Tag: ಕಬ್ಬನ್ ಪಾರ್ಕ್

  • ಜುಲೈ 1ರಿಂದ ಕಬ್ಬನ್ ಪಾರ್ಕ್‍ನಲ್ಲಿ ನಾಯಿಗಳಿಗೆ ನಿಷೇಧ

    ಜುಲೈ 1ರಿಂದ ಕಬ್ಬನ್ ಪಾರ್ಕ್‍ನಲ್ಲಿ ನಾಯಿಗಳಿಗೆ ನಿಷೇಧ

    ಬೆಂಗಳೂರು: ಕಬ್ಬನ್ ಪಾರ್ಕ್‍ನಲ್ಲಿ ಈಗ ನಾಯಿಗಳಿಗಾಗಿ ಬಿಗ್ ಫೈಟ್ ನಡೆಯುತ್ತಿದೆ. ತೋಟಗಾರಿಕಾ ಇಲಾಖೆಯ ವಿರುದ್ಧ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಂದ ಹಿಡಿದು ಶ್ವಾನ ಪ್ರೇಮಿಗಳು ಕೂಡ ಕಿಡಿಕಾರುತ್ತಿದ್ದಾರೆ.

    ಮುಂಜಾವಿನಲ್ಲಿ ಇಳಿಸಂಜೆಯಲ್ಲಿ ಪಾರ್ಕ್‍ಗೆ ವಾಕಿಂಗ್ ಹೋಗೋರು ಜೊತೆಗೆ ಸಾಕು ನಾಯಿಯನ್ನು ಕರೆದುಕೊಂಡು ಹೋಗ್ತಾರೆ. ಅದ್ರಲ್ಲೂ ಬೆಂಗಳೂರಿನ ಕಬ್ಬನ್ ಪಾರ್ಕ್‍ನಲ್ಲಂತೂ ಬೌ ಬೌ ಗಳದ್ದೇ ದರ್ಬಾರ್. ಇದನ್ನೂ ಓದಿ: ಕಾಂಗ್ರೆಸ್-ಬಿಜೆಪಿಯವರು ಇಲ್ಲಿನ ಹಣ ತಗೊಂಡು ಹೋಗಿ ಅಲ್ಲಿ ಕೊಡ್ತಾರೆ: ಸಿ.ಎಂ.ಇಬ್ರಾಹಿಂ ಕಿಡಿ

    ಕಬ್ಬನ್ ಪಾರ್ಕ್‍ನ ಒಂದು ಭಾಗ ಸಂಪೂರ್ಣ ನಾಯಿಗಳಿಗೆ ಮೀಸಲಿಡಲಾಗಿದೆ. ಕಬ್ಬನ್ ಪಾರ್ಕ್‍ಗೆ ಹೈಬ್ರೀಡ್ ನಾಯಿಗಳ ಜೊತೆ ಔಟಿಂಗ್ ರೀತಿಯಲ್ಲಿ ಜನ ಬರ್ತಾರೆ. ಆದರೆ ಈ ನಾಯಿಗಳು ಪಾರ್ಕ್‍ನ ಫುಟ್ ಪಾತ್, ಸ್ಥಳವನ್ನು ಗಲೀಜು ಮಾಡುತ್ತೆ. ಕೆಲವರು ಕ್ಲೀನ್ ಮಾಡಲ್ಲ ಅಂತಾ ಈಗ ತೋಟಗಾರಿಕ ಇಲಾಖೆ ಬೌ ಬೌ ಹಾವಳಿ ಬ್ರೇಕ್‍ಗೆ ನೋ ಎಂಟ್ರಿ ಅಸ್ತ್ರವನ್ನು ಪ್ರಯೋಗಿಸಲು ಪ್ರಸ್ತಾವನೆ ಸಿದ್ಧಮಾಡಿದೆ. ಜುಲೈ-1 ರಿಂದ ಕಬ್ಬನ್ ಪಾರ್ಕ್‍ಗೆ ನಾಯಿಗಳಿಗೆ ಸಂಪೂರ್ಣ ನಿಷೇಧ ಹೇರಲು ತಯಾರು ಮಾಡಿದೆ.

    ಈ ಪ್ರಸ್ತಾವನೆಗೆ ಶ್ವಾನ ಪ್ರಿಯರು ಸಿಟ್ಟಿಗೆದ್ದಿದ್ದಾರೆ. ತೋಟಗಾರಿಕಾ ಇಲಾಖೆಯ ಈ ಪ್ರಸ್ತಾವನೆ ಸರಿಯಲ್ಲ ಇದನ್ನು ಹಿಂಪಡೆಯಬೇಕು ಅಂತಾ ಆಗ್ರಹಪಡಿಸಿದ್ದಾರೆ. ನಟಿ ಐಂದ್ರಿತಾ ರೇ ಕೂಡ ಇದು ಸರಿಯಲ್ಲ ಕಬ್ಬನ್ ಪಾರ್ಕ್ ಗೆ ನಾಯಿಗಳ ಎಂಟ್ರಿಯನ್ನು ಬ್ಯಾನ್ ಮಾಡಿದ್ರೇ ಎಲ್ಲಿ ಹೋಗಬೇಕು ಅಂತಾ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.

    ಲಾಲ್‍ಬಾಗ್‍ನಲ್ಲಿ ಈಗಾಗಲೇ ನಾಯಿಗಳ ಎಂಟ್ರಿಗೆ ನಿಷೇಧ ಹೇರಲಾಗಿದೆ. ಆದರೆ ಕಬ್ಬನ್ ಪಾರ್ಕ್‍ನ ಹೊಸ ನಿರ್ಧಾರಕ್ಕೆ ಆರಂಭದಲ್ಲಿಯೇ ದೊಡ್ಡ ಮಟ್ಟದ ವಿರೋಧ ಮೂಡಿದೆ. ಸರ್ಕಾರ ಶ್ವಾನ ಪ್ರಿಯರ ಬೇಡಿಕೆಗೆ ಮಣಿಯುತ್ತಾ ಅಥವಾ ನೋ ಅನ್ನುತ್ತಾ ಕಾದುನೋಡಬೇಕು.

    Live Tv

  • ಕಬ್ಬನ್ ಪಾರ್ಕ್‌ನಲ್ಲಿ ಜುಲೈ 1 ರಿಂದ ಸಾಕು ನಾಯಿ ಬ್ಯಾನ್ : ಮರುಪರಿಶೀಲನೆಗೆ ನಟಿ ಐಂದ್ರಿತಾ ರೇ ಮನವಿ

    ಕಬ್ಬನ್ ಪಾರ್ಕ್‌ನಲ್ಲಿ ಜುಲೈ 1 ರಿಂದ ಸಾಕು ನಾಯಿ ಬ್ಯಾನ್ : ಮರುಪರಿಶೀಲನೆಗೆ ನಟಿ ಐಂದ್ರಿತಾ ರೇ ಮನವಿ

    ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ವಾಕಿಂಗ್‌ಗಾಗಿ ಸಾಕು ನಾಯಿಗಳನ್ನು ತರಲು ಜುಲೈ 1 ರಿಂದ ನಿಷೇಧಿಸಲಾಗಿದೆ. ಸಾಕು ನಾಯಿ ಮಾಲೀಕರು ಯಾವುದೇ ಕಾರಣಕ್ಕೂ ನಾಯಿಗಳನ್ನು ತಮ್ಮೊಂದಿಗೆ ತರುವಂತಿಲ್ಲ ಎಂದು ಕಟ್ಟಪ್ಪಣೆ ಹೊರಡಿಸಿದೆ. ಹೀಗಾಗಿ ತೋಟಗಾರಿಕೆ ಇಲಾಖೆಯ ನಡೆಗೆ ಐಂದ್ರಿತಾ ರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಬ್ಬನ್ ಪಾರ್ಕ್ ಶುಚಿಯ ದೃಷ್ಟಿಯಿಂದ ನೀವು ಈ ಕ್ರಮವನ್ನು ತಗೆದುಕೊಂಡಿದ್ದೀರಿ ನಿಜ. ಆದರೆ ಆ ಎಚ್ಚರಿಕೆಯನ್ನು ನಾಯಿ ಮಾಲೀಕರೂ ತಗೆದುಕೊಳ್ಳುತ್ತೇವೆ. ಹಾಗಾಗಿ ನಿರ್ಣಯವನ್ನು ಮರುಪರಿಶೀಲಿಸಿ ಎಂದು ಟ್ವೀಟ್ ಮಾಡಿದ್ದಾರೆ.

    “ಸಾಕು ನಾಯಿಗಳು ಕಬ್ಬನ್ ಪಾರ್ಕ್ ಅನ್ನು ಹೊಲಸು ಮಾಡುತ್ತವೆ ಎನ್ನುವ ಕಾರಣಕ್ಕಾಗಿ ಬ್ಯಾನ್ ಮಾಡುವ ಆದೇಶವನ್ನು ನೀಡಿದ್ದೀರಿ. ಪ್ರಜ್ಞಾವಂತ ನಾಗರಿಕರು ಯಾವತ್ತೂ ಕಬ್ಬನ್ ಪಾರ್ಕ್ ಅನ್ನು ಹಾಳು ಮಾಡುವುದಕ್ಕೆ ಬಿಡುವುದಿಲ್ಲ. ಅವರಿಗೂ ಕಬ್ಬನ್ ಪಾರ್ಕ್ ಅನ್ನು ಶುಚಿಯಾಗಿಡುವ ಮನಸ್ಸಿದೆ. ನಾಯಿಗಳನ್ನು ಬ್ಯಾನ್ ಮಾಡುವ ಮೂಲಕ ಅವುಗಳ ಹಕ್ಕುಗಳನ್ನು ಕಸಿದುಕೊಳ್ಳಬೇಡಿ. ಆದೇಶವನ್ನು ಮರುಪರಿಶೀಲಿಸಲು ವಿನಂತಿ’ ಎಂದು ಐಂದ್ರಿತಾ ರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ

    ಸಾಕು ನಾಯಿ ಮತ್ತು ಬೀದಿ ನಾಯಿಗಳ ಕುರಿತು ಐಂದ್ರಿತಾ ರೇ ಸಾಕಷ್ಟು ಕಾಳಜಿವಹಿಸುತ್ತಾರೆ. ಅನೇಕ ಬಾರಿ ನಾಯಿಗಳಿಗೆ ತೊಂದರೆಯಾದಾಗ, ಅವುಗಳನ್ನು ಕಾಪಾಡುವ ನಿಟ್ಟಿನಲ್ಲಿ ಹೋರಾಟವನ್ನೂ ಮಾಡಿದ್ದಾರೆ. ಪ್ರಾಣಿಗಳ ರಕ್ಷಣೆಗೆ ಪತಿ ದಿಗಂತ್ ಜೊತೆಯೂ ಕೈ ಜೋಡಿಸಿದ್ದಾರೆ. ಸ್ವತಃ ಅನೇಕ ತಳಿಯ ನಾಯಿಗಳನ್ನೂ ಅವರು ಸಾಕಿದ್ದಾರೆ. ಹೀಗಾಗಿ ನಾಯಿ ಪ್ರಿಯರ ಪರವಾಗಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಅವರು ಮನವಿ ಮಾಡಿಕೊಂಡಿದ್ದಾರೆ.

    Live Tv

  • ಫ್ರೆಂಡ್‌ ಜೊತೆ ಜ್ಯೂಸ್ ಕುಡಿಯಲು ಬಂದಿದ್ದ ಯುವತಿ ಶಾಪಿಂಗ್‌ ಮಾಲ್‌ನಿಂದ ಆಯತಪ್ಪಿ ಬಿದ್ದು ಸಾವು

    ಫ್ರೆಂಡ್‌ ಜೊತೆ ಜ್ಯೂಸ್ ಕುಡಿಯಲು ಬಂದಿದ್ದ ಯುವತಿ ಶಾಪಿಂಗ್‌ ಮಾಲ್‌ನಿಂದ ಆಯತಪ್ಪಿ ಬಿದ್ದು ಸಾವು

    ಬೆಂಗಳೂರು: ಜ್ಯೂಸ್ ಕುಡಿಯಲು ಶಾಂಪಿಗ್ ಕಾಂಪ್ಲೆಕ್ಸ್‌ಗೆ ಬಂದಿದ್ದ ಯುವತಿ ವಾಶ್‍ರೂಂನಿಂದ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು, ಯುವತಿಯನ್ನು ಕಾಪಾಡಲು ಹೋದ ಯುವಕನಿಗೆ ಗಂಭೀರ ಗಾಯವಾದ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

    ಲಿಯಾ(18) ಮೃತ ಯುವತಿ ಹಾಗೂ ಪೀಟರ್ (18) ಗಾಯಗೊಂಡ ಯುವಕ. ಬೆಂಗಳೂರಿನ ಫ್ರೇಜರ್ ಟೌನ್ ನಿವಾಸಿ ಲಿಯಾ ಹಾಗೂ ಆಂಧ್ರ ಮೂಲದ ಪೀಟರ್ ಇಬ್ಬರೂ ಸೆಂಟ್ ಜಾನ್ಸ್ ಕಾಲೇಜಿನಲ್ಲಿ ಓದುತ್ತಾ ಇದ್ದರು. ಈ ಇಬ್ಬರೂ ಸ್ನೇಹಿತರು ಬ್ರಿಗೇಡ್ ರಸ್ತೆಯ ಶಾಂಪಿಂಗ್ ಕಾಂಪ್ಲೆಕ್ಸ್‌ಗೆ ಬಂದಿದ್ದರು.

    ಫುಡ್ ಕೋರ್ಟ್‍ನಲ್ಲಿ ಊಟ ಮುಗಿಸಿ ವಾಷ್ ರೂಂಗೆ ಹೋಗಿದ್ದರು. ಈ ವೇಳೆ ಲಿಯಾ ಕಾಲುಜಾರಿ ಬಿದ್ದಿದ್ದಾಳೆ. ಅವಳನ್ನು ಕಾಪಾಡಲು ಹೋದ ಪೀಟರ್ ಕೂಡ ಆಯತಪ್ಪಿ ಬಿದ್ದಿದ್ದಾನೆ. ಘಟನೆ ವೇಳೆ ಯುವಕನ ತಲೆಗೆ ಗಂಭೀರ ಗಾಯವಾಗಿದ್ದು, ನಿಮ್ಹಾನ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಘಟನೆ ಕುರಿತು ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೆಣ್ಣೆ ಹಳ್ಳದಲ್ಲಿ ಪ್ರವಾಹ – ನಾಲ್ವರು ಕಾರ್ಮಿಕರನ್ನ ರಕ್ಷಿಸಿದ ಅಗ್ನಿಶಾಮಕ ದಳ

    POLICE JEEP

    ಈ ಬಗ್ಗೆ ಮಾತನಾಡಿದ ಡಿಸಿಪಿ ಶರಣಪ್ಪ ಅವರು, ಸ್ನೇಹಿತರೊಂದಿಗೆ ಲೀಯಾ ಜ್ಯೂಸ್ ಕುಡಿಯೋದಕ್ಕೆ ಬಂದಿದ್ದರು. ವಾಷ್ ರೂಂಗೆ ಹೋಗಿ ಬರುವಾಗ ಸ್ಟೇರ್ ಕೇಸ್‍ನಿಂದ ಇಬ್ಬರು ಕಾಲು ಜಾರಿ ಕೆಳಗಡೆ ಬಿದ್ದಿದ್ದಾರೆ. ಆತ್ಮಹತ್ಯೆ ಯತ್ನದ ಬಗ್ಗೆ ಪ್ರಾಥಮಿಕವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಡಿಸಿ ಕಚೇರಿ ಮೇಲೆ ಎಸಿಬಿ ದಾಳಿ – ಇಬ್ಬರು ಭ್ರಷ್ಟ ಅಧಿಕಾರಿಗಳು ಬಲೆಗೆ

  • ಕಬ್ಬನ್ ಪಾರ್ಕ್‍ನಲ್ಲಿ ವಾಹನ ಸಂಚಾರ ನಿಷೇಧ ಸಾಧ್ಯತೆ

    ಕಬ್ಬನ್ ಪಾರ್ಕ್‍ನಲ್ಲಿ ವಾಹನ ಸಂಚಾರ ನಿಷೇಧ ಸಾಧ್ಯತೆ

    – ತೋಟಗಾರಿಕೆ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ

    ಬೆಂಗಳೂರು: ಸಧ್ಯದಲ್ಲೇ ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ನಿಷೇಧಿಸುವ ಸಾಧ್ಯತೆ ಇದೆ.

    ಇಂದು ತೋಟಗಾರಿಕೆ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ವಾಹನ ಸಂಚಾರ ಸ್ಥಗಿತಕ್ಕೆ ತೀರ್ಮಾನ ಕೈಗೊಳ್ಳಲಾಗಿದ್ದು, ಅಧಿಕಾರಿಗಳ ಜೊತೆ ಸಭೆ ನಡೆಸಿದ ತೋಟಗಾರಿಕೆ ಇಲಾಖೆ ಸಚಿವ ನಾರಾಯಣ ಗೌಡ, ವಾಹನ ಸಂಚಾರ ನಿಷೇಧಿಸುವ ನಿರ್ಣಯವನ್ನು ಕೈಗೊಂಡರು. ಬಳಿಕ ಈ ಕುರಿತ ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿಗಳು ಕೈಗೊಳ್ಳಬೇಕು ಎಂದು ಸಚಿವ ನಾರಾಯಣಗೌಡ ತಿಳಿಸಿದರು.

    ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಎಂದು ಪರಿಸರ ಪ್ರೇಮಿಗಳಿಂದ ಒತ್ತಾಯ ಕೇಳಿ ಬಂದಿತ್ತು. ಈ ಹಿನ್ನೆಲೆ ಇಂದು ಸಭೆ ಕರೆದು ಚರ್ಚಿಸಲಾಗಿದೆ. ಈ ಹಿಂದೆ ಪ್ರತಿ ಭಾನುವಾರ, ಸರ್ಕಾರಿ ರಜಾದಿನಗಳಂದು ಕಬ್ಬನ್ ಪಾರ್ಕ್‍ನಲ್ಲಿ ವಾಹನ ಸಂಚಾರ ಸ್ಥಗಿತ ಮಾಡಲಾಗುತ್ತಿತ್ತು. ಜೊತೆಗೆ ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 8 ಗಂಟೆವರೆಗೆ ವಾಹನ ಸಂಚಾರ ನಿಷೇಧಿಸಲಾಗಿತ್ತು. ಇದೀಗ ಸಂಪೂರ್ಣವಾಗಿ ವಾಹನ ಸಂಚಾರ ನಿಷೇಧಿಸಲು ನಿರ್ಣಯ ಕೈಗೊಳ್ಳಲಾಗಿದೆ.

    ಕಬ್ಬನ್ ಪಾರ್ಕ್‍ಗೆ ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ವಾಯು ವಿಹಾರಕ್ಕಾಗಿ 4 ರಿಂದ 5 ಸಾವಿರ ಜನ ಬರುತ್ತಾರೆ. 5 ರಿಂದ 6 ಸಾವಿರ ಜನ ಪ್ರತಿ ನಿತ್ಯ ಪಾರ್ಕ್ ವೀಕ್ಷಣೆಗಾಗಿ ಬರುತ್ತಿದ್ದಾರೆ. ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಕಬ್ಬನ್ ಉದ್ಯಾನವನದಲ್ಲಿ ವಾಹನ ಸಂಚಾರ ನಿಷೇಧಿಸಬೇಕೆಂಬ ನಿರ್ಣಯ ಕೈಗೊಳ್ಳಲಾಗಿತ್ತು. ಜೂನ್ 30 ರಂದು ನಡೆದ ಸಭೆಯಲ್ಲಿ ಬಿಬಿಎಂಪಿ ನಿರ್ಧಾರ ತೆಗೆದುಕೊಂಡಿತ್ತು. ಜೂನ್ 3 ರಂದು ನಡೆದ ಭರವಸೆಗಳ ಸಮಿತಿ ಸಭೆಯಲ್ಲೂ ವಾಹನ ಸಂಚಾರ ನಿಷೇಧಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ ಸಚಿವರು ಸಹ ಇದೇ ನಿಲುವು ವ್ಯಕ್ತಪಡಿಸಿದ್ದಾರೆ.

  • ಕದ್ದು ಮುಚ್ಚಿ ಪ್ರೇಮಿಗಳ ವಿಡಿಯೋ ಸೆರೆ ಹಿಡಿಯುತ್ತಿದ್ದ ಭೂಪನಿಗೆ ಬಿದ್ವು ಗೂಸಾ

    ಕದ್ದು ಮುಚ್ಚಿ ಪ್ರೇಮಿಗಳ ವಿಡಿಯೋ ಸೆರೆ ಹಿಡಿಯುತ್ತಿದ್ದ ಭೂಪನಿಗೆ ಬಿದ್ವು ಗೂಸಾ

    – ಕಬ್ಬನ್ ಪಾರ್ಕಿಗೆ ಬರುವ ಪ್ರೇಮಿಗಳೇ ಹುಷಾರ್!

    ಬೆಂಗಳೂರು: ನಗರದ ಕಬ್ಬನ್ ಪಾರ್ಕಿಗೆ ಬರುವ ಪ್ರೇಮಿಗಳೇ ಹುಷಾರ್! ಕಬ್ಬನ್ ಪಾರ್ಕ್ ನಲ್ಲಿ ಪ್ರೇಮಿಗಳಿಗೆ ಯಾವುದೇ ಸೇಫ್ಟಿ ಇಲ್ಲ. ನಿಮ್ಮ ಏಕಾಂತದ ವಿಡಿಯೋವನ್ನು ನಿಮಗೆ ಗೊತ್ತಿಲ್ಲದಂತೆ ರೆಕಾರ್ಡ್ ಮಾಡುತ್ತಿದ್ದಾರೆ ಎಚ್ಚರ.

    ಪ್ರೇಮಿಗಳಿಬ್ಬರು ಕಬ್ಬನ್ ಪಾರ್ಕ್ ನಲ್ಲಿ ಕಾಲ ಕಳೆಯುತ್ತಿದ್ದ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ವ್ಯಕ್ತಿಯೊಬ್ಬ ಇಂದು ಗೂಸಾ ತಿಂದಿದ್ದಾನೆ. ಸುಧೀರ್ ಪ್ರೇಮಿಗಳ ವಿಡಿಯೋ ಮಾಡಿ ಥಳಿತಕ್ಕೆ ಒಳಗಾದ ಆರೋಪಿ.

    ಸುಧೀರ್ ಇಂದು ಮಧ್ಯಾಹ್ನ ಕಬ್ಬನ್ ಪಾರ್ಕ್ ನಲ್ಲಿ ಕದ್ದು ಮುಚ್ಚಿ ಪ್ರೇಮಿಗಳ ಏಕಾಂತದ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಪ್ರೇಮಿಗಳು ಮೊಬೈಲ್ ತೋರಿಸಿ ಎಂದು ಕೇಳಿದ್ದಾರೆ. ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿರುವ ವಿಡಿಯೋವನ್ನು ತೋರಿಸಲು ಸುಧೀರ್ ನಿರಾಕರಿಸಿದ್ದಕ್ಕೆ ಆತನ ಮೇಲೆ ಪ್ರೇಮಿಗಳಿಬ್ಬರು ಕಲ್ಲಿಂದ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾರೆ. ಪರಿಣಾಮ ವಿಡಿಯೋ ಮಾಡುತ್ತಿದ್ದ ಕಿರಾತಕನ ತಲೆಗೆ ಗಂಭೀರವಾಗಿ ಪೆಟ್ಟಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕಬ್ಬನ್ ಪಾರ್ಕ್ ಪೊಲೀಸರು, ಸುಧೀರ್ ನನ್ನ ಬೌರಿಂಗ್ ಆಸ್ಪತ್ರೆ ಕರೆದೊಯ್ದು ಚಿಕಿತ್ಸೆಗೆ ಕೊಡಿಸಿದ್ದಾರೆ.

    ಪಾರ್ಕ್ ಗಳಲ್ಲಿ ಕಾಲ ಕಳೆಯುವುಕ್ಕೆ ಬರುವ ಪ್ರೇಮಿಗಳ ವಿಡಿಯೋವನ್ನು ಮಾಡಿ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ಘಟನೆಗಳು ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಪ್ರೇಮಿಗಳನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಪ್ರಕರಣಗಳು ನಡೆದಿದ್ದವು. ಇದೆಲ್ಲಾ ಕಬ್ಬನ್ ಪಾರ್ಕ್ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಣ ಮೌನವನ್ನು ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

  • ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕೆಂದು ಕುಣಿದು ಕುಪ್ಪಳಿಸಿದ ಮೇಯರ್, ಕಮಿಷನರ್

    ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕೆಂದು ಕುಣಿದು ಕುಪ್ಪಳಿಸಿದ ಮೇಯರ್, ಕಮಿಷನರ್

    ಬೆಂಗಳೂರು: ಸಿಲಿಕಾನ್ ಸಿಟಿಯ ಮೇಯರ್ ಮತ್ತು ಕಮಿಷನರ್ ಕಬ್ಬನ್ ಪಾರ್ಕ್‍ನಲ್ಲಿ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.

    ಇಂದು ಸ್ವಚ್ಛ ಸರ್ವೇಕ್ಷಣಾ ಜಾಗೃತಿ ಅಭಿಯಾನ ಕಬ್ಬನ್ ಪಾರ್ಕ್ ನಲ್ಲಿ ನಡೆಯಿತು. ಬೆಂಗಳೂರು ನಗರಿಯ ಸ್ವಚ್ಛತೆಯ ಬಗ್ಗೆ ಸಾರ್ವಜನಿಕಕರಿಗೆ ಅರಿವು ಹಾಗೂ ಸ್ವಚ್ಛ ಅಭಿಯಾನದ ಆಪ್ ಬಿಡುಗಡೆ ಕಾರ್ಯಕ್ರಮವೂ ನಡೆಯಿತು.

    ಈ ವೇಳೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡು ಹಾಕಿ ಕಬ್ಬನ್ ಪಾರ್ಕ್ ನಲ್ಲಿ ಮಸ್ತ್ ಮಸ್ತ್ ಸ್ಟೆಪ್ ಹಾಕಿ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಕಮಿಷನರ್ ಅನಿಲ್ ಕುಮಾರ್ ವಿಭಿನ್ನವಾಗಿ ಜಾಗೃತಿ ಅಭಿಯಾನ ನಡೆಸಿದರು. ಮೇಯರ್ ಕಮಿಷನರ್ ಭರ್ಜರಿ ಸ್ಟೆಪ್‍ಗೆ ಖುಷ್ ಆದ ಸಿಬ್ಬಂದಿ ವರ್ಗದವರು ಕೂಡ ಡ್ಯಾನ್ಸ್ ಗೆ ಸಾಥ್ ನೀಡಿದರು.

  • ಕಬ್ಬನ್ ಪಾರ್ಕ್ ನಲ್ಲಿ ನಿಮ್ಮ ನಾಯಿ ಗಲೀಜು ಮಾಡಿದ್ರೆ ನೀವೇ ಕ್ಲೀನ್ ಮಾಡ್ಬೇಕು

    ಕಬ್ಬನ್ ಪಾರ್ಕ್ ನಲ್ಲಿ ನಿಮ್ಮ ನಾಯಿ ಗಲೀಜು ಮಾಡಿದ್ರೆ ನೀವೇ ಕ್ಲೀನ್ ಮಾಡ್ಬೇಕು

    – ಕ್ಲೀನ್ ಮಾಡದಿದ್ರೇ ಬೀಳುತ್ತೆ ಫೈನ್

    ಬೆಂಗಳೂರು: ಸಿಲಿಕಾನ್ ಸಿಟಿ ಜನ ಮೊದಲೇ ಡಾಗ್ಸ್ ಪ್ರಿಯರು. ಸಾಕು ನಾಯಿಗಳಿಗೆ ಸ್ವಂತ ಮಕ್ಕಳ ತರಾನೇ ಆಟ, ಊಟ ಹಾಕುತ್ತಾರೆ. ಜೊತೆಗೆ ಕಬ್ಬನ್ ಪಾರ್ಕ್, ಲಾಲ್ ಬಾಗ್ ಗೆ ವಾಕಿಂಗ್ ಕರೆದುಕೊಂಡು ಬರುತ್ತಾರೆ.

    ಹೀಗೆ ವಾಕಿಂಗ್‍ಗೆ ಬರೋ ನಾಯಿಗಳು, ಬೀದಿನಾಯಿಗಳ ಜೊತೆ ಸೇರಿಕೊಂಡು ಕಬ್ಬನ್ ಪಾರ್ಕಲ್ಲಿ ಹಾವಳಿಯನ್ನುಂಟು ಮಾಡಿವೆ. ಇದು ಕಬ್ಬನ್ ಪಾರ್ಕ್‍ನ ವಾಯುವಿಹಾರಿಗಳ ಕಿರಿಕಿರಿಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಈ ನಾಯಿಗಳು ಮಾಡುವ ಗಲೀಜು ವಾಯುವಿಹಾರಿಗಳಿಗೆ ಬೇಸರ ಮೂಡಿಸಿದ್ದು, ಇದನ್ನ ತುಳಿದುಕೊಂಡೆ ಹೇಗೆ ಓಡಾಡುವುದು ಎಂದು ತೋಟಗಾರಿಕೆ ಇಲಾಖೆ ಮೊರೆ ಹೋಗಿದ್ದಾರೆ.

    ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಕಬ್ಬನ್ ಪಾರ್ಕ್ ನಲ್ಲಿ ಇನ್ಮುಂದೆ ಡಾಗ್ ವಾಕಿಂಗ್ ಕರೆದುಕೊಂಡು ಬರುವ ನಾಯಿಗಳ ಮಾಲೀಕರೆ ನಾಯಿಗಳು ಮಾಡುವ ಗಲೀಜು ಕ್ಲೀನ್ ಮಾಡಬೇಕು ಎಂದು ಸೂಚಿಸಿದೆ. ಜೊತೆಗೆ ಡಾಗ್ ಜೊತೆ ವಾಕಿಂಗ್ ಬರುವ ಮಾಲೀಕರಿಗೆ ಒಂದು ಬಾಸ್ಕೆಟ್ ಅಥವಾ ಬ್ಯಾಗ್ ಕಡ್ಡಾಯ ತರುವಂತೆ ಆದೇಶಿಸಲು ಚಿಂತನೆ ನಡೆಸಿದೆ. ಜೊತೆಗೆ ಕ್ಲೀನ್ ಮಾಡದಿದ್ದರೆ ಫೈನ್ ಹಾಕಲು ತೋಟಗಾರಿಕೆ ಇಲಾಖೆ ಮುಂದಾಗಿದೆ.

    ನಾಯಿಗಳ ಜೊತೆ ವಾಕಿಂಗ್ ಬಂದರೆ ಅದರ ಗಲೀಜು ಕ್ಲೀನ್ ಮಾಡಿ ಅಂದ್ರೆ ಹೇಗೆ? ಡಾಗ್ ಜೊತೆ ಪಾರ್ಕ್ ಗೆ ಬರುವಾಗ ಬಾಸ್ಕೆಟ್ ಬ್ಯಾಗ್ ತರಲು ಕಷ್ಟ ಆಗುತ್ತೆ ಎಂದು ನಾಯಿ ಮಾಲೀಕರು, ತೋಟಗಾರಿಕೆ ನಡೆಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಇನ್ಮುಂದೆ ಕಬ್ಬನ್ ಪಾರ್ಕ್ ನಲ್ಲಿ ಡಾಗಿ ಜೊತೆ ಔಟಿಂಗ್ ಹೋಗೋ ಮುನ್ನ ಹುಷಾರಾಗಿ. ತೋಟಗಾರಿಕೆ ಇಲಾಖೆಯ ಈ ರೂಲ್ಸ್ ಎಷ್ಟರ ಮಟ್ಟಿಗೆ ಪಾಲನೆಯಾಗುತ್ತೆ ಎಂದು ಕಾದು ನೋಡಬೇಕಿದೆ.

  • ಬೆಂಗ್ಳೂರಲ್ಲಿ ಫ್ರೀ ಕಾಶ್ಮೀರ ಕೂಗು – ಚರ್ಚ್ ಸ್ಟ್ರೀಟ್ ಗೋಡೆಗಳಲ್ಲಿ ಸಿಎಎ ವಿರೋಧಿ ಬರಹಗಳು!

    ಬೆಂಗ್ಳೂರಲ್ಲಿ ಫ್ರೀ ಕಾಶ್ಮೀರ ಕೂಗು – ಚರ್ಚ್ ಸ್ಟ್ರೀಟ್ ಗೋಡೆಗಳಲ್ಲಿ ಸಿಎಎ ವಿರೋಧಿ ಬರಹಗಳು!

    ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದ ಬಳಿಕ ಇದೀಗ ಸಿಲಿಕಾನ್ ಸಿಟಿಯಲ್ಲಿ ಕೂಡ ಫ್ರೀ ಕಾಶ್ಮೀರ ಕೂಗು ಎದ್ದಿದೆ.

    ಹೌದು. ನಗರದ ಚರ್ಚ್ ಸ್ಟ್ರೀಟ್ ರಸ್ತೆಯ ಗೋಡೆಗಳು ಮತ್ತು ಅಂಗಡಿ ಶೆಟರ್ ಗಳಲ್ಲಿ ಫ್ರೀ ಕಾಶ್ಮೀರ ಬರಹಗಳನ್ನು ಬರೆಯಲಾಗಿದೆ. ಅಲ್ಲದೆ ನೋ ಸಿಎಎ, ನೋ ಎನ್‍ಆರ್‍ಸಿ, ನೊ ಎನ್‍ಪಿಎ, ಬಿಜೆಪಿ ಈಸ್ ಕ್ಯಾನ್ಸರ್, ಮೋದಿ ಫ್ಯಾಸಿಸ್ಟ್ ಹೀಗೆ ಸಾಲು ಸಾಲು ಬರಹಗಳನ್ನು ಬರೆಯಲಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

    ಮೋದಿ ಹಾಗೂ ಆರ್ ಎಸ್‍ಎಸ್ ಖಂಡಿಸಿ ಸಹ ಸಾಕಷ್ಟು ಬರಹಗಳನ್ನ ಬರೆಯಲಾಗಿತ್ತು. ಇಡೀ ರಸ್ತೆ ಹಾಗೂ ಶೆಟರ್‍ಗಳು ಮೋದಿ ವಿರೋಧಿ ಬರಹಗಳಿಂದ ಕೂಡಿ ಹೋಗಿತ್ತು. ಇದರ ಜೊತೆಗೆ ಫ್ರೀ ಕಾಶ್ಮೀರ ಅಂತ ಸಹ ಬರೆಯಲಾಗಿದ್ದು, ಮತ್ತಷ್ಟು ವಿವಾದ ಪಡೆದುಕೊಳ್ಳುವಂತೆ ಮಾಡಲಾಗಿತ್ತು.

    ಸಿಸಿಟಿವಿಯಲ್ಲಿ ಸೆರೆ:
    ಬೆಳಗ್ಗಿನ ಜಾವ 3.8ರ ಸುಮಾರಿಗೆ ಬಂದ ಇಬ್ಬರು ಸ್ಕೂಟರ್ ನಿಲ್ಲಿಸಿ ಸ್ಪ್ರೇ ಬಳಸಿ, ಬರಹಗಳನ್ನ ಬರೆದಿದ್ದಾರೆ. ಇವರು ಬರೆಯೋ ಬರಹಗಳು ಎದುರುಗಿದ್ದ ಬಿಲ್ಡಿಂಗ್‍ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಲವೇ ನಿಮಿಷಗಳಲ್ಲಿ ಬರಹಗಳನ್ನ ಬರೆದು ಹೋಗಿದ್ದಾರೆ. ಯಾವಾಗ ಈ ವಿಚಾರ ವರದಿಯಾಯಿತೋ, ತಕ್ಷಣವೇ ಕಬ್ಬನ್ ಪಾರ್ಕ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಅಲ್ಲದೆ ಒಂದಷ್ಟು ಸಿಸಿಟಿವಿ ವಿಡಿಯೋಗಳನ್ನ ಸಂಗ್ರಹಿಸಿ ದೂರು ದಾಖಲಿಸಿಕೊಂಡು, ಆರೋಪಿಗಳಿಗಾಗಿ ಹುಡುಕಾಟ ನಡೆಸಲು ಆರಂಭಿಸಿದರು. ಇದನ್ನೂ ಓದಿ: ಮೈಸೂರು ವಿವಿ ಕ್ಯಾಂಪಸ್‍ನಲ್ಲೂ ಪ್ರತ್ಯೇಕ ಕಾಶ್ಮೀರ ಕೂಗು

    ಈ ಮಧ್ಯೆ ಕಬ್ಬನ್ ಪಾರ್ಕ್ ಪೊಲೀಸರು ಮೋದಿ ವಿರೋಧಿ ಬರಹಗಳಿಗೆ ಪೈಂಟ್ ಹಾಕಿಸಿದರು. ಇದೇ ವೇಳೆ ಚರ್ಚ್‍ಸ್ಟ್ರೀಟ್‍ಗೆ ಬಂದ ಕೆಲ ಹಿಂದೂಪರ ಸಂಘಟನೆಯ ಕಾರ್ಯಕರ್ತರು, ಘೋಷಣೆ ಕೂಗಿದರು. ಮೋದಿ ಪರ ಹಾಗೂ ಭಾರತ್ ಮಾತೆಗೆ ಜೈಕಾರ ಕೂಗಿ, ಸಿಎಎ ವಿರೋಧಿ ಬರಹಗಳಿಗೆ ಇವರು ಸಹ ಪೈಂಟ್ ಬಳಿಯೋ ಕೆಲಸ ಮಾಡಿದರು. ಸಿಎಎ ವಿರೊಧಿ ಬರಹ ಬರೆದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೋಷಣೆ ಕೂಗಿದರು. ನಂತರ ವಿ ಸಪೋರ್ಟ್ ಸಿಎಎ ಅಂತ ಹಿಂದೂ ಸಂಘಟನೆ ಕಾರ್ಯಕರ್ತರು ಬರೆದರು. ಕೊನೆಗೆ ಇದ್ಯಾವುದು ಬೇಡ ಅಂತ ಕಬ್ಬನ್‍ಪಾರ್ಕ್ ಪೊಲೀಸರು, ಸಿಎಎ ಪರ ಹಾಗೂ ವಿರೋಧದ ಬರಹಗಳಿಗೆ ಕೂಡ ಪೈಂಟ್ ಬಳಿಯೋ ಕೆಲಸ ಮಾಡಿದರು. ಇದನ್ನೂ ಓದಿ: ವಿವಾದಿತ ಪೋಸ್ಟರ್ ಹಿಡಿದಿದ್ದ ಮೈಸೂರು ಯುವತಿ ನಾಪತ್ತೆ

    ಸದ್ಯ ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಫ್ರೀ ಕಾಶ್ಮೀರ ಪೋಸ್ಟರ್ – ವಿಡಿಯೋ ಮೂಲಕ ಕ್ಷಮೆಯಾಚಿಸಿ ಸ್ಪಷ್ಟನೆ ನೀಡಿದ ಯುವತಿ

  • ಕಬ್ಬನ್ ಪಾರ್ಕಿನಲ್ಲಿ ಫೋಟೋ ಶೂಟ್ ಮಾಡಿದ್ರೆ ಕ್ಯಾಮೆರಾ ಸೀಜ್

    ಕಬ್ಬನ್ ಪಾರ್ಕಿನಲ್ಲಿ ಫೋಟೋ ಶೂಟ್ ಮಾಡಿದ್ರೆ ಕ್ಯಾಮೆರಾ ಸೀಜ್

    ಬೆಂಗಳೂರು: ಕಬ್ಬನ್ ಪಾರ್ಕ್‍ನಲ್ಲಿ ಫೋಟೋ ಶೂಟ್‍ಗೆ ಕ್ಯಾಮೆರಾ ತಂದರೆ ಲಕ್ಷಾಂತರ ರೂಪಾಯಿ ಕ್ಯಾಮೆರಾ ಸೀಜ್ ಆಗಲಿದೆ. ಅಲ್ಲದೇ ಜೊತೆಗೆ ಫೋಟೋ ಶೂಟ್ ಮಾಡಿದರೆ ದಂಡ ಕೂಡ ಹಾಕುವ ಹೊಸ ಕಾಯ್ದೆಯನ್ನು ಜಾರಿಗೆ ತರಲು ತೋಟಗಾರಿಕಾ ಇಲಾಖೆ ನಿರ್ಧಾರ ಮಾಡಿದೆ.

    ಈಗಾಗಲೇ ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ನಲ್ಲಿ ಫೋಟೋ ಶೂಟ್ ನಿಷೇಧಗೊಂಡಿದೆ. ಆದರೂ ಈ ಆದೇಶಕ್ಕೆ ಕ್ಯಾರೇ ಅನ್ನದ ಜನರು, ಪ್ರಿವೆಡ್ಡಿಂಗ್ ಫೋಟೋ ಶೂಟ್ ನಡೆಸುವಾಗ ಎಲ್ಲೆಂದರಲ್ಲಿ ಬಟ್ಟೆ ಬದಲಾಯಿಸುತ್ತಾರೆ. ಇದರಿಂದ ವಾಯುವಿಹಾರಕ್ಕೆ ಬಂದವರಿಗೆ ಇರಿಸುಮುರಿಸು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಸಾಕಷ್ಟು ಜನರು ಈ ವಿಚಾರವಾಗಿ ಇಲಾಖೆಗೆ ದೂರು ಕೂಡ ನೀಡಿದ್ದಾರೆ. ಜೊತೆಗೆ ಹೈ ರೆಸ್ಯೂಲಷನ್ ಇರುವ ಕ್ಯಾಮೆರಾ ಬಳಕೆಯಿಂದ ಕಬ್ಬನ್ ಪಾರ್ಕಿನ ಪಕ್ಷಿ ಸಂಕುಲಕ್ಕೂ ತೊಂದರೆಯಾಗಲಿದೆ ಎಂದು ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.

    ಸದ್ಯವೇ ಫೋಟೋ ಶೂಟ್ ಗೆ ಬಳಸುವ ಕ್ಯಾಮೆರಾಗಳನ್ನು ಸೀಜ್ ಮಾಡಿ ದಂಡ ಕಟ್ಟಿಸಿಕೊಳ್ಳುವ ಕಾಯ್ದೆಯನ್ನು ಪ್ರಯೋಗಿಸಲು ತೋಟಗಾರಿಕಾ ಇಲಾಖೆ ಸಿದ್ಧತೆ ನಡೆಸಿದೆ.

  • ಕಬ್ಬನ್ ಪಾರ್ಕಿನಲ್ಲಿ ಉಚಿತ ಯೋಗ ಅಭ್ಯಾಸಕ್ಕೆ ಮುಸ್ಲಿಮರ ವಿರೋಧ

    ಕಬ್ಬನ್ ಪಾರ್ಕಿನಲ್ಲಿ ಉಚಿತ ಯೋಗ ಅಭ್ಯಾಸಕ್ಕೆ ಮುಸ್ಲಿಮರ ವಿರೋಧ

    ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕಿನಲ್ಲಿ ಹೊಸ ವಿವಾದ ತಲೆಯೆತ್ತಿದೆ. ಪಾರ್ಕಿನಲ್ಲಿ ಯೋಗ ಮಾಡುವುದು ಬೇಡ ಎಂದು ವಿರೋಧ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಯೋಗ ಮಾಡಲು ಅನುಮತಿ ನೀಡಿದರೆ ನಮಾಜ್‍ಗೂ ಅವಕಾಶ ಕೊಡಿ ಎಂದು ಬೇಡಿಕೆ ಕೇಳಿಬಂದಿದೆ.

    ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದಿಂದ ಹುಲ್ಲು ಹಾಸಿನ ಮೇಲೆ ಪ್ರೀತಿ ಅವರು ಉಚಿತವಾಗಿ ಯೋಗ ತರಗತಿ ನೀಡುತ್ತಿದ್ದಾರೆ. ಈ ಖಾಸಗಿ ಯೋಗ ತರಗತಿಗೆ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹುಲ್ಲು ಹಾಸಿನ ಮೇಲೆ ಕ್ಲಾಸ್ ನಡೆಯುತ್ತದೆ. ಫ್ಲೆಕ್ಸ್ ಗಳನ್ನು ಪ್ರದರ್ಶನ ಮಾಡುತ್ತಾರೆ ಎಂದು ದೂರಿದ್ದಾರೆ. ಯೋಗ ನಡೆಸಲು ಅನುಮತಿ ನೀಡಿದರೆ ನಮಾಜ್ ಮಾಡಲು ಅವಕಾಶ ಕಲ್ಪಿಸಿ ಎಂದು ಕೇಳಿಕೊಂಡಿದ್ದಾರೆ.

    ಯೋಗ ಮಾಡಲು ಅವಕಾಶ ಕೊಟ್ಟರೆ ಮುಸ್ಲಿಂ ಬಾಂಧವರು ನಮಾಜ್ ಮಾಡಲು ಅವಕಾಶ ಕೇಳುತ್ತಿದ್ದಾರೆ. ಹೀಗಾಗಿ ಉಚಿತ ಯೋಗ ಕ್ಲಾಸ್ ಬೇಡ ಎಂಬ ವಿರೋಧ ಎದುರಾಗಿದೆ ಕಬ್ಬನ್ ಪಾರ್ಕ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ತಿಳಿಸಿದ್ದಾರೆ.

    ಈ ಬಗ್ಗೆ ಯೋಗ ತರಬೇತಿದಾರಾದ ಪ್ರೀತಿಯವರನ್ನು ಕೇಳಿದರೆ ಉಚಿತವಾಗಿ ಕ್ಲಾಸ್ ಮಾಡುತ್ತಿದ್ದೇನೆ. ಈ ಕ್ಲಾಸ್‍ಗೆ ವಿರೋಧ ಯಾಕೆ ಎನ್ನುವುದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಪ್ರತಿ ದಿನ ಬೆಳಿಗ್ಗೆ 6 ರಿಂದ 8 ಗಂಟೆಯವರೆಗೂ ನಡೆಯುವ ಈ ಕ್ಲಾಸ್‍ನಲ್ಲಿ ವಯೋವೃದ್ಧರು, ಯೋಗ ಆಸಕ್ತರು ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ.