Tag: ಕಬಡ್ಡಿ

  • ಮಧ್ಯರಾತ್ರಿ ಯುವಕರೊಂದಿಗೆ ಕಬಡ್ಡಿ ಆಡಿದ ಬಿಜೆಪಿ ಶಾಸಕ ರಾಜುಗೌಡ

    ಮಧ್ಯರಾತ್ರಿ ಯುವಕರೊಂದಿಗೆ ಕಬಡ್ಡಿ ಆಡಿದ ಬಿಜೆಪಿ ಶಾಸಕ ರಾಜುಗೌಡ

    ಯಾದಗಿರಿ: ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಸ್ವಲ್ಪ ದಿನ ಮಂಕಾಗಿದ್ದ ಯಾದಗಿರಿ ಜಿಲ್ಲೆಯ ಸುರಪುರದ ಬಿಜೆಪಿ ಶಾಸಕ ರಾಜುಗೌಡ ಈಗ ಫುಲ್ ಜೋಶ್‌ನಲ್ಲಿದ್ದಾರೆ. ಶನಿವಾರ ತಮ್ಮ ಕ್ಷೇತ್ರದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಯುವಕರೊಂದಿಗೆ ಕಬಡ್ಡಿ ಕಣದಲ್ಲಿ ರಾಜುಗೌಡ ಮಿಂಚಿದ್ದಾರೆ.

    ಸುರಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡದರಾಳದಲ್ಲಿ ಶನಿವಾರ ಶ್ರೀ ಬಸವೇಶ್ವರ ಯುವ ಬಳಗ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ, ಮುಕ್ತ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಿತ್ತು. ಈ ಪಂದ್ಯಾವಳಿಯನ್ನು ಶಾಸಕ ರಾಜುಗೌಡ ಅವರು ಉದ್ಘಾಟಿಸಿದರು. ಅಷ್ಟೇ ಅಲ್ಲದೆ ಯುವಕರೊಂದಿಗೆ ಸ್ವತಃ ತಾವೇ ಕಬಡ್ಡಿ ಕಣಕ್ಕಿಳಿದು ಆಟವಾಡಿ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ಕೆ ಮುಂದಾದರು.

    ಮೂಲತಃ ಕ್ರೀಡಾಪಟುವಾಗಿರುವ ರಾಜುಗೌಡ ಅವರು ಯುವಕರೊಂದಿಗೆ ನುರಿತ ಕಬಡ್ಡಿ ಆಟಗಾರರಂತೆ ಆಟವಾಡುವ ಮೂಲಕ ನೆರೆದಿದ್ದ ಕ್ರೀಡಾಭಿಮಾನಿಗಳನ್ನು ರಂಜಿಸಿ, ಅವರ ಮನಗೆದ್ದಿದ್ದಾರೆ. ಕಾರ್ಯಕ್ರಮ ಉದ್ಘಾಟನೆ ಮಾಡಿ ಭಾಷಣದ ಮೂಲಕ ಯುವಕರಿಗೆ ಪ್ರೋತ್ಸಾಹಿಸಿದ್ದಲ್ಲದೆ, ಸ್ವತಃ ತಾವೇ ಯುವಕರೊಂದಿಗೆ ಕಬಡ್ಡಿ ಆಟವಾಡಿರುವುದು ವಿಶೇಷವಾಗಿದ್ದು, ಶಾಸಕರ ಕಾರ್ಯಕ್ಕೆ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಕಬಡ್ಡಿ ಆಡಲು ಹೋಗಿ ಶಾಸಕ ರಾಮಣ್ಣ ಲಮಾಣಿ ಭುಜಕ್ಕೆ ಗಾಯ

    ಕಬಡ್ಡಿ ಆಡಲು ಹೋಗಿ ಶಾಸಕ ರಾಮಣ್ಣ ಲಮಾಣಿ ಭುಜಕ್ಕೆ ಗಾಯ

    ಗದಗ: ಜಿಲ್ಲೆಯ ಒಂದಡೆ ಪ್ರವಾಹ ಬಂದು ನೆರೆ ಸಂತ್ರಸ್ತರು ಸಂಕಟ ಪಡುತ್ತಿದ್ದರೆ, ಮತ್ತೊಂದೆಡೆ ಶಾಸಕರು ಕಬಡ್ಡಿ ಆಡಿ ಮಸ್ತಿ ಮಾಡಿದ್ದಾರೆ.

    ಶಿರಹಟ್ಟಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಕಬಡ್ಡಿ ಆಡುವ ಮೂಲಕ ಸ್ಥಳೀಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರವಾಹದಿಂದ ಜನ ಬೇಸತ್ತಿದರೆ, ಶಾಸಕರು ಮಸ್ತಿ ಮಾಡುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.

    ಶಿರಹಟ್ಟಿ ತಾಲೂಕಿನ ಹಡಗಲಿ ಗ್ರಾಮದಲ್ಲಿ ಶ್ರೀವೀರಭದ್ರೇಶ್ವರ ಜಾತ್ರೆ ಅಂಗವಾಗಿ ಕಬಡ್ಡಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ಓಪನಿಂಗ್ ರೇಡ್ ಮಾಡಲು ಹೋಗಿ ಲಮಾಣಿ ಮುಗ್ಗರಿಸಿ ಬಿದ್ದಿದ್ದು, ಭುಜಕ್ಕೆ ಗಾಯವಾಗಿದೆ.

  • ಯಡಿಯೂರಪ್ಪ ಊರಲ್ಲಿ ಮಧು ಬಂಗಾರಪ್ಪ ಕಬಡ್ಡಿ!

    ಯಡಿಯೂರಪ್ಪ ಊರಲ್ಲಿ ಮಧು ಬಂಗಾರಪ್ಪ ಕಬಡ್ಡಿ!

    ಶಿವಮೊಗ್ಗ: ಜಿಲ್ಲೆಯ ಲೋಕಸಭಾ ಕಣದಲ್ಲಿರುವ ಮೈತ್ರಿ ಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಇಂದು ಯಡಿಯೂರಪ್ಪ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಕಬಡ್ಡಿ ಆಡಿದ್ದಾರೆ.

    ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಪ್ರಚಾರ ಕೈಗೊಂಡಿದ್ದ ಮಧು ಬಂಗಾರಪ್ಪ ಸಂಜೆ ವೇಳೆಗೆ ಮುದ್ದನಹಳ್ಳಿ ತಲುಪಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಈಶ್ವರ ದೇವಾಲಯದ ಆವರಣದಲ್ಲಿ ಕಬಡ್ಡಿ ಆಡುತ್ತಿದ್ದ ಯುವಕರ ಗುಂಪು ಕಂಡು ತಾವೂ ಆಟಕ್ಕಿಳಿದರು.

    ಕಬ್ಬಡ್ಡಿ..ಕಬ್ಬಡ್ಡಿ ಹೇಳುತ್ತಾ ರೈಡಿಗೆ ಹೋದ್ರು. ರೈಡು ಮಾಡಿ, ಆ ಯುವಕರ ಜೊತೆ ಸೆಲ್ಫಿ, ಗ್ರೂಪ್ ಫೋಟೋ ತೆಗೆಸಿಕೊಂಡು ನಂತರ ಪ್ರಚಾರ ಸಭೆಗೆ ತೆರಳಿದರು. ಮತಕೇಳಲು ಬಂದವರು ಆಟಕ್ಕೂ ಇಳಿದದ್ದು, ಗ್ರಾಮಸ್ಥರು ಸಂತೋಷಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಬಂಗಾರಪ್ಪ ಅವರನ್ನು ನೆನಪಿಸಿಕೊಂಡ ಗ್ರಾಮಸ್ಥರು, ಅವರು ಕೂಡ ಇದೇ ರೀತಿ ಜನರ ಜೊತೆ ಬೆರೆಯುತ್ತಿದ್ದರು ಎಂದರು.

    ಯಡಿಯೂರಪ್ಪ ಕ್ಷೇತ್ರದಲ್ಲಿ ಕಬಡ್ಡಿ ಆಡಿರುವ ಮಧು ಬಂಗಾರಪ್ಪ ಅವರನ್ನು ಮತದಾನದಲ್ಲಿ ಸೋಲಿಸುತ್ತಾರೋ- ಗೆಲ್ಲಿಸುತ್ತಾರೋ ಕಾದು ನೋಡಬೇಕಿದೆ.

  • ಕಬಡ್ಡಿ ನೋಡಲು 2ನೇ ಪತ್ನಿಯೊಂದಿಗೆ ಬಂದ ಬಿಜೆಪಿ ಶಾಸಕ – ಪಂದ್ಯಕ್ಕಿಂತ ಮೊದಲೇ ಶುರುವಾಯ್ತು ಪತ್ನಿಯರಿಬ್ಬರ ಕಬಡ್ಡಿ!

    ಕಬಡ್ಡಿ ನೋಡಲು 2ನೇ ಪತ್ನಿಯೊಂದಿಗೆ ಬಂದ ಬಿಜೆಪಿ ಶಾಸಕ – ಪಂದ್ಯಕ್ಕಿಂತ ಮೊದಲೇ ಶುರುವಾಯ್ತು ಪತ್ನಿಯರಿಬ್ಬರ ಕಬಡ್ಡಿ!

    ಮುಂಬೈ: ಕಬಡ್ಡಿ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದ ವೇಳೆ ಬಿಜೆಪಿ ಶಾಸಕನ ಇಬ್ಬರು ಪತ್ನಿಯರು ಪರಸ್ಪರ ಹೊಡೆದಾಡಿದ ಘಟನೆ ಮಹಾರಾಷ್ಟ್ರದ ಯವತಮಾಲದಲ್ಲಿ ನಡೆದಿದೆ. ಈ ವೇಳೆ ಎದುರಾದ ಸವತಿಯರು ಸಾರ್ವಜನಿಕವಾಗಿ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮಂಗಳವಾರ ರಾತ್ರಿ ಶಾಸಕ ರಾಜು ತೋಡ್ಸಮಾ ತಮ್ಮ ಎರಡನೇ ಪತ್ನಿ ಪ್ರಿಯಾ ಶಿಂಧೆ ಜೊತೆ ಕಬಡ್ಡಿ ಪಂದ್ಯಾವಳಿಯ ಉದ್ಘಾಟನೆಗೆ ಆಗಮಿಸಿದ್ದರು. ಇದೇ ಕಾರ್ಯಕ್ರಮಕ್ಕೆ ಶಾಸಕರ ಮೊದಲ ಪತ್ನಿ ತಮ್ಮ ಕೆಲ ಬೆಂಬಲಿಗರೊಂದಿಗೆ ಆಗಮಿಸಿದ್ದರು. ಶಾಸಕರ ಪತ್ನಿಯರಿಬ್ಬರು ಎದುರಾಗುತ್ತಿದ್ದಂತೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭಗೊಂಡಿದೆ. ಕೆಲವೇ ಕ್ಷಣಗಳಲ್ಲಿ ಪತ್ನಿಯರು ಪರಸ್ಪರ ಹಲ್ಲೆಗೆ ಮುಂದಾಗುತ್ತಿದ್ದಂತೆ ಬೆಂಬಲಿಗರು ಹೊಡೆದಾಡಿಕೊಂಡಿದ್ದಾರೆ. ಈ ಎಲ್ಲ ಘಟನೆ ಶಾಸಕರ ಎದುರೇ ನಡೆದ್ರೂ ಯಾವುದೇ ಹೇಳಿಕೆಯನ್ನು ನೀಡದೇ ಹಿಂದಿರುಗಿದ್ದಾರೆ.

    ಪ್ರಿಯಾ ಶಿಂಧೆ ಸಹಾಯಕ್ಕೆ ಮೊರೆ ಇಟ್ಟರು ಯಾರು ಮುಂದಾಗಿಲ್ಲ. ಮೊದಲ ಪತ್ನಿ ತಮ್ಮ ಸವತಿಯ ಕೂದಲು ಹಿಡಿದು ಸಾರ್ವಜನಿಕ ಸಮಾರಂಭ ಅಂತ ನೋಡದೆಯೂ ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕವಾಗಿ ಹೊಡೆದಾಡಿಕೊಂಡ ಹಿನ್ನೆಲೆಯಲ್ಲಿ ಶಾಸಕರ ಪತ್ನಿಯರಿಬ್ಬರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಮೊದಲ ಪತ್ನಿಯಿಂದ ದೂರ ಉಳಿದುಕೊಂಡಿರುವ ಶಾಸಕ ರಾಜು ತೋಡ್ಸಮಾ, ಇತ್ತೀಚೆಗೆ ಸಾರ್ವಜನಿಕ ಸಮಾರಂಭದಲ್ಲಿ ಪ್ರಿಯಾ ಶಿಂಧೆ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ರಾಜು ತೋಡ್ಸಮಾ ಎರಡನೇ ಪತ್ನಿಯೊಂದಿಗೆ ಸಾರ್ವಜನಿಕ ಸಮಾರಂಭದಲ್ಲಿ ಡ್ಯಾನ್ಸ್ ಮಾಡುವ ಮೂಲಕ ಸುದ್ದಿಯಾಗಿದ್ದರು.

  • ಈ ಸಲ ಕಪ್ ನಮ್ದೇ ಸಂಭ್ರಮ – ಪವನ್ ಸೆಹ್ರಾವತ್ ಜೊತೆ ಸೆಲ್ಫೀಗಾಗಿ ಮುಗಿಬಿದ್ದ ಜನ!

    ಈ ಸಲ ಕಪ್ ನಮ್ದೇ ಸಂಭ್ರಮ – ಪವನ್ ಸೆಹ್ರಾವತ್ ಜೊತೆ ಸೆಲ್ಫೀಗಾಗಿ ಮುಗಿಬಿದ್ದ ಜನ!

    ಬೆಂಗಳೂರು: ಈ ಸಲ ಕಪ್ ನಮ್ದೇ ಎಂದು ಬೆಂಗಳೂರು ಬುಲ್ಸ್ ತಂಡ ವಿವೋ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಟಗಾರ ಪವನ್ ಸೆಹ್ರಾವತ್ ಇಂದು ಬೆಂಗಳೂರಿನಲ್ಲಿ ಕಬಡ್ಡಿ ಆಡಿದರು. ತಮ್ಮ ನೆಚ್ಚಿನ ಆಟಗಾರ ಹಾಗೂ ಬೆಂಗಳೂರು ಬುಲ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದ ಗೆಲುವಿನಲ್ಲಿ 22 ಅಂಕ ಗಳಿಸಿ ನಿರ್ಣಾಯಕ ಪಾತ್ರ ವಹಿಸಿದ್ದ ಪವನ್ ಸೆಹ್ರಾವತ್ ನೋಡಿದ ಅಭಿಮಾನಿಗಳು ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

    68ನೇ ಅಖಿಲ ಭಾರತ ಅಂತರ್ ರೈಲ್ವೇ ಕಬಡ್ಡಿ ಪಂದ್ಯಾವಳಿಗೆ ಇಂದು ಬೆಂಗಳೂರಿನಲ್ಲಿ ಚಾಲನೆ ದೊರೆಯಿತು. ಈ ಪಂದ್ಯಾವಳಿಯಲ್ಲಿ ರವೀಂದ್ರ ಪಹಲ್, ವಿಠಲ್ ಮೇಟಿ ಸೇರಿದಂತೆ ಪ್ರಮುಖ ಆಟಗಾರರು ಭಾಗವಹಿಸಿದ್ದರು. ನಗರದ ಯಲಹಂಕ ರೈಲು ಗಾಲಿ ಕಾರ್ಖಾನೆ ಸ್ಟೇಡಿಯಂನಲ್ಲಿ 16 ರೈಲ್ವೇ ವಲಯಗಳ 16 ತಂಡಗಳು ಭಾಗವಹಿಸಿದ್ದವು. ಒಟ್ಟು 300 ಜನ ಆಟಗಾರರು ಪಾಲ್ಗೊಂಡಿರೋ ಈ ಕ್ರೀಡಾಕೂಟಕ್ಕೆ ರೈಲು ಗಾಲಿ ಕಾರ್ಖಾನೆಯ ಮುಖ್ಯ ಕಾರ್ಯದರ್ಶಿ ಮರಗುಬ್ ಹುಸೇನ್ ಚಾಲನೆ ನೀಡಿದ್ರು. ಇನ್ನೂ ಎರಡೂ ದಿನ ಈ ಕ್ರೀಡಾಕೂಟವಿದ್ದು, ಫೈನಲ್ ಮ್ಯಾಚ್ 10ರಂದು ನಡೆಯಲಿದೆ.

    ಇದೇ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪವನ್ ಸೆಹ್ರಾವತ್, ನಾನು ಕಳೆದ 4 ವರ್ಷಗಳಿಂದ ಈ ಪಂದ್ಯಾವಳಿಯಲ್ಲಿ ಆಟವಾಡುತ್ತಿದ್ದೇನೆ. ಅಖಿಲ ಭಾರತ ಮಟ್ಟದಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿ ಉತ್ತಮ ಪಂದ್ಯಾವಳಿ. ಇಲ್ಲಿ ಮೊದಲು ಆಟವಾಡಿದ ಬಳಿಕ ನಾನು ಪ್ರೊ ಕಬಡ್ಡಿಗೆ ಆಯ್ಕೆಯಾದೆ. ನನಗೆ ಇದೊಂದು ಉತ್ತಮ ಅನುಭವ. ಈ ಪಂದ್ಯಾವಳಿಯಲ್ಲಿ ಯಾರು ಚೆನ್ನಾಗಿ ಆಟವಾಡುತ್ತಾರೋ ಅವರು ಪ್ರೊ -ಕಬಡ್ಡಿಯಲ್ಲಿ ಆಡಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈ ಸಲ ಕಪ್ ನಮ್ದೇ..! IPL ನಲ್ಲಲ್ಲ, ಕಬಡ್ಡಿಯಲ್ಲಿ ಬೆಂಗಳೂರು ಚಾಂಪಿಯನ್!

    ಈ ಸಲ ಕಪ್ ನಮ್ದೇ..! IPL ನಲ್ಲಲ್ಲ, ಕಬಡ್ಡಿಯಲ್ಲಿ ಬೆಂಗಳೂರು ಚಾಂಪಿಯನ್!

    ಮುಂಬೈ: ಐಪಿಎಲ್ ಪಂದ್ಯಾವಳಿ ವೇಳೆ ಹೇಳುತ್ತಿದ್ದ ಘೋಷವಾಕ್ಯ ‘ಈ ಸಲ ಕಪ್ ನಮ್ದೇ’ ಅನ್ನೋದನ್ನು ನೀವೀಗ ಅಭಿಮಾನದಿಂದ ಹೇಳಬಹುದು. ಯಾಕೆಂದರೆ ಈ ಸಲ ಕಪ್ ನಮ್ದೇ.. ಆದರೆ ಇದು ಐಪಿಎಲ್‍ನಲ್ಲ. ಬದಲಿಗೆ ಕಬಡ್ಡಿ ಪಂದ್ಯವಾಳಿಯಲ್ಲಿ. ವಿವೊ ಪ್ರೊಕಬಡ್ಡಿ ಲೀಗ್ 6ನೇ ಆವೃತ್ತಿಯ ಫೈನಲ್ ನಲ್ಲಿ ಬೆಂಗಳೂರು ಬುಲ್ಸ್ ತಂಡ ಗುಜರಾತ್ ವಿರುದ್ಧ ಗೆಲುವು ಸಾಧಿಸಿದೆ.

    ಶನಿವಾರ ಎನ್‍ಎಸ್‍ಸಿಐ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಗುಜರಾತ್ ಫಾರ್ಚೂನ್ ಜೈಂಟ್ಸ್ ವಿರುದ್ಧ 38-33 ಅಂಕಗಳ ಮೂಲಕ 5 ಪಾಯಿಂಟ್ ಗಳ ಗೆಲುವು ಸಾಧಿಸಿತು. ಬೆಂಗಳೂರು ಬುಲ್ಸ್ ತಂಡದ ಪವನ್ ಸೆಹ್ರಾವತ್ 33 ಅಂಕಗಳಲ್ಲಿ 22 ಅಂಕಗಳನ್ನು ತಾವೇ ಗಳಿಸಿದ್ದರು. ಈ ಬಾರಿಯ ಪ್ರೊ ಕಬಡ್ಡಿ ಲೀಗ್ ನಲ್ಲಿ ಉತ್ತಮ ಆಟವಾಡಿದ್ದ ಬೆಂಗಳೂರು ಬುಲ್ಸ್ ತಂಡವು 22ರಲ್ಲಿ 13 ಗೆಲುವು ಸಾಧಿಸಿತ್ತು. ಬೆಂಗಳೂರು ತಂಡ ಗೆಲುವು ಸಾಧಿಸುತ್ತಿದ್ದಂತೆ ಕೋಚ್ ರಮೇಶ್ ಸೇರಿದಂತೆ ಎಲ್ಲಾ ಆಟಗಾರರು ಕ್ರೀಡಾಂಗಣದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

    ಕೊಚ್ಚಿಯ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ವಿರುದ್ಧ 41-29 ಅಂತರದಿಂದ ಗೆಲುವು ಸಾಧಿಸಿತ್ತು ಫೈನಲ್‍ಗೆ ಪ್ರವೇಶಿಸಿ ಪ್ರಶಸ್ತಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಅಪಘಾತದಲ್ಲಿ ದುರ್ಮರಣ

    ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಅಪಘಾತದಲ್ಲಿ ದುರ್ಮರಣ

    ದಾವಣಗೆರೆ: ಜಿಲ್ಲೆಯ ಹರಪ್ಪನಹಳ್ಳಿ ತಾಲೂಕು ತೊಗರಿಕಟ್ಟೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಮೃತಪಟ್ಟಿದ್ದಾರೆ.

    ಅಶೋಕ್ (25) ಮೃತಪಟ್ಟ ಕ್ರೀಡಾಪಟು. ತೊಗರಿಕಟ್ಟೆ ಬಳಿ ಬುಧವಾರ ಸಂಜೆ ತೆರಳುತ್ತಿದ್ದ ವೇಳೆ ಬೈಕ್ ನಿಯಂತ್ರಣ ಕಳೆದುಕೊಂಡು ಸೇತುವೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಅಶೋಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿಂಬದಿ ಕುಳಿತಿದ್ದ ಶಿವನಾಯ್ಕ ಎಂಬವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕಬಡ್ಡಿ ಕ್ರೀಡಾಪಟು ಆಗಿದ್ದ ಅಶೋಕ್ ಹರಪನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್ಸಿ ಪದವಿ ವಿದ್ಯಾರ್ಥಿಯಾಗಿದ್ದರು. ತಮ್ಮ ಕೆಲಸ ಮುಗಿಸಿಕೊಂಡು ಸ್ನೇಹಿತನೊಂದಿಗೆ ವಾಪಸ್ ಸ್ವಗ್ರಾಮ ಉದ್ಗಟ್ಟಿ ತಾಂಡಕ್ಕೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಹರಪ್ಪನ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಬಡ್ಡಿ ಮೈದಾನಕ್ಕಿಳಿದ ಎಂಎಸ್ ಧೋನಿ!

    ಕಬಡ್ಡಿ ಮೈದಾನಕ್ಕಿಳಿದ ಎಂಎಸ್ ಧೋನಿ!

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕಬಡ್ಡಿ ಆಡುವ ಮೂಲಕ ಭಾರತೀಯ ಕ್ರೀಡೆಗೆ ತಮ್ಮ ಬೆಂಬಲ ನೀಡಿದ್ದು, ಈ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

    ಆಸೀಸ್ ಟೂರ್ನಿಯಿಂದ ಹೊರಗುಳಿದಿರುವ ಧೋನಿ ತಮ್ಮ ಬಿಡುವಿನ ಸಮಯವನ್ನು ಕಬಡ್ಡಿ ಮ್ಯಾಟ್ ಮೇಲೆ ಕಳೆದಿದ್ದು, ಮುಂಬೈನಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯ ವೇಳೆ ಧೋನಿ ಸಖತ್ ಎಂಜಾಯ್ ಮಾಡಿದ್ದಾರೆ. ಅಲ್ಲದೇ ಈ ವೇಳೆ ಧೋನಿಯೂ ಕಬಡ್ಡಿ ಆಡಿದ್ದು, ಧೋನಿ ರೈಡ್ ಮಾಡಿರುವ ಫೋಟೋವನ್ನು ಕ್ರೀಡಾಸಂಸ್ಥೆಯೊಂದು ತನ್ನ ಫೇಸ್‍ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದೆ.

    ಪ್ರೋ ಕಬಡ್ಡಿ ಲೀಗ್ ಪ್ರಯುಕ್ತ ನಡೆದ ಶೂಟ್‍ಗಾಗಿ ಧೋನಿ ಕಬಡ್ಡಿ ಆಡುತ್ತಿರುವ ದೃಶ್ಯಗಳನ್ನು ಶೂಟ್ ಮಾಡಲಾಗಿದೆ. ಫೇಸ್‍ಬುಕ್ ಪೋಸ್ಟ್ ನಲ್ಲಿ ಧೋನಿ ಕಬಡ್ಡಿ ಶೂಟ್ ನಲ್ಲಿ ಭಾಗವಹಿಸಿದ ವಿವಿಧ ದೃಶ್ಯಗಳನ್ನು ಕಾಣಬಹುದಾಗಿದೆ.

    ವೆಸ್ಟ್ ಇಂಡೀಸ್ ವಿರುದ್ಧ ಮುಕ್ತಾಯಗೊಂಡ 3 ಪಂದ್ಯಗಳ ಟಿ20 ಸರಣಿ ಸೇರಿದಂತೆ ಆಸ್ಟ್ರೇಲಿಯಾ ವಿರುದ್ಧದ ಟಿ20ಗೆ ವಿಶ್ರಾಂತಿ ನೀಡಲಾಗಿತ್ತು. ಧೋನಿ ಅವರ ಸ್ಥಾನಲ್ಲಿ ಸೂಕ್ತ ವಿಕೆಟ್ ಕೀಪರ್ ಹುಡುಕಾಟ ನಡೆಸಲು ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿತ್ತು. ಧೋನಿ ಅವರ ಸ್ಥಾನಕ್ಕೆ ಯುವ ಆಟಗಾರ ರಿಷಭ್ ಪಂತ್, ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಆಯ್ಕೆ ಆಗಿದ್ದರು.

    ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಇಬ್ಬರ ಅನುಪಸ್ಥಿತಿಯಲ್ಲಿ ವಿಂಡೀಸ್ ಸರಣಿ ಎದುರಿಸಿದ್ದ ರೋಹಿತ್ ನಾಯಕತ್ವದ ಟೀಂ ಇಂಡಿಯಾ ಟಿ 20 ಸರಣಿಯನ್ನು ವೈಟ್‍ವಾಶ್ ಮಾಡಿ 3-0 ಸಂತದಲ್ಲಿ ಜಯಗಳಿಸಿತ್ತು. ಆಸೀಸ್ ವಿರುದ್ಧದ ಟಿ20 ಟೂರ್ನಿಗೆ ಕೊಹ್ಲಿ ನಾಯಕತ್ವ ವಹಿಸಲಿದ್ದು, ಟೂರ್ನಿ ನವೆಂಬರ್ 21 ರಂದು ಆರಂಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಾಧನೆಯ ಹಾದಿಯನ್ನು ತೆರೆದಿಟ್ಟ ಏಷ್ಯನ್ ಗೇಮ್ಸ್ 2018ರ ಬೆಳ್ಳಿ ಪದಕ ವಿಜೇತೆ ಉಷಾರಾಣಿ

    ಸಾಧನೆಯ ಹಾದಿಯನ್ನು ತೆರೆದಿಟ್ಟ ಏಷ್ಯನ್ ಗೇಮ್ಸ್ 2018ರ ಬೆಳ್ಳಿ ಪದಕ ವಿಜೇತೆ ಉಷಾರಾಣಿ

    ಬೆಂಗಳೂರು: ಅದೊಂದು ತುಂಬಾ ರೋಮಾಂಚನಕಾರಿ ಪಂದ್ಯ. ಪ್ರತಿಕ್ಷಣಕ್ಕೂ ಎದೆ ಬಡಿತ ಹೆಚ್ಚುತ್ತಿತ್ತು. ಕಳೆದ ಎರಡು ವರ್ಷಗಳಿಂದ ಉತ್ತಮ ಪದರ್ಶನ ನೀಡಿ, ಚಿನ್ನಕ್ಕೆ ಕೊರಳೊಡ್ಡಿದ್ದೇವು. ಆದರೆ ಈ ಬಾರಿ ಬೆಳ್ಳಿ ಪಡೆದಿದ್ದು ಸ್ವಲ್ಪ ಬೇಸರ ತಂದಿದೆ ಎಂದು ಏಷ್ಯನ್ ಗೇಮ್ಸ್ 2018ರ ಬೆಳ್ಳಿ ಪದಕ ವಿಜೇತ ಭಾರತದ ಕಬಡ್ಡಿ ಟೀಂನ ಉಷಾರಾಣಿ ಹೇಳಿದ್ದಾರೆ.

    ಇಂದು ಉಷಾರಾಣಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಪೊಲೀಸ್ ಪಡೆ, ಕುಟುಂಬಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಷಾರಾಣಿ ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ತಮ್ಮ ಸಾಧನೆಯ ಹೆಜ್ಜೆಗಳನ್ನು ಹಂಚಿಕೊಂಡರು.

    ನಾನು ಕ್ರೀಡಾ ಕೋಟಾದಲ್ಲಿ ಪೊಲೀಸ್ ವೃತ್ತಿಗೆ ಸೇರಿದ್ದೆ, ಹೀಗಾಗಿ ಬೆಳಗ್ಗೆ ಹಾಗೂ ಸಂಜೆ ಅಭ್ಯಾಸ ಮಾಡಲು ಸಮಯ ಸಿಗುತ್ತಿತ್ತು. ಏಷ್ಯನ್ ಗೇಮ್ಸ್ 2018ರಲ್ಲಿ ಆಡಲು ನನ್ನನ್ನು ಕಬಡ್ಡಿ ಫೆಡರೇಷನ್ ಕರೆಸಿಕೊಂಡಿತ್ತು. ಅಲ್ಲಿ ಕಳೆದ ಆರು ತಿಂಗಳಿನಿಂದ ಅಭ್ಯಾಸ ಮಾಡುತ್ತಿದ್ದೇವು. ಗೇಮ್ಸ್‍ನ ಪ್ರತಿ ಪಂದ್ಯವೂ ರೋಮಾಚಕವಾಗಿತ್ತು. ಭಾರತ ಕಬಡ್ಡಿ ಟೀಂ ಕಳೆದ ಎರಡು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಾ ಬಂದಿತ್ತು. ಹೀಗಾಗಿ ಈ ಬಾರಿ ಚಿನ್ನದ ಪದಕ ಗೆಲ್ಲುವುದು ಖಚಿತ ಎಂದುಕೊಂಡಿದ್ದೇವು. ಆದರೆ ಬೆಳ್ಳಿಯನ್ನು ಪಡೆಯಬೇಕಾಯಿತು ಎಂದು ಉಷಾ ತಮ್ಮ ಸಾಧನೆಯನ್ನು ತೆರೆದಿಟ್ಟರು. ಇದನ್ನು ಓದಿ: ಏಷ್ಯನ್ ಗೇಮ್ಸ್ 2018: ಕಬ್ಬಡ್ಡಿಯಲ್ಲಿ ಬೆಳ್ಳಿ ಪದಕ ಪಡೆದ ಕನ್ನಡತಿ

    ಉಷಾರಾಣಿ ಕಬಡ್ಡಿಗೆ ಸೇರುವುದಾಗಿ ಕೇಳಿಕೊಂಡಿದ್ದಳು. ನಾನು ಕೂಡಾ ಕಬಡ್ಡಿ ಆಟಗಾರನಾಗಿದ್ದರಿಂದ ಪುತ್ರಿಗೆ ತರಬೇತಿ ನೀಡಲು ಪ್ರಾರಂಭಿಸಿದೆ. ನನ್ನ ಐದು ಜನ ಮಕ್ಕಳು ಕಬಡ್ಡಿ ಆಟಗಾರರು. ಮಗಳು ಬೆಳ್ಳಿ ಪದಕ ತಂದಿದ್ದು ತುಂಬಾ ಖುಷಿ ತಂದಿದೆ ಎಂದು ಉಷಾರಾಣಿ ತಂದೆ ಸಂತಸ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಭಾರತಕ್ಕೆ ಆಘಾತ!

    ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಭಾರತಕ್ಕೆ ಆಘಾತ!

    ಜಕಾರ್ತ: ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗ್ಯಾರಂಟಿ ಎಂದು ನಿರೀಕ್ಷೆಯಲ್ಲಿದ್ದ ಭಾರತದ ಪುರುಷರ ಕಬಡ್ಡಿ ತಂಡ ಸೆಮಿಫೈನಲ್ ನಲ್ಲಿ ಸೋತಿದೆ.

    ಏಷ್ಯನ್ ಗೇಮ್ಸ್ ನ 18 ನೇ ಆವೃತ್ತಿಯ 5ನೇ ದಿನವಾದ ಇಂದು ನಡೆದ ಕಬಡ್ಡಿ ಸೆಮಿಫೈನಲ್ ನಲ್ಲಿ ಇರಾನ್ ಭಾರತವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. 27-18 ಅಂತರದಿಂದ ಇರಾನ್ ಏಷ್ಯನ್ ಗೇಮ್ಸ್ ನಲ್ಲಿ 7 ಬಾರಿ ಚಿನ್ನದ ಪದಕ ಗೆದ್ದಿದ್ದ ತಂಡವನ್ನು ಮಣಿಸಿದೆ.

    ಭಾರತ 1990 ರಲ್ಲಿ ಏಷ್ಯನ್ ಗೇಮ್ಸ್ ಆರಂಭಗೊಂಡ ಬಳಿಕ ಭಾರತ ಕಬಡ್ಡಿಯಲ್ಲಿ ಪ್ರಾಬಲ್ಯ ಮೆರೆದಿತ್ತು. ಆದರೆ ಈಗ ಇರಾನ್ ವಿರುದ್ಧ ಸೋತಿದ್ದು, ಕಂಚಿನ ಪದಕಕ್ಕಾಗಿ ಪಾಕ್ ಜೊತೆ ಹೋರಾಟ ಮಾಡಬೇಕಿದೆ. ಪಾಕಿಸ್ತಾನ 24-27 ಅಂತರದಿಂದ ಕೊರಿಯಾ ವಿರುದ್ಧ ಸೋತಿದೆ.

    ಭಾರತ ಸೋತಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದ್ದು, ಪ್ರೀಮಿಯರ್ ಲೀಗ್ ಗೆ ಹೆಚ್ಚು ಆಸಕ್ತಿ ನೀಡಿದ ಪರಿಣಾಮ ಭಾರತ ಸೋತಿದೆ. ಫ್ರಾಂಚೈಸಿಗಳ ಪರ ಆಡಿ ಈಗ ದೇಶದ ಪರ ಆಡಲು ವಿಫಲರಾಗಿದ್ದಾರೆ ಎಂದು ಜನ ಕಮೆಂಟ್ ಮಾಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv