Tag: ಕನ್ನಡ ವ್ಯಾಕರಣ

  • ಕನ್ನಡ ಭಾಷೆಗೆ ತಾಂತ್ರಿಕ ಪರಿಕರಗಳ ಸೂಟ್‌ ಅಭಿವೃದ್ಧಿ- 2 ಕೋಟಿ ಅನುದಾನ

    ಕನ್ನಡ ಭಾಷೆಗೆ ತಾಂತ್ರಿಕ ಪರಿಕರಗಳ ಸೂಟ್‌ ಅಭಿವೃದ್ಧಿ- 2 ಕೋಟಿ ಅನುದಾನ

    ಬೆಂಗಳೂರು: ಇಂಟರ್‌ನೆಟ್‌ ಲೋಕದಲ್ಲಿ ಕನ್ನಡ ಭಾಷೆಗೆ ಬಹಳ ಅಗತ್ಯವಾಗಿರುವ ತಾಂತ್ರಿಕ ಪರಿಕರಗಳ ಸೂಟ್‌ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.

    ಕನ್ನಡ ಭಾಷೆಗೆ ತಾಂತ್ರಿಕ ಪರಿಕರಗಳ ಸೂಟ್‌ ಅಭಿವೃದ್ಧಿ ಪಡಿಸಲು ಬಜೆಟ್‌ನಲ್ಲಿ 2 ಕೋಟಿ ರೂ. ಅನುದಾನವನ್ನು ಸಿಎಂ ಯಡಿಯೂರಪ್ಪ ನೀಡಿದ್ದಾರೆ.

    ಈ ಸೂಟ್‌ನಲ್ಲಿ ಕನ್ನಡ ಕಾಗುಣಿತ ಪರಿಶೀಲನೆ, ಕನ್ನಡ ಭಾಷೆಗೆ ಪಠ್ಯದಿಂದ ಪಠಣ, ಪಠಣದಿಂದ ಪಠ್ಯ ತಂತ್ರಾಂಶ, ಯಾಂತ್ರಿಕ ಅನುವಾದ, ಲಿಪ್ಯಂತರ, ಹೈಫನೇಷನ್‌, ಒಸಿಆರ್‌ ಉಪಕರಣಗಳು, ಕನ್ನಡ ಅಕ್ಷರ ಶೈಲಿಯ ಸಮೂಹ ಮತ್ತು ಕನ್ನಡ ಚಾಟ್‌ ಬಾಟ್‌, ಕನ್ನಡ ಶಬ್ಧಕೋಶ ಮತ್ತು ಕನ್ನಡ ಕಲಿಕಾ ಅಕಾಡೆಮಿ ಪೋರ್ಟಲ್‌ ಸೇರಿವೆ. ಕನ್ನಡ ಲಿಪಿ ಆಧಾರಿತ ಯುಆರ್‌ಎಲ್‌ಗಳು ಮತ್ತು ಕನ್ನಡ ಇಮೇಲ್‌ ಸೇವೆಯನ್ನು ಒದಗಿಸಲಾಗುತ್ತದೆ ಎಂದು ಯಡಿಯೂರಪ್ಪ ಭಾಷಣದಲ್ಲಿ ಹೇಳಿದ್ದಾರೆ.