Tag: ಕಬೀರ್ ದುಹಾನ್ ಸಿಂಗ್

  • ಶಿಕ್ಷಕಿ ಜೊತೆ ಸಪ್ತಪದಿ ತುಳಿಯಲು ಸಜ್ಜಾದ ಪೈಲ್ವಾನ್ ಖ್ಯಾತಿಯ ನಟ

    ಶಿಕ್ಷಕಿ ಜೊತೆ ಸಪ್ತಪದಿ ತುಳಿಯಲು ಸಜ್ಜಾದ ಪೈಲ್ವಾನ್ ಖ್ಯಾತಿಯ ನಟ

    ಕಿಚ್ಚ ಸುದೀಪ್ ನಟನೆಯ ಪೈಲ್ವಾನ್, ಹೆಬ್ಬುಲಿ, ಕಬ್ಜ ಸಿನಿಮಾಗಳಲ್ಲಿ ಖಳನಟನಾಗಿ ಗುರುತಿಸಿಕೊಂಡಿರುವ ಬಾಲಿವುಡ್ ಖ್ಯಾತ ನಟ ಕಬೀರ್ ದುಹಾನ್ ಸಿಂಗ್ (Kabir Duhan Singh) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೇ ಜೂನ್ 23ರಂದು ಅವರು ಹೊಸ ಜೀವನಕ್ಕೆ ಕಾಲಿಡುತ್ತಿದ್ದು ಶಿಕ್ಷಕಿಯನ್ನು ಅವರು ಮದುವೆಯಾಗಲಿದ್ದಾರೆ.

    ಮೂರು ದಿನಗಳ ಕಾಲ ದೆಹಲಿಯ (Delhi) ರೆಸಾರ್ಟ್ ನಲ್ಲಿ ವಿವಾಹ ಮಹೋತ್ಸವ ನಡೆಯಲಿದ್ದು ಭಾರತೀಯ ಸಿನಿಮಾ ರಂಗದ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ಜೂನ್ 21 ರಂದು ಸಂಗೀತ, 22ಕ್ಕೆ ಮೆಹೆಂದಿ ಮತ್ತು 23 ರಂದು ವಿವಾಹ (Marriage) ನಡೆಯಲಿದೆ. ಪ್ರಸಿದ್ಧ ನಟರೊಬ್ಬರು ಸೀಮಾ ಚಹಾಲ್ (Seema Chahal) ಎನ್ನುವ ಶಿಕ್ಷಕಿಯ ಜೊತೆ ಮದುವೆ ಆಗುತ್ತಿರುವುದು ಅವರ ಅಭಿಮಾನಿಗಳಲ್ಲಿ ಹೆಮ್ಮೆ ತಂದಿದೆ. ಇದನ್ನೂ ಓದಿ:ಸೀತೆ ಭಾರತದ ಮಗಳಲ್ಲ: ‘ಆದಿಪುರುಷ’ ಸಿನಿಮಾ ಡೈಲಾಗ್ ವಿರುದ್ಧ ಕಠ್ಮಂಡು ಮೇಯರ್ ಗರಂ

    ಕನ್ನಡವೂ ಸೇರಿದಂತೆ ತಮಿಳು, ತೆಲಗು, ಹಿಂದಿ ಚಿತ್ರಗಳಲ್ಲಿ ನಟಿಸಿರುವ ಕಬೀರ್ ದುಹಾನ್ ಸಿಂಗ್  ಸಾಕ್ಷಿಂ, ಸರ್ದಾರ್ ಗಬ್ಬರ್ ಸಿಂಗ, ಶಾಕುಂತಲಂ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಇತ್ತೀಚೆಗೆ ರಿಲೀಸ್ ಆಗಿರುವ ಕಬ್ಜ ಚಿತ್ರದಲ್ಲೂ ಇವರು ನಟಿಸಿದ್ದಾರೆ. ಈಗಾಗಲೇ ಹಲವರಿಗೆ ಆಹ್ವಾನ ಪತ್ರಿಕೆಯನ್ನು ನೀಡಿರುವ ಕಬೀರ್ ಸಿಂಗ್ ಮದುವೆಗೆ ಕನ್ನಡದಿಂದಲೂ ಹಲವರು ತಾರೆಯರು ಹೋಗಲಿದ್ದಾರೆ.

  • ರಾಜವರ್ಧನ್ ನಟನೆಯ ‘ಗಜರಾಮ’ನಿಗೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

    ರಾಜವರ್ಧನ್ ನಟನೆಯ ‘ಗಜರಾಮ’ನಿಗೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

    ಟ ರಾಜವರ್ಧನ್ (Rajavardhan) ನಟಿಸುತ್ತಿರುವ ಬಹು ನಿರೀಕ್ಷಿತ ‘ಗಜರಾಮ’ (Gajarama) ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಸಿನಿಮಾ ಸೆಟ್ಟೇರಿದ ದಿನದಿಂದಲೇ ಚಿತ್ರೀಕರಣ ಆರಂಭಿಸಿದ ಚಿತ್ರತಂಡ 16 ದಿನಗಳ ಮೊದಲ ಹಂತದ ಚಿತ್ರೀಕರಣವನ್ನು  ಯಶಸ್ವಿಯಾಗಿ ಪೂರ್ಣಗೊಳಿಸಿದೆ.

    ಹದಿನಾರು ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಮೊದಲ ಶೆಡ್ಯೂಲ್ ಮುಗಿದ್ದಿದ್ದು ಎರಡನೆ ಶೆಡ್ಯೂಲ್ ಗಾಗಿ ಲೊಕೇಶನ್ ಹುಡುಕಾಟದಲ್ಲಿದ್ದೇವೆ. ಇನ್ನು ನಲವತ್ತು ದಿನಗಳ ಶೂಟಿಂಗ್ ಬಾಕಿ ಇದೆ. ನಾನು ಏನು ಅಂದುಕೊಂಡಿದ್ದೆನೋ ಹಾಗೆಯೇ ಚಿತ್ರೀಕರಣ ನಡೆಯುತ್ತಿದೆ, ಸಿನಿಮಾವೂ ಮೂಡಿ ಬರ್ತಿದೆ. ಮೊದಲ ಸಿನಿಮಾ ಎಂದು ನೋಡದೇ ಹಿರಿಯ ಹಾಗೂ ಅನುಭವಿ ಛಾಯಾಗ್ರಾಹಕ ಕೆ.ಎಸ್ ಚಂದ್ರಶೇಖರ್ ನನಗೆ ಸಹಕಾರ ನೀಡುತ್ತಾ ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ನಿರ್ದೇಶಕ ಸುನೀಲ್ ಕುಮಾರ್. ವಿ. ಎ (Sunil Kumar) ತಿಳಿಸಿದ್ದಾರೆ. ಇದನ್ನೂ ಓದಿ:`ಮಿಸ್ ಯೂ ಸಾನ್ಯ’ ಎಂದು ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ

    ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಸುನೀಲ್ ಕುಮಾರ್. ವಿ. ಎ ನಿರ್ದೇಶನದ ಮೊದಲ ಸಿನಿಮಾವಿದು. ಲವ್ ಸ್ಟೋರಿ ಹಾಗೂ ಮಾಸ್ ಆಕ್ಷನ್ ಕಥಾಹಂದರ ಒಳಗೊಂಡ ಚಿತ್ರದಲ್ಲಿ ರಾಜವರ್ಧನ್ ಜೋಡಿಯಾಗಿ ಹರಿಕಥೆ ಅಲ್ಲ ಗಿರಿಕಥೆ ಖ್ಯಾತಿಯ ತಪಸ್ವಿನಿ ಪೂಣಚ್ಚ ನಟಿಸುತ್ತಿದ್ದಾರೆ. ಶಿಷ್ಯ ದೀಪಕ್ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದು, ಖಳನಟನಾಗಿ ಪೈಲ್ವಾನ್ ಖ್ಯಾತಿಯ ಕಬೀರ್ ದುಹಾನ್ ಸಿಂಗ್ (Kabir Duhan Singh) ನಟಿಸುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು, ಗೋವಿಂದೇ ಗೌಡ ಒಳಗೊಂಡ ತಾರಾಬಳಗ ಸಿನಿಮಾದಲ್ಲಿದೆ.

    ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್ ನಡಿ ನರಸಿಂಹ ಮೂರ್ತಿ ಚಿತ್ರವನ್ನು ನಿರ್ಮಾಣ ಮಾಡ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝೇವಿಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮನೋಮೂರ್ತಿ ಸಂಗೀತ ನಿರ್ದೇಶನ, ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್ ಸಾಹಿತ್ಯದಲ್ಲಿ ಹಾಡುಗಳು ಮೂಡಿ ಬರಲಿದೆ.

     

    Live Tv
    [brid partner=56869869 player=32851 video=960834 autoplay=true]

  • ಮೆಚ್ಚುಗೆಗೆ ಪಾತ್ರವಾಯ್ತು ಬಿಗ್ ಬಾಸ್ ಶಶಿ ನಟನೆಯ ‘ಮೆಹಬೂಬ’ ಸಿನಿಮಾದ ಹಾಡು

    ಮೆಚ್ಚುಗೆಗೆ ಪಾತ್ರವಾಯ್ತು ಬಿಗ್ ಬಾಸ್ ಶಶಿ ನಟನೆಯ ‘ಮೆಹಬೂಬ’ ಸಿನಿಮಾದ ಹಾಡು

    ಬಿಗ್ ಬಾಸ್ ಖ್ಯಾತಿಯ ಶಶಿ ನಾಯಕನಾಗಿ ನಟಿಸಿರುವ “ಮೆಹಬೂಬ” ಚಿತ್ರಕ್ಕಾಗಿ ರಘುಶಾಸ್ತ್ರಿ ಅವರು ಬರೆದಿರುವ “ದೇವರು ದೇವರು” ಎಂಬ ಭಾವೈಕ್ಯತೆ ಸಾರುವ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. “ಸರಿಗಮಪ” ಖ್ಯಾತಿಯ ಮನೋಜವಂ ಆತ್ರೇಯ ಸುಮಧುರವಾಗಿ ಹಾಡಿರುವ ಈ ಗೀತೆಗೆ ಮ್ಯಾಥ್ಯೂಸ್‌ ಮನು ಸಂಗೀತ ನೀಡಿದ್ದಾರೆ. ಈ ಹಾಡು ಅಪಾರ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ‌ ಹರಿದು ಬರುತ್ತಿದೆ.

    ಸ್ಕಂದ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಪ್ರಸನ್ನ ಶ್ರೀನಿವಾಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಅನೂಪ್ ಆಂಟೊನಿ ನಿರ್ದೇಶಿಸುತ್ತಿದ್ದಾರೆ. ಕೇರಳದಲ್ಲಿ ನಡೆದ ನೈಜಘಟನೆಯೊಂದನ್ನು ಆಧರಿಸಿ ಈ ಚಿತ್ರ ಸಿದ್ಧವಾಗುತ್ತಿದೆ. ಚಿತ್ರೀಕರಣ ಮುಕ್ತಾಯ ಹಂತ ತಲುಪಿದ್ದು, ಪೋಸ್ಟ್ ಪ್ರೊಡಕ್ಷನ್ ಬಿರುಸಿನಿಂದ ಸಾಗಿದೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಇದನ್ನೂ ಓದಿ:ಜನಾರ್ದನ್ ರೆಡ್ಡಿ ಮಗನ ಸಿನಿಮಾ ಸೆಟ್ ಗೆ ಶಿವರಾಜ್ ಕುಮಾರ್ ಸರ್ಪ್ರೈಸ್ ವಿಸಿಟ್

    ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ರಘುಶಾಸ್ತ್ರಿ ರಚಿಸಿದ್ದಾರೆ. ಸಂಭಾಷಣೆಯನ್ನು ರಘುಶಾಸ್ತ್ರಿ ಬರೆದಿದ್ದಾರೆ.ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಶಶಿ, ಪಾವನ ಗೌಡ, ಕಬೀರ್ ದುಹಾನ್ ಸಿಂಗ್, ಸಲ್ಮಾನ್(ಕಿರಿಕ್ ಪಾರ್ಟಿ), ಬುಲೆಟ್ ಪ್ರಕಾಶ್, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಕಲ್ಯಾಣಿರಾಜು, ಸಂದೀಪ್, ಧನರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಾಯಕಿ ಜೊತೆ ‘ಹೆಬ್ಬುಲಿ’ ವಿಲನ್ ನಿಶ್ಚಿತಾರ್ಥ -ಫನ್ನಿ ಟ್ವೀಟ್ ಮಾಡಿದ ಕಿಚ್ಚ

    ಗಾಯಕಿ ಜೊತೆ ‘ಹೆಬ್ಬುಲಿ’ ವಿಲನ್ ನಿಶ್ಚಿತಾರ್ಥ -ಫನ್ನಿ ಟ್ವೀಟ್ ಮಾಡಿದ ಕಿಚ್ಚ

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ನಟ ಕಬೀರ್ ದುಹಾನ್ ಸಿಂಗ್ ಅವರು ಗಾಯಕಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ನಟ ಕಬೀರ್ ದುಹಾನ್ ಸಿಂಗ್ ಅವರು ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಡಾಲಿ ಸಿಂಧು ಅವರೊಂದಿಗೆ ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಂಗೇಜ್‍ಮೆಂಟ್ ಫೋಟೋಗಳನ್ನು ದುಹಾನ್ ಸಿಂಗ್ ಅವರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, ಇಬ್ಬರು ನಿಶ್ಚಿತಾರ್ಥ ಉಡುಪಿನಲ್ಲಿ ಮಿಂಚಿದ್ದಾರೆ. ಈ ನವಜೋಡಿಗೆ ಬಾಲಿವುಡ್ ಸಿನಿತಾರೆಯರು ಟ್ವೀಟ್ ಮಾಡುವ ಮೂಲಕ ಶುಭಾಶಯವನ್ನು ಕೋರುತ್ತಿದ್ದಾರೆ.

    https://twitter.com/dollysidhulive/status/1142767694745202689

    ನಟ ಸುದೀಪ್ ಕೂಡ ದುಹಾನ್ ಸಿಂಗ್ ಅವರಿಗೆ ವಿಶ್ ಮಾಡಿದ್ದು, “ಅವರು ಚೆನ್ನಾಗಿ ಅಡುಗೆ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ನೀವು ಚೆನ್ನಾಗಿ ಫಿಟ್ ಆಗಿ ಕಾಣುವಂತೆ ನಿಮ್ಮ ಪತ್ನಿ ಚೆನ್ನಾಗಿ ಅಡುಗೆ ಮಾಡಿ ಊಟ ಮಾಡಿಸಲಿದ್ದಾರೆ. ಇಬ್ಬರಿಗೂ ಶುಭಾಶಯಗಳು ಚಿಯರ್ಸ್” ಎಂದು ಸುದೀಪ್ ಫನ್ನಿಯಾಗಿ ಟ್ವೀಟ್ ಮಾಡಿದ್ದಾರೆ.

    ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರ 2017ರಲ್ಲಿ ಬಿಡುಗಡೆಯಾಗಿದ್ದು, ಈ ಸಿನಿಮಾದ ಮೂಲಕ ನಟ ಕಬೀರ್ ದುಹಾನ್ ಸಿಂಗ್ ಅವರು ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದರು. ನಂತರ ‘ಪೈಲ್ವಾನ್’ ಚಿತ್ರದಲ್ಲೂ ನಟ ಕಬೀರ್ ಸಿಂಗ್ ದುಹಾನ್ ಅವರು ನಟಿಸಿದ್ದಾರೆ.