Tag: ಕಬ್ಬಡಿ

  • PKL 10: ಪ್ರೊ ಕಬಡ್ಡಿ ಲೀಗ್: ಗುಜರಾತ್ ಜೈಂಟ್ಸ್‌ಗೆ ಭರ್ಜರಿ ಜಯ

    PKL 10: ಪ್ರೊ ಕಬಡ್ಡಿ ಲೀಗ್: ಗುಜರಾತ್ ಜೈಂಟ್ಸ್‌ಗೆ ಭರ್ಜರಿ ಜಯ

    ಅಹಮದಾಬಾದ್: ಇಲ್ಲಿನ ಟ್ರಾನ್ಸ್‌ಸ್ಟೇಡಿಯಾ ಅರೆನಾ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ (Kabaddi) ಲೀಗ್‍ನ 10ನೇ ಸೀಸನ್‍ನ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ (Telugu Titans) ವಿರುದ್ಧ ಗುಜರಾತ್ ಜೈಂಟ್ಸ್ (Gujarat Giants) ಭರ್ಜರಿ ಗೆಲುವು ಸಾಧಿಸಿತು.

    ಗುಜರಾತ್ ತಂಡದ ರೈಡರ್ ಸೋನು ಜಗ್ಲಾನ್ ಉತ್ತಮ ಪ್ರದರ್ಶನ ನೀಡಿದ್ದು, ಒಟ್ಟು 11 ಬಾರಿ ದಾಳಿ ಮಾಡಿ 11 ಪಾಯಿಂಟ್ಸ್ ತಂದುಕೊಟ್ಟು ಯಶಸ್ವಿಯಾದರು. ರಾಕೇಶ್ ಸುಂಗ್ರೋಯಾ 5 ರೈಡ್‍ಗಳಲ್ಲಿ 5 ಅಂಕಗಳಿಸಿದರು. ಈ ಮೂಲಕ ಆತಿಥೇಯ ಗುಜರಾತ್ ಜೈಂಟ್ಸ್ ತಂಡವು ತೆಲುಗು ಟೈಟಾನ್ಸ್ ವಿರುದ್ಧ 38-32 ಅಂಕಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು. ಇದನ್ನೂ ಓದಿ: WPL 2024 ಹರಾಜಿಗೆ 165 ಪ್ಲೇಯರ್ಸ್‌ ನೋಂದಣಿ – ಯಾರಾಗ್ತಾರೆ ಈ ಬಾರಿಯ ಟಾಪ್‌ ಪ್ಲೇಯರ್‌?

    ತೆಲುಗು ಟೈಟಾನ್ಸ್ ತಂಡದ ಸ್ಟಾರ್ ರೈಡರ್ ಪವನ್ ಸೆಹ್ರಾವತ್ ಈ ಪಂದ್ಯದಲ್ಲಿ ಸೂಪರ್ 10 ಪಡೆದರು. ಪಂದ್ಯದ ನಿರ್ಣಾಯಕ ಘಟ್ಟಗಳಲ್ಲಿ ತೆಲುಗು ಟೈಟಾನ್ಸ್ ಎಡವಿದ ಕಾರಣ ಗೆಲುವಿಗೆ ಆ ಅಂಕಗಳು ಸಾಕಾಗಲಿಲ್ಲ. ಇದನ್ನೂ ಓದಿ: T20I ಕ್ರಿಕೆಟ್‌ನಲ್ಲಿ ಪಾಕ್‌ ದಾಖಲೆ ನುಚ್ಚುನೂರು – ಟೀಂ ಇಂಡಿಯಾ ಯುವಪಡೆಗೆ ಮೆಚ್ಚುಗೆ

  • ಹಿಮದ ಮಧ್ಯೆ ಬಾರ್ಡರ್‌ನಲ್ಲಿ ಕಬಡ್ಡಿ ಆಡಿದ ಯೋಧರು – ವೀಡಿಯೋ ವೈರಲ್

    ಹಿಮದ ಮಧ್ಯೆ ಬಾರ್ಡರ್‌ನಲ್ಲಿ ಕಬಡ್ಡಿ ಆಡಿದ ಯೋಧರು – ವೀಡಿಯೋ ವೈರಲ್

    ಶಿಮ್ಲಾ: ಇಂಡೋ-ಟಿಬೆಟಿಯನ್ ಗಡಿಯಲ್ಲಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ತಮ್ಮ ಬಿಡುವಿನ ಸಮಯದಲ್ಲಿ ಕಬಡ್ಡಿ ಆಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    52 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ದೇಶ ಕಾಯುವ ಯೋಧರು ದಪ್ಪ ಉಣ್ಣೆಯ ಬಟ್ಟೆಯನ್ನು ಧರಿಸಿ ಹಿಮಾಚಲ ಪ್ರದೇಶದ ಹಿಮಾಲಯ ಪರ್ವತಗಳಲ್ಲಿ ಕಬಡ್ಡಿ ಆಡುತ್ತಾ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಚೀನಾದಲ್ಲಿ 2 ವರ್ಷಗಳ ಬಳಿಕ ಒಂದೇ ದಿನ 3 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್

    ಈ ವೀಡಿಯೋವನ್ನು ಐಟಿಬಿಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕ್ಯಾಪ್ಷನ್‍ನಲ್ಲಿ ಬಹಳ ಹುಮ್ಮಸ್ಸಿನಿಂದ ಹಿಮದ ಮಧ್ಯೆ ಆಟ ಆಡುತ್ತಿದ್ದಾರೆ (ಫುಲ್ ಆಫ್ ಜೋಶ್, ಪ್ಲೇಯಿಂಗ್ ಇನ್ ಸ್ನೋ) ಎಂದು ಬರೆದುಕೊಂಡಿದೆ. ಒಟ್ಟಾರೆ ಈ ವೀಡಿಯೋವನ್ನು ಇಲ್ಲಿಯವರೆಗೂ ಸುಮಾರು 30,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಲಾಕ್‍ಡೌನ್- 90 ಲಕ್ಷ ಮಂದಿ ನಿವಾಸಿಗಳು ಮನೆಯಲ್ಲಿ ಲಾಕ್

    ಈ ಮುನ್ನ ಐಟಿಬಿಪಿ ತನ್ನ ಸಿಬ್ಬಂದಿ ಹಿಮದಿಂದ ಆವೃತವಾದ ಪ್ರದೇಶದಲ್ಲಿ ತಿರುಗುತ್ತಿರುವ ಮತ್ತು ಹಗ್ಗಗಳ ಸಹಾಯದಿಂದ ಒಬ್ಬರ ಹಿಂದೆ ಮತ್ತೊಬ್ಬರು ಹಿಂಬಾಲಿಸುತ್ತಿರುವ ಮತ್ತೊಂದು ವೀಡಿಯೊವನ್ನು ಅಪ್‍ಲೋಡ್ ಮಾಡಿತ್ತು. ವಿಡಿಯೋದಲ್ಲಿ ಐಟಿಬಿಪಿ ಸಿಬ್ಬಂದಿ ಹೆಗಲ ಮೇಲೆ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ಕೈಯಲ್ಲಿ ಕೋಲು ಹಿಡಿದು ಮುಂದೆ ಸಾಗುತ್ತಿರುವುದು ಕಾಣಬಹುದಾಗಿದೆ.

  • ಆರ್​ಸಿಬಿ, ಬೆಂಗಳೂರು ಬುಲ್ಸ್ ಜೊತೆಗಿತ್ತು ಅಪ್ಪು ಒಡನಾಟ

    ಆರ್​ಸಿಬಿ, ಬೆಂಗಳೂರು ಬುಲ್ಸ್ ಜೊತೆಗಿತ್ತು ಅಪ್ಪು ಒಡನಾಟ

    ಬೆಂಗಳೂರು: ಚಂದನವನದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಿನಿಮಾ ಕ್ಷೇತ್ರದಂತೆ, ಕ್ರೀಡಾ ಕ್ಷೇತ್ರದಲ್ಲೂ ಕೂಡ ತಮ್ಮನ್ನು ತಾವು ತೋಡಗಿಸಿಕೊಂಡಿದ್ದರು. ಐಪಿಎಲ್‍ನಲ್ಲಿ ಕರ್ನಾಟಕ ತಂಡವಾಗಿದ್ದ ಆರ್​ಸಿಬಿ, ಪ್ರೋ ಕಬಡ್ಡಿ ಲೀಗ್‍ನಲ್ಲಿ ಬೆಂಗಳೂರು ಬುಲ್ಸ್ ತಂಡದ ರಾಯಭಾರಿಯಾಗಿ ಕ್ರೀಡಾಂಗಣಕ್ಕೆ ಬಂದು ಪಂದ್ಯ ವೀಕ್ಷಿಸಿ ಹುರಿದುಂಬಿಸುತ್ತಿದ್ದ ಅಪ್ಪು ಅಗಲಿಕೆಯ ನೋವು ಕ್ರೀಡಾ ಕ್ಷೇತ್ರಕ್ಕೂ ತಟ್ಟಿದೆ.

    ಪುನೀತ್ ರಾಜ್‍ಕುಮಾರ್(46) ಹೃದಯಾಘಾತದಿಂದ ಅಕ್ಟೋಬರ್ 29ರಂದು ಕೊನೆಯುಸಿರೆಳೆದಿದ್ದಾರೆ. ಕನ್ನಡಿಗರ ಪಾಲಿನ ನೆಚ್ಚಿನ ಅಪ್ಪು, ಕ್ರೀಡಾಪಟುಗಳಂತೆ ತಮ್ಮ ದೇಹವನ್ನು ಅಚ್ಚುಕಟ್ಟಾಗಿ ಫಿಟ್ ಆಗಿ ಬೆಳೆಸಿದ್ದರು. ಜೊತೆಗೆ ಕ್ರಿಕೆಟ್, ಕಬಡ್ಡಿ, ಫುಟ್‍ಬಾಲ್ ಕ್ರೀಡೆಗಳಲ್ಲಿ ಕರ್ನಾಟಕ ರಾಜ್ಯ ತಂಡಗಳಿಗೆ ಯಾವತ್ತು ಬೆಂಬಲವಾಗಿದ್ದರು. ಇದನ್ನೂ ಓದಿ: ಮಂಡಿಯೂರಲು ಒಪ್ಪಿದ ಡಿ ಕಾಕ್ ಶ್ರೀಲಂಕಾ ವಿರುದ್ಧ ಪಂದ್ಯಕ್ಕೆ ಹಾಜರ್

    PUNEET

    ಪುನೀತ್ ಕ್ರೀಡೆಯೊಂದಿಗೆ ಅಪಾರ ನಂಟು ಹೊಂದಿದ್ದು, ಜನಪ್ರಿಯ ಕ್ರಿಕೆಟ್ ಲೀಗ್ ಐಪಿಎಲ್‍ನಲ್ಲಿ ಬೆಂಗಳೂರಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಮತ್ತು ಪ್ರೊ ಕಬಡ್ಡಿಯ ಲೀಗ್‍ನಲ್ಲಿ ಬೆಂಗಳೂರು ಬುಲ್ಸ್ ತಂಡದ ರಾಯಭಾರಿಯಾಗಿ ತಂಡಕ್ಕೆ ಪವರ್ ಹೆಚ್ಚಿಸಿದ್ದರು. ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಪುನೀತ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯಗಳನ್ನು ಸ್ಟೇಡಿಯಂನಲ್ಲಿ ಕೂತು ವೀಕ್ಷಿಸಿ ಅಭಿಮಾನಿಗಳೊಂದಿಗೆ ಸಂಭ್ರಮಿಸುತ್ತಿದ್ದರು.

    ಪ್ರೀಮಿಯರ್ ಫುಟ್‍ಬಾಲ್ ಲೀಗ್ ಆರಂಭಗೊಂಡಾಗ ಪುನೀತ್ ರಾಜ್‍ಕುಮಾರ್ ಬೆಂಗಳೂರು ಎಫ್‍ಸಿ ತಂಡದೊಂದಿಗೂ ಕೈ ಜೋಡಿಸಿದ್ದರು. ಜೊತೆಗೆ ಪಂದ್ಯಗಳ ವೀಕ್ಷಣೆಗಳಿಗಾಗಿ ಅಂಕಣಕ್ಕೆ ಬಂದು ನಗು ಮೊಗದಿಂದ ಆಟಗಾರರಿಗೆ ಹುರಿದುಂಬಿಸುತ್ತಿದ್ದ ಅಪ್ಪು ಇನ್ನೂ ನೆನಪು ಮಾತ್ರ. ಇದನ್ನೂ ಓದಿ: T20 ವಿಶ್ವಕಪ್ – ಟೀಂ ಇಂಡಿಯಾದ 6ನೇ ಬೌಲರ್ ಬೌಲಿಂಗ್‍ಗೆ ಎಂಟ್ರಿ

    ಅಪ್ಪು ಅಗಲಿಕೆಗೆ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಕೆ.ಎಲ್ ರಾಹುಲ್, ರಾಬಿನ್ ಉತ್ತಪ್ಪ, ವೀರೇಂದ್ರ ಸೆಹ್ವಾಗ್, ಸಹಿತ ಕ್ರೀಡಾಕ್ಷೇತ್ರದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

  • ಭರ್ಜರಿ ಕಬಡ್ಡಿ ಆಡಿದ ಸುರಪುರ ಬಿಜೆಪಿ ಶಾಸಕ ರಾಜುಗೌಡ

    ಭರ್ಜರಿ ಕಬಡ್ಡಿ ಆಡಿದ ಸುರಪುರ ಬಿಜೆಪಿ ಶಾಸಕ ರಾಜುಗೌಡ

    ಯಾದಗಿರಿ: ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಮತ್ತು ತಮ್ಮ ತಾಯಿ ನಿಧನದಿಂದ ಇಷ್ಟು ದಿನ ಮಂಕಾಗಿದ್ದ ಸುರಪುರ ಬಿಜೆಪಿ ಶಾಸಕ ರಾಜುಗೌಡ, ತಮ್ಮ ನೋವನೆಲ್ಲಾ ಮರೆತು ಭರ್ಜರಿ ಕಬಡ್ಡಿಯಾಡಿ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ.

    ಜಿಲ್ಲೆಯ ಸುರಪುರ ಪಟ್ಟಣದ ಕುಂಬಾರಪೇಟೆ ಈಶ್ವರ ದೇವರ ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನ ಮಂಡಳಿ ಹಮ್ಮಿಕೊಂಡಿದ್ದ, ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಗಳ ಉದ್ಘಾಟನೆಗೆ ಶಾಸಕ ರಾಜುಗೌಡ ತೆರಳಿದ್ದರು.

    ಈ ವೇಳೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ರಾಜುಗೌಡ ಕೆಲ ಹೊತ್ತು ಕಬಡ್ಡಿ ಆಡಿದ್ದಾರೆ. ಪ್ರೊಫೆಷನಲ್ ಕಬಡ್ಡಿ ಆಟಗಾರರಂತೆ ಡೈ ಹೊಡೆದು ಕಬಡ್ಡಿಯಾಡಿದ ಶಾಸಕ ರಾಜುಗೌಡ ತಮ್ಮ ಅಭಿಮಾನಿಗಳಿಂದ ಸಿಳ್ಳೆ ಚಪ್ಪಾಳೆಗಿಟ್ಟಿಸಿಕೊಂಡರು.

    ಮೂಲತಃ ಕ್ರೀಡಾಪಟುವಾಗಿರುವ ರಾಜುಗೌಡ ಅವರು ಯುವಕರೊಂದಿಗೆ ನುರಿತ ಕಬಡ್ಡಿ ಆಟಗಾರರಂತೆ ಆಟವಾಡುವ ಮೂಲಕ ನೆರೆದಿದ್ದ ಕ್ರೀಡಾಭಿಮಾನಿಗಳನ್ನು ರಂಜಿಸಿ, ಅವರ ಮನ ಗೆದ್ದಿದ್ದಾರೆ. ಈ ಹಿಂದೆಯೂ ರಾಜುಗೌಡ ಮಧ್ಯರಾತ್ರಿ ಯುವಕರೊಂದಿಗೆ ಕಬ್ಬಡಿ ಆಟವಾಡಿದ್ದರು.

  • ಸಹೋದ್ಯೋಗಿಗಳ ಜೊತೆ ಕಬಡ್ಡಿ ಆಡಿದ ಎಸ್‍ಪಿ ರವಿ.ಡಿ ಚೆನ್ನಣ್ಣನವರ್

    ಸಹೋದ್ಯೋಗಿಗಳ ಜೊತೆ ಕಬಡ್ಡಿ ಆಡಿದ ಎಸ್‍ಪಿ ರವಿ.ಡಿ ಚೆನ್ನಣ್ಣನವರ್

    ಬೆಂಗಳೂರು: ಕರ್ನಾಟಕದ ಖಡಕ್ ಪೊಲೀಸ್ ಅಧಿಕಾರಿ ಎಂದೇ ಖ್ಯಾತರಾಗಿರುವ ಎಸ್‍ಪಿ ರವಿ. ಡಿ ಚನ್ನಣ್ಣನವರ್ ಅವರು ತಮ್ಮ ಸಹೋದ್ಯೋಗಿ ಜೊತೆ ಕಬಡ್ಡಿ ಆಟ ಆಡಿ ತಮ್ಮ ಬಾಂಧವ್ಯವನ್ನು ಮೆರೆದಿದ್ದಾರೆ.

    ಬೆಂಗಳೂರು ಹೊರವಲಯ ಬ್ಯಾಡರಹಳ್ಳಿ ಪೊಲೀಸ್ ಮೈದಾನದಲ್ಲಿ, ವಾರ್ಷಿಕ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದೆ. ಈ ವೇಳೆ ಕಬಡ್ಡಿ ಆಟ ಆಡಿ ದೇಶಿಯ ಕ್ರೀಡೆಗೆ ಒತ್ತು ನೀಡಿದ್ದಾರೆ. ಸಹೋದ್ಯೋಗಿಗಳ ಜೊತೆ ಆಟಕ್ಕೂ ಸೈ, ಕಾನೂನು ಪಾಲನೆಗೂ ಸೈ ಎನ್ನುವಂತೇ ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ.ಡಿ ಚನ್ನಣ್ಣನವರ್ ಅಧಿಕಾರಿಗಳ ಜೊತೆ ಅಂಗಳದಲ್ಲಿ ಕಾದಾಟ ನಡೆಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಎಸ್‍ಪಿ ರವಿ ಚನ್ನಣ್ಣನವರ್ ಗ್ರಾಮ ವಾಸ್ತವ್ಯ

    ಎಸ್‍ಪಿ ರವಿ.ಡಿ ಚೆನ್ನಣ್ಣವರ್ ಅವರಿಗೆ ನೆಲಮಂಗಲ ಉಪವಿಭಾಗದ ಪೊಲೀಸ್ ಸಿಬ್ಬಂದಿಗಳು ಸಾಥ್ ನೀಡಿದ್ದಾರೆ. ಕಬಡ್ಡಿ ಆಟದ ಹಲವಾರು ತಂತ್ರಗಳನ್ನು ಬಳಸಿ ಆಟ ವಾಡುತ್ತಿರುವುದು ಕಂಡು ಬಂದಿದ್ದು, ಕ್ರೀಡಾಪಟುಗಳಿಗೆ ಇನ್ನಷ್ಟು ಹುರುಪು ತಂದಿದೆ.