Tag: ಕಪಿಲ್ ಶರ್ಮಾ

  • ಶ್ರದ್ಧಾ ಕಪೂರ್, ಕಪಿಲ್ ಶರ್ಮಾಗೆ ಇಡಿ ಸಮನ್ಸ್: ಹವಾಲ ಹಣ ಪಡೆದ ಪ್ರಕರಣ

    ಶ್ರದ್ಧಾ ಕಪೂರ್, ಕಪಿಲ್ ಶರ್ಮಾಗೆ ಇಡಿ ಸಮನ್ಸ್: ಹವಾಲ ಹಣ ಪಡೆದ ಪ್ರಕರಣ

    ಬಾಲಿವುಡ್ ನ ಖ್ಯಾತ ನಟ, ಹಾಸ್ಯ ನಿರೂಪಕ ಕಪಿಲ್ ಶರ್ಮಾ (Kapil Sharma) ಅವರಿಗೂ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ. ಮಹದೇವ್ ಆನ್ ಲೈನ್ ಬೆಟ್ಟಿಂಗ್ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ (Notice) ಜಾರಿ ಮಾಡಿದ್ದು, ಇಂದು ಜಾರಿ ನಿರ್ದೇಶನಾಲಯದ ಎದುರು ಕಪಿಲ್ ಹಾಜರಾಗುವ ಸಾಧ್ಯತೆ ಇದೆ.

    ಕೇವಲ ಕಪಿಲ್ ಶರ್ಮಾಗೆ ಮಾತ್ರವಲ್ಲ, ರಣಬೀರ್ ಕಪೂರ್, ಶ್ರದ್ಧಾ ಕಪೂರ್ (Shraddha Kapoor), ಹುಮಾ ಖುರೇಷಿ ಹಾಗೂ ಹೀನಾ ಖಾನ್ ಸೇರಿದಂತೆ ಹಲವರಿಗೆ ಇಡಿ ನೋಟಿಸ್ ನೀಡಿದೆ. ಈ ಪ್ರಕರಣದಲ್ಲಿ ಒಟ್ಟು 17 ಬಾಲಿವುಡ್ ಸಿಲಿಬ್ರಿಟಿಗಳಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹಂತ ಹಂತವಾಗಿ ಇವರನ್ನು ವಿಚಾರಣೆಗೆ ಕರೆಯಲಾಗುತ್ತಿದೆ.

     

    ಏನಿದು ಪ್ರಕರಣ?

    ಮಹದೇವ್ ಬೆಟ್ಟಿಂಗ್ (Mahadev Betting) ಆಪ್‍ನ ಮುಖ್ಯಸ್ಥನ ಸೌರಭ್ ಚಂದ್ರಕರ್ ಅವರ ಮದುವೆ ಅದ್ಧೂರಿಯಾಗಿ ದುಬೈನಲ್ಲಿ ನಡೆದಿತ್ತು. ಮುಂಬೈ ಮೂಲದ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ಮದುವೆಯ ಉಸ್ತುವಾರಿ ನೀಡಿತ್ತು. ಈ ಇವೆಂಟ್ ಮ್ಯಾನೇಜ್ ಮೆಂಟ್ ಹಲವಾರು ಸಿಲಿಬ್ರಿಟಿಗಳನ್ನು ಮದುವೆಗೆ ಆಹ್ವಾನ ನೀಡಿತ್ತು. ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ಸೌರಭ್ 140 ಕೋಟಿ ರೂಪಾಯಿ ಹವಾಲ ಹಣ ನೀಡಿದ್ದಾರೆ ಎಂದು ತಿಳಿದು ಬಂದಿದೆ.

     

    ಸಿಲಿಬ್ರಿಟಿಗಳಿಗೂ ಈ ಹಣ ಪಾವತಿ ಆಗಿರುವುದರಿಂದ ಹಣ ಪಡೆದವರಿಗೆ ನೋಟಿಸ್ ನೀಡಿ, ವಿಚಾರಣೆ ಮಾಡಲಾಗುತ್ತಿದೆ. ಒಟ್ಟು ಈ ಮದುವೆಗೆ 200 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಇಡಿ ತನಿಖೆಯಿಂದ ತಿಳಿದು ಬಂದಿದೆ. ಇದಷ್ಟೇ ಅಲ್ಲ, ಈ ಆಪ್ ಅನ್ನು ಪ್ರಮೋಟ್ ಮಾಡಿದ 100ಕ್ಕೂ ಹೆಚ್ಚು ಜನರಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಿನ ನಂದಿ ಬೆಟ್ಟದ ಸೌಂದರ್ಯ ಸವಿದ ಆ್ಯಂಕರ್ ಕಪಿಲ್ ಶರ್ಮಾ

    ಬೆಂಗಳೂರಿನ ನಂದಿ ಬೆಟ್ಟದ ಸೌಂದರ್ಯ ಸವಿದ ಆ್ಯಂಕರ್ ಕಪಿಲ್ ಶರ್ಮಾ

    ಸಿನಿಮಾ ಸೆಲೆಬ್ರಿಟಿಗಳು ಕೆಲಸಕ್ಕೆ ಬ್ರೇಕ್ ನೀಡಿ ವಿರಾಮಕ್ಕಾಗಿ ದೇಶ-ವಿದೇಶ ಸುತ್ತುವುದು ಕಾಮನ್. ಆದರೆ ಹಿಂದಿ ಕಿರುತೆರೆಯ ಸ್ಟಾರ್ ನಿರೂಪಕ ಕಪಿಲ್ ಶರ್ಮಾ (Kapil Sharma) ಇದೀಗ ಬೆಂಗಳೂರಿನಲ್ಲಿ (Bengaluru) ಬೀಡು ಬಿಟ್ಟಿದ್ದಾರೆ. ನಂದಿ ಬೆಟ್ಟದ ಸೌಂದರ್ಯ ಸವಿದಿದ್ದಾರೆ. ಕೆಲ ಕಾಲ ಸಮಯ ಕಳೆದಿದ್ದಾರೆ. ಈ ಕುರಿತ ವಿಡಿಯೋವನ್ನ ನಟ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಬೆಳಗಿನ ಜಾವ ನಂದಿ ಬೆಟ್ಟ ಹತ್ತುತ್ತಿರುವ ತುಣುಕನ್ನ ವಿಡಿಯೋದಲ್ಲಿ ನೋಡಬಹುದಾಗಿದೆ. ಮಾಸ್ಕ್ ಧರಿಸಿ ವಾಕ್ ಮಾಡುತ್ತಾ ನಂದಿ ಬೆಟ್ಟದ ಸೌಂದರ್ಯ ನೋಡುತ್ತಾ ಎಂಜಾಯ್ ಮಾಡಿದ್ದಾರೆ. ಕಪ್ಪು ಬಣ್ಣದ ಶರ್ಟ್ ಮತ್ತು ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ.

     

    View this post on Instagram

     

    A post shared by Kapil Sharma (@kapilsharma)

    ಮೂಲಗಳ ಪ್ರಕಾರ, ಇನ್ನೂ 15 ದಿನಗಳ ಕಾಲ ಕಪಿಲ್ ಬೆಂಗಳೂರಿನಲ್ಲಿಯೇ ವಾಸಿಸುತ್ತಾರೆ. ಹೊಸ ಹೊಸ ಸ್ಥಳಗಳಿಗೆ ನಟ ವಿಸಿಟ್ ಮಾಡುತ್ತಾರೆ. ಇದನ್ನೂ ಓದಿ:ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ರಿಲೀಸ್ ಡೇಟ್ ಫಿಕ್ಸ್

    ಹಿಂದಿ ಕಿರುತೆರೆಯಲ್ಲಿ ‘ಕಾಮಿಡಿ ನೈಟ್ಸ್ ವಿತ್ ಕಪಿಲ್ ಶರ್ಮಾ’ ಶೋ ಹೆಚ್ಚಿನ ಜನಪ್ರಿಯತೆಯಿದೆ. ಜೊತೆಗೆ ಅವರು ಸಿನಿಮಾಗಳಲ್ಲಿ ಕೂಡ ಆ್ಯಕ್ಟೀವ್ ಆಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಪಿಲ್ ಶರ್ಮಾ ಶೋನಲ್ಲಿ ಸುಮೋನಾ ಚಕ್ರವರ್ತಿಗೆ ಅವಮಾನ

    ಕಪಿಲ್ ಶರ್ಮಾ ಶೋನಲ್ಲಿ ಸುಮೋನಾ ಚಕ್ರವರ್ತಿಗೆ ಅವಮಾನ

    ಹಿಂದಿ ಕಿರುತೆರೆಯ ಜನಪ್ರಿಯ ಟಾಕ್ ಶೋ ಅಂದ್ರೆ ಅದು ಕಪಿಲ್ ಶರ್ಮಾ ನಿರೂಪಣೆಯ ‘ದಿ ಕಪಿಲ್ ಶರ್ಮಾ’ (The Kapil Sharma Show) ಕಾರ್ಯಕ್ರಮ. ಸಿನಿಮಾ ಪ್ರಚಾರದ ಜೊತೆ ನಗುವಿಗೆ ಲಗಾಮ್ ಇಲ್ಲದೆ ಖುಷಿಯಾಗಿ ಕಪಿಲ್ ನಿರೂಪಣೆ ಮಾಡುತ್ತಾರೆ. ಹೀಗಿರುವಾಗ ಸುಮೋನಾ ಚಕ್ರವರ್ತಿ(Sumona Chakravarthy) , ಕಪಿಲ್ ಶರ್ಮಾ ಅವರ ಪತ್ನಿ ಪಾತ್ರದಲ್ಲಿ ನಟಿಸುತ್ತಿದ್ದರು. ಆದರೆ ಅದೊಮ್ಮೆ ತಾವು ಕಪಿಲ್ ಅವರ ಹಾಸ್ಯಕ್ಕೆ ಗುರಿಯಾಗಿ ಅವಮಾನ ಎದುರಿಸಿರುವ ಕುರಿತು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

    ಕಿರುತೆರೆಯ ನಂಬರ್ ಒನ್ ಕಪಿಲ್ ಶೋನಲ್ಲಿ ನಡೆದ ಘಟನೆ, ಅವಮಾನ ಬಗ್ಗೆ ನಟಿ ಮಾತನಾಡಿದ್ದಾರೆ. ನನಗೆ ಮೊದಲು ನಟನೆ ಅಷ್ಟು ಸರಿಯಾಗಿ ಬರುತ್ತಿರಲಿಲ್ಲ. ನಾನು ಹೇಳಬೇಕಿರುವ ಡೈಲಾಗ್ ಆಕ್ಟ್ ಮಾಡುವಾಗ ಮರೆತಿದ್ದೆ. ಆಗ ಕಪಿಲ್ ಅವರು ನನ್ನ ಬಾಯಿ ಮತ್ತು ತುಟಿಗಳನ್ನು ಗೇಲಿ ಮಾಡಿದರು. ಆದರೆ ನಂತರದ ಸಂಚಿಕೆಗಳಲ್ಲಿ ನಾನು ಹಾಸ್ಯ (Joke)  ಮಾಡುವುದನ್ನು ಕಲಿತೆ. ಆದರೆ ಈ ಅವಮಾನ ಮತ್ತು ಕೆಟ್ಟ ಅನುಭವ ಮಾತ್ರ ಇದುವರೆಗೂ ನಾನು ಮರೆತಿಲ್ಲ ಎಂದು ನಟಿ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ:ಭೀಮನ ಅಮಾವ್ಯಾಸೆಗೆ ಪತಿಯ ಪಾದ ಪೂಜೆ ಮಾಡಿದ ಪ್ರಣಿತಾ

    ಯಾರಾದರೂ ನಿಮ್ಮನ್ನು ನೋಡಿ ನಗುತ್ತಿದ್ದರೆ, ಹೀಯಾಳಿಸಿದರೆ ಅದು ಅವಮಾನ ಆಗುತ್ತದೆ. ಕಪಿಲ್ ಶರ್ಮಾ (Kapil Sharma) ಅವರೊಂದಿಗೆ ತೆರೆಮರೆಯಲ್ಲಿ ತುಂಬಾ ತಮಾಷೆ ಮಾಡುತ್ತಾರೆ. ಆದರೆ ಅವರಿಗೆ ಎಲ್ಲವೂ ಹಾಸ್ಯವಾಗಿಯೇ ಕಾಣುವುದು ವಿಪರ್ಯಾಸ. ಏನೂ ಸಿಗದಾಗ ಅವರು ನನ್ನ ಶರೀರದ ಭಾಗವನ್ನು ಗೇಲಿ ಮಾಡಿದ್ದರು. ಕಪಿಲ್ ಕಾಮೆಂಟ್ ಬಗ್ಗೆ, ಎಲ್ಲರೂ ಆಡಿಕೊಳ್ಳುವಂತಾಗಿದೆ ಎಂದು ಸಂದರ್ಶನದಲ್ಲಿ ಕಪಿಲ್ ಸಹನಟಿ ಹೇಳಿದ್ದಾರೆ.

    ಈ ಘಟನೆಯ ಬಳಿಕ ನನಗೆ ತೀವ್ರ ಅವಮಾನವಾಗಿ ಕುಸಿದು ಹೋದೆ. ಘಟನೆಯ ಬಳಿಕ ನಮ್ಮ ಶೋನ, ಅರ್ಚನಾ ಪುರಣ್ ಸಿಂಗ್ ಅವರು ನನ್ನ ಬಳಿ ಬಂದು ಸಮಾಧಾನಿಸಿದರು. ಆದರೂ ಈ ಬಗ್ಗೆ ನನಗೆ ಬೇಸರವಿದೆ ಎಂದಿದ್ದಾರೆ. ಜೊತೆಗೆ ನಾನು ಮತ್ತು ಕಪಿಲ್ ಉತ್ತಮ ಸ್ನೇಹಿತರು ಎಂದು ಕೂಡ ನಟಿ ಸುಮೋನಾ ಮಾತನಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಪಿಲ್ ಶರ್ಮಾ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

    ಕಪಿಲ್ ಶರ್ಮಾ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

    ಹಿಂದಿಯ ಪ್ರತಿಷ್ಠಿತ ಟಾಕ್ ಶೋ ‘ಕಪಿಲ್ ಶರ್ಮಾ ಶೋ’ ನಲ್ಲಿ ಕನ್ನಡದ ಹೆಸರಾಂತ ನಟ ಗೋಲ್ಡನ್ ಸ್ಟಾರ್ ಗಣೇಶ್ ಭಾಗಿಯಾಗಿದ್ದಾರೆ. ಕಪಿಲ್ ಜೊತೆಗಿನ ಫೋಟೋವನ್ನು ಹಾಗೂ ಆ ಕಾರ್ಯಕ್ರಮಕ್ಕೆ ತಯಾರಿಯಾಗಿ ಕಾರು ಏರಿದ ವಿಡಿಯೋವನ್ನು ಗಣೇಶ್ ಹಂಚಿಕೊಂಡಿದ್ದಾರೆ. ಕಾಮಿಡಿ ಕಾರ್ಯಕ್ರಮದ ಮೂಲಕವೇ ಫೇಮಸ್ ಆಗಿರುವ ಗಣೇಶ್, ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು ಮನರಂಜನೆಗೆ ಯಾವುದೇ ಕೊರತೆ ಆಗದು ಎನ್ನುತ್ತಿದ್ದಾರೆ ಅಭಿಮಾನಿಗಳು.

    ಕಪಿಲ್ ಜೊತೆಗಿನ ಶೋನಲ್ಲಿ ಈಗಾಗಲೇ ಕನ್ನಡದ ಹೆಸರಾಂತ ನಟ ಸುದೀಪ್ ಎರಡು ಬಾರಿ ಕಾಣಿಸಿಕೊಂಡಿದ್ದರು. ಈ ಶೋನಲ್ಲಿ ಎರಡು ಬಾರಿ ಕಾಣಿಸಿಕೊಂಡ ಮೊದಲ ಕನ್ನಡದ ನಟ ಎನ್ನುವ ಹೆಗ್ಗಳಿಕೆ ಸುದೀಪ್ ಅವರಿಗಿದೆ. ಸಲ್ಮಾನ್ ಖಾನ್ ಜೊತೆ ಒಂದು ಬಾರಿ ಸುದೀಪ್ ಕಾಣಿಸಿಕೊಂಡಿದ್ದರೆ, ಮತ್ತೊಂದು ಬಾರಿ ಸುನೀಲ್ ಶೆಟ್ಟಿ ಜೊತೆಯೂ ಅವರು ಕಪಿಲ್ ಶೋನಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಸಾಂಗ್ ಹಾಡಲಿದ್ದಾರೆ ಎಂ.ಎಂ ಕ್ಷೀರವಾಣಿ

    ಇದೀಗ ಗಣೇಶ್ ಕೂಡ ಆ ಶೋನಲ್ಲಿ ಪಾಲ್ಗೊಂಡಿದ್ದು, ಹೆಚ್ಚಿನ ವಿವರಗಳನ್ನು ಸದ್ಯದಲ್ಲೇ ನೀಡುವುದಾಗಿ ಅವರು ತಿಳಿಸಿದ್ದಾರೆ. ಗಣೇಶ್ ನಟನೆಯ ‘ಬಾನದಾರಿಯಲ್ಲಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಪ್ರಮೋಷನ್ ನಲ್ಲಿ ಅವರು ಭಾಗಿಯಾಗಲಿದ್ದಾರಾ ಅಥವಾ ಬೇರೆ ಯಾವುದಾದರೂ ಕಾರ್ಯಕ್ರಮದ ಸಲುವಾಗಿ ಅವರು ಅತಿಥಿಯಾಗಿ ಹೋಗಿದ್ದಾರಾ ಎನ್ನುವುದು ಗೊತ್ತಾಗಿಲ್ಲ. ಈ ವಿಷಯವನ್ನು ಅವರೇ ಸದ್ಯದಲ್ಲೇ ತಿಳಿಸುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮನೆಯಲ್ಲಿದ್ರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ ಅನ್ನೋ ಭಯವಿದೆ: ಸೈಫ್ ಆಲಿ ಖಾನ್

    ಮನೆಯಲ್ಲಿದ್ರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ ಅನ್ನೋ ಭಯವಿದೆ: ಸೈಫ್ ಆಲಿ ಖಾನ್

    ಮುಂಬೈ: ಈಗಾಗಲೇ 4 ಮಕ್ಕಳ ತಂದೆಯಾಗಿರುವ ಬಾಲಿವುಡ್ ನಟ ಸೈಫ್ ಆಲಿ ಖಾನ್ ಅವರು ಹಾಸ್ಯಸ್ಪದ ಹೇಳಿಕೆಯೊಂದನ್ನು ನೀಡುವ ಮೂಲಕ ಇದೀಗ ಸುದ್ದಿಯಾಗಿದ್ದಾರೆ.

    ಹೌದು. ಮನೆಯಲ್ಲಿಯೇ ಇದ್ದರೆ ಇನ್ನಷ್ಟು ಮಕ್ಕಳನ್ನು ಹೊಂದುವ ಭಯವಿದೆ ಎಂದು ಹೇಳಿಕೆ ನೀಡಿದ್ದಾರೆ. ಸೈಫ್ ಅವರು ಈ ತಮಾಷೆಯ ಹೇಳಿಕೆಯನ್ನು ಕಪಿಲ್ ಶರ್ಮಾ ಶೋದಲ್ಲಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಕಪಿಲ್ ಶರ್ಮಾ ಅವರು, ಈಗಾಗಲೇ 4 ಮಕ್ಕಳನ್ನು ಹೊಂದಿರುವ ನೀವು ಇನ್ನೂ ಮಕ್ಕಳನ್ನು ಪಡೆಯುವ ಒತ್ತಡ ಏನಾದರೂ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸೈಫ್, ಮನೆಯಲ್ಲಿಯೇ ಇದ್ದರೆ ಇನ್ನೊಂದಿಷ್ಟು ಮಕ್ಕಳಾಗುತ್ತವೆ ಎಂಬ ಭಯವಿದೆ ಎಂದು ಹೇಳುತ್ತಾ ಜೋರಾಗಿ ನಕ್ಕು ಬಿಟ್ಟಿದ್ದಾರೆ.

    ಶೋಗೆ ರಾಣಿ ಮುಖರ್ಜಿ, ಸಿದ್ದಾರ್ಥ್ ಚತುರ್ವೇದಿ, ಶಾರ್ವರಿ ವಾಘ್ ಅತಿಥಿಯಾಗಿ ಆಗಮಿಸಿದ್ದು, ಎಲ್ಲರೂ ಕಪಿಲ್ ಶರ್ಮಾ ಜೊತೆ ಕಾಮಿಡಿ ಮಾಡುತ್ತಿದ್ದರು. ಈ ಮಧ್ಯೆ ಕಪಿಲ್ ಶರ್ಮಾ ಅವರು, ವೈಯಕ್ತಿಕ ಜೀವನ, ಸಿನಿಮಾ ಕೆಲಸಗಳ ಬಗ್ಗೆ ಚರ್ಚೆ ಮಾಡಿದ್ದಾರೆ. 2021ರಲ್ಲಿಯೇ 3 ಸಿನಿಮಾ ಪೂರ್ಣಗೊಳಿಸಿದ್ದೀರಿ, ನಿಮಗೆ ಕೆಲಸ ಮಾಡಲು ಇಷ್ಟವೇ? ಅಥವಾ ಮಕ್ಕಳ ಸಂಖ್ಯೆ ಜಾಸ್ತಿ ಮಾಡಬೇಕು ಎನ್ನುವ ಒತ್ತಡ ಇದೆಯೇ? ಎಂದು ಸೈಫ್ ಅಲಿ ಖಾನ್ ಅವರಿಗೆ ಪ್ರಶ್ನೆ ಹಾಕಿದ್ದಾರೆ. ಈ ವೇಳೆ ಸೈಫ್ ನೀಡಿದ ಉತ್ತರ ಕೇಳಿ ಎಲ್ಲರೂ ನಕ್ಕಿದ್ದಾರೆ. ಇದನ್ನೂ ಓದಿ: ಪುನೀತ್‍ಗೆ ಚಾಮರಾಜನಗರ ಜಿಲ್ಲೆಯ ಅಪೂರ್ವ ಗೌರವ – 46 ಸಾವಿರ ನೇತ್ರದಾನಕ್ಕೆ ಮಹಾಭಿಯಾನ

    ಸೈಫ್ ಅಲಿ ಖಾನ್ ಮೊದಲು ನಟಿ ಅಮೃತಾ ಸಿಂಗ್ ಜೊತೆ ಮದುವೆಯಾಗಿದ್ದರು. ಸೈಫ್-ಅಮೃತಾ ಜೋಡಿಗೆ ಇಬ್ರಾಹಿಂ ಅಲಿ ಖಾನ್, ಸಾರಾ ಅಲಿ ಖಾನ್ ಎಂಬ ಮಕ್ಕಳಿದ್ದಾರೆ. ಅಮೃತಾ ಸಿಂಗ್ ಜೊತೆಗಿನ ವಿಚ್ಛೇದನದ ನಂತರ 2012ರಲ್ಲಿ ಸೈಫ್ ಕರೀನಾ ಕಪೂರ್ ಅವರನ್ನು ವರಿಸಿದ್ದಾರೆ. ಇದೀಗ ಈ ದಂಪತಿಗೆ ತೈಮೂರ್ ಅಲಿ ಖಾನ್ ಹಾಗೂ ಜೆಹಾಂಗೀರ್ ಎಂಬ ಪುತ್ರರಿದ್ದಾರೆ.

  • ಕರ್ನಾಟಕಕ್ಕೆ ಆಕ್ಸಿಜನ್ ಸಂಚಾರಿ ಬಸ್ ನೀಡಿದ ಬಿಟೌನ್ ಸ್ಟಾರ್

    ಕರ್ನಾಟಕಕ್ಕೆ ಆಕ್ಸಿಜನ್ ಸಂಚಾರಿ ಬಸ್ ನೀಡಿದ ಬಿಟೌನ್ ಸ್ಟಾರ್

    ಮುಂಬೈ: ಕೊರೊನಾ ಸಂಕಷ್ಟದಲ್ಲಿ ಬಾಲಿವುಡ್ ತಾರೆಯರೂ ಸಹಾಯ ಹಸ್ತ ಚಾಚುತ್ತಿದ್ದು, ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಮುಂಚೂಣಿಯಲ್ಲಿ ಬರೋ ಹೆಸರು ಸೋನು ಸೂದ್. 2020ರಿಂದಲೂ ಕೊರೊನಾ ವಾರಿಯರ್ ಆಗಿ ಸೋನು ಸೋದ್ ಕೆಲಸ ಮಾಡ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಸೋನು ಸೂದ್ ಸಹಾಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯನ್ನ ತಲುಪಿತ್ತು. ಇದೀಗ ಮತ್ತಿಬ್ರು ಸ್ಟಾರ್ ಗ ಳು ಕರ್ನಾಟಕದ ನೆರವಿಗೆ ನಿಂತಿದ್ದಾರೆ.

    ಖ್ಯಾತ ನಟಿ ಭೂಮಿ ಪಡ್ನೇಕರ್ ಮತ್ತು ಹಾಸ್ಯ ನಟ ಕಪಿಲ್ ಶರ್ಮಾ ಕರ್ನಾಟಕಕ್ಕೆ ವೈದ್ಯಕೀಯ ಸಹಾಯ ನೀಡ್ತಿದ್ದಾರೆ. “ಮಿಷನ್ ಜಿಂದಗಿ-ಚೇಂಜ್ ವಿದಿನ್” ಅಭಿಯಾನದ ಮೂಲಕ ಇಬ್ಬರು ಜೊತೆಯಾಗಿ ಸಹಾಯಕ್ಕೆ ಮುಂದಾಗಿದ್ದಾರೆ.

    ಈಗಾಗಲೇ ಇಬ್ಬರು ಸ್ಟಾರ್ ಗಳು ನೀಡಿದ ಆಕ್ಸಿ ಬಸ್‍ಗಳು ಕರ್ನಾಟಕ ತಲುಪಿವೆ. ಹೊಸಕೋಟೆಯ ಕೋವಿಡ್ ಆಸ್ಪತ್ರೆ ಎದುರು ಆಕ್ಸಿಜನ್ ಸಂಚಾರಿ ಬಸ್ ಗಳು ಸೇವೆಗೆ ಸಜ್ಜಾಗಿ ನಿಂತಿವೆ. ಕೋವಿಡ್ ಆಸ್ಪತ್ರೆಗಳು ತುರ್ತು ಬಳಕೆಗೆ ಈ ಬಸ್‍ಗಳನ್ನ ಬಳಸಬಹುದಾಗಿದೆ.

    ಕೊರೊನಾ ಎರಡನೇ ಅಲೆ ಸಣ್ಣ ಸಣ್ಣ ಗ್ರಾಮಗಳನ್ನ ಪ್ರವೇಶಿಸಿದೆ. ನೆರವು ಕೇವಲ ನಗರಗಳಿಗೆ ಸೀಮಿತ ಆಗಬಾರದು. ಗ್ರಾಮೀಣ ಭಾರತದತ್ತ ನಮ್ಮ ಗಮನ ಕೇಂದ್ರಿಕರಿಸಿದ್ದೇವೆ. ಕರ್ನಾಟಕದ ಕೆಲ ಜಿಲ್ಲೆಗಳಿಂದಲೇ ನೆರವು ಅಭಿಯಾನ ಆರಂಭವಾಗಲಿದೆ ಎಂದು ಭೂಮಿ ಪಡ್ನೇಕರ್ ಹೇಳಿದ್ದಾರೆ.

    ಆಸ್ಪತ್ರೆಗಳ ಮುಂದೆ ಆಕ್ಸಿಜನ್ ಸಾಂದ್ರಕ ಅಳವಡಿಸಿರೋ ಬಸ್ ನಿಲ್ಲಿಸಲಾಗಿದೆ. ರೋಗಿಗಳು ಆಸ್ಪತ್ರೆ ಎದುರು ಬೆಡ್‍ಗಾಗಿ ಕಾಯುವಾಗ ಈ ಬಸ್ ನಲ್ಲಿ ಆಕ್ಸಿಜನ್ ಒದಗಿಸಲಾಗುತ್ತೆ. ಹಾಗಾಗಿ ಕೋವಿಡ್ ಆಸ್ಪತ್ರೆ ಮುಂದೆ ತುರ್ತು ಬಳಕೆಗೆ ಬಸ್‍ಗಳನ್ನ ಮೀಸಲಿರಿಸಲಾಗಿದೆ. ಇಷ್ಟು ಮಾತ್ರ ಅಲ್ಲದೇ ಭೂಮಿ ಪಡ್ನೇಕರ್ ತಮ್ಮದೇ ತಂಡದ ಜೊತೆ ಕೊರೊನಾ ಸಂಕಷ್ಟದಲ್ಲಿ ಸಿಲುಕಿರೋರ ನೆರವಿಗೂ ನಿಂತಿದ್ದಾರೆ.

  • ರಶ್ಮಿಕಾ ನೋಡುವ ಆಸೆ ಹೊರ ಹಾಕಿದ ಕಪಿಲ್

    ರಶ್ಮಿಕಾ ನೋಡುವ ಆಸೆ ಹೊರ ಹಾಕಿದ ಕಪಿಲ್

    ಮುಂಬೈ: ನ್ಯಾಷನಲ್ ಕ್ರಶ್ ಆಗಿರೋ ಕೂರ್ಗದ ಚೆಲುವೆ ರಶ್ಮಿಕಾ ಮಂದಣ್ಣರನ್ನ ನೋಡುವ ಆಸೆಯನ್ನ ಬಾಲಿವುಡ್ ನಟ, ಕಾಮಿಡಿಯನ್ ಕಪಿಲ್ ಶರ್ಮಾ ಹೊರ ಹಾಕಿದ್ದಾರೆ.

    ದಕ್ಷಿಣ ಭಾರತದ ಬೇಡಿಕೆಯ ನಟಿಯಲ್ಲಿ ಒಬ್ಬರಾಗಿರೋ ರಶ್ಮಿಕಾ ಮಂದಣ್ಣ ಸಾಲು ಸಾಲು ಸೂಪರ್ ಹಿಟ್ ಸಿನಿಮಾ ನೀಡಿ ತಮ್ಮ ಪ್ರತಿಭೆಯನ್ನ ಸಾಬೀತು ಮಾಡಿದ್ದಾರೆ. ಟಾಲಿವುಡ್ ಬಳಿಕ ಬಿಟೌನ್ ನಲ್ಲಿಯೂ ರಶ್ಮಿಕಾ ಸದ್ದು ಮಾಡುತ್ತಿದ್ದಾರೆ. ಮಿಶನ್ ಮಜ್ನು ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿರೋ ರಶ್ಮಿಕಾ ಮಂದಣ್ಣ ಸಿನಿಲೋಕದ ಭರವಸೆಯ ನಟಿಯಾಗಿದ್ದಾರೆ. ಸಿನಿಮಾಗೂ ಮುನ್ನ ಗಾಯಕ ಬಾದ್‍ಶಾ ಅಲ್ಬಂನಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಪಿಲ್ ಶರ್ಮಾ ಶೋಗೆ ಗಾಯಕ ಬಾದ್ ಶಾ ಮತ್ತು ಸುಖ್‍ಬೀರ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಟಾಪ್ ಟಕ್ಕರ್ ಹೆಸರಿನ ಅಲ್ಬಂನಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿರೋವ ವಿಷಯವನ್ನ ಹಂಚಿಕೊಂಡರು. ರಶ್ಮಿಕಾ ಸಹ ದಕ್ಷಿಣ ಭಾರತದ ಬಹುಬೇಡಿಕೆ ಮತ್ತು ಗೂಗಲ್ ಸಹ ಅವರನ್ನ ನ್ಯಾಶನಲ್ ಕ್ರಶ್ ಅಂತ ಗುರುತಿಸಿದೆ ಎಂದು ತಿಳಿಸಿದರು. ಈ ವಿಷಯ ಕೇಳುತ್ತಲೇ ಅರೇ, ನಮಗೆ ಇದುವರೆಗೂ ಸಿಕ್ಕೇ ಇಲ್ಲವಲ್ಲ ಅಂತಾ ಭೇಟಿಯಾಗುವ ಆಸೆಯನ್ನ ಹೊರ ಹಾಕಿದರು.

  • ಕಪಿಲ್ ಶೋನಿಂದ ಹೊರ ಹೋಗ್ತಾರಾ ಭಾರತಿ? – ಎರಡನೇ ಅವಕಾಶ ನೀಡಿ ಎಂದ ಕೃಷ್ಣ

    ಕಪಿಲ್ ಶೋನಿಂದ ಹೊರ ಹೋಗ್ತಾರಾ ಭಾರತಿ? – ಎರಡನೇ ಅವಕಾಶ ನೀಡಿ ಎಂದ ಕೃಷ್ಣ

    ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಜಾಮೀನಿನ ಮೇಲೆ ಹೊರ ಬಂದಿರುವ ಹಾಸ್ಯ ನಟಿ ಭಾರತಿ ಸಿಂಗ್ ಗೆ ವಾಹಿನಿ ಎರಡನೇ ಅವಕಾಶ ನೀಡಬೇಕೆಂದು ನಟ ಕೃಷ್ಣ ಅಭಿಷೇಕ್ ಒತ್ತಾಯಿಸಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಪಿಲ್ ಶರ್ಮಾ ಶೋನಿಂದ ಹಾಸ್ಯ ಕಲಾವಿದೆ ಭಾರತಿ ಸಿಂಗ್ ಅವರನ್ನ ಕೈ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ವಾಹಿನಿ ಅಧಿಕೃತ ಹೇಳಿಕೆ ನೀಡಿಲ್ಲ.

    ಕಪಿಲ್ ಮತ್ತು ನಾನು ಸದಾ ಭಾರತಿ ಜೊತೆಯಲ್ಲಿ ನಿಲ್ಲುತ್ತೇವೆ. ಯಾರು ಬೇಕಾದ್ರೂ ಏನಾದ್ರೂ ತಿಳಿದುಕೊಳ್ಳಲಿ. ಒಂದು ವೇಳೆ ಭಾರತಿ ಸಿಂಗ್ ಶೋನಿಂದ ಕೈಬಿಡುವ ವಿಚಾರ ಬಂದ್ರೆ ನಾನು ಮತ್ತು ಕಪಿಲ್ ಆಕೆಗೆ ಬೆಂಬಲ ನೀಡುತ್ತೇನೆ. ಆದ್ರೆ ವಾಹಿನಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲ್ಲ ಎಂಬ ವಿಶ್ವಾಸ ನನಗಿದೆ ಎಂದು ಕೃಷ್ಣ ಹೇಳಿದ್ದಾರೆ.

    ನವೆಂಬರ್ 21ರಂದು ಬೆಳಗ್ಗೆ ಭಾರತಿ ಸಿಂಗ್ ನಿವಾಸ ಮತ್ತು ಪ್ರೊಡೆಕ್ಷನ್ ಕಚೇರಿಯ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಎರಡೂ ಸ್ಥಳಗಳಿಂದ 86.5 ಗ್ರಾಂ ಗಾಂಜಾ ಲಭ್ಯವಾಗಿತ್ತು. ಈ ಹಿನ್ನೆಲೆ ವಿಚಾರಣೆಗಾಗಿ ದಂಪತಿಯನ್ನ ಎನ್‍ಸಿಬಿ ಕಚೇರಿಗೆ ಕರೆತರಲಾಗಿತ್ತು. 15 ಗಂಟೆ ವಿಚಾರಣೆ ನಡೆಸಿದ ಬಳಿಕ ರಾತ್ರಿ ಇಬ್ಬರನ್ನು ಬಂಧನಕ್ಕೊಳಪಡಿಸಲಾಗಿತ್ತು. ನವೆಂಬರ್ 23ರಂದು ಬಂಧಿತರಾಗಿದ್ದ ಭಾರತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿತ್ತು.

    ಇದಕ್ಕೂ ಮೊದಲು ಮುಂಬೈನ ಖಾರದಂಡಾ ಇಲಾಖೆಯ 21 ವರ್ಷದ ಯುವಕನ ನಿವಾಸದ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಲಾಗಿತ್ತು. ಯುವಕನಿಂದ 40 ಗ್ರಾಂ ಗಾಂಜಾ ಮತ್ತು ಇನ್ನಿತರ ನಶೆ ಪದಾರ್ಥಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇದೇ ಯುವಕ ವಿಚಾರಣೆ ವೇಳೆ ಭಾರತಿ ಸಿಂಗ್ ಹೆಸರು ಹೇಳಿದ್ದ. ಯುವಕನ ಹೇಳಿಕೆಯನ್ನಾಧರಿಸಿ ಅಧಿಕಾರಿಗಳು ಭಾರತಿ ನಿಒವಾಸದ ಮೇಲೆ ದಾಳಿ ನಡೆಸಿದ್ದರು ಎಂದು ವರದಿಯಾಗಿದೆ.

  • ಕಪಿಲ್ ಶರ್ಮಾ ಶೋಗೆ ನವಜೋತ್ ಸಿಂಗ್ ಸಿಧು ರೀ ಎಂಟ್ರಿ

    ಕಪಿಲ್ ಶರ್ಮಾ ಶೋಗೆ ನವಜೋತ್ ಸಿಂಗ್ ಸಿಧು ರೀ ಎಂಟ್ರಿ

    ಮುಂಬೈ: ಖಾಸಗಿ ವಾಹಿನಿಯ ‘ದಿ ಕಪಿಲ್ ಶರ್ಮಾ ಶೋ’ಗೆ ಮಾಜಿ ಕ್ರಿಕೆಟಿಗ, ರಾಜಕೀಯ ನಾಯಕ ನವಜೋತ್ ಸಿಂಗ್ ಸಿಧು ರೀ ಎಂಟ್ರಿ ಕೊಟ್ಟಿದ್ದಾರೆ. ಖಾಸಗಿ ವಾಹಿನಿ ಕಾರ್ಯಕ್ರಮದ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಆರಂಭಗೊಂಡಿವೆ.

    ಈ ವಾರದ ಶೋನಲ್ಲಿ ಕಪಿಲ್ ಶರ್ಮಾ, ಎಂದಿನಂತೆ ಶಮ್‍ಶೇರ್ ಸಿಂಗ್ ಪೊಲೀಸ್ ಪಾತ್ರದಲ್ಲಿ ಆಗಮಿಸಿ, ಪ್ರೇಕ್ಷಕ ವರ್ಗವನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದರು. ಪ್ರತಿ ವಾರ ಅರ್ಚನಾ ಅವರು ಕುಳಿತುಕೊಳ್ಳುತ್ತಿದ್ದ ಆಸನದಲ್ಲಿ ನವಜೋತ್ ಸಿಂಗ್ ಸಿಧು ಕಂಡು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಅರ್ಚನಾ ಅವರಿಗಿಂತಲೂ ನವಜೋತ್ ಸಿಂಗ್ ಸಿಧು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ರಾಜಕೀಯದಲ್ಲಿ ಸಕ್ರಿಯವಾಗಿದ್ದರಿಂದ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಇದರ ಜೊತೆ ವಿವಾದಾತ್ಮಕ ಹೇಳಿಕೆಯಿಂದ ಸಿಧು ಅವರನ್ನು ಶೋನಿಂದ ಕೈ ಬಿಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಈ ಹಿನ್ನೆಲೆ ಕಾರ್ಯಕ್ರಮದ ಆಯೋಜಕರು ಸಿಧು ಅವರ ಬದಲಾಗಿ ಅರ್ಚನಾರನ್ನು ಕರೆ ತಂದಿದ್ದರು.

    ಮುಂದಿನ ದಿನಗಳಲ್ಲಿ ಸಿಧು ಅವರೇ ಮುಂದುವರಿಯುತ್ತಾರಾ ಎಂಬುದರ ವಾಹಿನಿ ಯಾವುದೇ ಮಾಹಿತಿ ನೀಡಿಲ್ಲ. ಬಹುದಿನಗಳ ಬಳಿಕ ಕಪಿಲ್ ಶೋನಲ್ಲಿ ಸಿಧು ಕಂಡು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

    https://www.instagram.com/p/B9rjqMxnBZV/

  • ಕಪಿಲ್ ಶರ್ಮಾ ಶೋಗೆ ಸಿಧು ರೀ ಎಂಟ್ರಿ!

    ಕಪಿಲ್ ಶರ್ಮಾ ಶೋಗೆ ಸಿಧು ರೀ ಎಂಟ್ರಿ!

    ಮುಂಬೈ: ಖಾಸಗಿ ವಾಹಿನಿ ಖ್ಯಾತ ಕಾಮಿಡಿ ಶೋನಿಂದ ಹೊರ ಉಳಿದಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಕಮ್ ಬ್ಯಾಕ್ ಮಾಡಲಿದ್ದಾರೆ ಎಂದು ಕಾರ್ಯಕ್ರಮದ ನಿರೂಪಕ ಕಪಿಲ್ ಶರ್ಮಾ ಸುಳಿವು ನೀಡಿದ್ದಾರೆ.

    ಸುನಿಲ್ ಗ್ರೋವರ್ ಶೋನಿಂದ ಹೊರ ನಡೆದ ಬಳಿಕ ಕಾಮಿಡಿ ಶೋನಿಂದ ಬಹುತೇಕ ಕಲಾವಿದರು ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿದ್ದರು. ಆದರೂ ಕಪಿಲ್ ಶರ್ಮಾ ತಮ್ಮ ಶೋ ನಡೆಸಿದ್ದರು. ನಾಲ್ಕೈದು ಸಂಚಿಕೆಗಳ ಬಳಿಕ ಕಲಾವಿದರ ಕೊರತೆಯಿಂದಾಗಿ ಶೋ ನಿಂತಿತ್ತು. ಕಪಿಲ್ ಶರ್ಮಾ ಮದುವೆ ಬಳಿಕ ಹೊಸ ಕಲಾವಿದರೊಂದಿಗೆ ಮತ್ತೊಮ್ಮೆ ಕಾಮಿಡಿ ಶೋ ಆರಂಭಿಸಿದ್ದರು. ನವಜೋತ್ ಸಿಂಗ್ ಸಿಧು ಸಹ ಕಾರ್ಯಕ್ರಮದ ಮುಖ್ಯ ಭಾಗವಾಗಿದ್ದರು. ಪುಲ್ವಾಮಾ ದಾಳಿ ಬಳಿಕ ನವಜೋತ್ ಸಿಂಗ್ ಸಿಧು ಹೇಳಿಕೆಗೆ ದೇಶದೆಲ್ಲಡೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದಿಂದ ಸಿಧು ಅವರನ್ನು ಕೈ ಬಿಡಲಾಗಿತ್ತು.

    ನವಜೋತ್ ಸಿಂಗ್ ಸಿಧು ಕಾರ್ಯಕ್ರಮದಿಂದ ಹೊರ ಬಂದ ಬಳಿಕ ಶೋ ಟಿಆರ್ ಪಿ ಕಳೆದುಕೊಳ್ಳುತ್ತಿದೆ ಎನ್ನಲಾಗುತ್ತಿದೆ. ಟಾಪ್ 5ರಲ್ಲಿ ಸ್ಥಾನ ಪಡೆಯುತ್ತಿದ್ದ ಕಪಿಲ್ ಶೋ ಕೆಲ ವಾರ ಟಿಆರ್‍ಪಿ ಕಳೆದುಕೊಂಡಿದೆ. ಸಿಧು ಬದಲಾಗಿ ಅರ್ಚನಾ ಪೂರ್ಣ ಸಿಂಗ್ ಕಾರ್ಯಕ್ರಮದಲ್ಲಿದ್ದಾರೆ. ಸಿಧು ರೀ ಎಂಟ್ರಿ ಬಗ್ಗೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಕಪಿಲ್ ಶರ್ಮಾ ತಿಳಿಸಿದ್ದಾರೆ.

    ನವಜೋತ್ ಸಿಂಗ್ ಸಿಧು ಸದ್ಯ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಚುನಾವಣೆ ಮುಗಿಯವರೆಗೂ ಕಾರ್ಯಕ್ರಮಕ್ಕೆ ಬರುವ ಬಗ್ಗೆ ಮಾತನಾಡಿಲ್ಲ. ಚುನಾವಣೆಯ ಬಳಿಕ ನವಜೋತ್ ಸಿಂಗ್ ಸಿಧು ಕಾರ್ಯಕ್ರಮಕ್ಕೆ ಬರ ಮಾಡಿಕೊಳ್ಳುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಕಪಿಲ್ ಶರ್ಮಾ ಹೇಳಿದ್ದಾರೆ.