Tag: ಕಬಿನಿ ಜಲಾಶಯ

  • ಮತ್ತೆ ತಮಿಳುನಾಡಿಗೆ ಹರಿದ ಕಾವೇರಿ – KRS, ಕಬಿನಿಯಿಂದ 3,000 ಕ್ಯೂಸೆಕ್‌ಗೂ ಅಧಿಕ ನೀರು ಬಿಡುಗಡೆ

    ಮತ್ತೆ ತಮಿಳುನಾಡಿಗೆ ಹರಿದ ಕಾವೇರಿ – KRS, ಕಬಿನಿಯಿಂದ 3,000 ಕ್ಯೂಸೆಕ್‌ಗೂ ಅಧಿಕ ನೀರು ಬಿಡುಗಡೆ

    ಮಂಡ್ಯ: CWMA ಆದೇಶದ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ತಮಿಳುನಾಡಿಗೆ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಂದ (KRS And Kabini Reservoir) ನೀರು ಹರಿಸಲಾಗುತ್ತಿದೆ.

    ಮುಂದಿನ 15 ದಿನಗಳ ಕಾಲ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಪ್ರಾಧಿಕಾರ ಆದೇಶಿಸಿದ್ದು, ಇಂದು ಕೆಆರ್‌ಎಸ್‌ನಿಂದ 2,171 ಕ್ಯೂಸೆಕ್, ಕಬಿನಿಯಿಂದ 1,663 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಇದನ್ನೂ ಓದಿ: ಸೆ.21ರಂದು ಸುಪ್ರೀಂಗೆ ಕೆಆರ್‌ಎಸ್ ಚಿತ್ರಣ ಮನವರಿಕೆ ಮಾಡಿ – ಪ್ರತಿಭಟನಾಕಾರರ ಆಕ್ರೋಶ

    ಅಲ್ಲಿಗೆ ಒಟ್ಟು ಎರಡು ಡ್ಯಾಂಗಳಿಂದ 3,834 ಕ್ಯೂಸೆಕ್ ನೀರು ಹರಿಬಿಟ್ಟಿದ್ದು, ಉಳಿಕೆ 1,166 ಕ್ಯೂಸೆಕ್ ನೀರು ನಿನ್ನೆ ಡ್ಯಾಂ ಕೆಳ ಪ್ರದೇಶದಲ್ಲಿ ಬಿದ್ದ ಮಳೆಯ ನೀರಿನಿಂದ ತಮಿಳುನಾಡು (Tamil Nadu) ಸೇರುತ್ತಿದೆ. ಅಲ್ಲಿಗೆ ಇಂದು CWMA ಆದೇಶದಂತೆ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿಸಲಾಗಿದೆ. ಇದನ್ನೂ ಓದಿ: ಎಲ್ಲಾ ವಿಘ್ನಕ್ಕೆ ನಾಯಕ ವಿನಾಯಕ, ಎಲ್ಲರಿಗೂ ಸಮಾಧಾನ ತರಲಿ – 3 ಡಿಸಿಎಂ ಹುದ್ದೆ ಹೇಳಿಕೆಗೆ ಡಿಕೆಶಿ ಅಸಮಾಧಾನ

    KRS ಇಂದಿನ ನೀರಿನ ಮಟ್ಟ
    ಗರಿಷ್ಠ ಮಟ್ಟ: 124.80 ಅಡಿಗಳು.
    ನೀರಿನ ಮಟ್ಟ: 97.06 ಅಡಿಗಳು.
    ಒಳಹರಿವು: 7,007 ಕ್ಯೂಸೆಕ್
    ಹೊರಹರಿವು: 5,735 ಕ್ಯೂಸೆಕ್
    ಇಂದಿನ ಸಂಗ್ರಹ: 20.592 ಟಿಎಂಸಿ
    ಗರಿಷ್ಠ ಸಂಗ್ರಹ: 49.452 ಟಿಎಂಸಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗುಡ್‌ನ್ಯೂಸ್‌ː ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಳ, ಒಂದೇ ವಾರದಲ್ಲಿ 3 ಅಡಿ ನೀರು ಸಂಗ್ರಹ

    ಗುಡ್‌ನ್ಯೂಸ್‌ː ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಳ, ಒಂದೇ ವಾರದಲ್ಲಿ 3 ಅಡಿ ನೀರು ಸಂಗ್ರಹ

    ಮೈಸೂರು: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಕಬಿನಿ ಜಲಾಶಯಕ್ಕೆ (Kabini Reservoir) ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಸಂತಸ ತಂದಿದೆ.

    ಮೈಸೂರು (Mysuru) ಜಿಲ್ಲೆ ಹೆಚ್.ಡಿ ಕೋಟೆ ತಾಲೂಕಿನ ಕಬಿನಿ ಜಲಾಶಯ ಒಂದೇ ವಾರದಲ್ಲಿ ಮೂರು ಅಡಿಯಷ್ಟು ನೀರು ಸಂಗ್ರಹವಾಗಿದೆ.

    ತಮಿಳುನಾಡಿಗೆ (TamilNadu) ನಿರಂತರವಾಗಿ ನೀರು ಹರಿಸುತ್ತಿದ್ದ ಹಿನ್ನೆಲೆಯಲ್ಲಿ ಜಲಾಶಯದ ಮಟ್ಟ ದಿನೇ ದಿನೇ ಕುಸಿಯುತ್ತಿತ್ತು. 2,284 ಅಡಿಯಷ್ಟಿದ್ದ ನೀರಿನ ಪ್ರಮಾಣ 2,273 ಅಡಿಗೆ ಕುಸಿತಕಂಡಿತ್ತು. ಆದ್ರೆ ಒಳಹರಿವಿನ ಪ್ರಮಾಣ ಹೆಚ್ಚಿದ್ದರಿಂದಾಗಿ ನೀರಿನ ಮಟ್ಟವೂ ಏರಿಕೆಯಾಗಿದೆ. ಸದ್ಯ ಡ್ಯಾಂನಲ್ಲಿ 2,276.26 ಅಡಿಯಷ್ಟು ನೀರು ಸಂಗ್ರಹವಾಗಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ 3ನೇ ದಿನಕ್ಕೆ ಕಾಲಿಟ್ಟ ಸೇನಾ ಕಾರ್ಯಾಚರಣೆ – ಉಗ್ರರ ಹುಟ್ಟಡಗಿಸಲು ವಿಳಂಬವಾಗ್ತಿರುವುದ್ಯಾಕೆ?

    ಜಲಾಶಯಕ್ಕೆ ನಿತ್ಯ 3,659 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 1,100 ಕ್ಯೂಸೆಕ್ ಹೊರಹರಿವು ಇದೆ. ಇದನ್ನೂ ಓದಿ: ವಾಕ್ ಸ್ವಾತಂತ್ರ್ಯ ಧರ್ಮದ ವಿರುದ್ಧ ದ್ವೇಷ ಭಾಷಣ ಆಗಬಾರದು: ಮದ್ರಾಸ್ ಹೈಕೋರ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಗಿನ ಅರ್ಪಣೆಗೂ ಮುನ್ನವೇ ಖಾಲಿಯಾಗ್ತಿದೆ ಕಬಿನಿಯ ಒಡಲು

    ಬಾಗಿನ ಅರ್ಪಣೆಗೂ ಮುನ್ನವೇ ಖಾಲಿಯಾಗ್ತಿದೆ ಕಬಿನಿಯ ಒಡಲು

    ಮೈಸೂರು: ಭರ್ತಿಯಾದ ಜಲಾಶಯ ಬಾಗಿನ ಅರ್ಪಿಸುವ ಮುನ್ನವೇ ಖಾಲಿಯಾಗುತ್ತಿದೆ. 15 ದಿನಗಳ ಹಿಂದೆಯಷ್ಟೆ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಕಬಿನಿ ಜಲಾಶಯ (Kabini Dam) ಭರ್ತಿಯಾಗಿತ್ತು. ಇದೀಗ ಜಲಾಶಯದಲ್ಲಿ 5.5 ಅಡಿಯಷ್ಟು ನೀರು ಖಾಲಿಯಾಗಿದೆ.

    ಕಳೆದ 15 ದಿನಗಳ ಹಿಂದೆಯಷ್ಟೆ ಜಲಾಶಯ ಭರ್ತಿಯಾಗಿತ್ತು. ಜಲಾಶಯ ಭರ್ತಿಯಾದಾಗ ರಾಜ್ಯ ಸಿಎಂ ಬಾಗಿನ ಅರ್ಪಿಸುವುದು ಸಂಪ್ರದಾಯ. ಆದ್ರೆ ಬಾಗಿನ ಸಮರ್ಪಣೆ ಆಗಿರಲಿಲ್ಲ, ಇದೀಗ ಜಲಾಶಯದಿಂದ ತಮಿಳುನಾಡಿಗೆ ನೀರು (TamilNadu Water) ಹರಿಸುತ್ತಿರುವುದರಿಂದ 5.5 ಅಡಿಯಷ್ಟು ನೀರು ಖಾಲಿಯಾಗಿದೆ. ಇದನ್ನೂ ಓದಿ: ನಮ್ಮ ಸಿದ್ಧಾಂತ ಒಪ್ಪಿ ಬರುವವರನ್ನ ನಾವು ಸ್ವಾಗತ ಮಾಡುತ್ತೇವೆ: ಜಿ.ಪರಮೇಶ್ವರ್‌

    2,284 ಅಡಿ ಗರಿಷ್ಠಮಟ್ಟ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 78.50 ಅಡಿಯಷ್ಟು ನೀರಿದೆ. ಜಲಾಶಯದಿಂದ ಪ್ರತಿ ದಿನ ನದಿಗೆ 5,000 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಇದನ್ನೂ ಓದಿ: ಮೊದಲ ಓವರ್‌ನಲ್ಲೇ 2 ವಿಕೆಟ್‌ ಉಡೀಸ್‌ – 11 ತಿಂಗಳ ಬಳಿಕ ಎಂಟ್ರಿ ಕೊಟ್ಟು ​ಭಾರತಕ್ಕೆ ಜಯ ತಂದ ಬುಮ್ರಾ

    ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಜುಲೈ ತಿಂಗಳಲ್ಲೇ ಕೆಆರ್‌ಎಸ್ ಕಬಿನಿ ಜಲಾಶಯಕ್ಕೆ ಬಾಗೀನ ಅರ್ಪಿಸಿದ್ದರು. 8 ತಿಂಗಳ ಅವಧಿಯಲ್ಲೇ ಬಾಗೀನ ಅರ್ಪಣೆ ಮಾಡಿದ್ದರು. ಆದ್ರೆ ಈ ಬಾರಿ ಮುಂಗಾರು ತಡವಾಗಿ ಆರಂಭವಾದರೂ ಸಿಎಂ ಇನ್ನೂ ಬಾಗಿನ ಅರ್ಪಿಸಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • KRS ನಲ್ಲಿ ನೀರಿನ ಕೊರತೆ – ಕುಡಿಯುವ ನೀರಿಗೆ ಶುರುವಾಯ್ತು ಆತಂಕ!

    KRS ನಲ್ಲಿ ನೀರಿನ ಕೊರತೆ – ಕುಡಿಯುವ ನೀರಿಗೆ ಶುರುವಾಯ್ತು ಆತಂಕ!

    ಮಂಡ್ಯ: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಬಳಿಕ ಇದೀಗ ಮೈಸೂರು (Mysuru) ಜನತೆಗೂ ಕುಡಿಯುವ ನೀರಿಗೆ (Drinking Water) ಕ್ಷಾಮ ಉಂಟಾಗುವ ಭೀತಿ ಶುರುವಾಗಿದೆ.

    ಈ ಬಾರಿ ಮುಂಗಾರು ಕೈಕೊಟ್ಟಿದ್ದು, ಕೆಆರ್‌ಎಸ್ (KRS) ಜಲಾಶಯದ ಒಡಲು ಬರಿದಾಗಿದೆ. ಇದರಿಂದ ಮಂಡ್ಯ ಜಿಲ್ಲೆಯ ರೈತರು (Mandya Farmers) ಬೆಳೆ ಬೆಳೆಯೋದಕ್ಕೂ ನೀರಿಲ್ಲದೇ ಆತಂಕಗೊಂಡಿದ್ದಾರೆ. ಇದನ್ನೂ ಓದಿ: ಬೆಂ-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ 2ನೇ ಹಂತದ ಟೋಲ್ ಆರಂಭ- ಮೊದಲ ದಿನವೇ ಕೈಕೊಟ್ಟ ಸ್ಕ್ಯಾನರ್

    ಕಳೆದ ವರ್ಷ ಜುಲೈ ತಿಂಗಳ ವೇಳೆಗೆಲ್ಲಾ ರೈತರು ಕಬ್ಬು, ಭತ್ತ ಬಿತ್ತನೆ ಕಾರ್ಯದಲ್ಲಿ ತೊಡಗುತ್ತಿದ್ದರು. ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆ ಗರಿಗೆದರುತ್ತಿತ್ತು. ಆದ್ರೆ ಈ ಬಾರಿ ಬಿತ್ತನೆ ಕಾರ್ಯವೂ ಇಲ್ಲದೇ, ಕುಡಿಯುವ ನೀರಿಗೂ ಸಮಸ್ಯೆಯಾಗುವ ಪರಿಸ್ಥಿತಿ ಬಂದೊದಗಿದೆ. ಇದನ್ನೂ ಓದಿ: ಬೆಂ-ಮೈ ಹೆದ್ದಾರಿ ಪರಿಶೀಲನೆ – ಇನ್ನು ಮುಂದೆ ಟೋಲ್ ಬಳಿ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ: ಅಲೋಕ್ ಕುಮಾರ್

    ಬಿತ್ತನೆ ಕಾರ್ಯಕ್ಕೆ ಮುಂದಾಗದಂತೆ ಅಧಿಕಾರಿಗಳಿಂದಲೂ ಸೂಚನೆ ನೀಡಲಾಗಿದೆ. ಕಾವೇರಿ ನೀರಾವರಿ ನಿಗಮದ ಸೂಪರ್ಡೆಂಟ್ ಇಂಜಿನಿಯರ್ ಆನಂದ್ ಬಿತ್ತನೆ ಕಾರ್ಯದಲ್ಲಿ ತೊಡಗದಂತೆ ಮನವಿ ರೈತರಿಗೆ ಮನವಿ ಮಾಡಿದ್ದಾರೆ. ಮುಂದೆ ಮಳೆ ನೋಡಿಕೊಂಡು ಬಿತ್ತನೆ ಕಾರ್ಯ ಶುರು ಮಾಡಿ, ಈಗಿನ ಪರಿಸ್ಥಿತಿಯಲ್ಲಿ ಬೆಳೆಗೆ ನೀರು ಹರಿಸಲು ಸಾಧ್ಯವಾಗುವುದಿಲ್ಲ ಎಂದು ಮನವರಿಕೆ ಮಾಡಿದ್ದಾರೆ.

    ಮೈಸೂರು ಜನ ಕುಡಿಯುವ ನೀರಿಗಾಗಿ ಕೆಆರ್‌ಎಸ್ ಜೊತೆಗೆ ಕಬಿನಿ ಜಲಾಶಯದ ನೀರನ್ನ ಅವಲಂಬಿಸಿದ್ದಾರೆ. ಮೈಸೂರು ನಗರ ಪ್ರದೇಶಗಳಿಗೆ ನಿತ್ಯ ಕುಡಿಯಲು ಬರೋಬ್ಬರಿ 305 ಎಂಎಲ್‌ಡಿ ನೀರು ಬೇಕು. ಆದ್ರೆ ಜಲಾಶಯದಲ್ಲಿ ನೀರಿನ ಕೊರತೆ ಭಾರೀ ಪ್ರಮಾಣದಲ್ಲಿ ಉಂಟಾಗಿದ್ದು, ಸದ್ಯದಲ್ಲೇ ಮಳೆಯಾಗದಿದ್ದರೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 20 ದಿನ ನೋ ಪ್ರಾಬ್ಲಂ – ಮಳೆ ಬಾರದೆ ಇದ್ರೆ ಮೈಸೂರಿಗೆ ಕುಡಿಯುವ ನೀರಿಗೆ ಹಾಹಾಕಾರ ನಿಶ್ಚಿತ!

    20 ದಿನ ನೋ ಪ್ರಾಬ್ಲಂ – ಮಳೆ ಬಾರದೆ ಇದ್ರೆ ಮೈಸೂರಿಗೆ ಕುಡಿಯುವ ನೀರಿಗೆ ಹಾಹಾಕಾರ ನಿಶ್ಚಿತ!

    – ಕಳೆದ ವರ್ಷ ಸೌಂದರ್ಯ ರಾಶಿಯಾಗಿದ್ದ ಕೆಆರ್‌ಎಸ್ ಈಗ ಖಾಲಿ

    ಮೈಸೂರು/ಮಂಡ್ಯ: ರಾಜ್ಯ ರಾಜಧಾನಿ ನಂತರ ಮೈಸೂರು (Mysuru) ಜಿಲ್ಲೆಗೂ ಈಗ ಕುಡಿಯುವ ನೀರಿನ ಕ್ಷಾಮ ಉಂಟಾಗೋ ಭೀತಿ ಉಂಟಾಗಿದೆ. ಕಾವೇರಿ ಕೊಳ್ಳದಲ್ಲಿ ನಿರೀಕ್ಷಿತ ಮಟ್ಟಕ್ಕೆ ಬಾರದ ಮುಂಗಾರು ಮಳೆಯ ಪರಿಣಾಮ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ದಿನಗಳು ಹತ್ತಿರದಲ್ಲೆ ಇವೆ. ಹೀಗಾಗಿ ರೈತರ ಜೊತೆಗೆ ನಗರ ವಾಸಿಗಳಲ್ಲೂ ಆತಂಕ ಹೆಚ್ಚಾಗಿದೆ.

    ಕುಡಿಯುವ ನೀರಿಗಾಗಿ ಕೆಆರ್‌ಎಸ್ (KRS) ಜೊತೆಗೆ ಕಬಿನಿ ಜಲಾಶಯದ ನೀರನ್ನು ಮೈಸೂರಿಗರು ಅವಲಂಬಿಸಿದ್ದಾರೆ. ಮೈಸೂರು ನಗರ ಪ್ರದೇಶಗಳಲ್ಲಿ ನಿತ್ಯ ಕುಡಿಯಲು ಬರೋಬ್ಬರಿ 305 ಎಂಎಲ್‌ಡಿ ನೀರು ಬೇಕು. ಸದ್ಯ ನಗರಕ್ಕೆ ಅಗತ್ಯದಷ್ಟು ಕುಡಿಯುವ ನೀರು ಸರಬರಾಜು ಆಗುತ್ತಿದೆ. ಈಗ ಜಲಾಶಯದಲ್ಲಿ ಇರುವ ನೀರಿನಲ್ಲಿ 20 ದಿನಕ್ಕೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ.

    ಮೈಸೂರು ಜನರು ಕಬಿನಿ ಜಲಾಶಯಕ್ಕಿಂತ ಕಾವೇರಿ ಜಲಾಶಯದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಕೆಆರ್‌ಎಸ್ ಅಣೆಕಟ್ಟಿನಿಂದ ಮೈಸೂರಿಗೆ ನಿತ್ಯ ಬರೋಬ್ಬರಿ 245 ಎಂಎಲ್‌ಡಿ ನೀರು ಪೂರೈಕೆ ಆಗುತ್ತಿದೆ. ಕಬಿನಿ ಅಣೆಕಟ್ಟಿನಿಂದ 60 ಎಂಎಲ್‌ಡಿ ನೀರು ಪೂರೈಕೆ ಆಗುತ್ತಿದೆ.

    ಕೆಆರ್‌ಎಸ್ ಈಗ ಖಾಲಿ ಖಾಲಿ:
    ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಡ್ಯಾಂ ನೀರು ಹಾಗೂ ಹಸಿರಿನ ಸೌಂದರ್ಯದಿಂದ ಕಳೆದ ವರ್ಷ ಸರ್ಗಕ್ಕೆ ಕಿಚ್ಚು ಹಚ್ಚುವಂತೆ ಇತ್ತು. ಆದರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಕಾವೇರಿ ತಾಯಿಯ ಸೌಂದರ್ಯ ಅಕ್ಷರಶಃ ಕಳೆಗುಂದಿದೆ.

    ಕಳೆದ ವರ್ಷ ಇದೇ ದಿನದ ಆಸುಪಾಸಿನಲ್ಲಿ ಕೆಆರ್‌ಎಸ್ ಡ್ಯಾಂ ದೃಶ್ಯ ನೋಡಿದ್ರೆ ಕಣ್ಣಾಯಿಸಿದ ದೂರವೆಲ್ಲಾ ನೀರು, ಅದರ ಸುತ್ತೇಲ್ಲಾ ಹಸಿರಿನ ರಾಶಿ. ಈ ನೀರು ಮತ್ತು ಹಸಿರು ಎಂಬ ಎರಡು ಆಭರಣಗಳನ್ನು ಧರಿಸಿ ಕಾವೇರಿ ಮಾತೆ ಸೌಂದರ್ಯದ ದೇವತೆಯ ರೀತಿ ಕಂಗೊಳಿಸುತ್ತಾ ಇದ್ದಳು. ಇದನ್ನೂ ಓದಿ: ಧಾರವಾಡ-ಬೆಂಗಳೂರು ನಡುವೆ ಸಂಚರಿಸೋ ವಂದೇ ಭಾರತ್ ರೈಲಿಗೆ ಇಂದು ಮೋದಿ ಚಾಲನೆ

    ಆದ್ರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ದಿನೇ ದಿನೇ ಕುಸಿತ ಕಾಣುತ್ತಿದೆ. ಇದರಿಂದ ನೀರಿನ ಸಮಸ್ಯೆ ಎದುರಾಗಬಹುದು ಎಂಬ ಆತಂಕ ಒಂದು ಕಡೆ ಇದ್ರೆ, ಇನ್ನೊಂದೆಡೆ ಸೌಂದರ್ಯ ದೇವತೆ ರೀತಿಯಲ್ಲಿ ಕಂಗೊಳಿಸುತ್ತಿದ್ದ ಕಾವೇರಿ ಮಾತೆ ಕಳೆಗುಂದಿದ್ದಾಳೆ. ಇದನ್ನೂ ಓದಿ: PSI scam – ಇಂದು ಹೈಕೋರ್ಟ್‍ನಲ್ಲಿ ಮರುಪರೀಕ್ಷೆ ಅರ್ಜಿ ವಿಚಾರಣೆ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಬರಿದಾಗುತ್ತಿದೆ ಕಬಿನಿ ಒಡಲು: ಮೈಸೂರು, ಬೆಂಗ್ಳೂರಿಗೆ ಶುರುವಾಗಲಿದೆ ಕುಡಿಯುವ ನೀರಿನ ಸಮಸ್ಯೆ

    ಬರಿದಾಗುತ್ತಿದೆ ಕಬಿನಿ ಒಡಲು: ಮೈಸೂರು, ಬೆಂಗ್ಳೂರಿಗೆ ಶುರುವಾಗಲಿದೆ ಕುಡಿಯುವ ನೀರಿನ ಸಮಸ್ಯೆ

    ಮೈಸೂರು: ಜಿಲ್ಲಾ ವ್ಯಾಪ್ತಿಯ ಪ್ರತಿಷ್ಠಿತ ಕಬಿನಿ ಜಲಾಶಯದ (Kabini Dam) ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.

    ಜಲಾಶಯದಲ್ಲಿ ಒಟ್ಟು 19.50 TMC ನೀರು ಸಂಗ್ರಹವಾಗುತ್ತದೆ. ಆದ್ರೆ ಸದ್ಯಕ್ಕೆ ಜಲಾಶಯದಲ್ಲಿ 4 TMC ಮಾತ್ರ ನೀರಿನ ಸಂಗ್ರಹ ಇದೆ. ಅದರಲ್ಲಿ ಡೆಡ್ ಸ್ಟೋರೆಜ್ ತೆಗೆದರೆ ಬಳಕೆಗೆ ಸಿಗುವುದು ಕೇವಲ 2 TMC ನೀರು ಮಾತ್ರ. ಇದನ್ನೂ ಓದಿ: ಮಂಡ್ಯದ ರೈತರ ಒತ್ತಡಕ್ಕೆ ಮಣಿದ ಸರ್ಕಾರ – KRSನಿಂದ ನಾಲೆ ನೀರು

    ಕಬಿನಿ ಜಲಾಶಯದಿಂದ ಮೈಸೂರು, ಬೆಂಗಳೂರಿನ (Mysuru, Bengaluru) ಕೆಲ ಭಾಗ, ನಂಜನಗೂಡು, ಟಿ. ನರಸೀಪುರ, ಗುಂಡ್ಲುಪೇಟೆ, ಚಾಮರಾಜನಗರಕ್ಕೆ ಕುಡಿಯುವ ನೀರು ಒದಗಿಸಲಾಗುತ್ತದೆ. ಹೀಗಾಗಿ ಜಲಾಶಯದಲ್ಲಿ ನೀರು ಬರಿದಾಗುತ್ತಿದ್ದು ಈ ಭಾಗಗಳಲ್ಲಿ ಕುಡಿಯುವ ನೀರಿಗೆ (Drinking Water) ಹಾಹಾಕಾರ ಉಂಟಾಗುವ ಆತಂಕವಿದೆ.  ಇದನ್ನೂ ಓದಿ: ಕರಾವಳಿಯಲ್ಲಿ ಬಿಪರ್‌ಜಾಯ್‌ ಅಬ್ಬರ – ತೀರಕ್ಕೆ ಅಪ್ಪಳಿಸುತ್ತಿದೆ ರಕ್ಕಸ ಅಲೆಗಳು, ಆತಂಕದಲ್ಲಿ ನಿವಾಸಿಗಳು

  • ಕಬಿನಿ ಜಲಾಶಯ ಭರ್ತಿ – ಸಂತಸ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ

    ಕಬಿನಿ ಜಲಾಶಯ ಭರ್ತಿ – ಸಂತಸ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ

    ಮೈಸೂರು: ಮೈಸೂರು ಜಿಲ್ಲೆಯ ಕಬಿನಿ ಜಲಾಶಯ ಭರ್ತಿಯಾಗಿರುವುದು ಸಂತಸ ತಂದಿದೆ. ಇದರಿಂದ ನಾಡಿನ ರೈತರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಮಂಗಳವಾರ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಕಬಿನಿಗೆ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನವೆಂಬರ್ ತಿಂಗಳಲ್ಲಿ ಬಾಗಿನ ಅರ್ಪಿಸುವುದು ವಿಶೇಷ. ಅಂತರರಾಜ್ಯ ನೀರಿನ ವಿಚಾರ ಇದೆ. ನೀರು ತುಂಬಿರುವುದರಿಂದ ತಮಿಳುನಾಡಿಗೂ ನೀರು ಕೊಡಬಹುದು, ನಾಲೆಗಳಿಗೂ ನೀರು ಹರಿಸಬಹುದು ಎಂದರು. ಇದನ್ನೂ ಓದಿ: ಮೊದಲೇ ಪೈಪೋಟಿ ನಿರೀಕ್ಷಿಸಿದ್ದೆವು, ಫಲಿತಾಂಶಕ್ಕೆ ಸಮಯವಿದೆ: ಬೊಮ್ಮಾಯಿ

    bommai

    ಕಳೆದ ವರ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ನಾನು ಕಬಿನಿ ಜಲಾಶಯಕ್ಕೆ ಬಾಗಿನ ಸಲ್ಲಿಸಲು ಬಂದಿದ್ದೆ. ನಾನು ಮುಖ್ಯಮಂತ್ರಿಯಾದ ನಂತರ ಅಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದೀನಿ. ಈಗ ಕಾವೇರಿ ಜಲಾನಯನ ಪ್ರದೇಶದ ಎರಡು ಜಲಾಶಯಗಳಿಗೆ ಬಾಗಿನ ಸಲ್ಲಿಸುತ್ತಿದ್ದೇನೆ ಎಂದರು. ಇದನ್ನೂ ಓದಿ:  ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಹಿನ್ನಡೆ – ಕಾಂಗ್ರೆಸ್‌ ಮುನ್ನಡೆ

    ಕಬಿನಿ ಜಲಾಶಯದ ಕೆಳಭಾಗದಲ್ಲಿ ಬೃಂದಾವನ ಗಾರ್ಡನ್ ಮಾದರಿಯಲ್ಲಿ ಉದ್ಯಾನವನ ನಿರ್ಮಾಣವನ್ನು ಪಿ.ಪಿ.ಪಿ. ಮಾದರಿಯಲ್ಲಿ ಕೈಗೊಳ್ಳಲು ಪ್ರಸ್ತಾವನೆ ಬಂದಿದೆ. ಸರ್ಕಾರದಿಂದ ನೇರವಾಗಿಯೂ ಮಾಡಬೇಕು ಎಂಬ ವಿಚಾರವೂ ಇದೆ. ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಕಬಿನಿ ಜಲಾಶಯದಲ್ಲಿ ಕೆಳಭಾಗದಲ್ಲಿ ಪ್ರವಾಹ ಬಂದಾಗ ನೀರು ನುಗ್ಗುವ ಪ್ರದೇಶದ ನಿವಾಸಿಗಳಿಗೆ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. ಇದಕ್ಕೆ ಅವರ ಸಹಕಾರವೂ ಬೇಕು ಎಂದು ಹೇಳಿದರು.

    bommai

    ಇದೇ ವೇಳೆ ಪುನಿತ್ ರಾಜ್‍ಕುಮಾರ್ ಅವರಿಗೆ ಪದ್ಮಶ್ರಿ ಪ್ರಶಸ್ತಿಗೆ ಶಿಫಾರಸ್ಸು ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪುನಿತ್ ರಾಜ್‍ಕುಮಾರ್ ಅವರ ಬಗ್ಗೆ ತಮಗೆ ಅಪಾರ ಗೌರವ ಪ್ರೀತಿ ಇದೆ. ಈ ವಿಚಾರವನ್ನು ಸರ್ವಾನುಮತದಿಂದ ಎಲ್ಲರೂ ಒಪ್ಪುತ್ತಾರೆ. ಶಿಫಾರಸ್ಸು ಮಾಡಲು ಅದಕ್ಕೊಂದು ಪದ್ಧತಿ ಇದೆ. ಸರ್ಕಾರ ಎಲ್ಲವನ್ನು ಯೋಚನೆ ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನುಡಿದರು. ಇದನ್ನೂ ಓದಿ: ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕು: ಸಿದ್ದರಾಮಯ್ಯ

    ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಕೊಳ್ಳೇಗಾಲ ಶಾಸಕ ಎನ್. ಮಹೇಶ್, ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

  • ಇಂದಿನಿಂದಲೇ ಕಬಿನಿ ಜಲಾಶಯದಿಂದ ನೀರು ಬಿಡಲು ನಿರ್ಧಾರ: ಎಸ್.ಟಿ.ಸೋಮಶೇಖರ್

    ಇಂದಿನಿಂದಲೇ ಕಬಿನಿ ಜಲಾಶಯದಿಂದ ನೀರು ಬಿಡಲು ನಿರ್ಧಾರ: ಎಸ್.ಟಿ.ಸೋಮಶೇಖರ್

    ಮೈಸೂರು: ಕಬಿನಿ ಜಲಾಶಯದ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಇಂದಿನಿಂದಲೇ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

     

    ಸೋಮವಾರ ಮೈಸೂರಿನಲ್ಲಿ ನಡೆದ ಕಬಿನಿ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಕಬಿನಿ ಜಲಾಶಯ ವ್ಯಾಪ್ತಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಇಂದಿನ ನೀರಿನ ಲಭ್ಯತೆ ಮತ್ತು ಹಿಂದಿನ ವರ್ಷಗಳ ಅನುಭವದ ಮೇಲೆ ಈಗ ಈ ವ್ಯಾಪ್ತಿಯ ಎಲ್ಲಾ 52 ಕೆರೆಗಳಿಗೆ ನೀರು ತುಂಬಿಸಲು ಇಂದಿನಿಂದಲೇ ನೀರು ಬಿಡಲಾಗುವುದು ಎಂದು ಹೇಳಿದರು.

    ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಸಹ ನಾಲೆಯ ಕೊನೆಯ ಭಾಗಕ್ಕೆ ನೀರು ಕೊಂಡೊಯ್ಯಬೇಕಾಗಿದೆ. ಅದಕ್ಕಾಗಿ ತಕ್ಷಣ ಸಭೆ ಮಾಡುವಂತೆ ಕೇಳಿದ್ದರು. ಕಾಲುವೇ ದುರಸ್ಥಿ, ಹೂಳೆತ್ತುವ ಕೆಲಸವನ್ನು ತ್ವರಿತವಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಕೊನೆಯ ಭಾಗದ ಕೆರೆಗೆ ಜುಲೈ ಅಂತ್ಯದ ವರೆಗೆ ನೀರು ತುಂಬಿಸದಿದ್ದರೆ ಪ್ರತಿಭಟನೆಗೆ ಕೂರುವುದಾಗಿ ಶಾಸಕರು ಹೇಳಿದ್ದಾರೆ. ಈ ಅವಧಿಯೊಳಗೆ ನೀರು ತುಂಬಿಸಬೇಕು ಎಂಬ ಬೇಡಿಕೆಗೆ ನನ್ನ ಸಹಮತ ಇದೆ ಎಂದು ಸಚಿವರು ಹೇಳಿದರು. ಇಂದಿನಿಂದ 15 ದಿನಗಳ ವರೆಗೆ ಸುಮಾರು1 ಟಿ.ಎಂ.ಸಿ. ನೀರನ್ನು 52 ಕೆರೆಗಳಿಗೆ ತುಂಬಿಸಲು ನಿರ್ಣಯ ಮಾಡಿದ್ದೇವೆ. ಈಗ 14.5 ಟಿ.ಎಂ.ಸಿ. ನೀರು ಈಗ ಕಬಿನಿಯಲ್ಲಿ ಲಭ್ಯವಿದೆ. ಈ ಪೈಕಿ 5 ಟಿ.ಎಂ.ಸಿ. ನೀರನ್ನು ನೀರಾವರಿ ಉದ್ದೇಶಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

  • ಭಾರೀ ಮಳೆ- ಕಬಿನಿ ಒಳ ಹರಿವು ಹೆಚ್ಚಳ

    ಭಾರೀ ಮಳೆ- ಕಬಿನಿ ಒಳ ಹರಿವು ಹೆಚ್ಚಳ

    ಮೈಸೂರು: ಮುಂಗಾರು ಋತು ಚುರುಕು ಪಡೆದುಕೊಂಡಿದ್ದು, ಜಿಲ್ಲೆಯ ಕಬಿನಿ ಜಲಾನಯನ ಪ್ರದೇಶದಲ್ಲಿ ಸಹ ಭಾರೀ ಮಳೆ ಆಗುತ್ತಿದೆ. ಇದರಿಂದ ಕಬಿನಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ.

    ಒಟ್ಟು 2284 ಅಡಿ ಸಾಮಥ್ರ್ಯವನ್ನು ಹೊಂದಿರುವ ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 2265.60 ಅಡಿಗಳು. ಜಲಾಶಯದ ಇಂದಿನ ಒಳಹರಿವು 6,407 ಕ್ಯೂಸೆಕ್ಸ್, ಜಲಾಶಯದ ಇಂದಿನ ಹೊರಹರಿವು 700 ಕ್ಯೂಸೆಕ್ಸ್. ಜಿಲ್ಲೆಯ ಹೆಚ್‍ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಜಲಾಶಯ ಎಂಬ ಖ್ಯಾತಿಗೆ ಪಾತ್ರವಾಗಿದೆ.

    ಮುಂಗಾರು ಚುರುಕುಗೊಂಡಿದ್ದು, ಕೇರಳದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿರುವುದರಿಂದ ಕಬಿನಿ ನದಿಯಲ್ಲಿ ನೀರಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಹೀಗಾಗಿ ಜಲಾಶಯಕ್ಕೆ ಹೆಚ್ಚು ನೀರು ಹರಿದುಬರುತ್ತಿದೆ. ರಾಜ್ಯದಲ್ಲಿ ಕರಾವಳಿ, ಮಲೆನಾಡು ಸೇರಿದಂತೆ ಬಹುತೇಕ ಕಡೆ ಭಾರೀ ಮಳೆಯಾಗುತ್ತಿದೆ. ಬಿತ್ತನೆ ಕಾರ್ಯ ಸಹ ಅಷ್ಟೇ ಚುರುಕುಗೊಂಡಿದೆ.

  • ಇದ್ದಕ್ಕಿದ್ದಂತೆ ಕಬಿನಿಂದ ನೀರು ಬಿಟ್ಟ ಅಧಿಕಾರಿಗಳು, ಸೇತುವೆ ಮುಳುಗಡೆ- ಜನ ಕಂಗಾಲು

    ಇದ್ದಕ್ಕಿದ್ದಂತೆ ಕಬಿನಿಂದ ನೀರು ಬಿಟ್ಟ ಅಧಿಕಾರಿಗಳು, ಸೇತುವೆ ಮುಳುಗಡೆ- ಜನ ಕಂಗಾಲು

    ಮೈಸೂರು: ಯಾವುದೇ ಮುನ್ಸೂಚನೆ, ಸೈರನ್ ಇಲ್ಲದೆ ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಬಿಡುವ ಮೂಲಕ ಜಲಾಶಯದ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ.

    ಡ್ಯಾಂ ಭರ್ತಿಯಾಗುತ್ತಿದೆ ಎಂಬ ಮಾಹಿತಿಯನ್ನು ನೀಡದೆ ಅಪಾರ ಪ್ರಮಾಣದ ನೀರನ್ನು ತಡರಾತ್ರಿ ಎಚ್.ಡಿ.ಕೋಟೆಯ ಕಬಿನಿ ಡ್ಯಾಂ ನಿಂದ ನದಿಗೆ ಬಿಟ್ಟಿದ್ದು, ಸೇತುವೆ ಮುಳುಗಡೆಯಾಗಿದೆ. ಇದನ್ನು ಕಂಡ ಸ್ಥಳೀಯರು ಕಂಗಾಲಾಗಿದ್ದಾರೆ. ಗೇಟ್ ಹಾಕದೆ, ಸೈರನ್ ಮಾಡದೆ, ಯಾವುದೇ ರೀತಿಯ ಮುನ್ಸೂಚನೆ ನೀಡದೆ ನದಿಗೆ ನೀರು ಬಿಡಲಾಗಿದೆ ಎಂದು ಆರೋಪಿಸಲಾಗಿದೆ. ಬೀಚನಹಳ್ಳಿಯಲ್ಲಿರುವ ಡ್ಯಾಂ ನಲ್ಲಿ ಅಧಿಕಾರಿಗಳಿಂದ ಈ ಅವಾಂತರ ನಡೆದಿದೆ. ಡ್ಯಾಂ ಭರ್ತಿಯಾಗುತ್ತಿದೆ ಎಂದು ಇದೀಗ 30 ಸಾವಿರ ಕ್ಯೂಸೆಕ್ ನೀರನ್ನು ಅಧಿಕಾರಿಗಳು ಹರಿಸಿದ್ದಾರೆ.

    ಅಪಾರ ಪ್ರಮಾಣದ ನೀರು ಬಿಟ್ಟಿದ್ದಕ್ಕೆ ಹಾಗೂ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದಕ್ಕೆ ಜೀವ ಭಯದಲ್ಲಿ ಜನ ಒಂದು ಬದಿಯಿಂದ ಮತ್ತೊಂದಿ ಬದಿಗೆ ತೆರಳಿದ್ದಾರೆ. ಕೂಡಲೇ ಸ್ಥಳೀಯರು ಡ್ಯಾಂನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಬಳಿಕ ಎಚ್ಚೆತ್ತು ಅಧಿಕಾರಿಗಳು ನೀರಿನ ಪ್ರಮಾಣ ಕಡಿಮೆ ಮಾಡಿದ್ದಾರೆ. ಡ್ಯಾಂ ಮುಂಭಾದಲ್ಲಿರುವ ಬಿದರಳ್ಳಿ ಸಂಪರ್ಕದ ಸೇತುವೆ ಬಳಿ ಇದ್ದಕ್ಕಿದ್ದಂತೆ ನೀರು ಹೆಚ್ಚಾಗಿದ್ದನ್ನು ಕಂಡು ಸೇತುವೆ ಮೇಲೆ ತೆರಳುತ್ತಿದ್ದವರು ಗಾಬರಿಯಾಗಿದ್ದಾರೆ.