Tag: ಕಬ್ಜ ಸಿನಿಮಾ

  • 42ರ ಹರೆಯದಲ್ಲೂ ಬೋಲ್ಡ್ ಆಗಿ ಕಾಣಿಸಿಕೊಂಡ ಶ್ರೀಯಾ ಶರಣ್

    42ರ ಹರೆಯದಲ್ಲೂ ಬೋಲ್ಡ್ ಆಗಿ ಕಾಣಿಸಿಕೊಂಡ ಶ್ರೀಯಾ ಶರಣ್

    ನ್ನಡದ ‘ಕಬ್ಜ’ ಸಿನಿಮಾದ ನಟಿ ಶ್ರೀಯಾ ಶರಣ್ (Shriya Saran) ಅವರು ಹೊಸದೊಂದು ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಬಳುಕುವ ಬಳ್ಳಿಯಂತೆ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ನಟಿಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

    ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಲ್ಲಿ ಮಿಂಚುವ ಶ್ರೀಯಾ ಇದೀಗ ಪಡ್ಡೆಹುಡುಗರು ನಿದ್ದೆಗೆಡಿಸುವ ಕೆಲಸ ಮಾಡಿದ್ದಾರೆ. ಕಲರ್‌ಫುಲ್ ಡ್ರೆಸ್ ಧರಿಸಿ ನಟಿ ಮುದ್ದಾಗಿ ಕಾಣಿಸಿಕೊಂಡು ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ನಟಿ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಖ್ಯಾತ ಗಾಯಕ ಹಿಮೇಶ್ ರೇಶಮಿಯಾಗೆ ಪಿತೃ ವಿಯೋಗ

    42ರ ಹರೆಯದಲ್ಲೂ ನಟಿಯ ಫಿಟ್‌ನೆಸ್ & ಬ್ಯೂಟಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಶೈನಿಂಗ್ ಡ್ರೆಸ್‌ನಲ್ಲಿ ಮಿಂಚಿರುವ ಶ್ರೀಯಾ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ- ತಂದೆಯಾದ ಖುಷಿಯಲ್ಲಿ ಚಂದನ್

    ಇನ್ನೂ ಕನ್ನಡದ ‘ಚಂದ್ರ’ (Chandra) ಚಿತ್ರದ ಮೂಲಕ ಬಹುಭಾಷಾ ನಟಿ ಶ್ರೀಯಾ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ನೆನಪಿರಲಿ ಪ್ರೇಮ್‌ಗೆ ನಾಯಕಿಯಾಗಿ ನಟಿಸಿದರು. ಈ ಚಿತ್ರಕ್ಕೆ ರೂಪ ಅಯ್ಯರ್ ನಿರ್ದೇಶನ ಮಾಡಿದ್ದರು.

    ‘ಕಬ್ಜ’ ಸಿನಿಮಾದಲ್ಲಿ ಉಪೇಂದ್ರ(Upendra), ಸುದೀಪ್, ಶಿವರಾಜ್‌ಕುಮಾರ್ ಜೊತೆ ಶ್ರೀಯಾ ನಟಿಸಿದರು. ಉಪೇಂದ್ರಗೆ ಶ್ರೀಯಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರವನ್ನು ಆರ್.ಚಂದ್ರು ನಿರ್ದೇಶನ ಮಾಡಿದ್ದರು. ‘ಕಬ್ಜ 2’ (Kabzaa 2) ಕೂಡ ಬರಲಿದೆ. ಆದರೆ ಅದ್ಯಾವಾಗಿನಿಂದ ಶೂಟಿಂಗ್ ಶುರು ಎಂಬುದನ್ನು ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗಬೇಕಿದೆ.

     

    View this post on Instagram

     

    A post shared by Shriya Saran (@shriya_saran1109)

    ಅಂದಹಾಗೆ, 2018ರಲ್ಲಿ ಆಂಡ್ರೇ ಕೊಸ್ಚೆವ್ ಜೊತೆ ಶ್ರೀಯಾ ಮದುವೆಯಾದರು. 2021ರಲ್ಲಿ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದರು. ರಾಧಾ ಎಂಬ ಮುದ್ದಾದ ಮಗಳ ಆರೈಕೆಯಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸಿನಿಮಾ ಕೂಡ ಮಾಡುತ್ತಿದ್ದಾರೆ.

  • ಬಿಕಿನಿ ಧರಿಸಿ ಪಡ್ಡೆಹುಡುಗರ ಟೆಂಪ್ರೆಚರ್‌ ಹೆಚ್ಚಿಸಿದ ಶ್ರಿಯಾ ಶರಣ್

    ಬಿಕಿನಿ ಧರಿಸಿ ಪಡ್ಡೆಹುಡುಗರ ಟೆಂಪ್ರೆಚರ್‌ ಹೆಚ್ಚಿಸಿದ ಶ್ರಿಯಾ ಶರಣ್

    ‘ಕಬ್ಜ’ ಸಿನಿಮಾದ (Kabza Film) ಬ್ಯೂಟಿ ಶ್ರಿಯಾ ಶರಣ್ ಮಳೆಗಾಲದ ಚಳಿಯಲ್ಲೂ ಬಿಸಿ ಹೆಚ್ಚಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಟಿ ಶೇರ್ ಮಾಡಿದ ಫೋಟೋ ನೋಡಿದ ನೆಟ್ಟಿಗರ ಕಣ್ಣು ತಂಪಾಗಿದೆ. ಚಳಿಯಲ್ಲೂ ಬಿಕಿನಿ ಧರಿಸಿ ಪಡ್ಡೆಹುಡುಗರ ಟೆಂಪ್ರೆಚರ್‌ ಹೆಚ್ಚಿಸಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ಚಿತ್ರ ರಿಜೆಕ್ಟ್‌ ಮಾಡಿದ ಶ್ರೀಲೀಲಾ

    41ರ ಹರೆಯದಲ್ಲೂ 18ರ ಯುವತಿಯರನ್ನ ನಾಚಿಸುವಂತ ಫಿಟ್‌ನೆಸ್ ಹೊಂದಿದ್ದಾರೆ ಶ್ರೀಯಾ. ಬೀಚ್‌ನಲ್ಲಿ ಬಿಕಿನಿ ಹಾಕಿ ಕೊಟ್ಟ ಪೋಸ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಇದನ್ನೂ ಓದಿ:ರೀಲ್ಸ್ ರಾಣಿ ಈಗ ಪ್ರಭಾಸ್‌ಗೆ ನಾಯಕಿ

    ಕಡಲ ತೀರದಲ್ಲಿ ವಿವಿಧ ಭಂಗಿಯಲ್ಲಿ ನಟಿ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ಮಾದಕ ನೋಟಕ್ಕೆ ಗಂಡ್ ಹೈಕ್ಳು ಕಳೆದೋಗಿದ್ದಾರೆ.

    ‘ಕಬ್ಜ’ ನಟಿ ಶ್ರೀಯಾ ಸದ್ಯ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಬಗೆ ಬಗೆಯ ಪಾತ್ರಗಳನ್ನು ಮಾಡುವ ಮೂಲಕ ಸಿನಿಪ್ರೇಕ್ಷಕರ ಮನಗೆಲ್ಲುತ್ತಿದ್ದಾರೆ.

    ತೆಲುಗಿನ ‘ಸಂತೋಷಂ’ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರೀಯಾ ಶರಣ್ ಇದೀಗ ಬಹುಭಾಷಾ ನಟಿಯಾಗಿ ಬೇಡಿಕೆ ಹೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ:‘ತಂಗಲಾನ್’ ಸೀಕ್ವೆಲ್ ಬಗ್ಗೆ ಸಿಹಿಸುದ್ದಿ ಕೊಟ್ಟ ಚಿಯಾನ್ ವಿಕ್ರಮ್

    ಈ ಹಿಂದೆ ‘ಚಂದ್ರ’ (Chandra Kannada Film) ಎಂಬ ಕನ್ನಡ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್‌ಗೆ (Lovely Star Prem) ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾಗೆ ರೂಪಾ ಅಯ್ಯರ್ ನಿರ್ದೇಶನ ಮಾಡಿದ್ದರು.

    ಅಂದಹಾಗೆ, ಉಪೇಂದ್ರ (Upendra) ನಟನೆಯ ಕಬ್ಜ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಈ ಚಿತ್ರವನ್ನು ಆರ್. ಚಂದ್ರು ನಿರ್ದೇಶನ ಮಾಡಿದ್ರು. ‘ಕಬ್ಜ ಪಾರ್ಟ್ 2’ ಕೂಡ ಬರಲಿದೆ. ಈ ಸಿನಿಮಾಗಾಗಿ ಫ್ಯಾನ್ಸ್ ಕೂಡ ಎದುರು ನೋಡ್ತಿದ್ದಾರೆ.

  • ಮಗಳನ್ನು ಮುದ್ದಾಡಿದ `ಕಬ್ಜ’ ಸುಂದರಿ ಶ್ರೀಯಾ ಶರಣ್

    ಮಗಳನ್ನು ಮುದ್ದಾಡಿದ `ಕಬ್ಜ’ ಸುಂದರಿ ಶ್ರೀಯಾ ಶರಣ್

    ಹುಭಾಷಾ ನಟಿ ಶ್ರೀಯಾ ಶರಣ್ ಕನ್ನಡಕ್ಕೆ ಹೊಸಬರಲ್ಲ. ಸದ್ಯ ಉಪ್ಪಿಗೆ ಜೋಡಿಯಾಗಿ `ಕಬ್ಜ’ ಚಿತ್ರದ ಮೂಲಕ ನಟಿ ಹವಾ ಕ್ರಿಯೇಟ್ ಮಾಡಿದ್ದಾರೆ. ಸದ್ಯ ತಮ್ಮ ಮಗಳು ರಾಧಾ ಜೊತೆಗಿನ ಮುದ್ದಾದ ಫೋಟೋಶೂಟ್ (Photoshoot) ಮೂಲಕ ನಟಿ ಸೌಂಡ್ ಮಾಡ್ತಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಗಂಗವ್ವಗೆ ಮನೆ ಕಟ್ಟಲು ಸಹಾಯ ಮಾಡಿದ ನಟ ನಾಗಾರ್ಜುನ

     

    View this post on Instagram

     

    A post shared by Shriya Saran (@shriya_saran1109)

    ರೂಪಾ ಅಯ್ಯರ್ ನಿರ್ದೇಶನದ `ಚಂದ್ರ’ ಸಿನಿಮಾ ಮೂಲಕ ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿ ಪರಿಚಿತರಾಗಿದ್ದಾರೆ. ಮಲ್ಟಿಸ್ಟಾರ್ ಸಿನಿಮಾ‌, ʻಕಬ್ಜʼಗೆ ನಾಯಕಿಯಾಗಿ ಶ್ರೀಯಾ ಶರಣ್ ಸಾಥ್ ನೀಡಿದ್ದಾರೆ.

     

    View this post on Instagram

     

    A post shared by Shriya Saran (@shriya_saran1109)

    `ಕಬ್ಜ’ ಸಿನಿಮಾ ಪ್ರಚಾರದ ನಡುವೆ ಶ್ರೀಯಾ ಹೊಸ ಫೋಟೋಶೂಟ್‌ವೊಂದನ್ನ ಮಾಡಿಸಿದ್ದಾರೆ. ಮಗಳು ರಾಧಾ ಜೊತೆ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಶ್ರೀಯಾ ಮಾಡ್ರನ್ ಲುಕ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಸಂತೂರ್ ಮಮ್ಮಿ ಎಂದು ಕಾಮೆಂಟ್ ಮಾಡ್ತಿದ್ದಾರೆ.

    ಆರ್.ಚಂದ್ರು ನಿರ್ದೇಶನದ `ಕಬ್ಜ’ ಪ್ಯಾನ್ ಇಂಡಿಯಾ ಸಿನಿಮಾ ಇದೇ ಮಾರ್ಚ್ 17ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಅಪ್ಪು ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸಿನಿಮಾ ಮೂಲಕ ಕಮಾಲ್ ಮಾಡಲು ಚಿತ್ರತಂಡ ಮುಂದಾಗಿದ್ದಾರೆ.

  • ಪ್ರೆಗ್ನೆನ್ಸಿ ಬಗ್ಗೆ ಸೀಕ್ರೆಟ್ ಮಾಡಿದ್ಯಾಕೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ `ಕಬ್ಜ’ ಸುಂದರಿ

    ಪ್ರೆಗ್ನೆನ್ಸಿ ಬಗ್ಗೆ ಸೀಕ್ರೆಟ್ ಮಾಡಿದ್ಯಾಕೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ `ಕಬ್ಜ’ ಸುಂದರಿ

    ಹುಭಾಷಾ ನಟಿ ಶ್ರೀಯಾ ಶರಣ್ (Shriya Saran) ಸದ್ಯ `ದೃಶ್ಯಂ 2′ (Drishyam 2) ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. `ದೃಶ್ಯಂ 2′ ಸಿನಿಮಾ ಸಕ್ಸಸ್‌ನಿಂದ ಬಾಲಿವುಡ್‌ಗೆ ಮರುಜೀವ ಬಂದಂತಾಗಿದೆ. ಈಗ ಈ ಚಿತ್ರದ ಪ್ರಚಾರದ ಸಂದರ್ಭದಲ್ಲಿ ತಾವು ಪ್ರೆಗ್ನೆಂಟ್ ಆಗಿರುವ ವಿಚಾರವನ್ನ ಸೀಕ್ರೆಟ್ ಆಗಿ ಇಟ್ಟಿದ್ಯಾಕೆ ಎಂದು ರಿವೀಲ್ ಮಾಡಿದ್ದಾರೆ.

    ಸೌತ್ ಸಿನಿಮಾರಂಗದಲ್ಲಿ ಕನ್ನಡ ಸೇರಿದಂತೆ ಸಾಕಷ್ಟು ಚಿತ್ರಗಳ ಮೂಲಕ ಮೋಡಿ ಮಾಡಿದ್ದ ಚೆಲುವೆ ಶ್ರೀಯಾ ಶರಣ್, 2018ರಲ್ಲಿ ಆಂಡ್ರಿ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2021ರಲ್ಲಿ ಮುದ್ದು ಮಗಳ ಆಗಮನವಾಗಿತ್ತು. ಆದರೆ ಮಗಳು ಹುಟ್ಟುವವೆರೆಗೂ ತಾವು ಪ್ರೆಗ್ನೆಂಟ್ ಆಗಿರುವ ವಿಷ್ಯವನ್ನು ಎಲ್ಲೂ ಕೂಡ ನಟಿ ರಿವೀಲ್ ಮಾಡಿರಲಿಲ್ಲ. ಈಗ ಈ ಬಗ್ಗೆ ನಟಿ ಮಾತನಾಡಿದ್ದಾರೆ.

    ನನ್ನ ಮಗಳು ರಾಧ (Radha) ಹೊಟ್ಟೆಯಲ್ಲಿ ಇರುವಾಗ ಒತ್ತಡ ಇಲ್ಲದೇ ದಿನ ದೂಡಬೇಕು ಎಂದುಕೊಂಡಿದ್ದೆ. ಆ ಸಮಯದಲ್ಲಿ ಎಲ್ಲರೂ ದಪ್ಪ ಆಗುತ್ತಾರೆ. ನಾನು ದಪ್ಪ ಆಗುವ ಕಾರಣಕ್ಕೆ ಮತ್ತು ಬಾಡಿ ಶೇಪ್ ಬಗ್ಗೆ ಟ್ರೋಲ್ ಮಾಡಿದರೆ ಎಂಬ ಕಾರಣಕ್ಕೆ ಹೀಗೆ ಮಾಡಿದೆ. ತಾಯ್ತನವನ್ನು ಸುಂದರವಾಗಿ ಅನಿಭವಿಸಬೇಕು ಎಂದುಕೊಂಡಿದ್ದೆ, ಹಾಗಾಗಿ ಪ್ರೆಗ್ನೆನ್ಸಿ ವಿಚಾರವನ್ನೂ ಸೀಕ್ರೆಟ್ ಅಗಿ ಇಟ್ಟಿದ್ದೆ ಎಂದು ಶ್ರೀಯಾ ಮಾತನಾಡಿದ್ದಾರೆ. ಇದನ್ನೂ ಓದಿ: ಸಿನಿಮಾ ಮೂಲಕ ಪತಿಯ ಪ್ರಜಾಕೀಯಕ್ಕೆ ಸಾಥ್ ನೀಡಿದ ಪ್ರಿಯಾಂಕ ಉಪೇಂದ್ರ

    ಇನ್ನೂ `ಕಬ್ಜ’ ಚಿತ್ರದಲ್ಲಿ ಉಪ್ಪಿ ಜೊತೆ ಶ್ರೀಯಾ ಶರಣ್ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಸ್ಯಾಂಡಲ್‌ವುಡ್‌ನ ಸೂಪರ್ ಸ್ಟಾರ್ ಉಪೇಂದ್ರ(Upendra) ಸದ್ಯ ʻಕಬ್ಜʼ (Kabza) ಚಿತ್ರದ ಟೀಸರ್ ಮೂಲಕ ಸದ್ದು ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ  ವಿವ್ಸ್ ಗಿಟ್ಟಿಸಿಕೊಳ್ತಿದೆ. ಉಪ್ಪಿ ನಯಾ ಅವತಾರ ನೋಡಿ, ಫ್ಯಾನ್ಸ್ ಉಘೇ ಉಘೇ ಅಂತಿದ್ದಾರೆ.

    ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ವಿಶೇಷವಾಗಿ ರಿಲೀಸ್ ಆಗಿರುವ ‘ಕಬ್ಜ’ ಟೀಸರ್ ಧೂಳೆಬ್ಬಿಸಿದೆ. 24 ಗಂಟೆಗಳಲ್ಲಿ 1 ಕೋಟಿ 30 ಲಕ್ಷ ವೀವ್ಸ್ ಪಡೆದುಕೊಂಡು ಸದ್ದು ಮಾಡ್ತಿದೆ. ಟೀಸರ್‌ನ ಬಹುತೇಕ ಫ್ರೇಮ್‌ಗಳಲ್ಲಿ `ಕೆಜಿಎಫ್’ (Kgf) ಸಿನಿಮಾ ಛಾಯೆ ಕಾಣಿಸುತ್ತಿದ್ದರೂ ಕೂಡ ಸಿನಿರಸಿಕರು ಪದೇ ಪದೇ ಟೀಸರ್ ನೋಡಿ ಖುಷಿ ಪಡ್ತಿದ್ದಾರೆ. ಇದನ್ನೂ ಓದಿಸೋನು ಶ್ರೀನಿವಾಸ್ ಗೌಡ ಸಂಬಳ ಕೇಳಿದ್ರೆ, ನೀವೂ ಅದೇ ಕೆಲಸ ಮಾಡ್ತೀರಿ

    ಆರ್‌. ಚಂದ್ರು (R. Chandru) ನಿರ್ದೇಶನದ ಹೈವೋಲ್ಟೇಜ್ ಆಕ್ಷನ್ ಸಿನಿಮಾ ‘ಕಬ್ಜ’. ರಿಯಲ್ ಸ್ಟಾರ್ ಉಪೇಂದ್ರ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ನಾಯಕಿಯಾಗಿ ಬಹುಭಾಷಾ ಶ್ರಿಯಾ ಶರಣ್  ಕಾಣಿಸಿಕೊಂಡಿದ್ದರು, ಕಿಚ್ಚ ಸುದೀಪ್ (Kiccha Sudeep) ಪ್ರಮುಖ ಪಾತ್ರದಲ್ಲಿ‌ ಅಬ್ಬರಿಸಿದ್ದಾರೆ. ಉಪ್ಪಿ ಹುಟ್ಟುಹಬ್ಬಕ್ಕೂ ಒಂದು ದಿನ ಮೊದಲೇ ಅದ್ಧೂರಿ ಕಾರ‍್ಯಕ್ರಮದಲ್ಲಿ ‘ಕಬ್ಜ’ ಟೀಸರ್ ಬಿಡುಗಡೆಯಾಗಿತ್ತು. ತೆಲುಗು ನಟ ರಾಣಾ ದಗ್ಗುಬಾಟಿ(Rana Daggubati) ಟೀಸರ್ ಲಾಂಚ್ ಮಾಡಿ ತಂಡಕ್ಕೆ ಶುಭ ಹಾರೈಸಿದ್ದರು.

    ಇನ್ನು ಟೀಸರ್ ನೋಡಿರುವ ಅಭಿಮಾನಿಗಳು ಕೆಜಿಎಫ್ ಸಿನಿಮಾಗೆ ಹೋಲಿಸಿ, ʻಕಬ್ಜʼ ಚಿತ್ರಕ್ಕೆ ಜೈ ಅಂದಿದ್ದಾರೆ. ಒಟ್ಟು 7 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಗೆ ಅಬ್ಬರಿಸುತ್ತಿದೆ. ಆರ್. ಚಂದ್ರು, ನಿರ್ದೇಶನದ ಜತೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸದ್ಯ ʻಕಬ್ಜʼ ಟೀಸರ್ ಯೂಟ್ಯೂಬ್ ಕೋಟಿಗಟ್ಟಲೇ‌‌ ವಿವ್ಸ್‌ ಗಿಟ್ಟಿಸಿಕೊಂಡು ಟ್ರೆಂಡ್ ಸೃಷ್ಟಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮಸ್ತಾಗಿದೆ `ಕಬ್ಜ’ ಟೀಸರ್: ಹೇಗಿದೆ ಗೊತ್ತಾ ಉಪೇಂದ್ರ- ಸುದೀಪ್ ಜುಗಲ್‌ಬಂದಿ

    ಮಸ್ತಾಗಿದೆ `ಕಬ್ಜ’ ಟೀಸರ್: ಹೇಗಿದೆ ಗೊತ್ತಾ ಉಪೇಂದ್ರ- ಸುದೀಪ್ ಜುಗಲ್‌ಬಂದಿ

    ರಿಯಲ್ ಸ್ಟಾರ್ ಉಪೇಂದ್ರ ಮತ್ತು ಸುದೀಪ್ ನಟನೆಯ `ಕಬ್ಜ’ (Kabza) ಟೀಸರ್ ಅದ್ದೂರಿಯಾಗಿ ರಿಲೀಸ್ ಆಗಿದೆ. ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಒಂದು ದಿನ ಮುಂಚಿತವಾಗಿಯೇ ತಮ್ಮ ಫ್ಯಾನ್ಸ್‌ಗೆ ಟೀಸರ್ ಮೂಲಕ ಗಿಫ್ಟ್ ಕೊಟ್ಟಿದ್ದಾರೆ.

    ಅಭಿಮಾನಿಗಳ ಪಾಲಿನ ನಿರೀಕ್ಷಿತ ಸಿನಿಮಾ `ಕಬ್ಜ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಟಾಲಿವುಡ್ ಸ್ಟಾರ್ ರಾಣಾ ದಗ್ಗುಬಾಟಿ(Rana Daggubati) ಟೀಸರ್ ರಿಲೀಸ್ ಮಾಡಿದ್ದಾರೆ. ಆರ್. ಚಂದ್ರು ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ (Upendra) ಮತ್ತು ಸುದೀಪ್(Sudeep) ಜೊತೆ ಬಹುಭಾಷಾ ನಟಿ ಶ್ರೀಯಾ ನಟಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರ್ ಅವರ ಸಂಗೀತವಿದೆ. ಇದನ್ನೂ ಓದಿ:ಟಿವಿ ಬಿಗ್ ಬಾಸ್‌ಗೆ ಈ ಕಿರುತೆರೆ ನಟಿ ಬರೋದು ಪಕ್ಕಾ

    ರೆಟ್ರೋ ಲುಕ್‌ನಲ್ಲಿ ಮೂಡಿ ಬಂದಿರುವ `ಕಬ್ಜ’ ಟೀಸರ್‌ನಲ್ಲಿ ಉಪ್ಪಿ ಮತ್ತು ಕಿಚ್ಚ ಸುದೀಪ್ ರಗಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಲೋಕೇಷನ್, ಹಿನ್ನೆಲೆ ಸಂಗೀತ, ಪಾತ್ರಧಾರಿಗಳ ಲುಕ್ ಎಲ್ಲವೂ ಸಖತ್ ಆಗಿದೆ ಅಂತಿದ್ದಾರೆ ಫ್ಯಾನ್ಸ್. ಈ ಟೀಸರ್ ಮೂಲಕ ಚಿತ್ರದ ಮೇಲಿರುವ ನಿರೀಕ್ಷೆ ದುಪ್ಪಾಟಾಗಿದೆ.

    ಟೀಸರ್ ಮತ್ತು ಪೋಸ್ಟರ್ ಲುಕ್ ಮೂಲಕ ಹವಾ ಎಬ್ಬಿಸಿರುವ `ಕಬ್ಜ’ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.

    Live Tv
    [brid partner=56869869 player=32851 video=960834 autoplay=true]

  • ʻಕಬ್ಜʼ ಶೂಟಿಂಗ್:‌ ಮಂಗಳೂರಿನಲ್ಲಿ ಉಪೇಂದ್ರ ಆ್ಯಂಡ್ ಟೀಮ್

    ʻಕಬ್ಜʼ ಶೂಟಿಂಗ್:‌ ಮಂಗಳೂರಿನಲ್ಲಿ ಉಪೇಂದ್ರ ಆ್ಯಂಡ್ ಟೀಮ್

    ಲವಾರು ವಿಚಾರಗಳಿಂದ ಸುದ್ದಿ ಮಾಡ್ತಿರೋ ಸ್ಯಾಂಡಲ್‌ವುಡ್ ನಿರೀಕ್ಷಿತ `ಕಬ್ಜ’ ಸಿನಿಮಾ. ಕೊನೆಯ ಹಂತದ ಶೂಟಿಂಗ್‌ಗಾಗಿ ಮಂಗಳೂರಿನಲ್ಲಿ ಬೀಡು ಬಿಟ್ಟಿದೆ. ಆರ್.ಚಂದ್ರು ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್‌ನಲ್ಲಿ ಕಬ್ಜ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಸದ್ಯ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

    ರಿಯಲ್ ಸ್ಟಾರ್ ಉಪೇಂದ್ರ ನಟನೆಯ `ಕಬ್ಜ’ ಚಿತ್ರ ರಿಲೀಸ್‌ಗೂ ಮುಂಚೆನೇ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. 70-80ರ ದಶಕದ ಅಂಡರ್‌ವರ್ಲ್ಡ್ ಕಥೆಯನ್ನ ಹೇಳೋಕೆ ನಿರ್ದೇಶಕ ಆರ್.ಚಂದ್ರು ಹೊರಟಿದ್ದಾರೆ. `ಕಬ್ಜ’ ಸಿನಿಮಾ ಕೊನೆಯ ಹಂತದಲ್ಲಿದ್ದು, ಆ್ಯಕ್ಷನ್ ಸೀನ್ಸ್ ಅನ್ನು ಮಂಗಳೂರಿನಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಆ್ಯಕ್ಷನ್ ದೃಶ್ಯದ ಸಾರಥ್ಯವನ್ನು ಫೈಟ್ ಮಾಸ್ಟರ್ ರವಿವರ್ಮ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

    ಪ್ಯಾನ್ ಇಂಡಿಯಾ ಚಿತ್ರವಾಗಿರುವ `ಕಬ್ಜ’ಗಾಗಿ ಮಸ್ತ್ ಜಬರ್‌ದಸ್ತ್ ಆ್ಯಕ್ಷನ್ ದೃಶ್ಯಗಳನ್ನು ರವಿವರ್ಮ ಕಂಪೋಸ್ ಮಾಡಿದ್ದಾರೆ. ಕಳೆದ ವಾರದಿಂದ ಮಂಗಳೂರಿನಲ್ಲಿ ಬೀಡು ಬಿಟ್ಟಿರುವ ಉಪೇಂದ್ರ ಮತ್ತು ಟೀಮ್ ಮೇ 20ರವರೆಗೆ ಶೂಟಿಂಗ್ ಮಾಡಲಿದ್ದಾರೆ. ಈ ಭಾಗದ ಶೂಟಿಂಗ್ ಮುಗಿದರೆ ʻಕಬ್ಜʼ ಚಿತ್ರದ ಶೂಟಿಂಗ್ ಮುಗಿಯುತ್ತದೆ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಸ್ವೀಕರಿಸುವಾಗ ಹಾಕಿದ್ದ ಬಟ್ಟೆಯನ್ನೇ ಕಾನ್ ಫೆಸ್ಟಿವಲ್‌ನಲ್ಲೂ ಧರಿಸಿದ ರಿಕ್ಕಿ – ಹೇಳಿದ್ದೇನು ಗೊತ್ತಾ?

     

    View this post on Instagram

     

    A post shared by Ravi Varma (@official_ravivarma)

    `ಕಬ್ಜ’ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರಗೆ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ. ಚಿತ್ರದ ನಾಯಕಿಯಾಗಿ ಬಹುಭಾಷಾ ನಟಿ ಶ್ರೀಯಾ ನಟಿಸಿದ್ದಾರೆ. ಚಿತ್ರದ ಪೋಸ್ಟರ್ ಲುಕ್ಕಿನಿಂದಲೇ ಗಮನ ಸೆಳೆದಿರೋ `ಕಬ್ಜ’ ಈ ವರ್ಷದ ಕೊನೆಯಲ್ಲಿ ತೆರೆಗೆ ಅಪ್ಪಳಿಸಲಿದೆ.

  • ಕಬ್ಜ ಸಿನಿಮಾದಲ್ಲಿ ಮಧುಮತಿಯಾದ ಶ್ರೀಯಾ ಶರಣ್: ಫಸ್ಟ್ ಲುಕ್ ರಿಲೀಸ್

    ಕಬ್ಜ ಸಿನಿಮಾದಲ್ಲಿ ಮಧುಮತಿಯಾದ ಶ್ರೀಯಾ ಶರಣ್: ಫಸ್ಟ್ ಲುಕ್ ರಿಲೀಸ್

    ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾದಲ್ಲಿ ಶ್ರೀಯಾ ಶರಣ್ ನಟಿಸಲಿದ್ದಾರೆ ಎಂದು ಎರಡು ಗಂಟೆಗಳ ಹಿಂದೆ ಪಬ್ಲಿಕ್ ಟಿವಿ ಸುದ್ದಿ ಬ್ರೇಕ್ ಮಾಡಿತ್ತು. ಇದೀಗ ಅದು ಅಧಿಕೃತವಾಗಿದ್ದು, ಈ ಸಿನಿಮಾದಲ್ಲಿ ಶ್ರೀಯಾ ಅವರು ಮಧುಮತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ :  ಕೇರಳದಲ್ಲಿ ಸಿಕ್ತು ನಿರ್ದೇಶಕ ರಿಷಬ್ ಶೆಟ್ಟಿಗೆ ನ್ಯಾಯ

    ಕಬ್ಜ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಇಬ್ಬರೂ ದಕ್ಷಿಣದ ಖ್ಯಾತ ತಾರೆಯರೇ ಇರಲಿದ್ದಾರೆ ಎಂದು ನಿರ್ದೇಶಕ ಚಂದ್ರು ಹೇಳಿದ್ದರು. ಆ ಮಾತಿನಂತೆ ಇದೀಗ ಶ್ರೀಯಾ ಶರಣ್ ಅವರನ್ನು ಕರೆತಂದಿದ್ದಾರೆ. ರವಿವಾರ ಶ್ರೀಯಾ ಅವರ ಫೋಟೋ ಶೂಟ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿದ್ದು, ಇಡೀ ದಿನ ಫೋಟೋಶೂಟ್ನಲ್ಲಿ ಅವರು ಭಾಗಿಯಾಗಿದ್ದರು. ಇದನ್ನೂ ಓದಿ : ಜೇಮ್ಸ್ ಅಪ್ಪು ನಟನೆಯ ಕೊನೆ ಸಿನಿಮಾವಲ್ಲ: ಜೇಮ್ಸ್ ನಂತರವೂ ಮತ್ತೊಂದು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್

    ಕಬ್ಜ ಚಿತ್ರದಲ್ಲಿ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಇಬ್ಬರು ಸ್ಟಾರ್ ನಟರಿದ್ದು ಯಾರ ಜತೆ ಶ್ರೀಯಾ ನಟಿಸಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇತ್ತು. ಉಪೇಂದ್ರ ಜತೆ ಶ್ರೀಯಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕಿಚ್ಚ ಸುದೀಪ್ ಅವರಿಗೆ ಮತ್ತೋರ್ವ ತಾರೆಯನ್ನು ಹುಡುಕಿದ್ದು, ಸದ್ಯದಲ್ಲೇ ಆ ನಟಿಯ ಹೆಸರನ್ನೂ ಬಹಿರಂಗ ಪಡಿಸುತ್ತೇನೆ ಎಂದಿದ್ದಾರೆ ಚಂದ್ರು. ಇದನ್ನೂ ಓದಿ : ಕಬ್ಜ ಟೀಮ್ ಸೇರಿಕೊಂಡ ಶ್ರೀಯಾ ಶರಣ್ : ಉಪೇಂದ್ರಗೆ ಶ್ರೀಯಾ ನಾಯಕಿ?

    ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಅಲ್ಲದೇ ಭಾರೀ ಬಜೆಟ್ ನಲ್ಲೂ ತಯಾರಾಗುತ್ತಿದೆ. ಈಗಾಗಲೇ ಯಶಸ್ಸಿ ಸಿನಿಮಾಗಳನ್ನು ನೀಡಿರುವ ಆರ್.ಚಂದ್ರು ಬಗ್ಗೆ ಈ ಸಿನಿಮಾದಿಂದ ಮತ್ತಷ್ಟು ನಿರೀಕ್ಷೆ  ಹೆಚ್ಚಾಗಿದೆ.

  • ಕಬ್ಜ ಟೀಮ್ ಸೇರಿಕೊಂಡ ಶ್ರೀಯಾ ಶರಣ್ : ಉಪೇಂದ್ರಗೆ ಶ್ರೀಯಾ ನಾಯಕಿ?

    ಕಬ್ಜ ಟೀಮ್ ಸೇರಿಕೊಂಡ ಶ್ರೀಯಾ ಶರಣ್ : ಉಪೇಂದ್ರಗೆ ಶ್ರೀಯಾ ನಾಯಕಿ?

    ಕ್ಷಿಣದ ಖ್ಯಾತ ನಟಿ ಶ್ರೀಯಾ ಶರಣ್ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅವರು ಪುನೀತ್ ರಾಜ್ ಕುಮಾರ್ ನಟನೆಯ ಅರಸು ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು, ನೆನಪಿರಲಿ ಪ್ರೇಮ್ ನಟನೆಯ ಚಂದ್ರ ಚಿತ್ರಕ್ಕೆ ಪೂರ್ಣ ಪ್ರಮಾಣದ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಇದೀಗ ಆರ್.ಚಂದ್ರು ನಿರ್ದೇಶನದ ಕಬ್ಜ ಅಡ್ದದಲ್ಲಿ ಶ್ರೀಯಾ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ : ಸಂಭಾವನೆ ಹೆಚ್ಚಿಸ್ಕೊಂಡ್ರಂತೆ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಬೆಡಗಿ

    ಕಬ್ಜ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಇಬ್ಬರೂ ದಕ್ಷಿಣದ ಖ್ಯಾತ ತಾರೆಯರೇ ಇರಲಿದ್ದಾರೆ ಎಂದು ನಿರ್ದೇಶಕ ಚಂದ್ರು ಹೇಳಿದ್ದರು. ಆ ಮಾತಿನಂತೆ ಇದೀಗ ಶ್ರೀಯಾ ಶರಣ್ ಅವರನ್ನು ಕರೆತಂದಿದ್ದಾರೆ. ಇದನ್ನೂ ಓದಿ : ಭಾರತ ಗುಪ್ತಚರ ಇಲಾಖೆ ಸೇರಿಕೊಂಡ ಸನ್ನಿ ಲಿಯೋನ್

    ರವಿವಾರ ಶ್ರೀಯಾ ಅವರ ಫೋಟೋ ಶೂಟ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿದ್ದು, ಇಡೀ ದಿನ ಫೋಟೋಶೂಟ್ನಲ್ಲಿ ಅವರು ಭಾಗಿಯಾಗಿದ್ದರು. ಇದನ್ನೂ ಓದಿ : ಸ್ಯಾಂಡಲ್ ವುಡ್ ಸಿಂಡ್ರೆಲಾ ಹೊಸ ನ್ಯೂಸ್ ಕೊಡ್ತಾರಾ?

    ಕಬ್ಜ ಚಿತ್ರದಲ್ಲಿ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಇಬ್ಬರು ಸ್ಟಾರ್ ನಟರಿದ್ದು ಯಾರ ಜತೆ ಶ್ರೀಯಾ ನಟಿಸಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇತ್ತು. ಉಪೇಂದ್ರ ಜತೆ ಶ್ರೀಯಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕಿಚ್ಚ ಸುದೀಪ್ ಅವರಿಗೆ ಮತ್ತೋರ್ವ ತಾರೆಯನ್ನು ಹುಡುಕಿದ್ದು, ಸದ್ಯದಲ್ಲೇ ಆ ನಟಿಯ ಹೆಸರನ್ನೂ ಬಹಿರಂಗ ಪಡಿಸುತ್ತೇನೆ ಎಂದಿದ್ದಾರೆ ಚಂದ್ರು. ಇದನ್ನೂ ಓದಿ :  ಜಗ್ಗೇಶ್ ಗೆ ಕೈ ಕೊಟ್ಟ ಮಠದ ಗುರುಪ್ರಸಾದ್

    ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಅಲ್ಲದೇ ಭಾರೀ ಬಜೆಟ್ ನಲ್ಲೂ ತಯಾರಾಗುತ್ತಿದೆ. ಈಗಾಗಲೇ ಯಶಸ್ಸಿ ಸಿನಿಮಾಗಳನ್ನು ನೀಡಿರುವ ಆರ್.ಚಂದ್ರು ಬಗ್ಗೆ ಈ ಸಿನಿಮಾದಿಂದ ಮತ್ತಷ್ಟು ನಿರೀಕ್ಷೆ  ಹೆಚ್ಚಾಗಿದೆ.