ಬೆಂಗಳೂರು: ನಗರದ ಪ್ರತಿಷ್ಠಿತ ಹೋಟೆಲ್‌ಗಳಿಗೆ ಆಹಾರ ಸುರಕ್ಷತಾ ಇಲಾಖೆ (Department of Food Safety) ನೋಟಿಸ್ ನೀಡಿದ್ದು, ಹೋಟೆಲ್‌ನಲ್ಲಿ ತಯಾರಿಸಲಾಗುವ ಕಬಾಬ್ (Kabab) ಅನ್‌ಸೇಫ್ ಎಂದು ತಿಳಿದು ಬಂದಿದೆ.
ನಾನ್‌ವೆಜ್ ಪ್ರಿಯರೇ ಎಚ್ಚರವಾಗಿರಿ. ಬೆಂಗಳೂರಿನ ಆರು ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ತಯಾರಾಗುವ ಕಬಾಬ್ ಅನ್‌ಸೇಫ್ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಆಹಾರ ಇಲಾಖೆ ಸುರಕ್ಷತಾ ಇಲಾಖೆ ಆರು ಹೋಟೆಲ್‌ಗಳಿಗೆ ನೋಟಿಸ್ ನೀಡಿದೆ.ಇದನ್ನೂ ಓದಿ: 12 ಮಹಡಿಯಿಂದ ಬಿದ್ದು 3 ವರ್ಷದ ಮಗು ಸಾವು
ಈ ಮೊದಲು ಶಿವಾಜಿನಗರ, ಬಸವನಗುಡಿ, ಮಹಾದೇವಪುರ, ಬೊಮ್ಮನಹಳ್ಳಿ, ಮಲ್ಲೇಶ್ವರಂ ಮತ್ತು ಹೆಬ್ಬಾಳದ ಆರು ಹೋಟೆಲ್‌ಗಳಿಂದ ಕಬಾಬ್ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಬಳಿಕ ಲ್ಯಾಬ್‌ನಿಂದ ವರದಿ ಬಂದಿದ್ದು, ಎಲ್ಲಾ ಹೋಟೆಲ್‌ಗಳಲ್ಲಿನ ಕಬಾಬ್ ಅನ್‌ಸೇಫ್ ಎಂದು ತಿಳಿದುಬಂದಿತ್ತು. ಕಬಾಬ್‌ಗೆ ಕಲರ್ ಬಳಕೆ ಹಾಗೂ ಕ್ಯಾನ್ಸರ್‌ಕಾರಕ ಸನ್‌ಸೆಟ್ ಯೆಲ್ಲೋ ಅಂಶ ಇರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಆಹಾರ ಸುರಕ್ಷತಾ ಇಲಾಖೆ ಹೋಟೆಲ್‌ಗಳಿಗೆ ಎಚ್ಚರಿಕೆ ನೀಡಿತ್ತು. ಆದರೆ ಅಧಿಕಾರಿಗಳ ಎಚ್ಚರಿಕೆಗೂ ಕಿವಿಗೊಡದೆ ಅದನ್ನೇ ಮುಂದುವರಿಸಿದ್ದರು.
ಬೆಂಗಳೂರು: ಗೋಬಿ ಆಯ್ತು, ಕಾಟನ್ ಕ್ಯಾಂಡಿ ಆಯ್ತು. ಈಗ ಕಬಾಬ್ (Kabab), ಪಾನಿಪುರಿಯನ್ನ ಟೆಸ್ಟ್‍ಗೆ ಒಳಪಡಿಸಲು ಆಹಾರ ಮತ್ತು ಸುರಕ್ಷತಾ ಇಲಾಖೆ ನಿರ್ಧರಿಸಿದೆ. ಬೆಂಗಳೂರಿನ ಹಲವು ಏರಿಯಾಗಳ ಕಬಾಬ್, ಪಾನಿಪುರಿ ಅಸುರಕ್ಷತೆಯನ್ನ ಪರಿಶೀಲಿಸಿ ಈ ತಿಂಗಳ ಅಂತ್ಯದಲ್ಲಿಯೇ ವರದಿ ಪ್ರಕಟಿಸಿ ಕ್ರಮಕ್ಕೆ ಮುಂದಾಗಲಿದೆ.
ಕಳೆದ ಕೆಲದಿನಗಳ ಹಿಂದಷ್ಟೆ ಆಹಾರ ಮತ್ತು ಸುರಕ್ಷತಾ ಇಲಾಖೆ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯನ್ನ (Cotton Candy) ಪರೀಕ್ಷಿಸಿ ಅದರಲ್ಲಿ ಕ್ಯಾನ್ಸರ್ ಕಾರಕ ಅಂಶ ಇರೋದು ಪತ್ತೆ ಮಾಡಿ ಕಲರ್‍ಗಳ ಬಳಕೆ ಮಾಡೋದನ್ನ ನಿಷೇಧ ಮಾಡಿದೆ. ಆರೋಗ್ಯ ಸಚಿವರು ಸಹ ಗೋಬಿಗೆ ಮೂರು ಬಗೆಯ ಕಲರ್‍ಗಳನ್ನ ಬಳಕೆ ಮಾಡಬಾರದು ಅಂತಾ ಆದೇಶ ಮಾಡಿದ್ದಾರೆ. ಈ ಬೆನ್ನಲ್ಲೆ ಆಹಾರ ಮತ್ತು ಸುರಕ್ಷತಾ ಇಲಾಖೆ ಕಬಾಬ್ ಮತ್ತು ಪಾನಿಪುರಿ ಬಳಕೆ ಮಾಡುತ್ತಿರುವ ಕಲರ್ ಮತ್ತು ಕಲಬೆರಕೆಯ ಬಗ್ಗೆ ತಪಾಸಣೆ ಮಾಡಲು ಮುಂದಾಗಿದೆ. ಇದನ್ನೂ ಓದಿ: PublicTV Explainer: ಕರ್ನಾಟಕದಲ್ಲಿ ಕಲರ್ ಕಾಟನ್ ಕ್ಯಾಂಡಿ ಬ್ಯಾನ್; ‘ಕಲರ್’ ಗೋಬಿ, ಪಾನಿಪುರಿ, ಕಬಾಬ್ ಖಾದ್ಯಗಳಿಗೂ ಬ್ರೇಕ್ – ಯಾಕೆ ಗೊತ್ತಾ?
ಬೆಂಗಳೂರಿನ ಪ್ರಮುಖ ಏರಿಯಾಗಳು, ಹೋಟೆಲ್‍ಗಳು ಮತ್ತು ಬೀದಿಬದಿ ವ್ಯಾಪಾರಗಳಿಂದ ಕಬಾಬ್ ಮತ್ತು ಪಾನಿಪುರಿ ಸಂಗ್ರಹಿಸಿ ಲ್ಯಾಬ್‍ಗೆ ಕಳಿಸಲಿದ್ದಾರೆ. ಅಸುರಕ್ಷತೆನಾ ಅಂತಾ ತಪಾಸಣೆ ಮಾಡಿ ಹಾನಿಕಾರಕ ಅಂಶಗಳನ್ನ ಪತ್ತೆ ಮಾಡಲಿದ್ದಾರೆ. ಇದರಲ್ಲೂ ಕ್ಯಾನ್ಸರ್ ಕಾರಕ, ಹಾನಿಕಾರಕ ಅಂಶಗಳು ಇದ್ದರೆ ಕೂಡಲೇ ಕಲರ್ ಬಳಕೆ ನೀಷೇಧ ಹೇರಿ ಕ್ರಮ ವಹಿಸುತ್ತಾರಂತೆ. ಈ ತಿಂಗಳ ಅಂತ್ಯಕ್ಕೆ ಟೆಸ್ಟಿಂಗ್ ರಿಪೋರ್ಟ್ ಹೊರಬರುತ್ತೆ ಅಂತಾ ಪಬ್ಲಿಕ್ ಟಿವಿಗೆ ಆಹಾರ ಮತ್ತು ಸುರಕ್ಷತಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಬಾಬ್, ಪಾನಿಪೂರಿ ತಯಾರಿಕೆಯಲ್ಲಿ ಸ್ವಚ್ಛತೆ ಇರಲ್ಲ ಅಂತಾ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೂಡ ಬಂದಿವೆ. ಈ ಮಧ್ಯೆ ಆಹಾರ& ಸುರಕ್ಷತಾ ಇಲಾಖೆ ಪರೀಕ್ಷೆಗೆ ಒಳಪಡಿಸಲು ಮುಂದಾಗಿರೋದು ಒಳ್ಳೆಯ ನಿರ್ಧಾರ.
ಬೆಂಗಳೂರು: ನಗರದಲ್ಲಿ ದಿನೇ ದಿನೇ ಪುಡಿರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದ್ದು, ಬಡಪಾಯಿಗಳ ಮೇಲೆ ದುರ್ವರ್ತನೆ ತೋರುತ್ತಿದ್ದಾರೆ. ಕಳೆದ ತಿಂಗಳಷ್ಟೇ ಬೇಕರಿಯಲ್ಲಿ ಯುವಕರ ಮೇಲಿನ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ.
ಕೋಣನಕುಂಟೆಯ ಮಾಲ್ಗುಡಿ ನಾಟಿ ಸ್ಟೈಲ್ ಹೋಟೆಲಿಗೆ ನುಗ್ಗಿದ ಪುಂಡರು ಮಾಲೀಕನಿಗೆ (Hotel Manager) ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಲೀಕ ಬಾಬಣ್ಣ, ಬುಧವಾರ ರಾತ್ರಿ 11 ಗಂಟೆ ವೇಳೆಗೆ 4 ಜನ ಪುಂಡರು ಕಬಾಬ್ (Kebab) ಬೇಕು ಎಂದು ಬಂದಿದ್ರು. ನಮ್ಮ ಹುಡುಗರು ಕಬಾಬ್ ಪಾರ್ಸೆಲ್ ಕೊಟ್ಟಿದ್ದರು. ಬಿಲ್ 120 ರೂ. ಆಗಿದ್ದು, ಆದರೆ ಅವರು 90 ರೂ. ಮಾತ್ರ ಕೊಟ್ಟು ಹಣ ಕಡಿಮೆಯಿದೆ ಮೊತ್ತೊಮ್ಮೆ ಬಂದು ಕೊಡುತ್ತೇವೆ ಎಂದು ಹೇಳಿ ಹೋಗಿದ್ದರು.
ಆದರೆ ವಾಪಸ್ ಬಂದ ಪುಂಡರು ಕಬಾಬ್ ಪೀಸ್ ಕಡಿಮೆ ಕೊಟ್ಟಿದ್ದೀರಾ ಎಂದು ನಮ್ಮ ಹುಡುಗರ ಮೇಲೆ ಹಲ್ಲೆ ಮಾಡೋಕೆ ಮುಂದಾಗಿದ್ದರು. ನಾನು ಮಧ್ಯೆ ಪ್ರವೇಶಿಸಿದೆ. ಈ ವೇಳೆ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ತುಟಿ ಹಾಗೂ ತಲೆಯಲ್ಲಿ ರಕ್ತ ಬರುವ ರೀತಿಯಲ್ಲಿ ಹೊಡೆದಿದ್ದಾರೆ ಎಂದು ಬಾಬಣ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಮತ್ತಿಬ್ಬರ ಪತ್ತೆಗೆ 10 ಲಕ್ಷ ಬಹುಮಾನ ಘೋಷಣೆ
ಆರೋಪಿಗಳು ನಮ್ಮ ಹೋಟೆಲ್ ಮುಂದಿನ ರಸ್ತೆಯಲ್ಲೇ ವಾಸವಿದ್ದಾರೆ. ಯಾವಾಗಲೂ ಗಾಂಜಾ ಹೊಡೆದುಕೊಂಡು ಓಡಾಡುತ್ತಾರೆ. ಅಂದು ಅವರು ಗಾಂಜಾ ಮತ್ತಿನಲ್ಲೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಬಾಬ್ ಎಂದರೆ ಚಿಕನ್ ಪ್ರೇಮಿಗಳ ಬಾಯಲ್ಲಿ ನೀರು ತರದೇ ಇರಲಾರದು. ಕಬಾಬ್ ಅನ್ನು ಎಂದಿನಂತೆ ಎಣ್ಣೆಯಲ್ಲಿ ಕಾಯಿಸಿ ಮಾಡುವುದಕ್ಕಿಂತ ಒಂದು ಬಾರಿ ಹಬೆಯಲ್ಲಿ ಬೇಯಿಸಿಯೂ ನೋಡಿ. ಒಂದು ಹೊರ ರುಚಿಕರವಾದ ರೆಸಿಪಿ ಕಲಿತಂತೆಯೂ ಆಗುತ್ತದೆ. ಹಬೆಯಲ್ಲಿ ಬೇಯಿಸಿ ಕಬಾಬ್ (Steamed Chicken Kebab) ಮಾಡುವುದು ಹೇಗೆ ಎಂದು ನಾವು ಇಂದು ತಿಳಿಸಿಕೊಡುತ್ತೇವೆ. ನೀವೂ ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು:
ಚಿಕನ್ ಖೀಮಾ – ಅರ್ಧ ಕೆಜಿ
ಶುಂಠಿ ಪೇಸ್ಟ್ – 2 ಟೀಸ್ಪೂನ್
ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
ಈರುಳ್ಳಿ ಪೇಸ್ಟ್ – 5 ಟೀಸ್ಪೂನ್
ಹಸಿಮೆಣಸಿನ ಪೇಸ್ಟ್ – 1 ಟೀಸ್ಪೂನ್
ಮೊಸರು – 1 ಟೀಸ್ಪೂನ್
ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್
ಜೀರಿಗೆ ಪುಡಿ – ಅರ್ಧ ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಕರಿಮೆಣಸಿನ ಪುಡಿ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಆನಿಯನ್ – ಅರ್ಧ ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು – ಅರ್ಧ ಕಪ್
ಎಣ್ಣೆ – ಅಗತ್ಯಕ್ಕೆ ಅನುಸಾರ ಇದನ್ನೂ ಓದಿ: ಬಾಯಲ್ಲಿ ನೀರೂರಿಸುವ ಬೊಂಡಾಸ್ ಸುಕ್ಕ ಸುಲಭವಾಗಿ ಹೀಗೆ ಮಾಡಿ
ಮಾಡುವ ವಿಧಾನ:
* ಮೊದಲಿಗೆ ಚಿಕನ್ ಖೀಮಾ, ಶುಂಠಿ ಪೇಸ್ಟ್, ಈರುಳ್ಳಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನ ಪೇಸ್ಟ್, ಸ್ಪ್ರಿಂಗ್ ಆನಿಯನ್, ಮೊಸರು, ಕೊತ್ತಂಬರಿ ಸೊಪ್ಪು, ಪಾಲಕ್ ಸೊಪ್ಪು ಹಾಗೂ ಬ್ರೆಡ್ ಅನ್ನು ಮಿಕ್ಸರ್ ಜಾರ್‌ಗೆ ಹಾಕಿ, ತರಿತರಿಯಾಗಿ ರುಬ್ಬಿಕೊಳ್ಳಿ.
* ಈ ಮಿಶ್ರಣವನ್ನು ಒಂದು ದೊಡ್ಡ ಪಾತ್ರೆಗೆ ವರ್ಗಾಯಿಸಿ, ಗಂಟಿಲ್ಲದಂತೆ ಕಲಸಿಕೊಳ್ಳಿ.
* ಈಗ ಮಿಶ್ರಣಕ್ಕೆ ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ, ಕರಿಮೆಣಸಿನಪುಡಿ, ಹಾಗೂ ಉಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
* ನಿಮ್ಮ ಕೈಗಳಿಗೆ ಎಣ್ಣೆ ಸವರಿ, 2 ಟೀಸ್ಪೂನ್‌ನಷ್ಟು ಮಿಶ್ರಣವನ್ನು ಕೈಯಲ್ಲಿ ತೆಗೆದುಕೊಂಡು, ನಯವಾಗಿ ಉಂಡೆ ಕಟ್ಟಿ, ಸ್ವಲ್ಪ ತಟ್ಟಿ. ಸಂಪೂರ್ಣ ಮಿಶ್ರಣವನ್ನು ಹೀಗೆಯೇ ಮಾಡಿ.
* ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಕಬಾಬ್‌ಗಳನ್ನು ಚಿಕ್ಕ ಉರಿಯಲ್ಲಿ ಹುರಿಯಿರಿ.
* ಕಬಾಬ್‌ಗಳು ಚೆನ್ನಾಗಿ ಹುರಿದ ಬಳಿಕ ಸ್ಟೀಮರ್‌ನಲ್ಲಿ ಅವುಗಳನ್ನಿಟ್ಟು, ಮುಚ್ಚಳ ಹಾಕಿ, ಹಬೆಯಲ್ಲಿ ಸುಮಾರು 15 ನಿಮಿಷಗಳ ಕಾಲ ಬೇಯಿಸಿ.
* ಇದೀಗ ಹಬೆಯಲ್ಲಿ ಬೇಯಿಸಿದ ಕಬಾಬ್ ತಯಾರಾಗಿದ್ದು, ಯಾವುದೇ ಸಾಸ್‌ನೊಂದಿಗೆ ಸವಿಯಿರಿ. ಇದನ್ನೂ ಓದಿ: ಫಟಾಫಟ್ ಅಂತ ಮಾಡಬಹುದಾದ ಚಿಕನ್ ನೂಡಲ್ ಸೂಪ್ ರೆಸಿಪಿ
Live Tv
[brid partner=56869869 player=32851 video=960834 autoplay=true]
ಕೋಲಾರ: ಚಿಕನ್ ಎಂದರೆ ಸಾಕಷ್ಟು ಜನರಿಗೆ ಅಚ್ಚು ಮೆಚ್ಚು. ಅದರಲ್ಲೂ ಚಿಕನ್ ಲೆಗ್ ಪೀಸ್ ಎಂದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಚಿಕನ್ ಪ್ರಿಯರೇ ಇನ್ಮುಂದೆ ರೆಸ್ಟೋರೆಂಟ್ ಅಥವಾ ಹೋಟೆಲ್‌ನಿಂದ ತಮ್ಮ ಅಚ್ಚುಮೆಚ್ಚಿನ ಚಿಕನ್ ಖರೀದಿ ಮಾಡಿದ್ರೆ ತಿನ್ನುವ ಮುನ್ನ ಹುಷಾರ್ ಆಗಿರಿ.
ಒಂದೆಡೆ ರೆಸ್ಟೋರೆಂಟ್ ಮಾಲೀಕರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದು, ಮತ್ತೊಂದೆಡೆ ಹೋಟೆಲ್‌ಗೆ ಬೀಗ ಮುದ್ರೆ ಹಾಕುತ್ತಿರುವ ಆಹಾರ ನಿರೀಕ್ಷಕ ಅಧಿಕಾರಿಗಳು. ಇನ್ನೂ ಒಂದೆಡೆ ಚಿಕನ್ ಸೇವಿಸಿ ಆಸ್ಪತ್ರೆ ಪಾಲಾಗಿರುವ ಮಹಿಳೆ. ಇದೆಲ್ಲಾ ನಡೆದಿರುವುದು ಕೋಲಾರದ ಕೆಜಿಎಫ್ ನಗರದ ಪಿಚರ್ಡ್ ರಸ್ತೆಯಲ್ಲಿ. ಹೌದು, ಚಿಕನ್ ಲೆಗ್ ಪೀಸ್‌ನಲ್ಲಿ ಹುಳ ಪತ್ತೆಯಾದ ಘಟನೆ ಕೋಲಾರದಲ್ಲಿ ನಡೆದಿದೆ. ಅದೇ ಲೆಗ್ ಪೀಸ್ ಸೇವಿಸಿದ ಮಹಿಳೆ ಅಸ್ವಸ್ಥರಾಗಿ, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಪಿಚರ್ಡ್ ರಸ್ತೆಯಲ್ಲಿರುವ ಇಖ್ರಾ ಹೋಟೆಲ್‌ನಲ್ಲಿ ಗುರುವಾರ ಕೆಜಿಎಫ್ ನಗರದ ವಿನೋದ್, ಮನೆಗೆ ಚಿಕನ್ ಲೆಗ್ ಪೀಸ್ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದರು. ಮನೆಯಲ್ಲಿ ಮಕ್ಕಳ ಜೊತೆ ಚಿಕನ್ ತಿನ್ನುತ್ತಿದ್ದಾಗ ಲೆಗ್ ಪೀಸ್‌ನಲ್ಲಿ ಹುಳ ಇರುವುದು ಪತ್ತೆಯಾಗಿದೆ. ಇದನ್ನು ತಿಂದ ವಿನೋದ್ ತಾಯಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾತ್ರಿಯಿಂದ ವಾಂತಿ, ಭೇದಿ ಶುರುವಾಗಿದ್ದು, ಕೂಡಲೆ ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರ ನೀಡುತ್ತಿದ್ದ ಶೂ & ಸಾಕ್ಸ್ ಈ ವರ್ಷ ಸಿಗೋದು ಡೌಟ್
ಹಾಳಾದ ಹಾಗೂ ಸುರಕ್ಷಿತವಲ್ಲದ ಚಿಕನ್ ಲೆಗ್ ಪೀಸ್ ನೀಡಿದ ಹಿನ್ನೆಲೆ ಇಖ್ರಾ ಹೋಟೆಲ್ ಸಿಬ್ಬಂದಿಗೆ ಸ್ಥಳೀಯರು ಗ್ರಹಚಾರ ಬಿಡಿಸಿದ್ದಾರೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಅಧಿಕಾರಿಗಳು ಹೊಟೆಲ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ ಹೋಟೆಲ್‌ನಲ್ಲಿದ್ದ ಎಲ್ಲಾ ಚಿಕನ್‌ನಲ್ಲಿಯೂ ಹುಳ ಪತ್ತೆಯಾಗಿದೆ. ಬಳಿಕ ಗ್ರಾಹಕ ವಿನೋದ್ ಹೋಟೆಲ್ ಮಾಲೀಕರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದು, ಹೋಟೆಲ್‌ನಲ್ಲಿದ್ದ ಮತ್ತಷ್ಟು ಚಿಕನ್ ಪೀಸ್‌ನಲ್ಲೂ ಹುಳ ಪತ್ತೆಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೊದಲಿಗೆ ಸಂಬಂಧಪಟ್ಟ ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಪ್ರಯೋಜನವಾಗಿರಲಿಲ್ಲ. ಬಳಿಕ ಕೆಲ ಯುವಕರು ನಗರಸಭೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ಸಲ್ಲಿಸಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಬಳಿಕ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ ಹಿನ್ನೆಲೆ, ಸ್ಥಳಕ್ಕೆ ಆಗಮಿಸಿದ ನಗರಸಭೆ ಆಹಾರ ನಿರೀಕ್ಷಕರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಳಪೆ ಗುಣಮಟ್ಟದ ಆಹಾರ ಹಾಗೂ ಹುಳ ಇರುವುದು ಕಂಡು ಬಂದ ಹಿನ್ನೆಲೆ ಹೋಟೆಲ್‌ಗೆ ಬೀಗ ಮುದ್ರೆಯನ್ನು ಹಾಕಿದ್ದಾರೆ. ಅಲ್ಲದೇ ನಗರಲ್ಲಿರುವ ಎಲ್ಲಾ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ಮೇಲೆ ಹೆಚ್ಚಿನ ನಿಗಾ ಇಡುವುದಾಗಿ ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಸಾವಿರಕ್ಕೂ ಅಧಿಕ ಕೇಸ್ – ಆರು ಸಾವಿರ ಗಡಿದಾಟಿದ ರಾಜ್ಯದ ಸಕ್ರಿಯ ಪ್ರಕರಣ
ಒಟ್ಟಿನಲ್ಲಿ ತಮಗಿಷ್ಟ ಎಂದು ಚಿಕನ್ ತಿನ್ನಬೇಕಾದರೆ ಇನ್ನುಮುಂದೆ ಗುಣಮಟ್ಟ ಪರಿಶೀಲನೆ ಮಾಡಲೇಬೇಕು. ಯಾಮಾರಿ ಎಲ್ಲೆಂದರಲ್ಲಿ ಆಹಾರ ಸೇವನೆ ಮಾಡಿದರೆ, ಅನಾರೋಗ್ಯದ ಜೊತೆಗೆ ಹುಳಗಳು ಫ್ರೀಯಾಗಿ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ವಿಶೇಷವೇನಿಲ್ಲ, ಆದರೂ ರುಚಿಯಾಗಿ ಏನಾದರೂ ತಿನ್ನಬೇಕು ಅನ್ನಿಸುತ್ತದೆ. ಹಾಗಾದರೆ ನೀವು ಹೋಟೆಲ್‌ನಲ್ಲಿ ನಾಲಿಗೆ ಚಪ್ಪರಿಸಿ ತಿನ್ನುವ ಬಾಳೆಕಾಯಿ ಕಬಾಬ್ ಮನೆಯಲ್ಲಿ ಮಾಡಿ ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
*ಬಾಳೆಕಾಯಿ- 4
* ಮೈದಾ- 2 ಕಪ್
* ಅರಿಶಿಣ ಪುಡಿ- 1 ಚಮಚ
* ಏಲಕ್ಕಿ ಪುಡಿ- ಸ್ವಲ್ಪ
* ಸಕ್ಕರೆ- ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಜೀರಿಗೆ- 1 ಚಮಚ
* ಅಡುಗೆ ಎಣ್ಣೆ- 2 ಕಪ್
ಮಾಡುವ ವಿಧಾನ:
* ಬಾಳೆಕಾಯಿ ಸಿಪ್ಪೆ ತೆಗೆದು ಕಟ್ ಮಾಡಿಕೊಳ್ಳಬೇಕು.
* ಮೈದಾಹಿಟ್ಟು, ಅರಿಶಿಣ, ಉಪ್ಪು, ಏಲಕ್ಕಿ ಪುಡಿ, ಸಕ್ಕರೆ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
* ಬಾಣಲೆಯಲ್ಲ ಅಡುಗೆ ಎಣ್ಣೆಯನ್ನು ಹಾಕಿ ಕಾಯಿಸ ಬೇಕು
* ನಂತರ ಹಿಟ್ಟಿನ ಮಿಶ್ರಣದಲ್ಲಿ ಬಾಳೆಕಾಯಿಗಳನ್ನು ಅದಕ್ಕಿ ಬೋಂಡಾದಂತೆ ಕರಿಯಬೇಕು. ಇದನ್ನೂ ಓದಿ:ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
* ಈಗ ರುಚಿ ರುಚಿಯಾದ ಬಾಳೆಕಾಯಿ ಕಬಾಬ್ ಸವಿಯಲು ಸಿದ್ಧವಾಗುತ್ತದೆ.
ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಗಿಣಿ ಚಿಕನ್ ಬಿರಿಯಾನಿ ಮತ್ತು ಕಬಾಬ್ ತಯಾರಿಸಿ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಪಡೆದು ಮನೆಗೆ ಮರಳಿದ ನಂತರ ನಟಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ರಾಗಿಣಿ ಮನೆಯಲ್ಲೇ ಅಪ್ಪ-ಅಮ್ಮನೊಂದಿಗೆ ಪ್ರೇಮಿಗಳ ದಿನ ಆಚರಿಸಿದ್ದಾರೆ. ಅಪ್ಪ-ಅಮ್ಮನಿಗೆ ರುಚಿಯಾದ ಅಡುಗೆ ಮಾಡಿಕೊಟ್ಟು, ಅಮ್ಮನ ಕೈಯಿಂದ ಕೇಕ್ ಕತ್ತರಿಸಿದ್ದಾರೆ. ಈ ಫೋಟೋವನ್ನು ಹಂಚಿಕೊಂಡು ನನ್ನ ಯಾವ ಜನ್ನದ ಪುಣ್ಯವೋ ನಿಮ್ಮನ್ನು ನನ್ನ ಪೋಷಕರಾಗಿ ಪಡೆದಿದ್ದೆನೆ. ಅಡುಗೆ ಮಾಡಲು ಖುಷಿಯಾಗುತ್ತದೆ. ಈ ದಿನ ನನಗೆ ತುಂಬಾನೆ ವಿಶೇಷವಾಗಿದೆ ಎಂದು ಬರೆದುಕೊಂಡಿದ್ದಾರೆ.
ಅವರಿಗೆ ಇಷ್ಟವಾದ ಬೃಹತ್ ಗಾತ್ರದ ಗೊಂಬೆಯನ್ನು ತಬ್ಬಿಕೊಂಡು ನಿಮ್ಮ ಹಾದಿ ನಿಮಗೆ ತಿಳಿದಿದ್ದರೆ ಯಾರು ತಡೆಯಲು ಸಾಧ್ಯವಿಲ್ಲ. ಗೊಂಬೆಗಳನ್ನು ನೋಡುತ್ತಿದ್ದಂತೆ ನನ್ನ ವಯಸ್ಸು ಚಿಕ್ಕದಾಗುತ್ತದೆ. ಈ ಸೈಜ್ ಗೊಂಬೆ ಸಿಗುವುದು ತುಂಬಾನೇ ಕಡಿಮೆ ಎಂದು ಬರೆದುಕೊಂಡು ಫೋಟೋವನ್ನು ಶೇರ್ ಮಾಡಿದ್ದಾರೆ.
ಜೈಲಿನಿಂದ ಹೊರ ಬಂದ ಬಳಿ ರಾಗಿಣಿ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾ ಮೂಲಕವಾಗಿ ಹೆಚ್ಚು ಬೆರೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಲೈವ್ ವೀಡಿಯೋ ಮೂಲಕ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು, ಗಳಗಳನೆ ಅತ್ತಿದ್ದರು. ಅನೇಕರು ಕೆಟ್ಟ ಕಮೆಂಟ್‍ಗಳನ್ನು ಸಹ ಮಾಡಿದ್ದು, ಅವುಗಳನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿ ಸಮಾಧಾನದಿಂದಲೇ ಉತ್ತರಿಸಿದ್ದರು.
ಸದ್ಯ ಚಿಕನ್ ಬಿರಿಯಾನಿ ಹಾಗೂ ಕಬಾಬ್ ತಯಾರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಲಾಕ್‍ಡೌನ್ ವೇಳೆ ರಾಗಿಗೆ ಅಡುಗೆ ಮಾಡುವುದನ್ನು ಕಲಿತುಕೊಂಡಿದ್ದರು. ವಿವಿಧ ಬಗೆಯ ನಾನ್‍ವೆಜ್ ಅಡುಗೆಯನ್ನು ಮಾಡುತ್ತಾರೆ.
– ಸಾವಿರದ ಗಡಿ ದಾಟಿತು ಸೋಂಕು – ಕಬಾಬ್ ಅಂಗಡಿಯವನಿಗೂ ವಕ್ಕರಿಸಿತು ಕೊರೊನಾ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಾವಿರ ದಾಟಿದೆ. ಇಂದು 94 ಪ್ರಕರಣಗಳು ದಾಖಲಾಗುವುದರ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,076ಕ್ಕೆ ಏರಿಕೆಯಾಗಿದೆ.
ಮೂವರು ಸಾವನ್ನಪ್ಪಿದ್ದು ಒಟ್ಟು 61 ಮಂದಿ ಮೃತಪಟ್ಟಿದ್ದಾರೆ. ಇಂದು ಒಬ್ಬರು ಮಹಿಳೆ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ ಒಟ್ಟು 393 ಮಂದಿ ಬಿಡುಗಡೆಯಾಗಿದ್ದು, ಒಟ್ಟು 621 ಸಕ್ರಿಯ ಪ್ರಕರಣಗಳಿವೆ.
ಕೆಆರ್ ಮಾರ್ಕೆಟ್‍ನ ಆನಂದಪುರಂ ಸ್ಲಂನಲ್ಲಿ 60 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹಲವು ದಿನಗಳಿಂದ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಿತ್ತು. ಆದರೆ ಆಸ್ಪತ್ರೆಗೆ ತೋರಿಸಿರಲಿಲ್ಲ. ಶುಕ್ರವಾರ ಸಂಜೆ ಚಾಮರಾಜಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದಾಗ ಪಾಸಿಟಿವ್ ಖಚಿತವಾಗಿದೆ. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡುವ ಮೊದಲೇ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆದರೆ, ಸಾವಿಗೆ ಮುನ್ನ ಆನಂದಪುರಂ ಸ್ಲಂನಲ್ಲ ಓಡಾಡಿದ್ದು ಆತಂಕಕ್ಕೆ ಕಾರಣವಾಗಿದೆ.
ಕಲಾಸಿಪಾಳ್ಯ ಠಾಣೆಯ 56 ವರ್ಷದ ಪೊಲೀಸ್ ಕೊರೊನಾಗೆ ಸಾವನ್ನಪ್ಪಿದ್ದಾರೆ. ಕೊರೋನಾಗೆ ಮೃತಪಟ್ಟಿದ್ದ ವಿವಿಪುರಂ ಎಎಸ್‍ಐ ಜೊತೆಗೆ ಇವರದ್ದು ಪ್ರಾಥಮಿಕ ಸಂಪರ್ಕ ಇತ್ತು. ಇವರು ಕಾಟನ್‍ಪೇಟೆ ನಿವಾಸಿ ಆಗಿದ್ದಾರೆ. ಕುಮಾರಸ್ವಾಮಿ ಲೇಔಟ್ 45 ವರ್ಷದ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ.
ವಾರ್ತಾ ಇಲಾಖೆಗೂ ವೈರಸ್: ವಾರ್ತಾ ಇಲಾಖೆಯ ಉಪ ನಿರ್ದೇಶಕರೊಬ್ಬರಿಗೆ ಪಾಸಿಟಿವ್ ಆಗಿದೆ. ವಿಧಾನಸೌಧದ ಪತ್ರಕರ್ತರ ಕೊಠಡಿಯಲ್ಲಿ ಕಾರ್ಯನಿರ್ವಹಿಸ್ತಿದ್ರು. ಕಳೆದ 5 ದಿನದಿಂದ ವಿಧಾನಸೌಧಕ್ಕೆ ಬರುತ್ತಿರಲಿಲ್ಲ. ಇವತ್ತು ಕೊರೊನಾ ಪಾಸಿಟಿವ್ ದೃಢವಾಗಿದೆ. ವಿಧಾನಸೌಧದ ಪತ್ರಕರ್ತರ ಕೊಠಡಿ ಸ್ಯಾನಿಟೈಸ್ ಮತ್ತು ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ. ಜೊತೆಗೆ, ವಿಧಾನಸೌಧದಿಂದ ವಾರ್ತಾಭವನಕ್ಕೆ ಇವರು ಓಡಾಟ ನಡೆಸಿದ್ದಾರೆ. ಹೀಗಾಗಿ, ಇನ್‍ಫ್ಯಾಂಟ್ರಿ ರಸ್ತೆ ವಾರ್ತಾಭವನದಲ್ಲಿ ಢವ ಢವ ಶುರುವಾಗಿದೆ. ಉಪನಿರ್ದೇಶಕರ ಪತ್ನಿಗೂ ಕೊರೋನಾ ಪಾಸಿಟಿವ್ ಆಗಿದೆ. ಉಪ ನಿರ್ದೇಶಕರ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಲವರ ಪತ್ತೆ ಕಾರ್ಯ ಮಾಡಲಾಗ್ತಿದೆ. ಕಳೆದ ಗುರುವಾರ ಕ್ಯಾಬಿನೆಟ್ ಬ್ರೀಫಿಂಗ್‌ನಲ್ಲೂ ಈ ಉಪ ನಿರ್ದೇಶಕರು ಭಾಗಿಯಾಗಿದ್ದರು.
ವಿವಿ ಟವರ್‌ನಲ್ಲೂ ಹೆಮ್ಮಾರಿ: ವಿಧಾನಸೌಧದ ಬಳಿ ಇರುವ ವಿವಿ ಟವರ್‌ನಲ್ಲೂ ವೈರಸ್ ವಕ್ಕರಿಸಿದೆ. ಸರ್ಕಾರಿ ಅಧಿಕಾರಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಕಚೇರಿ ಸೀಲ್‍ಡೌನ್ ಆಗಿದೆ. ವಿವಿ ಟವರ್ ಅನ್ನು ಬಿಬಿಎಂಪಿ ಸ್ಯಾನಿಟೈಸ್ ಮಾಡಿದೆ.
ಕೊರೊನಾ `ಕಬಾಬ್’: ಸಿಎಂ ನಿವಾಸ ಡಾಲರ್ಸ್ ಕಾಲೋನಿ ಬಳಿಯ ಅಶ್ವಥ್ ನಗರದ `ಶಿವಣ್ಣ ಕಬಾಬ್ ಸೆಂಟರ್’ ನಡೆಸ್ತಿದ್ದ ವ್ಯಕ್ತಿಗೆ ಕೊರೊನಾ ಅಂಟಿದೆ. ಕಬಾಬ್ ಶಾಪ್ ಸುತ್ತ ನೂರು ಮೀಟರ್ ಸೀಲ್‍ಡೌನ್ ಮಾಡಲಾಗಿದೆ. ಕಬಾಬ್ ಸೆಂಟರ್ ವ್ಯಕ್ತಿಗೆ ಸೋಂಕು ಬಂದಿರೋದ್ರಿಂದ ಇನ್ನೆಷ್ಟು ಜನರಿಗೆ ಕೊರೊನಾ ಸಂಪರ್ಕವಾಗಿದ್ಯೋ ಎಂಬ ಟೆನ್ಷನ್ ಆರೋಗ್ಯ ಇಲಾಖೆಯದ್ದಾಗಿದೆ.
ಬೆಂಗಳೂರು: ಚಿಕನ್ ಕಬಾಬ್ ಕಂಡ ತಕ್ಷಣ ಅಹಾ ಎಂದು ತಿನ್ನುವವರು ಈ ಸುದ್ದಿಯನ್ನು ನೋಡಲೇ ಬೇಕು. ಏಕೆಂದರೆ ರಸ್ತೆ ಬದಿಯಲ್ಲಿ ತಿನ್ನುವ ಕಲರ್‌ಫುಲ್ ಕಬಾಬ್ ಅನ್ನು ಕೊಳಕು ಜಾಗದಲ್ಲಿ ತಯಾರಿಸುತ್ತಾರೆ.
ಹಣ ಕೊಟ್ಟು ಸಿಕ್ಕ ಸಿಕ್ಕ ಕಡೆ ಕಬಾಬ್ ತಿಂದರೆ ಫ್ರೀಯಾಗಿ ಕಾಯಿಲೆಗಳು ಕೂಡ ಬರುತ್ತದೆ. ಏಕೆಂದರೆ ಕಬಾಬ್ ತಯಾರಿಸುವ ವ್ಯಕ್ತಿ ಸಿಗರೇಟ್ ಸೇದಿಕೊಂಡು ಅದರ ಹೊಗೆಯನ್ನು ಕಬಾಬ್ ಮಸಾಲೆ ಪಕ್ಕ ಉಫ್ ಉಫ್ ಎಂದು ಉದುತ್ತಾನೆ. ಅಲ್ಲದೆ ಸಿಗರೇಟಿನ ವೇಸ್ಟ್ ಅನ್ನು ಕಬಾಬ್ ಮಸಾಲೆಯ ಪಕ್ಕವೇ ಹಾಕುತ್ತಾನೆ.
ಸಿಗರೇಟು ಸೇದಿದ ಹಾಗೂ ಪದೇಪದೇ ಬಾಯಿಯೊಳಗೆ ಕೈಹಾಕಿರುವ ಅದೇ ಕೈಯಲ್ಲಿ ವ್ಯಕ್ತಿ ಮಸಾಲೆ ರುಬ್ಬುತ್ತಾನೆ. ಇರೋ ಬರೋ ಕೆಮಿಕಲ್ ಜೊತೆಗೆ ಸಿಗರೇಟಿನ ಹೊಗೆ, ಅಳಿದುಳಿದ ಸಿಗರೇಟಿನ ಅವಶೇಷವೂ ಕೂಡ ಮಸಾಲೆಯ ಕಬಾಬ್‌ನೊಳಗೆ ಚಂದಗೆ ಬೆರೆತು ಹೋಗುತ್ತೆ.
ರಸ್ತೆ ಬದಿಯಲ್ಲಿ ಕೊಂಚವೂ ಸ್ವಚ್ಛತೆಯಂತೂ ಇಲ್ಲ. ಗಲೀಜು ಗಲೀಜಾಗಿರುವ ಜಾಗದಲ್ಲಿ ಈ ಕಬಾಬ್‌ಗಳು ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ತಯಾರಾಗುತ್ತೆ. ಅಲ್ಲಲ್ಲಿ ನೊಣಗಳು ಹಾರಾಡುವ ಗಲೀಜು ಜಾಗದಲ್ಲಿ ಚೆಲ್ಲಿರುವ ಚಿಕನ್ ತುಂಡುಗಳು, ತೊಳೆಯದ ಕೈಯಲ್ಲಿ ಮಸಾಲೆ ಬೆರೆಸುವ ಕೈಗಳು, ಕಬಾಬ್ ಕರಿಯುವ ಬಾಣಲೆ ನೋಡಿದ್ದರೆ ಜನರು ಕಬಾಬ್ ತಿನ್ನುವುದನ್ನು ಬಿಟ್ಟು ಬಿಡುತ್ತಾರೆ.
ಸಿಕ್ಕ ಸಿಕ್ಕ ಲೋಕಲ್ ಕೆಮಿಕಲ್‌ಗಳನ್ನು ಈ ಕಬಾಬ್‌ಗೆ ಬಳಕೆ ಮಾಡುತ್ತಾರೆ. ಅಲ್ಲದೆ ಈ ಕಬಾಬ್ ಟೇಸ್ಟ್ ಬರುವುದಕ್ಕೆ ಅಜಿನಾಮೋಟೋ ಎನ್ನುವ ಡೇಂಜರಸ್ ಪೌಡರ್‌ಗಳ ಬಳಕೆಯನ್ನು ಮಾಡಲಾಗುತ್ತೆ. ಇಂತಹ ಕಬಾಬ್ ಸೇವಿಸಿದ್ದರೆ ಹೊಟ್ಟೆಯ ಸಮಸ್ಯೆಯ ಜೊತೆಗೆ ಕಲರ್ ಬರುವುದ್ದಕ್ಕೆ ಪೌಡರ್, ಟೇಸ್ಟಿಂಗ್ ಪೌಡರ್ ಹಾಕುವುದರಿಂದ ಕ್ಯಾನ್ಸರ್, ಕರುಳು ಬೇನೆಯಂತಹ ಕಾಯಿಲೆನೂ ಬರುತ್ತೆ.