Tag: ಕನ್ಹಯ್ಯ ಲಾಲ್‌

  • ಕನ್ಹಯ್ಯ ಲಾಲ್ ಪುತ್ರರಿಗೆ ಸರ್ಕಾರಿ ನೌಕರಿ – ಗೆಹ್ಲೋಟ್ ನಿರ್ಧಾರ

    ಕನ್ಹಯ್ಯ ಲಾಲ್ ಪುತ್ರರಿಗೆ ಸರ್ಕಾರಿ ನೌಕರಿ – ಗೆಹ್ಲೋಟ್ ನಿರ್ಧಾರ

    ಜೈಪುರ: ಇಸ್ಲಾಂ ಮತಾಂಧರ ಕೈಯಲ್ಲಿ ಭೀಕರವಾಗಿ ಹತ್ಯೆಯಾದ ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಅವರ ಪುತ್ರರಿಗೆ ಸರ್ಕಾರಿ ಕೆಲಸ ನೀಡಲು ರಾಜಸ್ಥಾನ ಕ್ಯಾಬಿನೆಟ್ ತೀರ್ಮಾನಿಸಿದೆ.

    ಜೂನ್ 28ರಂದು ಇಬ್ಬರು ಭಯೋತ್ಪಾದಕರಿಂದ ಹತ್ಯೆಯಾದ ಕನ್ಹಯ್ಯ ಲಾಲ್ ತೇಲಿ ಅವರ ಪುತ್ರರಾದ ಯಶ್ ತೇಲಿ ಹಾಗೂ ತರುಣ್ ತೇಲಿ ಅವರನ್ನು ಸರ್ಕಾರಿ ಕೆಲಸಕ್ಕೆ ನೇಮಿಸಲು ಸಂಪುಟ ನಿರ್ಧರಿಸಿದೆ ಎಂದು ಗೆಹ್ಲೋಟ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

    ಈ ನೇಮಕಾತಿಯನ್ನು 2008 ಹಾಗೂ 2009ರ ರಾಜಸ್ಥಾನ ಅಧೀನ ಕಚೇರಿ ಕ್ಲರ್ಕ್ ಸೇವಾ ನಿಯಮಗಳ ಅಡಿಯಲ್ಲಿ ಮಾಡಲಾಗಿದೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ. ಇದನ್ನೂ ಓದಿ: ನಡೆದುಕೊಂಡು ಹೋಗ್ತಿದ್ದಾಗ ಚೂರಿ ಇರಿತ – ಕೆರೂರು ಪಟ್ಟಣದಲ್ಲಿ ಗುಂಪು ಘರ್ಷಣೆ, 144 ಸೆಕ್ಷನ್ ಜಾರಿ

    ಕನ್ಹಯ್ಯ ಲಾಲ್ ತಮ್ಮ ಕುಟುಂಬದಲ್ಲಿ ತಾವೊಬ್ಬರೇ ದುಡಿಯುತ್ತಿದ್ದ ವ್ಯಕ್ತಿಯಾಗಿದ್ದು, ತಮ್ಮಿಬ್ಬರು ಮಕ್ಕಳೂ ವಿದ್ಯಾಭ್ಯಾಸ ಮಾಡುತ್ತಿದ್ದರು. ಇದೀಗ ಕುಟುಂಬ ತನ್ನ ಆಸರೆಯನ್ನು ಕಳೆದುಕೊಂಡಿದ್ದು, ಸರ್ಕಾರ ಕನ್ಹಯ್ಯ ಕುಟುಂಬದ ಕಂಬನಿಗೆ ನೆರವು ನೀಡಲು ಮುಂದಾಗಿದೆ. ಕನ್ಹಯ್ಯ ಮಕ್ಕಳಿಗೆ ಸರ್ಕಾರಿ ಕೆಲಸಗಳನ್ನು ಒದಗಿಸಲು ಮುಂದಾಗುವ ಮೂಲಕ ಸಹಾಯ ಮಾಡಿದೆ.

    ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಕನ್ಹಯ್ಯ ಲಾಲ್ ಪೋಸ್ಟ್ ಮಾಡಿದ್ದಕ್ಕೆ ಧರ್ಮಾಂಧರು ಕನ್ಹಯ್ಯ ಅವರ ಶಿರಚ್ಛೇದನ ನಡೆಸಿ ಭೀಕರವಾಗಿ ಹತ್ಯೆಗೈದಿದ್ದರು. ಜೊತೆಗೆ ಹತ್ಯೆಯ ವೀಡಿಯೋವನ್ನು ಮಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹತ್ಯೆಯನ್ನೂ ಇದೇ ರೀತಿ ನಡೆಸುವುದಾಗಿ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ಬೂಸ್ಟರ್ ಡೋಸ್ ನಡುವಿನ ಅಂತರ 9 ರಿಂದ 6 ತಿಂಗಳಿಗೆ ಇಳಿಕೆ

    ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಲು ಪ್ರಾರಂಭವಾಗುತ್ತಿದ್ದಂತೆ ದೇಶಾದ್ಯಂತ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕೋರ್ಟ್ ಬಳಿ ಉದಯಪುರ ಟೈಲರ್ ಹಂತಕರ ಬಟ್ಟೆ ಹರಿದು ಥಳಿಸಿದ ಪ್ರತಿಭಟನಾಕಾರರು

    ಕೋರ್ಟ್ ಬಳಿ ಉದಯಪುರ ಟೈಲರ್ ಹಂತಕರ ಬಟ್ಟೆ ಹರಿದು ಥಳಿಸಿದ ಪ್ರತಿಭಟನಾಕಾರರು

    ಜೈಪುರ: ಟೈಲರ್ ಕನ್ಹಯ್ಯ ಲಾಲ್ ಅವರನ್ನು ಭೀಕರವಾಗಿ ಹತ್ಯೆಗೈದ ಹಂತಕರ ಮೇಲೆ ಜೈಪುರ ನ್ಯಾಯಾಲಯದ ಬಳಿ ದೊಡ್ಡ ಗುಂಪೊಂದು ಶನಿವಾರ ದಾಳಿ ನಡೆಸಿದೆ.

    ಜೈಪುರ ನ್ಯಾಯಾಲಯದ ಹೊರಗೆ ಗುಂಪೊಂದು ಉದಯಪುರ ಟೈಲರ್ ಹಂತಕರ ಮೇಲೆ ಹಲ್ಲೆ ನಡೆಸಿ, ಬಟ್ಟೆಯನ್ನೆಲ್ಲಾ ಹರಿದು ಹಾಕಿದ್ದಾರೆ. ಪೊಲೀಸರು ತಕ್ಷಣ ಆರೋಪಿಗಳನ್ನು ಪೊಲೀಸ್ ವ್ಯಾನ್‌ಗೆ ಹತ್ತಿಸಿ, ಅವರನ್ನು ರಕ್ಷಿಸಿದ್ದಾರೆ.

    ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಮಂಗಳವಾರ ಇಬ್ಬರು ಪಾತಕಿಗಳು ಭೀಕರವಾಗಿ ಹತ್ಯೆ ನಡೆಸಿ, ಅದರ ವೀಡಿಯೋವನ್ನೂ ಮಾಡಿದ್ದರು. ಬಳಿಕ ಅವರು ಹತ್ಯೆಗೆ ಬಳಸಿದ ಆಯುಧದಿಂದಲೇ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಯನ್ನೂ ನಡೆಸುವುದಾಗಿ ಬೆದರಿಕೆ ಹಾಕಿದ್ದರು. ಆ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಇದನ್ನೂ ಓದಿ: ಜುಬೇರ್ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ – 14 ದಿನ ನ್ಯಾಯಾಂಗ ಬಂಧನ

    ವೀಡಿಯೋ ವೈರಲ್ ಆಗುತ್ತಿದ್ದಂತೆ ದೇಶಾದ್ಯಂತ ಬೆಚ್ಚಿ ಬಿದ್ದ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಹಂತಕರಾದ ಅಖ್ತಾರಿ ಹಾಗೂ ಮೊಹಮ್ಮದ್‌ನನ್ನು ಪೊಲೀಸರು ಬಂಧಿಸಿದ್ದರು. ಹತ್ಯೆಯಲ್ಲಿ ಭಾಗಿಯಾಗಿದ್ದ ಹಾಗೂ ಸಂಚು ರೂಪಿಸಿದ್ದ ಆರೋಪದ ಮೇಲೆ ಪೊಲೀಸರು ಇನ್ನೂ ಇಬ್ಬರನ್ನು ಬಂಧಿಸಿದ್ದಾರೆ.

    Udaipur

    ನಾಲ್ಕೂ ಆರೋಪಿಗಳನ್ನು ಇಂದು ಜೈಪುರದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆದರೂ ಆರೋಪಿಗಳ ಮೇಲೆ ಸ್ಥಳದಲ್ಲಿ ನೆರೆದಿದ್ದ ಗುಂಪು ಹಲ್ಲೆ ನಡೆಸಲು ಮುಂದಾಗಿದೆ. ಇದರೊಂದಿಗೆ ಕನ್ಹಯ್ಯ ಹಂತಕರಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಬಿಜೆಪಿ ನಾಯಕರೊಂದಿಗೆ ಟೈಲರ್‌ ಹಂತಕರಿರೋ ಫೋಟೋ ವೈರಲ್‌ – BJPಗೂ ಹಂತಕರಿಗೂ ಇದ್ಯಾ ನಂಟು?

    Live Tv

  • ಕನ್ಹಯ್ಯ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ನೀಡಿ: ಉಮ್ಮತ್ ಚಿಂತಕರ ವೇದಿಕೆ ಮನವಿ

    ಕನ್ಹಯ್ಯ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ನೀಡಿ: ಉಮ್ಮತ್ ಚಿಂತಕರ ವೇದಿಕೆ ಮನವಿ

    ದಾವಣಗೆರೆ: ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಮಾಡಿ ಇಸ್ಲಾಂ ಧರ್ಮಕ್ಕೆ ಕೆಟ್ಟ ಹೆಸರು ತಂದಿದ್ದಾರೆ. ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ನೀಡಬೇಕುಎಂದು ಉಮ್ಮತ್ ಚಿಂತಕರ ವೇದಿಕೆ ಒತ್ತಾಯಿಸಿದೆ.

    ಉದಯಪುರದ ಹತ್ಯೆಯನ್ನು ಖಂಡಿಸಿದ ಉಮ್ಮತ್ ಚಿಂತಕರ ವೇದಿಕೆ, ದಾವಣಗೆರೆ ಅಪರ ಜಿಲ್ಲಾಧಿಕಾರಿ ಲೋಕೇಶ್ ಅವರಲ್ಲಿ ಮನವಿ ಮಾಡಿದೆ. ಇಸ್ಲಾಂ ಬಗ್ಗೆ ತಿಳಿಯದೇ ಇರುವ ವ್ಯಕ್ತಿಗಳಿಂದ ಈ ರೀತಿಯ ಕೃತ್ಯ ನಡೆಯುತ್ತಿದೆ. ಈ ಕೂಡಲೇ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಿಸುವಂತೆ ಪ್ರಧಾನಿಯವರಲ್ಲಿ ಮನವಿ ಮಾಡಿದೆ. ಇದನ್ನೂ ಓದಿ: ತುಂಬಾ ಒಳ್ಳೇ ಕೆಲಸ ಮಾಡಿದ್ದೀಯಾ ಸಹೋದರ – ಕನ್ಹಯ್ಯ ಹತ್ಯೆ ಬೆಂಬಲಿಸಿದ ಮುಸ್ಲಿಂ ವ್ಯಕ್ತಿ ಅರೆಸ್ಟ್

    ಪ್ರವಾದಿಗೆ ಅವಹೇಳನ ಮಾಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ ಉದಯಪುರದ ಹಿಂದೂ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಇಬ್ಬರು ಕೊಲೆಗಡುಕರು ಹತ್ಯೆ ನಡೆಸಿ, ಅದರ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಪ್ರಧಾನಿ ನರೇಂದ್ರ ಮೋದಿಯನ್ನೂ ಇದೇ ರೀತಿಯಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಪಾತಕಿಗಳ ವಿರುದ್ಧ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಇದನ್ನೂ ಓದಿ: ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಪ್ರತಿಭಟನೆ – ಮೂವರು ಕಾರ್ಯಕರ್ತರ ಪ್ಯಾಂಟ್‍ಗೆ ತಗುಲಿದ ಬೆಂಕಿ

    ಇಬ್ಬರು ಧರ್ಮಾಂಧರು ಹಿಂದೂ ವ್ಯಕ್ತಿಯ ಶಿರಚ್ಛೇದನ ನಡೆಸಿ ಹತ್ಯೆ ಮಾಡಿದ್ದರಿಂದ ಮುಸ್ಲಿಂ ಸಮುದಾಯದ ಮೇಲೆ ಹಿಂದೂ ಸಂಘಟನೆಗಳು ಕಿಡಿ ಕಾರಿವೆ.

    Live Tv

  • ಉದಯಪುರ ಟೈಲರ್‌ ಹತ್ಯೆ ಪ್ರಕರಣ – ಟೀಕೆ ಬೆನ್ನಲ್ಲೇ 32 ಪೊಲೀಸ್‌ ಅಧಿಕಾರಿಗಳ ವರ್ಗಾವಣೆ

    ಉದಯಪುರ ಟೈಲರ್‌ ಹತ್ಯೆ ಪ್ರಕರಣ – ಟೀಕೆ ಬೆನ್ನಲ್ಲೇ 32 ಪೊಲೀಸ್‌ ಅಧಿಕಾರಿಗಳ ವರ್ಗಾವಣೆ

    ಜೈಪುರ: ಟೈಲರ್ ಕನ್ಹಯ್ಯ ಲಾಲ್ ಅವರ ಭೀಕರ ಹತ್ಯೆಯ ಹಿನ್ನೆಲೆಯಲ್ಲಿ ಉದಯಪುರದ ಇನ್ಸ್‌ಪೆಕ್ಟರ್ ಜನರಲ್ ಮತ್ತು ಪೊಲೀಸ್ ಸೂಪರಿಂಟೆಂಡೆಂಟ್ ಸೇರಿದಂತೆ ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) 32 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

    ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಉಚ್ಚಾಟಿತ ನಾಯಕಿ ನೂಪುರ್ ಶರ್ಮಾರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಕನ್ಹಯ್ಯ ಲಾಲ್‌ಗೆ ಬೆದರಿಕೆ ಕರೆಗಳು ಬಂದಿದ್ದವು. ಈ ಕುರಿತು ದೂರು ನೀಡಿದರೂ ಭದ್ರತೆ ಒದಗಿಸಿಲ್ಲ ಉದಯಪುರ ಪೊಲೀಸರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದನ್ನೂ ಓದಿ: ಉದಯಪುರ ಕೊಲೆಗಡುಕರಿಂದ ಸರಣಿ ಸ್ಫೋಟಕ್ಕೆ ಸ್ಕೆಚ್!

    ಪ್ರವಾದಿ ಮೊಹಮ್ಮದ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್‌ ಶರ್ಮಾರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಾತ್ಮಕ ಪೋಸ್ಟ್‌ ಹಾಕಿಕೊಂಡಿದ್ದರು ಎಂಬ ಕಾರಣಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್‌ ಎಂಬುವವರನ್ನು ಇಬ್ಬರು ದುಷ್ಕರ್ಮಿಗಳು ಮಂಗಳವಾರ ಕತ್ತು ಸೀಳಿ ಹತ್ಯೆ ಮಾಡಿದ್ದರು. ಈ ಘಟನೆಯಿಂದ ರಾಜಸ್ಥಾನದ ಜತೆಗೆ ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ.

    ಆರೋಪಿ ರಿಯಾಜ್‌, ಕನ್ನಯ್ಯಲಾಲ್‌ ಅವರ ಕತ್ತನ್ನು ಕತ್ತರಿಸಿದ್ದು, ಮತ್ತೊಬ್ಬ ಆರೋಪಿ ಈ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಈ ಕೊಲೆಯನ್ನು ತಾವೇ ಮಾಡಿದ್ದಾಗಿ ಹೇಳಿರುವ ವಿಡಿಯೊಯೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಇಬ್ಬರನ್ನೂ ಬಂಧಿಸಲಾಗಿದೆ. ಇದನ್ನೂ ಓದಿ: ಕನ್ಹಯ್ಯ ಲಾಲ್ ಕುಟುಂಬಕ್ಕೆ ನೆರವು – 24 ಗಂಟೆಯಲ್ಲಿ ಬಂತು 1 ಕೋಟಿ

    ಹಂತಕರು ಪಾಕಿಸ್ತಾನ ಮೂಲದ ದಾವತ್-ಎ-ಇಸ್ಲಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು. ಒಬ್ಬ 2014 ರಲ್ಲಿ ಕರಾಚಿಗೆ ಹೋಗಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

    Live Tv

  • ಉದಯಪುರ ಕೊಲೆಗಡುಕರಿಂದ ಸರಣಿ ಸ್ಫೋಟಕ್ಕೆ ಸ್ಕೆಚ್!

    ಉದಯಪುರ ಕೊಲೆಗಡುಕರಿಂದ ಸರಣಿ ಸ್ಫೋಟಕ್ಕೆ ಸ್ಕೆಚ್!

    ಜೈಪುರ: ಉದಯಪುರ ಟೈಲರ್ ಕೊಲೆ ಪ್ರಕರಣದ ತನಿಖೆಯ ಆಳಕ್ಕೆ ಇಳಿದಂತೆಲ್ಲಾ ಸ್ಫೋಟಕ ಮತ್ತು ಆತಂಕಕಾರಿ ವಿಚಾರಗಳು ಬಯಲಾಗಿವೆ. ಈ ಕೊಲೆಗಡುಕರು ಮುಂದಿನ ವರ್ಷದ ಮಾರ್ಚ್ ಒಳಗಾಗಿ ಜೈಪುರದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸ್ಕೆಚ್ ಹಾಕಿದ್ದರು ಎಂಬ ಆತಂಕಕಾರಿ ವಿಚಾರ ಬಯಲಾಗಿದೆ.

    ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್ ಕನ್ಹಯ್ಯ ಲಾಲ್‌ನನ್ನು ಹತ್ಯೆ ಮಾಡಿದ್ದ ಪಾತಕಿಗಳು ಅರೆಸ್ಟ್ ಆಗದೇ ಹೋಗಿದ್ದಲ್ಲಿ ಇನ್ನೊಬ್ಬ ವ್ಯಾಪಾರಿಯ ಶಿರಚ್ಛೆದವಾಗುತ್ತಿತ್ತೇನೋ ಎಂಬ ಭೀತಿ ವ್ಯಕ್ತವಾಗಿದೆ. ಈ ಪಾತಕಿಗಳಿಗೆ ಐಸಿಸ್ ಪ್ರೇರಿತ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಸ್ಥೆ ದಾವತ್ ಇ ಇಸ್ಲಾಮಿಯ ಅಂಗಸಂಸ್ಥೆ ಅಲ್ ಸುಫಾ ಸಂಘಟನೆಯ ಜೊತೆ ಈ ಸಂಬಂಧ ಇತ್ತು ಎಂದು ವರದಿಯಾಗಿದೆ. ಇದನ್ನೂ ಓದಿ: ದೇಶೀಯ ಭಯೋತ್ಪಾದನೆಗೆ ಮದರಸಾಗಳೇ ಕಾರಣ – ಹಿಂದೂ ಜಾಗರಣಾ ವೇದಿಕೆ ಕಿಡಿ

    ಕೋಮು ದ್ವೇಷ ಹಬ್ಬಿಸುವುದರಲ್ಲಿ ಮಹ್ಮದ್ ಗೌಸ್ ಎಕ್ಸ್‌ಪರ್ಟ್ ಆಗಿದ್ದ ಎನ್ನಲಾಗಿದ್ದು, ಅವನೊಂದಿಗೆ ಜೊತೆಗೂಡಿ ಇನ್ನಷ್ಟು ಕ್ರೌರ್ಯ ಎಸಗಲು ರಿಯಾಜ್ ಸ್ಕೆಚ್ ಹಾಕಿದ್ದ ಎಂಬುದು ತಿಳಿದುಬಂದಿದೆ. ಮಹ್ಮದ್ ಗೌಸ್ ಪಾಕಿಸ್ತಾನದ ದಾವತ್ ಎ ಇಸ್ಲಾಮಿಯಲ್ಲಿ ಭಯೋತ್ಪಾದನೆಗೆ ಟ್ರೈನಿಂಗ್ ಪಡೆದಿದ್ದು, 2014ರಲ್ಲಿ ಜೋಧ್‌ಪುರದಿಂದ ರಾಂಚಿಗೆ 30 ಮಂದಿ ತೆರಳಿದ್ದರು ಎಂಬುದು ತಿಳಿದುಬಂದಿದೆ.

    ಇವರಿಬ್ಬರೂ ಪಾಕಿಸ್ತಾನದ ಸಂಘಟನೆ ಜೊತೆ ನಿರಂತರ ಸಂಪರ್ಕ ಹೊಂದಿದ್ದು, ಪಾಕಿಸ್ತಾನದ 8 ಫೋನ್ ನಂಬರ್‌ಗಳ ಜೊತೆ ಲಿಂಕ್ ಹೊಂದಿದ್ದರು. ರಿಯಾಜ್ ಸ್ಲೀಪರ್ ಸೆಲ್ ಅಲ್‌ಸುಫಾ ಮುಖ್ಯಸ್ಥನೂ ಆಗಿದ್ದು, ಟೋಂಕ್‌ನಲ್ಲಿ ಸಿಕ್ಕಿಬಿದ್ದ ಐಸಿಸ್ ಉಗ್ರ ಮುಜೀಬ್ ಜೊತೆಯೂ ಸಂಪರ್ಕ ಹೊಂದಿದ್ದರು. ಕನ್ಹಯ್ಯಾ ಹತ್ಯೆಗೆ ಐಸಿಸ್ ಉಗ್ರರ ಪ್ರೇರಣೆ ಇದ್ದು, ಪದೇ ಪದೇ ಐಸಿಸ್ ವೀಡಿಯೋಗಳನ್ನು ನೋಡುತ್ತಿದ್ದರು ಎನ್ನಲಾಗಿದೆ. ಇದೀಗ ಪಾತಕಿಗಳನ್ನು ದೆಹಲಿಗೆ ಕರೆತಂದು ಇನ್ನಷ್ಟು ಮಾಹಿತಿಯನ್ನು ಬಾಯಿಬಿಡಿಸಲು ಎನ್‌ಐಎ ಸಿದ್ಧತೆ ನಡೆಸಿದೆ. ಇದನ್ನೂ ಓದಿ: ಕನ್ಹಯ್ಯ ಲಾಲ್ ಕುಟುಂಬಕ್ಕೆ ನೆರವು – 24 ಗಂಟೆಯಲ್ಲಿ ಬಂತು 1 ಕೋಟಿ

    ಉದಯಪುರ ಘಟನೆಯನ್ನು ಪಾಕಿಸ್ತಾನದ ತೆಹ್ರೀಕ್ ಇ ಲಬ್ದೇಕ್ ಸೇರಿದಂತೆ ಹಲವು ಮತಾಂಧ ಸಂಸ್ಥೆಗಳು ಶ್ಲಾಘಿಸಿವೆ. ಧರ್ಮಾಂಧ ಹಂತಕರನ್ನು ಅಭಿನಂದಿಸಿವೆ. ಸರಣಿ ಟ್ವೀಟ್ ಮೂಲಕ ಖುಷಿ ಹಂಚಿಕೊಂಡಿವೆ. ಇದಕ್ಕೆ ಭಾರತದ ಹಿಂದೂ ಸಂಘಟನೆಗಳು ಭಾರೀ ಆಕ್ರೋಶ ವ್ಯಕ್ತಪಡಿಸಿವೆ.

    ಇಂದು ಕನ್ಹಯ್ಯ ಲಾಲ್ ನಿವಾಸಕ್ಕೆ ಭೇಟಿ ನೀಡಿದ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, 50 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಇತ್ತ ಬಿಜೆಪಿ ಕರೆಗೆ ಓಗೊಟ್ಟ ದೇಶದ ಜನತೆ 1 ಕೊಟಿ ರೂ.ಗೂ ಹೆಚ್ಚು ನೆರವನ್ನು ಸಂಗ್ರಹಿಸಿ, ಕನ್ಹಯ್ಯ ಕುಟುಂಬಕ್ಕೆ ನೀಡಿದೆ. ಜೈಪುರ, ಉದಯಪುರದಲ್ಲಿ ಭಾರೀ ಪ್ರತಿಭಟನೆಗಳು ಮುಂದುವರೆದಿವೆ.

    Live Tv

  • ದೇಶೀಯ ಭಯೋತ್ಪಾದನೆಗೆ ಮದರಸಾಗಳೇ ಕಾರಣ – ಹಿಂದೂ ಜಾಗರಣಾ ವೇದಿಕೆ ಕಿಡಿ

    ದೇಶೀಯ ಭಯೋತ್ಪಾದನೆಗೆ ಮದರಸಾಗಳೇ ಕಾರಣ – ಹಿಂದೂ ಜಾಗರಣಾ ವೇದಿಕೆ ಕಿಡಿ

    ಉಡುಪಿ: ದೇಶೀಯ ಭಯೋತ್ಪಾದನೆಗೆ ಮದರಸಾಗಳೇ ಕಾರಣ. ದೇಶಾದ್ಯಂತ ಮದರಸಗಳಿಗೆ ಲಗಾಮು ಹಾಕಿದರೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್‍ರಂತಹ ದುಷ್ಕೃತ್ಯಗಳನ್ನು ತಡೆಯಬಹುದು. ಮುಸ್ಲಿಂ ಭಯೋತ್ಪಾದನೆ ಸೃಷ್ಟಿಯಾಗಿರುವ ಕೇಂದ್ರವಾಗಿ ಮದರಸಗಳು ಪರಿವರ್ತನೆಯಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಮದರಾಸಗಳ ವಿರುದ್ಧ ವಾಗ್ದಾಳಿ ನಡೆಸಿದೆ.

    ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯನ್ನು ಖಂಡಿಸಿ, ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ಮಾಡಿದೆ. ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದರೂ ಸುಮಾರು ಎರಡು ಕಿಲೋಮೀಟರ್‌ಗಳ ಕಾಲ ನೂರಾರು ಹಿಂದೂ ಕಾರ್ಯಕರ್ತರು ಘಟನೆಯ ವಿರುದ್ಧ ಧಿಕ್ಕಾರ ಕೂಗುತ್ತಾ ಸಾಗಿದರು. ಬಿಜೆಪಿಯ ನೂಪುರ್ ಶರ್ಮ ಹೇಳಿಕೆಯನ್ನು ಬೆಂಬಲಿಸಿದ ಕಾರಣಕ್ಕೆ ಉದಯಪುರದಲ್ಲಿ ಕನ್ಹಯ್ಯ ಲಾಲ್ ಹತ್ಯೆಯಾಗಿದೆ. ಈ ಬೆಳವಣಿಗೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಕರಾವಳಿಯಲ್ಲಿ ಹಿಂದೂ ಜಾಗರಣ ವೇದಿಕೆ ಮುಂದಾಳತ್ವದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಬಿಜೆಪಿ ಪದಾಧಿಕಾರಿಗಳು ಪ್ರತಿಭಟನೆ ಮಾಡುವ ಮೂಲಕ ಘಟನೆಯನ್ನು ಖಂಡಿಸಿದರು. ಇದನ್ನೂ ಓದಿ: ಕನ್ಹಯ್ಯಾ ಲಾಲ್ ಕುಟುಂಬಕ್ಕೆ ನೆರವು – 24 ಗಂಟೆಯಲ್ಲಿ ಬಂತು 1 ಕೋಟಿ

    ಹಿಂದೂ ಜಾಗರಣ ವೇದಿಕೆ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ ಮಾತನಾಡಿ, ಇಸ್ಲಾಂನ ಭಯೋತ್ಪಾದನೆ ಮತ್ತು ಕ್ರೌರ್ಯತೆ ಮಿತಿಮೀರಿದ ಹಿನ್ನೆಲೆಯಲ್ಲಿ ನಡೆದ ಘಟನೆ ಇದು. ಹಿಂದೂ ಜಾಗರಣ ವೇದಿಕೆ ಇದನ್ನು ಖಂಡಿಸುತ್ತದೆ. ದೇಶಾದ್ಯಂತ ಮದರಸಗಳಿಗೆ ಲಗಾಮು ಹಾಕಿದರೆ ಇಂತಹ ದುಷ್ಕೃತ್ಯಗಳನ್ನು ತಡೆಯಬಹುದು. ಮುಸ್ಲಿಂ ಭಯೋತ್ಪಾದನೆ ಸೃಷ್ಟಿಯಾಗಿರುವ ಕೇಂದ್ರವಾಗಿ ಮದರಸಗಳು ಪರಿವರ್ತನೆಯಾಗಿದೆ. ಆ ಬಗ್ಗೆ ನಿಗಾವಹಿಸಬೇಕು. ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ, ಸಮಾಜದಲ್ಲಿ ಅನ್ಯಾಯ ಅಹಿತಕರ ಘಟನೆಗಳನ್ನು ಈ ಭಯೋತ್ಪಾದನಾ ಕೃತ್ಯವನ್ನು ತಡೆಗಟ್ಟಿ. ಸಾಧ್ಯವಾಗದಿದ್ದರೆ ಹಿಂದೂ ಸಮಾಜ ಇಂತಹ ದುಷ್ಟರನ್ನು ಮಟ್ಟಹಾಕುತ್ತದೆ. ಆರೋಪಿಗಳ ಬಂಧನ ಆಗಿದೆ. ಆದರೆ ಆರೋಪಿಗಳು ಎಲ್ಲದಕ್ಕೂ ಕೂಡ ಸಿದ್ಧತೆ ಮಾಡಿಕೊಂಡು ಈ ಕೃತ್ಯ ಎಸಗಿದ್ದು ಎಂಬುದು ಜಗಜ್ಜಾಹೀರಾಗಿದೆ. ಒಂದು ಕೊಲೆಯನ್ನು ಮೊಬೈಲ್ ಶೂಟಿಂಗ್ ಮಾಡಿ ಲೈವ್ ಮಾಡುವ ತನಕ ಮನಸ್ಥಿತಿ ಬಂದಿದೆ ಎಂದರೆ ಇದು ಭಯೋತ್ಪಾದನೆ ಹೊರತು ಮತ್ತೇನು ಅಲ್ಲ. ಕೊಲೆಯ ನಂತರ ಮತ್ತೊಂದು ವೀಡಿಯೋ ಮಾಡಿ ತಾವು ಮಾಡಿರುವ ಕೃತ್ಯವನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇಬ್ಬರಿಗೆ ಮರಣದಂಡನೆ ಕೊಟ್ಟರು ಅದಕ್ಕೂ ಅವರು ಸಿದ್ಧರಾಗಿರುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಗಲ್ಲು

    ಉದಯಪುರದ ಇಬ್ಬರೂ ಭಯೋತ್ಪಾದಕರಂತೆ ದೇಶಾದ್ಯಂತ ಭಯೋತ್ಪಾದಕರು ಹುಟ್ಟಿದ್ದಾರೆ. ಆರಂಭಿಕ ಹಂತದಿಂದಲೇ ಇಂತಹದ್ದನ್ನು ಕಿತ್ತು ಹಾಕುವ ಕೆಲಸ ಆಗಬೇಕಾಗಿದೆ. ಇಸ್ಲಾಮ್‌ನ ಮುಖ ಏನು ಎಂಬುದನ್ನು ತೋರಿಸಲು ಅವರಿಬ್ಬರು ಹೊರಟಿದ್ದಾರೆ. ಕ್ರೌರ್ಯದ ಮುಖಾಂತರ ಭಯವನ್ನು ಹುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಮುಸಲ್ಮಾನರು ಮತ್ತು ಇಸ್ಲಾಮ್‌ನ ಬಗ್ಗೆ ಯಾರಾದರೂ ಮಾತನಾಡಿದರೆ ಇದೇ ಗತಿ ಎಂಬ ಸಂದೇಶವನ್ನು ಕೊಡಲು ಹೊರಟಿದ್ದಾರೆ. ಇಂತಹ ಘಟನೆಗಳು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಇದೆ. ಭಾರತದಲ್ಲಿ ಇದು ಪಸರಿಸಲು ಶುರುವಾಗಿದೆ. ಇಂತಹ ಶಕ್ತಿಗಳನ್ನು ಪ್ರಾರಂಭದಲ್ಲೇ ಮಟ್ಟಹಾಕಬೇಕು ಎಂದರು.

    ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆ ಅಜ್ಜರಕಾಡು ಹುತಾತ್ಮ ವೇದಿಕೆಯ ಬಳಿ ಸಮಾಪನಗೊಂಡಿತು ಸಭೆಯಲ್ಲಿ ಘಟನೆಯನ್ನು ಖಂಡಿಸಲಾಯಿತು. ಇಂತಹ ಘಟನೆ ಮರುಕಳಿಸುವಂತೆ ಕೇಂದ್ರ ಮತ್ತು ಆಯಾಯ ರಾಜ್ಯ ಸರ್ಕಾರಗಳು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

    Live Tv

  • ನಾವು ಕೈಗೆ ಬಳೆ ತೊಟ್ಟಿಲ್ಲ, ಸೇಡಿಗೆ ಸೇಡು ಮುಯ್ಯಿಗೆ ಮುಯ್ಯಿ ಕೊಡಬೇಕು: ರೇಣುಕಾಚಾರ್ಯ ಕಿಡಿ

    ನಾವು ಕೈಗೆ ಬಳೆ ತೊಟ್ಟಿಲ್ಲ, ಸೇಡಿಗೆ ಸೇಡು ಮುಯ್ಯಿಗೆ ಮುಯ್ಯಿ ಕೊಡಬೇಕು: ರೇಣುಕಾಚಾರ್ಯ ಕಿಡಿ

    ದಾವಣಗೆರೆ: ನಾವು ಕೈಗೆ ಬಳೆ ಹಾಕಿಕೊಂಡಿಲ್ಲ. ಸೇಡಿಗೆ ಸೇಡು ಮುಯ್ಯಿಗೆ ಮುಯ್ಯಿ, ಯಾರು ಹಿಂದೂಗಳ ಮೇಲೆ ದಾಳಿ ಮಾಡುತ್ತಾರೆ ನಾವು ಕೂಡ ಅಂತಹವರನ್ನು ಕತ್ತು ಸೀಳಿ ಪ್ರತ್ಯೋತ್ತರ ಕೊಟ್ಟಗ ಮಾತ್ರ ಕನ್ಹಯ್ಯ ಲಾಲ್‌ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕನ್ಹಯ್ಯ ಲಾಲ್ ಹತ್ಯೆ ಮಾಡಿದರನ್ನು ಗುಂಡಿಟ್ಟು ಕೊಳ್ಳಬೇಕು. ಆಗ ಮಾತ್ರ ಕನ್ಹಯ್ಯ ಲಾಲ್ ಆತ್ಮಕ್ಕೆ ಶಾಂತಿ ಸಿಗುತ್ತದೆ. ಆತನನ್ನು ಹೇಗೆ ಕೊಲೆ ಮಾಡಿದ್ರೋ ಹಾಗೇ ಅವರನ್ನು ಕೊಲ್ಲಬೇಕು. ಆಗ ಮಾತ್ರ ಮುಯ್ಯಿಗೆ ಮುಯ್ಯಿ ಆಗುತ್ತದೆ. ಹಿಂದೂಗಳ ಹತ್ಯೆ ಮಾಡಿದವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮದರಸಾಗಳಲ್ಲಿ ಮಕ್ಕಳಿಗೆ ರುಂಡ ಕತ್ತರಿಸುವ ಕಾನೂನನ್ನೇ ಬೋಧಿಸಲಾಗುತ್ತಿದೆ – ಆರಿಫ್ ಖಾನ್ ಕಿಡಿ

    ಇದೇನು ಪಾಕಿಸ್ತಾನ ಅಂದುಕೊಂಡಿದ್ದಾರಾ? ನಮ್ಮ ದೇವಸ್ಥಾನಗಳಲ್ಲಿ ತೀರ್ಥ ಪ್ರಸಾದ ನೀಡುತ್ತಾರೆ. ಆದ್ರೆ ಕೆಲ ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಇಟ್ಟಿದ್ದಾರೆ. ಮದರಸಾಗಳಲ್ಲಿ ಏನು ಬೋಧನೆ ಮಾಡುತ್ತಿದ್ದಾರೆ. ಭಾರತ ಮಾತೆ ಬಗ್ಗೆ ಮದರಸಗಳಲ್ಲಿ ಹೇಳಲ್ಲ. ಇಲ್ಲಿ ನಮಗೆ ಸಹನೆ ಅತಿಯಾಗಿ ಬೇಡ. ಸೇಡಿಗೆ ಸೇಡು ಎಂದು ನಾವು ನಿರ್ಧಾರ ಮಾಡಬೇಕು. ಕನ್ನಯ್ಯ ಲಾಲ್ ಅಪ್ಪಟ ಹಿಂದೂವಾದಿ. ಆತ ಪೋಸ್ಟ್ ಶೇರ್ ಮಾಡಿದ್ದಕ್ಕೆ ಕತ್ತು ಸೀಳಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಮ್ಕಿ ಹಾಕಿದ್ದಾರೆ. ಮೋದಿಗೆ ಧಮ್ಕಿ ಹಾಕ್ತಾರೆ ಎಂದರೆ ಈ ನನ್ ಮಕ್ಳಿಗೆ ತಾಖತ್ ಎಷ್ಟು ಇರಬೇಕು ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಈ ಘಟನೆಗೆ ನೇರ ಹೊಣೆ. ಜೀವ ಬೆದರಿಕೆ ಎಂದು ಹೇಳಿ ಮನವಿ ಮಾಡಿದರೂ ಗಮನ ಹರಿಸಲಿಲ್ಲ. ಈ ಸಾವಿಗೆ ಕಾಂಗ್ರೆಸ್ ಸರ್ಕಾರವೇ ನೇರಾ ಕಾರಣ. ಅ ಸರ್ಕಾರವನ್ನು ವಜಾ ಮಾಡಬೇಕು, ರಾಷ್ಟ್ರಪತಿ ಅಡಳಿತ ತರಬೇಕು ಅಲ್ಲಿರುವ ಹಿಂದೂಗಳಿಗೆ ರಕ್ಷಣೆ ನೀಡಬೇಕು ಎಂದು ಬೆಂಬಲಿಸುತ್ತಿದ್ದಾರೆ. ಇದನ್ನೂ ಓದಿ: ಉದಯಪುರ ಟೈಲರ್‌ ಹತ್ಯೆ ಖಂಡಿಸಿ ರಾಜ್ಯದಲ್ಲಿ ಶುರುವಾಯ್ತು ನನ್ನ ಕತ್ತು ಸೀಳಬೇಡಿ ಅಭಿಯಾನ

    ಎಲ್ಲಾ ಮುಸ್ಲಿಮರು ದೇಶದ್ರೋಹಿಗಳು ಅಲ್ಲ. ಅಲ್ಪಸಂಖ್ಯಾತ ಧರ್ಮಗುರುಗಳು ಇಂತಹ ಘಟನೆಯನ್ನು ಖಂಡಿಸಬೇಕು. ಆದರೆ ಅದನ್ನು ಖಂಡಿಸುತ್ತಿಲ್ಲ. ಅದೇ ಒಬ್ಬ ಧಾರ್ಮಿಕ ಗುರು ಪ್ರಚೋದನೆಯಿಂದ ಹುಬ್ಬಳ್ಳಿಯಲ್ಲಿ ಗಲಭೆ ಆಯ್ತು. ಮದರಸಗಳಲ್ಲಿ ರಾಷ್ಟ್ರದ್ರೋಹದ ಮಾತುಗಳನ್ನಾಡುತ್ತಾರೆ. ಸಿದ್ದರಾಮಯ್ಯನವರ ಹೆಸರಿನಲ್ಲಿ ಸಿದ್ದರಾಮ ಇದೆ. ಯಾಕೇ ಈ ಪ್ರಕರಣವನ್ನು ಸಿದ್ದರಾಮಯ್ಯ ಖಂಡಿಸಲಿಲ್ಲ. ಕೇವಲ ಸಂತಾಪ ಸೂಚಿಸಿದರೆ ಸಾಕಾ. ಕಾಂಗ್ರೆಸ್‍ನವರು ಅಲ್ಪಸಂಖ್ಯಾತರ ಮತಗಳ ಓಲೈಕೆಗಾಗಿ ಅವರನ್ನು ಬೆಂಬಲಿಸುತ್ತಿದ್ದಾರೆ. ನನಗೂ ಕೊಲೆ ಬೆದರಿಕೆ ಬಂತು ನಾನು ಹೆದರಿದ್ನಾ, ನಾನು ಹೇಡಿ ಅಲ್ಲ. ಯಾರು ಹಿಂದೂಗಳ ಕತ್ತು ಸೀಳುತ್ತಾರೋ ಅವರಿಗೆ ನಾವು ಅದೇ ರೀತಿ ಪ್ರತ್ಯುತ್ತರ ಕೊಟ್ಟಾಗ ಮಾತ್ರ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದಿದ್ದಾರೆ.

    Live Tv

  • ಉದಯ್‌ಪುರ ಬರ್ಬರ ಹತ್ಯೆ ಎನ್‌ಐಎ ಹೆಗಲಿಗೆ – ಪಾತಕಿಗಳಿಗೆ ಐಸಿಸ್‌ ಲಿಂಕ್‌?

    ಉದಯ್‌ಪುರ ಬರ್ಬರ ಹತ್ಯೆ ಎನ್‌ಐಎ ಹೆಗಲಿಗೆ – ಪಾತಕಿಗಳಿಗೆ ಐಸಿಸ್‌ ಲಿಂಕ್‌?

    ನವದೆಹಲಿ: ಉದಯ್‌ಪುರದ ಟೈಲರ್‌ ಕನ್ಹಯ್ಯ ಲಾಲ್‌ ಬರ್ಬರ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ(ರಾಷ್ಟ್ರೀಯ ತನಿಖಾ ದಳ) ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಪ್ರಕಟಿಸಿದೆ.

    ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಐಪಿಸಿ ವಿವಿಧ ಸೆಕ್ಷನ್‌ ಅಡಿಯಲ್ಲಿ ಎನ್‌ಐಎ ಈಗ ಪ್ರಕರಣ ದಾಖಲಿಸಿಕೊಂಡಿದೆ. ಈ ಕೃತ್ಯದ ಹಿಂದೆ ಸಂಘಟನೆ ಮತ್ತು ಅಂತಾರಾಷ್ಟ್ರೀಯ ಕೈವಾಡ ಇರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಎನ್‌ಐಎ ತನಿಖೆಗೆ ಆದೇಶಿಸಲಾಗಿದೆ.

    ಅನುಮಾನ ಯಾಕೆ?
    ಇತ್ತಿಚೆಗೆ ಐಸಿಸ್ ಜೊತೆಗೆ ನಂಟು ಹೊಂದಿದ್ದ ಮುಜೀಬ್‍ ಎಂಬಾತನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿತ್ತು. ಈಗ ಹತ್ಯೆ ರೀತಿಯನ್ನು ಕಂಡು ಮುಹಮ್ಮದ್ ರಿಯಾಜ್ ಅಟ್ಟಾರಿ, ಮುಹಮ್ಮದ್ ಗೌಸ್ ಮುಜೀಬ್ ಗುಂಪಿನ ಸದಸ್ಯರು ಆಗಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.  ಇದನ್ನೂ ಓದಿ: ಹತ್ಯೆಯಾದ ಟೈಲರ್‌ಗೆ 10 ದಿನಗಳ ಹಿಂದೆಯೇ ಬಂದಿತ್ತು ಬೆದರಿಕೆ ಕರೆ!

    ಬರೇಲ್ವಿ ಮೂಲಕ ಮುಹಮ್ಮದ್ ರಿಯಾಜ್ ತನ್ನ ಫೇಸ್‍ಬುಕ್ ನಲ್ಲಿ ವಿವಾದಿತ ಇಸ್ಲಾಮಿಕ್ ಸ್ಟೇಟ್ ಪೇಜ್‍ಗಳನ್ನು ಫಾಲೋ ಮಾಡುತ್ತಿದ್ದ. ಅಷ್ಟೇ ಅಲ್ಲದೇ ಐಸಿಸ್‌ ಪರವಾಗಿದ್ದ ಬರಹಗಳನ್ನು ಪೋಸ್ಟ್‌ ಮಾಡುತ್ತಿದ್ದ.

    ಹತ್ಯೆ ಬಳಿಕ ಮಾಡಿರುವ ವಿಡಿಯೋದಲ್ಲಿ ಐಸಿಸ್‌ ಉಗ್ರರು ಬಳಸುವ ವಿಶಿಷ್ಟವಾದ ಬೆರಳಿನ ಸಿಗ್ನಲ್ ತೋರಿಸಿದ್ದಾನೆ. ಈ ಹಿಂದೆ ಐಸಿಸ್‌ ಉಗ್ರರು ಕತ್ತು ಸೀಳಿ ಹತ್ಯೆ ಮಾಡುತ್ತಿದ್ದರು. ಅದೇ ರೀತಿಯಾಗಿ ಈ ಕೃತ್ಯ ಮಾಡಿರುವುದರಿಂದ ಉಗ್ರ ಸಂಘಟನೆಯ ನಂಟಿನ ಬಗ್ಗೆ ಅನುಮಾನ ಎದ್ದಿದೆ.

    ಆರೋಪಿಗಳು ಖಂಜಿಪೀರ್‌ನ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಭಿಲ್ವಾರಾ ಮೂಲದ ರಿಯಾಜ್, ಉದಯಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಗೌಸ್ ಮೊಹಮ್ಮದ್ ರಾಜಸ್ಮಾಂಡ್‍ನ ಭೀಮಾದವನು. ಈ ಇಬ್ಬರೂ ಆರೋಪಿಗಳು ಪಾಕಿಸ್ತಾನ ಮೂಲದ ತೀವ್ರ ಮುಸ್ಲಿಂ ಮೂಲಭೂತವಾದಿ ಸಂಘಟನೆಯಾದ ದಾವತ್-ಎ-ಇಸ್ಲಾಮಿಯೊಂದಿಗೆ ಸಂಬಂಧ ಹೊಂದಿದ್ದರು ಎಂಬ ಆರೋಪ ಬಂದಿದೆ.

    Live Tv