Tag: ಕಪಿಲ್ ಸಿಬಲ್

  • ಹಣ ಹೊರಗಡೆ ಸಿಕ್ಕಿದ್ರೆ ಜಡ್ಜ್‌ ದುರ್ವತನೆ ಹೇಗೆ ಆಗುತ್ತೆ: ಸಿಬಲ್‌ ವಾದ

    ಹಣ ಹೊರಗಡೆ ಸಿಕ್ಕಿದ್ರೆ ಜಡ್ಜ್‌ ದುರ್ವತನೆ ಹೇಗೆ ಆಗುತ್ತೆ: ಸಿಬಲ್‌ ವಾದ

    ನವದೆಹಲಿ: ದೆಹಲಿಯ (Delhi) ತಮ್ಮ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಯಶವಂತ್ ವರ್ಮಾ (Justice Yashwant Varma) ಅವರನ್ನು ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ.

    ತಮ್ಮ ವಿರುದ್ಧ ವರದಿ ನೀಡಿದ ತ್ರಿಸದಸ್ಯ ನ್ಯಾಯಾಂಗ ಆಂತರಿಕ ಸಮಿತಿಯ ಕಾನೂನು ಬದ್ಧತೆಯನ್ನು ನ್ಯಾ ಯಶವಂತ್ ವರ್ಮಾ ಪ್ರಶ್ನೆ ಮಾಡಿರುವುದಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

    ಸಮಿತಿ ತನ್ನ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವವರೆಗೂ ಕಾದು ನಂತರ ಸಮಿತಿಯ ಕಾನೂನು ಬದ್ಧತೆ ಪ್ರಶ್ನಿಸಲು ಕಾರಣವೇನು ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎ ಜಿ ಮಸೀಹ್ ಪೀಠ ಪ್ರಶ್ನಿಸಿತು. ಇದನ್ನೂ ಓದಿ: ನಂಬರ್ ಇಲ್ಲ, ಸಂಪರ್ಕದಲ್ಲೂ ಇಲ್ಲ, ದರ್ಶನ್‌ಗೆ 100% ಜವಾಬ್ದಾರಿ ಇದೆ: ರಮ್ಯಾ

    ನ್ಯಾ. ವರ್ಮಾ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ (Kapil Sibal) ನ್ಯಾ. ವರ್ಮಾ ವಿರುದ್ಧ ಹಾಗೆ ಆರೋಪ ಮಾಡಲಾಗದು. ನಗದು ಹೊರಗಡೆ ಸಿಕ್ಕಿದರೆ ಅದು ನ್ಯಾಯಾಧೀಶರ ದುರ್ವರ್ತನೆ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿಸಿದರು.  ಇದನ್ನೂ ಓದಿ: 72 ಕೋಟಿ ಮೌಲ್ಯದ ಆಸ್ತಿಯನ್ನು ಸಂಜಯ್ ದತ್ ಹೆಸರಿಗೆ ಬರೆದಿಟ್ಟ ಅಭಿಮಾನಿ

    ಪೊಲೀಸರು ಅಥವಾ ಆಂತರಿಕ ಸಮಿತಿಯು ನಗದು ಯಾರಿಗೆ ಸೇರಿದ್ದು ಎಂಬುದನ್ನು ಪತ್ತೆ ಹಚ್ಚಿಲ್ಲ. ನ್ಯಾಯಾಧೀಶರ ವಿರುದ್ಧ ಮಾಧ್ಯಮಗಳಲ್ಲಿ ಆರೋಪ ಮಾಡುವುದು, ಸಾರ್ವಜನಿಕರ ಅವಲೋಕನಗಳು ಹಾಗೂ ನ್ಯಾಯಾಧೀಶರ ನಡೆ ಬಗ್ಗೆ ಚರ್ಚಿಸುವುದು ಎಲ್ಲವೂ ನಿಷಿದ್ಧ. ಹೀಗೆ ನಡೆಯಲು ವಿಚಾರಣಾ ಪ್ರಕ್ರಿಯೆ ಅವಕಾಶ ಮಾಡಿಕೊಟ್ಟಿದ್ದರೆ ಅದು ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪಿನ ಉಲ್ಲಂಘನೆಯಾಗುತ್ತದೆ ಎಂದು ಸಿಬಲ್ ವಾದಿಸಿದರು. ಕೋರ್ಟ್‌ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

  • ಹಳೇ ಕೇಸ್‌ ಕೇಳಿದ ಸುಪ್ರೀಂ – ದರ್ಶನ್‌ಗೆ ಎದುರಾಗುತ್ತಾ ಸಂಕಷ್ಟ?

    ಹಳೇ ಕೇಸ್‌ ಕೇಳಿದ ಸುಪ್ರೀಂ – ದರ್ಶನ್‌ಗೆ ಎದುರಾಗುತ್ತಾ ಸಂಕಷ್ಟ?

    ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ (Supreme Court) ದರ್ಶನ್‌ ಮೇಲಿರುವ ಹಳೇ ಕ್ರಿಮಿನಲ್‌ ಪ್ರಕರಣಗಳ ಮಾಹಿತಿಯನ್ನು ಕೇಳಿದೆ.

    ದರ್ಶನ್ (Darshan), ಪವಿತ್ರಾ ಗೌಡ ಸೇರಿ ಪ್ರಮುಖ ಆರೋಪಿಗಳಿಗೆ ಹೈಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು (Bengaluru Police) ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನ್ಯಾ. ಜೆ.ಬಿ ಪಾರ್ದಿವಾಲಾ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ನಡೆಯಿತು.

    ವಿಚಾರಣೆ ಸಂದರ್ಭದಲ್ಲಿ ಬೆಂಗಳೂರು ಪೊಲೀಸರ ಪರ ವಕೀಲರು, ಈ ಹಿಂದೆಯೂ ಹಲವು ಪ್ರಕರಣಗಳು ದರ್ಶನ್‌ ವಿರುದ್ಧ ದಾಖಲಾಗಿದೆ. ಗಂಭೀರ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದಾರೆ ಎಂದು ಗಮನಕ್ಕೆ ತಂದರು. ಈ ವೇಳೆ ಕೋರ್ಟ್‌, ದರ್ಶನ್‌ ಮೇಲಿರುವ ಹಳೆ ಕ್ರಿಮಿನಲ್‌ ಪ್ರಕರಣಗಳ ವಿವರ ನೀಡುವಂತೆ ಸೂಚಿಸಿತು. ಇದನ್ನೂ ಓದಿ: ಟಾಯ್ಲೆಟ್ ರೂಂನಿಂದ ವಿಚಾರಣೆಗೆ ಹಾಜರು – ನ್ಯಾಯಾಲಯಕ್ಕೆ ಅವಮಾನ ಮಾಡಿದವನಿಗೆ 1 ಲಕ್ಷ ದಂಡ!

     

    ವಿಚಾರಣೆ ವೇಳೆ ಹೈಕೋರ್ಟ್ ಆದೇಶಕ್ಕೆ ನ್ಯಾ. ಪಾರ್ದಿವಾಲ ಅವರು, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಹೈಕೋರ್ಟ್ ತನ್ನ ವಿವೇಚನೆಯನ್ನು ಸರಿಯಾಗಿ ಬಳಸಿಲ್ಲ ಎಂದು ನಾವು ಭಾವಿಸುತ್ತೇವೆ. ಹೈಕೋರ್ಟ್ ಆದೇಶವನ್ನು ಹೇಗೆ ನಿರ್ದೇಶಿಸಿದೆ ಎಂಬುದನ್ನು ನೀವು ನೋಡಿರಬೇಕು. ನೀವು ಏನು ಹೇಳುತ್ತೀರಿ ಎಂದು ದರ್ಶನ್‌ ಪರ ವಕೀಲ ಕಪಿಲ್‌ ಸಿಬಲ್‌ ಅವರನ್ನು ಪ್ರಶ್ನಿಸಿದರು.

    161, 164 ಅಡಿಯಲ್ಲಿ ದಾಖಲಾದ ಹೇಳಿಕೆಯ ಬಗ್ಗೆ ವಾದಿಸಲು ದರ್ಶನ್‌ ಪರ ಕಪಿಲ್‌ ಸಿಬಲ್ ಮುಂದಾದರು. ಇದಕ್ಕೆ ಅವಕಾಶ ನೀಡದ ಕೋರ್ಟ್‌ ಅರ್ಜಿ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿತು.

  • ಮುಸ್ಲಿಮರು ಹಿಂದೂ ಮಂಡಳಿಗಳ ಭಾಗವಾಗಲು ಅವಕಾಶ ನೀಡುತ್ತೀರಾ – ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

    ಮುಸ್ಲಿಮರು ಹಿಂದೂ ಮಂಡಳಿಗಳ ಭಾಗವಾಗಲು ಅವಕಾಶ ನೀಡುತ್ತೀರಾ – ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

    – ವಕ್ಫ್ ತಿದ್ದುಪಡಿ ಕಾಯ್ದೆ ಸಿಂಧುತ್ವವನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ಆರಂಭ
    – ಐತಿಹಾಸಿಕ ಕಟ್ಟಡಗಳಿಗೆ ದಾಖಲೆಗಳಿಲ್ಲ ಹೇಗೆ ನೋಂದಣಿ ಮಾಡುತ್ತೀರಿ?
    – ವಕ್ಫ್ ಕಾಯ್ದೆಯಿಂದ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಎಂದ ಅರ್ಜಿದಾರರು
    – ಧಾರ್ಮಿಕ ಸಂಸ್ಥೆಯ ಮೇಲೆ ಹಸ್ತಕ್ಷೇಪ ಇಲ್ಲ, ಪಾರದರ್ಶಕತೆ ಉದ್ದೇಶ ಎಂದ ಕೇಂದ್ರ

    ನವದೆಹಲಿ: ಮುಸ್ಲಿಮರು (Muslims) ಹಿಂದೂ (Hindu) ದತ್ತಿ ಮಂಡಳಿಗಳ ಭಾಗವಾಗಲು ಅವಕಾಶ ನೀಡುತ್ತೀರಾ ಎಂದು ಸುಪ್ರೀಂ ಕೋರ್ಟ್‌ (Supreme Court) ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

    ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ 73 ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಆರಂಭಿಸಿದೆ. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾ. ಸಂಜಯ್ ಕುಮಾರ್ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಿತು.

    ವಕ್ಫ್ ತಿದ್ದುಪಡಿ ಕಾಯ್ದೆ (Waqf Amendment Act) ವಿರುದ್ಧ ಸಲ್ಲಿಸಿದ್ದ ಅರ್ಜಿದಾರರ ಪರ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಗ್ವಿ, ರಾಜೀವ್ ಧವನ್, ಹುಜೇಫಾ ಅಹ್ಮದಿ ತೀಕ್ಷ್ಣವಾದ ವಾದಗಳನ್ನು ಮಂಡಿಸಿದರು. ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕಾಯ್ದೆಯನ್ನು ಸಮರ್ಥಿಸಿಕೊಂಡರು.

    ಅರ್ಜಿದಾರರು ಕಾಯ್ದೆಯು ಸಂವಿಧಾನದ 14 (ಸಮಾನತೆ), 15 (ತಾರತಮ್ಯ ನಿಷೇಧ), 25 (ಧಾರ್ಮಿಕ ಸ್ವಾತಂತ್ರ್ಯ), 26 (ಧಾರ್ಮಿಕ ಸಂಸ್ಥೆಗಳ ಸ್ವಾಯತ್ತತೆ) ಮತ್ತು 300ಎ (ಆಸ್ತಿ ಹಕ್ಕು) ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದರು.  ಇದನ್ನೂ ಓದಿ: ರೀಲ್ಸ್ ಕೇಸ್ – ರಜತ್ ಜೈಲಿಗೆ, ವಿನಯ್‌ಗೆ 500 ರೂ. ದಂಡ

    ಕಾಯ್ದೆಯ ಕೆಲವು ನಿಬಂಧನೆಗಳು, ವಿಶೇಷವಾಗಿ ‘ವಕ್ಫ್ ಬೈ ಯೂಸರ್’ (ಉಪಯೋಗದಿಂದ ವಕ್ಫ್ ಎಂದು ಗುರುತಿಸುವ ಪರಿಕಲ್ಪನೆ) ರದ್ದುಗೊಳಿಸಿರುವುದು, ದಾಖಲೆ ಇಲ್ಲದ ಐತಿಹಾಸಿಕ ವಕ್ಫ್ ಆಸ್ತಿಗಳನ್ನು ಕಳೆದುಕೊಳ್ಳುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಜಮಿಯತ್ ಉಲಮಾ-ಎ-ಹಿಂದ್ ಮತ್ತು ಇತರರ ಪರವಾಗಿ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ (Kapil Sibal), ಕಾಯ್ದೆಯ ಸೆಕ್ಷನ್ 3(ಆರ್) ಅನ್ನು ಪ್ರಶ್ನಿಸಿದರು. ವಕ್ಫ್ ದಾನ ನೀಡಲು ವ್ಯಕ್ತಿಯು ಕಳೆದ 5 ವರ್ಷಗಳಿಂದ ಇಸ್ಲಾಂ ಧರ್ಮವನ್ನು ಆಚರಿಸಿರಬೇಕು ಎಂಬ ಷರತ್ತು ಸಂವಿಧಾನದ 25 ಮತ್ತು 26ನೇ ಅನುಚ್ಛೇಧವನ್ನು ಉಲ್ಲಂಘಿಸುತ್ತದೆ. ರಾಜ್ಯವು ಒಬ್ಬ ವ್ಯಕ್ತಿಯ ಧರ್ಮವನ್ನು ಪರೀಕ್ಷಿಸುವ ಹಕ್ಕನ್ನು ಹೇಗೆ ಹೊಂದಿದೆ ಎಂದು ವಾದಿಸಿದರು.

    ವಕ್ಫ್ ಬೈ ಯೂಸರ್ ರದ್ದತಿಯನ್ನು ಖಂಡಿಸಿದ ಅವರು, ಶತಮಾನಗಳಿಂದ ವಕ್ಫ್ ಆಗಿ ಉಪಯೋಗದಲ್ಲಿರುವ ಆಸ್ತಿಗಳಿಗೆ ದಾಖಲೆ ಇರುವುದಿಲ್ಲ. ಇಂತಹ ಆಸ್ತಿಗಳನ್ನು ರದ್ದುಗೊಳಿಸುವುದು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದರು. ಸೆಕ್ಷನ್ 7(ಎ) ಕುರಿತು ವಾದಿಸಿ ಆಸ್ತಿಗಳ ಸ್ಥಿತಿಯನ್ನು ಪರಿಶೀಲಿಸಲು 20 ವರ್ಷಗಳ ಕಾಲಾವಕಾಶ ಬೇಕಾಗಬಹುದು ಎಂದು ತಿಳಿಸಿದರು.

     

     

    ಅಭಿಷೇಕ್ ಮನು ಸಿಂಗ್ವಿ ವಾದಿಸಿ, ಕಾಯ್ದೆಯು ದೇಶಾದ್ಯಂತ ವಕ್ಫ್ ಆಸ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ಪ್ರಕರಣವನ್ನು ಹೈಕೋರ್ಟ್‌ಗೆ ವರ್ಗಾಯಿಸಬಾರದು. ಸುಪ್ರೀಂ ಕೋರ್ಟ್‌ನಲ್ಲಿಯೇ ವಿಚಾರಣೆ ನಡೆಯಬೇಕು. ವಕ್ಫ್ ಕೌನ್ಸಿಲ್‌ನಲ್ಲಿ ಮುಸ್ಲಿಮೇತರ ಸದಸ್ಯರ ಸೇರ್ಪಡೆ ಸಂವಿಧಾನದ 26ನೇ ನಿಯಮದ ಸ್ಪಷ್ಟ ಉಲ್ಲಂಘನೆ ಎಂದು ಕರೆದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು – ಉರ್ದು ಭಾರತದ ಭಾಷೆ, ಒಂದು ಧರ್ಮಕ್ಕೆ ಸೀಮಿತವಲ್ಲ

    ಹುಜೇಫಾ ಅಹ್ಮದಿ ವಾದ ಮಂಡಿಸಿ, ವಕ್ಫ್ ಬೈ ಯೂಸರ್ ಇಸ್ಲಾಂನ ಸ್ಥಾಪಿತ ಆಚರಣೆಯಾಗಿದೆ. ಇದನ್ನು ಕಿತ್ತುಕೊಳ್ಳುವಂತಿಲ್ಲ. ಈ ನಿಬಂಧನೆಯ ರದ್ದತಿಯು ರಾಮಜನ್ಮಭೂಮಿ-ಬಾಬರಿ ಮಸೀದಿ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ನಿಂದ ಗುರುತಿಸಲ್ಪಟ್ಟ ತತ್ವಗಳಿಗೆ ವಿರುದ್ಧವಾಗಿದೆ ಎಂದು ವಾದಿಸಿದರು. ರಾಜೀವ್ ಧವನ್ ಮತ್ತು ಇತರರು ವಾದಿಸಿ, ವಕ್ಫ್ ಆಸ್ತಿಗಳ ಮೇಲಿನ ರಾಜ್ಯದ ಹೆಚ್ಚಿನ ನಿಯಂತ್ರಣವು ಮುಸ್ಲಿಂ ಸಮುದಾಯದ ಧಾರ್ಮಿಕ ಸ್ವಾಯತ್ತತೆಯನ್ನು ಕಸಿದುಕೊಳ್ಳುತ್ತದೆ ಎಂದು ಒತ್ತಿ ಹೇಳಿದರು.

    ಅರ್ಜಿದಾರರ ವಾದಗಳಿಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸರ್ಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಾಯ್ದೆಯು ಯಾವುದೇ ಧಾರ್ಮಿಕ ವ್ಯವಸ್ಥೆ ಅಥವಾ ಸಂಸ್ಥೆಯ ಮೇಲೆ ಹಸ್ತಕ್ಷೇಪ ಮಾಡುವುದಿಲ್ಲ. ಇದು ವಕ್ಫ್ ಆಸ್ತಿಗಳ ದುರ್ಬಳಕೆ ತಡೆಯಲು ಮತ್ತು ಆಡಳಿತದಲ್ಲಿ ಪಾರದರ್ಶಕತೆ, ತಂತ್ರಜ್ಞಾನ-ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರುವ ಗುರಿಯನ್ನು ಹೊಂದಿದೆ ಎಂದು ಸಮರ್ಥಿಸಿಕೊಂಡರು.

    ವಕ್ಫ್ ಬೈ ಯೂಸರ್ ರದ್ದತಿಯ ಬಗ್ಗೆ ವಾದ ಮಂಡಿಸಿದ ಅವರು, ಇದು ದುರ್ಬಳಕೆಯನ್ನು ತಡೆಯಲು ಮಾಡಿರುವ ಕ್ರಮವಾಗಿದೆ. ಆದರೆ, ನ್ಯಾಯಾಲಯದಿಂದ ವಕ್ಫ್ ಎಂದು ಘೋಷಿತವಾದ ಆಸ್ತಿಗಳ ಸ್ಥಿತಿಯನ್ನು ಬದಲಾಯಿಸಲಾಗುವುದಿಲ್ಲ. ಜಂಟಿ ಸಂಸದೀಯ ಸಮಿತಿಯು 38 ಸಭೆಗಳನ್ನು ನಡೆಸಿ, 98.2 ಲಕ್ಷ ಮನವಿ ಪತ್ರಗಳನ್ನು ಪರಿಶೀಲಿಸಿ ಕಾಯ್ದೆಗೆ ಶಿಫಾರಸು ಮಾಡಿದೆ ಎಂದು ತಿಳಿಸಿದರು.

    ವಿಚಾರಣೆ ವೇಳೆ ನ್ಯಾಯಧೀಶರು ಹಲವು ಪ್ರಶ್ನೆ ಕೇಳಿದರು. ವಕ್ಫ್ ಬೈ ಯೂಸರ್ ರದ್ದತಿಯಿಂದ ಶತಮಾನಗಳಿಂದ ವಕ್ಫ್ ಆಗಿರುವ ಆಸ್ತಿಗಳಿಗೆ ದಾಖಲೆ ಇಲ್ಲದಿದ್ದರೆ ಏನು ಮಾಡುವಿರಿ? ಇದು ದೊಡ್ಡ ಸಮಸ್ಯೆಯನ್ನು ಉಂಟುಮಾಡಬಹುದು? 13, 14, 15ನೇ ಶತಮಾನಗಳಲ್ಲಿ ನಿರ್ಮಿತವಾದ ಮಸೀದಿಗಳಿಗೆ ಖರೀದಿ ದಾಖಲೆ ತೋರಿಸಲು ಸಾಧ್ಯವಿಲ್ಲ. ಇಂತಹ ಆಸ್ತಿಗಳನ್ನು ಹೇಗೆ ನೋಂದಾಯಿಸುವಿರಿ? ಎಂದು ಎಂದು ಸಿಜೆಐ ಸಂಜೀವ್ ಖನ್ನಾ ಕೇಂದ್ರವನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮೆಹ್ತಾ, ಕಾಯ್ದೆಯು ನ್ಯಾಯವಿಚಾರಣೆಯ ಹಕ್ಕನ್ನು ಕಿತ್ತುಕೊಂಡಿಲ್ಲ ಎಂದು ಉತ್ತರಿಸಿದರು.  ಇದನ್ನೂ ಓದಿ:ರೀಲ್ಸ್ ಕೇಸ್: ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ರಜತ್

    ಹಿಂಸಾಚಾರದ ಬಗ್ಗೆ ಆತಂಕ: ಕಾಯ್ದೆಯ ವಿರುದ್ಧ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಬಗ್ಗೆ ನ್ಯಾಯಾಲಯವು ಆತಂಕ ವ್ಯಕ್ತಪಡಿಸಿತು. ಪ್ರಕರಣವು ನ್ಯಾಯಾಲಯದ ಮುಂದಿರುವಾಗ ಹಿಂಸಾಚಾರ ನಡೆಯುವುದು ತೀರಾ ತೊಂದರೆದಾಯಕ ಎಂದು ಮುಖ್ಯ ನ್ಯಾಯಮೂರ್ತಿ ಖನ್ನಾ ಅಭಿಪ್ರಾಯಪಟ್ಟರು. ಮುರ್ಷಿದಾಬಾದ್‌ನಲ್ಲಿ ಮೂವರು ಸಾವನ್ನಪ್ಪಿದ ಘಟನೆಯನ್ನು ಉಲ್ಲೇಖಿಸಿ, 221 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಲಾಯಿತು. ಪ್ರತಿಭಟನೆ ಮೂಲಕ ವ್ಯವಸ್ಥೆಯ ಮೇಲೆ ಒತ್ತಡ ಹೇರಬಹುದು ಎಂದು ಭಾವಿಸಿದ್ದಾರೆ ಎಂದು‌ ಮೆಹ್ತಾ ಹೇಳಿದರು. ಇದಕ್ಕೆ ಆಕ್ರೋಶಗೊಂಡ ಸಿಬಲ್ ಯಾರು ಒತ್ತಡ ಹೇರುತ್ತಿದ್ದಾರೆ ಎಂದು ಪ್ರಶ್ನಿಸಿದರು.

    ಮಧ್ಯಪ್ರವೇಶ ಮಾಡಿದ ಸಿಜೆಐ ಖನ್ನಾ, ಕಾಯ್ದೆಯಲ್ಲಿ ಹಲವು ಉತ್ತಮ ಅಂಶಗಳಿಗೆ ಸರಿಪಡಿಸಿಕೊಳ್ಳಲು ಇದು ಸಕಾಲ ಎಂದು ಹೇಳಿ ಬಳಿಕ ಯಾವುದೇ ಮಧ್ಯಂತರ ಆದೇಶವನ್ನು ಹೊರಡಿಸದೇ ವಿಚಾರಣೆಯನ್ನು ನಾಳೆಗೆ ಮುಂದೂಡಿತು.

  • ಇವಿಎಂ ಜೊತೆಗೆ ವಿವಿಪ್ಯಾಟ್ ಮತ ಎಣಿಕೆಗೆ ಆಗ್ರಹ – ವಿಚಾರಣೆಗೆ ಒಪ್ಪಿದ ಸುಪ್ರೀಂ

    ಇವಿಎಂ ಜೊತೆಗೆ ವಿವಿಪ್ಯಾಟ್ ಮತ ಎಣಿಕೆಗೆ ಆಗ್ರಹ – ವಿಚಾರಣೆಗೆ ಒಪ್ಪಿದ ಸುಪ್ರೀಂ

    ನವದೆಹಲಿ: ಇವಿಎಂಗಳೊಂದಿಗೆ ವಿವಿಪ್ಯಾಟ್ ಯಂತ್ರದ ಸ್ಲಿಪ್‌ಗಳನ್ನು ಹೊಂದಾಣಿಕೆ ಮಾಡುವ ಅರ್ಜಿಯನ್ನು ಮುಂದಿನವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಎಡಿಆರ್ (Association for Democratic Reforms) ಸಲ್ಲಿಸಿರುವ ಅರ್ಜಿಯನ್ನು ಮುಂದಿನ ಮಂಗಳವಾರ ಅಥವಾ ಬುಧವಾರಕ್ಕೆ ಪಟ್ಟಿ ಮಾಡಲಾಗುವುದು ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ಹೇಳಿದೆ.

    ಅರ್ಜಿದಾರರ ಸಂಘಟನೆ ಎಡಿಆರ್ ಪರವಾಗಿ ಸುಪ್ರೀಂ ಕೋರ್ಟ್‌ಗೆ ಹಾಜರಾದ ವಕೀಲ ಪ್ರಶಾಂತ್ ಭೂಷಣ್ ಅವರು ಅರ್ಜಿಯನ್ನು ಶೀಘ್ರ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ವಿವಿಪ್ಯಾಟ್ ವಿಚಾರವಾಗಿ ಸಲ್ಲಿಸಲಾಗಿರುವ ಮತ್ತೊಂದು ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಕಳುಹಿಸಿದೆ. ಇದನ್ನೂ ಓದಿ: ಬರ ಪರಿಹಾರ; ಕೇಂದ್ರ V/S ಕರ್ನಾಟಕ ಸರ್ಕಾರ – ರಾಜ್ಯ ‘ಸುಪ್ರೀಂ’ ಮೆಟ್ಟಿಲೇರಿದ್ಯಾಕೆ?

    ಹಿರಿಯ ವಕೀಲ ಗೋಪಾಲ್ ಶಂಕರ್ ನಾರಾಯಣನ್ ಕೋರ್ಟ್ ಮುಂದೆ ಹಾಜರಾಗಿ, ಚುನಾವಣೆ ಹತ್ತಿರವಿದ್ದು, ಈ ಬಗ್ಗೆ ವಿಚಾರಣೆ ನಡೆಸದಿದ್ದರೆ ಈ ಅರ್ಜಿ ನಿಷ್ಫಲವಾಗಲಿದೆ ಎಂದು ವಾದಿಸಿದರು. ಅರ್ಜಿಯ ಪರಿಸ್ಥಿತಿ ಅರಿತ ಪೀಠವು ಮುಂದಿನ ವಾರ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ತಿಳಿಸಿತು. ವಾದ-ಪ್ರತಿವಾದ ಆಲಿಸಿದ ಬಳಿಕ ಪೀಠ ವಿಚಾರಣೆಗೆ ಸಮ್ಮತಿ ಸೂಚಿಸಿತು. ಇದನ್ನೂ ಓದಿ: ದೇವೇಗೌಡರು ನಾಯಕರನ್ನು ಬೆಳೆಸಿದ್ದಾರೆಯೇ ಹೊರತು ತುಳಿದು ಗೊತ್ತಿಲ್ಲ: ವೆಂಕಟೇಶ್‌ಗೆ ಪ್ರತಾಪ್‌ ಸಿಂಹ ತಿರುಗೇಟು

    ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸುಪ್ರೀಂ ಕೋರ್ಟ್‌ನಲ್ಲಿ ವಿವಿಪ್ಯಾಟ್ (ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ -ವಿವಿಪಿಎಟಿ) ಸ್ಲಿಪ್‌ಗಳನ್ನು ಇವಿಎಂ ಯಂತ್ರಗಳೊಂದಿಗೆ ಹೊಂದಾಣಿಕೆ ಮಾಡುವಂತೆ ಒತ್ತಾಯಿಸಿ ಅರ್ಜಿ ಸಲ್ಲಿಸಿದೆ. VVPAT ಸ್ವತಂತ್ರ ಮತ ಪರಿಶೀಲನಾ ಯಂತ್ರವಾಗಿದ್ದು, ಮತದಾರರು ಚಲಾಯಿಸಿದ ಮತವನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತೋರಿಸುತ್ತದೆ. ಪ್ರಸ್ತುತ VVPAT ಸ್ಲಿಪ್‌ಗಳ ಮೂಲಕ ಕೇವಲ ಐದು ಆಯ್ದ EVM ಗಳನ್ನು ಪರಿಶೀಲಿಸುವ ಅಭ್ಯಾಸವಿದೆ.

    ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಅರುಣ್ ಕುಮಾರ್ ಅಗರ್ವಾಲ್ ವಿವಿಪ್ಯಾಟ್ ಸ್ಲಿಪ್‌ಗಳನ್ನು ಸಂಪೂರ್ಣ ಎಣಿಕೆ ಮತ್ತು ಇವಿಎಂಗಳೊಂದಿಗೆ ಹೊಂದಿಸುವಂತೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದಾರೆ.

  • ಕೋರ್ಟ್‌ನಲ್ಲಿ ರಾಮ ಮಂದಿರ ವಿರುದ್ಧ ಕಪಿಲ್‌ ಸಿಬಲ್‌ರನ್ನು ಕಳುಹಿಸಿದ್ದು ಯಾರು: ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ

    ಕೋರ್ಟ್‌ನಲ್ಲಿ ರಾಮ ಮಂದಿರ ವಿರುದ್ಧ ಕಪಿಲ್‌ ಸಿಬಲ್‌ರನ್ನು ಕಳುಹಿಸಿದ್ದು ಯಾರು: ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ

    ಬೆಂಗಳೂರು: ರಾಮ ಮಂದಿರದ (Ram Mandir) ಬೀಗ ತೆಗಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದು ರಾಜೀವ್ ಗಾಂಧಿಯಾದರೆ ರಾಮ‌ ಮಂದಿರದ ವಿರುದ್ಧವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಲು ಕಪಿಲ್ ಸಿಬಲ್‌ರನ್ನು (Kapil Sibal) ಕಳುಹಿಸಿದ್ದು ಯಾರು ಎಂದು ಪ್ರಶ್ನಿಸುವ ಮೂಲಕ ಬಿಜೆಪಿ (BJP) ಕಾಂಗ್ರೆಸ್‌ಗೆ ತಿರುಗೇಟು ನೀಡಿದೆ.

    ನಾವು ರಾಮ ಭಕ್ತರೇ, ರಾಮ ಮಂದಿರದ ಬಾಗಿಲು ತೆಗೆಸಿದ್ದೇ ನಾವು ಎಂದು ಕಾಂಗ್ರೆಸ್‌ (Congress) ಹೇಳಿದ್ದಕ್ಕೆ ಬಿಜೆಪಿ ಈಗ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದೆ. ಇದನ್ನೂ ಓದಿ: ಅಯೋಧ್ಯೆ ರಾಮ ಮಂತ್ರಾಕ್ಷತೆ ಅಂದ್ರೆ ಏನು?, ಯಾಕಿಷ್ಟು ಮಹತ್ವ?, ಹೇಗೆಲ್ಲಾ ಬಳಸಬಹುದು?

    ಪೋಸ್ಟ್‌ನಲ್ಲಿ ಏನಿದೆ?
    ಹಳ್ಳಿ ಹಳ್ಳಿಗಳಲ್ಲಿ ರಾಮ ಮಂದಿರ ನಿರ್ಮಾಣವಾಗಿದ್ದು ರಾಮ ಭಕ್ತರಿಂದ, ಆದರೆ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಿ ಅದರಿಂದ ಬರುವ ಆದಾಯವನ್ನು ದೋಚಿದ್ದು ನೀವು!

    ಮಹಾತ್ಮಾ ಗಾಂಧಿಯವರ ರಾಮರಾಜ್ಯದ ಕಲ್ಪನೆಯನ್ನು ಮೂಲೆಗೆ ಸೇರಿಸಿದ್ದು ಕಾಂಗ್ರೆಸ್, ಆದರೆ ಇಂದು ರಾಮ ಮಂದಿರ ನಿರ್ಮಿಸಿ ಅವರ ಕಲ್ಪನೆಗೆ ಜೀವ ತುಂಬಿದ್ದು ಮೋದಿ ಸರ್ಕಾರ!

     

    ಸ್ವಾತಂತ್ರ್ಯ ದೊರಕಿದಾಗಿನಿಂದ ರಾಮ ಮಂದಿರದ ಕಲ್ಪನೆ ದೇಶದ ಜನರಲ್ಲಿತ್ತು, ಅಂದಿನಿಂದ ಇಂದಿನವರೆಗೂ ನಿರ್ಮಾಣವಾಗದ ರಾಮ ಮಂದಿರ ನಿಮ್ಮ ರಾಜೀವ್ ಗಾಂಧಿ ಕಾಲಘಟ್ಟದಲ್ಲಿ ಯಾಕೆ ಆಗಲಿಲ್ಲ? ತಡೆದವರು ಯಾರು? ರಾಮ ಮತ್ತು ರಾಮನ ಆದೇಶವನ್ನು ಪಾಲಿಸುತ್ತಾ ಬಂದಿದ್ದರೆ ಕಾಂಗ್ರೆಸ್ ಪಕ್ಷ ರಾಮನನ್ನು ಕೇವಲ ಕಾಲ್ಪನಿಕ ಎಂದು ಏಕೆ ವ್ಯಂಗ್ಯ ಮಾಡುತ್ತಿತ್ತು ?

    ಕಳೆದ 70 ವರ್ಷಗಳಿಂದಲೂ ಹಿಂದುಗಳ ಆದರ್ಶ ಪುರುಷನಾದ ಶ್ರೀ ರಾಮನ ಮಂದಿರ ನಿರ್ಮಾಣ ಮಾಡಲು ಮೀನಾಮೇಷ ಎಣಿಸಿದ್ದು ಕಾಂಗ್ರೆಸ್ಸಿನಿಂದ ಜನರ ನಂಬಿಕೆಗೆ ಆದ ದುರಂತ!. ರಾಮಾಯಣ ಹೇಗೆ ಜನರ ಮನದಲ್ಲಿದೆಯೋ ಹಾಗೆಯೇ ಕಾಂಗ್ರೆಸ್ಸಿಗರ ಸುಳ್ಳಿನ ಸರಪಳಿ ದೇಶದ ಜನತೆಯ ಮನಸ್ಸಿನಲ್ಲಿ ಆಳವಾಗಿದೆ‌‌.  ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠೆ – 96 ವರ್ಷದ ಕರಸೇವಕಿಗೆ ವಿಶೇಷ ಆಹ್ವಾನ – ಈಕೆ ಯಾರು ಗೊತ್ತಾ?

  • ರಾಮ ನನ್ನ ಹೃದಯದಲ್ಲಿದ್ದಾನೆ, ಅದನ್ನು ತೋರಿಸಿಕೊಳ್ಳುವ ಅಗತ್ಯವಿಲ್ಲ: ಕಪಿಲ್ ಸಿಬಲ್

    ರಾಮ ನನ್ನ ಹೃದಯದಲ್ಲಿದ್ದಾನೆ, ಅದನ್ನು ತೋರಿಸಿಕೊಳ್ಳುವ ಅಗತ್ಯವಿಲ್ಲ: ಕಪಿಲ್ ಸಿಬಲ್

    ನವದೆಹಲಿ: ರಾಮ ನನ್ನ ಹೃದಯದಲ್ಲಿದ್ದಾನೆ, ನಾನು ಅದನ್ನು ತೋರಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಮಾಜಿ ನಾಯಕ, ಹಾಲಿ ಎಸ್‌ಪಿ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ (Kapil Sibal) ಹೇಳಿದ್ದಾರೆ.

    ಅಯೋಧ್ಯೆಯಲ್ಲಿ (Ayodhya) ನಡೆಯಲಿರುವ ರಾಮ್ ಲಲ್ಲಾ (Ram Lalla) ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನೀವು ಬಯಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಶ್ರೀರಾಮ  ನನ್ನ ಹೃದಯದಲ್ಲಿದ್ದಾನೆ ಮತ್ತು ಯಾವುದೇ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿಲ್ಲ. ನಾನು ನಿಮಗೆ ಹೇಳುವುದು ನನ್ನ ಹೃದಯದಿಂದ ಬಂದದ್ದು. ಏಕೆಂದರೆ ನಾನು ಈ ಎಲ್ಲಾ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ರಾಮ ನನ್ನ ಹೃದಯದಲ್ಲಿದ್ದರೆ ಮತ್ತು ನನ್ನ ಪ್ರಯಾಣದುದ್ದಕ್ಕೂ ರಾಮ ನನಗೆ ಮಾರ್ಗದರ್ಶನ ನೀಡಿದರೆ, ನಾನು ಸರಿಯಾದ್ದನ್ನೇ ಮಾಡಿದ್ದೇನೆ ಎಂದರ್ಥ ಎಂದು ತಿಳಿಸಿದರು. ಇದನ್ನೂ ಓದಿ: Ayodhya Ram Mandir – ಕಾರ್ಯಕ್ರಮಕ್ಕೆ ಆಹ್ವಾನಿತ ಗಣ್ಯರ ಕಂಪ್ಲೀಟ್‌ ಲಿಸ್ಟ್‌

    ಇಡೀ ರಾಮಮಂದಿರ ನಿರ್ಮಾಣ ವಿಷಯ ಒಂದು ಪ್ರದರ್ಶನ. ಏಕೆಂದರೆ ಆಡಳಿತ ಪಕ್ಷದ ನಡವಳಿಕೆ, ಸ್ವಭಾವವು ಎಲ್ಲಿಯೂ ರಾಮನನ್ನು ಹೋಲುವುದಿಲ್ಲ. ಈ ಇಡೀ ವಿಷಯ ಪ್ರದರ್ಶನವಾಗಿದೆ. ಬಿಜೆಪಿಯವರು (BJP) ರಾಮನ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ನಡವಳಿಕೆ, ಅವರ ಸ್ವಭಾವವು ರಾಮನಿಗೆ ಎಲ್ಲಿಯೂ ಹತ್ತಿರವಾಗುವುದಿಲ್ಲ. ಸತ್ಯತೆ, ಸಹನೆ, ತ್ಯಾಗ ಮತ್ತು ಇತರರನ್ನು ಗೌರವಿಸುವುದು ರಾಮನ ಕೆಲವು ಗುಣಲಕ್ಷಣಗಳು. ಆದರೆ ಅವರು ಅದಕ್ಕೆ ವಿರುದ್ಧವಾಗಿ ರಾಮಮಂದಿರವನ್ನು (Ram Mandir) ನಿರ್ಮಿಸುತ್ತಿದ್ದಾರೆ ಮತ್ತು ರಾಮನನ್ನು ವೈಭವೀಕರಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ದೇವಾಲಯಗಳ ಬಳಿ ಯಾವುದೇ ಬಹುಮಹಡಿ ಕಟ್ಟಡ ನಿರ್ಮಿಸುವಂತಿಲ್ಲ: ಯೋಗಿ ಆದಿತ್ಯನಾಥ್‌

    ಶ್ರೀರಾಮನ ತತ್ವಗಳನ್ನು ಹೃದಯದಲ್ಲಿಟ್ಟುಕೊಂಡು ಅತನ ತತ್ವಗಳನ್ನು ಅನುಸರಿಸಿ ಸಾಂವಿಧಾನಿಕ ಗುರಿಗಳನ್ನು ಪೂರೈಸುವ ಅಗತ್ಯವಿದೆ. ನಿಮ್ಮ ಹೃದಯದಲ್ಲಿರುವುದು ರಾಮನಲ್ಲ. ನಿಮ್ಮ ಹೃದಯದಲ್ಲಿ ರಾಮನ ತತ್ವಗಳು ಇರಬೇಕು ಮತ್ತು ಅವರ ತತ್ವಗಳನ್ನು ಅನುಸರಿಸುವ ಮೂಲಕ ಸಾಂವಿಧಾನಿಕ ಗುರಿಗಳನ್ನು ಪೂರೈಸಬೇಕು ಎಂದರು. ಇದನ್ನೂ ಓದಿ: ಹಿಜಬ್‌ ನಿಷೇಧ ವಾಪಸ್‌ ಪಡೆಯೋಕೆ ಕೇವಲ 30 ನಿಮಿಷ ಸಾಕು: ಸಿದ್ದರಾಮಯ್ಯ ವಿರುದ್ಧ ಓವೈಸಿ ವಾಗ್ದಾಳಿ

    ಸಂಸತ್ತಿನಲ್ಲಿ ಹೊಸದಾಗಿ ಅಂಗೀಕರಿಸಿದ ಕ್ರಿಮಿನಲ್ ಮಸೂದೆಗಳ ಕುರಿತು ಮಾತನಾಡಿದ ಅವರು, ಅವು ವಸಾಹತುಶಾಹಿಗಳಿಗಿಂತ ಹೆಚ್ಚು ಕಠಿಣವಾಗಿವೆ ಮತ್ತು ಅವುಗಳಲ್ಲಿ ಯಾವುದೇ ಭಾರತೀಯತೆ ಇಲ್ಲ. ಮೊದಲನೆಯದಾಗಿ, ಈ ಮಸೂದೆಗಳನ್ನು ಅಂಗೀಕರಿಸಿದ ರೀತಿ, ನಮ್ಮ ಸಾಂವಿಧಾನಿಕ ಸಂಸ್ಥೆಗಳು ಈ ರೀತಿ ಮಸೂದೆಗಳನ್ನು ಅಂಗೀಕರಿಸಬಾರದೆಂದು ನಾನು ಭಾವಿಸುತ್ತೇನೆ. ನೀವು ಲೋಕಸಭೆಯಿಂದ 100 ಜನರನ್ನು ಮತ್ತು ರಾಜ್ಯಸಭೆಯಿಂದ 46 ಜನರನ್ನು ಅಮಾನತುಗೊಳಿಸಿದ್ದೀರಿ. ಮತ್ತು ಈ ಮಸೂದೆಯನ್ನು ಸಮಿತಿಯಲ್ಲಿ ಚರ್ಚಿಸಿದಾಗ ಈ ಮಸೂದೆಗಳಿಗೆ ಖ್ಯಾತ ವಕೀಲರನ್ನು ಸಂಪರ್ಕಿಸುವಂತೆ ನಾವು ಅವರನ್ನು ವಿನಂತಿಸಿದ್ದೇವೆ. ಆದರೆ ಅವರು ತಮ್ಮ ನಾಯಕರೊಂದಿಗೆ ಹೋಗಲು ನಿರ್ಧರಿಸಿದರು. ನಂತರ ಅವರು ಅದನ್ನು ಸಂಸತ್ತಿಗೆ ತಂದು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಿದರು ಎಂದರು. ಇದನ್ನೂ ಓದಿ: ಬ್ರಿಟಿಷ್ ಯುಗದ ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ 3 ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

    ಈ ಮಸೂದೆಗಳು 90% ರಷ್ಟು ಮತ್ತು ಅಸ್ತಿತ್ವದಲ್ಲಿರುವ ಕಾನೂನುಗಳ ಭಾಷಾಂತರ ಆವೃತ್ತಿಯಾಗಿದೆ ಮತ್ತು ವಸಾಹತುಶಾಹಿ ಪದಗಳಿಗಿಂತ ಹೆಚ್ಚು ಕಠಿಣವಾಗಿವೆ. ನಾನು ಅವರಲ್ಲಿ ಯಾವುದೇ ಭಾರತೀಯತೆಯನ್ನು ಕಾಣುವುದಿಲ್ಲ. ಡಿಸೆಂಬರ್ 21 ರಂದು ರಾಜ್ಯಸಭೆಯು ಮೂರು ಕ್ರಿಮಿನಲ್ ಮಸೂದೆಗಳನ್ನು ಅಂಗೀಕರಿಸಿತು. ಭಾರತೀಯ ನ್ಯಾಯ (ಎರಡನೇ) ಸಂಹಿತಾ, 2023; ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ, 2023; ಮತ್ತು ಭಾರತೀಯ ಸಾಕ್ಷಿ (ಎರಡನೇ) ಮಸೂದೆ, 2023 ಐಪಿಸಿ, ಸಿಆರ್‌ಪಿಸಿ ಮತ್ತು ಎವಿಡೆನ್ಸ್ ಆಕ್ಟ್ ಅನ್ನು ಬದಲಿಸುತ್ತದೆ. ಈ ಮಸೂದೆಗಳನ್ನು ಲೋಕಸಭೆಯು ಈ ಹಿಂದೆ ಅಂಗೀಕರಿಸಿತ್ತು. ಇದನ್ನೂ ಓದಿ: Ram Mandir: ಭಗವಾನ್‌ ರಾಮನ ಅಜ್ಜಿ ಮನೆಯಿಂದ 3,000 ಕ್ವಿಂಟಾಲ್‌ ಅಕ್ಕಿ, ಅತ್ತೆ ಮನೆಯಿಂದ 1,100 ತಟ್ಟೆ ಉಡುಗೊರೆ

  • ಡಿಕೆಗೆ ತಾತ್ಕಾಲಿಕ ರಿಲೀಫ್‌ – ಸರ್ಕಾರ, ಸಿಬಿಐ ವಾದ ಏನಿತ್ತು? ಹೈಕೋರ್ಟ್‌ ಹೇಳಿದ್ದು ಏನು? ಡಿಕೆ ಕೇಸ್‌ ಮುಂದೇನು? – ಕೋರ್ಟ್‌ ಕಲಾಪದ ಪೂರ್ಣ ವರದಿ ಓದಿ

    ಡಿಕೆಗೆ ತಾತ್ಕಾಲಿಕ ರಿಲೀಫ್‌ – ಸರ್ಕಾರ, ಸಿಬಿಐ ವಾದ ಏನಿತ್ತು? ಹೈಕೋರ್ಟ್‌ ಹೇಳಿದ್ದು ಏನು? ಡಿಕೆ ಕೇಸ್‌ ಮುಂದೇನು? – ಕೋರ್ಟ್‌ ಕಲಾಪದ ಪೂರ್ಣ ವರದಿ ಓದಿ

    ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ (Disproportionate Assets Case) ಆರೋಪ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಸಿಬಿಐ (CBI) ತನಿಖೆಗೆ ನೀಡಿದ್ದ ಪೂರ್ವಾನುಮತಿಯನ್ನು ಹಿಂದಕ್ಕೆ ಪಡೆದ ರಾಜ್ಯ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ (High Court) ಪರಿಗಣಿಸಿದ್ದು, ಡಿಕೆಶಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ.

    ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲ ಸುಪ್ರೀಂಕೋರ್ಟ್ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ (Kapil Sibal) ಸರ್ಕಾರದ ಅಧಿಸೂಚನೆಯನ್ನು ನ್ಯಾ.ಪಿ.ಬಿ ವರಾಳೆ ಮತ್ತು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿಂದ ವಿಭಾಗೀಯ ನ್ಯಾಯಪೀಠಕ್ಕೆ ಮೆಮೋ ಮೂಲಕ ಸಲ್ಲಿಸಿದರು. ಇದನ್ನು ಪರಿಗಣಿಸಿದ ಹೈಕೋರ್ಟ್ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದ ಸಂಪುಟದ ನಿರ್ಧಾರವನ್ನು ಇಲ್ಲಿಯವರೆಗೂ ಯಾರೂ ಪ್ರಶ್ನಿಸಿಲ್ಲ. ಹೀಗಾಗಿ ತಮ್ಮನ್ನು ಪ್ರತಿವಾದಿಯಾಗಿ ಸೇರಿಸಿಕೊಳ್ಳಬೇಕೆಂಬ ಯತ್ನಾಳ್ ಅರ್ಜಿಯನ್ನು ಪರಿಗಣಿಸುವುದಿಲ್ಲ. ಸಂಪುಟದ ನಿರ್ಧಾರವನ್ನು ಯಾರೂ ಬೇಕಿದ್ದರು ಪ್ರಶ್ನಿಸಬಹುದು ಎಂದು ತಿಳಿಸಿತು. ಇದೇ ವೇಳೆ ಸಿಬಿಐ ತನಿಖೆ ಪ್ರಶ್ನಿಸಿ ಈ ಹಿಂದೆ ಡಿಕೆ ಸಲ್ಲಿಸಿದ್ದ ರಿಟ್ ಅರ್ಜಿ ಮತ್ತು ಮೇಲ್ಮನವಿ ಅರ್ಜಿಯನ್ನು ಡಿಕೆ ಶಿವಕುಮಾರ್ ಹಿಂಪಡೆದರು. .

     

     

    ಲೋಕಸಭೆ ಚುನಾವಣೆ (Lok Sabha Election) ಹೊಸ್ತಿಲಲ್ಲಿ ಸಿಬಿಐ ಇಕ್ಕಳಕ್ಕೆ ಸಿಲುಕುವ ಆತಂಕದಲ್ಲಿದ್ದ ಡಿಸಿಎಂ ಡಿಕೆಶಿವಕುಮಾರ್ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಸಂಪುಟದ ತೀರ್ಮಾನ ಸದ್ಯಕ್ಕೆ ಡಿಕೆ ಶಿವಕುಮಾರ್ ಕೈಹಿಡಿದಂತೆ ಕಾಣುತ್ತಿದೆ. ಸಿಬಿಐ ಮುಂದಿನ ನಡೆಯವರೆಗೂ ಡಿಕೆಶಿ ನಿಟ್ಟುಸಿರು ಬಿಡಬಹುದಾಗಿದೆ.

    ಸರ್ಕಾರದ ವಾದ ಏನಿತ್ತು?
    ಡಿಕೆಶಿ ವಿರುದ್ಧ ತನಿಖೆ ನಡೆಸಲು ಬಿಜೆಪಿ ಸರ್ಕಾರ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್ ಪಡೆಯಲಾಗಿದೆ. ಸಿಬಿಐ ಸಂಸ್ಥೆ ತನಿಖೆ ಮುಂದುವರೆಸಲು ಬಯಸುವುದು ಬೇರೆ ವಿಚಾರ. ಆದರೆ ಒಮ್ಮೆ ಅನುಮತಿ ಹಿಂಪಡೆದರ ತನಿಖೆ ಮುಂದುವರೆಸುವುದಕ್ಕೆ ಅವಕಾಶವಿಲ್ಲ ಎಂದು ದೆಹಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆಯ ಸೆಕ್ಷನ್ 6 ಹೇಳುತ್ತದೆ. ಖಾಜಿ ದೋರ್ಜಿ ವರ್ಸಸ್ ಸಿಬಿಐ ಪ್ರಕರಣ ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ. ಈ ಹಿಂದಿನ ಸರ್ಕಾರ ಅನುಮತಿಸುವಾಗ ಕೆಲ ನಿಯಮ ಉಲ್ಲಂಘನೆ ಮಾಡಿದೆ. ಹೀಗಾಗಿಯೇ ರಾಜ್ಯ ಸರ್ಕಾರ ಕಾನೂನುಬದ್ಧವಾಗಿ ಅನುಮತಿ ಹಿಂಪಡೆದಿದೆ.

    ಡಿಕೆ ಪರ ವಕೀಲರ ವಾದ ಏನು?
    ಡಿಕೆಯನ್ನು ಪ್ರತಿನಿಧಿಸಿದ ಅಭಿಷೇಕ್ ಮನು ಸಿಂಘ್ವಿ, ಉದಯ್ ಹೊಳ್ಳ ಅವರು, ರಾಜ್ಯ ಸರ್ಕಾರ ನ.28ರಂದು ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದು ಆದೇಶ ಹೊರಡಿಸಿದೆ. ಹೀಗಾಗಿ ರಿಟ್ ಅರ್ಜಿ ಅಮಾನ್ಯಗೊಂಡಿದೆ. ಈ ನೆಲೆಯಲ್ಲಿ ರಿಟ್ ಅರ್ಜಿ, ಮೇಲ್ಮನವಿ ಅರ್ಜಿ ಹಿಂಪಡೆಯಲು ಅನುಮತಿಸಬೇಕು ಎಂದು ವಾದಿಸಿದರು.

     

    ಸಿಬಿಐ ಪರ ವಕೀಲರ ವಾದ ಏನಿತ್ತು?
    ಸರ್ಕಾರದ ಈ ಆದೇಶ ಈ ಹಂತದಲ್ಲಿ ಅಸಮಂಜಸವಾಗಿದ್ದು ರಿಟ್ ಅರ್ಜಿಯನ್ನು ಹಿಂಪಡೆಯುವುದಕ್ಕೆ ನಮ್ಮ ಆಕ್ಷೇಪವಿದೆ. ಮೇಲ್ಮನವಿ ಅರ್ಜಿ ಹಿಂಪಡೆಯುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಎಫ್‌ಐಆರ್‌ಅನ್ನು ರಾಜ್ಯ ಸರ್ಕಾರ ಹಿಂಪಡೆಯಲಾಗದು. ಕೋರ್ಟ್ ಮಾತ್ರ ಸಿಆರ್‌ಪಿಸಿ ಸೆಕ್ಷನ್ 482ರ ಅಡಿ ಎಫ್‌ಐಆರ್ ವಜಾ ಮಾಡಬಹುದು. 2019ರಲ್ಲಿ ಸಿಬಿಐಗೆ ನೀಡಿದ್ದ ಅನುಮತಿ ಭಾಗವಾಗಿ ಎಫ್‌ಐಆರ್ ದಾಖಲಿಸಿ ಪ್ರಕ್ರಿಯೆ ನಡೆದಿದೆ. ಈಗಾಗಲೇ ಪ್ರಕರಣದ ಭಾಗಶಃ ತನಿಖೆ ನಡೆದಿದ್ದು 1994ರ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಇದು ಊರ್ಜಿತ ಆಗುವುದಿಲ್ಲ. ರಾಜ್ಯ ಸರ್ಕಾರ ಅನುಮತಿ ಹಿಂಪಡೆದಿರುವುದನ್ನು ಒಪ್ಪಲಾಗದು.  ಇದನ್ನೂ ಓದಿ: ಇನ್ನು ಮುಂದೆ ಬೇಕಾಬಿಟ್ಟಿ ಸಿಮ್‌ ಕಾರ್ಡ್‌ ಖರೀದಿಸುವಂತಿಲ್ಲ – ಡಿ.1ರಿಂದ ಜಾರಿಯಾಗಲಿರುವ ಕಠಿಣ ನಿಯಮಗಳು ಏನು?

    ಹೈಕೋರ್ಟ್ ವಿಭಾಗೀಯ ಪೀಠ ಹೇಳಿದ್ದೇನು?
    ಪ್ರತಿಪಕ್ಷ ಬದಲಾದಾಗ ಈ ರೀತಿ ಆದೇಶ ಮಾಡಿದ್ರೆ ತನಿಖೆ ಮೇಲೆ ಪ್ರಭಾವ ಬೀರಲ್ವಾ ಎಂದು ಪ್ರಶ್ನಿಸಿದ ಪೀಠ ರಾಜ್ಯ ಸರ್ಕಾರದ ಆದೇಶವನ್ನು ಈವರೆಗೂ ಯಾರೂ ಪ್ರಶ್ನೆ ಮಾಡಿಲ್ಲ. ಹೀಗಾಗಿ ಸಿಬಿಐ ಪರ ವಕೀಲರ ವಾದವನ್ನು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಎಫ್‌ಐಆರ್ ವಿಚಾರದಲ್ಲಿ ಸಿಬಿಐ ಮುಂದುವರೆಯಬಹುದು. ನಿಮ್ಮ ಎಫ್‌ಐಆರ್ ವಿಚಾರವನ್ನು ನಾವು ಮೈಲಿ ದೂರ ಇಟ್ಟಿದ್ದೇವೆ. ರಿಟ್ ಅರ್ಜಿಯನ್ನು, ಮೇಲ್ಮನವಿ ಅರ್ಜಿ ಹಿಂಪಡೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿತು.

     

    ಏನಿದು ಖಾಜಿ ದೋರ್ಜಿ ವರ್ಸಸ್ ಸಿಬಿಐ ಕೇಸ್?
    ಡಿಕೆ ಶಿವಕುಮಾರ್ ಪ್ರಕರಣದಲ್ಲಿ ಪದೇ ಪದೇ ಕೇಳಿಬಂದಿದ್ದು 1994ರಲ್ಲಿ ಖಾಜಿ ದೋರ್ಜಿ ವರ್ಸಸ್ ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪು. ರಾಷ್ಟ್ರಪತಿ ಆಳ್ವಿಕೆ ಸಂದರ್ಭದಲ್ಲಿ ಸಿಕ್ಕಿಂ ಸಿಎಂ ನಾಡಬಹದ್ದೂರ್ ಭಂಡಾರಿ ವಿರುದ್ಧ 2 ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಈ ಕೇಸ್‌ಗಳ ಬಗ್ಗೆ ಸಿಬಿಐ ತನಿಖೆ ಆರಂಭವಾಗಿತ್ತು. 1987ರಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಸಿಕ್ಕಿಂ ಸರ್ಕಾರ ಹಿಂಪಡೆದಿತ್ತು. ಇದನ್ನು ಮಾಜಿ ಸಿಎಂ ಖಾಜಿ ದೋರ್ಜಿ ಸುಪ್ರೀಂನಲ್ಲಿ ಪ್ರಶ್ನಿಸಿದರು. ಈ ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್‌ ಒಮ್ಮೆ ಅನುಮತಿ ಕೊಟ್ಟ ನಂತರ ವಾಪಸ್ ಪಡೆಯುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಸಿಬಿಐ ತನಿಖೆಗೂ ಸಮ್ಮತಿ ವಾಪಸ್‌ಗೂ ಸಂಬಂಧವಿಲ್ಲ ಎಂದ ಕೋರ್ಟ್‌ ಸಿಬಿಐಗೆ ಚಾರ್ಜ್‌ಶೀಟ್‌ ಸಲ್ಲಿಕೆಗೆ ಅವಕಾಶ ನೀಡಿತ್ತು.

    ಡಿಕೆ ಕೇಸ್: ಮುಂದೇನು?
    ಸಿಬಿಐ ತನ್ನ ತನಿಖೆ ಮುಂದುವರೆಸಬಹುದೇ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ರಾಜ್ಯ ಸಂಪುಟದ ಆದೇಶ ಸಿಂಧುವಾಗುತ್ತದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.ಈ ಪ್ರಕರಣ ತಾರ್ಕಿಕ ಅಂತ್ಯ ಕಾಣಲು ಸಾಕಷ್ಟು ಸಮಯ ಹಿಡಿಯಬಹುದು. ಅಲ್ಲಿಯವರೆಗೆ ಡಿಕೆಶಿಗೆ ರಿಲೀಫ್‌ ಸಿಕ್ಕಿದೆ.

     

  • ಕರ್ನಾಟಕ, ಮಹಾರಾಷ್ಟ್ರದಂತೆ ಬಿಜೆಪಿ ವಿರೋಧ ಪಕ್ಷಗಳ ಸರ್ಕಾರ ಉರುಳಿಸುತ್ತಿದೆ: ಕಪಿಲ್‌ ಸಿಬಲ್‌ ಆರೋಪ

    ಕರ್ನಾಟಕ, ಮಹಾರಾಷ್ಟ್ರದಂತೆ ಬಿಜೆಪಿ ವಿರೋಧ ಪಕ್ಷಗಳ ಸರ್ಕಾರ ಉರುಳಿಸುತ್ತಿದೆ: ಕಪಿಲ್‌ ಸಿಬಲ್‌ ಆರೋಪ

    – ಮಧ್ಯಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ಗೆ ಒತ್ತಾಯ

    ನವದೆಹಲಿ: ಬಿಜೆಪಿ (BJP) ವಿರೋಧ ಪಕ್ಷಗಳ ಸರ್ಕಾರ ಉರುಳಿಸುತ್ತಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಮಧ್ಯಪ್ರವೇಶ ಮಾಡಬೇಕು ಎಂದು ಟ್ವೀಟ್‌ ಮಾಡಿ ಹಿರಿಯ ವಕೀಲ ಕಪಿಲ್‌ ಸಿಬಲ್‌ (Kapil Sibal) ಒತ್ತಾಯಿಸಿದ್ದಾರೆ.

    ಬಿಜೆಪಿ ಚುನಾಯಿತ ಪ್ರತಿಪಕ್ಷ ಸರ್ಕಾರಗಳನ್ನು ಅಸ್ಥಿರಗೊಳಿಸುತ್ತಿದೆ. ಉತ್ತರಾಖಂಡ, ಅರುಣಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಸರ್ಕಾರಗಳನ್ನು ಅಸ್ಥಿರಗೊಳಿಸಿದೆ. ಕಾನೂನು ಇದಕ್ಕೆ ಅವಕಾಶ ನೀಡುತ್ತದೆಯೇ? ಸುಪ್ರೀಂ ಕೋರ್ಟ್ ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ಜನರು ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳಿಗೆ ಬಲಿಯಾಗುವುದಿಲ್ಲ: ಶರದ್ ಪವಾರ್

    ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಎನ್‌ಸಿಪಿ ನಾಯಕ ಅಜಿತ್ ಪವಾರ್ ಮತ್ತು ಇತರ ಎಂಟು ಮಂದಿ ಸೇರ್ಪಡೆಗೊಂಡ ನಂತರ ಸಿಬಲ್‌, ಸುಪ್ರೀಂ ಕೋರ್ಟ್‌ಗೆ ಮನವಿಯೊಂದನ್ನು ಸಲ್ಲಿಸಿದ್ದಾರೆ.

    ಶರದ್‌ ಪವಾರ್‌ ನಿಲುವುಗಳ ವಿರುದ್ಧ ಬಂಡಾಯವೆದ್ದು, ಎನ್‌ಸಿಪಿ ಅಜಿತ್‌ ಪವಾರ್‌ ಏಕನಾಥ್‌ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಬೆಂಬಲ ನೀಡಿದರು. ಬಂಡಾಯ ಶಾಸಕರ ಜೊತೆಗೂಡಿ ಬಿಜೆಪಿ ಮತ್ತು ಶಿಂಧೆ ನೇತೃತ್ವದ ಶಿವಸೇನಾ ಸರ್ಕಾರದ ಜೊತೆ ಕೈ ಜೋಡಿಸಿದರು. ಬಳಿಕ ಸರ್ಕಾರದ ಉಪ ಮುಖ್ಯಮಂತ್ರಿ ಸ್ಥಾನ ಕೂಡ ಅಲಂಕರಿಸಿದರು. ಇದನ್ನೂ ಓದಿ: Maharashtra Politics: ಅಜಿತ್ ಪವಾರ್, 9 ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಕೆ

    ರಾಜಕೀಯ ವಲಯದಲ್ಲಿ ಈ ಬೆಳವಣಿಗೆ ಚರ್ಚೆಗೆ ಗ್ರಾಸವಾಗಿದೆ. ಮಹಾರಾಷ್ಟ್ರದಲ್ಲಿ ನಾಟಕೀಯ ರಾಜಕೀಯ ಬೆಳವಣಿಗೆ ಬಗ್ಗೆ ಪರ-ವಿರೋಧ ಮಾತುಗಳು ಕೇಳಿಬರುತ್ತಿವೆ. ಇದನ್ನು ಇತರೆ ರಾಜ್ಯಗಳ ರಾಜಕೀಯ ಪಕ್ಷಗಳು ಎಚ್ಚರಿಯಾಗಿ ಪರಿಗಣಿಸಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಬಲ್‌ ವಿರುದ್ದ ನ್ಯಾಯಾಂಗ ನಿಂದನೆ ಕೇಸ್‌: ಅಟಾರ್ನಿ ಜನರಲ್‌ಗೆ ಮನವಿ

    ಸಿಬಲ್‌ ವಿರುದ್ದ ನ್ಯಾಯಾಂಗ ನಿಂದನೆ ಕೇಸ್‌: ಅಟಾರ್ನಿ ಜನರಲ್‌ಗೆ ಮನವಿ

    ನವದೆಹಲಿ: ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಉಲ್ಲೇಖಿಸಿ ಮಾತನಾಡಿದ್ದ ಮಾಜಿ ಕಾಂಗ್ರೆಸ್‌ ನಾಯಕ, ಹಿರಿಯ ವಕೀಲ, ಪ್ರಸ್ತುತ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌ ದಾಖಲಾಗುವ ಸಾಧ್ಯತೆಯಿದೆ.

    ವಕೀಲರಾದ ವಿನೀತ್ ಜಿಂದಾಲ್ ಮತ್ತು ಶಶಾಂಕ್ ಶೇಖರ್ ಝಾ ಅವರು, ಭಾರತೀಯ ನ್ಯಾಯಾಂಗದ ವಿರುದ್ಧ ಹೇಳಿಕೆ ನೀಡಿ ಘನತೆಗೆ ಅವಮಾನ ಮಾಡಿದ್ದಾರೆ. ಅವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌ ದಾಖಲಿಸಲು ಒಪ್ಪಿಗೆ ನೀಡುವಂತೆ ಭಾರತದ ಅಟಾರ್ನಿ ಜನರಲ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

    court order law

    ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಂಗದ ವಿರುದ್ಧ ಸಿಬಲ್ ಮಾಡಿದ ಟೀಕೆಗಳ ಬಗ್ಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಐ) ಕೂಡ ಟೀಕಿಸಿದೆ. ಹಿರಿಯ ವಕೀಲ ಮತ್ತು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ಕಪಿಲ್ ಸಿಬಲ್ ಅವರು ಇಂತಹ ಹೇಳಿಕೆ ನೀಡಿರುವುದು ಅತ್ಯಂತ ದುರದೃಷ್ಟಕರ. ಅವರು ಕಾನೂನು ಕ್ಷೇತ್ರದ ಧೀಮಂತರು ಮತ್ತು ದೇಶದ ಮಾಜಿ ಕಾನೂನು ಸಚಿವರೂ ಆಗಿದ್ದಾರೆ. ಎರಡು, ಮೂರು ಪ್ರಕರಣದಲ್ಲಿ ಸೋತಿದ್ದಕ್ಕೆ ನ್ಯಾಯಾಂಗವನ್ನು ಗುರಿಯಾಗಿ ಮಾತನಾಡುವುದು ಸರಿಯಲ್ಲ. ನ್ಯಾಯಾಂಗವು ಮುಕ್ತ ಮತ್ತು ಸ್ವತಂತ್ರ ಸಂಸ್ಥೆಯಾಗಿದೆ. ಅದರ ಮೇಲೆ ದಾಳಿ ಮಾಡಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್‌ ಬ್ಯಾನ್‌? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?

    ನೀವು ದುರ್ಬಲ ಪ್ರಕರಣವನ್ನು ತೆಗೆದುಕೊಂಡು ನ್ಯಾಯಾಲಯದಲ್ಲಿ ಸೋತರೆ ನ್ಯಾಯಾಧೀಶರು ಮತ್ತು ನ್ಯಾಯಾಂಗವನ್ನು ದೂಷಿಸಲು ಬರುವುದಿಲ್ಲ ಎಂದು ಮಿಶ್ರಾ ಅಭಿಪ್ರಾಯ ವ್ಯಕ್ತಪಡಿದ್ದಾರೆ.

    ಸಿಬಲ್‌ ಹೇಳಿದ್ದೇನು?
    ಸುಪ್ರೀಂ ಕೋರ್ಟ್‌ ಮೇಲೆ ನನಗೆ ಯಾವುದೇ ಭರವಸೆ ಇಲ್ಲ. ಸುಪ್ರೀಂ ಕೋರ್ಟ್‌ನಿಂದ ಪರಿಹಾರ ಸಿಗುತ್ತದೆ ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಭಾವನೆಯಾಗಿದೆ. ನಾನು 50 ವರ್ಷಗಳ ಕಾಲ ವಕೀಲಿಕೆ ಪೂರ್ಣಗೊಳಿಸಿದ ನಂತರ ಈ ಮಾತನ್ನು ಹೇಳುತ್ತಿದ್ದೇನೆ.

    ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಕ್ಲೀನ್ ಚಿಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ, ಗುಜರಾತ್ ಗಲಭೆ ವೇಳೆ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಆಗ ಅಗ್ನಿಶಾಮಕ ದಳವನ್ನು ಪೊಲೀಸರು ಕರೆಸಿರಲಿಲ್ಲ. ಇದು ಉದ್ದೇಶಪೂರ್ವಕ ಹಿಂಸಾಚಾರ ಎಂದು ನಾನು ದಾಖಲೆ ಸಮೇತ ವಾದ ಮಾಡಿದ್ದೆ. ಆದರೆ ಕೋರ್ಟ್ ಇದನ್ನು ಪರಿಗಣಿಸಲೇ ಇಲ್ಲ. ಸಾಮಾಜಿಕ ಕಾರ್ಯಕರ್ತೆ, ತೀಸ್ತಾ ಸೆಟಲ್ವಾಡ್ ಬಗ್ಗೆ ವಾದ-ಪ್ರತಿವಾದ ನಡೆಯಲಿಲ್ಲ. ಆದರೂ ಅವರನ್ನು ತೀರ್ಪಿನಲ್ಲಿ ದೂಷಿಸಲಾಗಿದೆ.

    ಯಾವಾಗ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಪೀಠವನ್ನು ನಿಗದಿಪಡಿಸುತ್ತಾರೋ ಅಂಥ ನ್ಯಾಯಾಂಗ ಸ್ವತಂತ್ರವಲ್ಲ. ಈಗ ಮಾತನಾಡುವ ಕಾಲ ಬಂದಿದೆ. ನಾವು ಈಗ ಮಾತನಾಡದೇ ಇನ್ಯಾರು ಮಾತನಾಡಬೇಕು?

    Live Tv
    [brid partner=56869869 player=32851 video=960834 autoplay=true]

  • ಸುಪ್ರೀಂ ಕೋರ್ಟ್‌ ಮೇಲೆ ನನಗೆ ಯಾವುದೇ ಭರವಸೆ ಇಲ್ಲ: ಕಪಿಲ್‌ ಸಿಬಲ್‌

    ಸುಪ್ರೀಂ ಕೋರ್ಟ್‌ ಮೇಲೆ ನನಗೆ ಯಾವುದೇ ಭರವಸೆ ಇಲ್ಲ: ಕಪಿಲ್‌ ಸಿಬಲ್‌

    ನವದೆಹಲಿ: ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ವಕೀಲರಾದ ಕಪಿಲ್‌ ಸಿಬಲ್‌ ಅವರು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿದ ಕೆಲವು ತೀರ್ಪುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್‌ ಮೇಲೆ ನನಗೆ ಯಾವುದೇ ಭರವಸೆ ಇಲ್ಲ ಎಂದು ಹೇಳಿದ್ದಾರೆ.

    ಸುಪ್ರೀಂ ಕೋರ್ಟ್‌ನಿಂದ ಪರಿಹಾರ ಸಿಗುತ್ತದೆ ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಭಾವನೆಯಾಗಿದೆ. ನಾನು ಸುಪ್ರೀಂ ಕೋರ್ಟ್‌ನಲ್ಲಿ 50 ವರ್ಷಗಳ ಕಾರ್ಯನಿರ್ವಹಿಸಿ ಪೂರ್ಣಗೊಳಿಸಿದ ನಂತರ ಈ ಮಾತನ್ನು ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆಸಿಆರ್‌ ಮತ್ತೊಬ್ಬ ನಿಜಾಮನಂತೆ ವರ್ತಿಸುತ್ತಿದ್ದಾರೆ: ತೆಲಂಗಾಣ ಸಿಎಂ ವಿರುದ್ಧ ಗೋಯಲ್‌ ಕಿಡಿ

    ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು ಬಂದರೂ, ಅದು ನೆಲದ ವಾಸ್ತವತೆಯನ್ನು ಎಂದಿಗೂ ಬದಲಾಯಿಸುವುದಿಲ್ಲ ಎಂದ ಅವರು, ಈ ವರ್ಷ ನಾನು ಸುಪ್ರೀಂ ಕೋರ್ಟ್‌ನಲ್ಲಿ 50 ವರ್ಷಗಳ ಅಭ್ಯಾಸವನ್ನು ಪೂರ್ಣಗೊಳಿಸುತ್ತೇನೆ. 50 ವರ್ಷಗಳ ನಂತರ ನನಗೆ ಸುಪ್ರೀಂ ಕೋರ್ಟ್‌ ಮೇಲೆ ಯಾವುದೇ ಭರವಸೆ ಇಲ್ಲ. ನೀವು ಸುಪ್ರೀಂ ಕೋರ್ಟ್ ನೀಡಿದ ಪ್ರಗತಿಪರ ತೀರ್ಪುಗಳ ಬಗ್ಗೆ ಮಾತನಾಡುತ್ತೀರಿ. ಆದರೆ ವಾಸ್ತವವಾಗಿ ಏನಾಗುತ್ತದೆ ಎಂಬುದರಲ್ಲಿ ಭಾರಿ ವ್ಯತ್ಯಾಸವಿದೆ. ಖಾಸಗಿತನದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇ.ಡಿ ಅಧಿಕಾರಿಗಳು ನಿಮ್ಮ ಮನೆಗೆ ಬರುತ್ತಾರೆ. ನಿಮ್ಮ ಖಾಸಗಿತನ ಎಲ್ಲಿದೆ ಎಂದು ಸಿಬಲ್‌ ಪ್ರಶ್ನಿಸಿದ್ದಾರೆ.

    ನಾನು 50 ವರ್ಷಗಳಿಂದ ಸೇವೆ ಸಲ್ಲಿಸಿದ ನ್ಯಾಯಾಲಯದ ಬಗ್ಗೆ ಈ ರೀತಿ ಮಾತನಾಡಬೇಕೆಂದು ಬಯಸಲ್ಲ. ಆದರೆ ಮಾತನಾಡಲೇ ಬೇಕಾದ ಸಂದರ್ಭವಾಗಿದೆ. ನಾವು ಮಾತನಾಡದಿದ್ದರೆ, ಬೇರೆ ಯಾರು ಮಾತನಾಡುತ್ತಾರೆ ಎಂದು ಕೇಳಿದ್ದಾರೆ. ಇದನ್ನೂ ಓದಿ: ಭಾರತದ ಜಲಗಡಿಗೆ ಬಂದಿದ್ದ ಪಾಕ್ ಯದ್ಧನೌಕೆಯನ್ನು ಓಡಿಸಿದ ಡಾರ್ನಿಯರ್

    Live Tv
    [brid partner=56869869 player=32851 video=960834 autoplay=true]