Tag: ಕನ್ನಡ ರಾಜ್ಯೋತ್ಸವ ಪ್ರಶಸ್ತಿ

  • 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ – ನಟ ಪ್ರಕಾಶ್‌ ರಾಜ್‌ ಸೇರಿ 70 ಸಾಧಕರಿಗೆ ಗೌರವ

    2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ – ನಟ ಪ್ರಕಾಶ್‌ ರಾಜ್‌ ಸೇರಿ 70 ಸಾಧಕರಿಗೆ ಗೌರವ

    ಬೆಂಗಳೂರು: 70ನೇ ವರ್ಷದ ರಾಜ್ಯೋತ್ಸವ ಆಚರಣೆ ಅಂಗವಾಗಿ 70 ಮಂದಿ ಸಾಧಕರಿಗೆ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ.

    ಮೊದಲ‌ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೇ ಒಟ್ಟು 70 ಮಂದಿ ಸಾಧಕರನ್ನ ಆಯ್ಕೆ ಮಾಡಲಾಗಿದೆ.‌ ನಟ ಪ್ರಕಾಶ್‌ ರಾಜ್‌ ಸೇರಿದಂತೆ ವಿವಿಧ ವಲಯಗಳ ಅರ್ಹರಿಗೆ ನಾಡಿನ ಅತ್ಯುನ್ನತ ಗೌರವ ನೀಡಲಾಗುತ್ತಿದೆ. ಸಾಹಿತ್ಯ, ಸಿನಿಮಾ, ರಂಗಭೂಮಿ, ಮಾಧ್ಯಮ, ವಿಜ್ಞಾನ ಸೇರಿದಂತೆ ಸುಮಾರು 13ಕ್ಕೂ ಹೆಚ್ಚು ವಲಯಗಳಲ್ಲಿ ಗಣನೀಯ ಸಾಧನೆ ಮಾಡಿದ 70 ಮಂದಿಯನ್ನ ಆಯ್ಕೆ ಮಾಡಲಾಗಿದೆ.

    ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ ಐದು ಲಕ್ಷ ನಗದನ್ನ ಒಳಗೊಂಡಿದೆ. ನ.1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

    ಯಾವ ಕ್ಷೇತ್ರದಿಂದ ಯಾರಿಗೆ ಪ್ರಶಸ್ತಿ?
    ಸಾಹಿತ್ಯ ಕ್ಷೇತ್ರ
    ಪ್ರೊ. ರಾಜೇಂದ್ರ ಚೆನ್ನಿ – ಶಿವಮೊಗ್ಗ
    ತುಂಬಾಡಿ ರಾಮಯ್ಯ – ತುಮಕೂರು
    ಪ್ರೊ ಅರ್ ಸುನಂದಮ್ಮ – ಚಿಕ್ಕಬಳ್ಳಾಪುರ
    ಡಾ.ಎಚ್.ಎಲ್ ಪುಷ್ಪ – ತುಮಕೂರು
    ರಹಮತ್ ತರೀಕೆರೆ – ಚಿಕ್ಕಮಗಳೂರು
    ಹ.ಮ. ಪೂಜಾರ – ವಿಜಯಪುರ

    ಜಾನಪದ
    ಬಸಪ್ಪ ಭರಮಪ್ಪ ಚೌಡ್ಕಿ – ಕೊಪ್ಪಳ
    ಬಿ. ಟಾಕಪ್ಪ ಕಣ್ಣೂರು – ಶಿವಮೊಗ್ಗ
    ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ – ಬೆಳಗಾವಿ
    ಹನುಮಂತಪ್ಪ, ಮಾರಪ್ಪ, ಚೀಳಂಗಿ – ಚಿತ್ರದುರ್ಗ
    ಎಂ. ತೋಪಣ್ಣ – ಕೋಲಾರ
    ಸೋಮಣ್ಣ ದುಂಡಪ್ಪ ಧನಗೊಂಡ – ವಿಜಯಪುರ
    ಸಿಂಧು ಗುಜರನ್‌ – ದಕ್ಷಿಣ ಕನ್ನಡ
    ಎಲ್. ಮಹದೇವಪ್ಪ ಉಡಿಗಾಲ – ಮೈಸೂರು

    ಸಂಗೀತ/ ನೃತ್ಯ ಕ್ಷೇತ್ರ
    ದೇವೆಂದ್ರಕುಮಾರ ಪತ್ತಾರ್ – ಕೊಪ್ಪಳ
    ಮಡಿವಾಳಯ್ಯ ಸಾಲಿ – ಬೀದರ್
    ಪ್ರೊ. ಕೆ. ರಾಮಮೂರ್ತಿ ರಾವ್ – ಮೈಸೂರು

    ಚಲನಚಿತ್ರ /ಕಿರುತೆರೆ
    ಪ್ರಕಾಶ್ ರಾಜ್ – ದಕ್ಷಿಣ ಕನ್ನಡ
    ವಿಜಯಲಕ್ಷ್ಮೀ ಸಿಂಗ್ -ಕೊಡಗು

    ಆಡಳಿತ/ ವೈದ್ಯಕೀಯ
    ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) – ಬೆಂಗಳೂರು ದಕ್ಷಿಣ (ರಾಮನಗರ)
    ಡಾ. ಆಲಮ್ಮ ಮಾರಣ್ಣ – ತುಮಕೂರು
    ಡಾ. ಜಯರಂಗನಾಥ್ – ಬೆಂಗಳೂರು ಗ್ರಾಮಾಂತರ

    ಸಮಾಜ ಸೇವೆ
    ಸೂಲಗಿತ್ತಿ ಈರಮ್ಮ – ವಿಜಯನಗರ
    ಫಕ್ಕೀರಿ – ಬೆಂಗಳೂರು ಗ್ರಾಮಾಂತರ
    ಕೋರಿನ್ ಆಂಟೊನಿಯಟ್ ರಸ್ಕೀನಾ – ದಕ್ಷಿಣ ಕನ್ನಡ
    ಡಾ. ಎನ್. ಸೀತಾರಾಮ ಶೆಟ್ಟಿ – ಉಡುಪಿ
    ಕೋಣಂದೂರು ಲಿಂಗಪ್ಪ – ಶಿವಮೊಗ್ಗ

    ಸಂಕೀರ್ಣ
    ಉಮೇಶ ಪಂಬದ – ದಕ್ಷಿಣ ಕನ್ನಡ
    ಡಾ. ರವೀಂದ್ರ ಕೋರಿಶೆಟ್ಟಿರ್ – ಧಾರವಾಡ
    ಕೆ.ದಿನೇಶ್ – ಬೆಂಗಳೂರು
    ಶಾಂತರಾಜು – ತುಮಕೂರು
    ಜಾಫರ್ ಮೊಹಿಯುದ್ದೀನ್ – ರಾಯಚೂರು
    ಪೆನ್ನ ಓಬಳಯ್ಯ – ಬೆಂಗಳೂರು ಗ್ರಾಮಾಂತರ
    ಶಾಂತಿ ಬಾಯಿ – ಬಳ್ಳಾರಿ
    ಪುಂಡಲೀಕ ಶಾಸ್ತ್ರೀ(ಬುಡಬುಡಕೆ) – ಬೆಳಗಾವಿ

    ಹೊರನಾಡು/ ಹೊರದೇಶ
    ಜಕರಿಯ ಬಜಪೆ (ಸೌದಿ)
    ಪಿ ವಿ ಶೆಟ್ಟಿ (ಮುಂಬೈ)

    ಪರಿಸರ
    ರಾಮೇಗೌಡ – ಚಾಮರಾಜನಗರ
    ಮಲ್ಲಿಕಾರ್ಜುನ ನಿಂಗಪ್ಪ – ಯಾದಗಿರಿ

    ಕೃಷಿ
    ಡಾ.ಎಸ್.ವಿ.ಹಿತ್ತಲಮನಿ – ಹಾವೇರಿ
    ಎಂ ಸಿ ರಂಗಸ್ವಾಮಿ – ಹಾಸನ

    ಮಾಧ್ಯಮ ಕ್ಷೇತ್ರ
    ಕೆ.ಸುಬ್ರಮಣ್ಯ – ಬೆಂಗಳೂರು
    ಅಂಶಿ ಪ್ರಸನ್ನಕುಮಾರ್ – ಮೈಸೂರು
    ಬಿ.ಎಂ ಹನೀಫ್ – ದಕ್ಷಿಣ ಕನ್ನಡ
    ಎಂ ಸಿದ್ಧರಾಜು – ಮಂಡ್ಯ

    ವಿಜ್ಞಾನ ತಂತ್ರಜ್ಞಾನ
    ರಾಮಯ್ಯ – ಚಿಕ್ಕಬಳ್ಳಾಪುರ
    ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ – ದಾವಣಗೆರೆ
    ಡಾ. ಆರ್. ವಿ ನಾಡಗೌಡ – ಗದಗ

    ಸಹಕಾರ
    ಶೇಖರಗೌಡ ವಿ ಮಾಲಿಪಾಟೀಲ್ – ಕೊಪ್ಪಳ

    ಯಕ್ಷಗಾನ/ ಬಯಲಾಟ/ ರಂಗಭೂಮಿ
    ಕೋಟ ಸುರೇಶ ಬಂಗೇರ- ಉಡುಪಿ
    ಐರಬೈಲ್‌ಆನಂದ ಶೆಟ್ಟಿ – ಉಡುಪಿ
    ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ) – ಉತ್ತರ ಕನ್ನಡ
    ಗುಂಡೂರಾಜ್ – ಹಾಸನ
    ಹೆಚ್.ಎಂ. ಪರಮಶಿವಯ್ಯ – ಬೆಂಗಳೂರು ದಕ್ಷಿಣ (ರಾಮನಗರ)
    ಎಲ್.ಬಿ.ಶೇಖ್ (ಮಾಸ್ತರ್) – ವಿಜಯಪುರ
    ಬಂಗಾರಪ್ಪ ಖುದಾನ್‌ಪುರ – ಬೆಂಗಳೂರು
    ಮೈಮ್ ರಮೇಶ್ – ದಕ್ಷಿಣ ಕನ್ನಡ
    ಡಿ.ರತ್ನಮ್ಮ ದೇಸಾಯಿ – ರಾಯಚೂರು

    ಶಿಕ್ಷಣ ಕ್ಷೇತ್ರ
    ಡಾ. ಎಂ.ಆರ್. ಜಯರಾಮ್ – ಬೆಂಗಳೂರು
    ಡಾ. ಎನ್ ಎಸ್ ರಾಮೇಗೌಡ -ಮೈಸೂರು
    ಎಸ್. ಬಿ. ಹೊಸಮನಿ – ಕಲಬುರಗಿ
    ನಾಗರಾಜು – ಬೆಳಗಾವಿ

    ಕ್ರೀಡೆ
    ಆಶೀಶ್ ಕುಮಾರ್ ಬಲ್ಲಾಳ್ – ಬೆಂಗಳೂರು
    ಎಂ ಯೋಗೇಂದ್ರ – ಮೈಸೂರು
    ಡಾ. ಬಬಿನಾ ಎನ್.ಎಂ (ಯೋಗ) – ಕೊಡಗು

    ನ್ಯಾಯಾಂಗ
    ನ್ಯಾ. ಪಿ.ಬಿ. ಭಜಂತ್ರಿ (ಪವನ್ಕುಮಾರ್ ಭಜಂತ್ರಿ ) – ಬಾಗಲಕೋಟೆ

    ಶಿಲ್ಪಕಲೆ/ ಚಿತ್ರಕಲೆ/ ಕರಕುಶಲ
    ಬಸಣ್ಣ ಮೋನಪ್ಪ ಬಡಿಗೇರ – ಯಾದಗಿರಿ
    ನಾಗಲಿಂಗಪ್ಪ ಜಿ ಗಂಗೂರ – ಬಾಗಲಕೋಟೆ
    ಬಿ. ಮಾರುತಿ – ವಿಜಯನಗರ
    ಎಲ್. ಹೇಮಾಶೇಖರ್ – ಮೈಸೂರು

  • 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ; ಯಾವ ಕ್ಷೇತ್ರದಲ್ಲಿ ಯಾರಿಗೆ ಪ್ರಶಸ್ತಿ – ಇಲ್ಲಿದೆ ಪಟ್ಟಿ

    69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ; ಯಾವ ಕ್ಷೇತ್ರದಲ್ಲಿ ಯಾರಿಗೆ ಪ್ರಶಸ್ತಿ – ಇಲ್ಲಿದೆ ಪಟ್ಟಿ

    ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 69 ಸಾಧಕರ ಪಟ್ಟಿ ಬಿಡುಗಡೆ ಮಾಡಿದೆ.

    ಕಲೆ, ಸಾಹಿತ್ಯ, ಜಾನಪದ, ಕೃಷಿ-ಪರಿಸರ, ವಿಜ್ಞಾನ-ತಂತ್ರಜ್ಞಾನ, ಕ್ರೀಡೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

  • ರಾಜ್ಯೋತ್ಸವ ಪ್ರಶಸ್ತಿಗೆ ಫುಲ್‌ ಡಿಮ್ಯಾಂಡ್‌ – 69 ಪ್ರಶಸ್ತಿಗೆ 2,000ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ

    ರಾಜ್ಯೋತ್ಸವ ಪ್ರಶಸ್ತಿಗೆ ಫುಲ್‌ ಡಿಮ್ಯಾಂಡ್‌ – 69 ಪ್ರಶಸ್ತಿಗೆ 2,000ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ

    ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ (Kannada Rajyotsava Award) ಡಿಮ್ಯಾಂಡ್‌ ಹೆಚ್ಚಾದಂತೆ ಕಾಣ್ತಿದೆ. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಸಾವಿರಾರು ಅರ್ಜಿಗಳು ಸಂದಾಯವಾಗಿವೆ.

    ಈ ಬಾರಿ 69 ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ. 69 ಪ್ರಶಸ್ತಿಗಳಿಗೆ 1,200ಕ್ಕೂ ಹೆಚ್ಚು ಅರ್ಜಿಗಳು ಸಂದಾಯವಾಗಿದೆ. ಆನ್‌ಲೈನ್‌ ಸೇವಾಸಿಂಧು ಪೋರ್ಟಲ್‌ ಮೂಲಕ ಬರೋಬ್ಬರಿ 1,135ಕ್ಕೂ ಹೆಚ್ಚು ಹಾಗೂ ಭೌತಿಕವಾಗಿ 85ಕ್ಕೂ ಹೆಚ್ಚು ಅರ್ಜಿಗಳು ಸಂದಾಯವಾಗಿವೆ. ಇದನ್ನೂ ಓದಿ: Mysuru Dasara | ಮೊದಲಿಂದಲ್ಲೂ ಧನಂಜಯ – ಕಂಜನ್ ನಡುವೆ ಜಗಳವಿದೆ, ಮೊದಲೂ ಅಲ್ಲ ಕೊನೆಯೂ ಅಲ್ಲ: ಡಿಸಿಎಫ್

    ರಾಜಕೀಯ ನಾಯಕರು, ಸಂಘ-ಸಂಸ್ಥೆಗಳು, ಪಕ್ಷದ ಪ್ರಮುಖರಿಂದಲೂ ಪ್ರಶಸ್ತಿಗೆ ಹೆಸರುಗಳು ಶಿಫಾರಸು ಬಂದಿದೆ. ಜೊತೆಗೆ ಮಾಜಿ ಸಚಿವರು, ವಿವಿಧ ಕ್ಷೇತ್ರದ ಗಣ್ಯರು, ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಕೊಡುವಂತೆ ಮನವಿಗಳು ಬಂದಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸರ್ಕಾರದಿಂದ ಪ್ರಶಸ್ತಿಗೆ ಮಾನದಂಡ ಇದ್ದರೂ ಲಾಬಿಗೆ ಮಣೆ ಹಾಕೋದು ಅನ್ನೋ ಮಾತುಗಳು ಸಹ ಕೇಳಿಬರ್ತಿವೆ. ಇದನ್ನೂ ಓದಿ: 70 ವರ್ಷದ ಹೆರಿಗೆ ಆಸ್ಪತ್ರೆಗೆ ಬೀಗ: 3 ವರ್ಷಗಳಿಂದ ದುರಸ್ತಿ ಹೆಸರಿನಲ್ಲಿ ಕಾಮಗಾರಿ ವಿಳಂಬ!

    ಮುಖ್ಯಾಂಶಗಳು:
    * ಈ ಬಾರಿ 69 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ತೀರ್ಮಾನ.
    * ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ಪ್ರಶಸ್ತಿ ಆಯ್ಕೆ ಸಮಿತಿ ರಚನೆ.
    * ಸಮಿತಿಯಿಂದ ಅರ್ಜಿಗಳ ಪರಿಶೀಲನೆ ಮಾಡಿ ಸಾಧಕರಿಗೆ ಪ್ರಶಸ್ತಿ ಕೊಡೋ ಚಾಲೆಂಜ್.
    * ಪ್ರಶಸ್ತಿ ಪಡೆಯೋರು 60 ವರ್ಷ ಮೇಲ್ಪಟ್ಟಿರಬೇಕು. ಸಾಧಕರಾಗಿರಬೇಕು ಅನ್ನೋ ನಿಯಮ ಮಾಡಿರೋ ಸರ್ಕಾರ.
    * ನಿಯಮದ ಪ್ರಕಾರ, ಪ್ರಾಮಾಣಿಕವಾಗಿ ಪ್ರಶಸ್ತಿ ಘೋಷಣೆ ಮಾಡೋದು ಸರ್ಕಾರಕ್ಕೆ ಚಾಲೆಂಜ್.

  • ಇಸ್ರೋ ಮುಖ್ಯಸ್ಥ ಸೋಮನಾಥ್‌, ಗಾಲ್ಫರ್‌ ಅದಿತಿ ಸೇರಿದಂತೆ 68 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ- Full List

    ಇಸ್ರೋ ಮುಖ್ಯಸ್ಥ ಸೋಮನಾಥ್‌, ಗಾಲ್ಫರ್‌ ಅದಿತಿ ಸೇರಿದಂತೆ 68 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ- Full List

    ಬೆಂಗಳೂರು: ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುವ ಗಣ್ಯ ವ್ಯಕ್ತಿಗಳಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಸಂಪ್ರದಾಯವನ್ನು ಅನುಸರಿಸಿಕೊಂಡು ಬಂದಿರುವ ಸರ್ಕಾರ ಇದೀಗ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟ ಮಾಡಿದೆ.

    ಈ ಬಾರಿ 68 ಜನರಿಗೆ ವೈಯಕ್ತಿಕ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಸಂಘ ಸಂಸ್ಥೆಗಳಿಗೆ 10 ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ. 50ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆ ‘ಕರ್ನಾಟಕ ಸಂಭ್ರಮ 50 ವರ್ಷ’ ಎಂಬ ಹೆಸರಿನಲ್ಲಿ 10 ಪ್ರಶಸ್ತಿಯನ್ನೂ ನೀಡಲಿದೆ.

    ಈ ಪೈಕಿ 100 ವರ್ಷ ದಾಟಿದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. 13 ಮಹಿಳೆಯರು, 54 ಪುರುಷರು ಹಾಗೂ ಒಬ್ಬರು ಮಂಗಳಮುಖಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಪಡೆದವರಿಗೆ 5 ಲಕ್ಷ ರೂ. ನಗದು ಹಾಗೂ 25 ಗ್ರಾಂ ಚಿನ್ನದ ಪದಕ ನೀಡಲಾಗುತ್ತದೆ.

    ಪ್ರಶಸ್ತಿ ಪಟ್ಟಿ:
    ಸಂಗೀತ/ನೃತ್ಯ ಕ್ಷೇತ್ರ: ಡಾ. ನಯನ ಎಸ್ ಮೋರೆ, ನೀಲಾ ಎಂ ಕೊಡ್ಲಿ, ಶಬ್ಬೀರ್ ಅಹಮದ್, ಡಾ. ಎಸ್ ಬಾಳೇಶ ಭಜ್ರಂತಿ ಅವರಿಗೆ ಪ್ರಶಸ್ತಿ ಲಭಿಸಿದೆ.

    ಚಲನಚಿತ್ರ ಕ್ಷೇತ್ರ: ಡಿಂಗ್ರಿ ನಾಗರಾಜ, ಬಿ. ಜನಾರ್ದನ (ಬ್ಯಾಂಕ್ ಜನಾರ್ದನ).

    ರಂಗಭೂಮಿ ಕ್ಷೇತ್ರ: ಎಜಿ ಚಿದಂಬರ ರಾವ್ ಜಂಬೆ, ಪಿ ಗಂಗಾಧರ ಸ್ವಾಮಿ, ಹೆಚ್‌ಬಿ ಸರೋಜಮ್ಮ, ತಯ್ಯಬಖಾನ್ ಎಂ ಇನಾಮದಾರ, ವಿಶ್ವನಾಥ್ ವಂಶಾಕೃತ ಮಠ, ಪಿ ತಿಪ್ಪೇಸ್ವಾಮಿ.

    ಶಿಲ್ಪಕಲೆ/ ಚಿತ್ರಕಲೆ/ ಕರಕುಶಲ ಕ್ಷೇತ್ರ: ಟಿ ಶಿವಶಂಕರ್, ಕಾಳಪ್ಪ ವಿಶ್ವಕರ್ಮ, ಮಾರ್ಥಾ ಜಾಕಿಮೋವಿಚ್ ಮತ್ತು ಪಿ ಗೌರಯ್ಯ.

    ಯಕ್ಷಗಾನ/ಬಯಲಾಟ ಕ್ಷೇತ್ರ: ಅರ್ಗೋಡು ಮೋಹನದಾಸ್ ಶೆಣೈ, ಕೆ ಲೀಲಾವತಿ ಬೈಪಾಡಿತ್ತಾಯ, ಕೇಶಪ್ಪ ಶಿಳ್ಳಿಕ್ಯಾತರ, ದಳವಾಯಿ ಸಿದ್ದಪ್ಪ (ಹಂದಿಜೋಗಿ).

    ಜಾನಪದ ಕ್ಷೇತ್ರ: ಹುಸೇನಬಿ ಬುಡೆನ್ ಸಾಬ್ ಸಿದ್ದಿ, ಶಿವಂಗಿ ಶಣ್ಮರಿ, ಮಹದೇವು, ನರಸಪ್ಪಾ, ಶಕುಂತಲಾ ದೇವಲಾನಾಯಕ, ಹೆಚ್‌ಕೆ ಕಾರಮಂಚಪ್ಪ, ಶಂಭು ಬಳಿಗಾರ, ವಿಭೂತಿ ಗುಂಡಪ್ಪ, ಚೌಡಮ್ಮ.

    ಸಮಾಜಸೇವೆ ಕ್ಷೇತ್ರ: ಹುಚ್ಚಮ್ಮ ಬಸಪ್ಪ ಚೌದ್ರಿ, ಚಾರ್ಮಾಡಿ ಹಸನಬ್ಬ, ರೂಪಾ ನಾಯಕ್, ನಿಜಗುಣಾನಂದ ಮಹಾಸ್ವಾಮಿಗಳು, ನಾಗರಾಜು ಜಿ.

    ಆಡಳಿತ ಕ್ಷೇತ್ರ: ಜಿವಿ ಬಲರಾಮ್

    ವೈದ್ಯಕೀಯ ಕ್ಷೇತ್ರ: ಡಾ. ಸಿ ರಾಮಚಂದ್ರ, ಡಾ. ಪ್ರಶಾಂತ್ ಶೆಟ್ಟಿ.

    ಸಾಹಿತ್ಯ ಕ್ಷೇತ್ರ: ಪ್ರೊ. ಸಿ ನಾಗಣ್ಣ, ಸುಬ್ಬು ಹೊಲೆಯಾರ್ (ಹೆಚ್‌ಕೆ ಸುಬ್ಬಯ್ಯ), ಸತೀಶ್ ಕುಲಕರ್ಣಿ, ಲಕ್ಷ್ಮಿಪತಿ ಕೋಲಾರ, ಪರಪ್ಪ ಗುರುಪಾದಪ್ಪ ಸಿದ್ದಾಪುರ, ಡಾ. ಕೆ ಷರೀಫಾ.

    ಶಿಕ್ಷಣ ಕ್ಷೇತ್ರ: ರಾಮಪ್ಪ (ರಾಮಣ್ಣ) ಹವಳೆ, ಕೆ ಚಂದ್ರಶೇಖರ್, ಕೆಟಿ ಚಂದು.

    ಕ್ರೀಡಾ ಕ್ಷೇತ್ರ: ದಿವ್ಯ ಟಿಎಸ್, ಅದಿತಿ ಅಶೋಕ್, ಅಶೋಕ್ ಗದಿಗೆಪ್ಪ ಏಣಗಿ.

    ನ್ಯಾಯಾಂಗ ಕ್ಷೇತ್ರ: ವಿ ಗೋಪಾಲಗೌಡ.

    ಕೃಷಿ-ಪರಿಸರ ಕ್ಷೇತ್ರ: ಸೋಮನಾಥರೆಡ್ಡಿ ಪೂರ್ಮಾ, ದ್ಯಾವನಗೌಡ ಟಿ. ಪಾಟೀಲ, ಶಿವರೆಡ್ಡಿ ಹನುಮರೆಡ್ಡಿ ವಾಸನ.

    ಸಂಕೀರ್ಣ ಕ್ಷೇತ್ರ: ಎಎಂ ಮದರಿ, ಹಾಜಿ ಅಬ್ದುಲ್ಲಾ ಪರ್ಕಳ, ಮಿಮಿಕ್ರಿ ದಯಾನಂದ್, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಕೊಡನ ಪೂವಯ್ಯ ಕಾರ್ಯಪ್ಪ.

    ಮಾಧ್ಯಮ ಕ್ಷೇತ್ರ: ದಿನೇಶ ಅಮೀನ್‌ಮಟ್ಟು, ಜವರಪ್ಪ, ಮಾಯಾ ಶರ್ಮ, ರಫೀ ಭಂಡಾರ.

    ವಿಜ್ಞಾನ/ ತಂತ್ರಜ್ಞಾನ ಕ್ಷೇತ್ರ: ಎಸ್. ಸೋಮನಾಥ್ ಶ್ರೀಧರ್ ಪನಿಕರ್, ಪ್ರೊ. ಗೋಪಾಲನ್ ಜಗದೀಶ್

    ಹೊರನಾಡು/ ಹೊರದೇಶ ಕ್ಷೇತ್ರ: ಸೀತಾರಾಮ ಅಯ್ಯಂಗಾರ್, ದೀಪಕ್ ಶೆಟ್ಟಿ, ಶಶಿಕಿರಣ್ ಶೆಟ್ಟಿ.

    ಸ್ವಾತಂತ್ರ್ಯ ಹೋರಾಟಗಾರ ಕ್ಷೇತ್ರ: ಪುಟ್ಟಸ್ವಾಮಿ ಗೌಡ.

    10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ:
    1. ಕರ್ನಾಟಕ ಸಂಘ
    2. ಬಿಎನ್ ಶ್ರೀರಾಮ ಪುಸ್ತಕ ಪ್ರಕಾಶನ
    3. ಮಿಥಿಕ್ ಸೊಸೈಟಿ
    4. ಕನಾಟಕ ಸಾಹಿತ್ಯ ಸಂಘ
    5. ಮೌಲಾನಾ ಅಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ(ರಿ)
    6. ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ
    7. ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ
    8. ಚಿಣ್ಣರ ಬಿಂಬ
    9. ಮಾರುತಿ ಜನಸೇವಾ ಸಂಘ
    10. ವಿದ್ಯಾದಾನ ಸಮಿತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪರೂಪದಲ್ಲೇ ಅಪರೂಪದ ಕಲಾವಿದ – ಮುಖವೀಣೆ ಅಂಜಿನಪ್ಪಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    ಅಪರೂಪದಲ್ಲೇ ಅಪರೂಪದ ಕಲಾವಿದ – ಮುಖವೀಣೆ ಅಂಜಿನಪ್ಪಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    ಚಿಕ್ಕಬಳ್ಳಾಪುರ: ಅವರ ಕಲೆ ರಾಜ್ಯದಲ್ಲೇ, ಅಪರೂಪದಲ್ಲಿ ಅಪರೂಪ. ಅವರ ತರುವಾಯ ಆ ಕಲೆಯೂ ವಿನಾಶವಾಗುತ್ತದೆಂಬ ಚಿಂತೆ. ಇವೆಲ್ಲದರ ಮಧ್ಯೆ ರಾಜ್ಯ ಸರ್ಕಾರ ಈ ಬಾರಿ ಅಪರೂಪದ ಈ ಕಲಾವಿದನನ್ನು ಗುರುತಿಸಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award) ನೀಡಿ ಗೌರವಿಸಿದೆ. ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗುಡಿಬಂಡೆ ತಾಲೂಕು ಜನಪದ ಕಲಾವಿದ ಮುಖವೀಣೆ ಅಂಜಿನಪ್ಪನವರಿಗೆ (Mukhaveene Anjinappa) ಈ ಬಾರಿ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

    ಮುಖವೀಣೆ ಅಂಜಿನಪ್ಪನವರ ಹಿನ್ನಲೆ:
    ಮುಖವೀಣೆ ಅಂಜಿನಪ್ಪ ಮೂಲತಃ ಕಲಾವಿದ ಕುಟುಂಬದವರು. ತಮ್ಮ ಪೂರ್ವಜರಿಂದ ಬಂದಂತಹ ಮುಖವೀಣೆ ಕಲೆಯನ್ನು ಬಾಲ್ಯದಲ್ಲೇ ಕಲಿತುಕೊಂಡು, ಹೊಟ್ಟೆ ಪಾಡಿಗಾಗಿ ಊರೂರು ಸುತ್ತಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ಹೊಟ್ಟೆಪಾಡಿಗಾಗಿ ಮಾಡುತ್ತಿದ್ದ ಕಲೆಯನ್ನು ದೇಶಾದ್ಯಂತ ಪ್ರಖ್ಯಾತಿಗೊಳಿಸಿ, ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಬೆರಳೆಣಿಕೆ ಸಂಖ್ಯೆಯಲ್ಲಿರುವ ಮುಖವೀಣೆ ಕಲಾವಿದರಲ್ಲಿ ಅಂಜಿನಪ್ಪ ಕೂಡಾ ಒಬ್ಬರು. ಅಂಜಿನಪ್ಪ ಹಾಗೂ ಅವರ ಕಲೆಯನ್ನು ಗುರುತಿಸಿ ರಾಜ್ಯ ಸರ್ಕಾರ ಈಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿ ಗೌರವ ಸಲ್ಲಿಸುತ್ತಿದೆ.

    ಮುಖವೀಣೆಯ ವೈಶಿಷ್ಟ:
    ಬಾಯಿಯ ಮೂಲಕ ಹಲವು ತರಹೇವಾರಿ ನಾದಸ್ವರಗಳನ್ನು ನುಡಿಸುವ ಅಂಜಿನಪ್ಪನವರು ನಾದಸ್ವರಗಳನ್ನು ಬಾಯಿಯ ಮೂಲಕ ನುಡಿಸುತ್ತಿರುವಾಗಲೇ ಒಂದು ಮೂಗಿನ ಹೊಳ್ಳೆಯ ಮೂಲಕ ನೀರು ಒಳಹೋಗಿಸಿ, ಮತ್ತೊಂದು ಮೂಗಿನ ಹೊಳ್ಳೆಯ ಮೂಲಕ ಹೊರಬರಿಸುವಂತಹ ಅಪರೂಪದ ಕಲಾ ಪ್ರದರ್ಶನವನ್ನು ಮೈಗೂಡಿಸಿಕೊಂಡಿದ್ದಾರೆ. ಬಹಳಷ್ಟು ಎಚ್ಚರಿಕೆಯಿಂದ ಮಾಡಬೇಕಾದ ಈ ಕಲೆಯನ್ನು ಅಂಜಿನಪ್ಪನವರು ನೀರು ಕುಡಿದಷ್ಟೇ ಸಲೀಸು ಎಂಬಂತೆ ಪ್ರದರ್ಶನ ಮಾಡುತ್ತಾರೆ. ಪುಟ್ಟ ಪುಟ್ಟ ವಾದ್ಯಗಳು ಹಾಗೂ ಮುಖವೀಣೆಯಿಂದ ಹೊರಬರುವ ಇವರ ನಾದಸ್ವರಗಳು ಎಂತಹವರನ್ನೂ ಮೋಡಿ ಮಾಡುತ್ತದೆ. ಇದನ್ನೂ ಓದಿ: ಕಾಂತಾರ ಎಫೆಕ್ಟ್ : ರಿಯಲ್ ಕಾಂತಾರಗೆ ಇಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

    ಚಿಕ್ಕಬಳ್ಳಾಪುರದ ಸನಾದಿ ಅಪ್ಪಣ್ಣ ಎಂದೇ ಖ್ಯಾತರಾಗಿರುವ ಮುಖವೀಣೆ ಅಂಜಿನಪ್ಪನವರಿಗೆ ಈಗಾಗಲೇ ಹಲವಾರು ಪ್ರಶಸ್ತಿ ಸನ್ಮಾನಗಳು ಬಂದಿವೆ. ಆದರೂ ಅಂಜಿನಪ್ಪನವರನ್ನು ಕಾಡುತ್ತಿರುವ ಆರ್ಥಿಕ ಸಂಕಷ್ಟ ಮಾತ್ರ ದೂರವಾಗಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಗೆ ಅಂಜಿನಪ್ಪ ಕೀರ್ತಿ ತಂದಿದ್ದಾರೆ. ಈಗ ಕನ್ನಡ ರಾಜೋತ್ಸವ ಪ್ರಶಸ್ತಿ ನೀಡಿರುವುದಕ್ಕೆ ಜಿಲ್ಲೆಯ ಜನ ಹಾಗೂ ಸ್ವತಃ ಅಂಜಿನಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

    ವಿವಿಧ ಪ್ರಶಸ್ತಿಗಳ ಮಧ್ಯೆ ಇದೀಗ ನಾಡಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಚಾರ. ಆದರೆ ಮುಖವೀಣೆ ಅಂಜಿನಪ್ಪನವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಸರ್ಕಾರ ಹಾಗೂ ದಾನಿಗಳು ಅವರ ಸಹಾಯಕ್ಕೆ ಬರಬೇಕು ಎಂದು ಪ್ರಜ್ಞಾವಂತ ಅವರ ಒಡನಾಡಿಗಳು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಟ ಪುನೀತ್‌ ರಾಜ್‌ಕುಮಾರ್‌ಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

    ಜಿಲ್ಲೆಯ ಶಿಕ್ಷಣ ತಜ್ಞ ಕೋಡಿರಂಗಪ್ಪನವರಿಗೆ ಪ್ರಶಸ್ತಿ:
    ಈ ಬಾರಿ ಮುಖವೀಣೆ ಅಂಜಿನಪ್ಪನವರ ಜೊತೆಯಲ್ಲೇ ಜಿಲ್ಲೆಯ ಶಿಕ್ಷಣ ತಜ್ಞ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೋಡಿ ರಂಗಪ್ಪನವರು ಕೂಡಾ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಹೀರೋ, ಅನಕ್ಷರಸ್ಥ ಸಾಹಿತಿ ರಾಮಣ್ಣ ಬ್ಯಾಟಿಗೆ ರಾಜ್ಯೋತ್ಸವ ಪ್ರಶಸ್ತಿ

    ಪಬ್ಲಿಕ್ ಹೀರೋ, ಅನಕ್ಷರಸ್ಥ ಸಾಹಿತಿ ರಾಮಣ್ಣ ಬ್ಯಾಟಿಗೆ ರಾಜ್ಯೋತ್ಸವ ಪ್ರಶಸ್ತಿ

    ಗದಗ: 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಗದಗ ಜಿಲ್ಲೆಯ ಇಬ್ಬರು ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ನಗರದ ಬೆಟಗೇರಿಯ ಪಬ್ಲಿಕ್ ಹೀರೋ ರಾಮಣ್ಣ ಬ್ಯಾಟಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನಗರದ ಬಿ.ಎಫ್ ದಂಡಿನ ಅವರಿಗೆ ಲಭಿಸಿದೆ.

    ವಿಶೇಷ ಚೇತನ ರಾಮಣ್ಣ ಬ್ಯಾಟಿ ಅವರ ಸಾಹಿತ್ಯ ಸಾಧನೆ ಕುರಿತು ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಸುದ್ದಿ ಪ್ರಸಾರ ಮಾಡಲಾಗಿತ್ತು. ವರದಿ ಬಂದ ನಂತರ ಎರಡು ಬಾರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈಗ ರಾಜ್ಯೋತ್ಸವ ಪ್ರಶಸ್ತಿ ರಾಮಣ್ಣ ಅವರ ಮುಡಿಗೇರಿದೆ. ಇದು ಪಬ್ಲಿಕ್ ಟಿವಿ ಇಂಪ್ಯಾಕ್ಟ್. ಇಂದು ಸರ್ಕಾರ ಪಟ್ಟಿ ಪ್ರಕಟಿಸುತ್ತಿದ್ದಂತೆ ಮನೆಯಲ್ಲಿ ಹಬ್ಬದ ವಾತಾವರಣ. ಕುಟುಂಬಸ್ಥರು ಒಟ್ಟಾಗಿ ಸಿಹಿ ತಿನಿಸಿ ಸಂಭ್ರಮಿಸಿದರು.

    ರಾಮಣ್ಣ ಅನಕ್ಷರಸ್ಥ, ಇಂದಿಗೂ ಓದಲು ಬರೆಯಲು ಬರೋದಿಲ್ಲ, ಕಣ್ಣು ಕಾಣುವುದಿಲ್ಲ, ಕಿವಿ ಸಹ ಅಲ್ಪಸ್ವಲ್ಪ ಮಾತ್ರ ಕೇಳಿಸುವ ವಿಶೇಷ ಚೇತನ ಸಾಹಿತಿ. ಮಕ್ಕಳು, ಸ್ನೇಹಿತರು ಇವರು ಹೇಳಿದಂತೆ ಬರೆಯುತ್ತಾರೆ. ಗಾಡ್ ಗಿಫ್ಟ್ ಅನ್ನುವಂತೆ ಇಲ್ಲಿಯವರೆಗೆ ಸುಮಾರು 30 ಸಾವಿರ ಪದ್ಯಗಳು, 50ಕ್ಕೂ ಅಧಿಕ ಗ್ರಂಥಗಳು, 20ಕ್ಕೂ ಅಧಿಕ ಪುರಾಣಗಳು ಬರೆದಿದ್ದಾರೆ. ಅದರಲ್ಲಿ ಪ್ರಮುಖವಾಗಿ ಅಂಬೇಡ್ಕರ್ ಪುರಾಣ, ಬಸವ ಪುರಾಣ, ಬುದ್ಧ ಪುರಾಣ, ಇಟಗಿ ಭೀಮಾಂಬಿಕೆ ಪುರಾಣ, ಶಂಕರಾಚಾರ್ಯರ ಪುರಾಣ ಹೀಗೆ ಅನೇಕ ಪುರಾಣಗಳನ್ನು ಬರೆದಿದ್ದಾರೆ. ನೂರಾರು ಚಟುವಟಿಕೆಗಳನ್ನು ಬರೆದಿದ್ದಾರೆ.

    ಇವರು ಬರೆದ ಕೃತಿಗಳು ಭಾಮಿನಿ ಷಟ್ಪದಿ, ಗದ್ಯ, ಪದ್ಯ, ಚೌಪದಿ ರೂಪದಲ್ಲಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಾಮಣ್ಣ ಅವರು ಬರೆದ 60ಕ್ಕೂ ಅಧಿಕ ಕೃತಿಗಳು ಬಿಡುಗಡೆ ಆಗಬೇಕಿವೆ. 4 ಸಾವಿರ ಪದ್ಯದ ರಾಮಾಯ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಇದಕ್ಕೆಲ್ಲಾ ಸ್ಪೂರ್ತಿ ಮಗ ದಾನೇಶ. ಮಗಳು ಗಾಯತ್ರಿ ಹಾಗೂ ಸ್ನೇಹಿತರ ಬಳಗದವರು ಇವರು ಹೇಳಿದ ಗ್ರಂಥಗಳನ್ನು ಬರೆಯುತ್ತಾರೆ. ಇದನ್ನೂ ಓದಿ: ಪಬ್ಲಿಕ್ ಹೀರೋ ಡಾ. ಅಶೋಕ್ ಸೊನ್ನದ್‍ಗೆ ರಾಜ್ಯೋತ್ಸವ ಪ್ರಶಸ್ತಿ

    ಗದಗ ತಾಲೂಕಿನ 3 ನೇ ಕನ್ನಡ ಸಾಹಿತ್ಯ ಸಮ್ಮೇಳ ಹಾಗೂ ರಾಮದುರ್ಗ ತಾಲೂಕು 4 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. ಇವರ ಸಾಧನೆಗೆ ಸಾವಿರಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ವೇದಿಕೆಯಲ್ಲಿ ಸುದ್ದಿ ಪ್ರಸಾರದ ನಂತರ ಸಾಕಷ್ಟು ಪ್ರಶಸ್ತಿ ಸನ್ಮಾನಗಳು ದೊರೆತಿವೆ. ಇದನ್ನೂ ಓದಿ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

  • ಪಬ್ಲಿಕ್ ಹೀರೋ ಡಾ. ಅಶೋಕ್ ಸೊನ್ನದ್‍ಗೆ ರಾಜ್ಯೋತ್ಸವ ಪ್ರಶಸ್ತಿ

    ಪಬ್ಲಿಕ್ ಹೀರೋ ಡಾ. ಅಶೋಕ್ ಸೊನ್ನದ್‍ಗೆ ರಾಜ್ಯೋತ್ಸವ ಪ್ರಶಸ್ತಿ

    ಬಾಗಲಕೋಟೆ: ಕನ್ನಡ ರಾಜ್ಯೋತ್ಸವದ 65ನೇ ವರ್ಷದ ಸಂಭ್ರಮದಲ್ಲಿ 65 ಮಂದಿ ಸಾಧಕರಿಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಘೋಷಣೆ ಮಾಡಿದೆ. ಈ ಬಾರಿಯ ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಬ್ಲಿಕ್ ಹೀರೋ ಡಾ. ಅಶೋಕ್ ಸೊನ್ನದ್ ಅವರಿಗೆ ಲಭಿಸಿದೆ. ಸೊನ್ನದ್ ಅವರ ಸಮಾಜ ಸೇವೆಯನ್ನ ಗುರುತಿಸಿದ್ದ ಪಬ್ಲಿಕ್ ಟಿವಿ 2014ರಲ್ಲಿಯೇ ಅಶೋಕ್ ಸೊನ್ನದ್ ಅವರನ್ನ ಪಬ್ಲಿಕ್ ಹೀರೋ ವೇದಿಯಲ್ಲಿ ಹೊರ ಜಗತ್ತಿಗೆ ಪರಿಚಯಿಸಿತ್ತು.

    ಡಾ ಅಶೋಕ್ ಸೊನ್ನದ್ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬಂಟನೂರು ಗ್ರಾಮದವರು. ತಮ್ಮ 75ನೇ ಇಳಿ ವಯ್ಯಸ್ಸಿನಲ್ಲೂ ಬಾಗಲಕೋಟೆ ನಗರದಲ್ಲೊಂದು ತಾಯಿ ಪಾರ್ವತಿಬಾಯಿ ಅವರ ಹೆಸರಲ್ಲಿ ಆಸ್ಪತ್ರೆ ತೆರೆದು ಉಚಿತ ಚಿಕಿತ್ಸೆ ನೀಡುತ್ತಾ ಬಡ ಜನರಿಗೆ ಸಂಜೀವಿನಿಯಾಗಿದ್ದಾರೆ. ಅಮೆರಿಕಾದಲ್ಲಿ ಕೆಲಸ ಮಾಡಿ ದೇಶಕ್ಕಾಗಿ ಸೇವೆ ಸಲ್ಲಿಸುವ ಉದ್ದೇಶದಿಂದ ತವರಿಗೆ ಹಿಂದುರಗಿ ಚಿಕಿತ್ಸೆ ನೀಡುತ್ತಿದ್ದಾರೆ.

    ಸಕ್ಕರೆ ರೋಗ, ಊಂಡ್ ಮ್ಯಾನೇಜ್ಮೆಂಟ್ ಹೀಗೆ ಕ್ಲಿಷ್ಟ ರೋಗಗಳಿಗೆ ಸರಳ ಚಿಕಿತ್ಸೆ ನೀಡಿ ರೋಗಿಗಳ ಪ್ರೀತಿಗೆ ಪಾತ್ರವಾಗಿದ್ದಾರೆ. ದಿನಕ್ಕೆ ಹತ್ತು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಪ್ರತಿ ರೋಗಿಯ ಬಳಿ ಆತ್ಮೀಯವಾಗಿ ಮಾತನಾಡುತ್ತಾ, ಎಲ್ಲ ಸಮಸ್ಯೆಗಳನ್ನು ನಿಧಾನವಾಗಿ ಆಲಿಸಿ ಗುಣಮಟ್ಟದ ಚಿಕಿತ್ಸೆಯನ್ನ ಅಶೋಕ್ ಸೊನ್ನದ್ ನೀಡುತ್ತಾರೆ. ಯಾರೇ ಇವರ ಬಳಿ ಚಿಕಿತ್ಸೆಗೆ ಬಂದರೀ ಸರದಿ ಸಾಲಿನಲ್ಲಿಯೇ ಬರಬೇಕು. ಬಡವ ಶ್ರೀಮಂತ ಎಂಬ ಭೇದ-ಭಾವವಿಲ್ಲದೇ ಸರಳ ಚಿಕಿತ್ಸೆ ನೀಡುತ್ತಾ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ನಾನು ಎಲ್ಲ ವೈದ್ಯರಂತೆ ಹಣ ಮಾಡುವ ಉದ್ದೇಶದಿಂದ ಆಸ್ಪತ್ರೆಯನ್ನು ತೆರೆದಿಲ್ಲ. ಅಮೆರಿಕದಲ್ಲಿ ಅಧ್ಯಯನ ಮಾಡಿ ಗುಣಮಟ್ಟವನ್ನು ಕಾಪಾಡದಿದ್ದರೆ ಹೇಗೆ? ಅದಕ್ಕಾಗಿ ಪ್ರತಿ ರೋಗಿಯನ್ನು ಕೂಲಂಕುಶವಾಗಿ ತಪಾಸಣೆ ಮಾಡುತ್ತೇನೆ. ಕೆಲವೊಮ್ಮೆ ರೋಗಿಯ ಕುಟುಂಬದ ಹಿನ್ನೆಲೆ ಕೇಳಿ ತಪಾಸಣೆ ಮಾಡುವಾಗ ಒಂದು ಗಂಟೆ ಆಗುತ್ತದೆ. ಹೀಗಾಗಿ ಸರದಿಯಲ್ಲಿ ನಿಂತ ಮೊದಲ ಹತ್ತು ಮಂದಿಗೆ ಮಾತ್ರ ಚಿಕಿತ್ಸೆ ನೀಡುತ್ತೇನೆ ಎಂದು ಸೊನ್ನದ್ ಹೇಳುತ್ತಾರೆ.

    ನಾನು ಹುಟ್ಟಿ ಬೆಳೆದ ದೇಶ ಭಾರತ. ನಾನು ಇಲ್ಲಿಯೇ ಶಿಕ್ಷಣ ಪಡೆದು ವೈದ್ಯಕೀಯ ಪದವಿ ಪಡೆದು ಅಮೆರಿಕದಲ್ಲಿ ಹೆಚ್ಚಿನ ಅಧ್ಯಯನ ಮಾಡಿದ್ದೇನೆ. ನಾನು ಕಲಿತ ವಿದ್ಯೆಯಿಂದ ದೇಶ ಜನರಿಗೆ ನೀಡಬೇಡವೇ? ಅದಕ್ಕಾಗಿ ಬಡ ಜನರಿಗಾಗಿ ಆಸ್ಪತ್ರೆಯನ್ನು ತೆರೆದಿದ್ದೇನೆ ಎಂಬುವುದು ಅಶೋಕ್ ಅವರ ಮಾತು.

    ಗಿನ್ನೀಸ್ ದಾಖಲೆ ಕುಟುಂಬ: ಡಾ. ಅಶೋಕ್ ಅವರ ಮನೆಯಲ್ಲಿ ಏಳು ಮಂದಿ ಪಿಹೆಚ್‍ಡಿ ಪಡೆದು ಗಿನ್ನಿಸ್ ದಾಖಲೆ ಮಾಡಿದ್ದಾರೆ ಬಹುತೇಕರು ಅಮೆರಿಕದಲ್ಲೇ ನೆಲೆಸಿದ್ದರೆ, ಇವರು ಮಾತ್ರ ತವರಿಗೆ ಬಂದು ಜನರ ಸೇವೆ ಮಾಡುತ್ತಿದ್ದಾರೆ. ಇದನ್ನೂ ಓದಿ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

  • ಸ್ಕೇಟಿಂಗ್ ಚಾಂಪಿಯನ್ ಅನಘಾಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

    ಸ್ಕೇಟಿಂಗ್ ಚಾಂಪಿಯನ್ ಅನಘಾಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

    ಮಂಗಳೂರು: ಸ್ಕೇಟಿಂಗ್ ಪಟು ಅನಾಘಾಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡುವ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನ ಮಾಡಲಾಯಿತು.

    ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ, ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಅತಿಥಿಗಳು ಪ್ರಶಸ್ತಿ ನೀಡಿ ಗೌರವಿಸಿದರು.

    ಮಂಗಳೂರಿನ ಕದ್ರಿ ಹಿಲ್ಸ್ ನಿವಾಸಿ ಸ್ಕೇಟಿಂಗ್ ಪಟು ಅನಘಾ,ತನ್ನ ನಾಲ್ಕನೇ ವಯಸ್ಸಿನಲ್ಲಿ ಸ್ಕೇಟಿಂಗ್ ಕ್ರೀಡೆಯನ್ನು ಆರಂಭಿಸಿದ್ದು ಪ್ರಸ್ತುತ 9 ವರ್ಷ ವಯಸ್ಸಿನಲ್ಲಿ, ಕಳೆದ 2020 ಜನವರಿ 4 ಹಾಗೂ 5 ರಂದು ಸಿಂಗಾಪುರದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಐಸ್ ಸ್ಕೇಟಿಂಗ್ ನಲ್ಲಿ ಎರಡು ಚಿನ್ನದ ಪದಕ ಪಡೆದು ಅತೀ ಕಿರಿಯ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಚಿನ್ನದ ಪದಕ ಪಡೆದ ದೇಶದ ಮೊದಲ ಸ್ಕೇಟರ್ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಅನಘಾ ಈವರೆಗೆ ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 22 ಚಿನ್ನದ ಪದಕ, 9 ಬೆಳ್ಳಿ ಹಾಗೂ 6 ಕಂಚಿನ ಪದಕ ಪಡೆದಿದ್ದಾರೆ. ಮಂಗಳೂರಿನ ಕದ್ರಿ ಹಿಲ್ಸ್ ನಿವಾಸಿ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಲೂಡ್ರ್ಸ್ ಸೆಂಟ್ರಲ್ ಸ್ಕೂಲ್ ನ ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

    ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಯು.ಟಿ.ಖಾದರ್, ಪರಿಷತ್ ಸದಸ್ಯರಾದ ಐವಾನ್ ಡಿಸೋಜಾ, ಭೋಜೆಗೌಡ, ಜಿ.ಪಂ.ಅಧ್ಯಕ್ಷೆ ಕಸ್ತೂರಿ ಪಂಜ, ತಾ.ಪಂ.ಅಧ್ಯಕ್ಷ ಮೋನು, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಉಪಸ್ಥಿತರಿದ್ದರು.

  • ಸ್ಕೇಟಿಂಗ್ ಚಾಂಪಿಯನ್ ಅನಘಾಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    ಸ್ಕೇಟಿಂಗ್ ಚಾಂಪಿಯನ್ ಅನಘಾಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡುವ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕ್ರೀಡಾ ವಿಭಾಗದಿಂದ ಮಂಗಳೂರಿನ ಸ್ಕೇಟಿಂಗ್ ಪಟು ಅನಘಾ ಆಯ್ಕೆಯಾಗಿದ್ದಾರೆ.

    ತನ್ನ ನಾಲ್ಕನೇ ವಯಸ್ಸಿನಲ್ಲಿ ಸ್ಕೇಟಿಂಗ್ ಕ್ರೀಡೆಯನ್ನು ಆರಂಭಿಸಿದ 9 ವರ್ಷ ವಯಸ್ಸಿನ ಅನಘಾ ಕಳೆದ 2020 ಜನವರಿ 4 ಹಾಗೂ 5 ರಂದು ಸಿಂಗಾಪುರದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಐಸ್ ಸ್ಕೇಟಿಂಗ್ ನಲ್ಲಿ ಎರಡು ಚಿನ್ನದ ಪದಕ ಪಡೆದು ಅತೀ ಕಿರಿಯ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಚಿನ್ನದ ಪದಕ ಪಡೆದ ದೇಶದ ಮೊದಲ ಸ್ಕೇಟರ್ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಅನಘಾ ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಈವರೆಗೆ ಒಟ್ಟು 22 ಚಿನ್ನದ ಪದಕ, 9 ಬೆಳ್ಳಿ ಹಾಗೂ 6 ಕಂಚಿನ ಪದಕ ಪಡೆದಿದ್ದಾರೆ. ಮಂಗಳೂರಿನ ಕದ್ರಿ ಹಿಲ್ಸ್ ನಿವಾಸಿ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಸೆಂಟ್ರಲ್ ಸ್ಕೂಲ್ ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

    ಕಳೆದ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ನೀತಿ ಸಂಹಿತೆಯ ಹಿನ್ನಲೆಯಲ್ಲಿ ಪ್ರಶಸ್ತಿ ನೀಡಲಿಲ್ಲ. ಹೀಗಾಗಿ 2019-20ರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಜಿಲ್ಲಾಡಳಿತ ನಾಳೆ ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಿದೆ.

  • 64 ಗಣ್ಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    64 ಗಣ್ಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    – ಪಬ್ಲಿಕ್ ಟಿವಿ ಪಬ್ಲಿಕ್ ಹೀರೋಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
    – ಪಬ್ಲಿಕ್ ಹೀರೋ ಶಿವಾಜಿ ಕಾಲಿಗೆ ನಮಸ್ಕರಿಸಿದ ತೇಜಸ್ವಿ ಸೂರ್ಯ

    ಬೆಂಗಳೂರು: ಪಬ್ಲಿಕ್ ಟಿವಿ ಪಬ್ಲಿಕ್ ಹೀರೋಗಳಾದ ಶಿವಾಜಿ ಛತ್ರಪ್ಪ ಕಾಗಣಿಕರ್ ಹಾಗೂ ಸಾಲುಮರದ ವೀರಾಚಾರ್ಯ ಅವರಿಗೆ ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

    ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 64 ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪೈಕಿ ಪಬ್ಲಿಕ್ ಹೀರೋ ಶಿವಾಜಿ ಛತ್ರಪ್ಪ ಕಾಗಣಿಕರ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕದ ಅಣ್ಣಾ ಹಜಾರೆ ಪ್ರಶಸ್ತಿ ನೀಡಿ ಗೌರವಿಸಿದರು. ಇವರ ಸಮಾಜ ಸೇವೆ ಕುರಿತು ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ಸಂಸದ ತೇಜಸ್ವಿ ಸೂರ್ಯ ಅವರು ಶಿವಾಜಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. 

     

    ಈ ವೇಳೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ, ನಾಡಗೀತೆಯ ಉಲ್ಲೇಖವೇ ರಾಜ್ಯೋತ್ಸವ ದಿನಾಚರಣೆಯ ಮುನ್ನುಡಿ. ತ್ಯಾಗ ಬಲಿದಾನದ ಪ್ರತಿಫಲವನ್ನು ನಾವು ಇಂದು ಅನುಭವಿಸುತ್ತಿದ್ದೇವೆ. ನಾಡಾಗಲಿ, ಬೀಡಾಗಲಿ ಕಟ್ಟುವುದು ತುಂಬಾ ಕಷ್ಟ. ಆದರೆ ಕೆಡುವುದು ತುಂಬಾ ಸುಲಭ. ಕಟ್ಟಿದವರು ಯಾವತ್ತು ಕೆಡುವಲು ಯತ್ನಿಸುವುದಿಲ್ಲ. ನಾಡು ನುಡಿಯ ಕುರಿತಾಗಿ ಸಾಧನೆ ಮಾಡಿದ ಎಲ್ಲರ ಬಗ್ಗೆ ನನಗೂ ನಮ್ಮ ಸರ್ಕಾರಕ್ಕೂ ಗೌರವವಿದೆ ಎಂದು ತಿಳಿಸಿದರು.

    ಭಾಷೆ ಮತ್ತು ಸಂಸ್ಕೃತಿ ಎರಡು ಒಂದೇ. ಯಾರು ತಮ್ಮ ಮಾತೃ ಭಾಷೆಯನ್ನು ಕಳೆದುಕೊಳ್ಳುತ್ತಾರೋ ಅವರು ಕೇವಲ ಭಾಷೆಯನ್ನಷ್ಟೆ ಅಲ್ಲ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಾರೆ. ಜಾಗತಿಕ ಮಟ್ಟದಲ್ಲಿ ಮುನ್ನುಗ್ಗುತ್ತ ಭಾಷೆ ಕಳೆದು ಹೋಗುತ್ತಿದ್ದೇವೆ. ನಾವು ಬ್ರಿಟಿಷರು ಆಗುವುದಿಲ್ಲ. ಆದ್ದರಿಂದ ಭಾಷೆ ಉಳಿಸುವ ಸವಾಲನ್ನು ಸ್ವೀಕರಿಸಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 64 ಗಣ್ಯರಿಗೆ ಸನ್ಮಾನ ಮಾಡುವ ಸೌಭಾಗ್ಯ ನಮ್ಮದಾಗಿದೆ ಎಂದು ಹೇಳಿದರು.

    ಸಿಎಂ ಯಡಿಯೂರಪ್ಪ ಮಾತನಾಡಿ, ರವೀಂದ್ರ ಕಲಾಕ್ಷೇತ್ರದಲ್ಲಿ ಸ್ಥಳಾವಕಾಶ ಕಡಿಮೆಯಿದೆ. ಆದರೆ ಕಾರ್ಯಕ್ರಮಕ್ಕೆ ಸಾವಿರಾರು ಜನ ಬಂದು ನಿಂತಿದ್ದಾರೆ. ಮುಂದಿನ ವರ್ಷ ವಿಶಾಲವಾದ ಸ್ಥಳದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

    ಸಲಹಾ ಸಮಿತಿಯ ಒಕ್ಕೋರಲ ಸಹಮತದೊಂದಿಗೆ ಕೆಲವು ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಯಾರು ನಿಜವಾದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭೂಷಣರಾಗಿದ್ದಾರೋ ಅವರಿಗೆ ಮುಂದಿನ ವರ್ಷ ಪ್ರಶಸ್ತಿ ಕೊಡಲಾಗುವುದು. ಕನ್ನಡವನ್ನು ನಾವು ಮರೆತರೆ ಸಂಸ್ಕ್ರತಿಯನ್ನ ಮರೆತಂತೆ. ಇಂಗ್ಲಿಷ್ ಸಂಬಂಳಕ್ಕಾದರೆ ಕನ್ನಡ ಉಂಬಳಕ್ಕೆ ಎನ್ನುವ ಮಾತಿದೆ. ಕನ್ನಡ ಸಂಬಂಳ ಹಾಗೂ ಉಬಂಳಕ್ಕೂ ಆಗಬೇಕು. ನಾಡು, ನುಡಿ, ಜಲದ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದರು.

    ಸಿಎಂ ಯಡಿಯೂರಪ್ಪ ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ 30 ನಿಮಿಷ ಬೇಗ ಆಗಮಿಸಿ ಸಂಗೀತ ಕಾರ್ಯಕ್ರಮ ವೀಕ್ಷಿಸಿದರು. ಬಳಿಕ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕ ಉದಯ ಗರುಡಾಚಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ ಉಪಸ್ಥಿತರಿದ್ದರು.