Tag: ಕಬಿನಿ ಜಲಾಶಯ

  • ತಮಿಳುನಾಡಿಗೆ ನೀರು ಬಿಟ್ಟು ಬೆಂಗಳೂರಿಗೆ ಅಂದ್ರು- ಸತ್ಯ ತಿಳಿದ ರೈತರಿಂದ ರಸ್ತೆ ತಡೆದು ಪ್ರತಿಭಟನೆ

    ತಮಿಳುನಾಡಿಗೆ ನೀರು ಬಿಟ್ಟು ಬೆಂಗಳೂರಿಗೆ ಅಂದ್ರು- ಸತ್ಯ ತಿಳಿದ ರೈತರಿಂದ ರಸ್ತೆ ತಡೆದು ಪ್ರತಿಭಟನೆ

    ಮಂಡ್ಯ/ಮೈಸೂರು: ಕೆ.ಆರ್.ಎಸ್ ಜಲಾಶಯ ತುಂಬುವ ಮೊದಲೇ ತಮಿಳುನಾಡಿಗೆ ನೀರು ಹರಿಸ್ತಿರೋ ಶಂಕೆ ವ್ಯಕ್ತವಾಗ್ತಿದೆ.

    ರಾತ್ರೋರಾತ್ರಿ ನೀರಾವರಿ ಇಲಾಖೆ ಜಲಾಶಯದ ಹೊರ ಹರಿವಿನ ಪ್ರಮಾಣ ಹೆಚ್ಚಿಸಿದೆ. ಸಾವಿರ ಕ್ಯೂಸೆಕ್ ಇದ್ದ ಹೊರ ಹರಿವಿನ ಪ್ರಮಾಣ 2,300 ಕೂಸೆಕ್ ಗೆ ಏರಿಕೆಯಾಗಿದೆ. ಜಲಾಶಯ ತುಂಬುವ ಮೊದಲೇ ನದಿಗೆ ಹೆಚ್ಚಿನ ನೀರು ಬಿಡುತ್ತಿರೋ ಬಗ್ಗೆ ರೈತರು ಅಸಮಧಾನ ವ್ಯಕ್ತಪಡಿಸಿದ್ದಾರೆ. ನಾಲೆಗೆ ನೀರು ಬಿಡಿ ಎಂದ್ರೆ ನದಿಗೆ ನೀರು ಬಿಟ್ಟ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರೈತರ ಪ್ರತಿಭಟನೆ, ಎಚ್ಚರಿಕೆಯ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಪೊಲೀಸ್ ಹೈ ಅಲರ್ಟ್ ಘೋಷಿಸಲಾಗಿದೆ. ಮಂಡ್ಯ, ಮಳವಳ್ಳಿ, ಮದ್ದೂರು, ಶ್ರೀರಂಗಪಟ್ಟಣದಲ್ಲಿ ಹೈ ಅಲರ್ಟ್ ಇದ್ದು, ಎಸ್‍ಪಿ ಜಿ. ರಾಧಿಕಾ ನೇತೃತ್ವದಲ್ಲಿ ಹೆಚ್ಚಿನ ಗಸ್ತು ನಿಯೋಜಿಸಲಾಗಿದೆ. ಹೊರ ಜಿಲ್ಲೆಗಳಿಂದಲೂ ಪೊಲೀಸರ ಆಗಮನವಾಗಿದೆ.

    ತಮಿಳುನಾಡಿಗೆ ನೀರು ಬಿಟ್ಟರೆ ಬಲಿಯಾಕ್ತೀವಿ ಎಂದು ನೀರಾವರಿ ಇಲಾಖೆ ಅಧಿಕಾರಿಗೆ ಮಾಜಿ ಸಂಸದ, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ.ಜಿ.ಮಾದೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ. ನೀರಾವರಿ ಇಲಾಖೆ ಸೂಪರಿಂಟೆಂಡೆಂಟ್ ಎಂಜಿನಿಯರ್ ವಿಜಯ್ ಕುಮಾರ್ ಜೊತೆ ದೂರವಾಣಿ ಸಂಭಾಷಣೆ ನಡೆಸಿದ ಅವರು, ಹೊರ ಹರಿವು ಹೆಚ್ಚಳದ ಬಗ್ಗೆ ಮಾಹಿತಿ ಕೇಳಿದ್ರು. ಈ ವೇಳೆ ಅಧಿಕಾರಿಗಳು ಮಾದೇಗೌಡರಿಗೆ ಸುಳ್ಳು ಮಾಹಿತಿ ನೀಡಿದ್ದು, ಬೆಂಗಳೂರು ಜನರ ಕುಡಿಯುವ ಉಪಯೋಗಕ್ಕೆಂದು ಹೇಳಿದ್ದಾರೆ. ಈಗಾಗಲೇ ರೈತರು ಹೋರಾಟ ಮಾಡ್ತಿದ್ದಾರೆ. ನೀರು ಬಿಟ್ಟರೆ ರೋಡಲ್ಲಿ ಓಡಾಡೋಕೆ ಬಿಡಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ತಮಿಳುನಾಡಿಗೆ ನೀರು ಬಿಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾವೇರಿ ಕಣಿವೆಯಲ್ಲಿ ಹೋರಾಟ ಶುರುವಾಗಿದೆ. ಮಂಡ್ಯದ ರೈತ ಸಂಘದಿಂದ ಪ್ರತ್ಯೇಕ ಹೋರಾಟ ನಡೆದಿದೆ. ಮಂಡ್ಯದ ಸರ್.ಎಂ.ವಿ ಪ್ರತಿಮೆ ಬಳಿ ರೈತರಿಂದ ಹೆದ್ದಾರಿ ತಡೆ ತಡೆದು ಪ್ರತಿಭಟಿಸಲಾಗಿದ್ದು, ಮತ್ತೊಂದು ಬಣದಿಂದ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲಾಗಿದೆ. ಬೆಂಗಳೂರಿನ ಮೈಸೂರು ಹೆದ್ದಾರಿ ತಡೆದು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅತ್ತ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನಲ್ಲಿನ ಕಬಿನಿ ಡ್ಯಾಂ ನಿಧನವಾಗಿ ಭರ್ತಿಯಾಗುತ್ತಿದೆ. ಇದರಿಂದ ರೈತರ ಮುಖದಲ್ಲಿ ಸಂತಸ ಮನೆ ಮಾಡಿದೆ. ಆದರೆ, ಅಷ್ಟರಲ್ಲೇ ಕಬಿನಿ ಜಲಾಶಯದ ಅಧಿಕಾರಿಗಳು ಅನಧಿಕೃತವಾಗಿ ಜಲ ವಿದ್ಯುತ್ ಕಂಪನಿ ಬಳಕೆಗಾಗಿ ಡ್ಯಾಂನಿಂದ ನೀರು ಹರಿಸಿದ್ದು, ಇದರಿಂದ ರೈತರು ಸಿಟ್ಟಿಗೆದ್ದಿದ್ದಾರೆ.

    ಜಲಾಶಯದ ಗರಿಷ್ಟ ಮಟ್ಟ 2284 ಅಡಿ ಇದೆ. ಇವತ್ತು ಜಲಾಶಯದ ನೀರಿನ ಮಟ್ಟ 2260 ಅಡಿ ಇದೆ. ಒಳಹರಿವಿನ ಪ್ರಮಾಣ 7,500 ಕ್ಯೂಸೆಕ್ ಇದ್ದು, ಅಧಿಕೃತವಾಗಿ ಹೊರ ಹರಿವು 1,100 ಕ್ಯೂಸೆಕ್ ಇದೆ. ಆದರೆ ಡ್ಯಾಂನಿಂದ ನೀರು ಹರಿಯುತ್ತಿರುವ ಪ್ರಮಾಣ ನೋಡಿದರೆ ಹೊರ ಹರಿವು 3 ಸಾವಿರ ಕ್ಯೂಸೆಕ್ ಗಿಂತಾ ಹೆಚ್ಚಿತ್ತು.

    ಇದರಿಂದ ಸಿಟ್ಟಿಗೆದ್ದ ಸ್ಥಳೀಯ ರೈತರು ಜಲಾಶಯದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಯಾವಾಗ ಪ್ರತಿಭಟನೆ ಬಿಸಿ ಜೋರಾಯಿತೋ ಆ ತಕ್ಷಣ ಅಧಿಕಾರಿಗಳು ಡ್ಯಾಂನ ಹೊರ ಹರಿವು ಪ್ರಮಾಣವನ್ನು ತಗ್ಗಿಸಿದ್ದಾರೆ. ಖಾಸಗಿ ಕಂಪನಿ ಜೊತೆ ಶಾಮೀಲಾಗಿರೋ ಅಧಿಕಾರಿಗಳು ಕಂಪನಿಗಾಗಿ ಡ್ಯಾಂ ನೀರು ಹರಿಸಿ ರೈತರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

  • ವಿಡಿಯೋ- ಕಬಿನಿಯಲ್ಲಿ ಸೆಲ್ಫಿ ತೆಗೆಯಲು ಬಂದ ಪ್ರವಾಸಿಗರನ್ನು ಬೆನ್ನಟ್ಟಿದ ಆನೆ

    ವಿಡಿಯೋ- ಕಬಿನಿಯಲ್ಲಿ ಸೆಲ್ಫಿ ತೆಗೆಯಲು ಬಂದ ಪ್ರವಾಸಿಗರನ್ನು ಬೆನ್ನಟ್ಟಿದ ಆನೆ

    ಮೈಸೂರು: ಈಗಿನ ದಿನಗಳಲ್ಲಿ ಮನುಷ್ಯರು ಎಲ್ಲೆಂದರಲ್ಲಿ ಸೆಲ್ಫಿ ತೆಗೆದುಕೊಳ್ಳುವುದನ್ನು ಕಾಣಬಹುದು. ಮನೆಯಲ್ಲಿ, ರಸ್ತೆಯಲ್ಲಿ ಅಲ್ಲದೇ ಪ್ರವಾಸಿ ತಾಣಗಳಲ್ಲಿ ಸೆಲ್ಫಿಗೆ ಮುಗಿಬೀಳದವರು ಯಾರೂ ಇಲ್ಲ. ಆದ್ರೆ ಈ ಸೆಲ್ಫಿ ಕ್ರೇಜ್ ನಿಂದಾಗಿ ಕೆಲವೊಮ್ಮೆ ಅನಾಹುತಗಳಾಗುತ್ತವೆ ಅನ್ನೋದಕ್ಕೆ ಈ ಘಟನೆಯೇ ಪ್ರತ್ಯಕ್ಷ ಸಾಕ್ಷಿ.

    ಇತ್ತೀಚೆಗಷ್ಟೇ ಉತ್ತರಾಖಂಡದ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರನ್ನು ಆನೆಯೊಂದು ಅಟ್ಟಾಡಿಸಿಕೊಂಡ ಬಂದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದ್ರೆ ಇಂತಹದ್ದೇ ಘಟನೆಯೊಂದು ನಮ್ಮ ರಾಜ್ಯದಲ್ಲೂ ನಡೆದಿದೆ.

    ಇದನ್ನೂ ಓದಿ: ಪ್ರವಾಸಿ ವಾಹನವನ್ನೇ ಅಟ್ಟಾಡಿಸಿಕೊಂಡು ಬಂದ ಆನೆ- ವಿಡಿಯೋ ನೋಡಿ

    ಹೌದು. ಮೈಸೂರು ಕಬಿನಿ ಜಲಾಶಯದ ಹಿನ್ನೀರಿನ ಖಾಲಿ ಪ್ರದೇಶದಲ್ಲಿ ಕಾಡಾನೆಯೊಂದು ತನ್ನ ಮರಿಯೊಂದಿಗೆ ಪ್ರವಾಸಿಗರು ಓಡಿಸಿಕೊಂಡು ಬಂದಿದೆ. ನೀರು ಹರಸಿ ಜಲಾಶಯದ ಹಿನ್ನೀರಿಗೆ ಬರುವ ಕಾಡು ಪ್ರಾಣಿಗಳ ಜೊತೆ ಚೆಲ್ಲಾಟ ಆಡಲು ಹೋಗಿ ಪ್ರವಾಸಿಗರು ಅಪಾಯದಿಂದ ಪಾರಾಗಿದ್ದಾರೆ. ಹೆಚ್‍ಡಿಕೋಟೆಯ ಎನ್‍ಬೇಗೂರು ವ್ಯಾಪ್ತಿಯ ಗುಂಡ್ರೆ ಅರಣ್ಯ ಪ್ರದೇಶದಲ್ಲಿರೋ ಆನೆಗಳು ಕಬಿನಿ ಜಲಾಶಯದ ಹಿನ್ನೀರಿನ ಖಾಲಿ ಪ್ರದೇಶಕ್ಕೆ ಬಂದಿದ್ದವು. ಈ ವೇಳೆ ಪ್ರವಾಸಿಗರು ತಮ್ಮ ಕಾರು ಹಾಗೂ ಜೀಪಿನಲ್ಲಿ ಖಾಲಿ ಪ್ರದೆಶಕ್ಕೆ ತೆರಳಿ, ದೂರದಿಂದಲೇ ಆನೆಯ ಜೊತೆ ಸೆಲ್ಫಿ ತೆಗೆಯಲು ಮುಂದಾದ್ರು. ಈ ವೇಳೆ ರೊಚ್ಚಿಗೆದ್ದ ಆನೆ ಕಾರಿನ ಮೇಲೆ ದಾಳಿ ಮಾಡಲು ಮುಂದಾಗಿದೆ. ಈ ದೃಶ್ಯ ಮೈ ಜುಂ ಎಂದನಿಸುತ್ತದೆ.

    ಘಟನೆ ಕುರಿತು ಅರಣ್ಯ ಇಲಾಖೆ ಸಿಬ್ಬಂದಿ ಮೌನ ವಹಿಸಿದ್ದು, ಕಾಡು ಪ್ರಾಣಿಗಳಿಗೆ ಹಿಂಸಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

    https://www.youtube.com/watch?v=pww8LUywQuA&feature=youtu.be