Tag: ಕಪಿಲ್ ಶರ್ಮಾ

  • ಕೆನಡಾದಲ್ಲಿ ನಟ ಕಪಿಲ್ ಶರ್ಮಾ ಕೆಫೆ ಮೇಲೆ 3ನೇ ಬಾರಿ ಗುಂಡಿನ ದಾಳಿ

    ಕೆನಡಾದಲ್ಲಿ ನಟ ಕಪಿಲ್ ಶರ್ಮಾ ಕೆಫೆ ಮೇಲೆ 3ನೇ ಬಾರಿ ಗುಂಡಿನ ದಾಳಿ

    ಒಟ್ಟಾವಾ: ಕೆನಡಾದಲ್ಲಿರುವ (Canada) ನಟ ಕಪಿಲ್ ಶರ್ಮಾ (Kapil Sharma) ಕೆಫೆ ಮೇಲೆ ಮೂರನೇ ಬಾರಿ ಗುಂಡಿನ ದಾಳಿ ನಡೆದಿದೆ.

    ಗುರುವಾರ (ಅ.16) ಕೆನಡಾದ ಸರ್ರೆಯಲ್ಲಿರುವ ಕೆಫೆ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ.ಇದನ್ನೂ ಓದಿ:ಬೆಂಗಳೂರಲ್ಲಿ ಬೀದಿ ನಾಯಿ ಮೇಲೆ ಗ್ಯಾಂಗ್‌ ರೇಪ್‌; ನಶೆಯಲ್ಲಿದ್ದ ಕಾಮುಕರಿಂದ ಪೈಶಾಚಿಕ ಕೃತ್ಯ

    ಸಾಮಾಜಿಕ ಜಾಲತಾಣದಲ್ಲಿ ಗುಂಡಿನ ದಾಳಿಯ ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯೋರ್ವ ಕಾರಿನ ಕಿಟಕಿಯಿಂದ ಕೈ ಹೊರಗೆ ಹಾಕಿ ಹ್ಯಾಂಡ್‌ಗನ್‌ನಿಂದ ಗುಂಡು ಹಾರಿಸಿರುವುದು ಕಂಡುಬಂದಿದೆ. ಹಾರಿಸಿದ ಗುಂಡುಗಳು ಕೆಫೆಯ ಕಿಟಿಕಿ ಹಾಗೂ ಗೋಡೆಗೆ ತಾಗಿದೆ. ಗುಂಡಿನ ದಾಳಿ ನಡೆದ ಸಮಯದಲ್ಲಿ ಕೆಫೆಯೊಳಗೆ ಸಿಬ್ಬಂದಿಯಿದ್ದರು ಎಂದು ತಿಳಿದುಬಂದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಸದ್ಯ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ (Lawrence Bishnoi Gang) ಸಹಚರರಾದ ಕುಲ್ವೀರ್ ಸಿಧು ಮತ್ತು ಗೋಲ್ಡಿ ಧಿಲ್ಲೋನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡು ದಾಳಿಯ ಹೊಣೆ ಹೊತ್ತಿದ್ದಾರೆ.

    ನಮಗೆ ಸಾರ್ವಜನಿಕರ ವಿರುದ್ಧ ಯಾವುದೇ ದ್ವೇಷವಿಲ್ಲ. ಆದರೆ ನಮಗೆ ಮೋಸ ಮಾಡುವವರಿಗೆ ನಾವು ಎಚ್ಚರಿಕೆ ನೀಡುತ್ತೇವೆ. ಗುಂಡು ಎಲ್ಲಿಂದಾದರೂ ಬರಬಹುದು ನಮ್ಮ ಧರ್ಮದ ವಿರುದ್ಧ ಮಾತನಾಡುವ ಬಾಲಿವುಡ್ ವ್ಯಕ್ತಿಗಳು ಕೂಡ ಸಿದ್ಧರಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

    ಇದಕ್ಕೂ ಮುನ್ನ ಎರಡು ಬಾರೀ ಕಪಿಲ್ ಶರ್ಮಾ ಕೆಫೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಜು.9ರಂದು ಮೊದಲ ಬಾರೀ ಗುಂಡಿನ ದಾಳಿ ನಡೆದಾಗ ಜರ್ಮನಿ ಮೂಲದ ಬಿಕೆಐ ಉಗ್ರಗಾಮಿ ಹರ್ಜಿತ್ ಸಿಂಗ್ ಹಾಗೂ ಆ.7ಎಂದು ಎರಡನೇ ಬಾರೀ ನಡೆದಾಗ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಹೊಣೆ ಹೊತ್ತುಕೊಂಡಿತ್ತು.ಇದನ್ನೂ ಓದಿ: ವೈದ್ಯೆ ಕೃತಿಕಾ ಹತ್ಯೆ ಕೇಸ್ – 11 ತಿಂಗಳಿಂದ ಪತ್ನಿ ಹತ್ಯೆಗೆ ಸ್ಕೆಚ್ ಹಾಕಿದ್ದ ಕಿಲ್ಲರ್ ಪತಿ

  • ಕಪಿಲ್ ಶರ್ಮಾಗೆ ಬೆದರಿಕೆಯೊಡ್ಡಿ 1 ಕೋಟಿ ಹಣಕ್ಕೆ ಬೇಡಿಕೆಯಿಟ್ಟದ್ದ ವ್ಯಕ್ತಿ ಬಂಧನ

    ಕಪಿಲ್ ಶರ್ಮಾಗೆ ಬೆದರಿಕೆಯೊಡ್ಡಿ 1 ಕೋಟಿ ಹಣಕ್ಕೆ ಬೇಡಿಕೆಯಿಟ್ಟದ್ದ ವ್ಯಕ್ತಿ ಬಂಧನ

    ಹಾಸ್ಯನಟ ಕಪಿಲ್ ಶರ್ಮಾಗೆ ಬೆದರಿಕೆಯೊಡ್ಡಿ 1 ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದ ವ್ಯಕ್ತಿಯನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಪಶ್ಚಿಮ ಬಂಗಾಳದ ನಿವಾಸಿ ದಿಲೀಪ್ ಚೌಧರಿ ಬಂಧಿತ ಆರೋಪಿ. ದರೋಡೆಕೋರ ರೋಹಿತ್ ಗೋದಾರ ಹಾಗೂ ಗೋಲ್ಡಿ ಬ್ರಾರ್ ಹೆಸರುಗಳನ್ನು ಬಳಸಿಕೊಂಡು ಕಪಿಲ್ ಶರ್ಮಾಗೆ 1 ಕೋಟಿ ರೂಪಾಯಿ ನೀಡುವಂತೆ ಬೆದರಿಸಿದ್ದ. ಕಪಿಲ್ ಶರ್ಮಾ ದೂರಿನನ್ವಯ ತನಿಖೆ ನಡೆಸಿದ್ದ ಮುಂಬೈ ಪೊಲೀಸರು ಆರೋಪಿಯನ್ನ ಪತ್ತೆಹಚ್ಚಿ ಬಂಧಿಸಿದ್ದಾರೆ.

    ಆರೋಪಿಯು ಸೆ.22 ಹಾಗೂ 23 ರಂದು ಕಪಿಲ್ ಶರ್ಮಾ ಆಪ್ತ ಸಹಾಯಕನಿಗೆ ಕರೆ ಮಾಡಿದ್ದ. ನಾನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಗೋದಾರ ಹಾಗೂ ಗೋಲ್ಡಿ ಬ್ರಾರ್‌ ಕಡೆಯವನು ಎಂದು ಹೇಳಿಕೊಂಡಿದ್ದ. 1 ಕೋಟಿ ಹಣ ಕೊಡುವಂತೆ ಬೆದರಿಕೆ ಹಾಕಿದ್ದ. ಜೊತೆಗೆ ಕಪಿಲ್ ಶರ್ಮಾ ಸಹಾಯಕನಿಗೆ ಬೆದರಿಕೆ ವೀಡಿಯೊ ಹಾಗೂ ಸಂದೇಶಗಳನ್ನು ಸಹ ಕಳುಹಿಸಿದ್ದ. ಈ ಪ್ರಕರಣ ಸಂಬಂಧ ಮುಂಬೈ ಅಪರಾಧ ವಿಭಾಗದ ತಂಡವು ಆರೋಪಿ ಇರುವ ಸ್ಥಳವನ್ನು ಪತ್ತೆಹಚ್ಚಿದ್ದರು. ಶುಕ್ರವಾರ ಪಶ್ಚಿಮ ಬಂಗಾಳದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಸೆ.30 ರ ವರೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

  • ಸಲ್ಮಾನ್ ಖಾನ್‌ನ್ನು ಆಹ್ವಾನಿಸಿದ್ದಕ್ಕೆ ಕಪಿಲ್ ಶರ್ಮಾ ಕೆಫೆ ಮೇಲೆ ಶೂಟೌಟ್ – ಬಿಷ್ಣೋಯ್ ಗ್ಯಾಂಗ್‌ನದ್ದೇ ಎನ್ನಲಾದ ಆಡಿಯೋ ವೈರಲ್

    ಸಲ್ಮಾನ್ ಖಾನ್‌ನ್ನು ಆಹ್ವಾನಿಸಿದ್ದಕ್ಕೆ ಕಪಿಲ್ ಶರ್ಮಾ ಕೆಫೆ ಮೇಲೆ ಶೂಟೌಟ್ – ಬಿಷ್ಣೋಯ್ ಗ್ಯಾಂಗ್‌ನದ್ದೇ ಎನ್ನಲಾದ ಆಡಿಯೋ ವೈರಲ್

    ಒಟ್ಟಾವಾ: ಹಾಸ್ಯ ನಟ ಕಪಿಲ್ ಶರ್ಮಾ (Kapil Sharma) ಅವರ ಕೆನಡಾದ (Canada) ಕೆಫೆ ಮೇಲೆ ಗುಂಡಿನ ದಾಳಿ ನಡೆದ ಬೆನ್ನಲ್ಲೇ ಆಡಿಯೋವೊಂದು ವೈರಲ್ ಆಗಿದೆ. ಬಿಷ್ಣೋಯ್ ಗ್ಯಾಂಗ್‌ನ (Bishnoi Gang) ಹ್ಯಾರಿ ಬಾಕ್ಸರ್ ಎಂಬಾತನ ಆಡಿಯೋ ಇದಾಗಿದ್ದು, ನಟ ಸಲ್ಮಾನ್ ಖಾನ್‌ನ್ನು (Salman Khan) ಕೆಫೆ ಉದ್ಘಾಟನೆಗೆ ಆಹ್ವಾನಿಸಿದಕ್ಕಾಗಿ ಶೂಟೌಟ್ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

    ವೈರಲ್ ಆದ ಆಡಿಯೋದಲ್ಲಿ, ಕಪಿಲ್ ಶರ್ಮಾ ತಮ್ಮ ಕೆಫೆ ಉದ್ಘಾಟನೆಗೆ ಸಲ್ಮಾನ್ ಖಾನ್ ಅವರನ್ನು ಆಹ್ವಾನಿಸಿದ್ದಕ್ಕಾಗಿ ಗುಂಡಿನ ದಾಳಿ ನಡೆಸಲಾಗಿದೆ. ಅದಲ್ಲದೇ ಸಲ್ಮಾನ್ ಖಾನ್ ಜೊತೆಗೆ ಕೆಲಸ ಮಾಡುವ ಯಾವುದೇ ನಿರ್ದೇಶಕ, ನಿರ್ಮಾಪಕ ಅಥವಾ ಕಲಾವಿದರ ಎದೆಗೆ ಗುಂಡು ಹಾರಿಸುತ್ತೇವೆ. ನಾವು ಯಾರನ್ನೂ ಬಿಡುವುದಿಲ್ಲ. ಸಲ್ಮಾನ್ ಖಾನ್ ಜೊತೆ ಇರುವವರನ್ನು ಕೊಲ್ಲಲು ನಾವು ಯಾವ ಹಂತಕ್ಕೆ ಬೇಕಾದರೂ ಹೋಗುತ್ತೇವೆ. ನೆನಪಿರಲಿ, ನಿಮ್ಮ ಸಾವಿಗೆ ನೀವೇ ಕಾರಣರಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ:ಚುನಾವಣಾ ಆಯೋಗ ಬಿಜೆಪಿಯ ಬ್ರ್ಯಾಂಚ್‌ ಆಫೀಸ್‌: ಸಿದ್ದರಾಮಯ್ಯ

    ಆ.7ರಂದು ಬೆಳಗಿನ ಜಾವ 4:30ರ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಬಂದು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ 9 ರಿಂದ 10 ಗುಂಡುಗಳು ಕೆಫೆಯ ಗೋಡೆಗೆ ಹಾಗೂ ಕಿಟಿಕಿಗಳಿಗೆ ತಾಗಿವೆ. ಗುಂಡಿನ ಸದ್ದು ಕೇಳಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಕಪಿಲ್ ಶರ್ಮಾ ಕೆಫೆಯ ನಡೆದ ಎರಡನೇ ದಾಳಿ ಇದಾಗಿದೆ. ಸದ್ಯ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಗೋಲ್ಡಿ ಧಿಲ್ಲೋನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಗುಂಡಿನ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ.

    ಜೂ.21ರಂದು ನೆಟ್‌ಫ್ಲಿಕ್ಸ್‌ನಲ್ಲಿ  ಪ್ರದರ್ಶನಗೊಂಡಿದ್ದ `ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನ ಸೀಸನ್-3ರ ಮೊದಲ ಎಪಿಸೋಡ್‌ನಲ್ಲಿ ಸಲ್ಮಾನ್ ಕಾಣಿಸಿಕೊಂಡಿದ್ದರು. ಕೆಫೆ ಉದ್ಘಾಟನೆಗಾಗಿ ಸಲ್ಮಾನ್ ಖಾನ್ ಅವರನ್ನು ಕಪಿಲ್ ಆಹ್ವಾನಿಸಿದ್ದರು. ಇದರ ಬೆನ್ನಲ್ಲೇ ಜು.10ರಂದು ಕೆಫೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಆ ಸಮಯದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ಜೀತ್ ಸಿಂಗ್ ಲಡ್ಡಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದ.ಇದನ್ನೂ ಓದಿ: ಒಂದು ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ 9 ಕೋಟಿ ಹಣ ಕಳೆದುಕೊಂಡ 80ರ ವೃದ್ಧ

  • ಕಪಿಲ್‌ ಶರ್ಮಾ ಕೆಫೆ ಮೇಲೆ ಖಲಿಸ್ತಾನಿ ಭಯೋತ್ಪಾದಕರಿಂದ ಗುಂಡಿನ ದಾಳಿ

    ಕಪಿಲ್‌ ಶರ್ಮಾ ಕೆಫೆ ಮೇಲೆ ಖಲಿಸ್ತಾನಿ ಭಯೋತ್ಪಾದಕರಿಂದ ಗುಂಡಿನ ದಾಳಿ

    ಒಟ್ಟಾವಾ: ಕೆನಡಾದಲ್ಲಿ (Canada) ಹಾಸ್ಯನಟ ಕಪಿಲ್ ಶರ್ಮಾ (Kapil Sharma) ಅವರ ಕೆಫೆ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಅದರ ಮೇಲೆ ಖಲಿಸ್ತಾನ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ.

    ಖಲಿಸ್ತಾನಿ ಭಯೋತ್ಪಾದಕ (Khalistani Terrorists) ಹರ್ಜೀತ್ ಸಿಂಗ್ ಲಡ್ಡಿ ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಇದರಲ್ಲಿ ಯಾರಿಗೂ ಗಾಯಗಳಾಗಿಲ್ಲ. ಕೆಫೆ ಮೇಲೆ ಕನಿಷ್ಠ ಒಂಬತ್ತು ಗುಂಡುಗಳನ್ನು ಹಾರಿಸಲಾಗಿದೆ. ಇದನ್ನೂ ಓದಿ: ರಾಜಾಸಾಬ್ ವರ್ಸಸ್ ಧುರಂಧರ್ ಬಾಕ್ಸಾಫೀಸ್ ಕ್ಲ್ಯಾಶ್: ಸಂಜುಬಾಬ ಸ್ಫೋಟಕ ಹೇಳಿಕೆ

    ಕ್ಯಾಪ್ಸ್ ಕೆಫೆ ಎಂದು ಕರೆಯಲ್ಪಡುವ ಈ ಕೆಫೆ, ರೆಸ್ಟೋರೆಂಟ್ ಉದ್ಯಮದಲ್ಲಿ ಶರ್ಮಾ ಅವರ ಮೊದಲ ಪ್ರಯತ್ನವಾಗಿದೆ. ಅವರ ಪತ್ನಿ ಗಿನ್ನಿ ಚತ್ರತ್ ಕೂಡ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಈ ಕೆಫೆಯನ್ನು ಕೆಲವು ದಿನಗಳ ಹಿಂದಷ್ಟೇ ಉದ್ಘಾಟಿಸಲಾಗಿತ್ತು.

    ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಕೆಫೆಯ ಕಿಟಕಿಯ ಮೇಲೆ ಕನಿಷ್ಠ ಒಂಬತ್ತು ಗುಂಡುಗಳನ್ನು ಹಾರಿಸುತ್ತಿರುವ ವೀಡಿಯೋ ವೈರಲ್‌ ಆಗಿದೆ. ಲಡ್ಡಿ ಭಯೋತ್ಪಾದನಾ ವಿರೋಧಿ ಸಂಸ್ಥೆ NIA ಯ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದಾನೆ. ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಸ್ಯನಟನ ಹೇಳಿಕೆಯಿಂದ ಮನನೊಂದಿದ್ದರಿಂದ ಅವನು ಗುಂಡಿನ ದಾಳಿಗೆ ಆದೇಶಿಸಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ರೀಲ್ಸ್ ಚಟ – ಟೆನ್ನಿಸ್ ಆಟಗಾರ್ತಿ ಮಗಳನ್ನು ಗುಂಡಿಕ್ಕಿ ಕೊಂದ ತಂದೆ

    ಗುಂಡಿನ ದಾಳಿಯ ನಂತರ ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಯುತ್ತಿದೆ. ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ನಾಯಕ ವಿಕಾಸ್ ಪ್ರಭಾಕರ್ ಅಲಿಯಾಸ್ ವಿಕಾಸ್ ಬಗ್ಗಾ ಹತ್ಯೆಗೆ ಸಂಬಂಧಿಸಿದಂತೆ ಹರ್ಜೀತ್ ಸಿಂಗ್ ಲಡ್ಡಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಬೇಕಾಗಿದ್ದಾರೆ. ವಿಹೆಚ್‌ಪಿ ನಾಯಕನನ್ನು 2024 ರ ಏಪ್ರಿಲ್‌ನಲ್ಲಿ ಪಂಜಾಬ್‌ನ ರೂಪನಗರ ಜಿಲ್ಲೆಯ ಅವರ ಅಂಗಡಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

  • ಗುರುತೇ ಸಿಗದಷ್ಟು ಸಣ್ಣ ಆದ ಕಪಿಲ್ ಶರ್ಮಾ ಕಂಡು ಅಭಿಮಾನಿಗಳು ಶಾಕ್

    ಗುರುತೇ ಸಿಗದಷ್ಟು ಸಣ್ಣ ಆದ ಕಪಿಲ್ ಶರ್ಮಾ ಕಂಡು ಅಭಿಮಾನಿಗಳು ಶಾಕ್

    ಬಾಲಿವುಡ್ (Bollywood) ನಟ ಕಮ್ ನಿರೂಪಕ ಕಪಿಲ್ ಶರ್ಮಾ (Kapil Sharma) ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನ 3ನೇ ಸೀಸನ್‌ಗೆ ತಯಾರಿ ನಡೆಯುತ್ತಿದ್ದಾರೆ. ಈ ನಡುವೆ ಅವರು ಗುರುತೇ ಸಿಗದಷ್ಟು ಸಣ್ಣ ಆಗಿದ್ದಾರೆ. ನಟನ ಲುಕ್ ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ. ನಿಮಗೆ ಹುಷರಿಲ್ವಾ ಎಂದು ಫ್ಯಾನ್ಸ್ ಕೇಳಿದ್ದಾರೆ. ಇದನ್ನೂ ಓದಿ:ವಿಜಯ್ ಸೇತುಪತಿ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಟಬು

    ನಿನ್ನೆ (ಏ.9) ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಕಪಿಲ್ ಅವರು ಬಿಳಿ ಬಣ್ಣದ ಉಡುಗೆ ಧರಿಸಿದ್ದರು. ತುಂಬಾ ತೂಕ ಇಳಿಸಿಕೊಂಡು ತೆಳ್ಳಗೆ ಕಾಣುತ್ತಿದ್ದರು. ಸದಾ ಫಿಟ್‌ನೆಸ್‌ಗೆ ಹೆಚ್ಚು ಗಮನ ಕೊಡುತ್ತಿದ್ದ ಕಪಿಲ್ ಹೀಗೆ ಸಣ್ಣ ಆಗಿರೋದನ್ನು ನೋಡಿ ಅಭಿಮಾನಿಗಳಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಟನ ಆರೋಗ್ಯದ ಬಗ್ಗೆ ಫ್ಯಾನ್ಸ್ ಕಳವಳ ವ್ಯಕ್ತಪಡಿಸಿದ್ದಾರೆ. ಸದ್ಯ ನಟನ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಬೇಬಿ ಬಂಪ್ ಫೋಟೋ ಹಂಚಿಕೊಂಡ ಸಂಜನಾ ಗಲ್ರಾನಿ

    ಅಂದಹಾಗೆ, ‘ಕಿಸ್ ಕಿಸ್ಕೋ ಪ್ಯಾರ್ ಕರೋನ್ 2’ ಸಿನಿಮಾದಲ್ಲಿ ಕಪಿಲ್ ನಾಯಕನಾಗಿ ನಟಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.

  • ‌ಕಪಿಲ್‌ ಶರ್ಮಾ ಸೇರಿ ನಾಲ್ವರು ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ

    ‌ಕಪಿಲ್‌ ಶರ್ಮಾ ಸೇರಿ ನಾಲ್ವರು ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ

    – ಬೆದರಿಕೆ ಇಮೇಲ್‌ ವಿಳಾಸ ಪಾಕಿಸ್ತಾನದಲ್ಲಿ ಪತ್ತೆ; ಕೇಸ್‌ ದಾಖಲು

    ಮುಂಬೈ: ನಟ ಸೈಫ್‌ ಅಲಿ ಖಾನ್‌ಗೆ ಚಾಕು ಇರಿತ ಪ್ರಕರಣದ ಬೆನ್ನಲ್ಲೇ ಬಾಲಿವುಡ್‌ ತಾರೆಯರಿಗೆ ಸರಣಿ ಜೀವ ಬೆದರಿಕೆ ಬಂದಿದೆ. ಹಾಸ್ಯನಟ ಕಪಿಲ್ ಶರ್ಮಾ (Kapil Sharma), ನಟ ರಾಜ್‌ಪಾಲ್ ಯಾದವ್, ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಮತ್ತು ಗಾಯಕಿ – ಹಾಸ್ಯ ನಟಿ ಸುಗಂಧ ಮಿಶ್ರಾ (Sugandha Mishr) ಪಾಕಿಸ್ತಾನ ಮೂಲದ ಇ-ಮೇಲ್‌ನಿಂದ ಜೀವ ಬೆದರಿಕೆ ಬಂದಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ಸೆಲೆಬ್ರಿಟಿಗಳು ನೀಡಿದ ದೂರಿನ ಮೇರೆಗೆ ಮುಂಬೈನ ಅಂಬೋಲಿ ಮತ್ತು ಓಶಿವಾರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಸಂಬಂಧ ತನಿಖೆ ಕೈಗೊಂಡಿದ್ದರೆ. ಇದನ್ನೂ ಓದಿ: ನಿವೃತ್ತಿ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ- ಶ್ರೀವಲ್ಲಿ ಅಭಿಮಾನಿಗಳು ಶಾಕ್

    ಇ-ಮೇಲ್‌ ಬೇದರಿಕೆ ಸಂದೇಶ ಏನಿದೆ?
    ನಾವು ನಿಮ್ಮ ಇತ್ತೀಚಿನ ಎಲ್ಲಾ ಚಟುವಟಿಕೆಗಳನ್ನು ಗಮನಿಸುತ್ತಿದ್ದೇವೆ. ಇದು ಪ್ರಚಾರದ ಸ್ಟಂಟ್‌ ಅಲ್ಲ, ನಿಮಗೆ ಕಿರುಕುಳ ನೀಡುವ ಪ್ರಯತ್ನವೂ ಅಲ್ಲ. ಈ ಸಂದೇಶವನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿ. ನಾವು ಹೇಳಿದಂತೆ ಕೇಳದಿದ್ದರೆ, ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೂ ತೀವ್ರ ಪರಿಣಾಮ ಬೀರಬಹುದು. 8 ಗಂಟೆಗಳ ಒಳಗೆ ಈ ಸಂದೇಶಕ್ಕೆ ಪ್ರತಿಕ್ರಿಯಿಸಿ ಅಂತ ಇ-ಮೇಲ್‌ನಲ್ಲಿ ಬೆದರಿಕೆ (E-Mail Threats) ಬಂದಿದೆ. ಇದನ್ನೂ ಓದಿ: ವಿಟ್ಲ ಪಂಚಲಿಂಗೇಶ್ವರ ಜಾತ್ರೆಯಲ್ಲಿ ದೇವರ ಪ್ರಭಾವಳಿಗೆ ಬಡಿದ ಡ್ರೋಣ್‌

    ಬೆದರಿಕೆ ಬಂದ ಇಮೇಲ್‌ ವಿಳಾಸ ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿರುವುದಾಗಿ ಮುಂಬೈ ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸೈಫ್‌ ಅಲಿ ಖಾನ್‌ಗೆ ಇರಿದದ್ದು ನಿಜವೇ ಅಥವಾ ನಟಿಸ್ತಿದ್ದಾರೆಯೇ? – ಬಿಜೆಪಿ ಸಚಿವ ರಾಣೆ ಲೇವಡಿ

  • ಹಾಸ್ಯ ಕಲಾವಿದ, ಹಿರಿಯ ನಟ ಅತುಲ್ ಪರ್ಚುರೆ ನಿಧನ

    ಹಾಸ್ಯ ಕಲಾವಿದ, ಹಿರಿಯ ನಟ ಅತುಲ್ ಪರ್ಚುರೆ ನಿಧನ

    ಮುಂಬೈ: ಹಾಸ್ಯ ಪಾತ್ರಗಳ ಮೂಲಕ ಮರಾಠಿ  ಮತ್ತು ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ನಟ ಅತುಲ್ ಪರ್ಚುರೆ (Atul Parchure) ಅವರು ನಿಧನರಾಗಿದ್ದಾರೆ.

    ಲಿವರ್ ಕ್ಯಾನ್ಸರ್‌ನಿಂದ ಕಳೆದ ಕೆಲ ವರ್ಷಗಳಿಂದ ಬಳಲುತ್ತಿದ್ದ ಅವರು, ಈಚೆಗೆ ಆಸ್ಪತ್ರೆ ಸೇರಿದ್ದರು. ಚಿಕಿತ್ಸೆ ಫಲಕಾರಿಯಾಗದೇ ತಮ್ಮ 57 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು, ತಾಯಿ, ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ಇದನ್ನೂ ಓದಿ: ದರ್ಶನ್ ಇಂದೇ ಹೈಕೋರ್ಟ್ ಮೊರೆ ಹೋಗ್ತಾರಾ? – ಅರ್ಜಿ ಸಲ್ಲಿಸಿದ್ರೆ ಮುಂದೇನು?

    ಅತುಲ್ ಅವರು ಕಪಿಲ್ ಶರ್ಮಾ (Kapil Sharma) ಅವರ ಹಾಸ್ಯ ಕಾರ್ಯಕ್ರಮ, ಹಿಂದಿಯ ಹಲವಾರು ದೂರದರ್ಶನ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಪ್ರಸಿದ್ಧ ನಟರಾಗಿದ್ದರು. ಟಾಕ್ ಶೋ ಪ್ರದರ್ಶನವೊಂದರಲ್ಲಿ, ಅವರು ತಾವು ಎದುರಿಸುತ್ತಿರುವ ಕ್ಯಾನ್ಸರ್ ರೋಗದ ಬಗ್ಗೆ ಹೇಳಿಕೊಂಡಿದ್ದರು. ಯಕೃತ್ತಿನಲ್ಲಿ 5 ಸೆಂ.ಮೀ ಗೆಡ್ಡೆ ಇದೆ ಎಂದು ಬಹಿರಂಗಪಡಿಸಿದ್ದರು.  ಇದನ್ನೂ ಓದಿ: ಬಳ್ಳಾರಿ ಜೈಲಧಿಕಾರಿಗಳ ಕೈ ಸೇರಿದ ದರ್ಶನ್ ಮೆಡಿಕಲ್ ರಿಪೋರ್ಟ್

    ಈ ಬಗ್ಗೆ ಅವರು ಮೊದಲೇ ತಿಳಿಸಿದ್ದು, ಆರಂಭದಲ್ಲಿ ಕ್ಯಾನ್ಸರ್ ಚಿಕಿತ್ಸೆ ಆರಂಭಿಸಿದಾಗ ವೈದ್ಯರಿಂದ ಎಡವಟ್ಟಾಗಿ ಸಮಸ್ಯೆ ಎದುರಾಗಿತ್ತು. ನನ್ನ ಮೇದೋಜ್ಜೀರಕ ಗ್ರಂಥಿಯ ಮೇಲೆ ಪರಿಣಾಮ ಬೀರಿತು ಮತ್ತು ವಿವಿಧ ತೊಡಕುಗಳಿಗೆ ಕಾರಣವಾಯಿತು. ತಪ್ಪಾದ ಚಿಕಿತ್ಸೆಯು ವಾಸ್ತವವಾಗಿ ನನ್ನ ಸ್ಥಿತಿಯನ್ನು ಉಲ್ಬಣಗೊಳಿಸಿತು. ನಾನು ನಡೆಯಲು ಸಾಧ್ಯವಾಗಲಿಲ್ಲ ಮತ್ತು ಸ್ಪಷ್ಟವಾಗಿ ಮಾತನಾಡಲು ಕಷ್ಟಪಡುತ್ತಿದ್ದೆ. ಕೊನೆಗೆ ನಾನು ಬೇರೆ ವೈದ್ಯರನ್ನು ಸಂಪರ್ಕಿಸಿದೆ. ಸೂಕ್ತವಾದ ಔಷಧಿ ಮತ್ತು ಕೀಮೋಥೆರಪಿಯನ್ನು ಪಡೆದುಕೊಂಡೆ ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: ಉಪ್ಪಿ ಅಣ್ಣನ ಮಗ ನಿರಂಜನ್‌ಗೆ ಅರ್ಜುನ್ ಸರ್ಜಾ ಆ್ಯಕ್ಷನ್ ಕಟ್

    ಅತುಲ್ ಅವರು ಸಿನಿಮಾದ ಜೊತೆ ಜೊತೆ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿದ್ದರು. ಶಾರುಖ್ ಖಾನ್, ಅಜಯ್ ದೇವಗನ್ ಮುಂತಾದ ಹಿಂದಿ ಚಿತ್ರರಂಗದ ಸ್ಟಾರ್ ನಟರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಕಪಿಲ್ ಶರ್ಮಾ ನಡೆಸಿಕೊಟ್ಟ ‘ಕಾಮಿಡಿ ನೈಟ್ಸ್ ವಿಥ್ ಕಪಿಲ್’ ಕಾರ್ಯಕ್ರಮದಲ್ಲಿ ಹಲವು ಪಾತ್ರಗಳನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ‘ನವ್ರಾ ಮಜಾ ನವಸಾಚಾ’, ‘ಸಲಾಮ್-ಇ-ಇಷ್ಕ್’, ‘ಆಲ್ ದಿ ಬೆಸ್ಟ್, ಫನ್ ಬಿಗಿನ್ಸ್’, ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದರು. ಇದನ್ನೂ ಓದಿ: ಮಂಡ್ಯದಲ್ಲಿ ಅಪ್ಪು ಹೆಸರಲ್ಲಿ ವಂಚನೆ ಆರೋಪ – ಕ್ರೀಡಾಕೂಟದ ನಕಲಿ ಪೋಸ್ಟ್ ಬಿಟ್ಟು ದೋಖಾ

  • ಆಮೀರ್ ಖಾನ್ ಅವರಿಗೆ ಇದೆ ವಿಚಿತ್ರ ಆಸೆ: ಕಪಿಲ್ ಶೋನಲ್ಲಿ ರಿವೀಲ್

    ಆಮೀರ್ ಖಾನ್ ಅವರಿಗೆ ಇದೆ ವಿಚಿತ್ರ ಆಸೆ: ಕಪಿಲ್ ಶೋನಲ್ಲಿ ರಿವೀಲ್

    ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಅವರಿಗೆ ವಿಚಿತ್ರ ಆಸೆ ಇದೆಯಂತೆ. ಆ ಆಸೆಯನ್ನು ಅವರು ಕಾಮಿಡಿ ವಿತ್ ಕಪಿಲ್ ಶೋನಲ್ಲಿ (Kapil Sharma) ಹೇಳಿಕೊಂಡಿದ್ದಾರೆ. ಸಮಯದ ಪಾಲನೆ ಬಗ್ಗೆ ಸದಾ ಮಾತನಾಡುವ ಆಮೀರ್, ಈ ಕಾರ್ಯಕ್ರಮಕ್ಕೆ (Show) ಸಮಯ ಹೊಂದಿಸಿಕೊಂಡು ಭಾಗಿಯಾಗಿದ್ದಾರೆ. ಜೊತೆಗೆ ತಮ್ಮ ವಿಚಿತ್ರ ಆಸೆಯೊಂದನ್ನು ಹೇಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

    ಆಮೀರ್ ಅವರಿಗೆ ಇರುವ ಆಸೆಯಂದರೆ, ಶಾರ್ಟ್ಸ್ ಧರಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎನ್ನುವುದು ಆಗಿದೆ. ಆದರೆ, ಅದಕ್ಕೆ ಅವರ ಮಕ್ಕಳು ಬಿಡುವುದಿಲ್ಲವಂತೆ. ನನ್ನ ಮಕ್ಕಳು ನನ್ನ ಮಾತನ್ನು ಕೇಳೋದಿಲ್ಲ ಎಂದೂ ಅವರು ಅಳಲು ತೋಡಿಕೊಂಡಿದ್ದಾರೆ. ಜೊತೆಗೆ ಪ್ರಶಸ್ತಿ ಸಮಾರಂಭಕ್ಕೆ ತಾವು ಏಕೆ ಹೋಗುವುದಿಲ್ಲ ಎನ್ನುವುದನ್ನೂ ಹೇಳಿದ್ದಾರೆ.

    ಆಮೀರ್ ಖಾನ್ ಬಾಲಿವುಡ್ ಕಂಡ ಬುದ್ದಿವಂತಹ ನಟ, ನಿರ್ಮಾಪಕ. ಎರಡು ಮದುವೆಯಾಗಿ ಇಬ್ಬರಿಗೂ ಡಿವೋರ್ಸ್ ಕೊಟ್ಟಿದ್ದರು. ಈಗಲೂ ಇಬ್ಬರ ಜೊತೆಯೂ ಬಲು ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಅಗತ್ಯ ಬಿದ್ದಾಗ ಭೇಟಿ ಮಾಡುತ್ತಾರೆ. ಜೊತೆಗೆ ಮಕ್ಕಳನ್ನು ಜತನದಿಂದ ಕಾಪಾಡಿದ್ದಾರೆ. ಹಾಗಾಗಿ ಶೋನಲ್ಲಿ ಯಾವೆಲ್ಲ ವಿಚಾರಗಳನ್ನು ಅವರು ಹೇಳಿಕೊಳ್ಳಲ್ಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕು.

     

    ಸದ್ಯ ಪ್ರೊಮೋ ಮಾತ್ರ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಪೂರ್ತಿ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಪ್ರಸಾರವಾಗಲಿದೆ.

  • ಕಪಿಲ್ ಶೋನಲ್ಲಿ ಸುನಿಲ್: ಒಂದಾದ ಹೊಡೆದಾಡಿಕೊಂಡಿದ್ದ ಜೋಡಿ

    ಕಪಿಲ್ ಶೋನಲ್ಲಿ ಸುನಿಲ್: ಒಂದಾದ ಹೊಡೆದಾಡಿಕೊಂಡಿದ್ದ ಜೋಡಿ

    ಹಿಂದಿಯ ಕಪಿಲ್ ಶರ್ಮಾ (Kapil Sharma) ಶೋನಲ್ಲಿ ಅತೀ ಹೆಚ್ಚು ನಗಿಸೋರು ಯಾರು ಅಂದರೆ ಥಟ್ಟನೆ ಹೇಳುತ್ತಿದ್ದ ಹೆಸರು ಸುನಿಲ್ ಗ್ರೋವರ್ (Sunil Grover) ಅವರದ್ದು. ಕಾಮಿಡಿ ಶೋನಲ್ಲಿ ಅವರು ಮಾಡದೇ ಇರುವಂತಹ ಪಾತ್ರ ಇರಲಿಲ್ಲ. ಪ್ರತಿ ಎಪಿಸೋಡಿನಲ್ಲೂ ಒಂದಲ್ಲ ಒಂದು ಹೊಸ ವೇಷ ಧರಿಸಿಕೊಂಡು ಜನರನ್ನು ರಂಚಿಸುತ್ತಿದ್ದಾರೆ. 2018ರಲ್ಲಿ ನಡೆದ ಗಲಾಟೆಯಿಂದಾಗಿ ಶೋನಿಂದ ಸುನಿಲ್ ದೂರವಾದರು.

    ಕಾರ್ಯಕ್ರಮಕ್ಕೆಂದು ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿತ್ತು ಕಪಿಲ್ ಅಂಡ್ ಟೀಮ್. ಅದರಲ್ಲು ಸುನಿಲ್ ಕೂಡ ಇದ್ದರು. ಕಾರ್ಯಕ್ರಮ ಮುಗಿಸಿಕೊಂಡು ದೆಹಲಿ ವಿಮಾನ ಏರಿದಾಗ ಅಲ್ಲಿಯೇ ಎಡವಟ್ಟು ಆಗಿತ್ತು. ಬಾಲಿವುಡ್ ನಲ್ಲಿ ಹರಿದಾಡಿದ ಸುದ್ದಿಯ ಪ್ರಕಾರ ಕಪಿಲ್ ಶರ್ಮಾ ವಿಪರೀತ ಕುಡಿದಿದ್ದರು. ಅದೇ ಗಲಾಟೆಗೆ ಕಾರಣವಾಗಿತ್ತು.

    ವಿಪರೀತ ಕುಡಿದಿದ್ದ ಕಪಿಲ್ ಶರ್ಮಾ, ಅಲ್ಲಿದ್ದವರನ್ನು ರೇಗಿಸುತ್ತಿದ್ದರು. ಅದು ಎಲ್ಲರಿಗೂ ಕಿರಿಕಿರಿ ಮೂಡಿಸಿತ್ತು. ಅದೇ ವೇಳೆಯಲ್ಲೇ ವಿಮಾನದಲ್ಲಿ ಊಟ ತಂದುಕೊಟ್ಟಿದ್ದರ ಸಿಬ್ಬಂದಿ. ಶರ್ಮಾ ಬಿಟ್ಟು ಉಳಿದವರು ಊಟ ಮಾಡಲು ಶುರು ಮಾಡಿದರು. ನಾನು ಊಟ ಮಾಡದೇ ನೀವು ಹೇಗೆ ಮಾಡಿದ್ದೀರಿ ಎಂದು ಕಿರಿಕ್ ಮಾಡಿದ್ದರು ಕಪಿಲ್. ಜಗಳಕ್ಕೆ ಬಿದ್ದು ಬಿಟ್ಟಿದ್ದರು.

    ಜಗಳ ವಿಪರೀತಕ್ಕೆ ಹೋಗಬಾರದು ಎನ್ನುವ ಕಾರಣಕ್ಕಾಗಿ ಸುನಿಲ್, ನಡುವೆ ಬಂದು ಕಪಿಲ್ ಅವರನ್ನು ಸಮಾಧಾನಿಸಲು ಹೋದರಂತೆ. ಆದ ಸುನಿಲ್ ಅವರಿಗೆ ಬೂಟು ತೆಗೆದುಕೊಂಡು ಕಪಿಲ್ ಹೊಡೆದರು. ಅಲ್ಲಿಂದ ಈ ಗೆಳೆಯರು ಇಬ್ಬರೂ ದೂರ ದೂರ ಆದರು ಎನ್ನುವುದು ಸುದ್ದಿ. ಅಲ್ಲಿಂದ ಆರು ವರ್ಷಗಳ ಕಾಲ ಇಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳಲಿಲ್ಲ.

     

    ಸುನಿಲ್ ತಮ್ಮದೇ ಆದ ಹೊಸ ಕಾಮಿಡಿ ಶೋ ಶುರು ಮಾಡಿದಾಗ, ಕಪಿಲ್ ಕಾಲೆಳೆದರು. ಹೀಗೆ ಪರಸ್ಪರ ಇಬ್ಬರೂ ದ್ವೇಷ ಮಾಡುತ್ತಲೇ ಬಂದಿದ್ದರು. ಇದೀಗ ಕಪಿಲ್ ಅವರ ಹೊಸ ಕಾಮಿಡಿ ಶೋನಲ್ಲಿ ಈ ಕೆಂಡಕಾರಿದ್ದ ಜೋಡಿ ಜೊತೆಯಾಗಿ ನಗಿಸೋಕೆ ಬರುತ್ತದೆ. ಒಟಿಟಿಗಾಗಿ ಮಾಡಿರುವ ಶೋಗೆ ‘ದಿ ಗ್ರೇಟ್ ಇಂಡಿನ್ ಕಪಿಲ್ ಶೋ’ ಎಂದು ಹೆಸರಿಟಲಾಗಿದೆ. ಆಗಲೇ ಟ್ರೈಲರ್ ಕೂಡ ರಿಲೀಸ್ ಮಾಡಿದ್ದಾರೆ.

  • ಮಹದೇವ್ ಹವಾಲ ಪ್ರಕರಣ: ಬಾಲಿವುಡ್ ನ 34 ಸೆಲೆಬ್ರಿಟಿಗಳಿಗೆ ‘ED’ ನೋಟಿಸ್

    ಮಹದೇವ್ ಹವಾಲ ಪ್ರಕರಣ: ಬಾಲಿವುಡ್ ನ 34 ಸೆಲೆಬ್ರಿಟಿಗಳಿಗೆ ‘ED’ ನೋಟಿಸ್

    ಬಾಲಿವುಡ್ ನ ಖ್ಯಾತ ನಟ ರಣಬೀರ್ ಕಪೂರ್, ಹಾಸ್ಯ ನಿರೂಪಕ ಕಪಿಲ್ ಶರ್ಮಾ (Kapil Sharma) ಸೇರಿದಂತೆ ಬಿಟೌನ್‍ನ ಒಟ್ಟು 34 ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ. ಮಹದೇವ್ ಆನ್ ಲೈನ್ ಬೆಟ್ಟಿಂಗ್ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ (Notice) ಜಾರಿ ಮಾಡಿದ್ದು, ನಿನ್ನೆಯಿಂದಲೇ ಹಲವರಿಗೆ ವಿಚಾರಣೆಗೆ ಕರೆದಿದೆ. ನಾಳೆ ರಣಬೀರ್ ಕಪೂರ್ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

    ಕೇವಲ ಕಪಿಲ್ ಶರ್ಮಾಗೆ ಮಾತ್ರವಲ್ಲ, ರಣಬೀರ್ ಕಪೂರ್, ಶ್ರದ್ಧಾ ಕಪೂರ್ (Shraddha Kapoor), ಹುಮಾ ಖುರೇಷಿ ಹಾಗೂ ಹೀನಾ ಖಾನ್ ಸೇರಿದಂತೆ ಹಲವರಿಗೆ ಇಡಿ ನೋಟಿಸ್ ನೀಡಿದೆ. ಈ ಪ್ರಕರಣದಲ್ಲಿ ಒಟ್ಟು 17 ಬಾಲಿವುಡ್ ಸಿಲಿಬ್ರಿಟಿಗಳಿಗೆ ನೋಟಿಸ್ ನೀಡಿದ್ದಾರೆ ಎಂದು ನಿನ್ನೆ ತಿಳಿದು ಬಂದಿತ್ತು. ಆದರೆ, ಈವರೆಗೂ 34 ಜನರಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹಂತ ಹಂತವಾಗಿ ಇವರನ್ನು ವಿಚಾರಣೆಗೆ ಕರೆಯಲಾಗುತ್ತಿದೆ.ಇದನ್ನೂ ಓದಿ:ಟ್ರೈಲರ್ ಮೂಲಕ ಕಿಚ್ಚು ಹಚ್ಚಿದ `ಇನಾಮ್ದಾರ್’ ಸಿನಿಮಾ

    ಏನಿದು ಪ್ರಕರಣ?

    ಮಹದೇವ್ ಬೆಟ್ಟಿಂಗ್ (Mahadev Betting) ಆಪ್‍ನ ಮುಖ್ಯಸ್ಥನ ಸೌರಭ್ ಚಂದ್ರಕರ್ ಅವರ ಮದುವೆ ಅದ್ಧೂರಿಯಾಗಿ ದುಬೈನಲ್ಲಿ ನಡೆದಿತ್ತು. ಮುಂಬೈ ಮೂಲದ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ಮದುವೆಯ ಉಸ್ತುವಾರಿ ನೀಡಿತ್ತು. ಈ ಇವೆಂಟ್ ಮ್ಯಾನೇಜ್ ಮೆಂಟ್ ಹಲವಾರು ಸಿಲಿಬ್ರಿಟಿಗಳನ್ನು ಮದುವೆಗೆ ಆಹ್ವಾನ ನೀಡಿತ್ತು. ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ಸೌರಭ್ 140 ಕೋಟಿ ರೂಪಾಯಿ ಹವಾಲ ಹಣ ನೀಡಿದ್ದಾರೆ ಎಂದು ತಿಳಿದು ಬಂದಿದೆ.

     

    ಸಿಲಿಬ್ರಿಟಿಗಳಿಗೂ ಈ ಹಣ ಪಾವತಿ ಆಗಿರುವುದರಿಂದ ಹಣ ಪಡೆದವರಿಗೆ ನೋಟಿಸ್ ನೀಡಿ, ವಿಚಾರಣೆ ಮಾಡಲಾಗುತ್ತಿದೆ. ಒಟ್ಟು ಈ ಮದುವೆಗೆ 200 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಇಡಿ ತನಿಖೆಯಿಂದ ತಿಳಿದು ಬಂದಿದೆ. ಇದಷ್ಟೇ ಅಲ್ಲ, ಈ ಆಪ್ ಅನ್ನು ಪ್ರಮೋಟ್ ಮಾಡಿದ 100ಕ್ಕೂ ಹೆಚ್ಚು ಜನರಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]