Tag: ಕಬಿನಿ

  • ಕಬಿನಿ, ಕೆಆರ್‌ಎಸ್‌ ಜಲಾಶಯಗಳು ಭರ್ತಿ – ಸೋಮವಾರ ಸಿದ್ದರಾಮಯ್ಯ, ಡಿಕೆಶಿ ಬಾಗಿನ ಅರ್ಪಣೆ

    ಕಬಿನಿ, ಕೆಆರ್‌ಎಸ್‌ ಜಲಾಶಯಗಳು ಭರ್ತಿ – ಸೋಮವಾರ ಸಿದ್ದರಾಮಯ್ಯ, ಡಿಕೆಶಿ ಬಾಗಿನ ಅರ್ಪಣೆ

    ಬೆಂಗಳೂರು: ಕಳೆದ ವರ್ಷ ಬರದಿಂದ ಬೆಂದು ಹೋಗಿದ್ದ ರಾಜ್ಯಕ್ಕೆ ಈ ವರ್ಷ ಮಳೆರಾಯ ಕರುಣೆ ತೋರಿದ್ದಾನೆ. ಮುಂಗಾರು ಮಳೆ ಅಬ್ಬರದಿಂದಾಗಿ ರಾಜ್ಯದ ಜಲಾಶಯಗಳು ತುಂಬಿ ತುಳುಕುತ್ತಿವೆ. ಕಾವೇರಿ ನದಿ ಪಾತ್ರದ ಜಲಾಶಯಗಳು ಮೈದುಂಬಿಕೊಂಡಿದ್ದು, ಕಾವೇರಿ ಮಾತೆಗೆ ಬಾಗಿನ ಸಲ್ಲಿಕೆಗೆ ಸರ್ಕಾರ ತೀರ್ಮಾನಿಸಿದೆ. ಇದೇ ಜುಲೈ 29ರಂದು ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಗೆ (KRS And Kabini Resorvoir) ಸಿಎಂ ಸಿದ್ದರಾಮಯ್ಯ ಬಾಗಿನ (Bagina) ಅರ್ಪಣೆ ಮಾಡಲಿದ್ದಾರೆ.

    ಕಳೆದ ವರ್ಷ ಇಡೀ ರಾಜ್ಯವನ್ನು ಬರಗಾಲ ಕಾಡಿತ್ತು. ಇದರಿಂದ 2023ರಲ್ಲಿ ಕೆಆರ್‌ಎಸ್ ಕಟ್ಟೆ ಭರ್ತಿಯಾಗಿರಲಿಲ್ಲ. ಆದ್ರೆ ಈ ಬಾರಿ ಜತೆಗೆ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ನಿರಂತರವಾಗಿ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಗೆ ನೀರಿನ ಒಳ ಹರಿವು ಹೆಚ್ಚಾಗಿದ್ದು ಜಲಾಶಯಗಳು ಭರ್ತಿಯಾಗಿವೆ. ಕಾವೇರಿ ನೀರಿಗಾಗಿ ಪ್ರತಿವರ್ಷ ತಮಿಳುನಾಡು ಮಾಡ್ತಿದ್ದ ಕಿರಿಕಿರಿ ಸದ್ಯಕ್ಕೆ ದೂರಾಗಿದೆ.

    ಅಲ್ಲದೇ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟಗಳು ಮತ್ತು ಅವುಗಳಿಗೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಶ್ರೀರಂಗಪಟ್ಟಣದಿಂದ ಹೊಗೇನಕಲ್‌ವರೆಗೆ ಕಾವೇರಿ ತಟದಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ಪ್ರವಾಸಿ ತಾಣಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

    ಮಳೆಯಿಂದ ಹಲವೆಡೆ ಪ್ರವಾಹ ಪರಿಸ್ಥಿತಿ:
    * ಕೆಆರ್‌ಎಸ್‌ನಿಂದ ನೀರು ರಿಲೀಸ್
    ಕೆಆರ್‌ಎಸ್ ಡ್ಯಾಮ್‌ಗೆ 1.20 ಲಕ್ಷ ಕ್ಯೂಸೆಕ್ ಒಳಹರಿವಿದ್ದು, 1.30 ಲಕ್ಷ ಕ್ಯೂಸೆಕ್ ದಾಖಲೆ ಪ್ರಮಾಣದಲ್ಲಿ ನದಿಗೆ ನೀರು ಹರಿಸಲಾಗಿದೆ.

    * ರಾಮಕೃಷ್ಣ ಆಶ್ರಮಕ್ಕೆ ಜಲದಿಗ್ಬಂಧನ
    ಕಾವೇರಿ ಆರ್ಭಟಕ್ಕೆ ಶ್ರೀರಂಗಪಟ್ಟಣದ ರಾಮಕೃಷ್ಣ ವಿವೇಕಾನಂದರ ಆಶ್ರಮಕ್ಕೆ ನೀರು ನುಗ್ಗಿದೆ. ಸ್ವಲ್ಪ ಪ್ರಮಾಣದ ನೀರು ನುಗ್ಗುತ್ತಿರೋದನ್ನು ಗಮನಿಸಿ ಎಚ್ಚೆತ್ತ ಅಧಿಕಾರಿಗಳು ಆಶ್ರಮದ ಸ್ವಾಮೀಜಿ, ಸಿಬ್ಬಂದಿಯನ್ನ ಸ್ಥಳಾಂತರಿಸಿದ್ದಾರೆ. ಈದೀಗ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದೆ, ಸುತ್ತಮುತ್ತಲಿನ ರಸ್ತೆ, ತೋಟ ಜಲಾವೃತವಾಗಿದೆ.

    * ವೆಲ್ಲೆಸ್ಲಿ ಬ್ರಿಡ್ಜ್
    220 ವರ್ಷಗಳ ಇತಿಹಾಸವುಳ್ಳ ಶ್ರೀರಂಗಪಟ್ಟಣದ ವೆಲ್ಲೆಸ್ಲೀ ಬ್ರಿಡ್ಜ್ ಮುಳುಗಡೆ ಹಂತಕ್ಕೆ ಬಂದಿದೆ. ಈ ಬ್ರಿಡ್ಜ್ ಅನ್ನು 1804ರಲ್ಲಿ ಮೈಸೂರು-ಬೆಂಗಳೂರು ಸಂಚಾರಕ್ಕೆ ವೆಲ್ಲೆಸ್ಲೀ ಸೇತುವೆ ನಿರ್ಮಾಣ ಮಾಡಲಾಗಿತ್ತು. ಭಾನುವಾರ (ಜು.27) ಮತ್ತಷ್ಟು ಒಳಹರಿವು ಹೆಚ್ಚಿದರೆ ಐತಿಹಾಸಿಕ ವೆಲ್ಲೆಸ್ಲೀ ಬ್ರಿಡ್ಜ್ ಮುಳುಗಡೆಯಾಗುವ ಸಾಧ್ಯತೆ ಇದೆ. 2 ದಿನಗಳಿಂದ ಮಂಡ್ಯ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ವೆಲ್ಲೆಸ್ಲೀ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿಷೇಧ ಏರಿದೆ.

    * ಗೋಸಾಯ್ ಘಾಟ್ ಸಂಪೂರ್ಣ ಮುಳುಗಡೆ
    ಪಿಂಡಪ್ರಧಾನ, ಹೋಮ ಹವನ ಇತರೆ ಪೂಜಾ ಕೈಂಕರ್ಯಗಳಿಗೆ ಪ್ರಸಿದ್ಧಿಯಾಗಿರುವ ಗೋಸಾಯ್ ಘಾಟ್ ಕಾವೇರಿ ಅಬ್ಬರಕ್ಕೆ ಮುಳುಗಿಹೋಗಿದ್ದು, ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ. ಕಾಶಿ ವಿಶ್ವನಾಥ, ಶ್ರೀಕೃಷ್ಣ, ಶಿವ, ಆಂಜನೇಯ, ಗಣಪತಿ ದೇವಸ್ಥಾನಗಳು ಸಂಪೂರ್ಣ ಜಲಾವೃತಗೊಂಡಿವೆ.

  • ಉಡುಪಿಯ ಹಲವೆಡೆ ನೆರೆ ಪರಿಸ್ಥಿತಿ; ಹಾಸನ, ಕೊಡಗಿನನಲ್ಲಿ ಭೂಕುಸಿತದ ಅವಾಂತರ; ಕಪಿಲಾ ನದಿ ತೀರದಲ್ಲೂ ಪ್ರವಾಹ ಭೀತಿ!

    ಉಡುಪಿಯ ಹಲವೆಡೆ ನೆರೆ ಪರಿಸ್ಥಿತಿ; ಹಾಸನ, ಕೊಡಗಿನನಲ್ಲಿ ಭೂಕುಸಿತದ ಅವಾಂತರ; ಕಪಿಲಾ ನದಿ ತೀರದಲ್ಲೂ ಪ್ರವಾಹ ಭೀತಿ!

    ಬೆಂಗಳೂರು: ಉತ್ತರ ಕನ್ನಡ (Uttara Kannada) ಜಿಲ್ಲೆ ಮೇಲೆ ಪ್ರಕೃತಿ ಮುನಿಸಿಕೊಂಡಂತಿದೆ. ಶಿರೂರು ಭೂಕುಸಿತ ದುರಂತ ಇಡೀ ಕರಾವಳಿಯನ್ನ ಆತಂಕದ ಕಡಲಲ್ಲಿ ಮುಳುಗಿಸಿದೆ. ಶಿರೂರು ಭೂಕುಸಿತದಿಂದ ಹಲವು ದುರಂತಗಳು ಸಂಭವಿಸಿವೆ. 200 ಮೀಟರ್‌ನಷ್ಟು ಗಾತ್ರದ ಗುಡ್ಡ ಕುಸಿದ ಧಾಟಿಗೆ ಗಂಗಾವಳಿ ನದಿಯಲ್ಲಿ ಮಿನಿ ಸುನಾಮಿ ಸೃಷ್ಟಿಯಾಗಿ ನದಿ ತಟದ ಉಳುವರೆ ಗ್ರಾಮದ ನಾಲ್ಕು ಮನೆ ನೆಲಸಮವಾಗಿವೆ.

    10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಸೀಥಿಗೌಡ ಎಂಬ ಮಹಿಳೆ ಗಂಗಾವಳಿ ಪಾಲಾಗಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಇನ್ನು, ನದಿಗೆ ಬಿದ್ದ ಹೆಚ್‌ಪಿ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗ್ತಿತ್ತು. ಕೂಡಲೇ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಟ್ಯಾಂಕರ್ ವಾಲ್ ಬಂದ್ ಮಾಡಿದ್ದಾರೆ. ನದಿ ತಟದ 35 ಕುಟುಂಬಗಳಿಗೆ ನದಿ ನೀರು ಬಳಸದಂತೆ ಎಚ್ಚರಿಕೆ ನೀಡಲಾಗಿದೆ.

    ಇನ್ನೂ ಶಿರೂರು ಬಳಿ ಮತ್ತಷ್ಟು ಗುಡ್ಡ ಕುಸಿಯುವ ಭೀತಿ ಎದುರಾಗಿದೆ. 90 ಮೀಟರ್ ಗುಡ್ಡ ಬಿರುಕುಬಿಟ್ಟಿದೆ. ಬಿರುಕಿನ ಪ್ರಮಾಣ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ಸಂಜೆ ಸಣ್ಣಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಹೀಗಾಗಿ ರಕ್ಷಣಾ ಕಾರ್ಯಚರಣೆ ಸ್ಥಗಿತಗೊಂಡಿದ್ದು, ಗುರುವಾರ ಮತ್ತೆ ಮುಂದುವರಿಯಲಿದೆ. ಈ ಭಾಗದ ಜನರನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ಅಂಗಡಿ ಮುಂಗಟ್ಟು ಮುಚ್ಚಿಸಲಾಗಿದೆ. ಒಟ್ಟು ಏಳು ಮಂದಿ ಬಲಿ ಆಗಿದ್ದು, ಇನ್ನೂ ಮೂವರ ಶವಗಳು ಪತ್ತೆಯಾಗಬೇಕಿದೆ. ಮಣ್ಣಿನಡಿ ಕಾರೊಂದು ಹೂತುಹೋಗಿರೋದನ್ನು ಜಿಪಿಎಸ್ ಮೂಲಕ ಪತ್ತೆ ಹಚ್ಚಲಾಗಿದೆ. ಹೀಗಾಗಿ ಸಾವು ನೋವು ಇನ್ನಷ್ಟು ಹೆಚ್ಚುವ ಸಂಭವ ಇದೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರವನ್ನು ಸಿಎಂ ಘೋಷಿಸಿದ್ದಾರೆ. ಅವೈಜ್ಞಾನಿಕ ಕಾಮಗಾರಿ ಸಂಬಂಧ ಕೇಂದ್ರಕ್ಕೆ ದೂರು ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

    ಕರಾವಳಿ ತತ್ತರ:
    ಭಾರೀ ಮಳೆಗೆ ಕರಾವಳಿ ಜಿಲ್ಲೆಗಳು ತತ್ತರಿಸಿವೆ. ಉಡುಪಿ ಜಿಲ್ಲೆಯಲ್ಲಿ ದಾಖಲೆಯ 148 ಮಿಮೀ ಮಳೆಯಾಗಿದೆ. ಹೆಬ್ರಿಯಲ್ಲಿ ಅತ್ಯಧಿಕ ಅಂದ್ರೆ 203 ಮಿ.ಮೀ, ಕುಂದಾಪುರ 186, ಬ್ರಹ್ಮಾವರ 164, ಬೈಂದೂರು 151 ಮಿಲಿಮೀಟರ್‌ ಮಳೆಯಾಗಿದೆ. ಸ್ವರ್ಣಾ, ಸೀತಾ ನದಿಗಳ ರೌದ್ರನರ್ತನಕ್ಕೆ ಬೈಂದೂರಿನ ಹಲವು ಗ್ರಾಮಗಳು ಜಲಾವೃತವಾಗಿವೆ. ಗದ್ದೆ, ರಸ್ತೆಯಲ್ಲಿ ಜನ ದೋಣಿಯಲ್ಲಿ ಸಂಚರಿಸುವಂತಾಗಿದೆ. ನೀಲಾವರದ ನಾಗದೇವರ ಗುಡಿ ಜಲಾವೃತವಾಗಿದೆ. ಬ್ರಹ್ಮಾವರದ ಅಚ್ಲಾಡಿಯಲ್ಲಿ ಅನಾರೋಗ್ಯದಿಂದ ಬಳಲ್ತಿದ್ದ ವೃದ್ಧೆಯನ್ನು ದೋಣಿ ನೆರವಿಂದ ಆಸ್ಪತ್ರೆಗೆ ಸಾಗಿಸಲಾಗಿದೆ. ಮಡಿಸಾಲು ಹೊಳೆ ಉಕ್ಕಿ ಹರಿದ ಪರಿಣಾಮ ನೂರಾರು ಎಕರೆ ಕೃಷಿ ಭೂಮಿ ಮುಳುಗಿದೆ. ಕಾಪು ತಾಲೂಕಿನ ಕುರ್ಕಾಲು ಕಿಂಡಿ ಅಣೆಕಟ್ಟಿಗೆ ನಾಡದೋಣಿಯೊಂದು ಸಿಲುಕಿದ್ದು, ನೀರಿನ ಹರಿವಿಗೆ ತಡೆಯಾಗಿದೆ. ದಕ್ಷಿಣ ಕನ್ನಡದ ನದಿಗಳು ಉಕ್ಕೇರಿವೆ. ಮಂಗಳೂರು ಹೊರವಲಯದ ಅಡ್ಯಾರ್ – ಪಾವೂರು ಬಳಿಯ ತಗ್ಗುಪ್ರದೇಶದ ಕೃಷಿಭೂಮಿಗೆ ನೀರು ನುಗ್ಗಿದೆ. ನೇತ್ರಾವತಿ ನದಿಗೆ ಪಾವೂರು ಬಳಿ ಅಡ್ಡಲಾಗಿ ಕಟ್ಟಿರುವ ಡ್ಯಾಂ ಭರ್ತಿಯಾಗಿದ್ದು, ಎಲ್ಲಾ 36 ಗೇಟ್‌ಗಳಿಂದ ನೀರನ್ನು ಸಮುದ್ರಕ್ಕೆ ಹೊರಬಿಡಲಾಗ್ತಿದೆ. ನದಿ ಪಾತ್ರದ ಜನರಿಗೂ ಎಚ್ಚರಿಕೆ ನೀಡಲಾಗಿದೆ.

    ಹಾಸನದಲ್ಲೂ ಭೂಕುಸಿತ:
    ಅಲ್ಲದೇ ಮಲೆನಾಡು ಭಾಗದಲ್ಲೂ ಉತ್ತಮ ಮಳೆ ಆಗ್ತಿದೆ. ಆಗುಂಬೆಯಲ್ಲಿ 210, ಭಾಗಮಂಡಲದಲ್ಲಿ 150, ಶೃಂಗೇರಿ, ಕೊಟ್ಟಿಗೆಹಾರ, ಕಮ್ಮರಡಿಯಲ್ಲಿ 140 ಮಿಲಿಮೀಟರ್ ಮಳೆಯಾಗಿದೆ. ಸಕಲೇಶಪುರದ ದೊಡ್ಡತಪ್ಪಲು ಬಳಿ ರಸ್ತೆ ಮೇಲೆ ಗುಡ್ಡ ಕುಸಿದಿದೆ. ಕೊಲ್ಲಹಳ್ಳಿ ಬಳಿ ಹೈವೇಯಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. 500 ಮೀಟರ್ ಉದ್ದಕ್ಕೂ ಕುಸಿತವಾಗ್ತಿದೆ. ಸೂಕ್ತ ತಡೆಗೋಡೆ ನಿರ್ಮಿಸದ ಕಾರಣ ಮಣ್ಣು ಕೊಚ್ಚಿ ಹೋಗ್ತಿದೆ. ಹೇಮಾವತಿ ನದಿ ಉಕ್ಕಿಹರಿದ ಪರಿಣಾಮ ಹೊಳೆಮಲ್ಲೇಶ್ವರ ದೇಗುಲದ ಮೆಟ್ಟಿಲು ಜಲಾವೃವಾಗಿವೆ. ಜಂಬರಡಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಕೊಡಗಿನ ಕರ್ತೋಜಿ ಮುಖ್ಯರಸ್ತೆ ಬಿರುಕುಬಿಟ್ಟಿದ್ದು, ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಹೆದ್ದಾರಿ ಪ್ರಾಧಿಕಾರ ಕಾಮಗಾರಿಗೆ ಮುಂದಾಗಿದೆ. ಕೊಪ್ಪ ತಾಲೂಕಿನ ಗುಡ್ಡೆತೋಟದಲ್ಲಿ 2 ಮನೆಗಳ ಮೇಲೆ ಗುಡ್ಡ ಕುಸಿದಿದೆ. ಭದ್ರಾನದಿ ಅಪಾಯದ ಮಟ್ಟ ಮೀರಿದ್ದು, ಕಳಸ ಸಮೀಪದ ಹೆಬ್ಬಾಳೆ ಸೇತುವೆ ಮೇಲೆ ಸಂಚಾರ ನಿರ್ಬಂಧಿಸಲಾಗಿದೆ. ಶೃಂಗೇರಿ ಜಲಾವೃತವಾಗಿದ್ದು, ತುಂಗೆ ಶಾಂತಿಸಲೆಂದು ಶೃಂಗೇರಿಮಠದ ಕಿರಿಯ ಶ್ರೀಗಳು ಪೂಜೆ ಸಲ್ಲಿಸಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರಿನ ಪ್ರವಾಸಿತಾಣಗಳಿಗೆ ಸದ್ಯಕ್ಕೆ ಯಾರು ಬರಬೇಡಿ ಎಂದು ಡಿಸಿ ಮನವಿ ಮಾಡಿದ್ದಾರೆ.

    ದಕ್ಷಿಣ ಒಳನಾಡಿಗೂ ಜಲದಿಗ್ಭಂದನ:
    ರಣಮಳೆಯ ಆರ್ಭಟದಿಂದಾಗಿ ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಹಲವೆಡೆ ಮಳೆ ಅಬ್ಬರವಿದೆ. ಕಾವೇರಿಕೊಳ್ಳದ ಜಲಾಶಯಗಳಿಗೆ ನೀರಿನ ಒಳಹರಿವು-ಹೊರಹರಿವು ಹೆಚ್ಚಿದೆ. 24 ಗಂಟೆಯಲ್ಲಿ ಕೆಆರ್‌ಎಸ್‌ಗೆ 3 ಟಿಎಂಸಿ ನೀರು ಸೇರಿದೆ. ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ಅಧಿಕ ನೀರು ಬಿಟ್ಟಿರುವ ಕಾರಣ ನಂಜನಗೂಡಿನ ಹಳ್ಳದಕೇರಿಗೆ ನೀರು ನುಗ್ಗಿದ್ದು, ಬಡಾವಣೆ ಮುಳುಗಡೆ ಭೀತಿ ಎದುರಿಸ್ತಿದೆ. ಕಪಿಲಾ ನದಿ ತೀರದಲ್ಲೂ ಪ್ರವಾಹ ಭೀತಿ ಎದುರಾಗಿದೆ. ಬಿದಿರಹಳ್ಳಿ ಸೇತುವೆ ಮುಳುಗಡೆಯಾಗಿದೆ. ಸರಗೂರು ತಾಲೂಕಿನ ಹಲವು ಗ್ರಾಮಗಳ ಸಂಪರ್ಕಕ್ಕೆ ತೊಂದರೆಯಾಗಿದೆ.

  • ಕಬಿನಿ ಡ್ಯಾಂ ಭರ್ತಿ – 25 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ

    ಕಬಿನಿ ಡ್ಯಾಂ ಭರ್ತಿ – 25 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ

    ಮೈಸೂರು: ಕೇರಳದ ವೈನಾಡು ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವ ಕಾರಣ ಮೈಸೂರು (Mysuru) ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ಜಲಾಶಯ (Kabini Dam) ಭರ್ತಿಯಾಗಿದೆ.

    ದಿನದಿಂದ ದಿನಕ್ಕೆ ಜಲಾಶಯದ ಒಳಹರಿವು ಹೆಚ್ಚಾಗುತ್ತಿರುವ ಕಾರಣ ಇಂದು 4 ಕ್ರಸ್ಟ್‌ ಗೇಟ್‌ ತೆರೆದು 25 ಸಾವಿರ ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ನಿನ್ನೆ 15 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡಲಾಗಿದೆ. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂಗೆ 25,000 ಕ್ಯುಸೆಕ್‌ಗೂ ಅಧಿಕ ನೀರು

    ಕಬಿನಿ ಜಲಾಶಯ ಗರಿಷ್ಠ ಮಟ್ಟ 2284 ಅಡಿ ಆಗಿದ್ದು, ಇಂದಿನ ನೀರಿನ ಮಟ್ಟ 2283 ಅಡಿ ಇದೆ. ಒಳ ಹರಿವು 20,217 ಕ್ಯುಸೆಕ್‌ ಇದೆ.  25 ಸಾವಿರ  ಕ್ಯುಸೆಕ್‌ ನೀರು ಬಿಡುಗಡೆ ಮಾಡಿದ ಪರಿಣಾಮ ಹಲವು ಸಣ್ಣ ಸೇತುವೆಗಳು ಮುಳುಗಡೆಯಾಗಲಿದೆ. ಮತ್ತಷ್ಟು ಮಳೆಯಾಗಿ  50 ಸಾವಿರ ಕ್ಯುಸೆಕ್‌ ನೀರನ್ನು  ಬಿಡುಗಡೆ ಮಾಡಿದರೆ  ದೊಡ್ಡ ಸೇತುವೆಗಳು ಮುಳುಗಡೆಯಾಗಲಿದೆ.

  • ಕೆಆರ್‌ಎಸ್ ಡ್ಯಾಂಗೆ 10,121 ಕ್ಯುಸೆಕ್‌ ಒಳಹರಿವು

    ಕೆಆರ್‌ಎಸ್ ಡ್ಯಾಂಗೆ 10,121 ಕ್ಯುಸೆಕ್‌ ಒಳಹರಿವು

    ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮತ್ತೆ ಚುರುಕು ಪಡೆದುಕೊಂಡ ಹಿನ್ನೆಲೆ ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಗೆ (KRS Dam) ಬರುವ ನೀರಿನ ಪ್ರಮಾಣ ಹೆಚ್ಚಾಗಿದೆ.

    ನಿನ್ನೆಯಿಂದ ಕೊಡಗು (Kodagu) ಭಾಗದಲ್ಲಿ ಮಳೆ ಬೀಳುತ್ತಿರುವ ಹಿನ್ನೆಲೆ 10,124 ಕ್ಯುಸೆಕ್‌ ನೀರು‌ ಹರಿದು ಬರುತ್ತಿದೆ. ಗರಿಷ್ಠ 124.80 ಅಡಿ ಎತ್ತರ ಇರುವ ಜಲಾಶಯದಲ್ಲಿ 105.40 ಅಡಿ ಭರ್ತಿಯಾಗಿದೆ. 49.452 ಟಿಎಂಸಿ  ಗರಿಷ್ಠ ಸಾಮರ್ಥ್ಯದ ಕೆಆರ್‌ಎಸ್‌ನಲ್ಲಿ 27.347 ಟಿಎಂಸಿ ನೀರು ಶೇಖರಣೆಯಾಗಿದೆ. ಡ್ಯಾಂನಿಂದ‌ ಕುಡಿಯುವ ನೀರಿಗೆ ಹಾಗೂ ನಾಲೆಗಳಿಗೆ 2,260 ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: Valmiki Scam | ನಾಪತ್ತೆಯಾಗಿದ್ದ ದದ್ದಲ್‌ ವಿಧಾನಸೌಧದಲ್ಲಿ ಪ್ರತ್ಯಕ್ಷ

     

    ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬೀಳುತ್ತಿರುವ ಹಿನ್ನೆಲೆ ನಾಳೆ ಕೆಆರ್‌ಎಸ್ ಡ್ಯಾಂಗೆ 20 ಸಾವಿರಕ್ಕೂ ಅಧಿಕ ಕ್ಯುಸೆಕ್‌ ಒಳಹರಿವು ಬರುವ ಸಾಧ್ಯತೆ ಇದೆ. ಕಬಿನಿ (Kabini Dam) ಮತ್ತು ಹಾರಂಗಿ ಜಲಾಶಯದಿಂದ (Harangi Dam) ನದಿಗೆ ನೀರು ಬಿಡುವ ಕಾರಣ ಕೆಆರ್‌ಎಸ್‌ ಒಳ ಹರಿವು ಹೆಚ್ಚಾಗುತ್ತಿದೆ.

  • ಕೆಆರ್‌ಎಸ್, ಕಬಿನಿಯಿಂದ ಇಂದು ತಮಿಳುನಾಡಿಗೆ 6,075 ಕ್ಯೂಸೆಕ್ ನೀರು

    ಕೆಆರ್‌ಎಸ್, ಕಬಿನಿಯಿಂದ ಇಂದು ತಮಿಳುನಾಡಿಗೆ 6,075 ಕ್ಯೂಸೆಕ್ ನೀರು

    ಮಂಡ್ಯ: ತಮಿಳುನಾಡಿಗೆ (Tamil Nadu) ನೀರು (Water) ಬಿಡುಗಡೆ ಮುಂದುವರಿಕೆಯಾಗಿದ್ದು, ಕೆಆರ್‌ಎಸ್ (KRS) ಹಾಗೂ ಕಬಿನಿ (Kabini) ಡ್ಯಾಂಗಳಿಂದ ಇಂದು 6,075 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.

    ಪ್ರಾಧಿಕಾರ ಹಾಗೂ ಸುಪ್ರೀಂ ಆದೇಶದಂತೆ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಕೆಆರ್‌ಎಸ್‌ನಿಂದ 3,575 ಕ್ಯೂಸೆಕ್, ಕಬಿನಿಯಿಂದ 2,500 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. 2 ಡ್ಯಾಂಗಳಿಂದ ತಮಿಳುನಾಡಿಗೆ ಇಂದು 6,075 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

    ಬಿಳುಗುಂಡ್ಲುಗೆ 5 ಸಾವಿರ ಕ್ಯೂಸೆಕ್ ನೀರು ತಲುಪಬೇಕು ಎಂದರೆ ಕನಿಷ್ಠ ಒಂದಿಂದ ಒಂದೂವರೆ ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರು ಬಿಡಬೇಕು. ಹೀಗಾಗಿ ಪ್ರತಿನಿತ್ಯದ ಕೋಟಾ 5 ಸಾವಿರ ನೀರು ತಲುಪಿಸಲು ಡ್ಯಾಂಗಳಿಂದ 6,075 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಕೆಆರ್‌ಎಸ್ ಡ್ಯಾಂನಿಂದ ನದಿ ಹಾಗೂ ನಾಲೆಗಳಿಗೆ ಸೇರಿ 5,691 ಕ್ಯೂಸೆಕ್ ಹೊರ ಹರಿವು ಇದ್ದು, ಕಬಿನಿಯಲ್ಲಿ ನದಿಗೆ ಮಾತ್ರ 2,500 ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ಇದನ್ನೂ ಓದಿ: ಕಾವೇರಿಗಾಗಿ ಶುಕ್ರವಾರ ಕರ್ನಾಟಕ ಬಂದ್- 100ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ

    ಕೆಆರ್‌ಎಸ್ ಡ್ಯಾಂ ಇಂದಿನ ನೀರಿನ ಮಟ್ಟ:
    ಗರಿಷ್ಠ ಮಟ್ಟ – 124.80 ಅಡಿ
    ಇಂದಿನ ಮಟ್ಟ – 97 ಅಡಿ
    ಒಳ ಹರಿವು – 7,451 ಕ್ಯೂಸೆಕ್
    ಹೊರ ಹರಿವು – 5,691 ಕ್ಯೂಸೆಕ್
    ಗರಿಷ್ಠ ಸಂಗ್ರಹ ಸಾಮರ್ಥ್ಯ – 49.452 ಟಿಎಂಸಿ
    ಇಂದು ಸಂಗ್ರಹ ಇರುವ ನೀರು – 20.548 ಟಿಎಂಸಿ ಇದನ್ನೂ ಓದಿ: ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ: ಸಿದ್ದರಾಮಯ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭುಗಿಲೆದ್ದ ಆಕ್ರೋಶದ ನಡುವೆಯೂ ತಮಿಳುನಾಡಿಗೆ ನೀರು; KRS ನೀರಿನ ಮಟ್ಟ 96 ಅಡಿಗೆ ಕುಸಿತ

    ಭುಗಿಲೆದ್ದ ಆಕ್ರೋಶದ ನಡುವೆಯೂ ತಮಿಳುನಾಡಿಗೆ ನೀರು; KRS ನೀರಿನ ಮಟ್ಟ 96 ಅಡಿಗೆ ಕುಸಿತ

    ಮಂಡ್ಯ: ಸುಪ್ರೀಂ ಕೋರ್ಟ್ (Supreme Court) ಆದೇಶದಂತೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದು, KRS ಜಲಾಶಯದ ನೀರಿನ ಮಟ್ಟ 96.90 ಅಡಿಗೆ ಕುಸಿದಿದೆ.

    ನಿನ್ನೆ ತಮಿಳುನಾಡಿಗೆ (TamilNadu) 2,673 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು, ಇಂದು 3,000 ಕ್ಯೂಸೆಕ್‌ಗೆ ಏರಿಕೆಯಾಗಿದೆ. ತಮಿಳುನಾಡಿಗೆ ಕೆಆರ್‌ಎಸ್‌ನಿಂದ ಬಿಡುಗಡೆ ಮಾಡಲಾದ ನೀರಿನ ಪ್ರಮಾಣದಲ್ಲಿ 300 ಕ್ಯೂಸೆಕ್‌ನಷ್ಟು ಹೆಚ್ಚುವರಿ ನೀರು ಹರಿಸಲಾಗಿದೆ. ಇದನ್ನೂ ಓದಿ: ಇಂದು ಮಂಡ್ಯ, ಮದ್ದೂರ್ ಬಂದ್- ಪೊಲೀಸ್ ಬಿಗಿ ಭದ್ರತೆ

    ಮತ್ತೊಂಡೆದೆ ಕೆಆರ್‌ಎಸ್ ಜಲಾಶಯದ (KRS Reservoir) ಹೊರ ಹರಿವಿನ ಪ್ರಮಾಣ ಹೆಚ್ಚಾಗಿದ್ದರೂ ಒಳಹರಿವಿನ ಪ್ರಮಾಣ ಮಾತ್ರ ಕಡಿಮೆಯಾಗಿದೆ. ನಿನ್ನೆ 5,845 ಕ್ಯೂಸೆಕ್ ಇದ್ದ ಒಳ ಹರಿವಿನ ಪ್ರಮಾಣ ಇಂದು 5,147 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಇದರಿಂದ 124.80 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದ ಮಟ್ಟ 96.90 ಅಡಿಗೆ ಕುಸಿದಿದೆ. ಇದನ್ನೂ ಓದಿ: ತೀವ್ರ ಆಕ್ರೋಶದ ನಡುವೆಯೂ KRS, ಕಬಿನಿಯಿಂದ ತಮಿಳುನಾಡಿಗೆ 5,000 ಕ್ಯೂಸೆಕ್ ನೀರು

    ಕೆಆರ್‌ಎಸ್ ಇಂದಿನ ನೀರಿನ ಮಟ್ಟ
    ಗರಿಷ್ಟ ಮಟ್ಟ: 124.80 ಅಡಿಗಳು
    ಇಂದಿನ ಮಟ್ಟ: 96.90 ಅಡಿಗಳು
    ಗರಿಷ್ಠ ಸಂಗ್ರಹ: 49.452 ಟಿಎಂಸಿ
    ಇಂದಿನ ಸಂಗ್ರಹ: 20.477 ಟಿಎಂಸಿ
    ಒಳಹರಿವು: 5,147 ಕ್ಯೂಸೆಕ್
    ಹೊರಹರಿವು: 6,034 ಕ್ಯೂಸೆಕ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೀವ್ರ ಆಕ್ರೋಶದ ನಡುವೆಯೂ KRS, ಕಬಿನಿಯಿಂದ ತಮಿಳುನಾಡಿಗೆ 5,000 ಕ್ಯೂಸೆಕ್ ನೀರು

    ತೀವ್ರ ಆಕ್ರೋಶದ ನಡುವೆಯೂ KRS, ಕಬಿನಿಯಿಂದ ತಮಿಳುನಾಡಿಗೆ 5,000 ಕ್ಯೂಸೆಕ್ ನೀರು

    ಮಂಡ್ಯ: ತಮಿಳುನಾಡಿಗೆ (Tamil Nadu) ನೀರು ಹರಿಸಬೇಕೆಂಬ ಸುಪ್ರೀಂ ಕೋರ್ಟ್ (Supreme Court) ಆದೇಶದ ಬೆನ್ನಲ್ಲೇ ಮಂಡ್ಯ (Mandya) ಜಿಲ್ಲೆಯಲ್ಲಿ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. ಈ ನಡುವೆಯೂ ತಮಿಳುನಾಡಿಗೆ ಕಾವೇರಿ ಹರಿದಿದ್ದು, ಶುಕ್ರವಾರವೂ 5 ಸಾವಿರ ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ.

    ತಮಿಳುನಾಡಿಗೆ ಕೆಆರ್‌ಎಸ್ ಜಲಾಶಯದಿಂದ (KRS Reservoir) 3 ಸಾವಿರ ಕ್ಯೂಸೆಕ್ ನೀರುಬಿಡುಗಡೆ ಮಾಡಲಾಗಿದೆ. ಸೀಪೇಜ್ ಹಾಗೂ ನಾಲೆಗೆ ಹರಿಸಿರುವ ನೀರಿಲ್ಲೇ 3 ಸಾವಿರ ತಮಿಳುನಾಡಿಗೆ ಹರಿಸಲಾಗಿದ್ದು, ಉಳಿದ 2 ಸಾವಿರ ಕ್ಯೂಸೆಕ್ ನೀರನ್ನ ನೀರು ಕಬಿನಿಯಿಂದ (Kabini Reservoir) ಹರಿಸಲಾಗಿದೆ. ಒಟ್ಟಾರೆಯಾಗಿ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಮತ್ತು ನಾಲೆಗಳಿಗೆ ಸೇರಿ 5,734 ಕ್ಯೂಸೆಕ್ ನೀರು ಬಿಡಲಾಗಿದೆ.

    ಕೆಆರ್‌ಎಸ್ ಜಲಾಶಯದ ಒಳ ಹರಿವು 5,845 ಕ್ಯೂಸೆಕ್ ಇದ್ದು, ಡ್ಯಾಂನ ಇಂದಿನ ನೀರಿನ ಮಟ್ಟ 97.02 ಅಡಿಗೆ ಕುಸಿದಿದೆ. ಡ್ಯಾಂನ ಇಂದಿನ ಸಾಂದ್ರತೆ 20.563 ಟಿಎಂಸಿ ಇದೆ. ಇದನ್ನೂ ಓದಿ: ಕಾವೇರಿ ಹೋರಾಟಕ್ಕೆ ನೇರವಾಗಿ ಇಳಿದ ನಟ ಅಭಿಷೇಕ್ ಅಂಬರೀಶ್

    ಇನ್ನೂ ಮಂಡ್ಯದಲ್ಲಿ ಅನ್ನದಾತರ ಆಕ್ರೋಶ ಭುಗಿಲೆದ್ದಿದ್ದು, ಶುಕ್ರವಾರವೂ (ಇಂದು) ಜಿಲ್ಲೆಯ ಹಲವೆಡೆ ಸುಪ್ರೀಂ ತೀರ್ಪಿನ ವಿರುದ್ಧ ಪ್ರತಿಭಟನೆ ಕೈಗೊಳ್ಳಲಾಗಿದೆ. ರೈತರ ಹೋರಾಟಕ್ಕೆ ಇಂದು ಸಂಸದೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಸಾಥ್ ನೀಡಿದ್ದು, ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಶಿವಶಕ್ತಿ ಬಿಂದುವಿನಲ್ಲಿ ಲ್ಯಾಂಡರ್, ರೋವರ್ – ವಿಕ್ರಮ್, ಪ್ರಗ್ಯಾನ್‌ಗೆ ಸಿಗುತ್ತಾ ಮರುಜೀವ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಬಿನಿಯಿಂದ 38 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ- 50ಕ್ಕೂ ಹೆಚ್ಚು ಹಳ್ಳಿಗಳ ಪ್ರಮುಖ ಮಾರ್ಗ ಬಂದ್

    ಕಬಿನಿಯಿಂದ 38 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ- 50ಕ್ಕೂ ಹೆಚ್ಚು ಹಳ್ಳಿಗಳ ಪ್ರಮುಖ ಮಾರ್ಗ ಬಂದ್

    ಮೈಸೂರು: ಜಿಲ್ಲೆಯ ಎಚ್.ಡಿ. ಕೋಟೆಯ ಕಬಿನಿ ಜಲಾಶಯ ಭರ್ತಿಯಾಗಿದೆ. ಕಬಿನಿ ಜಲಾಶಯದ 4 ಕ್ರೆಸ್ಟ್ ಗೇಟ್‍ಗಳ ಮೂಲಕ ಒಟ್ಟು 38 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.

    ಜಲಾಶಯದ ಒಳ ಹರಿವು ಇನ್ನೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ 2 ಅಡಿ ಭರ್ತಿ ಮಾಡದೆ ನೀರಿನ ಹೊರ ಹರಿವು ಹೆಚ್ಚು ಮಾಡಲಾಗಿದೆ. ಜಲಾಶಯದ ಸುರಕ್ಷತಾ ದೃಷ್ಟಿಯಿಂದ ನೀರಿನ ಒಳ ಹರಿವು ಕಡಿಮೆ ಆಗುವವರೆಗೂ ಇದೇ ರೀತಿ ಎರಡು ಅಡಿ ಬಾಕಿ ಉಳಿಸಿಕೊಳ್ಳಲಾಗುತ್ತದೆ. ಈ ನೀರು ನಂಜನಗೂಡು ಮೂಲಕ ಟಿ. ನರಸೀಪುರದ ಸಂಗಮ ಸೇರಿ ಅಲ್ಲಿಂದ ಗಗನಚುಕ್ಕಿ ಹಾದು ತಮಿಳುನಾಡು ಸೇರುತ್ತದೆ. ಇದನ್ನೂ ಓದಿ: ಅನ್ನ ಹಾಕಿದ ಮನೆಗೆ ದ್ರೋಹ ಬಗೆದ – ಪ್ರೇಯಸಿಗಾಗಿ ಮಾಲೀಕರಿಗೆ ಉಂಡೆ ನಾಮ ಹಾಕಿದ ಖದೀಮ

    ಕಬಿನಿ ಜಲಾಶಯದಿಂದ 38 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದ್ದು, ಇದರಿಂದ ಈ ಭಾಗದ ಹಲವು ಸೇತುವೆಗಳು ಮುಳುಗಡೆಯಾಗಿವೆ. ಪ್ರಮುಖವಾಗಿ ಬಿದರಹಳ್ಳಿ, ಎನ್. ಬೇಗೂರು ಪಂಚಾಯಿತಿ ವ್ಯಾಪ್ತಿಯ 50ಕ್ಕೂ ಹಳ್ಳಿಗಳ ಪ್ರಮುಖ ಸಂಪರ್ಕ ಮಾರ್ಗವೇ ಬಂದ್ ಆಗಿದೆ. ಇದರಿಂದ ಈ ಹಳ್ಳಿಯ ಜನರು ತಾತ್ಕಾಲಿಕ ವಾಗಿ ಪರ್ಯಾಯ ಮಾರ್ಗ ಬಳಸುತ್ತಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಹೊಸ ಲಾಂಛನಕ್ಕೆ ವಿಪಕ್ಷಗಳ ಆಕ್ರೋಶ – ಆಕ್ರಮಣಕಾರಿ ಲಾಂಛನ ಅಂತ ಕಟು ಟೀಕೆ

    Live Tv
    [brid partner=56869869 player=32851 video=960834 autoplay=true]

  • ಕಬಿನಿ ಜಲಾಶಯದಲ್ಲಿ ಅಧಿಕ ನೀರು ಹೊರಕ್ಕೆ- ನಂಜನಗೂಡಿನಲ್ಲಿ ಪ್ರವಾಹ ಭೀತಿ

    ಕಬಿನಿ ಜಲಾಶಯದಲ್ಲಿ ಅಧಿಕ ನೀರು ಹೊರಕ್ಕೆ- ನಂಜನಗೂಡಿನಲ್ಲಿ ಪ್ರವಾಹ ಭೀತಿ

    ಮೈಸೂರು: ಜಿಲ್ಲೆಯ ಎಚ್.ಡಿ. ಕೋಟೆಯ ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವ ಪರಿಣಾಮ ಕಪಿಲಾ ನದಿ ತುಂಬಿ ಹರಿಯುತ್ತಿದ್ದು ಪ್ರವಾಹ ಭೀತಿ ಸೃಷ್ಟಿಯಾಗಿದೆ.

    ಭಾರೀ ಮಳೆಗೆ ನಂಜನಗೂಡಿನ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಹದಿನಾರು ಕಾಲು ಮಂಟಪ ಬಹುತೇಕ ಮುಳುಗಡೆಯಾಗಿದೆ. ಹೀಗಾಗಿ ಭಕ್ತರಿಗೆ ಸ್ನಾನಘಟ್ಟದಲ್ಲಿ ಸ್ನಾನಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನೂ ಎರಡು ದಿನ ಇದೇ ಪ್ರಮಾಣದಲ್ಲಿ ನೀರಿನ ಹೊರ ಹರಿವು ಇದ್ದರೆ, ನಂಜನಗೂಡಿನ ಬಹುತೇಕ ತಗ್ಗು ಪ್ರದೇಶಗಳ ಮನೆಗಳು ಮುಳುಗಡೆಯಾಗುವುದು ನಿಶ್ಚಿತವಾಗಿದೆ. ಇದನ್ನೂ ಓದಿ: ಇಂದಿನಿಂದ ಆಗುಂಬೆ ಘಾಟಿ ರಸ್ತೆಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ

    ಪರಶುರಾಮ ದೇವಸ್ಥಾನ ಮುಳುಗಡೆ: ಕಬಿನಿ ಜಲಾಶಯದಿಂದ ಹೆಚ್ಚಿನ ನೀರು ಹೊರ ಬಿಡುತ್ತಿರುವ ಕಾರಣ ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ನಂಜನಗೂಡು ಪಟ್ಟಣದ ಹೊರ ವಲಯದಲ್ಲಿನ ಪರಶುರಾಮ ದೇವಸ್ಥಾನ ಮುಳುಗಡೆಯಾಗಿದೆ. ಪರಶುರಾಮ ದೇವರಿಗೆ ಜಲದಿಗ್ಭಂಧನ ಸೃಷ್ಟಿಯಾಗಿದ್ದು, ನೀರಿನ ಪ್ರಮಾಣ ತಗ್ಗುವವರೆಗೂ ದೇವರಿಗೆ ಪೂಜೆ ಇಲ್ಲ. ಇದನ್ನೂ ಓದಿ: ಗೊಟಬಯ ರಾಜಪಕ್ಸೆ ಇನ್ನೂ ದೇಶದಲ್ಲಿಯೇ ಇದ್ದಾರೆ: ಮಹಿಂದಾ ಯಾಪಾ ಅಬೇವರ್ಧನ

    Live Tv
    [brid partner=56869869 player=32851 video=960834 autoplay=true]

  • ಕಬಿನಿ ಶಕ್ತಿಮಾನ್ ಇನ್ನಿಲ್ಲ

    ಕಬಿನಿ ಶಕ್ತಿಮಾನ್ ಇನ್ನಿಲ್ಲ

    ಮೈಸೂರು: ಕಬಿನಿ ಶಕ್ತಿಮಾನ್ ಎಂದೇ ಪ್ರತೀತಿ ಪಡೆದಿದ್ದ ನೀಳ ದಂತದ, ಸುಂದರ ನಡಿಗೆಯ ಭೋಗೇಶ್ವರ ಹೆಸರಿನ ಆನೆ ಇಂದು ನಿಧನ ಹೊಂದಿದೆ.

    ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಆನೆಯ ಕಳೆಬರಹ ಪತ್ತೆಯಾಗಿದ್ದು, ಕಬಿನಿ ಹಿನ್ನಿರಿನಲ್ಲಿ ಪ್ರವಾಸಿಗರಿಗೆ ದರ್ಶನ ನೀಡುತ್ತಿದ್ದ ಭೋಗೇಶ್ವರ ವಯೋಸಹಜ ನಿಧನ ಹೊಂದಿದೆ. ಕಬಿನಿಯ ಹಿರಿಯಣ್ಣನಿಗೆ 60 ವರ್ಷಕ್ಕೂ ಹೆಚ್ಚು ವಯಸ್ಸಾಗಿತ್ತು. ಇದನ್ನೂ ಓದಿ: ಬೂದಿಮುಚ್ಚಿದ ಕೆಂಡದಂತೆ ಭಾರತ – ಯುಪಿಯಲ್ಲಿ 250ಕ್ಕೂ ಗಲಭೆಕೋರರು ಅರೆಸ್ಟ್

    ಸುಮಾರು 4 ಅಡಿಗೂ ಉದ್ದದ ನೀಳ ದಂತ, ಸುಂದರ ನಡಿಗೆ ಮೂಲಕವೇ ಪ್ರಾಣಿ ಪ್ರೀಯರ ಮನಗೆದ್ದಿದ್ದ ಆನೆ ಇದಾಗಿತ್ತು.