Tag: ಕನ್ನಡ ರೆಸೆಪಿ

  • ಎರಡೇ ಸಾಮಗ್ರಿಯಿಂದ ಕಡ್ಲೆಕಾಳಿನ ಹುರಿಗಡಲೆ ಮಾಡೋ ವಿಧಾನ

    ಎರಡೇ ಸಾಮಗ್ರಿಯಿಂದ ಕಡ್ಲೆಕಾಳಿನ ಹುರಿಗಡಲೆ ಮಾಡೋ ವಿಧಾನ

    ಕೊರೊನಾ ಭೀತಿಯಿಂದ ಎಲ್ಲರೂ ಮನೆಯಲ್ಲಿಯೇ ಇದ್ದಾರೆ. ಮನೆಯಲ್ಲಿ ಇದ್ದರೆ ಟೈಂ ಪಾಸ್ ಮಾಡುವುದು ತುಂಬಾ ಕಷ್ಟ. ಅದರಲ್ಲೂ ಮಕ್ಕಳಿದ್ದರೆ ಅವರು ತಿನ್ನಲು ತಿಂಡಿ ಕೇಳುತ್ತಿರುತ್ತಾರೆ. ಹೊರಗೆ ಹೋಗಿ ತಂದು ಕೊಡೋಣ ಎಂದ್ರೆ ಯಾವುದೇ ಅಂಗಡಿ ಓಪನ್ ಇರುವುದಿಲ್ಲ. ಆದರೆ ದಿನಸಿ ಅಂಗಡಿ ಓಪನ್ ಇರುತ್ತೆ. ಹೀಗಾಗಿ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಲೆಕಾಳು ತನ್ನಿ. ಇನ್ನೂ ಮನೆಯಲ್ಲಿ ಉಪ್ಪು ಇರುತ್ತದೆ. ಈ ಎರಡು ಸಾಮಗ್ರಿಗಳಿಂದಲೇ ಕಡ್ಲೆಕಾಳಿನ ಉಪ್ಪುಪ್ಪು ಹುರಿಗಡಲೆ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು
    1. ಕಡ್ಲೆಕಾಳು- 1/4 ಕೆಜಿ
    2. ಉಪ್ಪು – 2 ಕಪ್

    ಮಾಡುವ ವಿಧಾನ
    * ಒಂದು ಅಲ್ಯೂಮಿನಿಯಂ ಅಥವಾ ಕಬ್ಬಿಣದ ಬಾಣಲೆ ಇದ್ದರೆ ಒಳಿತು.
    * ಬಾಣಲೆಗೆ 2 ಕಪ್ ಉಪ್ಪನ್ನು ಹಾಕಿ 2 ನಿಮಿಷ ಫ್ರೈ ಮಾಡಿ.
    * ಈ ಉಪ್ಪು ಬಿಸಿಯಾದ ಮೇಲೆ ಕಡ್ಲೆಕಾಳನ್ನು ಹಾಕಿ ಹೈ ಫ್ಲೇಮ್‍ನಲ್ಲಿ ಫ್ರೈ ಮಾಡಿ.
    * ಉಪ್ಪಿನ ಕಾವಿಗೆ ಕಡ್ಲೆಕಾಳಿನ ಸಿಪ್ಪೆ ಹೊಡೆದು ಹುರಿಗಡಲೆ ಆಗುತ್ತದೆ.
    * ಬಳಿಕ ಉಪ್ಪಿನಿಂದ ಹುರಿಗಡಲೆಯನ್ನು ಬೇರ್ಪಡಿಸಿದರೆ ಕಡ್ಲೆಕಾಳಿನ ಉಪ್ಪುಪ್ಪು ಹುರಿಗಡಲೆ ಸಿದ್ಧ