Tag: ಕನ್ನೂರು

  • ವಿಜಯಪುರ | ಹಳೆ ವೈಷಮ್ಯಕ್ಕೆ ಡಬಲ್ ಮರ್ಡರ್ – ಪರಾರಿಯಾಗ್ತಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿ ಅರೆಸ್ಟ್

    ವಿಜಯಪುರ | ಹಳೆ ವೈಷಮ್ಯಕ್ಕೆ ಡಬಲ್ ಮರ್ಡರ್ – ಪರಾರಿಯಾಗ್ತಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿ ಅರೆಸ್ಟ್

    ವಿಜಯಪುರ: ಜಿಲ್ಲೆಯ ಕನ್ನೂರು ಗ್ರಾಮದಲ್ಲಿ ಕಲ್ಲಿನಿಂದ ಜಜ್ಜಿ ಇಬ್ಬರು ಯುವಕರನ್ನ ಬರ್ಬರ ಹತ್ಯೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ವಿಜಯಪುರ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

    ಅಕ್ಷಯ್ ಜುಲಜುಲೆ ಬಂಧಿತ ಆರೋಪಿಯಾಗಿದ್ದು, ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.ಇದನ್ನೂ ಓದಿ: ವಿಜಯಪುರ | ಹಳೆಯ ವೈಷಮ್ಯಕ್ಕೆ ಜೋಡಿ ಕೊಲೆ – ಇಬ್ಬರು ಯುವಕರ ಬರ್ಬರ ಹತ್ಯೆ

    ಭಾನುವಾರ (ಅ.12) ರಾತ್ರಿ ವಿಜಯಪುರ ಜಿಲ್ಲೆಯ ಕನ್ನೂರು ಗ್ರಾಮದಲ್ಲಿ ಸಾಗರ ಬೆಳುಂಡಗಿ (25) ಹಾಗೂ ಇಸಾಕ್ ಖುರೇಷಿ (24) ಎಂಬ ಇಬ್ಬರ ಹತ್ಯೆ ನಡೆದಿತ್ತು. ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗಿಳಿದ ಪೊಲೀಸರು 5 ಜನ ಆರೋಪಿಗಳನ್ನ ಸೆರೆಹಿಡಿಯಲು ಕನ್ನೂರು ಗ್ರಾಮದ ಹೊರವಲಯಕ್ಕೆ ತೆರಳಿದ್ದರು. ಈ ವೇಳೆ ಪ್ರಕರಣದ ಪ್ರಮುಖ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ಅರೆಸ್ಟ್ ಮಾಡಿದ್ದಾರೆ.

    ಈ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಸದ್ಯ ಆರೋಪಿ ಹಾಗೂ ಸಿಬ್ಬಂದಿಯನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

    ಇನ್ನೂ 2023ರಲ್ಲಿ ಈರಣ್ಣಗೌಡ ಎಂಬಾತನ ಮೇಲೆ ಈಗ ಮೃತ ಸಾಗರ್ ಹಾಗೂ ಇಸಾಕ್ ಟೈಲ್ಸ್‌ನಿಂದ ಹಲ್ಲೆ ನಡೆಸಿದ್ದರು. ಈರಣ್ಣಗೌಡ 8 ತಿಂಗಳುಗಳ ಕಾಲ ಚಿಕಿತ್ಸೆ ಪಡೆದು ನಂತರ ಮೃತಪಟ್ಟಿದ್ದ. ಇದೇ ದ್ವೇಷದಿಂದಲೇ ಸದ್ಯ ಅಕ್ಷಯ್ ಹಾಗೂ ಈರಣ್ಣಗೌಡ ಮಕ್ಕಳು ಸೇರಿ ಸಾಗರ್, ಇಸಾಕ್‌ನ್ನು ಹತ್ಯೆ ಮಾಡಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಹಾಸ್ಯ ಮಾಂತ್ರಿಕ ರಾಜು ತಾಳಿಕೋಟೆ – ಪಾರ್ಥಿವ ಶರೀರದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಸಹ ಕಲಾವಿದರು

  • PUBLiC TV Impact; ಸರ್ಕಾರದ ಉಚಿತ ಪುಸ್ತಕಗಳು ಬೀದಿಪಾಲು – ಶಾಲಾ ಮುಖ್ಯೋಪಾಧ್ಯಾಯ ಅಮಾನತು

    PUBLiC TV Impact; ಸರ್ಕಾರದ ಉಚಿತ ಪುಸ್ತಕಗಳು ಬೀದಿಪಾಲು – ಶಾಲಾ ಮುಖ್ಯೋಪಾಧ್ಯಾಯ ಅಮಾನತು

    ವಿಜಯಪುರ: ತಾಲೂಕಿನ ಕನ್ನೂರು (Kannur) ಗ್ರಾಮದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸರ್ಕಾರದ ಉಚಿತ ಪುಸ್ತಕಗಳನ್ನು ಬೀದಿಪಾಲು ಮಾಡಿ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯೋಪಾಧ್ಯಾಯರನ್ನು (Headmaster) ಅಮಾನತು ಮಾಡಲಾಗಿದೆ.

    ಘಟನೆಯ ಬಗ್ಗೆ ನಿಮ್ಮ ‘ಪಬ್ಲಿಕ್ ಟಿವಿ’ ವಿಸ್ತೃತ ವರದಿಯನ್ನು ಬಿತ್ತರಿಸಿತ್ತು. ವರದಿಯ 12 ಗಂಟೆಯಲ್ಲೇ ಶಾಲೆಯ ಮುಖ್ಯೋಪಾಧ್ಯಾಯ ವಿಜಯಕುಮಾರ ಅವತಾಡೆಯನ್ನು ಅಮಾನತು ಮಾಡಲು ಡಿಡಿಪಿಐ ಟಿಎಸ್ ಕೋಲಾರ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ನಿಯಂತ್ರಣಕ್ಕೆ ಬಂದ ಕಾಡ್ಗಿಚ್ಚು

    ಇನ್ನು ಪಬ್ಲಿಕ್ ಟಿವಿ ವರದಿ ಆಧರಿಸಿ ವಿಜಯಕುಮಾರ ಅಮಾನತು ಎಂದು ಆದೇಶದಲ್ಲಿ ನಮೂದಿಸಲಾಗಿದೆ. ನಿರ್ಲಕ್ಷತೆ ಹಾಗೂ ಕರ್ತವ್ಯಲೋಪ ಹಿನ್ನೆಲೆ ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ಬೌಂಡರಿ ಚಚ್ಚಿ ಆರ್‌ಸಿಬಿ ಗೆಲುವು ಕಸಿದ 16ರ ಹುಡುಗಿ – ಯಾರು ಈ ಕಮಲಿನಿ? ಮುಂಬೈ 1.6 ಕೋಟಿ ನೀಡಿದ್ದು ಯಾಕೆ?

  • ಮದ್ವೆ ಪ್ರಸ್ತಾಪ ತಡೆಯುತ್ತಿದ್ದ ವ್ಯಕ್ತಿಯ ಅಂಗಡಿ ಧ್ವಂಸಗೊಳಿಸಿದ ಯುವಕ

    ಮದ್ವೆ ಪ್ರಸ್ತಾಪ ತಡೆಯುತ್ತಿದ್ದ ವ್ಯಕ್ತಿಯ ಅಂಗಡಿ ಧ್ವಂಸಗೊಳಿಸಿದ ಯುವಕ

    – ವೀಡಿಯೋ ವೈರಲ್, ಯುವಕನ ಬಂಧನ

    ತಿರುವನಂತಪುರ: ಮದುವೆ ಪ್ರಸ್ತಾಪ ತಡೆದಿದ್ದಕ್ಕೆ ಕೋಪಗೊಂಡ ಯುವಕ ಅಂಗಡಿಯನ್ನ ಧ್ವಂಸಗೊಳಿಸಿರುವ ಘಟನೆ ಕೇರಳದ ಕನ್ನೂರು ಜಿಲ್ಲೆಯ ಚೆರೂಪುಜಾ ಎಂಬಲ್ಲಿ ನಡೆದಿದೆ.

    30 ವರ್ಷದ ಅಲ್ಬಮಿನ್ ನೆರೆಮನೆ ವ್ಯಕ್ತಿಯ ಅಂಗಡಿಯನ್ನ ಜೆಸಿಬಿ ಮೂಲಕ ಧ್ವಂಸಗೊಳಿಸಿದ್ದಾನೆ. ಅಂಗಡಿ ಮಾಲೀಕ ನೀಡಿದ ದೂರಿನ ಅನ್ವಯ ಪೊಲೀಸರು ಯುವಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅಂಗಡಿ ಧ್ವಂಸಕ್ಕೂ ಮುನ್ನ ಫೇಸ್‍ಬುಕ್ ನಲ್ಲಿ ಅಲ್ಬಮಿನ್ ವೀಡಿಯೋ ಶೇರ್ ಮಾಡಿಕೊಂಡಿದ್ದನು.

    ವೀಡಿಯೋದಲ್ಲಿ ಏನಿದೆ?: ಈ ಅಂಗಡಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಜೂಜಾಟ ಮತ್ತು ಮದ್ಯ ಮಾರಾಟ ಸೇರಿದಂತೆ ಚಟುವಟಿಕೆಗಳನ್ನ ಅಂಗಡಿಯಲ್ಲಿ ನಡೆಯುತ್ತಿದ್ದು, ಯುವಕರು ಇದರಿಂದ ಬೇಸತ್ತಿದ್ದಾರೆ. ನಾವು ಪೊಲೀಸ್, ಗ್ರಾಮಸ್ಥರು ಮತ್ತು ಅಧಿಕಾರಿಗಳಿಗೆ ತಿಳಿಸಿದ್ರೂ ಸಕಾರಾತ್ಮಕ ಉತ್ತರ ಸಿಗಲಿಲ್ಲ. ಈ ಹಿನ್ನೆಲೆ ಅಂಗಡಿಯನ್ನ ಧ್ವಂಸಗೊಳಿಸುತ್ತೇನೆ ಎಂದು ಹೇಳಿದ್ದಾನೆ.

    ಯುವಕ ಅಂಗಡಿಗೆ ಹಾನಿ ಮಾಡಿದ್ದು ತಪ್ಪು. ಅಂಗಡಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಬಂಧಿತ ಯುವಕ ಆರೋಪಿಸಿದ್ದಾನೆ. ಆದ್ರೆ ಅಂಗಡಿ ಮಾಲೀಕ ಅಲ್ಬಮಿನ್ ಗೆ ಬರುತ್ತಿದ್ದ ಮದುವೆ ಪ್ರಸ್ತಾಪಗಳನ್ನು ತಡೆಯುತ್ತಿದ್ದರಿಂದ ಅಲ್ಬಮಿನ್ ಈ ರೀತಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.