು ಕಬ್ಬನ್ ಪಾರ್ಕ್ ನ ಮೂಲೆ ಮೂಲೆಯಲ್ಲೂ ಇದ್ದಾರೆ. ಈ ದೃಶ್ಯವಾಳಿಗಳು ಪಬ್ಲಿಕ್ ಟಿವಿ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಹಿಂದೆ ಈ ಪಾರ್ಕ್ ನಲ್ಲಿ ಅತ್ಯಾಚಾರ ಪ್ರಕರಣ ನಡೆದಾಗ ಹೆಚ್ಚುವರಿ ಭದ್ರತಾ ಸಿಬ್ಬಂದಿ, ಸಿಸಿಟಿವಿ ಹಾಕುತ್ತೀವಿ ಅಂತ ತೋಟಗಾರಿಕ ಇಲಾಖೆ ಹೇಳಿತ್ತು. ಆದರೆ ಇಲ್ಲಿಯವರೆಗೂ ಯಾವುದೇ ಸೌಲಭ್ಯಗಳನ್ನು ನಿಯೋಜನೆ ಮಾಡಿಲ್ಲ.

    ಹುಡುಗಿಯರು ಅಲ್ಲಿನ ಸೆಕ್ಯೂರಿಟಿ ಅವರಿಗೆ ಹೇಳಿದರೆ ಅವರು ಕಾಮುಕರ ವಿರುದ್ಧ ಕ್ರಮಕೈಗೊಳ್ಳದೆ ಸುಮ್ಮನೆ ಕುಳಿತಿರುತ್ತಾರೆ. ಈ ಪಾರ್ಕ್ ಗೆ ಮಕ್ಕಳು, ಮಹಿಳೆಯರು ಬರಲು ಸಾಧ್ಯವಾಗುತ್ತಿಲ್ಲ. ವಿಧಾನಸೌಧದ ಪಕ್ಕದಲ್ಲಿರುವ ಪಾರ್ಕ್ ನಲ್ಲಿ ಹುಡುಗಿಯರಿಗೆ ಮತ್ತು ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಬ್ಬನ್ ಪಾರ್ಕ್ ನಲ್ಲಿ ಸಲಿಂಗಿಗಳ ಹುಚ್ಚಾಟ

    ಕಬ್ಬನ್ ಪಾರ್ಕ್ ನಲ್ಲಿ ಸಲಿಂಗಿಗಳ ಹುಚ್ಚಾಟ

    ಬೆಂಗಳೂರು: ಸಲಿಂಗ ಸಂಬಂಧಕ್ಕೆ ಸುಪ್ರೀಂಕೋರ್ಟ್ ಮಾನ್ಯತೆ ನೀಡಿದೆ. ಸುಪ್ರೀಂ ಕೋರ್ಟ್ ಆದೇಶದ ನಂತರ ಕಬ್ಬನ್ ಪಾರ್ಕ್ ನ ಪೊದೆಗಳಲ್ಲಿ ಸಲಿಂಗಿಗಳು ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರಿಗೆ ಮುಂಜುಗರ ಉಂಟು ಮಾಡುತ್ತಿದೆ.

    ಸಲಿಂಗಕಾಮಿಗಳಿಗೆ ಸುಪ್ರೀಂಕೋರ್ಟ್ ಕಾನೂನಿನ ಮಾನ್ಯತೆ ನೀಡಿದ್ದೆ ತಡ ಕಬ್ಬನ ಪಾರ್ಕ್‍ನಲ್ಲಿ ಸಲಿಂಗಿಗಳು ಹಾಗೂ ಲೈಗಿಂಕ ಅಲ್ಪ ಸಂಖ್ಯಾತರ ಹಾವಳಿ ಹೆಚ್ಚಾಗಿದೆ. ಸಾಮಾನ್ಯ ಸಾರ್ವಜನಿಕರು ಹಾಗೂ ಕಬ್ಬನ್ ಪಾರ್ಕ್ ವೀಕ್ಷಣೆಗೆ ಬರುವ ಪ್ರವಾಸಿಗಳಿಗೆ ಸಲಿಂಗಿಗಳ ಈ ನಡವಳಿಕೆ ಮುಂಜುಗರ ತರಿಸಿದ್ದು, ಪೊಲೀಸ್ ಭದ್ರತೆ ಹೆಚ್ಚಿಸುವಂತೆ ಕಬ್ಬನ್ ಪಾರ್ಕ್ ಅಸೋಶಿಯೇಷನ್ ಅಧ್ಯಕ್ಷ ಉಮೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ:  ಭಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ: 156 ವರ್ಷದ ಬ್ರಿಟಿಷ್ ಕಾನೂನು ರದ್ದು – ಐಪಿಸಿ ಸೆಕ್ಷನ್ 377 ಏನು ಹೇಳುತ್ತೆ?

    ಸುಪ್ರೀಂಕೋರ್ಟ್ ತೀರ್ಪು ನೀಡ್ತಾ ಇದ್ದಂತೆ ಸಲಿಂಗ ಕಾಮಿಗಳು ಅಂದು ಸಂಭ್ರಮಾಚರಣೆ ನಡೆಸಿದರು. ಮಾನವೀಯತೆ ಆಧಾರದಲ್ಲಿ ಸಮಾಜದ ಹಲವರು ಸುಪ್ರೀಂ ಆದೇಶಕ್ಕೆ ಸಂತಸ ವ್ಯಕ್ತಪಡಿಸಿದರು. ಆದ್ರೇ ಸಂಜೆಯಾಗುತ್ತಿದ್ದ ಹಾಗೆ ಪ್ರಕೃತಿಯ ಸೊಬಗಿಗೆ ಹೆಸರಾದ ಕಬ್ಬನ್ ಪಾರ್ಕ್ ನಲ್ಲಿ ಸಲಿಂಗ ಕಾಮಿಗಳ ಹಾವಳಿ ಹೆಚ್ಚಾಗಿದ್ದು ಆತಂಕ ಹೆಚ್ಚಿಸಿದೆ. ಒಟ್ಟಾರೆ, ಸುಪ್ರೀಂ ಆದೇಶದಿಂದಾಗಿ ಕಬ್ಬನ್ ಪಾರ್ಕ್ ಪೊಲೀಸರಿಗೆ ಮತ್ತೊಂದು ಹೊಸ ತಲೆ ನೋವು ಶುರುವಾಗಿದ್ದು, ಸಲಿಂಗಿಗಳ ಈ ಹುಚ್ಚಾಟಕ್ಕೆ ಯಾವ್ ರೀತಿ ಬ್ರೇಕ್ ಹಾಕ್ತಾರೋ ಕಾದು ನೋಡಬೇಕಿದೆ. ಇದನ್ನೂ ಓದಿ: ಸಲಿಂಗಕಾಮ ಅನುವಂಶೀಯ ಅಸ್ವಸ್ಥತೆ, ದೇಶದಲ್ಲಿ ಎಚ್‍ಐವಿ ಹೆಚ್ಚಾಗಲಿದೆ: ಸುಬ್ರಮಣಿಯನ್ ಸ್ವಾಮಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಿಳೆಗೆ ನೀಲಿ ಚಿತ್ರ ತೋರಿಸಿದ ಬೆಂಗ್ಳೂರಿನ ಓಲಾ ಡ್ರೈವರ್!

    ಮಹಿಳೆಗೆ ನೀಲಿ ಚಿತ್ರ ತೋರಿಸಿದ ಬೆಂಗ್ಳೂರಿನ ಓಲಾ ಡ್ರೈವರ್!

    ಬೆಂಗಳೂರು: ನಗರದಲ್ಲಿ ಓಲಾ ಕ್ಯಾಬ್ ಚಾಲಕನೋರ್ವ ನೀಲಿ ಚಿತ್ರವನ್ನು ತೋರಿಸುವ ಮೂಲಕ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದಿದೆ.

    ಯಲಹಂಕದಿಂದ ಜೆಪಿ ನಗರದವರೆಗೆ ಹೋಗಲು ಮಹಿಳೆಯೊಬ್ಬರು ಓಲಾ ಬುಕ್ ಮಾಡಿದ್ದಾರೆ. ಈ ವೇಳೆ ವಿಧಾನಸೌಧ ಸಿಗ್ನಲ್ ನಿಂದ ಕ್ವೀನ್ಸ್ ಸರ್ಕಲ್ ನ ಕಡೆಗೆ ಬರುತ್ತಿದ್ದಂತೆ ಮಾರ್ಗ ಮಧ್ಯದಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆಗೆ ನೀಲಿ ಚಿತ್ರ ಕಾಣುವಂತೆ ತನ್ನ ಮೊಬೈಲ್ ನಲ್ಲಿ ತೋರಿಸಿದ್ದಾನೆ. ಚಾಲಕನ ಈ ವರ್ತನೆಯಿಂದ ಬೆದರಿದ ಮಹಿಳೆ ಅರ್ಧ ದಾರಿಯಲ್ಲಿಯೇ ಕಾರನ್ನು ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದಾರೆ. ಆದರೆ ಚಾಲಕ ಮಹಿಳೆಯನ್ನು ಆಕೆಯ ನಿಗದಿತ ಸ್ಥಳಕ್ಕೆ ಕರೆದೊಯ್ದು ನಿಲ್ಲಿಸಿದ್ದಾನೆ.

    ಮಹಿಳೆ ಘಟನೆಯ ಒಂದು ದಿನದ ಬಳಿಕ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಐಪಿಸಿ ಸೆಕ್ಷನ್ 354(ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    ಗುರುವಾರ ಬೆಳಗ್ಗೆ 6.28 ಕ್ಕೆ ಯಲಹಂಕ ನ್ಯೂ ಟೌನ್ ನಿಂದ ಜೆಪಿ ನಗರದವರೆಗೆ ಓಲಾ ಕ್ಯಾಬ್ ಬುಕ್ ಮಾಡಿದ್ದೇನು. ಈ ವೇಳೆ ವಿಧಾನಸೌಧ ಸಿಗ್ನಲ್ ನಿಂದ ಕ್ವೀನ್ಸ್ ಸರ್ಕಲ್ ನ ಕಡೆಗೆ ಬರುತ್ತಿದ್ದಂತೆ ಡ್ರೈವರ್ ಮುಂಬದಿಯ ಕನ್ನಡಿಯಿಂದ ಹಿಂದೆ ಕುಳಿತ್ತಿದ್ದ ನನ್ನನ್ನು ಗಮನಿಸುತ್ತಿರುವುದು ಕಂಡುಬಂತು. ಅಷ್ಟೇ ಅಲ್ಲದೇ ಅವನು ಎಡಗೈನಿಂದ ನನಗೆ ಮೊಬೈಲ್ ಕಾಣುವಂತೆ ಹಿಡಿದುಕೊಂಡಿದ್ದನು. ಅದರಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದು, ನನಗೂ ಕಾಣುವಂತೆ ಹಿಡಿದುಕೊಂಡಿದ್ದನು. ಮತ್ತೆ ಆತ ತನ್ನನ್ನು ತಾನೇ ಮುಟ್ಟುಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ. ಅದನ್ನು ಕಂಡ ನನಗೆ ಭಯಗೊಂಡು ಕ್ಯಾಬ್ ನಿಲ್ಲಿಸುವಂತೆ ಸೂಚಿಸಿದೆ. ಅದಕ್ಕೆ ಅವನು ನಿಮ್ಮ ಇಳಿಯುವ ಸ್ಥಳ ಇನ್ನೂ ದೂರದಲ್ಲಿದೆ ಎಂದು ಹೇಳಿದ್ದಾನೆ. ಬಳಿಕ ತನ್ನ ಆಫೀಸ್ ನ ಬಳಿ ಬಂದು ಇಳಿದು ಆತನ ಬಗ್ಗೆ ಗ್ರಾಹಕ ಸೇವಾ ಕೇಂದ್ರಕ್ಕೆ ದೂರು ನೀಡಿದ್ದು, ಆತನ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಕಾನೂನು ಕ್ರಮಕೈಗೊಳ್ಳಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಓಡಿ ಹೋಗೋದಕ್ಕೆ ಬ್ಯಾಗ್ ಸಮೇತ ಬಂದ್ಳು-ಪ್ರಿಯಕರನಿಗಾಗಿ ಕಾದು ಕಾದು ಸುಸ್ತಾಗಿ ನೇಣಿಗೆ ಶರಣಾದ್ಳು

    ಓಡಿ ಹೋಗೋದಕ್ಕೆ ಬ್ಯಾಗ್ ಸಮೇತ ಬಂದ್ಳು-ಪ್ರಿಯಕರನಿಗಾಗಿ ಕಾದು ಕಾದು ಸುಸ್ತಾಗಿ ನೇಣಿಗೆ ಶರಣಾದ್ಳು

    ಬೆಂಗಳೂರು: ಕಬ್ಬನ್ ಪಾರ್ಕ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪ್ರೀತಿಯಲ್ಲಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬುವುದು ಬೆಳಕಿಗೆ ಬಂದಿದೆ.

    ಸಂತೋಷಿ ಆತ್ಮಹತ್ಯೆಗೆ ಶರಣಾದ ಯುವತಿ. ಭಾನುವಾರ ಕಬ್ಬನ್ ಪಾರ್ಕ್ ನಲ್ಲಿ ಯುವತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದರು. ಈ ಸಂಬಂಧ ಪೊಲೀಸರು ಯುವತಿಯ ಪ್ರಿಯಕರ ನರೇಶ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿದೆ.

    ಆಗಿದ್ದೇನು?
    ಸಂತೋಷಿ ಮತ್ತು ನರೇಶ್ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಬಗ್ಗೆ ಸಂತೋಷಿ ಪೋಷಕರಿಗೆ ತಿಳಿದಿದೆ. ಬಳಿಕ ಅವರು ಆರೋಪಿ ನರೇಶ್ ಗೆ ನನ್ನ ಮಗಳ ಸಹವಾಸಕ್ಕೆ ಬರಬೇಡ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಪ್ರೇಮಿಗಳಿಬ್ಬರು ಮತ್ತೆ ಭೇಟಿ ಮಾಡಿ ಸುತ್ತಾಡುತ್ತಿದ್ದರು. ಇದನ್ನೆಲ್ಲ ಗಮನಿಸಿದ ಪೋಷಕರು ಸಂತೋಷಿಗೆ ಬುದ್ಧಿ ಮಾತನ್ನು ಹೇಳಿದ್ದಾರೆ. ಈ ರೀತಿ ಪರ ವ್ಯಕ್ತಿಗಳೊಂದಿಗೆ ಸುತ್ತಾಡುವುದು, ಮಾತನಾಡುವುದು ಸರಿಯಿಲ್ಲ. ಒಂದು ವೇಳೆ ನೀನು ಆತನನ್ನು ಇಷ್ಟು ಪಡುವುದಾದರೆ ಆತನ ಜೊತೆಯೇ ಹೋಗು. ಈ ರೀತಿಯಾಗಿ ನಮ್ಮ ಮರ್ಯಾದೆ ತೆಗೆಯಬೇಡ ಎಂದು ಬುದ್ದಿ ಮಾತನ್ನು ಹೇಳಿದ್ದರು. ಇದಕ್ಕೆ ಸಂತೋಷಿ ನಾನು ಆತನನ್ನು ಇಷ್ಟ ಪಡುತ್ತೇನೆ. ಆತನ ಜೊತೆಯಲ್ಲಿಯೇ ಹೋಗುತ್ತೇನೆ ಎಂದು ಶನಿವಾರ ರಾತ್ರಿ ಮನೆ ಬಿಟ್ಟು ಹೋಗಿದ್ದಾಳೆ.

    ಏನಿದು ಪ್ರಕರಣ?
    ಭಾನುವಾರ ನಗರ ಪ್ರಖ್ಯಾತ ಉದ್ಯಾವನವಾದ ಕಬ್ಬನ್ ಪಾರ್ಕ್ ನಲ್ಲಿ ಅನುಮಾನಸ್ಪದ ರೀತಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆಯಾಗಿತ್ತು. ಸಂತೋಷಿ ಶನಿವಾರ ಪಾರ್ಕ್ ಗೆ ಬಂದು ಮರವೊಂದಕ್ಕೆ ತನ್ನ ದುಪ್ಪಟ್ಟದಿಂದ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಭಾನುವಾರ ಬೆಳಗ್ಗೆ ಉದ್ಯಾನವನದ ಸಿಬ್ಬಂದಿ ಗಮನಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಸಂತೋಷಿಯ ಮೃತ ದೇಹ ನೋಡಿ ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು.

    ಮಾಹಿತಿ ತಿಳಿದ ಕಬ್ಬನ್ ಪಾರ್ಕ್ ಪೊಲೀಸರು ಸ್ಥಳಕ್ಕೆ ಬಂದು ಮೃತ ಯುವತಿಯ ದೇಹವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆಂದು ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಿದ್ದರು. ನಂತರ ಕಬ್ಬನ ಪಾರ್ಕ್ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಬ್ಬನ್ ಪಾರ್ಕ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ

    ಕಬ್ಬನ್ ಪಾರ್ಕ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ

    ಬೆಂಗಳೂರು: ನಗರ ಪ್ರಖ್ಯಾತ ಉದ್ಯಾವನವಾದ ಕಬ್ಬನ್ ಪಾರ್ಕ್ ನಲ್ಲಿ ಅನುಮಾನಸ್ಪದ ರೀತಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆಯಾಗಿದೆ.

    ಸುಮಾರು 18 ವರ್ಷದ ಸಂತೋಷಿ ನೇಣಿಗೆ ಶರಣಾದ ಯುವತಿ ಎಂದು ಗುರುತಿಸಲಾಗಿದೆ. ಮೃತ ಸಂತೋಷಿ ತಾನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಸಂತೋಷಿ ಶನಿವಾರ ಪಾರ್ಕ್ ಗೆ ಬಂದು ಮರವೊಂದಕ್ಕೆ ತನ್ನ ದುಪ್ಪಟ್ಟದಿಂದ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂದು ಬೆಳಗ್ಗೆ ಉದ್ಯಾನವನದ ಸಿಬ್ಬಂದಿ ಗಮನಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

    ಯುವತಿಯ ಮೃತ ದೇಹ ನೋಡಿ ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಕಬ್ಬನ್ ಪಾರ್ಕ್ ಪೊಲೀಸರು ಸ್ಥಳಕ್ಕೆ ಬಂದು ಮೃತ ಯುವತಿಯ ದೇಹವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆಂದು ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

    ಕಬ್ಬನ ಪಾರ್ಕ್ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಸದ್ಯಕ್ಕೆ ಯುವತಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಿಖರವಾಗಿ ತಿಳಿದು ಬಂದಿಲ್ಲ. ಪೊಲೀಸರ ತನಿಖೆ ಬಳಿಕ ಸತ್ಯತೆ ತಿಳಿಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಯಿ ಜೊತೆ ಕಬ್ಬನ್ ಪಾರ್ಕ್ ಬರೋ ಜನರಿಗೊಂದು ಸೂಚನೆ

    ನಾಯಿ ಜೊತೆ ಕಬ್ಬನ್ ಪಾರ್ಕ್ ಬರೋ ಜನರಿಗೊಂದು ಸೂಚನೆ

    ಬೆಂಗಳೂರು: ಕಬ್ಬನ್ ಪಾರ್ಕ್ ಗೆ ವಾಕ್ ಬರುವ ಸಾರ್ವಜನಿಕರು ಜೊತೆಗೆ ಇರಲಿ ಅಂತಾ ನಾಯಿಗಳನ್ನು ಕರ್ಕೊಂಡು ಬರೋದು ಕಾಮನ್. ನಾಯಿಗಳನ್ನು ಕೈಯಲ್ಲೇ ಇಟ್ಕೊಂಡ್ರೇ ಓಕೆ. ಕೊಂಚ ಪಾರ್ಕ್‍ನಲ್ಲಿ ಸುತ್ತಾಡ್ಲಿ ಅಂತಾ ಬಿಟ್ರೋ ಪೊಲೀಸ್ ಕೇಸ್ ಹಾಕ್ತಾರೆ ಜೋಕೆ.

    ನಿಮ್ಮ ಮುಂದಿನ ನಾಯಿ ಕತ್ತಿಗೆ ಬೆಲ್ಟ್ ಕಟ್ಟಿ ಕೈಯಲ್ಲಿ ಹಿಡಿದುಕೊಂಡು ಓಡಾಡಿದ್ರೆ ಯಾರು ಕೇಳುವದಿಲ್ಲ. ಆದ್ರೆ ನಾಯಿ ಸ್ವಲ್ಪ ರಿಲ್ಯಾಕ್ಸ್ ಆಗಿ ಓಡಾಡಲಿ ಅಂತಾ ಬೆಲ್ಟ್ ಕೈ ಬಿಟ್ರೆ ನಿಮ್ಮ ಮೇಲೆ ದೂರು ದಾಖಲಾಗೋದು ಗ್ಯಾರೆಂಟಿ. ಕಬ್ಬನ್ ಪಾರ್ಕ್ ನಲ್ಲಿ ವಾಕಿಂಗ್‍ಗೆ ನಾಯಿಗಳನ್ನು ಕರೆದುಕೊಂಡು ಬರೋರು ಫ್ರೀಯಾಗಿ ಸುತ್ತಾಡಲಿ ಅಂತಾ ಬಿಟ್ಟು ಬಿಡ್ತಾರೆ. ಸಾಕಷ್ಟು ನಾಯಿಗಳು ವಿಹಾರಿಗಳ ಮೇಲೆ ಎರಗಿ ಕಚ್ಚಿ ಹಾನಿ ಮಾಡಿವೆ.

    ಸಾಕು ನಾಯಿಗಳಿಂದ ಹಾವಳಿಯಿಂದ ಎಚ್ಚೆತ್ತ ತೋಟಗಾರಿಕ ಇಲಾಖೆ ಈಗ ಹೀಗೆ ನಾಯಿ ಬಿಟ್ಟವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ನಿರ್ಧರಿಸಿದ್ದಾರೆ. ಈಗಾಗಲೇ ಇಬ್ಬರ ಮೇಲೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಸಂಪೂರ್ಣವಾಗಿ ಕಬ್ಬನ್ ಪಾರ್ಕ್ ನಲ್ಲಿ ನಾಯಿಗಳನ್ನು ಕರೆದುಕೊಂಡು ಬರೋದು ನಿಷೇಧ ಮಾಡುವ ಬಗ್ಗೆಯೂ ಇಲಾಖೆ ಚಿಂತನೆ ನಡೆಸಿದೆ. ಆದ್ರೆ ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದು, ಚಿಂತನೆಯನ್ನು ಸದ್ಯ ಕೈ ಬಿಡಲಾಗಿದೆ.

  • ನಲಪಾಡ್ ಹಲ್ಲೆ ಪ್ರಕರಣ- ಕಬ್ಬನ್ ಪಾರ್ಕ್ ಎಸಿಪಿ ಮಂಜುನಾಥ್ ತಳವಾರ್ ಅಮಾನತು ವಾಪಸ್

    ನಲಪಾಡ್ ಹಲ್ಲೆ ಪ್ರಕರಣ- ಕಬ್ಬನ್ ಪಾರ್ಕ್ ಎಸಿಪಿ ಮಂಜುನಾಥ್ ತಳವಾರ್ ಅಮಾನತು ವಾಪಸ್

    ಬೆಂಗಳೂರು: ಕರ್ತವ್ಯಲೋಪದಡಿ ಅಮಾನತಾಗಿದ್ದ ಕಬ್ಬನ್ ಪಾರ್ಕ್ ಎಸಿಪಿ ಮಂಜುನಾಥ್ ತಳವಾರ್ ಅವರ ಅಮಾನತು ವಾಪಸ್ ಪಡೆಯಲಾಗಿದೆ.

    ನಲಪಾಡ್ ಗೂಂಡಾಗಿರಿ ಪ್ರಕರಣದಲ್ಲಿ ಪೊಲೀಸ್ ಆಯುಕ್ತರು ಮಂಜುನಾಥ್ ತಳವಾರ್ ರನ್ನು ಅಮಾನತುಗೊಳಿಸಿದ್ರು. ಇದೀಗ ಅಮಾನತು ವಾಪಸ್ ಪಡೆಯಲಾಗಿದ್ದು, ಗೃಹಸಚಿವ ರಾಮಲಿಂಗಾರೆಡ್ಡಿ ಹ್ಯಾರಿಸ್ ಒತ್ತಡಕ್ಕೆ ಮಣಿದರಾ ಎಂಬಂತಹ ಅನುಮಾನಗಳು ವ್ಯಕ್ತವಾಗಿದೆ.

    ನಲಪಾಡ್ ಗ್ಯಾಂಗ್ ಗೆ ಇಂದು ಜೈಲು ಭವಿಷ್ಯ ನಿರ್ಧಾರವಾಗಲಿದೆ. ಜಾಮೀನು ಕೋರಿ ನಲಪಾಡ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಏಕಸದಸ್ಯ ಪೀಠದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ನಲಪಾಡ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಲಿದ್ದಾರೆ. ಆರೋಪಿ ನಲಪಾಡ್ ಗೆ ಜೈಲಾ ಅಥವಾ ಬೇಲಾ ಇಂದು ನಿರ್ಧಾರವಾಗಲಿದೆ.