Tag: ಕನ್ಹಯ್ಯಾ ಲಾಲ್

  • ಕನ್ಹಯ್ಯ ಲಾಲ್ ಕುಟುಂಬಕ್ಕೆ ನೆರವು – 24 ಗಂಟೆಯಲ್ಲಿ ಬಂತು 1 ಕೋಟಿ

    ಕನ್ಹಯ್ಯ ಲಾಲ್ ಕುಟುಂಬಕ್ಕೆ ನೆರವು – 24 ಗಂಟೆಯಲ್ಲಿ ಬಂತು 1 ಕೋಟಿ

    ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಹಾಡಹಗಲೇ ಹತ್ಯೆಯಾದ ಕನ್ಹಯ್ಯ ಲಾಲ್ ಅವರ ಕುಟುಂಬಕ್ಕೆ ಸಹಾಯ ಮಾಡಲು ಬಿಜೆಪಿ ನಾಯಕ ಕಪಿಲ್ ಮಿಶ್ರಾ ನಿಧಿ ಸಂಗ್ರಹ ಮಾಡಿದ್ದಾರೆ. ದೇಶಾದ್ಯಂತ ಹಲವು ಮಂದಿ ದೇಣಿಗೆ ನೀಡಿದ್ದು 1 ಕೋಟಿ ರೂ. ಗೂ ಹೆಚ್ಚು ಹಣ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಕಪಿಲ್ ಮಿಶ್ರಾ, 24 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ 1 ಕೋಟಿ ರೂ. ಗೂ ಹೆಚ್ಚು ಹಣ ಸಂಗ್ರಹವಾಗಿದೆ. ಕನ್ಹಯ್ಯ ಹತ್ಯೆಯಿಂದ ನಮ್ಮ ಕಣ್ಣೀರನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ನಾವೆಲ್ಲಾ ಹಿಂದೂಗಳು ಕನ್ಹಯ್ಯಾ ಅವರ ಕುಟುಂಬದ ಪರವಾಗಿ ನಿಲ್ಲುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟೈಲರ್ ಶಿರಚ್ಛೇದನ ಸಣ್ಣ ವಿಷಯ, ಇದರಲ್ಲೂ ಬಿಜೆಪಿ ಪಾಕಿಸ್ತಾನದ ಕೈವಾಡ ಹುಡುಕಲು ಹೊರಟಿದೆ: ಟಿಕಾಯತ್

    ಇದರೊಂದಿಗೆ ಹನ್ಹಯ್ಯ ಲಾಲ್ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದ, ಗಂಭೀರವಾಗಿ ಗಾಯಗೊಂಡು ಮಹಾರಾಣಾ ಭೋಪಾಲ್ ಸಿಂಗ್ ಆಸ್ಪತ್ರೆಗೆ  ದಾಖಲಾಗಿರುವ ಈಶ್ವರ್ ಸಿಂಗ್ ಅವರಿಗೂ 25 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟೈಲರ್ ಹತ್ಯೆಗೆ ಮುಸ್ಲಿಂ ಯುವಕರು ಬಳಸಿದ ಆಯುಧ ತಯಾರಾಗಿದ್ದೆಲ್ಲಿ? – ರಿಹರ್ಸಲ್ ಹೇಗಿತ್ತು ಗೊತ್ತಾ?

    ಕನ್ಹಯ್ಯ ಲಾಲ್ ಹತ್ಯೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಲು ಪ್ರಾರಂಭವಾಗುತ್ತಲೇ ರಾಜಸ್ಥಾನದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಭೆ ಕರೆದಿದ್ದು, ಇದನ್ನು ಬಿಜೆಪಿ ಬಹಿಷ್ಕರಿಸಿದೆ. ಗುರುವಾರ ರಾಜಸ್ಥಾನದಲ್ಲಿ ಬಂದ್ ಘೋಷಿಸಲಾಗಿದೆ. ಇಂಟರ್‌ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿದ್ದು, ರಾಜ್ಯದ ಹಲವು ಪ್ರದೇಶಗಳಲ್ಲಿ ಪೊಲೀಸ್ ಪಡೆಗಳ ನಿಯೋಜನೆಯನ್ನು ಹೆಚ್ಚಿಸಿದೆ.

    Live Tv

  • ಇಸ್ ಎನಿವನ್ ಲಿಸನಿಂಗ್ – Hindu Lives Matter ಪ್ಲೇ ಕಾರ್ಡ್ ಹಿಡಿದ ಪ್ರಣಿತಾ

    ಇಸ್ ಎನಿವನ್ ಲಿಸನಿಂಗ್ – Hindu Lives Matter ಪ್ಲೇ ಕಾರ್ಡ್ ಹಿಡಿದ ಪ್ರಣಿತಾ

    ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ನಡೆದ ಹಿಂದೂ ಟೈಲರ್‌ನ ಭೀಕರ ಹತ್ಯೆಗೆ ದೇಶಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಉದಯಪುರದ ಘಟನೆ ನಡೆಯುತ್ತಿದ್ದಂತೆ ಹಲವೆಡೆ ಜನರು ಪ್ರತಿಭಟನೆಯನ್ನು ನಡೆಸುತ್ತಿದ್ದು, ಹಲವರು ಭಿನ್ನ ವಿಭಿನ್ನ ರೀತಿಯಲ್ಲಿ ಅಭಿಯಾನವನ್ನು ಮಾಡುತ್ತಿದ್ದಾರೆ. ಬಹುಭಾಷಾ ನಟಿ ಪ್ರಣಿತಾ ಸುಭಾಶ್ ಕೂಡಾ ಹಿಂದೂ ಲಿವ್ಸ್ ಮ್ಯಾಟರ್(ಹಿಂದೂ ಜೀವ ಮುಖ್ಯ) ಎಂದು ಬರೆದಿರುವ ಫಲಕ ಹಿಡಿದುಕೊಂಡು ಕೃತ್ಯವನ್ನು ಖಂಡಿಸಿದ್ದಾರೆ. ಇದನ್ನೂ ಓದಿ: ಇಡಿ ವಿಚಾರಣೆಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್: ‘ವಿಕ್ರಾಂತ್ ರೋಣ’ ಪ್ರಚಾರಕ್ಕೆ ಗೈರಾದ ನಟಿ

    ಇಸ್ ಎನಿವನ್ ಲಿಸನಿಂಗ್?(ಯಾರಾದರೂ ಕೇಳಿಸಿಕೊಳ್ಳುತ್ತಿದ್ದೀರಾ?) ಎಂಬ ಕ್ಯಾಪ್ಶನ್‌ನೊಂದಿಗೆ ಫೋಟೋವೊಂದನ್ನು ಪೋಸ್ಟ್ ಮಾಡಿರುವ ಪ್ರಣಿತಾ ಅದರಲ್ಲಿ ಹಿಂದೂ ಲಿವ್ಸ್ ಮ್ಯಾಟರ್ ಎಂದು ಬರೆದಿರುವ ಫಲಕವನ್ನು ಹಿಡಿದಿದ್ದಾರೆ. ಈ ಮೂಲಕ ಮತಾಂಧತೆಗೆ ಹಿಂದೂ ಜೀವಗಳ ಬಲಿ ಕೊಡಬೇಡಿ ಎಂದು ಸಂದೇಶ ಸಾರಿದ್ದಾರೆ. ಇದನ್ನೂ ಓದಿ: ಉದಯಪುರ ಟೈಲರ್‌ ಹತ್ಯೆ ಖಂಡಿಸಿ ರಾಜ್ಯದಲ್ಲಿ ಶುರುವಾಯ್ತು ನನ್ನ ಕತ್ತು ಸೀಳಬೇಡಿ ಅಭಿಯಾನ

    ಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ ನಂಜನಗೂಡಿನಲ್ಲೂ ಕೆಲ ವ್ಯಾಪಾರಿಗಳು ನನ್ನ ಕತ್ತು ಸೀಳಬೇಡಿ ಎಂದು ಬೋರ್ಡ್ ಹಿಡಿದುಕೊಂಡು ಅಭಿಯಾನ ಪ್ರಾರಂಭಿಸಿದ್ದಾರೆ. ನಾನು ಸತ್ಯ ಹೇಳಲ್ಲ. ಹೇಳಿದವರ ಪರ ನಿಲ್ಲುವುದೂ ಇಲ್ಲ. ನನ್ನ ಕುಟುಂಬ ನನ್ನನ್ನೇ ನಂಬಿಕೊಂಡಿದೆ. ನನ್ನ ಕತ್ತನ್ನು ಸೀಳಬೇಡಿ ಎಂದು ಪೋಸ್ಟರ್ ಹಿಡಿದುಕೊಂಡು ಹಲವರು ಟೈಲರ್ ಹತ್ಯೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

    Live Tv

  • ಉದಯಪುರ ಹತ್ಯೆ: ಆರೋಪಿಗಳಿಗೆ ಪಾಕ್ ಮೂಲದ ಉಗ್ರ ಸಂಘಟನೆ ಜೊತೆ ನಂಟು

    ಉದಯಪುರ ಹತ್ಯೆ: ಆರೋಪಿಗಳಿಗೆ ಪಾಕ್ ಮೂಲದ ಉಗ್ರ ಸಂಘಟನೆ ಜೊತೆ ನಂಟು

    ಜೈಪುರ: ಮಂಗಳವಾರ ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್ ಕನ್ಹಯ್ಯಾ ಲಾಲ್ ಅವರನ್ನು ಹತ್ಯೆ ಮಾಡಿದ ಇಬ್ಬರು ವ್ಯಕ್ತಿಗಳು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ ಎಂದು ಹೇಳಲಾಗಿದೆ.

    ಉದಯಪುರ ಹತ್ಯೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರ ಹೇಳಿಕೆಗಳನ್ನು ಬೆಂಬಲಿಸಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ ಹಿನ್ನೆಲೆ ಕನ್ಹಯ್ಯಾ ಲಾಲ್ ಹತ್ಯೆ ಮಾಡಲಾಗಿದೆ ಎಂದು ಆರೋಪಿಗಳೇ ರಾಜಾರೋಷವಾಗಿ ಹೇಳಿಕೊಂಡಿದ್ದರು. ಕನ್ಹಯ್ಯಾ ಲಾಲ್ ಅವರನ್ನು ಕೊಂದ ಹಂತಕರು ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಅಹ್ಮದ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ನಾನು ಉದಯಪುರ ಘಟನೆಯನ್ನು ಖಂಡಿಸುತ್ತೇನೆ, ಆರೋಪಿಗಳ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳಿ: ಓವೈಸಿ

    ತನಿಖೆಯಲ್ಲಿ ತಿಳಿದಿದ್ದೇನು?
    ಆರೋಪಿಗಳಾದ ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಅಹ್ಮದ್ ಅವರನ್ನು ಮಂಗಳವಾರ ರಾತ್ರಿ ರಾಜ್‍ಸಮಂದ್ ಜಿಲ್ಲೆಯ ಭೀಮ್ ಪ್ರದೇಶದಲ್ಲಿ ಬಂಧಿಸಲಾಗಿದೆ.

    ದಾವತ್-ಎ-ಇಸ್ಲಾಮಿಯೊಂದಿಗೆ ಸಂಬಂಧ
    ಆರೋಪಿಗಳು ಖಂಜಿಪೀರ್‍ನ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಭಿಲ್ವಾರಾ ಮೂಲದ ರಿಯಾಜ್, ಉದಯಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಗೌಸ್ ಮೊಹಮ್ಮದ್ ರಾಜಸ್ಮಾಂಡ್‍ನ ಭೀಮಾದವನು. ಮೂಲಗಳ ಪ್ರಕಾರ, ಇಬ್ಬರೂ ಆರೋಪಿಗಳು ಪಾಕಿಸ್ತಾನ ಮೂಲದ ತೀವ್ರ ಮುಸ್ಲಿಂ ಮೂಲಭೂತವಾದಿ ಸಂಘಟನೆಯಾದ ದಾವತ್-ಎ-ಇಸ್ಲಾಮಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಟೈಲರ್‌ ಹತ್ಯೆ ಖಂಡಿಸಿ ಭುಗಿಲೆದ್ದ ಪ್ರತಿಭಟನೆ – ರಾಜಸ್ಥಾನದಲ್ಲಿ 1 ತಿಂಗಳು 144 ಸೆಕ್ಷನ್‌ ಜಾರಿ

    ರಿಯಾಜ್ ಎಂಬಾತನ ಸೋದರಳಿಯ ಈ ಕುರಿತು ಮಾತನಾಡಿದ್ದು, ನನ್ನ ಚಿಕ್ಕಪ್ಪ ಮಾಡಿದ್ದು ಖಂಡನೀಯ. ಶಾಂತಿ ಕದಡಲು ಯತ್ನಿಸಿದರು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾನೆ.

    ಆರೋಪಿಗಳಿಬ್ಬರೂ ಪ್ರಸ್ತುತ ರಾಜಸ್ಥಾನದ ರಾಜ್‍ಸಮಂದ್ ಜಿಲ್ಲೆಯ ಚಾರ್ಭುಜ ಪೊಲೀಸ್ ಠಾಣೆಯ ಲಾಕ್‍ಅಪ್‍ನಲ್ಲಿದ್ದಾರೆ. ಇದನ್ನೂ ಓದಿ: ಟೈಲರ್ ಹತ್ಯೆ ಬೆನ್ನಲ್ಲೆ ನವೀನ್ ಕುಮಾರ್ ಜಿಂದಾಲ್‌ಗೆ ಕೊಲೆ ಬೆದರಿಕೆ

    ಮೋದಿಗೆ ಬೆದರಿಕೆ
    ಹತ್ಯೆ ವೀಡಿಯೋ ನಂತರ ಮತ್ತೊಂದು ವೀಡಿಯೋ ಶೇರ್ ಮಾಡಿದ ಈ ಹಂತರು ಪ್ರಧಾನಿ ನರೇಂದ್ರ ಮೋದಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಈ ವೀಡಿಯೋವನ್ನು ಜೂನ್ 17 ರಂದು ರೆಕಾರ್ಡ್ ಮಾಡಲಾಗಿದ್ದು, ಮಂಗಳವಾರ ಟೈಲರ್ ಕೊಲೆಯ ನಂತರ ರಿಲೀಸ್ ಮಾಡಿದ್ದಾರೆ. ಆ ವೀಡಿಯೋದಲ್ಲಿರುವ ಇಬ್ಬರಲ್ಲಿ ಒಬ್ಬ ಮಂಗಳವಾರ ಉದಯಪುರದಲ್ಲಿ ಮಾಡಿದ ಕೃತ್ಯದ ಕಾರಣವನ್ನು ವಿವರಿಸಿದ್ದಾನೆ.

    Live Tv