Tag: ಕನ್ನಡ ಸುದ್ದಿ

  • ಬಾದಾಮಿ ಸೇವನೆಯಿಂದ ದೊರೆಯಲಿದೆ ಉತ್ತಮ ಆರೋಗ್ಯ

    ಬಾದಾಮಿ ಸೇವನೆಯಿಂದ ದೊರೆಯಲಿದೆ ಉತ್ತಮ ಆರೋಗ್ಯ

    ರೋಗ್ಯಕರ ಆಹಾರಗಳಲ್ಲಿ ಬಾದಾಮಿ ಪ್ರಮುಖ ಸ್ಥಾನ ಪಡೆಯುತ್ತದೆ. ಅದ್ಭುತ ಆರೋಗ್ಯಕರ ಅಂಶವನ್ನು ಬಾದಾಮಿ ಹೊಂದಿದೆ. ಒಣ ಬಾದಾಮಿಯ ಸೇವನೆಗಿಂತಲೂ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ತಿನ್ನುವುದು ಅತ್ಯುತ್ತಮ. ನೆನೆಸಿಟ್ಟ ಬಾದಾಮಿ ಸೇವನೆ ಭಾರತೀಯರಿಗೆ ಹೊಸದೇನೂ ಅಲ್ಲ. ನೆನಸಿಟ್ಟು ಬಾದಾಮಿಯಿಂದ ಸಿಗಲಿದೆ ಹಲವು ಪ್ರಯೋಜನ.

    * ರಾತ್ರಿ ವೇಳೆ ಬಾದಾಮಿಯನ್ನು ನೆನೆಸಿಟ್ಟು ಬೆಳಿಗ್ಗೆ ವೇಳೆ ಉಪಹಾರಕ್ಕೂ ಮೊದಲು ಸೇವಿಸಿ ಇದರಿಂದ ಜ್ನಾಪಕ ಶಕ್ತಿ ಹೆಚ್ಚಾಗುತ್ತದೆ.

    * ನೆನೆಸಿಟ್ಟಿರುವ ಬಾದಾಮಿ ಸೇವನೆ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

    * ಬಾದಾಮಿಗಳಲ್ಲಿ ವಿಟಮಿನ್ ಇ ಸಮೃದ್ದ ಪ್ರಮಾಣದಲ್ಲಿದೆ. ಈ ವಿಟಮಿನ್ ಇ ನಮ್ಮ ಚರ್ಮ ಮತ್ತು ಕೂದಲಿನ ಪೋಷಣೆಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳನ್ನು ಒದಗಿಸುತ್ತದೆ.

    * ಬಾದಾಮಿಯಲ್ಲಿರುವ ಪೋಷಕಾಂಶಗಳು ಈ ಸಮತೋಲನವನ್ನು ಸಾಧಿಸಲು ಹೆಚ್ಚಿನ ನೆರವು ನೀಡುತ್ತವೆ. ಅಂದರೆ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಲು ನೆರವಾಗುತ್ತವೆ.

    * ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ನೆನೆಸಿಟ್ಟ ಬಾದಾಮಿಯುನ್ನು ತಿನ್ನುವುದರಿಂದ ಉನ್ನತ ಮಟ್ಟದ ಪೋಟಾಶಿಯಂ ಮತ್ತು ಕಡಿಮೆ ಸೋಡಿಯಂ ಇದ್ದು, ಇದು ರಕ್ತದೊತ್ತಡ ಹೆಚ್ಚದಂತೆ ತಡೆಯುತ್ತದೆ.

    * ಬಾದಾಮಿಯಲ್ಲಿ ಫೈಬರ್, ಪ್ರೋಟೀನ್, ಮಿಟಮಿನ್ ಇ ಮತ್ತು ಮೆಗ್ನೀಸಿಯಮ್ ಅಂಶಗಳಿರುತ್ತದೆ. ಪ್ರತಿದಿನ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

  • ಸರ್ಕಾರಿ ನೌಕರರಿಗೆ ಸಿಹಿ – ಕಹಿ ಸುದ್ದಿ : ನಾಲ್ಕನೇ ಶನಿವಾರ ರಜೆ?

    ಸರ್ಕಾರಿ ನೌಕರರಿಗೆ ಸಿಹಿ – ಕಹಿ ಸುದ್ದಿ : ನಾಲ್ಕನೇ ಶನಿವಾರ ರಜೆ?

    ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ನಾಲ್ಕನೇ ಶನಿವಾರ ರಜೆ ಸಿಗುವ ಸಾಧ್ಯತೆಯಿದೆ. ರಜೆ ಸಿಕ್ಕಿದರೂ 8 ಜಯಂತಿಗೆ ಸಿಗುತ್ತಿದ್ದ ಸಾಂದರ್ಭಿಕ ರಜೆ ರದ್ದಾಗುವ ಸಾಧ್ಯತೆಯಿದೆ.

    ಆರನೇ ವೇತನ ಆಯೋಗ ನೀಡಿದ್ದ 2ನೇ ವರದಿಯಲ್ಲಿ ರಜೆಗಳಿಗೆ ಸಂಬಂಧಿಸಿದಂತೆ ಕೆಲವು ಶಿಫಾರಸು ಮಾಡಿತ್ತು. ಸಾಂರ್ದಭಿಕ ರಜೆ ಕಡಿತ, ಜಯಂತಿಗಳಿಗೆ ಇರುವ ರಜೆ ರದ್ದು ಸೇರಿ ಕೆಲ ಸಲಹೆಗಳನ್ನು ಆಯೋಗ ನೀಡಿತ್ತು. ಆಯೋಗದ ವರದಿಗೆ ಸಂಬಂಧಪಟ್ಟಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಉಪಸಮಿತಿ ವಿವಿಧ ಸಮುದಾಯ, ಸರ್ಕಾರಿ ನೌಕರರ ಸಂಘಟನೆ, ಸರ್ಕಾರಿ ಆಡಳಿತ ಕ್ಷೇತ್ರದ ತಜ್ಞರ ಜೊತೆ ಸಮಾಲೋಚಿಸಿ ಕೆಲ ಶಿಫಾರಸು ಮಾಡಿದೆ.

    ಶಿಫಾರಸಿನಲ್ಲಿ ಏನಿದೆ?
    ಸರ್ಕಾರಿ ನೌಕರರಿಗೆ ಈಗ ಇರುವಂತಹ 15 ಸಾಂದರ್ಭಿಕ ರಜೆಗಳ ಪೈಕಿ ಮೂರು ಕಡಿಮೆ ಮಾಡಿ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ಸಿಎಲ್‍ಗಳಿಗೆ ಕಡಿತ ಮಾಡುವುದು, ಹಬ್ಬ ಹಾಗೂ ವಿವಿಧ ಜಯಂತಿ ಸೇರಿ 23 ರಜೆ ಪೈಕಿ 8 ಜಯಂತಿಗಳನ್ನು ರದ್ದು ಮಾಡುವುದಕ್ಕೆ ಶಿಫಾರಸು ಮಾಡಿದೆ ಎನ್ನಲಾಗಿದೆ.

    ಸದ್ಯದ ಮಾಹಿತಿಗಳ ಪ್ರಕಾರ ಕನಕ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿ, ಮಹಾವೀರ ಜಯಂತಿ, ಮಹಾಲಯ ಅಮಾವಾಸ್ಯೆ, ಈದ್ ಮಿಲಾದ್, ಕಾರ್ಮಿಕ ದಿನ, ಗುಡ್‍ಫ್ರೈಡೆಗಳಿಗೆ ನೀಡಲಾಗುವ ರಜೆಯನ್ನು ರದ್ದುಗೊಳಿಸಬಹುದು ಎಂದು ಶಿಫಾರಸು ಮಾಡಿದೆ.

    ಬದಲಾವಣೆ ಯಾಕೆ?
    ಸರ್ಕಾರಿ ನೌಕರರು 100 ಕ್ಕೂ ಹೆಚ್ಚು ರಜೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. 54 ವಾರದ ರಜಾ ದಿನಗಳು, 12 ಎರಡನೇ ಶನಿವಾರ, 21 ಸಾರ್ವತ್ರಿಕ ರಜಾ ದಿನಗಳು ಬರುತ್ತದೆ. 15 ಸಾಂದರ್ಭಿಕ ರಜೆಗಳಿದ್ದು, ರಜಾ ದಿನಗಳ ಸಂಖ್ಯೆ ಹೆಚ್ಚಿರುವ ಕಾರಣ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕಾಗಿ ರಜೆಯಲ್ಲಿ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv