Tag: ಕಬ್ಜ 2

  • ‘ಕಬ್ಜ 2’ ಘೋಷಣೆ: ಆಡಿಕೊಂಡವರ ಬಾಯಿ ಮುಚ್ಚಿಸಿದ ನಿರ್ದೇಶಕ ಆರ್.ಚಂದ್ರು

    ‘ಕಬ್ಜ 2’ ಘೋಷಣೆ: ಆಡಿಕೊಂಡವರ ಬಾಯಿ ಮುಚ್ಚಿಸಿದ ನಿರ್ದೇಶಕ ಆರ್.ಚಂದ್ರು

    ರೋಬ್ಬರಿ 5 ಸಿನಿಮಾಗಳನ್ನು ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ ನಿರ್ದೇಶಕ ಆರ್.ಚಂದ್ರು. ಕಬ್ಜ ಸಿನಿಮಾದ ನಂತರ ಕಬ್ಜ 2 ಸಿನಿಮಾ ಬರುವುದಿಲ್ಲ ಎಂದು ಗಾಂಧಿನಗರ ಆಡಿಕೊಂಡಿತ್ತು. ಆಡಿಕೊಂಡ ಬಾಯಿಗಳಿಗೆ ಸಿನಿಮಾ ಘೋಷಣೆ ಮಾಡುವ ಮೂಲಕ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

    ಕಬ್ಜ ಸಿನಿಮಾ ರಿಲೀಸ್ ಆಗಿ ಮೊದಲನೇ ದಿನವೇ ನೂರು ಕೋಟಿ ಕ್ಲಬ್ ಸೇರಿದ್ದ ಬಗ್ಗೆ ಚಿತ್ರತಂಡ ಹೇಳಿಕೊಂಡಿತ್ತು. ಆದರೆ, ಕೆಲವರು ಅದನ್ನು ತಮಾಷೆ ಮಾಡಿದ್ದರು. ಅದಕ್ಕೂ ಚಂದ್ರು ಉತ್ತರ ನೀಡಿದ್ದಾರೆ. ಕಬ್ಜ ಸಿನಿಮಾದಿಂದ ಸರಕಾರಕ್ಕೆ ಬರೋಬ್ಬರಿ 20 ಕೋಟಿ ರೂಪಾಯಿಯನ್ನು ತೆರಿಗೆ ಕಟ್ಟಿರುವುದಾಗಿ ಹೇಳಿದ್ದಾರೆ.

    5 ಸಿನಿಮಾ ಘೋಷಣೆ

    ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿ ಜೋರಾಗಿದೆ. ಕಳೆದ ವರ್ಷ ‘ಕಬ್ಜ’ (Kabzaa) ಚಿತ್ರದ ಮೂಲಕ ನಿರ್ದೇಶಕ, ನಿರ್ಮಾಪಕನಾಗಿ ಗೆದ್ದಿರುವ ಆರ್.ಚಂದ್ರು (R.Chandru) ಇದೀಗ ಒಮ್ಮೆಲೆ 5 ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಅನೌನ್ಸ್ ಮಾಡಿದ್ದಾರೆ. ನಿನ್ನೆ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಿನಿಮಾಗಳಿಗೆ ಚಾಲನೆ ನೀಡಿದ್ದಾರೆ.

    ‘ಕಬ್ಜ’ (Kabzaa) ಖ್ಯಾತಿಯ ಆರ್.ಚಂದ್ರು (R.Chandru) ಅವರ ತಮ್ಮ ಕನಸಿನ ಆರ್‌ಸಿ ಪ್ರೊಡಕ್ಷನ್ ಸಂಸ್ಥೆಯಿಂದ ಐದು ಸಿನಿಮಾಗಳ ಅನೌನ್ಸ್ ಮಾಡಿದ್ದಾರೆ. ಫಾದರ್, ಪಿಓಕೆ, ಶ್ರೀರಾಮಬಾಣ, ಡಾಗ್, ಕಬ್ಜ 2 ಸಿನಿಮಾಗಳನ್ನು ಆರ್.ಚಂದ್ರು ನಿನ್ನೆ (ಜ.23) ಘೋಷಣೆ ಮಾಡಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತ್ರವೇ ಅಲ್ಲದೆ ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್, ರಿಯಲ್ ಸ್ಟಾರ್ ಉಪೇಂದ್ರ (Upendra), ಡಾರ್ಲಿಂಗ್ ಕೃಷ್ಣ, ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ ಸುರೇಶ್, ಹೆಚ್.ಎಂ ರೇವಣ್ಣ, ನಿರ್ಮಾಪಕ ಜಾಕ್ ಮಂಜು ಅವರು ಹಾಜರಿದ್ದು, ಚಂದ್ರು ಅವರ ಪ್ರಯತ್ನಕ್ಕೆ ಶುಭಾಶಯ ಕೋರಿದ್ದಾರೆ.

     

    ತಮ್ಮ ಬ್ಯಾನರ್ ಮೂಲಕ ಅನೌನ್ಸ್ ಮಾಡಿರೋ 5 ಸಿನಿಮಾಗಳಿಗೆ ಆರ್.ಚಂದ್ರು ಅವರು ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ಹೊಸ ನಿರ್ದೇಶಕರಿಗೆ ಡೈರೆಕ್ಷನ್ ಮಾಡುವ ಅವಕಾಶ ಕೊಡುತ್ತಿದ್ದಾರೆ. ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  • Breaking-ಅಧಿಕೃತವಾಗಿ ‘ಕಬ್ಜ 2’ ಸಿನಿಮಾ ಘೋಷಿಸಿದ ನಿರ್ದೇಶಕ ಆರ್.ಚಂದ್ರು

    Breaking-ಅಧಿಕೃತವಾಗಿ ‘ಕಬ್ಜ 2’ ಸಿನಿಮಾ ಘೋಷಿಸಿದ ನಿರ್ದೇಶಕ ಆರ್.ಚಂದ್ರು

    ಮ್ಮ ಅಭಿಮಾನಿಗಳಿಗೆ ಇಂದು ಗುಡ್ ನ್ಯೂಸ್ ಕೊಡುವುದಾಗಿ ನಿರ್ದೇಶಕ ಆರ್.ಚಂದ್ರು (R. Chandru) ತಿಳಿಸಿದ್ದರು. ಕಬ್ಜ ಸಿನಿಮಾ 25 ದಿನಗಳ ಪ್ರದರ್ಶನ ಕಂಡಿರುವ ಹಿನ್ನೆಲೆಯಲ್ಲಿ ಮತ್ತೊಂದು ಹೊಸ ಸುದ್ದಿಯನ್ನು ಹೇಳುವುದಾಗಿ ಮಾತನಾಡಿದ್ದರು. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಚಂದ್ರು. ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದು, ಇಂದಿನಿಂದ ‘ಕಬ್ಜ 2’ (Kabzaa 2 ) ಸಿನಿಮಾದ ಕೆಲಸದಲ್ಲಿ ತೊಡಗುವುದಾಗಿ ತಿಳಿಸಿದ್ದಾರೆ.

    ಕಬ್ಜಗಿಂತಲೂ ಕಬ್ಜ 2 ಬಜೆಟ್ ದೊಡ್ಡದಾಗಿಯೇ ಇರುತ್ತದೆಯಂತೆ. ಭಾರೀ ಬಜೆಟ್ ನಲ್ಲಿ ಕಬ್ಜ 2 ಮೂಡಿ ಬರಲಿದ್ದು, ಭಾರತೀಯ ಸಿನಿಮಾ ರಂಗದ ಖ್ಯಾತ ಕಲಾವಿದರು ತಾರಾಗಣದಲ್ಲಿ ಇರಲಿದ್ದಾರಂತೆ. ಸದ್ಯ ಕಥೆ ಬರೆಯುವುದರಲ್ಲಿ ತೊಡಗಿರುವ ಚಂದ್ರು, ಮುಂದಿನ ದಿನಗಳಲ್ಲಿ ತಾರಾಬಳಗದ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದರು. ಇದನ್ನೂ ಓದಿ:ವಿಜಯ್ ದೇವರಕೊಂಡ ಟ್ವೀಟ್ ಗೆ ‘ಥ್ಯಾಂಕ್ಯೂ ಮೈ ಹೀರೋ’ ಎಂದ ಸಮಂತಾ

    ‘ಕಥೆ, ಮೇಕಿಂಗ್, ತಾರಾಗಣ, ಬಜೆಟ್ ಯಾವುದರ ಬಗ್ಗೆಯೂ ಕಡಿಮೆ ಮಾಡುವುದಿಲ್ಲ. ಇನ್ನೂ ಅದ್ಧೂರಿಯಾಗಿ ಸಿನಿಮಾ ಮಾಡುವಂತಹ ಶಕ್ತಿಯನ್ನು ಕಬ್ಜ ನೀಡಿದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚು ಮಾಡಿದೆ’ ಎಂದಿದ್ದಾರೆ ಚಂದ್ರು. ಸಿನಿಮಾ ಗೆಲ್ಲಿಸಿದ ಪ್ರತಿಯೊಬ್ಬರಿಗೂ ಅವರು ಧನ್ಯವಾದ ಹೇಳಿದರು.

    ಕಬ್ಜ ಸಿನಿಮಾ ರಿಲೀಸ್ ಆಗಿ ಎರಡನೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿತ್ತು. ನಾನಾ ಕಾರಣಗಳಿಂದಾಗಿ ಈ ಸಿನಿಮಾ ವಿಶೇಷತೆಯನ್ನೂ ಒಳಗೊಂಡಿತ್ತು, ರಿಯಲ್ ಸ್ಟಾರ್ ಉಪೇಂದ್ರ (Upendra), ಕಿಚ್ಚ ಸುದೀಪ್ (Sudeep) ಮತ್ತು ಶಿವರಾಜ್ ಕುಮಾರ್ (Shivaraj Kumar) ಇದೇ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ನಟಿಸಿ, ಅಭಿಮಾನಿಗಳಿಗೆ ತ್ರಿಬಲ್ ಮನರಂಜನೆಯನ್ನು ನೀಡಿದ್ದರು.

  • 25 ದಿನ ಪೂರೈಸಿದ ‘ಕಬ್ಜ’: ನಿರ್ದೇಶಕ ಆರ್.ಚಂದ್ರು ಸದ್ಯ ಏನ್ ಮಾಡ್ತಿದ್ದಾರೆ?

    25 ದಿನ ಪೂರೈಸಿದ ‘ಕಬ್ಜ’: ನಿರ್ದೇಶಕ ಆರ್.ಚಂದ್ರು ಸದ್ಯ ಏನ್ ಮಾಡ್ತಿದ್ದಾರೆ?

    ನ್ನಡದ ಪ್ರತಿಭಾವಂತ ನಿರ್ದೇಶಕ ಆರ್.ಚಂದ್ರು (R. Chandru) ಅವರ ಕನಸಿನ ಪ್ರಾಜೆಕ್ಟ್ ಕಬ್ಜ ಸಿನಿಮಾ ಬಿಡುಗಡೆಯಾಗಿ ನಿನ್ನೆಗೆ 25 ದಿನ. ಹಲವು ಚಿತ್ರಮಂದಿರಗಳಲ್ಲಿ ಯಶಸ್ವಿ 25 ದಿನಗಳನ್ನು ಪೂರೈಸಿರುವ ಚಿತ್ರವು 50ನೇ ದಿನದತ್ತ ಮುನ್ನುಗ್ಗಿದೆ. ಈಗಲೂ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಹಲವು ಭಾಷೆಗಳಲ್ಲೂ ಸಿನಿಮಾ ಪ್ರದರ್ಶನ ಕಾಣುತ್ತಿದೆ.

    ಕಬ್ಜ 25 ದಿನಗಳನ್ನು ಪೂರೈಸಿರುವ ಬೆನ್ನಲ್ಲೇ ‘ಕಬ್ಜ 2’ (Kabzaa 2) ಚಿತ್ರದ ಬಗ್ಗೆ ನಿರ್ದೇಶಕ ಆರ್.ಚಂದ್ರು ಏನಾದರೂ ಅಪ್ ಡೇಟ್ ಕೊಡಲಿದ್ದಾರಾ ಎಂದು ಅವರ ಅಭಿಮಾನಿಗಳು ಕಾದಿದ್ದರು. ಆದರೆ, ಯಾವುದೇ ಮಾಹಿತಿಯನ್ನು ಚಂದ್ರು ಹಂಚಿಕೊಂಡಿಲ್ಲ. ಕಾರಣ ಮಹತ್ವದ ದಿನಕ್ಕಾಗಿ ಅವರು ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:‘ರಾಮನ ಅವತಾರ’ ಟೀಸರ್ ರಿಲೀಸ್ : ರಿಷಿ ಸಖತ್ ಕಾಮಿಡಿ ಮಾಡ್ತಾರಪ್ಪ

    ಆರ್.ಚಂದ್ರು ಅವರ ಆಪ್ತರ ಪ್ರಕಾರ ‘ಕಬ್ಜ 2’ ಸಿನಿಮಾ ಇನ್ನೂ ಅದ್ಧೂರಿಯಾಗಿ ಮತ್ತು ವಿಶೇಷ ಸಂಗತಿಗಳೊಂದಿಗೆ ರೆಡಿಯಾಗಲಿದೆಯಂತೆ. ಅಲ್ಲದೇ, ಬಾಲಿವುಡ್ ನಟರೊಬ್ಬರು ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರತೀಯ ಸಿನಿಮಾ ರಂಗದ ದಿಗ್ಗಜ ನಟರ ಸಮಾಗಮವೇ ಆಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಆ ಕಲಾವಿದರನ್ನು ಮನಸ್ಸಲ್ಲಿ ಇಟ್ಟುಕೊಂಡೇ ಪಾತ್ರಗಳಿಗೆ ಜೀವ ತುಂಬಲಾಗುತ್ತದೆ ಎಂದು ಹೇಳಲಾಗುತ್ತಿದೆ.

    ಕಾಂತಾರ ಚಿತ್ರದ ನಂತರ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿರುವ ಕಬ್ಜ ಚಿತ್ರ, ಈ ಮೂಲಕ ಆರ್.ಚಂದ್ರುಗೆ ಮತ್ತೊಂದು  ಹಂತದ ಗೆಲುವನ್ನು ತಂದುಕೊಟ್ಟಿದೆ. ಭಾರತೀಯ ಸಿನಿಮಾ ರಂಗವೇ ಮಾತಾಡುವಂತಹ ನಿರ್ದೇಶಕರ ಪಟ್ಟಿಯಲ್ಲಿ ಚಂದ್ರು ಕಾಣಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿಯೇ ಕಬ್ಜ 2 ಬಗ್ಗೆ ಈಗಾಗಲೇ ಮಾತುಗಳು ಶುರುವಾಗಿವೆ. ಈ ಚಿತ್ರದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ.

    ಕಬ್ಜ ಚಿತ್ರದಲ್ಲಿ ಉಪೇಂದ್ರ (Upendra) , ಸುದೀಪ್ (Sudeep) ಮತ್ತು ಶಿವರಾಜ್ ಕುಮಾರ್ (Shivraj Kumar) ಕಾಂಬಿನೇಷನ್ ಅನ್ನು ಮೊದಲ ಬಾರಿಗೆ ತಂದಿದ್ದ ಚಂದ್ರು, ಕಬ್ಜ 2 ನಲ್ಲಿ ಯಾರೆಲ್ಲ ಕಲಾವಿದರನ್ನು ಕೂಡಿಸಲಿದ್ದಾರೆ ಮತ್ತು ಮುಂದಿನ ಕಥೆಯ ಕಟ್ಟುವಿಕೆ ಹೇಗಿರಲಿದೆ ಎನ್ನುವ ಚರ್ಚೆ ಈಗಿನಿಂದಲೇ ಗಾಂಧಿನಗರದಲ್ಲಿ ಶುರುವಾಗಿದೆ.

  • ‘ಕಬ್ಜ 2’ ಚಿತ್ರದಲ್ಲಿ ಯಾರೆಲ್ಲ ಇರ್ತಾರೆ? ಕುತೂಹಲ ಹೆಚ್ಚಿಸಿದ ನಿರ್ದೇಶಕ ಚಂದ್ರು

    ‘ಕಬ್ಜ 2’ ಚಿತ್ರದಲ್ಲಿ ಯಾರೆಲ್ಲ ಇರ್ತಾರೆ? ಕುತೂಹಲ ಹೆಚ್ಚಿಸಿದ ನಿರ್ದೇಶಕ ಚಂದ್ರು

    ಭಾರತೀಯ ಸಿನಿಮಾ ರಂಗದಲ್ಲಿ ಹಲವು ದಾಖಲೆಗಳನ್ನು ಬರೆದಿರುವ ‘ಕಬ್ಜ’ ಸಿನಿಮಾ ಇನ್ನೂ ಸಾಕಷ್ಟು ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಮೂಲಕ ಕನ್ನಡ ಸಿನಿಮಾವೊಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ರಿಲೀಸ್ ಆದ ಎರಡನೇ ದಿನಕ್ಕೆ ನೂರು ಕೋಟಿ ಬಾಚುವ ಮೂಲಕ ಕೆಜಿಎಫ್ (KGF), ಕಾಂತಾರ (Kantara) ಸಿನಿಮಾಗಳ ಬಾಕ್ಸ್ ಆಫೀಸ್ ರೇಕಾರ್ಡ್ ಬ್ರೇಕ್ ಮಾಡಿತ್ತು. ಕಬ್ಜ ಸಿನಿಮಾ ತಂಡದಿಂದ ಮತ್ತಷ್ಟು ಮಾಹಿತಿಗಳು ಲಭ್ಯವಾಗುತ್ತಿವೆ.

    ಸಿನಿಮಾದ ಯಶಸ್ಸನ್ನು ಪ್ರೇಕ್ಷಕರಿಗೆ ಅರ್ಪಿಸಿ ನಿರ್ದೇಶಕ ಆರ್.ಚಂದ್ರು (R. Chandru) ‘ಕಬ್ಜ 2’ (Kabzaa 2) ಸಿನಿಮಾದ ತಯಾರಿಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಟೀಮ್ ಕಟ್ಟಿಕೊಂಡು ಕಥೆ ವಿಸ್ತರಣೆಯಲ್ಲಿ ಚಂದ್ರು ತೊಡಗಿದ್ದಾರೆ ಎನ್ನುವುದು ಅವರ ಆಪ್ತರ ಮಾಹಿತಿ. ಈ ಬಾರಿ ಹತ್ತು ಹಲವು ವಿಶೇಷಗಳೊಂದಿಗೆ ಕಬ್ಜ 2 ತಯಾರಾಗಲಿದೆಯಂತೆ. ಅಲ್ಲದೇ, ಭಾರತೀಯ ಸಿನಿಮಾ ರಂಗದ ಹೆಸರಾಂತ ಕಲಾವಿದರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ:ಯಾರನ್ನಾದರೂ ಡೇಟ್ ಮಾಡಿ ಎಂದ ಅಭಿಮಾನಿಗೆ ಸಮಂತಾ ಹೇಳಿದ್ದೇನು?

    ಭಾರತೀಯ ಚಿತ್ರರಂಗದಲ್ಲಿ ಒಂದು ಸಂಪ್ರದಾಯವಿದೆ. ಪಾರ್ಟ್ 1 ಹಿಟ್ ಆಗುತ್ತಿದ್ದಂತೆಯೇ ಎರಡನೇ ಭಾಗವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವ ಹಾಗೂ ಮತ್ತಷ್ಟು ಅದ್ಧೂರಿಯಾಗಿ ಮೇಕಿಂಗ್ ಮಾಡುತ್ತಾ ಬರಲಾಗಿದೆ. ಕೆಜಿಎಫ್ 2, ಪುಷ್ಪಾ 2, ಬಾಹುಬಲಿ 2 ಹೀಗೆ ಅನೇಕ ಚಿತ್ರಗಳನ್ನು ಉದಾಹರಣೆಯಾಗಿ ನೀಡಬಹುದು. ಹಾಗೆಯೇ ಚಂದ್ರು ಕೂಡ ಅದೇ ಹಾದಿಯಲ್ಲಿ ಹೆಜ್ಜೆ ಹಾಕಲಿದ್ದಾರಂತೆ.

    ಕಬ್ಜ 2 ಬಜೆಟ್ ಹಿಗ್ಗುವುದರ ಜೊತೆಗೆ ಹೆಸರಾಂತ ತಾರಾ ಬಳಗ ಕೂಡ ಇರಲಿದೆಯಂತೆ. ದಕ್ಷಿಣದ ಮತ್ತು ಬಾಲಿವುಡ್ ತಾರೆಯರು ಕೂಡ ಈ ಚಿತ್ರಕ್ಕಾಗಿ ಒಂದಾಗಲಿದ್ದಾರೆ ಎನ್ನುವ ಮಾಹಿತಿ ಕೂಡ ಹರಿದಾಡುತ್ತಿದೆ. ಈ ಕುರಿತು ಮಾತನಾಡಿರುವ ಚಂದ್ರು, ‘ಕಬ್ಜ 2 ಅದ್ಧೂರಿಯಾಗಿ ಮತ್ತು ಭಾರೀ ಬಜೆಟ್ ನಲ್ಲಿ ನಿರ್ಮಾಣ ಆಗುವುದು ಸತ್ಯ. ಕಥೆ ಮತ್ತು ಕಲಾವಿದರ ಬಗ್ಗೆ ಸದ್ಯಕ್ಕೆ ಏನೂ ಅಂದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಖಂಡಿತ ಎಲ್ಲದರ ಕುರಿತು ಮಾತನಾಡುತ್ತೇನೆ’ ಎನ್ನುತ್ತಾರೆ.