Tag: ಕನ್ನಿಕಾ ಕಪೂರ್

  • ಮೊದಲ ಪತಿಗೆ ಡಿವೋರ್ಸ್- ಮಕ್ಕಳ ಎದುರೇ 10 ವರ್ಷಗಳ ಬಳಿಕ ಹಸೆಮಣೆ ಏರಿದ ಗಾಯಕಿ ಕನ್ನಿಕಾ

    ಮೊದಲ ಪತಿಗೆ ಡಿವೋರ್ಸ್- ಮಕ್ಕಳ ಎದುರೇ 10 ವರ್ಷಗಳ ಬಳಿಕ ಹಸೆಮಣೆ ಏರಿದ ಗಾಯಕಿ ಕನ್ನಿಕಾ

    ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ತಮ್ಮ ಮದುವೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಮೊದಲ ಪತಿಗೆ ಡಿವೋರ್ಸ್ ನೀಡಿ, ಹತ್ತು ವರ್ಷಗಳ ನಂತರ ಉದ್ಯಮಿ ಗೌತಮ್ ಜೊತೆ ಕನ್ನಿಕಾ ಕಪೂರ್ ಹಸೆಮಣೆ ಏರಿದ್ದಾರೆ. ಈ ಮದುವೆಯಲ್ಲಿ ಕನ್ನಿಕಾ ಮಕ್ಕಳು ಸಾಕ್ಷಿಯಾಗಿದ್ದಾರೆ.

    ಸಾಕಷ್ಟು ಬಾಲಿವುಡ್ ಹಾಡುಗಳಿಗೆ ಧ್ವನಿಯಾಗಿದ್ದ ಕನ್ನಿಕಾ, ತಮ್ಮ ವಯಕ್ತಿಕ ವಿಚಾರದಲ್ಲಿ ಕುಸಿದಿದ್ದರು. 1998ರಲ್ಲಿ ರಾಜ್ ಎಂಬುವವರ ಜೊತೆ ಕನ್ನಿಕಾ ಮದುವೆ ನಡೆದಿತ್ತು. ಈ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಗಂಡು ಮಗು ಇದೆ. 2012ರಲ್ಲಿ ಕನಿಕಾ, ರಾಜ್ ವಿಚ್ಛೇದನ ಪಡೆದರು. ನಂತರ ಮೂವರು ಮಕ್ಕಳನ್ನು ಕನಿಕಾ ಅವರೇ ಬೆಳೆಸಿದರು. ಇದೀಗ ಮಕ್ಕಳ ಸಮ್ಮತಿ ಪಡೆದು, ಗುರುಹಿರಿಯರ ಸಮ್ಮುಖದಲ್ಲಿ ಉದ್ಯಮಿ ಗೌತಮ್ ಜೊತೆ ಹಸೆಮಣೆ ಏರಿದ್ದಾರೆ. ಅಷ್ಟೇ ಅಲ್ಲ, ತಾಯಿ ಸಪ್ತಪದಿ ತುಳಿಯುವ ವೇಳೆ ಮಕ್ಕಳು ಸಹಾಯ ಮಾಡಿದ್ದಾರೆ. ಇದನ್ನೂ ಓದಿ: ಬಾಂಡ್ ರವಿಗಾಗಿ ಭರ್ಜರಿ ಹೊಡೆದಾಡಿದ ಪ್ರಮೋದ್

     

    View this post on Instagram

     

    A post shared by Kanika Kapoor (@kanik4kapoor)

    ಕನ್ನಿಕಾ ಅವರ ಮದುವೆ ಪ್ರತಿಯೊಂದು ಶಾಸ್ತ್ರದಲ್ಲೂ ಕನ್ನಿಕಾ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇನ್ನು ಕನಿಕಾ ಸಪ್ತಪದಿ ತುಳಿಯುವ ವೇಳೆ ಕನ್ನಿಕಾ ಹೆಣ್ಣು ಮಕ್ಕಳು ತಾಯಿಯ ಲೆಹೆಂಗಾವು ಅವರಿಗೆ ನಡೆಯಲು ಕಷ್ಟವಾಗದಂತೆ ನೋಡಿಕೊಂಡಿದ್ದರು. ಇನ್ನು ತಮ್ಮ ಪತಿ ಗೌತಮ್ ಬಗ್ಗೆ ಚೆಂದದ ಸಾಲುಗಳ ಜೊತೆ ಮದುವೆಯ ಫೋಟೋ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಸ್ನೇಹಿತೆಯ ಮದುವೆಗಾಗಿ ಬೆಂಗಳೂರಿಗೆ ಬಂದಿಳಿದ ರಶ್ಮಿಕಾ ಮಂದಣ್ಣ

     

    View this post on Instagram

     

    A post shared by Kanika Kapoor (@kanik4kapoor)

    ನಿಮ್ಮ ಬದುಕಲ್ಲೂ ಮ್ಯಾಜಿಕ್ ನಡೆಯುತ್ತದೆ, ಅದನ್ನು ನಂಬೋದನ್ನು ನೀವು ನಿಲ್ಲಿಸಬೇಡಿ. ಒಂದು ದಿನ ಕನಸುಗಳು ಈಡೇರುತ್ತವೆ. ನನ್ನ ರಾಜನನ್ನು ನಾನು ಹುಡುಕಿಕೊಂಡೆ. ನಮ್ಮಿಬ್ಬರನ್ನು ಭೇಟಿ ಮಾಡಿಸಿದ ಯುನಿವರ್ಸ್ಗೆ ಧನ್ಯವಾದಗಳು. ನಿನ್ನ ಜೊತೆ ಹೊಸ ಜರ್ನಿ ಮಾಡಲು, ನಿನ್ನ ಜೊತೆ ಜೊತೆ ಬೆಳೆಯಲು, ಕಲಿಯಲು, ನಿನ್ನ ಜೊತೆಗೆ ನಗಲು ಬಹಳ ಉತ್ಸುಕತೆಯಿಂದಿರುವೆ. ಪ್ರತಿದಿನ ನನ್ನನ್ನು ನಗಿಸುತ್ತಿರುವುದಕ್ಕೆ ಧನ್ಯವಾದಗಳು. ನನ್ನ ಸ್ನೇಹಿತ, ನನ್ನ ಸಂಗಾತಿ, ನನ್ನ ಹೀರೋ ಎಂದು ಪತಿ ಗೌತಮ್ ಕುರಿತು ಕನ್ನಿಕಾ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇನ್ನು ಗಾಯಕಿ ಕನಿಕಾಗೆ ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರು ಶುಭಹಾರೈಸಿದ್ದಾರೆ.

  • ಕೊರೊನಾ ನಿರ್ಲಕ್ಷ್ಯ- ಕನ್ನಿಕಾ ಕಪೂರ್ ವಿರುದ್ಧ ಎಫ್‍ಐಆರ್

    ಕೊರೊನಾ ನಿರ್ಲಕ್ಷ್ಯ- ಕನ್ನಿಕಾ ಕಪೂರ್ ವಿರುದ್ಧ ಎಫ್‍ಐಆರ್

    ನವದೆಹಲಿ: ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ವಿರುದ್ಧ ಲಕ್ನೋ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಮಾರ್ಚ್ ಆರಂಭದಲ್ಲಿ ಲಂಡನ್‍ನಿಂದ ಭಾರತಕ್ಕೆ ವಾಸಪ್ ಆಗಿದ್ದ ಕನ್ನಿಕಾ ಅವರಿಗೆ ಡೆಡ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಸೋಂಕು ಇತರರಿಗೆ ಹರಡದಂತೆ ಅಗತ್ಯವಾದ ನಿರ್ದೇಶನಗಳನ್ನು ಪಾಲಿಸದ ಹಿನ್ನೆಲೆ ಲಕ್ನೋ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಶುಕ್ರವಾರ ಕನ್ನಿಕಾ ಅವರ ಕೋವಿಡ್-19 ಪರೀಕ್ಷೆಯ ವರದಿ ಬಂದಿದ್ದು, ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಇದಕ್ಕೂ ಮೊದಲು ಹಲವು ವಿಐಪಿಗಳನ್ನು ಕನ್ನಿಕಾ ಪಾರ್ಟಿಯಲ್ಲಿ ಭೇಟಿಯಾಗಿದ್ದರು. ಹೀಗಾಗಿ ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಕನ್ನಿಕಾ ಅವರಿ ಸೋಂಕು ತಗುಲಿರುವುದು ದೃಢಪಟ್ಟ ಬಳಿಕ ಅವರಿಗೆ ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯ (ಕೆಜಿಎಂಯು)ನ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

    ಆದರೆ ಲಕ್ನೋ ಮುಖ್ಯ ವೈದ್ಯಕೀಯ ಅಧಿಕಾರಿಯೊಬ್ಬರು ಕನ್ನಿಕಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಮೆರೆದಿದ್ದಾರೆ ಎಂದು ದೂರಿದ್ದು, ಈ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 188, 269, 270ರ ಅಡಿಯಲ್ಲಿ ಲಕ್ನೋನ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಕನ್ನಿಕಾ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

    ಹಜರತ್‍ಗಂಜ್ ಮತ್ತು ಗೋಮ್ಟಿನಗರ ಪೊಲೀಸ್ ಠಾಣೆಗಳಲ್ಲಿಯೂ ಕನ್ನಿಕಾ ವಿರುದ್ಧ ಇನ್ನೂ ಎರಡು ಎಫ್‍ಐಆರ್ ದಾಖಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಪ್ರದೇಶದ ಮೂರು ವಿಭಿನ್ನ ಪಾರ್ಟಿಗಳಲ್ಲಿ ಕನ್ನಿಕಾ ಮಾರ್ಚ್ 11ರಂದು ಲಂಡನ್‍ನಿಂದ ವಾಪಸ್ ಬಂದ ಬಳಿಕ ಭಾಗಿಯಾಗಿದ್ದರು. ಈ ಹಿನ್ನೆಲೆ ಇನ್ನೂ ಅವರ ಮೇಲೆ ಇನ್ನೂ ಎರಡು ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಕಾನಿಕಾ ಕಪೂರ್ ಬೇರೆ ಬೇರೆ ದಿನಗಳಲ್ಲಿ ಒಟ್ಟು ಮೂರು ಪಾರ್ಟಿಗಳಲ್ಲಿ ಭಾಗಿಯಾಗಿದ್ದರು. ಉನ್ನತ ರಾಜಕಾರಣಿಗಳು ಸೇರಿದಂತೆ ಹಲವಾರು ವಿಐಪಿಗಳನ್ನು ಭೇಟಿ ಮಾಡಿದ್ದರು. ಪಾರ್ಟಿಯಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ಬಿಜೆಪಿ ಸಂಸದ ದುಶ್ಯಂತ್ ಸಿಂಗ್ ಮತ್ತು ಅವರ ತಾಯಿ ಅವರು ಕನ್ನಿಕಾರ ಸಂಪರ್ಕಕ್ಕೆ ಬಂದಿದ್ದರು. ಈ ಹಿನ್ನೆಲೆ ಈ ನಾಯಕರು ತಮ್ಮನ್ನು ತಾವು ಪ್ರತ್ಯೇಕವಾಗಿರಿಸಿಕೊಂಡಿದ್ದಾರೆ.

    ಲಂಡನ್‍ನಿಂದ ಬಂದ ಬಳಿಕ ಕನ್ನಿಕಾ ಐಷಾರಾಮಿ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು, ಅಲ್ಲದೇ ಕಾನ್ಪುರದ ಸಂಬಂಧಿಕರ ಮನೆಗೆ ಕನ್ನಿಕಾ ಭೇಟಿ ಕೊಟ್ಟಿದ್ದರು ಎಂದು ಲಕ್ನೋನ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ.

    ಭಾರತದಲ್ಲಿ ಕೊರೊನಾ ಹಬ್ಬಿದ್ದು ಹೇಗೆ?
    ಭಾರತದಲ್ಲಿ ಇದುವರೆಗೆ ಸೋಂಕಿತ ಪ್ರಕರಣ 246 (ಅಧಿಕೃತ ಪಟ್ಟಿ, ನಿನ್ನೆ ರಾತ್ರಿ 12 ಗಂಟೆಯವರೆಗೆ) ವರದಿಯಾಗಿದೆ. ಇದರಲ್ಲಿ ವಿದೇಶದಿಂದ ಬಂದ 136 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿದೇಶದಿಂದ ಬಂದವರ ಜೊತೆ ಸಂಪರ್ಕದಿಂದ 105 ಮಂದಿಗೆ ಸೋಂಕು ತಗುಲಿದೆ.

    ಜನವರಿ 30 ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿತ ಮೊದಲ ಕೇಸ್ ವರದಿಯಾಗಿತ್ತು. ಆದರೆ ಮಾರ್ಚ್ 10ರಂದು ದೇಶದಲ್ಲಿ ಸೋಂಕಿತರ ಸಂಖ್ಯೆ 50ಕ್ಕೆ ಮುಟ್ಟಿತ್ತು. ಸದ್ಯ ಮಾರ್ಚ್ 20ರವರೆಗೆ ಸೋಂಕಿತರ ಸಂಖ್ಯೆ 249ಕ್ಕೆ ತಲುಪಿದೆ.

    24 ಗಂಟೆಗಳಲ್ಲಿ ಪತ್ತೆಯಾದ ಹೊಸ ಪ್ರಕರಣಗಳು:
    ಭಾರತದಲ್ಲಿ 55 ಹೊಸ ಪ್ರಕರಣ ದಾಖಲಾಗಿದೆ. ಇತ್ತ ಇಟಲಿಯಲ್ಲಿ 5986, ಸ್ಪೇನ್‍ನಲ್ಲಿ 3494, ಜರ್ಮನಿಯಲ್ಲಿ 4528, ಅಮೆರಿಕದಕಲ್ಲಿ 5861, ಇರಾನ್‍ನಲ್ಲಿ 1237, ಫ್ರಾನ್ಸ್ ನಲ್ಲಿ 1617 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ.

  • ಬಾಲಿವುಡ್‍ನ ಖ್ಯಾತ ಗಾಯಕಿಗೆ ಕೊರೊನಾ ಪಾಸಿಟಿವ್

    ಬಾಲಿವುಡ್‍ನ ಖ್ಯಾತ ಗಾಯಕಿಗೆ ಕೊರೊನಾ ಪಾಸಿಟಿವ್

    ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಶುಕ್ರವಾರ ನಾಲ್ಕು ಹೊಸ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಬಾಲಿವುಡ್‍ನ ಪ್ರಸಿದ್ಧ ಗಾಯಕಿ ಕನ್ನಿಕಾ ಕಪೂರ್ ಕೂಡ ಇದ್ದಾರೆ.

    ಗಾಯಕಿ ಕನ್ನಿಕಾ ಅವರನ್ನು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯ (ಕೆಜಿಎಂಯು)ನ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಕನ್ನಿಕಾ ಮಾರ್ಚ್ 15ರಂದು ಲಂಡನ್‍ನಿಂದ ಲಕ್ನೋಗೆ ಮರಳಿದ್ದರು. ಬಳಿಕ ಅವರು ಅಪಾರ್ಟ್ ಮೆಂಟ್‍ನಲ್ಲಿ ಉಳಿದುಕೊಂಡು, ಹೋಟೆಲ್‍ವೊಂದರಲ್ಲಿ ಪಾರ್ಟಿ ನೀಡಿದ್ದರು. ಈ ಪಾರ್ಟಿಯಲ್ಲಿ ಸುಮಾರು 500 ಜನರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

    ಕನ್ನಿಕಾ ಅವರೊಂದಿಗೆ ನೇರ ಸಂಭಾಷಣೆ ನಡೆಸಿದ, ಪಾರ್ಟಿಯಲ್ಲಿ ಭಾಗವಹಿಸಿದ್ದ ಜನರಿಗಾಗಿ ಈಗ ಆರೋಗ್ಯ ಇಲಾಖೆ ಹುಡುಕಾಟ ನಡೆಸಿದೆ. ಈ ಮೂಲಕ ಅವರನ್ನು ತಪಾಸಣೆ ನಡೆಸು ಸಿದ್ಧತೆ ನಡೆದಿದೆ. ಒಂದು ವೇಳೆ ಅವರಲ್ಲಿ ಕೊರೊನಾದ ಲಕ್ಷಣಗಳು ಕಂಡು ಬಂದರೆ ವೀಕ್ಷಣೆಗೆ ಇರಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

    ಶುಕ್ರವಾರ ಮಧ್ಯಾಹ್ನ 2 ಗಂಟೆಯವರೆಗಿನ ಮಾಹಿತಿ ಪ್ರಕಾರ ಭಾರತದಲ್ಲಿ 194 ಜನರಿಗೆ ಕೊರೊನಾ ಸೋಂಕು ತಗುಲಿದೆ. ಈ ಪೈಕಿ 20 ಜನರು ಗುಣಮುಖರಾಗಿದ್ದು, 170 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ನಾಲ್ವರು ಮೃತಪಟ್ಟಿದ್ದಾರೆ.