Tag: ಕಪ್

  • ಕಪ್ ಈಗ್ಲೂ ಅವರದ್ದೇ, ಮುಂದಕ್ಕೆ ನಮ್ಮದು: ಡಿ.ಕೆ ಸುರೇಶ್ ವ್ಯಂಗ್ಯ

    ಕಪ್ ಈಗ್ಲೂ ಅವರದ್ದೇ, ಮುಂದಕ್ಕೆ ನಮ್ಮದು: ಡಿ.ಕೆ ಸುರೇಶ್ ವ್ಯಂಗ್ಯ

    ಬೆಂಗಳೂರು: ಕಪ್ ಈಗಲೂ ಅವರದ್ದೇ, ಮುಂದಕ್ಕೆ ನಮ್ಮದು ಎಂದು ಡಿ.ಕೆ ಸುರೇಶ್ (DK Suresh) ಹೇಳಿದ್ದಾರೆ.

    ಕಪ್ (Cup) ನಮ್ದೆ ಎಂಬ ಸಚಿವ ಆರ್ ಅಶೋಕ್ (R Ashok) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಡಿಕೆ ಸುರೇಶ್, ಈ ರೀತಿಯಾಗಿ ವ್ಯಂಗ್ಯವಾಡಿದ್ದಾರೆ. ಅಲ್ಲದೇ ಎಲ್ಲವನ್ನೂ ಸುರ್ಜೇವಾಲ ಹೇಳುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ನವರಿಗೆ ಬಹುಮತ ಬರಲ್ಲ, ಅದ್ಕೆ ಬೇರೆ ಪಕ್ಷದ ಜೊತೆ ಮಾತಾಡುವ ಪ್ರಯತ್ನ ಮಾಡ್ತಿದ್ದಾರೆ – ಸಿಎಂ

    ಅಶೋಕ್ ಹೇಳಿದ್ದೇನು..?: ಗುರುವಾರ ಬೆಂಗಳೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಸಚಿವ ಆರ್. ಅಶೋಕ್, ನಾವು ಮ್ಯಾಚ್ ಆಡೋದಕ್ಕೆ ಬಂದಿದ್ದೇವೆ, ಆಡಿ ಗೆಲ್ತೀವಿ. ಕಳೆದ ಬಾರಿ ಮೈತ್ರಿ ಸರ್ಕಾರ ಬಂತು. ನಂತರ ಅದು ಬಿದ್ದು ಹೋಯ್ತು. ಕಳೆದ 4 ವರ್ಷದಿಂದ ಸ್ಥಿರ ಸರ್ಕಾರ ಕೊಟ್ಟಿದ್ದು ಬಿಜೆಪಿ. ನಾವು ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ರಿಸಲ್ಟ್ ಬರಲಿ, ರಿಸಲ್ಟ್ ಬಂದ ಮೇಲೆ ಹೈಕಮಾಂಡ್ ನಾಯಕರ ಸೂಚನೆಯಂತೆ ನಡೆದುಕೊಳ್ತೇವೆ ಎಂದು ತಿಳಿಸಿದರು.

    ಜೆಡಿಎಸ್ ಜೊತೆಗೆ ಹೊಂದಾಣಿಕೆಯ ಪ್ರಮೇಯ ಬರೋದೇ ಇಲ್ಲ. ರಿಸಲ್ಟ್ ಬಂದ ಮೇಲೆ ತಂತ್ರಗಾರಿಕೆ ಇದ್ದೇ ಇರುತ್ತದೆ. ನಮಗೆ ವಿಶ್ವಾಸ ಇದೆ. ನಾವೇ ಸರ್ಕಾರ ಮಾಡುತ್ತೇವೆ. ನಮ್ಮ ಕಾರ್ಯಕರ್ತರು, ಜನರ ಮೇಲೆ ನಂಬಿಕೆ ಇದೆ. ನಾವೇ ಸಿಂಗಲ್, ಲಾರ್ಜೆಸ್ಟ್ ಪಕ್ಷ ಆಗಿ ಗೆದ್ದು ಬಂದರೂ ಸರ್ಕಾರ ರಚಿಸುವ ನೈತಿಕತೆ ಬಿಜೆಪಿಗೆ ಇದೆ ಎಂದಿದ್ದರು.

  • ಬಿಗ್‍ಬಾಸ್ ಕಪ್ ಗೆದ್ದ ಮಂಜು

    ಬಿಗ್‍ಬಾಸ್ ಕಪ್ ಗೆದ್ದ ಮಂಜು

    ಕಳ್ಳ ಮಂಜು ತುಂಟಾಟಕ್ಕೆ ಬಿಗ್‍ಬಾಸ್ ಒಂದು ಒಳ್ಳಯೆ ಪನಿಶ್ಮೆಂಟ್ ಕೊಟ್ಟಿದ್ದಾರೆ. ಮನೆಯಲ್ಲಿ ಹೆಚ್ಚು ತುಂಟಾಟದ ವೇಳೆ ಮಂಜು ಕೆಲವು ಎಡವಟ್ಟುಗಳನ್ನು ಮಾಡುತ್ತಿರುತ್ತಾರೆ. ಇದೀಗ ಒಂದು ಒಳ್ಳೆಯ ಶಿಕ್ಷೆಯನ್ನು ಮಂಜುಗೆ ಬಿಗ್‍ಬಾಸ್ ನೀಡಿದ್ದಾರೆ.

    2ದಿನದಿ ಹಿಂದೆ ದಿವ್ಯ ಸುರೇಶ್ ಮತ್ತು ಮಂಜುಪಾವಗಡ ಮಾತನಾಡುತ್ತಾ ಕುಳಿತ್ತಿದ್ದರು. ಈ ವೇಳೆ ಮಂಜು ಅಲ್ಲಿಂದ ಎದ್ದು ಹೋಗುವ ವೇಳೆ ಕಾಫಿ ಕಪ್ ಕೆಳಗೆ ಬಿದ್ದು ಒಡೆದು ಹೋಗಿತ್ತು. ಇದನ್ನು ಮನೆಯವರಿಗೆ ತಿಳಿಯದಂತೆ ಮಂಜು ಕಸದ ಬುಟ್ಟಿಯಲ್ಲಿ ಅಡಗಿಸಿಟ್ಟಿದ್ದರು. ಕಪ್ ಒಡೆದಿರುವ ವಿಚಾರವಾಗಿ ಮಂಜು ಬಿಗ್‍ಬಾಸ್ ಬಳಿ ಕ್ಷಮೆಯನ್ನು ಕೇಳಿದ್ದರು. ಆದರೆ ಬಿಗ್‍ಬಾಸ್ ಪನಿಶ್ಮೆಂಟ್ ನೀಡಿದ್ದಾರೆ. ಮಂಜು ಅವಸ್ಥೆಯನ್ನು ಕಂಡ ಮನೆಮಂದಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

    ಮಂಜು ತಪ್ಪಿಗೆ ಮನೆಗೆ ಬಂತು ಪುಟಾಣಿ ಕಪ್!
    ಮಂಜುನ ತಪ್ಪಿಗೆ ಬಿಗ್‍ಬಾಸ್ ಪುಟಾಣಿ ಕಪ್ ಒಂದನ್ನು ಮಂಜುಗಾಗಿ ಕಳಿಸಿಕೊಟ್ಟಿದ್ದಾರೆ. ಬಿಗ್ ಬಾಸ್ ಮುಂದಿನ ಆದೇಶದವರೆಗೆ ಮಂಜು ಈ ಪುಟಾಣಿ ಕಪ್‍ನಲ್ಲಿಯೇ ನೀರು, ಕಾಫಿಯನ್ನು ಕುಡಿಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದಾರೆ. ಸುಮಾರು 4 ಟೀ ಸ್ಪೂನ್ ನೀರು ಹಿಡಿಯುವ ಕಪ್ ಇದಾಗಿದೆ. ಈ ಕಪ್ ನೋಡಿದ ಮಂಜು ಅಯ್ಯಯಪಾ ಇದರಲ್ಲಿ ಎಷ್ಟು ಸಲ ನೀರು ಕುಡಿಬೇಕು ಎಂದು ಕಾಮಿಡಿಯಾಗಿ ಹೇಳುತ್ತಾ ಬಿಗ್‍ಬಾಸ್ ನೀಡಿರುವ ಕಪ್‍ನಲ್ಲಿ ನೀರು ಕುಡಿದಿದ್ದಾರೆ. ಪುಟಾಣಿ ಕಪ್ ನೋಡಿ ಮಂಜು ಕಂಗಲಾಗಿದ್ದಾರೆ ಮನೆ ಮಂದಿ ಮಾತ್ರ ಮಂಜುನನ್ನು ನೋಡಿ ಸಖತ್ ಮಜಾ ತೆಗೆದುಕೊಳ್ಳುತ್ತಿದ್ದಾರೆ.

    ಮಂಜು ಪಾವಗಡ ಕಳ್ಳಾಟಕ್ಕೆ ಬಿಗ್‍ಬಾಸ್ ಸಖತ್ ಫನ್ನಿಯಾಗಿರುವ ಪನಿಶ್ಮೆಂಟ್ ನೀಡಿದ್ದಾರೆ. ಮಂಜು ಈ ಪುಟಾಣಿ ಕಪ್ ಬಳಕೆಯನ್ನು ಹೇಗೆ ಮಾಡುತ್ತಾರೆ. ಬಿಗ್‍ಬಾಸ್ ಆದೇಶ ಬರುವ ಮೊದಲೇ ಮರೆತು ರೂಲ್ಸ್ ಬ್ರೇಕ್ ಮಾಡುತ್ತಾರ ಎಂದು ಕಾದುನೋಡಬೇಕಿದೆ.

  • ಈ ಬಾರಿ ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲುತ್ತದೆಯೆಂದು ಭಾವಿಸಬೇಡಿ: ಮೈಕಲ್ ವಾನ್

    ಈ ಬಾರಿ ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲುತ್ತದೆಯೆಂದು ಭಾವಿಸಬೇಡಿ: ಮೈಕಲ್ ವಾನ್

    – ಕೊಹ್ಲಿ ಎಡಗೈಯಲ್ಲಿ ಬ್ಯಾಟ್ ಮಾಡಿ ತಂಡವನ್ನು ಗೆಲ್ಲಿಸಬಹುದು

    ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಐಪಿಎಲ್ ಗೆಲ್ಲುತ್ತದೆ ಎಂದು ಭಾವಿಸಬೇಡಿ ಎಂದು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾನ್ ಹೇಳಿದ್ದಾರೆ.

    ಸೋಮವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡ ಹೀನಾಯವಾಗಿ ಸೋತಿದೆ. ಸತತ ನಾಲ್ಕು ಸೋಲಿನ ನಂತರವೂ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಪ್ಲೇ ಆಫ್‍ಗೆ ಆಯ್ಕೆಯಾಗಿದೆ. ಈ ಮೂಲಕ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಮೈಕಲ್ ವಾನ್ ಮಾತ್ರ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿರುವ ವಾನ್, ನಾನು ಆರಂಭದಿಂದಲೂ ಹೇಳುತ್ತಿದ್ದೇನೆ ಬೆಂಗಳೂರು ತಂಡ ಈ ಬಾರಿ ಕಪ್ ಗೆಲ್ಲುವುದು ಅನುಮಾನ. ಏಕೆಂದರೆ ಟೂರ್ನಿಯುದ್ದಕ್ಕೂ ಆರ್‌ಸಿಬಿ ಕಪ್ ಗೆಲ್ಲುವ ರೀತಿಯ ಪದರ್ಶನ ತೋರಿಲ್ಲ ಎಂದು ವಾನ್ ಹೇಳಿದ್ದಾರೆ. ಇದರ ಜೊತೆಗೆ ಇದು 2020 ಈ ವರ್ಷ ಏನೂ ಬೇಕಾದರೂ ಆಹಬಹುದು. ವಿರಾಟ್ ಕೊಹ್ಲಿಯವರು ಎಡಗೈನಲ್ಲಿ ಬ್ಯಾಟ್ ಮಾಡಿ ತಂಡವನ್ನು ಗೆಲ್ಲಿಸಬಹುದು ಆದರೆ ಅದು ಕಷ್ಟ ಎಂದು ವ್ಯಂಗ್ಯವಾಡಿದ್ದಾರೆ.

    ಬೆಂಗಳೂರು ತಂಡದಲ್ಲಿ ಮೂರು ನಾಕೌಟ್ ಪಂದ್ಯಗಳಲ್ಲಿ ಒತ್ತಡದ ನಡುವೆಯೂ ಉತ್ತಮವಾಗಿ ಆಡುವ ಆಟಗಾರರು ಇದ್ದಾರೆ. ಆರ್‌ಸಿಬಿ ಬ್ಯಾಟಿಂಗ್ ಲೈನಪ್ ಬಲಿಷ್ಠವಾಗಿದೆ. ಇದರ ಜೊತೆಗೆ ಒತ್ತಡದ ಜೊತೆಗೆ ಆಟವಾಡುವ ಅನುಭವಿ ಆಟಗಾರರು ಇದ್ದಾರೆ. ಬೆಂಗಳೂರು ಪರವಾಗಿ ಮಾತನಾಡಬೇಕು ಎಂದರೆ, ಅವರು ತಾಳ್ಮೆಯ ಜೊತೆಗೆ ಅಕ್ರಮಣಕಾರಿ ಆಟವನ್ನು ಆಡಬೇಕು ಎಂದು ಹೇಳಬಹುದು ಎಂದು ವಾನ್ ತಿಳಿಸಿದ್ದಾರೆ.

    ಐಪಿಎಲ್ ಆರಂಭದಲ್ಲಿ ವಿರಾಟ್ ಕೊಹ್ಲಿ ಪಡೆ ಉತ್ತಮ ಪ್ರದರ್ಶನ ನೀಡಿತ್ತು. ಆದರೆ ಕೊನೆಯಲ್ಲಿ ಎಡವಿ ನಾಲ್ಕು ಪಂದ್ಯಗಳನ್ನು ಸತತವಾಗಿ ಕೈಚೆಲ್ಲಿತ್ತು. ಆದರೂ ಆಡಿದ 14 ಪಂದ್ಯದಲ್ಲಿ 7 ಪಂದ್ಯಗಳನ್ನು ಗೆದ್ದು ನೆಟ್ ರನ್ ರೇಟ್ ಆಧಾರದ ಮೇಲೆ ಪ್ಲೇ ಆಫ್‍ಗೆ ಆಯ್ಕೆಯಾಗಿದೆ. ಜೊತೆಗೆ ಆರಂಭಿಕ ದೇವದತ್ ಪಡಿಕ್ಕಲ್, ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ನೆಚ್ಚಿನ ತಂಡ ಕಪ್ ಗೆಲ್ಲುತ್ತದೆ ಎಂದು ಆರ್‌ಸಿಬಿ ಅಭಿಮಾನಿಗಳು ಕಾಯುತ್ತಿದ್ದಾರೆ.

  • ಆರ್‌ಸಿಬಿ ಸೋತ್ರೂ ಲವ್ವಲ್ಲಿ ಕಪ್ ನಮ್ದೇ ಅಂತು ಪಡ್ಡೆಹುಲಿ!

    ಆರ್‌ಸಿಬಿ ಸೋತ್ರೂ ಲವ್ವಲ್ಲಿ ಕಪ್ ನಮ್ದೇ ಅಂತು ಪಡ್ಡೆಹುಲಿ!

    ಕೆಲ ದಿನಗಳ ಹಿಂದಷ್ಟೇ ಪಡ್ಡೆ ಹುಲಿ ಚಿತ್ರದ ಹಾಡುಗಳ ಜ್ಯೂಕ್ ಬಾಕ್ಸ್ ಬಿಡುಗಡೆಯಾಗಿದೆ. ಪ್ರೇಕ್ಷಕರು ಅಷ್ಟೂ ಹಾಡುಗಳನ್ನ ಒಟ್ಟೊಟ್ಟಿಗೇ ಕೇಳಿ ಸಂಭ್ರಮಿಸುತ್ತಾ ಪಡ್ಡೆಹುಲಿಯನ್ನು ಟ್ರೆಂಡಿಂಗ್ ನಲ್ಲಿಟ್ಟಿದ್ದಾರೆ. ಈ ಜ್ಯೂಕ್ ಬಾಕ್ಸ್ ನಲ್ಲಿ ಬರೋಬ್ಬರಿ ಹತ್ತು ಹಾಡುಗಳಿವೆ. ಅದಾಗಲೇ ಅದಕ್ಕೆ ಮತ್ತೊಂದು ಹಾಡನ್ನು ಚಿತ್ರತಂಡ ಸೇರಿಸಿ ಬಿಟ್ಟಿದೆ!

    ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿಗೆ ನೆನ್ನೆ ನಡೆದ ಐಪಿಎಲ್ ಲೀಗ್ ನಲ್ಲಿ ಆರ್‌ಸಿಬಿ ಸೋತು ಸುಣ್ಣವಾಗಿದ್ದೇ ಸ್ಫೂರ್ತಿಯಾಗಿ ಹೊಸ ಹಾಡೊಂದನ್ನು ರೂಪಿಸಲಾಗಿದೆ. ಈ ಹಾಡು ಇದೀಗ ಭರ್ಜರಿಯಾಗಿಯೇ ಬಿಡುಗಡೆಯಾಗಿದೆ.

    ಐಪಿಎಲ್ ಹೋಗಲಿ ಆರ್‌ಸಿಬಿ ಬೀಳಲಿ ಈ ಸಲ ಲವ್ವಲ್ಲಿ ಕಪ್ ನಮ್ದೆ… ಎಂಬ ವೀಡಿಯೋ ಹಾಡೀಗ ಬಿಡುಗಡೆಯಾಗಿದೆ. ಚೂರ್ ಚೂರಾಗಿದೆ ಅನ್ನೋ ಶೀರ್ಷಿಕೆಯ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಜನೀಶ್ ಮತ್ತು ಸಿಆರ್ ಬಾಬ್ಬಿ ಈ ಹಾಡನ್ನು ಹಾಡಿದ್ದಾರೆ.

    ಎನರ್ಜಿಟಿಕ್ ಆಗಿ ಮೂಡಿ ಬಂದಿರೋ ಈ ವೀಡಿಯೋ ಸಾಂಗ್ ನಲ್ಲಿ ನಾಯಕ ಶ್ರೇಯಸ್ ಕೂಡಾ ಎಂದಿನಂತೆ ಎನರ್ಜಿಟಿಕ್ ಆಗಿಯೇ ಸ್ಟೆಪ್ಸ್ ಹಾಕಿದ್ದಾರೆ. ಸಮ್ಮೋಹಕವಾಗಿ ಮೂಡಿ ಬಂದಿರೋ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿರುವವರು ಜಾನಿ ಮಾಸ್ಟರ್. ರಾಜಕುಮಾರ ಚಿತ್ರದ ಅಪ್ಪು ಡ್ಯಾನ್ಸ್ ಮತ್ತು ನಟಸಾರ್ವಭೌಮ ಚಿತ್ರದ ಓಪನ್ ದ ಬಾಟಲ್ ಮುಂತಾದ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದು ಇದೇ ಜಾನಿ ಮಾಸ್ಟರ್. ಅಲ್ಲು ಅರ್ಜುನ್, ಪ್ರಭಾಸ್ ಮುಂತಾದವರ ಚಿತ್ರಗಳಿಗೂ ನೃತ್ಯ ಸಂಯೋಜನೆ ಮಾಡಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆ ಹೊಂದಿರೋ ಜಾನಿ ಮಾಸ್ಟರ್ ಪಡ್ಡೆಹುಲಿ ಹಾಡಿಗೆ ಚೆಂದದ ನೃತ್ಯ ಸಂಯೋಜನೆ ಮಾಡಿದ್ದಾರೆ.

    ಇಂದು ಹನ್ನೊಂದು ಘಂಟೆಗೆ ಬಿಡುಗಡೆಯಾಗಿರೋ ಈ ಹಾಡೂ ಕೂಡಾ ಪಡ್ಡೆಹುಲಿಯ ಹಿಟ್ ಲಿಸ್ಟಿಗೆ ಸೇರಿಕೊಳ್ಳಲಿರೋದು ಪಕ್ಕಾ. ಇದೀಗ ಎಲ್ಲೆಡೆ ಐಪಿಎಲ್ ಜ್ವರ ಏರಿಕೊಂಡಿದೆ. ಆರ್‍ಸಿಬಿ ಸೋತಿರೋದು ಎಲ್ಲರಿಗೂ ನಿರಾಸೆ ತಂದಿದೆ. ಇದೇ ಹೊತ್ತಿನಲ್ಲಿ ಬಿಡುಗಡೆಯಾಗಿರೋ ಈ ಹಾಡು ಪಡ್ಡೆಹುಲಿಯನ್ನು ಮತ್ತಷ್ಟು ಜನರಿಗೆ ತಲುಪಿಸೋದರಲ್ಲಿ ಯಾವುದೇ ಸಂಶಯಗಳಿಲ್ಲ.