Tag: ಕಪಿಲ್ ಶರ್ಮಾ

  • ಕಪಿಲ್ ಶರ್ಮಾ ಶೋನಿಂದ ಕೋಪಗೊಂಡು ಹೊರಬಂದ ಅಜಯ್ ದೇವ್‍ಗನ್

    ಕಪಿಲ್ ಶರ್ಮಾ ಶೋನಿಂದ ಕೋಪಗೊಂಡು ಹೊರಬಂದ ಅಜಯ್ ದೇವ್‍ಗನ್

    ಮುಂಬೈ: ಹಾಸ್ಯ ನಟ ಕಪಿಲ್ ಶರ್ಮಾ ಎಲ್ಲಾ ತಪ್ಪು ಕಾರಣಗಳಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಪಿಲ್ ಮತ್ತೊಮ್ಮೆ ತನ್ನ ಶೋನ ಶೂಟಿಂಗ್‍ನನ್ನು ಕ್ಯಾನ್ಸಲ್ ಮಾಡಿದ್ದಾರೆ. ಈ ಬಾರಿ ಅಜಯ್ ದೇವ್‍ಗನ್ ಜೊತೆ ಶೂಟಿಂಗ್‍ನನ್ನು ಕ್ಯಾನ್ಸಲ್ ಮಾಡುವ ಮೂಲಕ ಅಜಯ್ ಕೋಪಕ್ಕೆ ಗುರಿಯಾಗಿದ್ದಾರೆ.

    ಅಜಯ್ ದೇವ್‍ಗನ್ ತಮ್ಮ ಮುಂಬರುವ `ಬಾದ್‍ಶಾವೊ’ ಸಿನಿಮಾದ ಪ್ರಮೋಷನ್ ಗಾಗಿ ಕಪಿಲ್ ಶರ್ಮಾಗೆ ಆಗಮಿಸಿದ್ದರು. ಈ ವೇಳೆ ಅಜಯ್ ಚಿತ್ರದ ಸಹ ನಟರಾದ ಇಲಿಯಾನ ಡಿಕ್ರೂಸ್, ಇಮ್ರಾನ್ ಹಶ್ಮಿ, ಇಶಾ ಗುಪ್ತಾ ಮತ್ತು ನಿರ್ದೇಶಕ ಮಿಲನ್ ಲುತ್ರಿಯ ಸಹ ಬಂದಿದ್ದರು. ಈ ವೇಳೆ ಕಪಿಲ್ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕಾರ್ಯಕ್ರಮ ರದ್ದಾಗಿದೆ.

     

    ಒಂದು ಗಂಟೆಗಳವರೆಗೆ ಕಾದ ನಂತರ ಅಜಯ್ ದೇವ್‍ಗನ್ ಕೋಪಗೊಂಡು ಕಪಿಲ್ ಶರ್ಮಾ ಶೋ ಸೆಟ್‍ನಿಂದ ಹೊರ ನಡೆದಿದ್ದು, ಇನ್ನ್ಮುಂದೆ ಯಾವತ್ತು ಹಿಂದಿರುಗುವುದಿಲ್ಲ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಿಂದೆ ಶಾರೂಖ್ ಖಾನ್, ಅನಿಲ್ ಕಪೂರ್, ಅರ್ಜುನ್ ರಾಂಪಾಲ್ ಸೆಟ್ಟಗೆ ಬಂದಾಗಲೂ ಕಪಿಲ್ ಆರೋಗ್ಯದಲ್ಲಿ ಏರುಪೇರಾಗಿತ್ತು.

    ಕೆಲವು ದಿನಗಳಿಂದ ಕಪಿಲ್ ಕಾರ್ಯಕ್ರಮಕ್ಕೂ ಮುನ್ನ ಒತ್ತಡಕ್ಕೊಳಗಾಗುತ್ತಿದ್ದಾರೆ. ಹೀಗಾಗಿ ಕಪಿಲ್ ಅವರಲ್ಲಿ ಬಿಪಿ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕಪಿಲ್ ಹೀಗೆ ಏಕೆ ಮಾಡುತ್ತಿದ್ದಾರೆ ಗೊತ್ತಿಲ್ಲ. ಆದರೆ ಮತ್ತೆ ಈ ರೀತಿ ಮಾಡಿದ್ದಾರೆ. ಸ್ಟಾರ್‍ಗಳು ಹಿಂದುರುಗಿ ಹೋಗುವುದು ನಮಗೆ ಬೇಸರ ತಂದಿದ್ದೆ. ‘ಲೇಕಿನ್ ಕ್ಯಾ ಕರೇ’ ಇದು ಅವರ ಆರೋಗ್ಯದ ವಿಷಯ ಎಂದು ಕಪಿಲ್ ಶರ್ಮಾ ಶೋ ತಂಡದವರು ಹೇಳಿದ್ದಾರೆ.

     

  • ಕಪಿಲ್ ಶರ್ಮಾ ಶೋಗೆ ಭಾರತಿ ಸಿಂಗ್ ಎಂಟ್ರಿ: ಇನ್ನ್ಮುಂದೆ ನಗೋರಿಗೆ ಡಬಲ್ ಧಮಕಾ

    ಕಪಿಲ್ ಶರ್ಮಾ ಶೋಗೆ ಭಾರತಿ ಸಿಂಗ್ ಎಂಟ್ರಿ: ಇನ್ನ್ಮುಂದೆ ನಗೋರಿಗೆ ಡಬಲ್ ಧಮಕಾ

    ಮುಂಬೈ: ಹಿಂದಿಯ `ದಿ ಕಪಿಲ್ ಶರ್ಮಾ ಶೋ’ ಗೆ ಲೇಡಿ ಕಾಮಿಡಿಯನ್ ಭಾರತಿ ಸಿಂಗ್ ಎಂಟ್ರಿ ಕೊಡಲಿದ್ದಾರೆ. ಇನ್ನ್ಮುಂದೆ ನಗುವವರಿಗೆ ಮಾತ್ರ ಡಬಲ್ ಧಮಾಕಾ ಸಿಗಲಿದೆ. ಖಾಸಗಿ ಚಾನೆಲ್‍ನಲ್ಲಿ ಪ್ರಸಾರವಾಗುವ ನಂಬರ್ 1 ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಖುಷಿಯಾಗ್ತಿದೆ ಎಂದು ಭಾರತಿ ಸಿಂಗ್ ಹೇಳಿದ್ದಾರೆ.

    ಕೆಲವು ತಿಂಗಳು ಕಪಿಲ್ ಶರ್ಮಾ ಶೋದ ಸೆಂಟರ್ ಆಫ್ ಆಟ್ರ್ಯಾಕ್ಷನ್ ಆಗಿದ್ದ ಸುನಿಲ್ ಗ್ರೋವರ್, ಅಲಿ, ಚಂದನ್ ಮುಂತಾದವರು ಕಾರ್ಯಕ್ರಮದಿಂದ ಹೊರ ಉಳಿದಿದ್ದು ಕಪಿಲ್ ಟಿಆರ್‍ಪಿ ರೇಟ್‍ನಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದರು. ಹೀಗಾಗಿ ಕಾರ್ಯಕ್ರಮವನ್ನು ಮತ್ತಷ್ಟು ಯಶಸ್ವಿಗೊಳಿಸಲು ಕಪಿಲ್ ಶರ್ಮಾ ಭಾರತಿ ಸಿಂಗ್‍ರನ್ನು ಕರೆತಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಭಾರತಿ ಯಾರು ಸಹ ಸುನಿಲ್ ಗ್ರೋವರ್ ಅವರ ಸ್ಥಾನವನ್ನು ಭರಿಸಲಿಕ್ಕೆ ಸಾಧ್ಯವಿಲ್ಲ. ಅವರೊಬ್ಬ ಅತ್ಯುತ್ತಮ ನಟ ಎಂದಿದ್ದಾರೆ.

    ಭಾರತಿ ಈ ಮೊದಲು ಮತ್ತೊಂದು ಖಾಸಗಿ ಚಾನೆಲ್‍ನ `ಕಾಮಿಡಿ ನೈಟ್ಸ್ ಬಚಾವೋ’ ಕಾರ್ಯಕ್ರಮದಲ್ಲಿ ಹಾಸ್ಯ ನಟ ಕೃಷ್ಣಾ ಅಭಿಷೇಕ್ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ನಚ್ ಬಲಿಯೇ ಸೀಸನ್-8ರಲ್ಲಿ ಭಾರತಿ ತನ್ನ ಗೆಳಯ ಹರ್ಷಾ ಜೊತೆ ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಭಾಗವಹಿಸಿ ಅಭಿಮಾನಿಗಳನ್ನು ರಂಜಿಸಿದ್ದರು.

     

  • ರವೀನಾ ಟಂಡನ್‍ರನ್ನು ಸುನಿಲ್ ಗ್ರೊವರ್ ಇಂಪ್ರೆಸ್ ಮಾಡಿದ್ದು ಹೀಗೆ!

    ರವೀನಾ ಟಂಡನ್‍ರನ್ನು ಸುನಿಲ್ ಗ್ರೊವರ್ ಇಂಪ್ರೆಸ್ ಮಾಡಿದ್ದು ಹೀಗೆ!

    ಮುಂಬೈ: ಕಾಮಿಡಿಯನ್, ಡಾ.ಮಶೂರ್ ಗುಲಾಟಿ ಖ್ಯಾತಿಯ ಸುನಿಲ್ ಗ್ರೊವರ್ ಕಿಲಾಡಿ ಅಕ್ಷಯ್ ಕುಮಾರ್ ಗೆಟಪ್ ಹಾಕಿ `ತೂ ಚೀಜ್ ಬಡಿ ಹೈ ಮಸ್ತ್ ಮಸ್ತ್’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಬಾಲಿವುಡ್‍ನ ಮಸ್ತ ಹುಡುಗಿ ರವೀನಾ ಟಂಡನ್ ಅವರನ್ನು ಇಂಪ್ರೆಸ್ ಮಾಡಿದ್ದಾರೆ.

    ಸೋನಿ ಚಾನೆಲ್‍ನ ಸಬಸೇ ಬಡಾ ಕಲಾಕರ್ ಶೋನ ವೇದಿಕೆಯಲ್ಲಿ ಅಕ್ಷಯ್ ಕುಮಾರ್ ಅಭಿನಯದ ಮೊಹ್ರಾ ಫಿಲ್ಮ್ ಡ್ರೆಸ್ ಹಾಕಿ ತೂ ಚೀಜ್ ಬಡಿ ಹಾಡಿಗೆ ಡ್ಯಾನ್ಸ್ ಮಾಡಲಾರಂಭಿಸಿದರು. ಸುನಿಲ್ ಗ್ರೋವರ್ ಡ್ಯಾನ್ಸ್ ಆರಂಭಿಸುತ್ತಿದ್ದಂತೆ ಖುಷಿಯಾಗಿ ರವೀನಾ ಸ್ಟೇಜ್‍ಗೆ ಬಂದು ಡ್ಯಾನ್ಸ್ ಮಾಡಿದ್ದಾರೆ.

    ಸುನಿಲ್ ಗ್ರೋವರ್ ಮತ್ತು ಕಪಿಲ್ ಶರ್ಮಾ ನಡುವಿನ ಜಗಳದ ನಂತರ ಹೆಚ್ಚಾಗಿ ಯಾವುದೇ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಕಪಿಲ್ ಜೊತೆಗಿನ ವೈಮನಸ್ಸಿನ ನಂತರ ಸೋನಿ ಚಾನೆಲ್‍ನ `ಇಂಡಿಯನ್ ಐಡಲ್’ ಪೈನಲ್‍ನಲ್ಲಿ ಸುನಿಲ್ ಗ್ರೋವರ್ ಎಲ್ಲರನ್ನು ನಗಿಸಿದ್ದರು.

    ಆದರೆ ಕಪಿಲ್ ಶರ್ಮಾ ಶೋ ಜೊತೆಗಿನ ಅಗ್ರಿಮೆಂಟ್ ಮುರಿದುಕೊಂಡ ಸುನಿಲ್ ಗ್ರೊವರ್ ಅವರನ್ನು ಸೋನಿ ಮತ್ತೊಮ್ಮೆ ತಮ್ಮ ಚಾನೆಲ್ ಕರೆತಂದಿದೆ. ಸೋನಿಯಲ್ಲಿಯ `ಸಬಸೇ ಬಢಾ ಕಲಾಕರ್’ ರಿಯಾಲಿಟಿ ಶೋಗೆ ಬಂದಿದ್ದಾರೆ. ಸಬಸೇ ಬಡಾ ಕಲಾ ಕಲಾಕರ್ ಶೋದಲ್ಲಿ ಪುಟಾಣಿ ಮಕ್ಕಳು ತಮ್ಮಲ್ಲಿಯ ಕಲೆಯನ್ನು ತೋರಿಸುವ ರಿಯಾಲಿಟಿ ಶೋ ಆಗಿದ್ದು ರವೀನಾ ಟಂಡನ್, ಅರ್ಷದ್ ವಾರ್ಸಿ ಮತ್ತು ಬೊಮನ್ ಇರಾನಿ ಶೋ ಜಡ್ಜ್ ಗಳಾಗಿದ್ದಾರೆ.

     

  • ಕಪಿಲ್ ಶರ್ಮಾ ಇನ್ ಲವ್ – ಫೋಟೋ ಶೇರ್ ಮಾಡಿ ಪ್ರೇಯಸಿ ಯಾರೆಂದು ಬಹಿರಂಗಪಡಿಸಿದ್ರು ಕಪಿಲ್

    ಕಪಿಲ್ ಶರ್ಮಾ ಇನ್ ಲವ್ – ಫೋಟೋ ಶೇರ್ ಮಾಡಿ ಪ್ರೇಯಸಿ ಯಾರೆಂದು ಬಹಿರಂಗಪಡಿಸಿದ್ರು ಕಪಿಲ್

    ಮುಂಬೈ: ಕಾಮಿಡಿ ಶೋ ನಿರೂಪಕ ಮತ್ತು ನಟ ಕಪಿಲ್ ಶರ್ಮಾ ಲವ್ವಲ್ಲಿ ಬಿದ್ದಿದ್ದಾರೆ. ಖಾಸಗಿ ಚಾನಲೆ ಒಂದರಲ್ಲಿ ಕಾಮಿಡಿ ಶೋ ಮೂಲಕ ಮನೆ ಮಾತಾಗಿರುವ ಕಪಿಲ್ ತಾವು ಪ್ರೀತಿಸುತ್ತಿರುವ ಹುಡುಗಿ ಫೋಟೋ ಟ್ವೀಟರ್‍ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

    ಪ್ರತಿ ಶನಿವಾರ ಮತ್ತು ಭಾನುವಾರ ತಮ್ಮ ಶೋ ಮೂಲಕ ಎಲ್ಲರನ್ನೂ ನಗಿಸುವ ಕಪಿಲ್ ಶರ್ಮಾ ಇದೀಗ ತಮ್ಮ ಪ್ರೇಯಸಿಯ ಬಗ್ಗೆ ಹೇಳಿಕೊಂಡಿದ್ದಾರೆ. ತನ್ನ ಶೋಗೆ ಬರುವ ನಟಿಯರನ್ನ ರೇಗಿಸುತ್ತಾ ತಮಾಷೆ ಮಾಡೋ ಕಪಿಲ್ ಕೊನೆಗೂ ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    ಹಾಯ್, ನಾನೊಂದು ಸುಂದರವಾದ ವಿಷಯವನ್ನ ನಿಮ್ಮೊಂದಿಗೆ ಹಂಚಿಕೊಳ್ಬೇಕು. 30 ನಿಮಿಷ ಕಾಯಿರಿ ಎಂದು ಕಪಿಲ್ ಟ್ವೀಟ್ ಮಾಡಿದ್ರು. ಅನಂತರ ಎರಡು ಫೋಟೋಗಳ ಸಮೇತ ಟ್ವೀಟ್ ಮಾಡಿ ತಮ್ಮ ಪ್ರೇಯಸಿ ಯಾರೆಂಬುದನ್ನ ಬಹಿರಂಗಪಡಿಸಿದ್ರು.

    ಈ ಫೋಟೋದಲ್ಲಿರುವ ಮಹಿಳೆ ನನ್ನ ಅರ್ಧಾಂಗಿ ಎಂದು ಹೇಳಲ್ಲ. ಇವಳು ನನ್ನನ್ನು ಪರಿಪೂರ್ಣಳಾಗಿಸುತ್ತಾಳೆ. ಲವ್ ಯೂ ಗಿನ್ನಿ. ದಯವಿಟ್ಟು ಈಕೆಯನ್ನು ಸ್ವಾಗತಿಸಿ. ನಾನಿವಳನ್ನು ತುಂಬಾ ಪ್ರೀತಿಸ್ತೀನಿ ಎಂದು ಟ್ವೀಟ್ ಮಾಡಿದ್ದಾರೆ.

    ಶೋದಲ್ಲಿ ಪ್ರತಿಬಾರಿಯೂ ನಾನು ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಯನ್ನು ಪ್ರೀತಿಸುತ್ತೇನೆ. ಆಯ್ ಲವ್ ದೀಪಿಕಾ ಎಂದು ಹೇಳುತ್ತಿದ್ದ ಕಪಿಲ್ ಕೊನೆಗೆ ಒಂದು ಟ್ವೀಟ್ ಮಾಡಿ, ದೀಪು ಇನ್ಮುಂದೆ ನಾನು ನಿನ್ನನ್ನು ಮಿಸ್ ಮಾಡುವುದಿಲ್ಲ ಎಂದು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ

    .

    ಕಪಿಲ್ ಹಾಗೂ ಗಿನ್ನಿ ಚತ್ರಾತ್ ಕಾಲೇಜು ದಿನಗಳಿಂದಲೂ ಒಬ್ಬರಿಗೊಬ್ಬರು ಪರಿಚಯವಿದ್ದರು. ಆದರೂ ಇವರಿಬ್ಬರೂ ಹತ್ತಿರವಾಗಿದ್ದು ಪ್ರಖ್ಯಾತ ಶೋ ಹಸ್ ಬಲ್ಲಿಯೇ ಚಿತ್ರೀಕರಣದ ವೇಳೆ. ಕಪಿಲ್ ನಿರ್ದೇಶನದ ಇತರೆ ಕೆಲವು ಶೋಗಳಲ್ಲೂ ಗಿನ್ನಿ ಕಾಣಿಸಿಕೊಂಡಿದ್ದರು.