Tag: ಕಪಿಲ್ ಶರ್ಮಾ

  • ಕಪಿಲ್ ಶರ್ಮಾ ಶೋದಿಂದ ಸಿಧು ಔಟ್

    ಕಪಿಲ್ ಶರ್ಮಾ ಶೋದಿಂದ ಸಿಧು ಔಟ್

    ಚಂಡೀಗಢ: ಪುಲ್ವಾಮಾ ದಾಳಿಯ ವಿಚಾರವಾಗಿ ಪಾಕಿಸ್ತಾನ ಪರವಾಗಿ ಹೇಳಿಕೆ ನೀಡಿದ್ದ ಪಂಜಾಬ್‍ನ ಕಾಂಗ್ರೆಸ್ ಮಂತ್ರಿ ನವಜೋತ್ ಸಿಂಗ್ ಸಿಧುಗೆ ಸಂಕಷ್ಟ ಎದುರಾಗಿದ್ದು, ಖ್ಯಾತ ಕಪಿಲ್ ಶರ್ಮಾ ಶೋದಿಂದ ಅವರನ್ನು ಹೊರಹಾಕಲಾಗಿದೆ.

    ಶೋ ಆರಂಭವಾದ ದಿನದಿಂದಲೂ ಸಿಧು ಅಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. ಆದರೆ ಪುಲ್ವಾಮಾ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಧು, ಭಯೋತ್ಪಾದನೆಗೆ ಯಾವುದೇ ದೇಶ, ಧರ್ಮ ಅಂತಿಲ್ಲ. ಭಾರತ, ಪಾಕಿಸ್ತಾನದ ಜೊತೆ ಮಾತನಾಡಬೇಕು. ಕೆಲವರು ಮಾಡಿದ ತಪ್ಪಿಗೆ ದೇಶವನ್ನೇ ದ್ವೇಷಿಸುವುದು ಸರಿಯಲ್ಲ ಅಂತ ಹೇಳಿದ್ದರು. ಇದನ್ನೂ ಓದಿ: ಪಾಕಿಸ್ತಾನಕ್ಕೆ ಕ್ಲೀನ್‍ಚಿಟ್ ಕೊಟ್ಟು ಮಾತುಕತೆಯಿಂದ ಸಮಸ್ಯೆ ಪರಿಹಾರ ಎಂದ ಸಿಧು

    ಈ ಹೇಳಿಕೆ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೆ ಬಾಯ್ಕಾಟ್ ಸಿಧು ಎಂಬ ಹ್ಯಾಷ್ ಟ್ಯಾಗ್ ಬಳಸಿ ಸಾಕಷ್ಟು ಜನ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತ ಟಿವಿ ಚಾನೆಲ್ ನಿರ್ಮಾಣ ಸಂಸ್ಥೆ, ಸಿಧು ಅವರನ್ನು ಕಾರ್ಯಕ್ರಮದಿಂದ ಕಿತ್ತು ಹಾಕುವಂತೆ ಸೂಚನೆ ನೀಡಿದೆ.

    ಸಿಧು ಮಾತ್ರ ತನ್ನ ಹೇಳಿಕೆಯಲ್ಲಿ ಕೆಲವನ್ನು ಮಾತ್ರವೇ ಆರಿಸಿ ವಿಕೃತಿ ಮೆರೆಯಲಾಗಿದೆ ಅಂತ ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಇನ್ನು ಬಿಸಿಸಿಐ ಅಂಗಸಂಸ್ಥೆ ಸಿಸಿಐ ತನ್ನ ರೆಸ್ಟೋರೆಂಟ್‍ನಲ್ಲಿದ್ದ ಮಾಜಿ ಕ್ರಿಕೆಟಿಗ, ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರವನ್ನು ಮುಚ್ಚುವ ಮೂಲಕ ಪುಲ್ವಾಮಾ ದಾಳಿಗೆ ವಿನೂತನವಾಗಿ ಪ್ರತಿಭಟಿಸಿದೆ.

    ಪುಲ್ವಾಮಾ ದಾಳಿ ನಡೆದ ಸಂದರ್ಭದಲ್ಲಿ ನವಜೋತ್ ಸಿಂಗ್, ದಾಳಿಯಲ್ಲಿ ನಡೆಸಿದವರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಹೇಳಿದ್ದರು. ಆದರೆ ಯಾರೋ ಮಾಡಿದ ಕೃತ್ಯಕ್ಕೆ ಯಾವುದೇ ದೇಶದ ಮೇಲೆ ಆರೋಪ ಮಾಡುವುದು ಸರಿಯಲ್ಲ. ಇವುಗಳಿಗೆಲ್ಲ ಶಾಂತಿ ಮಾತುಕತೆ ಒಂದೇ ಪರಿಹಾರ ಎಂದು ಹೇಳುವ ಮೂಲಕ ಕೃತ್ಯದಲ್ಲಿ ಪಾಕಿಸ್ತಾನದ ಪಾತ್ರದ ಕುರಿತು ಪರೋಕ್ಷವಾಗಿ ಕ್ಲೀನ್‍ಚಿಟ್ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಪಿಲ್ ಶರ್ಮಾ ಶೋದಲ್ಲಿ ಪೈಲ್ವಾನನ ಹವಾ!

    ಕಪಿಲ್ ಶರ್ಮಾ ಶೋದಲ್ಲಿ ಪೈಲ್ವಾನನ ಹವಾ!

    ಮುಂಬೈ: ದೇಶದ ಕಿರುತೆರೆಯಲ್ಲಿ ತನ್ನ ಮನರಂಜನೆಯ ಮೂಲಕ ಹೆಸರು ಪಡೆದಿರುವ ಕಪಿಲ್ ಶರ್ಮಾ ಶೋದಲ್ಲಿ ಮೊದಲ ಬಾರಿಗೆ ಕನ್ನಡದ ನಟ ಸುದೀಪ್ ತಮ್ಮ ಪೈಲ್ವಾನ ಚಿತ್ರದ ಪ್ರಚಾರಕ್ಕೆ ತೆರಳಿದ್ದಾರೆ.

    ಕಪಿಲ್ ಶರ್ಮಾ ಶೋದಲ್ಲಿ ಕಿಚ್ಚ ಸುದೀಪ್ ಭಾಗವಹಿಸಿದ್ದು, ಕಾರ್ಯಕ್ರಮದ ಕುರಿತು ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಕಪಿಲ್ ಶೋನಲ್ಲಿ ಬಾಲಿವುಡ್ ಸಿನಿಮಾ ಸ್ಟಾರ್ ಗಳಿಂದ ಹಿಡಿದು ಹಲವು ರಾಜಕೀಯ ನಾಯಕರು, ಕ್ರೀಡಾಪಟುಗಳು, ಸಾಮಾಜಿಕ ಹೋರಾಟಗಾರರು ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದಾರೆ. ಇಂತಹ ಶೋನಲ್ಲಿ ಸುದೀಪ್ ಭಾಗವಹಿಸಿದ್ದು, ಕಪಿಲ್ ಅವರ ಶೋನಲ್ಲಿ ನಗು ಸಮೃದ್ಧವಾಗಿದ್ದು, ಅಪರೂಪ ಸಂದರ್ಭ ಎಂಬಂತೆ ಹೆಚ್ಚು ನಕ್ಕಿದ್ದೇನೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

    ಕಪಿಲ್ ಶರ್ಮಾ, ನವಜೋತ್ ಸಿಂಗ್ ಸಿಧು, ಸುನಿಲ್ ಶೆಟ್ಟಿ ಜೊತೆಯಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಸುದೀಪ್ ಹಂಚಿಕೊಂಡಿದ್ದಾರೆ. ಬಾಲಿವುಡ್ ಕಲಾವಿದರು ಸಿನಿಮಾ ಪ್ರಚಾರಕ್ಕಾಗಿ ಶೋದಲ್ಲಿ ಭಾಗವಹಿಸುತ್ತಾರೆ. ಕೆಲವೊಮ್ಮೆ ಕಾರ್ಯಕ್ರಮದ ಆಯೋಜಕರು ವಿಶೇಷ ವ್ಯಕ್ತಿಗಳನ್ನು ಕಾರ್ಯಕ್ರಮಕ್ಕೆ ಕರೆಸಿ ಶೋ ಮಾಡುತ್ತಾರೆ. ಸದ್ಯ ಸುದೀಪ್ ಪೈಲ್ವಾನ ಸಿನಿಮಾ ಪ್ರಚಾರಕ್ಕಾಗಿ ಶೋಗೆ ತೆರಳಿದ್ದಾರೆ.

    ಈ ಹಿಂದೆ ಕುಡ್ಲದ ಬೆಡಗಿ ತಮ್ಮ ಹಿಂದಿ ಸಿನಿಮಾ ಮೆಹೆಂಜೋದಾರೋ ಚಿತ್ರದ ಪ್ರಮೋಶನ್ ಗಾಗಿ ಹೃತಿಕ್ ರೋಷನ್ ಜೊತೆ ತೆರಳಿದ್ದರು. ಆದ್ರೆ ಕನ್ನಡದ ಖ್ಯಾತ ನಟರೊಬ್ಬರು ಇದೇ ಮೊದಲ ಬಾರಿಗೆ ಶೋ ನಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ ಬಳಿಕ ಎರಡನೇ ಸೀಸನ್ ಆರಂಭಿಸಿರುವ ಕಪಿಲ್ ಎಂದಿನಂತೆ ಸಾರ್ವಜನಿಕರನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸ್ಯ ಕಾರ್ಯಕ್ರಮದ ಕಿರೀಟ್ ಅಂತಾನೇ ಕರೆಸಿಕೊಳ್ಳುವ ಸಚಿವ ನವಜೋತ್ ಸಿಂಗ್ ಸಿಧು ಕೆಲಸದ ಒತ್ತಡದ ನಡುವೆ ಶೋನಲ್ಲಿ ತಮ್ಮ ಸುಂದರ ಶಾಯರಿಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಪೈಲ್ವಾನ್ ಮತ್ತು ಸೈರಾ ಸಿನಿಮಾದಲ್ಲಿ ಬ್ಯುಸಿಯಾಗಿರುವ ಸುದೀಪ್, ಹಿಂದಿಯ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ದಬಾಂಗ್-3 ಚಿತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಹಿಂದಿಯ ಹಾರರ್ ಚಿತ್ರಗಳಲ್ಲಿ ನಟಿಸಿದ್ದಾರೆ. ಕೇವಲ ಫೋಟೋ ಹಂಚಿಕೊಂಡಿರುವ ಸುದೀಪ್ ಸಂಚಿಕೆ ಯಾವಾಗ ಪ್ರಸಾರವಾಗಲಿದೆ ಎಂಬುದನ್ನು ತಿಳಿಸಿಲ್ಲ.

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಚಿತ್ರದಲ್ಲಿ ಸಲ್ಮಾನ್ ಕಿಸ್ ಮಾಡಲ್ಲ ಏಕೆ? ರಹಸ್ಯ ಬಿಚ್ಚಿಟ್ಟ ಸೋದರ

    ಚಿತ್ರದಲ್ಲಿ ಸಲ್ಮಾನ್ ಕಿಸ್ ಮಾಡಲ್ಲ ಏಕೆ? ರಹಸ್ಯ ಬಿಚ್ಚಿಟ್ಟ ಸೋದರ

    ಮುಂಬೈ: ನಿರೂಪಕ ಕಪಿಲ್ ಶರ್ಮಾ ಸಾರಥ್ಯದ ಕಾಮಿಡಿ ಶೋ ಮತ್ತೊಮ್ಮೆ ಆರಂಭವಾಗಿದೆ. ಕಳೆದ ವಾರ ನಟ ರಣ್‍ವೀರ್ ಸಿಂಗ್, ನಟಿ ಸಾರಾ ಅಲಿಖಾನ್ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ಆಗಮಿಸಿದ್ದರು. ಈ ವಾರ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್, ಅರ್ಬಾಜ್ ಖಾನ್ ಮತ್ತು ಸೋಹೈಲ್ ಖಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಶನಿವಾರ ಮತ್ತು ಭಾನುವಾರ ಸಂಚಿಕೆ ಪ್ರಸಾರವಾಗಲಿದ್ದು, ಪ್ರೋಮೋಗಳು ಭಾರೀ ಸದ್ದು ಮಾಡುತ್ತಿವೆ. ಬಿಡುಗಡೆಯಾಗಿರುವ ಎರಡ್ಮೂರು ಪ್ರೋಮೋಗಳಲ್ಲಿ ಸಲ್ಮಾನ್ ಚಿತ್ರದಲ್ಲಿ ಕಿಸ್ ಮಾಡಲ್ಲ ಎಂಬ ರಹಸ್ಯವನ್ನು ಅರ್ಬಾಜ್ ಖಾನ್ ಬಿಚ್ಚಿಟ್ಟಿದ್ದಾರೆ.

    ನಿರೂಪಕ ಕಪಿಲ್ ಶರ್ಮಾ, ಒಂದು ಸಿನಿಮಾ ಒಪ್ಪಿಕೊಂಡಾಗ ಹೊಸ ನಟಿ ಬಂದರೆ ಹೇಗೆ? ಈ ಹಿಂದೆ ಒಂದೆರೆಡು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ನಟಿಯಾದ್ರೆ ಪರವಾಗಿಲ್ಲ. ಹೊಸ ನಟಿಯೊಂದಿಗೆ ತೆರೆ ಹಂಚಿಕೊಳ್ಳುವ ನಿಮ್ಮ ಅನುಭವ ಹೇಗಿರುತ್ತೆ ಎಂದು ಸಲ್ಮಾನ್ ಗೆ ಪ್ರಶ್ನೆ ಮಾಡಿದರು. ಕಪಿಲ್ ಪ್ರಶ್ನೆಗೆ ಉತ್ತರಿಸಿದ ಸಲ್ಮಾನ್, ಮೊದಲನೇಯದಾಗಿ ಕಿಸ್ಸಿಂಗ್ ಸೀನ್ ಮಾಡಲ್ಲ. ಹಾಗಾಗಿ ಯಾವುದೇ ತೊಂದರೆ ನನಗೆ ಆಗಲ್ಲ ಎಂದು ಹೇಳಿದರು.

    ಸಲ್ಮಾನ್ ಉತ್ತರ ಕೇಳುತ್ತಿದ್ದಂತೆ ಪಕ್ಕದಲ್ಲಿಯೇ ಕುಳಿತಿದ್ದ ಅರ್ಬಾಜ್, ಆಫ್ ಸ್ಕ್ರೀನ್ ನಲ್ಲಿಯೇ ತುಂಬಾನೇ ಕಿಸ್ ಮಾಡ್ತಾರೆ. ತೆರೆಯ ಮೇಲೆ ಮತ್ಯಾಕೆ ಎಂದು ಸೋದರನ ಕಾಲೆಳೆದರು. ಸದ್ಯ ಪ್ರೋಮೋ ಮಾತ್ರ ಬಿಡುಗಡೆಯಾಗಿದ್ದು, ಸೋದರರು ಯಾರ ಯಾರ ಕಾಲೆಳೆದಿದ್ದಾರೆ ಎಂಬುದನ್ನು ಸಂಚಿಕೆ ನೋಡಿದಾಗಲೇ ತಿಳಿಯುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಪಿಲ್ ಶರ್ಮಾ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಪಿಲ್ ಶರ್ಮಾ

    ಮುಂಬೈ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಪಿಲ್ ಶರ್ಮಾ ಶೋ’ ಮೂಲಕ ಖ್ಯಾತರಾಗಿರುವ ಹಾಸ್ಯನಟ, ನಿರೂಪಕ ಕಪಿಲ್ ಶರ್ಮಾ ತಮ್ಮ ಬಹುಕಾಲದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಕಪಿಲ್ ಶರ್ಮಾ ತನ್ನ ಗೆಳತಿ ಗಿನ್ನಿ ಚಾತ್ರಥ್ ಜೊತೆ ಆಕೆಯ ಮನೆಯಲ್ಲೇ ಸಿಖ್ ಸಂಪ್ರದಾಯದ ಪ್ರಕಾರ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಲ್ಲಿ ಕಪಿಲ್ ಬಿಳಿ ಹಾಗೂ ಪಿಂಕ್ ಬಂದ್‍ಗಲ ಧರಿಸಿದ್ದರೆ, ಗಿನ್ನಿ ಪಿಂಗ್ ಲೆಹೆಂಗಾ ಧರಿಸಿ ಮಿಂಚಿದ್ದಾರೆ.

    ಪಂಜಾಬ್‍ನ ಜಲಂದರ್ ನಲ್ಲಿರುವ ಪಾಗ್ವಾರಾದಲ್ಲಿ ಬುಧವಾರ ಕಪಿಲ್ ಹಾಗೂ ಗಿನ್ನಿ ಮದುವೆಯಾಗಿದ್ದರು. ಮದುವೆಯಾದ ನಂತರ ಇಬ್ಬರು ಆನಂದ್ ಕರಾಜ್ ಕಾರ್ಯಕ್ರಮದಲ್ಲಿ (ಪಂಜಾಬಿ ಸಂಪ್ರದಾಯದಲ್ಲಿ ನಡೆಯುವ ಶಾಸ್ತ್ರ) ಭಾಗಿಯಾಗಿದ್ದರು.

    ಕೃಷ್ಣಾ ಅಭಿಷೇಕ್, ಸುಮೌನ ಚಕ್ರವರ್ತಿ, ಭಾರತಿ ಸಿಂಗ್ ಹಾಗೂ ಇನೂ ಕೆಲವು ಬಾಲಿವುಡ್ ಕಲಾವಿದರು ಕಪಿಲ್ ಮದುವೆಯಲ್ಲಿ ಭಾಗವಹಿಸಿ ನವಜೋಡಿಗೆ ಶುಭ ಕೋರಿದರು. ಮೂಲಗಳ ಪ್ರಕಾರ ಕಪಿಲ್ ತನ್ನ ಸಂಬಂಧಿಕರಿಗೆ ಅಮೃತ್ ಸರ್‍ನಲ್ಲಿ ಆರತಕ್ಷತೆ ಹಾಗೂ ಚಿತ್ರರಂಗದ ಸ್ನೇಹಿತರಿಗೆ ಮುಂಬೈನಲ್ಲಿ ಆರತಕ್ಷತೆ ನಡೆಯಲಿದೆ ಎಂದು ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಹು ದಿನಗಳ ನಂತರ ಕಪಿಲ್ ಶರ್ಮಾ ಅಭಿಮಾನಿಗಳಿಗೆ ಗುಡ್ ನ್ಯೂಸ್!

    ಬಹು ದಿನಗಳ ನಂತರ ಕಪಿಲ್ ಶರ್ಮಾ ಅಭಿಮಾನಿಗಳಿಗೆ ಗುಡ್ ನ್ಯೂಸ್!

    ಮುಂಬೈ: ಹಾಸ್ಯ ನಟ, ನಿರೂಪಕ ಕಪಿಲ್ ಶರ್ಮಾ ಎಷ್ಟು ಬೇಗ ಎತ್ತರಕ್ಕೆ ಬೆಳೆದರೋ, ಅಷ್ಟೇ ಬೇಗ ತೆರೆಯ ಹಿಂದೆ ಮರೆಯಾದ ವ್ಯಕ್ತಿ. ತಮ್ಮ ಮಾತಿನ ಶೈಲಿ, ಹಾಸ್ಯ ಚಟಾಕಿಗಳಿಂದ ಪ್ರಸಿದ್ಧಿ ಪಡೆದುಕೊಂಡಿದ್ದ ಕಪಿಲ್ ಶರ್ಮಾ ಖಾಸಗಿ ವಾಹಿನಿಯ ಕಾರ್ಯಕ್ರಮದಿಂದ ಹೊರ ಬಂದು ಅಭಿಮಾನಿ ಮತ್ತು ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದಾರೆ. ಸದ್ಯ ಕಪಿಲ್ ಶರ್ಮಾ ಜೀವನಾಧರಿತ ಸಿನಿಮಾ ತೆರೆಯ ಮೇಲೆ ತರಲು ನಿರ್ದೇಶಕರೊಬ್ಬರು ಸಿದ್ಧತೆ ನಡೆಸಿಕೊಂಡಿದ್ದಾರೆ.

    ನಟ ಸಂಜಯ್ ದತ್ ರವರ ಜೀವನ ಚರಿತ್ರೆಯ ಸಂಜು ಸಿನಿಮಾ ಯಶಸ್ವಿಯಾಗಿದೆ. ಈ ಚಿತ್ರದ ಎಫೆಕ್ಟ್ ನಂತರ ಇದೀಗ ಕಾಮಿಡಿ ಕಿಂಗ್ ಕಪಿಲ್ ಶರ್ಮಾರವರ ಜೀವನ ಚರಿತ್ರೆಯ ಮೇಲೆ ಚಿತ್ರ ನಿರ್ಮಾಣ ಮಾಡಲು ‘ತೇರಿ ಭಾಬಿ ಹೈ ಪಗ್ಲೆ’ ಚಿತ್ರದ ನಿರ್ದೇಶಕ ವಿನೋದ್ ತಿವಾರಿ ನಿರ್ಧರಿಸಿದ್ದಾರೆ.

    ಕಪಿಲ್ ಶರ್ಮಾರವರನ್ನ ಕಾಮಿಡಿಯ ಕಿಂಗ್ ಎಂದು ಕರೆಯುತ್ತಾರೆ. ಅವರು ತಮ್ಮ ಸತತ ಪರಿಶ್ರಮದಿಂದ ಈ ಬಿರುದು ಪಡೆದುಕೊಂಡಿದ್ದಾರೆ. ಪಂಜಾಬ್ ನ ಅಮೃತ್‍ಸರ್ ನಲ್ಲಿ ಜನಿಸಿದ ಕಪಿಲ್ ಶರ್ಮಾರವರನ್ನ ಕಾಮಿಡಿ ಪ್ರಪಂಚದ ಕಿರೀಟವಿಲ್ಲದ ಅರಸ ಎಂತಲೂ ಕರೆಯುತ್ತಾರೆ. ಕಪಿಲ್ ರವರ ಜೀವನದ ಮೇಲೆ ಆದಂತಹ ಸಕ್ಸಸ್‍ನ ಸೈಡ್ ಎಫೆಕ್ಟ್ ಗಳು ನಮ್ಮ ಮುಂದಿವೆ.

    ಸ್ಟಾರ್ ಗಿರಿ ಪಡೆದುಕೊಂಡ ಕಪಿಲ್ ತನ್ನ ವರ್ತನೆಗಳಿಂದ ಸಾಕಷ್ಟು ನಷ್ಟವನ್ನು ಉಂಟು ಮಾಡಿಕೊಂಡಿದ್ದರು. ಹೀಗಾಗಿ ತಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತವನ್ನು ಕಂಡಿದ್ದಾರೆ. ಅವರ ಸಾಧನೆಯಲ್ಲಿ ಹಲವಾರು ಬಾರಿ ಅವನತಿ ಹಾಗೂ ಖಿನ್ನತೆಯನ್ನ ಕಂಡಿದ್ದಾರೆ. ಒಂದು ಚಿತ್ರಕ್ಕೆ ಬೇಕಾಗುವಂತಹ ಎಲ್ಲಾ ಮಸಾಲೆ ಕಪಿಲ್ ಅವರ ಜೀವನದಲ್ಲಿ ನಮಗೆ ಸಿಗುತ್ತದೆ. ಈ ರೀತಿಯ ಜೀವನದ ಸಾಹಸವನ್ನ ಕಂಡು ಕೆಲವು ಚಲನಚಿತ್ರ ನಿರ್ಮಾಪಕರು ಅವರ ಮೇಲೆ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ.

    ಕಪಿಲ್ ಇಂಡಸ್ಟ್ರಿಯಲ್ಲಿ ನಿಧಾನವಾಗಿ ಹೊರಹೊಮ್ಮಿ ಹಾಸ್ಯ ಜಗತ್ತಿನ ಕಿಂಗ್ ಆಗಿ ಬದಲಾದ ವ್ಯಕ್ತಿ. ಹೀರೋ ಯಿಂದ ಝೀರೋ ಆಗಿದ್ದ ಸನ್ನಿವೇಶಗಳು ಸಹ ನಮ್ಮ ಕಣ್ಮುಂದೆ ಇದೆ. ಅಷ್ಟಾದರು ಸಹಾ ತಮ್ಮ ಹಾರ್ಡ್ ವರ್ಕ್‍ನಿಂದ ಏಳಿಗೆಯನ್ನು ಕಂಡಿರುವುದು ಸಹ ನಮಗೆ ತಿಳಿದಿರುವ ವಿಚಾರ. ಆದ್ದರಿಂದ ನಾನು ಅವರ ನಿಜ ಜೀವನದ ಮೇಲೆ ಚಲನಚಿತ್ರವನ್ನು ಮಾಡಲು ಬಯಸಿದ್ದೇನೆ ಎಂದು ತಿವಾರಿ ತಿಳಿಸಿದ್ದಾರೆ.

    ವಿನೋದ್ ತಿವಾರಿ ಶೀಘ್ರದಲ್ಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಕಪಿಲ್ ಅವರೊಂದಿಗೆ ಮಾತನಾಡಲಿದ್ದಾರಂತೆ. ತಮ್ಮ ಜೀವನ ಚರಿತ್ರೆಯ ಚಿತ್ರದಲ್ಲಿ ಕಪಿಲ್ ಅವರೇ ನಟಿಸಬೇಕು ಎಂದು ವಿನೋದ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಒಂದು ವೇಳೆ ಕಪಿಲ್ ನಟಿಸಲು ನಿರಾಕರಿಸಿದರೆ ಅವರ ಪಾತ್ರದಲ್ಲಿ ಕೃಷ್ಣ ಅಭಿಷೇಕ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಕಪಿಲ್ ತಮ್ಮ ಜೀವನಚರಿತ್ರೆಯ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡ್ತಾರಾ? ಅಥವಾ ಅವರ ಪಾತ್ರದಲ್ಲಿ ಕೃಷ್ಣ ಅಭಿಷೇಕ್ ಕಾಣಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ. ಅದೇನೇ ಆಗಲಿ ಕಪಿಲ್ ಜೀವನ ಚರಿತ್ರೆಯ ಸಿನಿಮಾ ನೋಡಲು ಅವರ ಫ್ಯಾನ್ಸ್ ಕಾತುರರಾಗಿದ್ದಾರೆ.

  • ಬಿಗ್ ಬಾಸ್‍ಗೆ ಎಂಟ್ರಿ ಕೊಡಲಿದ್ದಾರೆ ಕಪಿಲ್ ಶರ್ಮಾ!

    ಬಿಗ್ ಬಾಸ್‍ಗೆ ಎಂಟ್ರಿ ಕೊಡಲಿದ್ದಾರೆ ಕಪಿಲ್ ಶರ್ಮಾ!

    ಮುಂಬೈ: ವಿವಾದಗಳಿಂದ ಈ ವರ್ಷ ಸುದ್ದಿಯಾಗಿರುವ ಕಪಿಲ್ ಶರ್ಮಾ ಹಿಂದಿಯ ಬಿಗ್ ಬಾಸ್-12ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

    ಹೌದು. ಕೆಲವು ದಿನಗಳಿಂದ ಡಿಪ್ರೆಶನ್‍ಗೆ ಒಳಗಾಗಿದ್ದ ಕಾಮಿಡಿ ಸ್ಟಾರ್ ಕಪಿಲ್ ಶರ್ಮಾ ತಮ್ಮ ಹಾಸ್ಯ ಕಾರ್ಯಕ್ರಮದ ಮೂಲಕ ಜನರನ್ನು ರಂಜಿಸುತ್ತಿದ್ದರು. ಅತಿ ಹೆಚ್ಚು ಟಿಆರ್‍ಪಿ ಪಡೆಯುತ್ತಿದ್ದ ಕಪಿಲ್ ಶರ್ಮಾ ಶೋ ಕಲಾವಿದರ ಒಳಜಗಳದಿಂದಾಗಿ ನಿಂತು ಹೋಗಿತ್ತು. ಅದಾದ ಬಳಿಕ ಕಪಿಲ್ ಸೆಕೆಂಡ್ ಇನ್ನಿಂಗ್ಸ್ ಫ್ಯಾಮಿಲಿ ಟೈಮ್ ವಿಥ್ ಕಪಿಲ್ ಶರ್ಮಾ ಎಂಬ ಶೋ ಆರಂಭಿಸಿದ್ರು. ಅದೂ ಸಹ ಕಾರಣಾಂತರಗಳಿಂದ ನಿಂತು ಹೋಗಿತ್ತು.

    ಸದ್ಯಕ್ಕೆ ಯಾವುದೇ ಕಾರ್ಯಕ್ರಮಗಳು ಇಲ್ಲದ ಕಾರಣ ಈ ಬಾರಿಯ ಬಿಗ್ ಬಾಸ್ ನಲ್ಲಿ ಕಪಿಲ್ ಶರ್ಮಾ ಸ್ಪರ್ಧಿಯಾಗಿ ಭಾಗವಹಿಸುತ್ತಾರೆ ಎನ್ನಲಾಗಿದೆ. ಈ ಬಾರಿಯೂ ಎಂದಿನಂತೆ ಬಾಲಿವುಡ್ ಭಾಯಿಜಾನ್ ಬಿಗ್ ಬಾಸ್-12 ಶೋ ನಿರೂಪಣೆಯನ್ನು ಮಾಡಲಿದ್ದಾರೆ. ಸಲ್ಮಾನ್ ಆಪ್ತರಾಗಿರುವ ಕಪಿಲ್ ಗೆ ಈ ಬಾರಿ ಸ್ಪರ್ಧಿಯಾಗುವಂತೆ ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಈ ಬಗ್ಗೆ ಕಪಿಲ್, ಸಲ್ಮಾನ್ ಖಾನ್ ಅಥವಾ ಶೋ ನಡೆಸಿಕೊಡುವ ವಾಹಿನಿಯಾಗಲಿ ಇದೂವರೆಗೂ ಅಧಿಕೃತ ಪಡಿಸಿಲ್ಲ. ಈ ಹಿಂದೆ ಬಿಗ್‍ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ನೀಡಿದ್ದಕಪಿಲ್, ಒಂದು ವೇಳೆ ಸ್ಪರ್ಧಿಯಾಗಿ ಬಂದ್ರೆ ಪ್ರೇಕ್ಷಕರಿಗೆ ಭರಪೂರ ಮನರಂಜನೆಯಂತೂ ಸಿಗಲಿದೆ.

    ಡಾ,ಮಶೂರ್ ಗುಲಾಟಿ ಪಾತ್ರದಾರಿ ಸುನಿಲ್ ಗ್ರೋವರ್ ಕಪಿಲ್ ಶರ್ಮಾ ಶೋದಿಂದ ಹೊರ ನಡೆದ ಬಳಿಕ ಕಾರ್ಯಕ್ರಮ ಸಂಪೂರ್ಣ ನೆಲಕಚ್ಚಿತು. ನಂತರದ ಕೆಲವು ದಿನಗಳಲ್ಲಿ ಬೇರೆ ಕಲಾವಿದರನ್ನು ಕರೆ ತಂದರೂ ಕಪಿಲ್ ಯಶಸ್ವಿಯಾಗಲಿಲ್ಲ. ಸದ್ಯ ಏಕಾಂತದಲ್ಲಿರುವ ಕಪಿಲ್ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಆದ್ರೆ ಕಾರ್ಯಕ್ರಮದಿಂದ ಹೊರ ಬಂದ ಇತರೆ ಕಲಾವಿದರು ಬೇರೆ ಬೇರೆ ಶೋ ಮತ್ತು ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದಾರೆ.

  • ಕಪಿಲ್-ಸುನಿಲ್ ಗ್ರೋವರ್ ಮತ್ತೊಮ್ಮೆ ಜೊತೆಯಗ್ತಾರಾ? ಟ್ವಿಟ್ಟರ್ ನಲ್ಲಿ ಇಬ್ರು ನಟರೂ ಹೇಳಿದ್ದು ಹೀಗೆ

    ಕಪಿಲ್-ಸುನಿಲ್ ಗ್ರೋವರ್ ಮತ್ತೊಮ್ಮೆ ಜೊತೆಯಗ್ತಾರಾ? ಟ್ವಿಟ್ಟರ್ ನಲ್ಲಿ ಇಬ್ರು ನಟರೂ ಹೇಳಿದ್ದು ಹೀಗೆ

    ಮುಂಬೈ: ತಮ್ಮ ಹಾಸ್ಯದ ಜುಗಲ್‍ಬಂದಿಯ ಮೂಲಕವೇ ದೇಶಾದ್ಯಂತ ಪರಿಚಿತರಾಗಿರುವ ಕಪಿಲ್ ಶರ್ಮಾ ಮತ್ತು ಸುನಿಲ್ ಗ್ರೋವರ್ ಇಬ್ಬರನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದರೆ. ಆದ್ರೆ ಇಬ್ಬರ ನಡುವಿನ ಕಲಹದಿಂದಾಗಿ ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದಿದ್ದ ಶೋ ಕೂಡ ಕೊನೆಯಾಯ್ತು. ಸದ್ಯ ಕಪಿಲ್ `ಫ್ಯಾಮಿಲಿ ಟೈಮ್ ವಿಥ್ ಕಪಿಲ್’ ಎಂಬ ಶೋ ಮಾಡ್ತಿದ್ದು, ಪ್ರೋಮೋ ವಿಡಿಯೋ ವೈರಲ್ ಆಗಿದೆ.

    ಕೆಲವು ದಿನಗಳ ಹಿಂದೆ ಸುನಿಲ್ ಗ್ರೋವರ್ ಅಭಿಮಾನಿಯೊಬ್ಬರು, ನಿಮ್ಮನ್ನು (ಕಪಿಲ್-ಸುನಿಲ್) ತೆರೆಯ ಮೇಲೆ ಜೊತೆಯಾಗಿ ನೋಡುವುದು ಯಾವಾಗ ಅಂತಾ ಪ್ರಶ್ನೆ ಮಾಡಿದ್ರು. ಅಭಿಮಾನಿ ಪ್ರಶ್ನೆಗೆ ಸುನಿಲ್ ಗ್ರೋವರ್ ಟ್ವಿಟ್ಟರ್ ನಲ್ಲಿಯೇ ಉತ್ತರಿಸಿದ್ದಾರೆ.

    ಹೀಗಿತ್ತು ಉತ್ತರ: ನಿಮ್ಮ ಹಾಗೆ ನನಗೆ ಹಲವರು ಇದೇ ರೀತಿಯ ಪ್ರಶ್ನೆಗಳನ್ನು ಮಾಡ್ತಾರೆ. ಆದ್ರೆ ನನಗೆ ಶೋಗಾಗಿ ಯಾರು ಕರೆದಿಲ್ಲ. ನನ್ನ ಮೊಬೈಲ್ ನಂಬರ್ ಸಹ ಬದಲಾಗಿಲ್ಲ. ಇಷ್ಟು ದಿನಗಳವರೆಗೆ ಕಾಯ್ದು, ಬೇರೆ ಪ್ರೊಜೆಕ್ಟ್ ಗೆ ಸಹಿ ಮಾಡಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಒಳ್ಳೆಯ ಪ್ರೊಜೆಕ್ಟ್ ನಲ್ಲಿ ಭಾಗಿಯಾಗಿದ್ದೇನೆ. ಆದಷ್ಟು ಬೇಗ ನಿಮ್ಮ ಮುಂದೆ ಬರಲಿದ್ದೇನೆ ನಮಸ್ಕಾರ ಅಂತಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಶುರುವಾಯ್ತು ಟ್ವೀಟ್ ವಾರ್: ಸುನಿಲ್ ಟ್ವೀಟ್ ನೋಡುತ್ತಿದ್ದಂತೆ ಕಪಿಲ್ ಅಭಿಮಾನಿಗಳು ಖಡಕ್ ತಿರುಗೇಟು ನೀಡಿದ್ದಾರೆ. ಒಬ್ಬ ಅಭಿಮಾನಿ `ಅಣ್ಣ ನೀವು ನಿಜವಾಗಿಯೂ ಸುನಿಲ್ ಗೆ ಕಾಲ್ ಮಾಡಿದ್ರಾ? ಈ ಹಿಂದಿನ ಶೋ ಬಗ್ಗೆ ಮಾತನಾಡ್ತಾ ಇದ್ದೀರಾ? ಅಥವಾ ಈಗ ಬರುತ್ತೀರೋ ಶೋ ಬಗ್ಗೆ ಹೇಳ್ತಾ ಇದ್ದೀರಾ? ಎಂಬುದರ ಬಗ್ಗೆ ಸ್ಪಷ್ಟನೆ ನೀಡಿ ಅಂತಾ ಇಬ್ಬರನ್ನೂ ಟ್ವಿಟ್ಟರ್ ನಲ್ಲಿಯೇ ಪ್ರಶ್ನಿಸಿದ್ದಾರೆ.

    ನಾನು ಸುನಿಲ್‍ಗೆ ನೂರಕ್ಕೂ ಹೆಚ್ಚು ಬಾರಿ ಕಾಲ್ ಮಾಡಿದ್ದೇನೆ. ಆತನ ಮನೆಗೆ ಹಲವರನ್ನು ಕಳುಹಿಸಿದ್ದೇನೆ. ನಾನು ಸಹ ಸುನಿಲ್ ಮನೆಗೆ ಹೋಗಿದ್ದೇನೆ. ಇನ್ಮುಂದೆ ತಮ್ಮ ಸ್ವಾರ್ಥಕ್ಕಾಗಿ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಇಷ್ಟು ದಿನ ಆಗಿದ್ದೇ ಸಾಕು. ನನಗೆ ಸುನಿಲ್ ಸಪೋರ್ಟ್ ಬೇಕಾಗಿಲ್ಲ. ಆದ್ರೆ ಈ ರೀತಿಯ ಸುಳ್ಳು ಸುದ್ದಿಗಳನ್ನು ಮಾತ್ರ ಹಬ್ಬಿಸಬೇಡಿ ಅಂತಾ ಕಪಿಲ್ ಬೇಸರ ವ್ಯಕ್ತಪಡಿಸಿದ್ದಾರೆ.

  • ಈ ಸಹನಟಿಯ ಎಂಟ್ರಿಯಿಂದಾಗಿ ಕಪಿಲ್ & ಗಿನ್ನಿ ಬ್ರೇಕ್ ಅಪ್!

    ಈ ಸಹನಟಿಯ ಎಂಟ್ರಿಯಿಂದಾಗಿ ಕಪಿಲ್ & ಗಿನ್ನಿ ಬ್ರೇಕ್ ಅಪ್!

    ಮುಂಬೈ: ಕಾಮಿಡಿಯನ್ ಕಪಿಲ್ ಶರ್ಮಾ ಮತ್ತು ಗೆಳತಿ ಗಿನ್ನಿ ಚಾತ್ರಥ್ ನಡುವೆ ಬ್ರೇಕ್ ಆಗಿದೆ ಎಂದು ಪತ್ರಿಕೆಯೊಂದು ಪ್ರಕಟಿಸಿದೆ. ಕಪಿಲ್ ಶರ್ಮಾ ಶೋ ಮೂಲಕ ಜನರ ಮನಸೆಳದಿದ್ದ ಕಪಿಲ್ ಜೀವನದಲ್ಲಿ ಕೆಲವೊಂದು ದಿನಗಳಿಂದ ಒಂದಾದ ನಂತರ ತೊಂದರೆಗಳು ಬರತೊಡಗಿವೆ.

    ಇತ್ತೀಚಿನ ಕೆಲವು ದಿನಗಳಲ್ಲಿ ಕಪಿಲ್ ಮತ್ತು ಗಿನ್ನಿ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರೂ ಬೇರೆಯಾಗಲು ತೀರ್ಮಾನಿಸಿದ್ದಾರೆ ಎಂದು ಕೆಲ ಪತ್ರಿಕೆಗಳು ವರದಿ ಮಾಡಿವೆ. ಈ ಶೋ ದಲ್ಲಿ ಕಾಣಿಸಿಕೊಳ್ಳವ ನಟಿಯೊಬ್ಬರು ಕಪಿಲ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾರೆ. ಹಾಗಾಗಿ ಈ ವಿಷಯ ತಿಳಿದ ಗಿನ್ನಿ ಕಪಿಲ್ ನಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಕಪಿಲ್ ಜೊತೆ ರಿಲೇಶನನಲ್ಲಿರುವ ನಟಿಯ ಹೆಸರು ಮಾತ್ರ ಇದೂವರೆಗೂ ತಿಳಿದು ಬಂದಿಲ್ಲ.

    ಆಸ್ಟ್ರೇಲಿಯಾದ ಕಾರ್ಯಕ್ರಮವೊಂದರಿಂದ ಹಿಂದಿರುಗುವಾಗ ವಿಮಾನದಲ್ಲಿ ಕಪಿಲ್ ತನ್ನ ಸಹ ಕಲಾವಿದ ಸುನಿಲ್ ಗ್ರೋವರ್ ಮೇಲೆ ಹಲ್ಲೆ ನಡೆಸಿದ್ದರು. ಹೀಗಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿ ಸುನಿಲ್ ಶೋದಿಂದ ಹೊರ ಬಂದರು. ಹೊರ ಬಂದು ತಮ್ಮದೇ ಸಾರಥ್ಯದಲ್ಲಿ ಬೇರೆ ಬೇರೆ ಶೋಗಳನ್ನು ನಡೆಸುತ್ತಿದ್ದಾರೆ.

    ಸುನಿಲ್ ಗ್ರೋವರ್ ಕಪಿಲ್ ಶೋನಿಂದ ಹೊರ ಬಂದ ನಂತರ ಕಪಿಲ್ ತಾವು ಲವ್‍ಲ್ಲಿ ಬಿದ್ದಿರೋದಾಗಿ ಹೇಳಿ ತಮ್ಮ ಗೆಳತಿ ಗಿನ್ನಿ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಈ ವೇಳೆ ನಾವು ನಮ್ಮ ಮದುವೆಯ ತಯಾರಿಯಲ್ಲಿ ತೊಡಗಿದ್ದೇವೆ ಎಂದು ಕೆಲ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

  • ಕೊನೆಗೂ ಎಲ್ಲಾ ಗಾಸಿಪ್ ಗಳಿಗೆ ಉತ್ತರ ಕೊಟ್ಟ ಕಪಿಲ್ ಶರ್ಮಾ

    ಕೊನೆಗೂ ಎಲ್ಲಾ ಗಾಸಿಪ್ ಗಳಿಗೆ ಉತ್ತರ ಕೊಟ್ಟ ಕಪಿಲ್ ಶರ್ಮಾ

    ಮುಂಬೈ: ಹಾಸ್ಯ ನಟ ಕಪಿಲ್ ಶರ್ಮಾ ಕೊನೆಗೂ ಮೌನ ಮುರಿದಿದ್ದು ನಾನು ಹೆಚ್ಚಾಗಿ ಮದ್ಯಪಾನ ಮಾಡುತ್ತಿದ್ದೇನೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

    ನನಗೆ ಸಾಕಷ್ಟು ನೋವಾಗಿದೆ. ನಾನು ಹೆಚ್ಚಾಗಿ ಕುಡಿಯುತ್ತಿದ್ದೇನೆ. ಇದು ಅವಶ್ಯಕವಲ್ಲ ಆದರೂ ನನಗೆ ಬಹಳ ನೋವುಂಟಾಗಿದೆ. ಸುನೀಲ್ ಗ್ರೋವರ್, ಚಂದನ್, ಅಲಿ ಅಸ್ಗರ್ ನನ್ನ ಒಳ್ಳೆಯ ಸ್ನೇಹಿತರು. ಇದು ಹೇಗೆ ಆಯ್ತು ಅಂತ ನನಗೆ ಗೊತ್ತಿಲ್ಲ ಎಂದು ಕಪಿಲ್ ಪ್ರತಿಕ್ರಿಸಿದ್ದಾರೆ.

    ನಾನು ಈಗ ಬೆಂಗಳೂರಿನಲ್ಲಿ ಇದ್ದೇನೆ ಹಾಗೂ ಆರ್ಯುವೇದ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ನನ್ನ ಆರೋಗ್ಯದ ಕಡೆ ಗಮನ ಕೊಡಬೇಕು. ಸೆಪ್ಟೆಂಬರ್ ಕೊನೆಯಲ್ಲಿ ನಾನು ಮುಂಬೈಗೆ ಹಿಂತಿರುಗುತ್ತಿದ್ದೇನೆ. ಇತ್ತೀಚಿಗೆ ನನ್ನ ಬಗ್ಗೆ ಬಂದ ಎಲ್ಲಾ ಸುದ್ದಿಗಳು ಸುಳ್ಳು. 10 ವರ್ಷದಿಂದ ಬ್ರೇಕ್ ಇಲ್ಲದೆ ದುಡಿಯುತ್ತಿದ್ದೇನೆ. ಬಿಪಿ ಮತ್ತು ಸಕ್ಕರೆ ಕಾಯಿಲೆ ಕಡೆ ನಾನು ಗಮನ ಕೊಡುತ್ತಿದ್ದೇನೆ ಎಂದು ಕಪಿಲ್ ತಿಳಿಸಿದ್ದಾರೆ.

    ಕಪಿಲ್ ಶರ್ಮಾ ಶೋ ತಂಡವು ಈ ಕಾರ್ಯಕ್ರಮವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಸುನೀಲ್ ಗ್ರೋವರ್ ಶೋನ ಮಧ್ಯದಲ್ಲೇ ಬಿಟ್ಟು ಹೋದ ಕಾರಣ ಕಪಿಲ್ ಸಾಕಷ್ಟು ಬೇಸರಗೊಂಡು ಕುಡಿಯಲು ಶುರು ಮಾಡಿದ್ದಾರೆ ಎನ್ನುವ ಸುದ್ದಿಗಳು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು.

    ಕಪಿಲ್ ಈಗ ರಾಜೀವ್ ದಿಂಗ್ರ ನಿರ್ದೇಶಿಸುತ್ತಿರುವ ಫಿರಂಗಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • ಕಪಿಲ್ ಶರ್ಮಾ ಶೋದಿಂದ ಹೊರ ಬಂದ ಅಜಯ್ ಹೇಳಿದ್ದೇನು?

    ಕಪಿಲ್ ಶರ್ಮಾ ಶೋದಿಂದ ಹೊರ ಬಂದ ಅಜಯ್ ಹೇಳಿದ್ದೇನು?

    ಮುಂಬೈ: ಇತ್ತೀಚಿಗೆ ಅಜಯ್ ದೇವ್‍ಗನ್ ತಮ್ಮ ಬಾದ್‍ಶಾವೋ ಚಿತ್ರದ ಪ್ರಮೋಷನ್‍ಗಾಗಿ ಕಪಿಲ್ ಶರ್ಮಾ ಶೋಗೆ ತೆರಳಿದ್ದರು. ಕಪಿಲ್ ಅನಾರೋಗ್ಯದ ಕಾರಣದಿಂದಾಗಿ ಶೂಟಿಂಗ್‍ನನ್ನು ರದ್ದುಗೊಳಿಸಿದ್ದರಿಂದ ಅಜಯ್ ದೇವ್‍ಗನ್ ಕೋಪಗೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಈ ಸುದ್ದಿಗೆ ನಟ ಅಜಯ್ ದೇವ್‍ಗನ್ ಪ್ರತಿಕ್ರಿಯಿಸಿದ್ದಾರೆ.

    ಅಜಯ್ ದೇವ್‍ಗನ್ ತಮ್ಮ ಮುಂಬರುವ ‘ಬಾದ್‍ಶಾವೋ’ ಚಿತ್ರದ ಪ್ರಮೋಷನ್‍ಗಾಗಿ ಕಪಿಲ್ ಶರ್ಮಾ ಶೋಗೆ ಹೋಗಿದ್ದರು. ಕೊನೆಯ ನಿಮಿಷದಲ್ಲಿ ಕಪಿಲ್ ಶೋವನ್ನು ರದ್ದುಗೊಳಿಸಿದ ಕಾರಣ ಅಜಯ್ ಕೋಪದಿಂದ ಕಪಿಲ್ ಶರ್ಮಾ ಶೋನಿಂದ ಹೊರಟು ಹೋದರು ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

     

    ಅಲ್ಲಿ ಏನಾಯಿತು ಎಂದು ನನಗೆ ಸರಿಯಾಗಿ ಗೊತ್ತಿಲ್ಲ. ಆದರೆ ಪತ್ರಿಕೆಗಳಲ್ಲಿ ನಾವು ಕೋಪದಿಂದ ಹೊರಟು ಹೋದೆವು ಎಂದು ಹೇಳಲಾಗಿತ್ತು. ಇದು ನಿಜವಲ್ಲ ಕಪಿಲ್ ಶೋನ ಸೆಟ್‍ಗೆ ಇನ್ನೂ ಬಂದಿಲ್ಲದ ಕಾರಣ ನಾವು ಹೊರ ಬಂದಿದ್ದೇವೆ. ಕಪಿಲ್ ನನಗೆ ಒಳ್ಳೆಯ ಸ್ನೇಹಿತ. ಮುಂದಿನ ಬಾರಿ ಕಪಿಲ್‍ನನ್ನು ಭೇಟಿಯಾದಾಗ ಏನಾಯಿತು ಎಂದು ಕೇಳುತ್ತೇನೆ. ಕಪಿಲ್ ಯಾವುದೋ ತೊಂದರೆಯಲ್ಲಿ ಇದ್ದಾರೆ ಎಂದು ಅಜಯ್ ಸ್ಪಷ್ಟಪಡಿಸಿದ್ದಾರೆ.

    ಈ ಮೊದಲು ಶಾರೂಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಜಬ್ ಹ್ಯಾರಿ ಮೇಟ್ ಸೆಜಲ್ ಚಿತ್ರದ ಪ್ರಮೋಷನ್‍ಗಾಗಿ ಕಪಿಲ್ ಶರ್ಮಾ ಶೋಗೆ ತೆರಳಿದ್ದ ವೇಳೆಯೂ ಇದೇ ರೀತಿಯಾಗಿ ಶೋ ರದ್ದಾಗಿತ್ತು. ಆದರೆ ಈ ಬಗ್ಗೆ ಶಾರೂಖ್ ಖಾನ್ ಇದೂವರೆಗೂ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದರೆ ಕಪಿಲ್ ಮಾತ್ರ ತಮ್ಮ ಟ್ವಿಟರ್ ನಲ್ಲಿ ಅನಾರೋಗ್ಯದ ಕಾರಣ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಯಿತು ಎಂದು ತಿಳಿಸಿದ್ದರು.

    ಇದನ್ನೂ ಓದಿ: ಕಪಿಲ್ ಶರ್ಮಾ ಶೋನಿಂದ ಕೋಪಗೊಂಡು ಹೊರಬಂದ ಅಜಯ್ ದೇವ್‍ಗನ್