Tag: ಕಬಡ್ಡಿ ಆಟಗಾರ

  • ಚೈಲ್ಡ್ ಫಾರ್ ಸೇಲ್- ಡಿಪಿ ಫೋಟೋ ಎಡಿಟ್ ಮಾಡಿ ಲೋನ್ ಆ್ಯಪ್ ಕಿರುಕುಳಕ್ಕೆ ಕಬಡ್ಡಿ ಆಟಗಾರ ಆತ್ಮಹತ್ಯೆ

    ಚೈಲ್ಡ್ ಫಾರ್ ಸೇಲ್- ಡಿಪಿ ಫೋಟೋ ಎಡಿಟ್ ಮಾಡಿ ಲೋನ್ ಆ್ಯಪ್ ಕಿರುಕುಳಕ್ಕೆ ಕಬಡ್ಡಿ ಆಟಗಾರ ಆತ್ಮಹತ್ಯೆ

    ಮಂಗಳೂರು: ಬೆಳ್ತಂಗಡಿಯ (Belthangady) ಪುದುವೆಟ್ಟುನಲ್ಲಿ ಗುರುವಾರ ಕಬಡ್ಡಿ ಆಟಗಾರ ಆತ್ಮಹತ್ಯೆ ಮಾಡಿಕೊಂಡಿರೋದಕ್ಕೆ ಲೋನ್ ಆ್ಯಪ್ ಹಾವಳಿಯೇ ಕಾರಣ ಅನ್ನೋ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

    ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರ, ಉಜಿರೆಯ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ 24 ವರ್ಷದ ಸ್ವರಾಜ್ ನಿನ್ನೆ ಬೆಳ್ತಂಗಡಿಯ ಪುದುವೆಟ್ಟುವಿನಲ್ಲಿರುವ ತನ್ನ ಮನೆಯ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದ. ಇದೀಗ ಆತ ಲೋನ್ ಆ್ಯಪ್ ಮೂಲಕ ಪಡೆದ ಸಾಲವೇ ಸಾವಿಗೆ ಕಾರಣ ಅನ್ನೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ನೇಣು ಬಿಗಿದುಕೊಂಡು ಮಂಗಳೂರಿನ ಕಬಡ್ಡಿ ಆಟಗಾರ ಆತ್ಮಹತ್ಯೆ

    ಕೆಲ ತಿಂಗಳಿನಿಂದ ಎರಡು ಮೂರು ಲೋನ್ ಆ್ಯಪ್‍ಗಳಲ್ಲಿ ಸಾಲ ಪಡೆದಿದ್ದ. ಆಗಾಗ್ಗೆ ಲೋನ್ ಪಾವತಿ ಮಾಡಿದ್ದರೂ ಹೆಚ್ಚಿನ ಹಣಕ್ಕೆ ಕಂಪನಿಯ ಸಿಬ್ಬಂದಿ ಕಿರುಕುಳ ನೀಡುತ್ತಿದ್ದರು. ಸ್ವರಾಜ್ ತನ್ನ ವಾಟ್ಸಪ್ ಡಿಪಿಯಲ್ಲಿ ಅಕ್ಕನ ಮಗಳ ಫೋಟೋ ಹಾಕಿದ್ದು, ಇದನ್ನೇ ಬಂಡವಾಳವನ್ನಾಗಿಸಿದ ಕಂಪನಿ ಫೋಟೋ ಎಡಿಟ್ ಮಾಡಿ ಚೈಲ್ಡ್ ಫಾರ್ ಸೇಲ್ ಎಂದು ಹಾಕಿ ಆತನ ಕಾಂಟೆಕ್ಟ್ ಲಿಸ್ಟ್ ಗೆ ಸೆಂಡ್ ಮಾಡಿದ್ದರು.

    ಈ ವಿಚಾರವನ್ನು ಸ್ನೇಹಿತರು ಸ್ವರಾಜ್‍ಗೆ ತಿಳಿಸಿದ್ದು ಬಳಿಕ ಆಗಸ್ಟ್ 30 ರಂದು ತನ್ನ ಬ್ಯಾಂಕ್ ಖಾತೆಯಿಂದ ಆ್ಯಪ್ ಕಂಪನಿಗೆ 30 ಸಾವಿರ ಕಟ್ಟಿದ್ದ.ಇನ್ನುಳಿದ ಹಣಕ್ಕೆ ನಿನ್ನೆ ಮಧ್ಯಾಹ್ನ 2 ಗಂಟೆಯವರೆಗೆ ಡೆಡ್ ಲೈನ್ ನೀಡಿದ್ರು. ಆದರೆ ಹಣ ಹೊಂದಿಸಲು ಸಾಧ್ಯವಾಗದೆ ಮನನೊಂದು ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೀನುಗಾರಿಕಾ ಬೋಟಿನಲ್ಲೇ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ನೇಣಿಗೆ ಶರಣು

    ಮೀನುಗಾರಿಕಾ ಬೋಟಿನಲ್ಲೇ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ನೇಣಿಗೆ ಶರಣು

    ಉಡುಪಿ: ಆಳ ಸಮುದ್ರಕ್ಕೆ ಹೋಗುವ ಮೀನುಗಾರಿಕಾ ಬೋಟ್‍ನಲ್ಲಿ ಯುವಕ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಡೆದಿದೆ.

    ಭಾಗ್ಯರಾಜ್ (26) ಮೃತ ಯುವಕ. ಶ್ರೀ ದುರ್ಗಾ ಎಂಬ ಮೀನುಗಾರಿಕಾ ಬೋಟ್ ಮಲ್ಪೆ ಬಂದರಲ್ಲಿ ಲಂಗರು ಹಾಕಿತ್ತು. ನಿಂತಿದ್ದ ಬೋಟ್‍ಗೆ ಕಟ್ಟಲಾಗಿದ್ದ ಹಗ್ಗಕ್ಕೆ ನೇಣು ಹಾಕಿಕೊಂಡು ಭಾಗ್ಯರಾಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.

    ಆರ್ಥಿಕ ಸಂಕಷ್ಟದಿಂದ ಭಾಗ್ಯರಾಜ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ರಾಜ್ಯಮಟ್ಟದ ಕಬಡ್ಡಿ ಕ್ರೀಡಾಪಟುವಾಗಿರುವ ಭಾಗ್ಯರಾಜ್ ಮಲ್ಪೆ ವ್ಯಾಪ್ತಿಯಲ್ಲಿ ಚುರುಕಿನಿಂದ ಓಡಾಡಿಕೊಂಡಿದ್ದನು. ಪ್ರಾಣ ಕಳೆದುಕೊಳ್ಳುವಂತಹ ಸಮಸ್ಯೆ ಇರಲಿಲ್ಲ ಎಂದು ಗೆಳೆಯರು ಮಾತನಾಡುತ್ತಿದ್ದರು.

    ಭಾಗ್ಯರಾಜ್ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಗಳಲ್ಲಿ ಆಲ್ ರೌಂಡರ್ ಆಟಗಾರನಾಗಿದ್ದ. ಅಲ್ಲದೇ ಕೇರಳ, ತಮಿಳುನಾಡು ಟೀಂಗಳಿಗೆ ಭಾಗ್ಯರಾಜ್ ಆಡುತ್ತಿದ್ದ. ಆದರೆ ಸಾಲ ಮರುಪಾವತಿಸಲಾಗದೆ ಬಹಳ ಒತ್ತಡ ಮಾಡಿಕೊಂಡಿದ್ದನು. ಕಳೆದ ರಾತ್ರಿ ಕೆಟ್ಟು ನಿಂತಿದ್ದ ಮೀನುಗಾರಿಕಾ ಬೋಟ್‍ಗೆ ಹಗ್ಗ ಕಟ್ಟಿ ನೇಣು ಬಿಗಿದು ಮೀನು ತುಂಬಿಸಿಡುವ ಸ್ಟೋರೇಜ್‍ಗೆ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಬೆರಣಿ ತಟ್ಟಿದ ಕೈಗೆ ಅರ್ಜುನ ಪ್ರಶಸ್ತಿ ಬಂತು: ಕಬಡ್ಡಿ ಆಟಗಾರ ಬಿ.ಸಿ.ರಮೇಶ್

    ಬೆರಣಿ ತಟ್ಟಿದ ಕೈಗೆ ಅರ್ಜುನ ಪ್ರಶಸ್ತಿ ಬಂತು: ಕಬಡ್ಡಿ ಆಟಗಾರ ಬಿ.ಸಿ.ರಮೇಶ್

    – ಮನೆಗೊಂದು ಮರದಂತೆ ಮನೆಗೊಬ್ಬ ಕ್ರೀಡಾಪಟುವಿರಲಿ

    ರಾಮನಗರ: ಬೆರಣಿ ತಟ್ಟಿದ ಕೈಗೆ ಅರ್ಜುನ ಪ್ರಶಸ್ತಿ ಬಂತು ಎಂದು ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಬಿ.ಸಿ.ರಮೇಶ್ ಸಾಧನೆಯ ಹಾದಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಚನ್ನಪಟ್ಟಣದ ಹೊರವಲಯದಲ್ಲಿರುವ ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಷನ್‌ನಲ್ಲಿ ನಡೆದ ಕಾರ್ಯಕ್ರದಲ್ಲಿ ಮಾತನಾಡಿದ ಅವರು, ಮನೆಗೊಂದು ಮಗು, ಮಗುವಿಗೊಂದು ಮರ ಎಂಬಂತೆ ಮನೆಗೊಬ್ಬ ಕ್ರೀಡಾಪಟು ಕೂಡ ಹೊರಬರಲಿ. ದೇಶದ ಉದ್ದಗಲಕ್ಕೂ ಕಬಡ್ಡಿ ಆಡಿ ಗೆಲುವು ಸಾಧಿಸಿದೆ. ನಮ್ಮ ತಂಡ ನಂತರ ವಿದೇಶಗಳಲ್ಲಿ ಆಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಾಡಿನ ಮತ್ತು ದೇಶದ ಹೆಸರನ್ನು ಅಜರಾಮರಗೊಳಿಸಿದೆ. ಈ ಮೂಲಕ ಅನೇಕ ಪ್ರಶಸ್ತಿಗಳ ಜೊತೆಗೆ ಅತ್ಯುನ್ನತ ಅರ್ಜುನ ಪ್ರಶಸ್ತಿಯನ್ನು ಪಡೆದುಕೊಂಡಿದ್ದೇನೆ. ಇದಕ್ಕೆಲ್ಲ ಕಾರಣ ಶ್ರಮ ಮತ್ತು ಸಾಧಿಸುವ ಛಲ ಎಂದು ತಿಳಿಸಿದರು.

    ನನ್ನ ಬದುಕಿನ ಚಿತ್ರಣವನ್ನೊಮ್ಮೆ ಹಿಂದುರಿಗಿ ನೋಡಿದರೆ ಇಂದು ಆಶ್ಚರ್ಯವಾಗುತ್ತಿದೆ. ಸಾಮಾನ್ಯ ಕುಟುಂಬದಿಂದ ಬಂದ ನಾನು ಆಕಸ್ಮಿಕವಾಗಿ ಕಬಡ್ಡಿ ಆಟಗಾರನಾಗಿ ಬೆಳೆದೆ. ಸತತ ಸೋಲುಂಡಿದ್ದ ಕರ್ನಾಟಕ ತಂಡವನ್ನು ಗೆಲ್ಲಿಸಿದ ನಂತರ ಉದ್ಯೋಗಗಳು ಅರಸಿಕೊಂಡು ಬಂದವು. ಮೊದಲಿಗೆ ಎಚ್‍ಎಂಟಿ ಗಡಿಯಾರ ಕಂಪನಿಯಲ್ಲಿ, ನಂತರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಇಂದಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)ನಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ತಮ್ಮ ಮನದಾಳದ ಇಂಗಿತವನ್ನು ಹಂಚಿಕೊಂಡರು.

    ಅಂತರಾಷ್ಟ್ರೀಯ ಕಬಡ್ಡಿ ಆಟಗಾರರಾದ ನವೀನ್ ಕುಮಾರ್ ಮತ್ತು ಪ್ರಪಂಜನ್ ಮಾತನಾಡಿ, ತಮ್ಮ ಸಾಧನೆಗೆ ತಂದೆತಾಯಿಗಳ ಆಶೀರ್ವಾದ, ಗುರುಗಳ ಮಾರ್ಗದರ್ಶನ ಬಹಳ ಇದೆ. ನೀವು ಕೂಡ ಗುರುಹಿರಿಯರ ಆಶೀರ್ವಾದದ ಜೊತೆಗೆ ಶ್ರಮವಹಿಸಿದ ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಡಾ.ಚೇತನ್, ಪುಣೆಯಲ್ಲಿ ಇಂಜಿನಿಯರ್ ಆಗಿರುವ ಅಶ್ವಿನ್ ಎಂ ಅವರು ಕಬಡ್ಡಿ ಪಟುಗಳು, ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು, ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.