Tag: ಕಬಾಲಿ

  • ಡ್ರಗ್ಸ್ ಪ್ರಕರಣದ ಸಂಕಷ್ಟ: ನಟಿ ಅಶು ರೆಡ್ಡಿ ಫೋನ್ ನಂಬರ್ ಲೀಕ್

    ಡ್ರಗ್ಸ್ ಪ್ರಕರಣದ ಸಂಕಷ್ಟ: ನಟಿ ಅಶು ರೆಡ್ಡಿ ಫೋನ್ ನಂಬರ್ ಲೀಕ್

    ಕಾಲಿವುಡ್ (Kollywood) ನಟಿ ಅಶು ರೆಡ್ಡಿ ( ಹೆಸರು ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಕೇಳಿ ಬಂದಿತ್ತು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿರುವ ಕಬಾಲಿ (Kabali) ಸಿನಿಮಾ ಖ್ಯಾತಿಯ ನಿರ್ಮಾಪಕ ಕೆ.ಪಿ ಚೌಧರಿ ಜೊತೆ ಅಶು ರೆಡ್ಡಿ ಸೇರಿದಂತೆ ಹಲವರು ನಿರಂತರ ಸಂಪರ್ಕದಲ್ಲಿದ್ದರು ಎನ್ನುವ ಮಾಹಿತಿಯನ್ನು ಪೊಲೀಸರು ಹೊರ ಹಾಕಿದ್ದರು. ಚೌಧರಿ ಜೊತೆ ಸಂಪರ್ಕದಲ್ಲಿರುವ ಫೋನ್ ನಂಬರ್ ಅನ್ನು ಪೊಲೀಸರು ವರದಿಯಲ್ಲಿ ಉಲ್ಲೇಖಿಸಿ ಬಿಡುಗಡೆ ಮಾಡಿದ್ದರು. ಈ ವರದಿಯೇ ಅಶುಗೆ ಮುಳುವಾಗಿದೆ.

    ಅಶು ರೆಡ್ಡಿ (Ashu Reddy)) ಫೋನ್ ನಂಬರ್ ಇರುವ ವರದಿಯನ್ನು ಬಿಡುಗಡೆ ಮಾಡಿದ್ದರಿಂದ ಅಶು ರೆಡ್ಡಿ ನಂಬರ್ ಎಲ್ಲ ಕಡೆ ಸಿಗುತ್ತಿದೆ. ಕೆಲವರು ಆ ವರದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರಿಂದ ಅಶು ರೆಡ್ಡಿ ನಂಬರ್ ಬಹುತೇಕರಿಗೆ ಸಿಕ್ಕಿದೆ. ದಿನಕ್ಕೆ ಸಾವಿರಾರು ಕರೆಗಳನ್ನು ಅಶು ಸ್ವೀಕರಿಸುವಂತಾಗಿದೆ. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್

    ಈ ಕುರಿತು ವಿಡಿಯೋ ಮಾಡಿರುವ ಅಶು ರೆಡ್ಡಿ, ಈ ಕೇಸಿಗೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಹೆಸರು ಮತ್ತು ಫೋನ್ ನಂಬರ್ ಅನ್ನು ರಿಲೀಸ್ (Number Leak) ಮಾಡಿದ್ದರಿಂದ ನನಗೆ ಸಾವಿರಾರು ಕರೆಗಳು ಬರುತ್ತಿವೆ. ಆತಂಕವಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ತಾವು ವಿದೇಶದಲ್ಲಿ ಇರುವುದಾಗಿಯೂ ತಿಳಿಸಿರುವ ಅವರು, ಬೇಕಾಬಿಟ್ಟಿ ತಮ್ಮ ಬಗ್ಗೆ ಸುದ್ದಿ ಮಾಡುತ್ತಿರುವವರ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ.

    ಅಶು ರೆಡ್ಡಿ ಇಷ್ಟು ದಿನ ಗ್ಲ್ಯಾಮರಸ್ ಫೋಟೋ ಮೂಲಕ ಗಮನ ಸೆಳೆಯುತ್ತಿದ್ದ ಅವರು ಈಗ ಡ್ರಗ್ ಕೇಸ್ ಮೂಲಕ ಸುದ್ದಿ ಆಗಿದ್ದಾರೆ. ರಜನಿಕಾಂತ್ ನಟನೆಯ ‘ಕಬಾಲಿ’ ಚಿತ್ರದ ನಿರ್ಮಾಪಕ ಕೆಪಿ ಚೌಧರಿ (KP Chaudhary) ಅವರು ಡ್ರಗ್ (Drugs) ಕೇಸ್‌ನಲ್ಲಿ ಅಂದರ್ ಆಗಿದ್ದಾರೆ. ಅಶು ರೆಡ್ಡಿ ಜೊತೆ ಅವರು ನೂರಾರು ಬಾರಿ ಫೋನ್ ಮೂಲಕ ಮಾತನಾಡಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ. ಡ್ರಗ್ ಮಾರಾಟ ಮಾಡುವ ವ್ಯಕ್ತಿಯ ಜೊತೆ ಇಷ್ಟೊಂದು ದೂರವಾಣಿ ಕರೆ ಏಕೆ ಎನ್ನುವ ಪ್ರಶ್ನೆ ಪೊಲೀಸರಲ್ಲಿ ಮೂಡಿದೆ.

     

    ಅಶು ರೆಡ್ಡಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ತೆಲುಗಿನ ಬಿಗ್ ಬಾಸ್‌ನಲ್ಲಿ (Bigg Boss Telagu) ಗಮನ ಸೆಳೆದ ಅಶು ರೆಡ್ಡಿಗೆ ಟಿವಿ ಶೋ ಮೂಲಕ ಜನಪ್ರಿಯತೆ ಪಡೆದರು. ಈಗ ಅವರ ಹೆಸರು ಡ್ರಗ್ಸ್ ಕೇಸ್‌ನಲ್ಲಿ ಅವರ ಹೆಸರು ಕೇಳಿ ಬಂದಿದೆ. ಕಬಾಲಿ ನಿರ್ಮಾಪಕ ಅವರು ನೇರವಾಗಿ ಅಶು ರೆಡ್ಡಿ ಬಗ್ಗೆ ಆರೋಪ ಮಾಡಿಲ್ಲ. ಇವರ ಮಧ್ಯೆ ಲಿಂಕ್ ಇರೋದು ವಿಚಾರಣೆ ವೇಳೆ ಗೊತ್ತಾಗಿದೆ. ಅವರ ಬಳಿ ಇದ್ದ ಮೂರು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೆಪಿ ಚೌಧರಿ ಅವರ ಒಂದು ಮೊಬೈಲ್‌ನಿಂದ ಅಶು ರೆಡ್ಡಿಗೆ ನೂರಾರು ಬಾರಿ ಫೋನ್ ಕಾಲ್ ಹೋಗಿದೆ. ಇದು ಏಕೆ ಎಂಬ ಪ್ರಶ್ನೆ ಮೂಡಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಕಾಲಿವುಡ್ ಡ್ರಗ್ಸ್ ಕೇಸ್ ನಟಿ ಅಶು ರೆಡ್ಡಿ ಹೆಸರು ಬೆನ್ನಲ್ಲೇ ಇನ್ನೂ ಅನೇಕರಿಗೆ ನಡುಕ

    ಕಾಲಿವುಡ್ ಡ್ರಗ್ಸ್ ಕೇಸ್ ನಟಿ ಅಶು ರೆಡ್ಡಿ ಹೆಸರು ಬೆನ್ನಲ್ಲೇ ಇನ್ನೂ ಅನೇಕರಿಗೆ ನಡುಕ

    ಸೂಪರ್ ಹಿಟ್ ಸಿನಿಮಾ ‘ಕಬಾಲಿ’ (Kabali) ನಿರ್ಮಾಪಕ ಕೆ.ಪಿ ಚೌಧರಿ (Kp Chowdary) ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಆಗುವ ಮೂಲಕ ಕಾಲಿವುಡ್ (Kollywood) ಗೆ ಶಾಕ್ ನೀಡಿದ್ದರು. ಈ ಬಂಧನ ಕಾಲಿವುಡ್ ನಲ್ಲೇ ಸಾಕಷ್ಟು ಸಂಚಲನ ಮೂಡಿಸಿತ್ತು. ಈಗ ಅದೇ ಚೌಧರಿ ವಿಚಾರಣೆ ಸಂದರ್ಭದಲ್ಲಿ ಅನೇಕರ ಹೆಸರನ್ನು ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಅಶು ರೆಡ್ಡಿ (Ashu Reddy) ಹೆಸರು ಕೇಳಿ ಬಂದಿದೆ ಎಂದು ಹೇಳಲಾಗಿತ್ತು. ಅಶು ರೆಡ್ಡಿ ಹೆಸರು ಆಚೆ ಬರುತ್ತಿದ್ದಂತೆಯೇ ಸಾಕಷ್ಟು ಜನರಿಗೆ ನಡುಕ ಶುರುವಾಗಿದೆ.

    ನಟಿ ಅಶು ರೆಡ್ಡಿ ಈಗ ಸುದ್ದಿಯಲ್ಲಿದ್ದಾರೆ. ಇಷ್ಟು ದಿನ ಗ್ಲ್ಯಾಮರಸ್ ಫೋಟೋ ಮೂಲಕ ಗಮನ ಸೆಳೆಯುತ್ತಿದ್ದ ಅವರು ಈಗ ಡ್ರಗ್ ಕೇಸ್ ಮೂಲಕ ಸುದ್ದಿ ಆಗಿದ್ದಾರೆ. ರಜನಿಕಾಂತ್ ನಟನೆಯ ‘ಕಬಾಲಿ’ ಚಿತ್ರದ ನಿರ್ಮಾಪಕ ಕೆಪಿ ಚೌಧರಿ ಅವರು ಡ್ರಗ್ (Drugs) ಕೇಸ್‌ನಲ್ಲಿ ಅಂದರ್ ಆಗಿದ್ದಾರೆ. ಅಶು ರೆಡ್ಡಿ ಜೊತೆ ಅವರು ನೂರಾರು ಬಾರಿ ಫೋನ್ ಮೂಲಕ ಮಾತನಾಡಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ. ಡ್ರಗ್ ಮಾರಾಟ ಮಾಡುವ ವ್ಯಕ್ತಿಯ ಜೊತೆ ಇಷ್ಟೊಂದು ದೂರವಾಣಿ ಕರೆ ಏಕೆ ಎನ್ನುವ ಪ್ರಶ್ನೆ ಪೊಲೀಸರಲ್ಲಿ ಮೂಡಿದೆ.

    ಅಶು ರೆಡ್ಡಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ತೆಲುಗಿನ ಬಿಗ್ ಬಾಸ್‌ನಲ್ಲಿ (Bigg Boss Telagu) ಗಮನ ಸೆಳೆದ ಅಶು ರೆಡ್ಡಿಗೆ ಟಿವಿ ಶೋ ಮೂಲಕ ಜನಪ್ರಿಯತೆ ಪಡೆದರು. ಈಗ ಅವರ ಹೆಸರು ಡ್ರಗ್ಸ್ ಕೇಸ್‌ನಲ್ಲಿ ಅವರ ಹೆಸರು ಕೇಳಿ ಬಂದಿದೆ. ಕಬಾಲಿ ನಿರ್ಮಾಪಕ ಅವರು ನೇರವಾಗಿ ಅಶು ರೆಡ್ಡಿ ಬಗ್ಗೆ ಆರೋಪ ಮಾಡಿಲ್ಲ. ಇವರ ಮಧ್ಯೆ ಲಿಂಕ್ ಇರೋದು ವಿಚಾರಣೆ ವೇಳೆ ಗೊತ್ತಾಗಿದೆ. ಅವರ ಬಳಿ ಇದ್ದ ಮೂರು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೆಪಿ ಚೌಧರಿ ಅವರ ಒಂದು ಮೊಬೈಲ್‌ನಿಂದ ಅಶು ರೆಡ್ಡಿಗೆ ನೂರಾರು ಬಾರಿ ಫೋನ್ ಕಾಲ್ ಹೋಗಿದೆ. ಇದು ಏಕೆ ಎಂಬ ಪ್ರಶ್ನೆ ಮೂಡಿದೆ.

    ಈ ಬಗ್ಗೆ ಅಶು ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ. ಇದೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಅನಾವಶ್ಯಕವಾಗಿ ಈ ಪ್ರಕರಣದಲ್ಲಿ ತನ್ನ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪೋಸ್ಟ್ ಶೇರ್ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಇದು ಸ್ಪಷ್ಟತೆ ಎಂದು ಅಶು ರೆಡ್ಡಿ ಹೇಳಿದ್ದಾರೆ.

    ಈ ಹಿಂದೆ ಇದೇ ಅಶು ರೆಡ್ಡಿ ಜೊತೆ ರಾಮ್ ಗೋಪಾಲ್ ವರ್ಮಾ(Ram Gopal Varma)  ಕಾಣಿಸಿಕೊಂಡಿದ್ದರು. ಅಶು ರೆಡ್ಡಿ ಅಚರ ಪಾದ ಹಿಡಿದಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಶೇರ್ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಆರ್‌ಜಿವಿ ಮತ್ತು ಅಶು ರೆಡ್ಡಿ ಭಾಗಿಯಾಗಿದ್ದರು. ಸಂದರ್ಶನದ ಬಳಿಕ ಅಶು ರೆಡ್ಡಿ ಅವರ ಕಾಲ ಬುಡದಲ್ಲಿ ಆರ್‌ಜಿವಿ ಕುಳಿತು ಆಕೆಯನ್ನ ಗುರಾಯಿಸುತ್ತಿರುವ ಫೋಟೋವನ್ನ ಆರ್‌ಜಿವಿ ಶೇರ್ ಮಾಡಿದ್ದು, ಫೋಟೋಗೆ ಭಾರಿ ಕಾಮೆಂಟ್ ಹರಿದು ಬಂದಿತ್ತು.

     

    ಅಶು ರೆಡ್ಡಿ ಸೋಫಾದ ಮೇಲೆ ಕುಳಿತಿದ್ದರು. ಅವರ ಹಿಡಿದು ಕುಳಿತಿರುವ ಆರ್‌ಜಿವಿ, ನಾನೇ ತುಂಬಾ ಡೇಂಜರಸ್ ಆದರೆ ಅಶು ರೆಡ್ಡಿ ನನಗಿಂತ ಡಬಲ್ ಡೇಂಜರಸ್ ಎಂದು ಆರ್‌ಜಿವಿ ಫೋಟೋ ಜತೆ ಪೋಸ್ಟ್‌ ಮಾಡಿದ್ದಾರೆ. ಅಲ್ಲದೇ ಅಶು ರೆಡ್ಡಿ ಜೊತೆ ಯಾರೆಂಬ ಕಾಂಟ್ಯಾಕ್ಟ್ ನಲ್ಲಿದ್ದರೋ ಅವರಿಗೆಲ್ಲ ವಿಚಾರಣೆ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ.

  • ಅಸಲಿ ‘ಕೆಜಿಎಫ್’ ಕಥೆ ಹೇಳ್ತಾರಂತೆ ತಮಿಳಿನ ಕಬಾಲಿ ಖ್ಯಾತಿಯ ನಿರ್ದೇಶಕ ಪಾ.ರಂಜಿತ್

    ಅಸಲಿ ‘ಕೆಜಿಎಫ್’ ಕಥೆ ಹೇಳ್ತಾರಂತೆ ತಮಿಳಿನ ಕಬಾಲಿ ಖ್ಯಾತಿಯ ನಿರ್ದೇಶಕ ಪಾ.ರಂಜಿತ್

    ಮಿಳಿನ ಖ್ಯಾತ ನಿರ್ದೇಶಕ, ರಜನಿಕಾಂತ್ ಸೇರಿದಂತೆ ಹಲವು ಸ್ಟಾರ್ ನಟರುಗಳಿಗೆ ಸಿನಿಮಾ ಮಾಡಿರುವ ಪಾ.ರಂಜಿತ್ ಕನ್ನಡಿಗರಿಗೆ ತಲೆಗೆ ಹುಳು ಬಿಟ್ಟುಕೊಳ್ಳುವಂತಹ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲೂ ಕನ್ನಡ ಸಿನಿಮಾ ರಂಗವನ್ನು ಜಗತ್ತಿಗೆ ಪರಿಚಯಿಸಿದ ‘ಕೆಜಿಎಫ್’ ಸಿನಿಮಾದ ಅಸಲಿ ಕಥೆಯನ್ನೂ ಅವರು ಬಿಚ್ಚಿಟ್ಟಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದ ಕೆಜಿಎಫ್ ಸಿನಿಮಾ ಅದೊಂದು ಕಾಲ್ಪನಿಕ ಕಥೆಯನ್ನು ಹೊಂದಿತ್ತು. ತಾವು ಅಸಲಿ ಕಥೆಯನ್ನು ಹೇಳುವುದಾಗಿ ತಿಳಿಸಿದ್ದಾರೆ.

    ಕೆಜಿಎಫ್ ಸಿನಿಮಾ ಬರುವ ಮುಂಚೆಯೇ ಅವರು ಕೆಜಿಎಫ್ ನೆಲದ ಕರುಣಾಜನಕ ನೈಜ ಕಥೆಯನ್ನು ಸಿನಿಮಾ ಮಾಡಲು ಹೊರಟಿದ್ದರಂತೆ. ಆದರೆ, ಕನ್ನಡದ ಕೆಜಿಎಫ್ ಸಿನಿಮಾ ಬಂದಿದ್ದರಿಂದ ಅದನ್ನು ಮುಂದೆಹಾಕಿದ್ದರಂತೆ. ಈ ವಿಷಯವನ್ನು ಸ್ವತಃ ರಂಜಿತ್ ಅವರೇ ಕಾನ್ ಫೆಸ್ಟಿವೆಲ್ ನಲ್ಲಿ ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಅಲ್ಲದೇ, ಕೆಜಿಎಫ್ ಸಿನಿಮಾದ ಪಾತ್ರಗಳು ಕಾಲ್ಪನಿಕವಾಗಿದ್ದವು. ರಂಜಿತ್ ಮಾಡಿರುವ ಕಥೆಯಲ್ಲಿ ಬಹುತೇಕ ಪಾತ್ರಗಳು ಆ ನೆಲದಲ್ಲಿ ಜೀವಿಸಿದ್ದವು ಎಂದಿದ್ದಾರೆ. ಇದನ್ನೂ ಓದಿ: ದಿಗಂತ್ ಡಿಸ್ಚಾರ್ಜ್ ಬೆನ್ನಲ್ಲೇ ಫ್ಯಾನ್ಸ್‌ಗೆ ಧನ್ಯವಾದ ತಿಳಿಸಿದ ನಟಿ ಐಂದ್ರಿತಾ ರೇ

    ಈಗಾಗಲೇ ಅವರು ಕಥೆಯನ್ನು ಬರೆದು ಮುಗಿಸಿದ್ದಾರಂತೆ. ಚಿಯಾನ್ ವಿಕ್ರಮ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರಂತೆ. ಕೆಜಿಎಫ್ ಹುಟ್ಟಿದ್ದು ಹೇಗೆ? ಚಿನ್ನಕ್ಕಾಗಿ ಬ್ರಿಟಿಷರು ಹೂಡಿದ್ದ ಆಟವೇನು? ಈ ನೆಲದಲ್ಲಿ ತಮಿಳಿಗರ ಪಾತ್ರ ಏನಾಗಿತ್ತು? ಹೀಗೆ ಹಲವು ಸಂಗತಿಗಳನ್ನು ಚಿತ್ರದಲ್ಲಿ ತೋರಿಸಲಿದ್ದಾರಂತೆ. ಕನ್ನಡಿಗರಿಗಿಂತಲೂ ತಮಿಳಿಗರನ್ನು ಕರೆತಂದು ಈ ಚಿನ್ನದ ಗಣಿಯಲ್ಲಿ ಬಿಡುತ್ತಿದ್ದರಂತೆ ಬ್ರಿಟಿಷರು. ಪ್ರಮುಖವಾಗಿ ಕಥೆಯನ್ನು ಅವರು ಹೇಳಲಿದ್ದಾರಂತೆ.

    Live Tv

  • ಕೆಜಿಎಫ್ ಟ್ರೈಲರ್ ನೋಡಿ ವಾವ್ ಅಂದ್ರು ಪಾ ರಂಜಿತ್!

    ಕೆಜಿಎಫ್ ಟ್ರೈಲರ್ ನೋಡಿ ವಾವ್ ಅಂದ್ರು ಪಾ ರಂಜಿತ್!

    ಬೆಂಗಳೂರು: ಈಗ ದೇಶಾದ್ಯಂತ ಮಂಡ್ಯ ಸೀಮೆಯ ಅಣ್ತಮ್ಮನ ಚಿತ್ರದ್ದೇ ಹವಾ. ಕೆಜಿಎಫ್ ಚಿತ್ರದ ಟ್ರೈಲರ್ ಬಗ್ಗೆ ಸಾಲು ಸಾಲಾಗಿ ಪರಭಾಷಾ ಚಿತ್ರರಂಗದ ಅತಿರಥ ಮಹಾರಥರೇ ಮೆಚ್ಚುಗೆಯ ಮಾತಾಡುತ್ತಿದ್ದಾರೆ. ಇದೀಗ ಕಬಾಲಿ ನಿರ್ದೇಶಕ ಪಾ. ರಂಜಿತ್ ಅವರ ಸರದಿ!

    ಕೆಜಿಎಫ್ ಚಿತ್ರದ ಟ್ರೈಲರ್ ನೋಡಿದಾಕ್ಷಣವೇ ಪಾ ರಂಜಿತ್ ಟ್ವಟರ್ ಮೂಲಕ ಹೊಗಳಿಕೆಯ ಮಾತಾಡಿದ್ದಾರೆ. ಇದೊಂದು ಅದ್ಭುತವಾದ ಟ್ರೈಲರ್ ಅಂದಿರೋ ರಂಜಿತ್ ಯಶ್ ಮತ್ತು ಇಡೀ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.

    ಕಾಳ, ಕಬಾಲಿಯಂಥಾ ಚಿತ್ರಗಳನ್ನು ನಿರ್ದೇಶನ ಮಾಡೋ ಮೂಲಕ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವವರು ಪಾ ರಂಜಿತ್. ಅಂಥವರೇ ಕೆಜಿಎಫ್ ಟ್ರೈಲರನ್ನು ಮೆಚ್ಚಿಕೊಂಡಿರೋದು ಕನ್ನಡ ಚಿತ್ರರಂಗದ ಪಾಲಿಗೆ ಹೆಮ್ಮೆಯ ಸಂಗತಿ. ಅಂತೂ ಇಂಥಾದ್ದೊಂದು ಸಕಾರಾತ್ಮಕ ಬೆಳವಣಿಗೆಗೆ ಯಶ್ ಅಭಿನಯದ ಕೆಜಿಎಫ್ ಚಿತ್ರ ಶ್ರೀಕಾರ ಹಾಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

     

  • #MeToo ಅಭಿಯಾನಕ್ಕೆ ಜೈ ಅಂದ್ರು ಕಬಾಲಿ ಬೆಡಗಿ ಧನ್ಸಿಕಾ

    #MeToo ಅಭಿಯಾನಕ್ಕೆ ಜೈ ಅಂದ್ರು ಕಬಾಲಿ ಬೆಡಗಿ ಧನ್ಸಿಕಾ

    #MeToo ಅಭಿಯಾನವೀಗ ಕನ್ನಡ ಚಿತ್ರರಂಗದಲ್ಲಿಯೂ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ನಡುವೆಯೂ ಹಲವಾರು ನಟ ನಟಿಯರು ಇದರ ಪರ ಮತ್ತು ವಿರುದ್ಧವಾದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಉದ್ಘರ್ಷ ಚಿತ್ರದ ಮೂಲಕ ಕನ್ನಡಕ್ಕೆ ಬಂದಿರೋ ತಮಿಳು ಹುಡುಗಿ ಧನ್ಸಿಕಾ ಮಿ ಟೂ ಅಭಿಯಾನಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.

    ಮಿ ಟೂ ಎಂಬುದು ಮಹಿಳೆಯರ ಆತ್ಮಗೌರವ ಕಾಪಾಡಿಕೊಳ್ಳಲಾಗಿಯೇ ಹುಟ್ಟಿಕೊಂಡಿರೋ ಅಭಿಯಾನ. ಜನ್ಮ ನೀಡೋ ಹೆಣ್ಣನ್ನು ಗೌರವಿಸೋದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಹುಟ್ಟಿಕೊಂಡಿರೋ ಮಿ ಟೂ ಅಭಿಯಾನ ಒಳ್ಳೆಯ ಉದ್ದೇಶ ಹೊಂದಿದೆ. ಲೈಂಗಿಕ ಕಿರುಕುಳ ಅನುಭವಿಸಿದ ಹೆಣ್ಣುಮಕ್ಕಳೆಲ್ಲ ಈ ಮೂಲಕ ತಮ್ಮ ಯಾತನೆಯನ್ನು ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ನಾನು ಬೆಂಬಲ ಸೂಚಿಸುತ್ತೇನೆ ಅಂತ ಧನ್ಸಿಕಾ ಹೇಳಿಕೊಂಡಿದ್ದಾರೆ.

    ಧನ್ಸಿಕಾ ತಮಿಳು ಚಿತ್ರರಂಗದಲ್ಲಿ ಬೇಡಿಕೆ ಹೊಂದಿರೋ ನಟಿ. ಈಕೆ ಕಬಾಲಿ ಚಿತ್ರದಲ್ಲಿ ರಜನೀಕಾಂತ್ ಅವರ ಪುತ್ರಿಯಾಗಿಯೂ ಅಭಿನಯಿಸಿದ್ದರು. ಇದೀಗ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಚಿತ್ರದ ಮೂಲಕ ಕನ್ನಡದಲ್ಲಿಯೂ ಅಭಿನಯಿಸುತ್ತಿದ್ದಾರೆ. ಥ್ರಿಲ್ಲರ್ ಕಥೆ ಹೊಂದಿರೋ ಈ ಚಿತ್ರದ ಪಾತ್ರದ ಮೂಲಕ ಕನ್ನಡದಲ್ಲಿ ಮತ್ತೊಂದಷ್ಟು ಅವಕಾಶದ ನಿರೀಕ್ಷೆಯನ್ನೂ ಹೊಂದಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv