Tag: ಕನ್ನಡ ಪರ ಸಂಘಟನೆ

  • ಮೈಶುಗರ್‌ನಲ್ಲಿ ಯಂತ್ರ ಹೊತ್ತೊಯ್ಯಲು ನಿರಾಣಿ ಸಿಬ್ಬಂದಿ ಪ್ರಯತ್ನ

    ಮೈಶುಗರ್‌ನಲ್ಲಿ ಯಂತ್ರ ಹೊತ್ತೊಯ್ಯಲು ನಿರಾಣಿ ಸಿಬ್ಬಂದಿ ಪ್ರಯತ್ನ

    ಮಂಡ್ಯ: ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆಗೆ ನುಗ್ಗಿ ಯಂತ್ರವನ್ನು ಸಾಗಣೆ ಮಾಡಲು ಸಚಿವ ಮುರುಗೇಶ್ ನಿರಾಣಿ ಸಿಬ್ಬಂದಿ ಪ್ರಯತ್ನಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.

    ಸದ್ಯ ಮೈಶುಗರ್ ಕಾರ್ಖಾನೆ ಆರಂಭವಾಗದ ಕಾರಣ ಖಾಸಗಿಯವರ ಕಣ್ಣು ಈ ಕಾರ್ಖಾನೆಯ ಮೇಲೆ ಬಿದ್ದಂತೆ ಕಾಣುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಮುರುಗೇಶ್ ನಿರಾಣಿಯ ಸಿಬ್ಬಂದಿ ನಡೆದುಕೊಂಡಿದ್ದಾರೆ.

    ಸಚಿವ ಮುರುಗೇಶ್ ನಿರಾಣಿ ಗುತ್ತಿಗೆ ಪಡೆದಿರುವ ಮಂಡ್ಯ ಜಿಲ್ಲೆಯ ಪಾಂಡವಪುರದ ಪಿಎಸ್‌ಎಸ್‌ಕೆ ಕಾರ್ಖಾನೆಯಲ್ಲಿ ಟರ್ಬೈನ್ ಗವರ್ನರ್ ಎಂಬ ಯಂತ್ರ ಕೆಟ್ಟು ಹೋಗಿತ್ತು. ಇದರಿಂದಾಗಿ ಅಲ್ಲಿನ ಸಿಬ್ಬಂದಿ ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆಗೆ ಯಾರಿಗೂ ಹೇಳದೆ ನುಗ್ಗಿ ಆ ಯಂತ್ರವನ್ನು ತೆಗೆದುಕೊಂಡು ಹೋಗುವ ಕೆಲಸಕ್ಕೆ ಮುಂದಾಗಿದ್ದಾರೆ. ದನ್ನೂ ಓದಿ: ನಕಲಿ ದಾಖಲೆಯಿಂದ ರೈಲು ಇಂಜಿನ್ ಮಾರಾಟ ಮಾಡಿದ ಎಂಜಿನಿಯರ್

    ಪಿಎಸ್‌ಎಸ್‌ಕೆ ಕಾರ್ಖಾನೆಯಲ್ಲಿ ಟರ್ಬೈನ್ ಗವರ್ನರ್ ಎಂಬ ಯಂತ್ರಕ್ಕೆ ಸುಮಾರು 25 ಲಕ್ಷ ರೂ.ಗಳಿದೆ. ಹೀಗಾಗಿ ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆಯಿಂದ ಈ ಯಂತ್ರವನ್ನು ತೆಗೆದುಕೊಂಡು ಹೋಗಲು ಪಿಎಸ್‌ಎಸ್‌ಕೆ ಸಿಬ್ಬಂದಿ ಬಂದಿದ್ದಾರೆ. ಈ ಹಿಂದೆ ಇವರು ಮೈಶುಗರ್ ಕಾರ್ಖಾನೆಯ ಸಿಬ್ಬಂದಿ ಆಗಿದ್ದರು. ದನ್ನೂ ಓದಿ: ಮಾಜಿ ಪತ್ನಿಗೆ 5516 ಕೋಟಿ ಜೀವನಾಂಶ ನೀಡುವಂತೆ ದುಬೈ ದೊರೆಗೆ ಹೈಕೋರ್ಟ್ ಆದೇಶ

    ನಿನ್ನೆ ಕಾರ್ಖಾನೆಯ ಬಳಿ ಬಂದ ಇವರು ಯಾರಿಗೂ ತಿಳಿಸದೆ ಮೈಶುಗರ್ ಒಳಭಾಗಕ್ಕೆ ನುಗ್ಗಿದ್ದಾರೆ. ನಂತರ ಅಲ್ಲಿ ಟರ್ಬೈನ್ ಯಂತ್ರವನ್ನು ಹುಡುಕಿ ಸಾಗಣೆ ಮಾಡಲು ಯತ್ನಿಸಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕರವೇ ಜಿಲ್ಲಾಧ್ಯಕ್ಷ ಜಯರಾಂ ಅವರನ್ನು ತಡೆದು ಪ್ರಶ್ನೆ ಮಾಡಿದ್ದಾರೆ. ನಂತರ ಅಲ್ಲಿಂದ ಪಿಎಸ್‌ಎಸ್‌ಕೆ ಸಿಬ್ಬಂದಿ ಪರಾರಿಯಾಗಿದ್ದಾರೆ. ಘಟನೆ ಹಿನ್ನೆಲೆ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

  • ಕರವೇ ಪ್ರತಿಭಟನೆ- ಬೆಂಗಳೂರು, ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

    ಕರವೇ ಪ್ರತಿಭಟನೆ- ಬೆಂಗಳೂರು, ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

    ನೆಲಮಂಗಲ: ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಧ್ವಂಸ ಹಾಗೂ ಕನ್ನಡಿಗರ ವಾಹನಗಳಿಗೆ ಕಲ್ಲು ತೂರಿದ ಎಂಇಎಸ್ ಪುಂಡರ ಕೃತ್ಯವನ್ನು ಖಂಡಿಸಿ ನಗರದಲ್ಲಿ ಕರವೇ ನಾರಾಯಣ ಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಮಾಕಳಿ ಬಳಿ ತುಮಕೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಹೀಗಾಗಿ ಕೆಲಕಾಲ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆಯಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಕರವೇ ಕಾರ್ಯಕರ್ತರು ಎಂಇಎಸ್ ಪುಂಡರಿಗೆ ಹಾಗೂ ಸಂಘಟನೆಗೆ ಬೆಂಬಲ ನೀಡುತ್ತಿರುವ ರಾಜಕಾರಣಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಎಂಇಎಸ್ ಸಂಘಟನೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಗಲಾಟೆ ಮಾಡಿದವರೆಲ್ಲಾ ಕಾಂಗ್ರೆಸಿಗರು: ಶ್ರೀರಾಮುಲು

    ಕರವೇ ನಾರಾಯಣ ಗೌಡ ಬಣದ ಮಂಜೇಗೌಡ ನೇತೃತ್ವದಲ್ಲಿ ಕಾರ್ಯಕರ್ತರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿ, ರಸ್ತೆ ತೆರವುಗೊಳಿಸಿದರು. ಇದನ್ನೂ ಓದಿ: ಎಲ್ಲರನ್ನೂ ಅಪರಾಧಿ, ಆರೋಪಿಗಳು ಎಂದು ನೋಡಬಾರದು: ಲಕ್ಷ್ಮಿ ಹೆಬ್ಬಾಳ್ಕರ್

  • ಪ್ರತಿಮೆ ಭಗ್ನ ಮಾಡೋರು ನೀವೇ, ಗೌರವ ಸಲ್ಲಿಸೋರು ನೀವೇ – ಸಿದ್ದು ವಿರುದ್ಧ ಬಿಜೆಪಿ ಕಿಡಿ

    ಪ್ರತಿಮೆ ಭಗ್ನ ಮಾಡೋರು ನೀವೇ, ಗೌರವ ಸಲ್ಲಿಸೋರು ನೀವೇ – ಸಿದ್ದು ವಿರುದ್ಧ ಬಿಜೆಪಿ ಕಿಡಿ

    ಬೆಂಗಳೂರು: ಸಿದ್ದರಾಮಯ್ಯನವರೇ ಪ್ರತಿಮೆ ಭಗ್ನ ಮಾಡುವವರೂ ನೀವೇ, ಗೌರವ ಸಲ್ಲಿಸುವವರೂ ನೀವೇ. ಇದೆಲ್ಲ ಹೇಗೆ ಸಾಧ್ಯ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದೆ.

    ಕುಂದಾನಗರಿ ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮುಖದ ಭಾಗ, ಮೂಗು ಮತ್ತು ಕತ್ತಿಯನ್ನು ಕಿಡಿಗೇಡಿಗಳು ಶನಿವಾರದ ಮುಂಜಾವಿನಲ್ಲಿ ವಿರೂಪಗೊಳಿಸಿದ್ದರು. ರಾಯಣ್ಣ ಹಿಡಿದಿದ್ದ ಕಠಾರಿಯನ್ನು ರಸ್ತೆಯ ಬದಿಗೆ ಎಸೆದಿದ್ದರು. ಜೊತೆಗೆ ಬಸ್ ಹಾಗೂ ಮನೆಗಳ ಮೇಲೆ ಕಲ್ಲುತೂರಾಟ ನಡೆಸಿ, ಹೋಟೆಲ್‍ವೊಂದರ ಮುಂದೆ ಇದ್ದ ಕನ್ನಡ ನಾಮಫಲಕವನ್ನು ಕೆಳಕ್ಕುರುಳಿಸಿದ್ದರು. ಇದರಿಂದಾಗಿ ಕನ್ನಡ ಪರ ಸಂಘಟನೆಗಳು ರೊಚ್ಚಿಗೆದ್ದಿದ್ದು, ಬೆಳಗಾವಿಯಲ್ಲಿ ಎಂಇಎಸ್ ಅನ್ನು ನಿಷೇಧಿಸಬೇಕೆಂದು ಪ್ರತಿಭಟನೆ ನಡೆಸುತ್ತಿದೆ. ಇನ್ನೂ ಕನ್ನಡ ಪರ ಕಾರ್ಯಕರ್ತರನ್ನು ನಿಭಾಯಿಸಲು ಪೊಲೀಸರು ಪರದಾಡುತ್ತಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ

    ಸದ್ಯ ಈ ಘಟನೆಗೆ ಕಾರಣ ಕಾಂಗ್ರೆಸ್ ಎಂದು ಬಿಜೆಪಿ ಟ್ವೀಟ್ ಮಾಡುವ ಮೂಲಕ ನೇರವಾಗಿ ದಾಳಿ ನಡೆಸಿದೆ. ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದು ಕಾಂಗ್ರೆಸ್ ಕಾರ್ಯಕರ್ತರು. ಕನ್ನಡಿಗರ ವಾಹನ ಪುಡಿಮಾಡಿದ್ದು ಕಾಂಗ್ರೆಸ್ ಕಾರ್ಯಕರ್ತರು. ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದು ಕಾಂಗ್ರೆಸ್ ಕಾರ್ಯಕರ್ತರು. ಮೂರೂ ಘಟನೆಗಳ ಸೂತ್ರದಾರರು ಈಗ ಘಟನೆಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯನವರೇ ಪ್ರತಿಮೆ ಭಗ್ನ ಮಾಡುವವರೂ ನೀವೇ, ಗೌರವ ಸಲ್ಲಿಸುವವರೂ ನೀವೇ. ಇದೆಲ್ಲ ಹೇಗೆ ಸಾಧ್ಯ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದೆ.

    ಮಹಾರಾಷ್ಟ್ರದಲ್ಲಿರುವ ಆಡಳಿತ ಪಕ್ಷ ಕನ್ನಡ ಬಾವುಟ ಸುಡುತ್ತದೆ, ಕನ್ನಡಿಗರ ವಾಹನ ಧ್ವಂಸ ಮಾಡುತ್ತದೆ. ಕರ್ನಾಟಕದ ವಿರೋಧ ಪಕ್ಷ ಶಿವಾಜಿ ಪ್ರತಿಮೆಗೆ ಮಸಿ ಬಳಿಯುತ್ತಿದೆ. ಕ್ರಿಯೆ ಮತ್ತು ಪ್ರತಿಕ್ರಿಯೆ ಎರಡೂ ಕೆಪಿಸಿಸಿ ಕಚೇರಿಯಿಂದ ಹೊರಟ ಆಜ್ಞೆ ಎಂದು ಆರೋಪಿಸಿದೆ. ಇದನ್ನೂ ಓದಿ: ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶ – ಕೈ ವಿರುದ್ಧ ಬಿಜೆಪಿ ಟ್ವೀಟ್ ದಾಳಿ

  • ಸಾವರ್ಕರ್‌ರನ್ನು ಭಾರತದಲ್ಲಿ ಬಿಟ್ಟರೆ ನಾವು ದೇಶ ಬಿಡಬೇಕಾಗುತ್ತೆ ಅನ್ನೋದು ಬ್ರಿಟಿಷರಿಗೆ ಗೊತ್ತಿತ್ತು: ಬೊಮ್ಮಾಯಿ

    ಸಾವರ್ಕರ್‌ರನ್ನು ಭಾರತದಲ್ಲಿ ಬಿಟ್ಟರೆ ನಾವು ದೇಶ ಬಿಡಬೇಕಾಗುತ್ತೆ ಅನ್ನೋದು ಬ್ರಿಟಿಷರಿಗೆ ಗೊತ್ತಿತ್ತು: ಬೊಮ್ಮಾಯಿ

    ಬೆಂಗಳೂರು: ವೀರ ಸಾವರ್ಕರ್ ಅವರನ್ನು ಭಾರತದಲ್ಲಿ ಬಿಟ್ಟರೆ ನಾವು ದೇಶ ಬಿಡಬೇಕಾಗುತ್ತೆ ಅಂತಾ ಬ್ರಿಟಷರಿಗೆ ಗೊತ್ತಿತ್ತು. ಸಾವರ್ಕರ್ ಬ್ರಿಟಿಷರ ಪಾಲಿಗೆ ನ್ಯೂಕ್ಲಿಯರ್ ಆಗಿದ್ರು. ಹಾಗಾಗಿ ದೇಶದ ಜನರಿಂದ ಬ್ರಿಟಿಷರು ಅವರನ್ನು ದೂರ ಇಟ್ಟರು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

    ಟೌನ್ ಹಾಲ್ ನಲ್ಲಿ ನಡೆದ ವೀರ ಸಾವರ್ಕರ್ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು, ವೀರ ಸಾರ್ವಕರ್ ಅವರ ಈ ಪುಸ್ತಕದ ಟೈಟಲ್‍ನಲ್ಲೇ ಇದೊಂದು ಅಪರೂಪದ ಪುಸ್ತಕ ಅನ್ನೋದು ತಿಳಿಯುತ್ತೆ. ಈ ಪುಸ್ತಕ ಬಿಡುಗಡೆಯಲ್ಲಿ ನಾನು ಭಾಗಿಯಾಗಿರೋದು ನನಗೆ ಹೆಮ್ಮೆ. ವೀರ ಸಾರ್ವಕರ್ ಹೆಸರಿನಲ್ಲಿ ಒಂದು ಶಕ್ತಿ ಇದೆ. ನಾವು ಎಲ್ಲರನ್ನೂ ವೀರರು ಎಂದು ಕರೆಯುವುದಿಲ್ಲ. ಆದರೆ ಸಾವರ್ಕರ್ ಇಡೀ ದೇಶದಲ್ಲಿ ವೈಚಾರಿಕತೆ ಕಿಚ್ಚು ಹಚ್ಚಿ ನಾಗರೀಕತೆ ಹಾಗೂ ಸಂಸ್ಕೃತಿಯ ಕಿಡಿ ಹಚ್ಚಿದ್ರು ಎಂದು ಸ್ಮರಿಸಿಕೊಂಡರು. ಇದನ್ನೂ ಓದಿ: ಶಿಕ್ಷಕರು ಅನಕ್ಷರಸ್ಥ ಬಾಳಲ್ಲಿ ಅಕ್ಷರ ಬೆಳಕು ಮೂಡಿಸಿರಿ: ಅಶೋಕ್ ಸಿಂದಗಿ

    ಸಾವರ್ಕರ್ ಅವರನ್ನ ಸಾಕಷ್ಟು ಜನ ದೂರುತ್ತಾರೆ. ಅಂತವರೆಲ್ಲ ದಯಾಮಾಡಿ ಸಾವರ್ಕರ್ ಇದ್ದ ಜೈಲು ಕೋಣೆಗೆ ಹೋಗಿ ಬನ್ನಿ. ಆಗ ಅವರ ಬಗ್ಗೆ ನಿಮಗಿರುವ ಕೊಳಕು ಮನಸ್ಥಿತಿ ಹೋಗುತ್ತದೆ. ಇತಿಹಾಸವನ್ನು ಸರಿಯಾಗಿ ಓದಿದರೆ ಮಾತ್ರ ಭವಿಷ್ಯವನ್ನ ಕಟ್ಟಲು ಸಾಧ್ಯ ಎಂದು ತಿಳಿಸಿದರು.

    ನಾಗರಿಕತೆಯೇ ಸಂಸ್ಕೃತಿ ಅಲ್ಲ, ನಮ್ಮಲ್ಲಿ ಏನು ಇದೆ ಅದು ನಾಗರಿಕತೆ, ನಾವು ಏನಾಗಿದ್ದೀವಿ ಅನ್ನೋದು ಸಂಸ್ಕೃತಿ. ಸಿಂಧೂ ತಟ್ಟದಲ್ಲಿ ಬೆಳೆದುಬಂದ ಮೌಲ್ಯಗಳೇ ಸಂಸ್ಕೃತಿ. ನಮ್ಮ ಸಂಸ್ಕೃತಿ ಮಾತ್ರ ನಮ್ಮ ಅಂತಃಕರಣವನ್ನು ಜಾಗೃತಿಗೊಳಿಸಲು ಸಾಧ್ಯ ಅನ್ನೊದನ್ನು ಹೇಳೋದೆ ವೀರ ಸಾರ್ವಕರ್ ಪುಸ್ತಕವಾಗಿದೆ. ಕೆಲವು ಧರ್ಮಗಳು ಹಿಂಸೆಯ ನೆಲೆಗಟ್ಟಿನಲ್ಲಿ ಸ್ಥಾಪನೆಯಾಗಿವೆ. ನಮ್ಮ ಧರ್ಮ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಸ್ಥಾಪನೆಯಾಗಿದೆ ಎಂದರು.

    ವೈಚಾರಿಕವಾಗಿ ಬಾಬಾ ಸಾಹೇಬರ ಜೊತೆ ಸಾರ್ವಕರ್ ಉತ್ತಮ ಸಂಬಂಧ ಹೊಂದಿದ್ದರು. ಬ್ರಿಟಿಷರು ನಮ್ಮನ್ನ ಒಡೆಯಲಿಕ್ಕೆ ಅಸ್ಪೃಶ್ಯತೆ ಆರಂಭಿಸಿದರು. ಬಳಿಕ ಬಂದ ರಾಜಕಾರಣಿಗಳು ಲಾಭಕ್ಕಾಗಿ ಬಳಸಿಕೊಂಡು ಮುಂದುವರೆಸಿದರು. ಈಗ ಇದೆಲ್ಲ ಬದಲಾಗಬೇಕಿದೆ ಎಂದು ಸಾರಿದರು.

    ಈ ಕಾರ್ಯಕ್ರಮದಲ್ಲಿ ಆದುಚುಂಚನಗಿರಿ ಮಹಾಂಸ್ಥಾನ ಮಠದ ಡಾ. ನಿರ್ಮಲಾನಂದ ಸ್ವಾಮೀಜಿ, ಕೊಳ್ಳೇಗಾಲ ಶಾಸಕ ಎನ್.ಮಹೇಶ್, ಕೃತಿಯ ಲೇಖಕ ಉದಯ ಮಹೂರ್ಕರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಉಪಸ್ಥಿತರಿದ್ದರು. ಇದನ್ನೂ ಓದಿ: ಎರಡು ವರ್ಷಗಳಲ್ಲಿ ಯಾದಗಿರಿ ಜಿಲ್ಲಾ ಪಂಚಾಯತ್ 57 ನೌಕರರ ವಿರುದ್ಧ ಶಿಸ್ತುಕ್ರಮ

    ಪುಸ್ತಕ ಬಿಡುಗಡೆ ವೇಳೆ ಕನ್ನಡ ಪರ ಸಂಘಟನೆಗಳು ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರಿಂದ ಹೈಡ್ರಾಮ ಸೃಷ್ಟಿಯಾಗಿತ್ತು. ಈ ವೇಳೆ ಟೌನ್ ಹಾಲ್ ಮುಂಭಾಗ ಹಿಂದೂ ಪರ ಕಾರ್ಯಕರ್ತರು ಮತ್ತು ಕನ್ನಡ ಪರ ಸಂಘಟನೆಗಳ ಪರ ವಿರೋಧ ಕೂಗಾಟ ನಡೆಯುತ್ತಿತ್ತು. ಪರಿಣಾಮ ಪೊಲೀಸರು ಈ ಪ್ರತಿಭಟನಕಾರರನ್ನು ವಶಕ್ಕೆ ಪಡೆದುಕೊಂಡರು. ಸಿಎಂ ಬರುವುದಕ್ಕೂ ಮುನ್ನ ಈ ಪ್ರತಿಭಟನೆ ನಡೆದಿತ್ತು.

  • ಗುರೂಜಿಯಾಗಲ್ಲ ಕನ್ನಡಿಗನಾಗಿ ಧರಣಿಗೆ ಬಂದಿದ್ದೇನೆ: ವಿನಯ್ ಗುರೂಜಿ

    ಗುರೂಜಿಯಾಗಲ್ಲ ಕನ್ನಡಿಗನಾಗಿ ಧರಣಿಗೆ ಬಂದಿದ್ದೇನೆ: ವಿನಯ್ ಗುರೂಜಿ

    -100ನೇ ದಿನಕ್ಕೆ ಕಾಲಿಟ್ಟ ಸರೋಜಿನಿ ಮಹಿಷಿ ಧರಣಿ

    ಬೆಂಗಳೂರು: ಕನ್ನಡಿಗರಿಗೆ ಕರ್ನಾಟಕದ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಿ ಎಂದು ಕನ್ನಡ ಪರ ಸಂಘಟನೆಗಳು ಮಾಡುತ್ತಿರುವ ಧರಣಿ 100ನೇ ದಿನಕ್ಕೆ ಕಾಲಿಟ್ಟಿದೆ.

    ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ವಿನಯ್ ಗುರೂಜಿ ಮತ್ತು ಮಾಜಿ ಸಚಿವ ಯು.ಟಿ ಖಾದರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೌರ್ಯ ಸರ್ಕಲ್‍ನಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಆಗಮಿಸಿ, 100 ದಿನದ ಹೋರಾಟವನ್ನ ದೀಪ ಬೆಳಗುವುದರ ಮೂಲಕ ಬೆಂಬಲ ವ್ಯಕ್ತಪಡಿಸಿದರು.

    ಈ ಬಗ್ಗೆ ಮಾತನಾಡಿದ ವಿನಯ್ ಗುರೂಜಿ, ಕರ್ನಾಟಕದಲ್ಲಿ ಕನ್ನಡಿಗರು ವಿಷ ಕುಡಿಯೋಕೆ ಅವಕಾಶ ಸರ್ಕಾರ ಮಾಡಿಕೊಡಬಾರದು. ಬೇರೆ ರಾಜ್ಯದವರಿಗೆ ಕೆಲಸ ಕೊಡೋದಲ್ಲ ನಮ್ಮ ರಾಜ್ಯದವರಿಗೆ ಕೆಲಸ ಕೊಡಿ. ನಮ್ಮ ಮನೆ ಪೈಂಟ್ ಮೊದಲು ಮಾಡಿ ಆ ಮೇಲೆ ಬೇರೆ ಮನೆ ಪೈಂಟ್ ಮಾಡಿ. ನಾನು ತನು, ಮನ, ಧನ ಎಲ್ಲಾ ಮರೆತು ಇದಕ್ಕೆ ಕೆಲಸ ಮಾಡುತ್ತೇನೆ. ಸಿಎಂ ಯಡಿಯೂರಪ್ಪನವರ ಜೊತೆ ಮಾತನಾಡುತ್ತೇನೆ ಎಂದರು.

    ಯಾವುದೇ ಗುರೂಜಿಯಾಗಿ ನಾನಿಲ್ಲಿ ಬಂದಿಲ್ಲ. ಸಾಮಾನ್ಯ ಕನ್ನಡಿಗನಾಗಿ ಇಲ್ಲಿಗೆ ಬಂದಿದ್ದೇನೆ. ಇಲ್ಲಿ ಕುಳಿತಿರುವ ಎಲ್ಲರು ಕನ್ನಡಿಗರೇ, ಕನ್ನಡಿಗರ ವೋಟಿನಿಂದ ಸರ್ಕಾರ ಇದೆ. ನಾನೊಬ್ಬ ಗುರೂಜಿಯಾಗಲ್ಲ ಕನ್ನಡಿಗನಾಗಿ ಯಡಿಯೂರಪ್ಪನವರ ಜೊತೆ ಮಾತನಾಡುತ್ತೇನೆ. ಇದು ಭರವಸೆ ಅಲ್ಲ ಇದು ನನ್ನ ಕರ್ತವ್ಯ. ಈ ಹೋರಾಟಕ್ಕೋಸ್ಕರ ನಾನು ಇವತ್ತು ಒಂದು ಹೊತ್ತಿನ ಊಟ ಬಿಡುತ್ತಿದ್ದೀನಿ. ಎಲ್ಲರಿಗೂ ಇದು ಮಾದರಿಯಾಗಬೇಕು ಹೋರಾಟ ಮುಂದುವರೆಯಲಿ ಎಂದು ಹೇಳಿದರು.

    ಕಳೆದ ನವಂಬರ್ 1ರಿಂದ ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ಅನಿರ್ಧಿಷ್ಟ ಅವದಿ ಪ್ರತಿಭಟನೆ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಪ್ರಾರಂಭವಾಗಿದ್ದು, ಇಂದಿಗೆ 100ನೇ ದಿನಕ್ಕೆ ಕಾಲಿಟ್ಟಿದೆ.

    100 ದಿನ ಧರಣಿ ಮಾಡಿದರೂ ಸರ್ಕಾರದಿಂದ ಡಾ. ಸರೋಜಿನಿ ಮಹಿಷಿ ವರದಿಯನ್ನ ಅನುಷ್ಠಾನಗೊಳಿಸುವ ಯಾವುದೇ ರೀತಿಯ ಭರವಸೆಗಳು ಸಿಕ್ಕಿಲ್ಲ. ಡಾ. ಸರೋಜಿನಿ ಮಹಿಷಿ ವರದಿಯನ್ನ ಜಾರಿಗೆ ತಂದರೆ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳು ರಾಜ್ಯೋತ್ಸವದ ದಿನದಿಂದ ಹೋರಾಟವನ್ನ ಮಾಡಿಕೊಂಡು ಬಂದಿದೆ.

  • ರಜನಿ ‘ದರ್ಬಾರ್’ ಕನ್ನಡದಲ್ಲೇ ರಿಲೀಸ್ ಆಗ್ಬೇಕು – ಬೇರೆ ಭಾಷೆಯಲ್ಲಿ ಆದ್ರೆ ಉಗ್ರ ಹೋರಾಟ

    ರಜನಿ ‘ದರ್ಬಾರ್’ ಕನ್ನಡದಲ್ಲೇ ರಿಲೀಸ್ ಆಗ್ಬೇಕು – ಬೇರೆ ಭಾಷೆಯಲ್ಲಿ ಆದ್ರೆ ಉಗ್ರ ಹೋರಾಟ

    ಬೆಂಗಳೂರು: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ದರ್ಬಾರ್’ ನಾಳೆ ತೆರೆಕಾಣಲು ಸಿದ್ಧವಾಗಿದೆ. ಆದರೆ ಈ ಸಿನಿಮಾ ಕನ್ನಡದಲ್ಲೇ ರಿಲೀಸ್ ಆಗಬೇಕು, ಬೇರೆ ಭಾಷೆಯಲ್ಲಿ ಬಿಡುಗಡೆ ಮಾಡಿದರೆ ಹೋರಾಟ ಮಾಡುತ್ತೇವೆ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.

    ದರ್ಬಾರ್ ಸಿನಿಮಾ ಗುರವಾರ ದೇಶ ವಿದೇಶಗಳಲ್ಲಿ ಬೆಳ್ಳಿ ತೆರೆಯ ಮೇಲೆ ರಾರಾಜೀಸಲಿದೆ. ಎ.ಆರ್ ಮುರುಗದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮಹತ್ವಾಕಾಂಕ್ಷಿ ಸಿನಿಮಾ ‘ದರ್ಬಾರ್’ ನಲ್ಲಿ ಸೂಪರ್ ಸ್ಟಾರ್ ಗೆ ನಯನತಾರಾ ನಾಯಕಿಯಾಗಿ ನಟಿಸಿದ್ದಾರೆ. ಗುರುವಾರ ನರ್ತಕಿ ಚಿತ್ರಮಂದಿರದಲ್ಲಿ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ದರ್ಬಾರ್ ಸಿನಿಮಾವನ್ನ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಈ ಸಿನಿಮಾ ಕನ್ನಡದಲ್ಲಿ ಡಬ್ಬಿಂಗ್ ಆಗಿದ್ದು, ಕನ್ನಡ ಭಾಷೆಯಲ್ಲೇ ಸಿನಿಮಾ ರೀಲಿಸ್ ಮಾಡಿ ಅದನ್ನ ಬಿಟ್ಟು ತಮಿಳು, ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡಲು ಸಿದ್ಧರಾದರೆ ಉಗ್ರ ಹೋರಾಟ ಮಾಡಬೇಕಾಗುತ್ತೆ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಸಿವೆ.

    ಸಿನಿಮಾ ಕನ್ನಡದಲ್ಲಿ ಡಬ್ಬಿಂಗ್ ಆಗಿರುವುದರಿಂದ ಕನ್ನಡದಲ್ಲೇ ರಿಲೀಸ್ ಮಾಡಿ, ತೆಲುಗಿನಲ್ಲಿ ಸಿನಿಮಾವನ್ನ ಬಿಡುಗಡೆ ಮಾಡೊದಕ್ಕೆ ಬಿಡೋದಿಲ್ಲ ಎಂದು ಕರುನಾಡ ಸಂಘಟನೆಗಳ ಒಕ್ಕೂಟ ಎಚ್ಚರಿಕೆಯನ್ನ ನೀಡಿದೆ. ಜೊತೆಗೆ ಬೇರೆ ಭಾಷೆಯಲ್ಲಿ ಚಿತ್ರ ಪ್ರದರ್ಶನ ಮಾಡಿದರೆ ಗುರುವಾರ ಚಿತ್ರಮಂದಿರದ ಮುಂದೆ ಬೃಹತ್ ಪ್ರತಿಭಟನೆ ಮಾಡೋದಾಗಿ ಹೇಳಿದೆ.

  • ಕ್ಷಮೆ ಕೇಳಿದ್ರೆ ಸರಿ ಹೋಗಲ್ಲ, ಚಂದನ್ ಶೆಟ್ಟಿಯನ್ನು ಬಂಧಿಸಿ – ಕನ್ನಡ ಸಂಘಟನೆಗಳಿಂದ ಆಗ್ರಹ

    ಕ್ಷಮೆ ಕೇಳಿದ್ರೆ ಸರಿ ಹೋಗಲ್ಲ, ಚಂದನ್ ಶೆಟ್ಟಿಯನ್ನು ಬಂಧಿಸಿ – ಕನ್ನಡ ಸಂಘಟನೆಗಳಿಂದ ಆಗ್ರಹ

    ಬೆಂಗಳೂರು: ಕ್ಷಮೆ ಕೇಳಿದರೆ ಸರಿ ಹೋಗಲ್ಲ, ಚಂದನ್ ಶೆಟ್ಟಿಯನ್ನು ಬಂಧಿಸಬೇಕು ಎಂದು ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಜಗದೀಶ್ ಆಗ್ರಹಿಸಿದ್ದಾರೆ.

    ಇಂದು ಜಯಕರ್ನಾಟಕ ಸಂಘಟನೆಯಿಂದ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಚಂದನ್ ಶೆಟ್ಟಿ ಪ್ರಪೋಸ್ ಮಾಡುವ ಮೂಲಕ ವಿಶ್ವಪ್ರಸಿದ್ಧ ಮೈಸೂರು ದಸರಾ ವೇದಿಕೆಯನ್ನ ವೈಯಕ್ತಿಕ ವಿಚಾರಕ್ಕೆ ಬಳಸಿದ್ದಾರೆ ಎಂದು ಖಂಡಿಸಿದ್ದಾರೆ.

    ಕ್ಷಮೆ ಕೇಳಿದರೆ ಸರಿ ಹೋಗಲ್ಲ. ಆತನನ್ನು ಬಂಧಿಸಬೇಕು. ಚಂದನ್ ಶೆಟ್ಟಿಗೆ ವೇದಿಕೆ ಹತ್ತಲು ಯೋಗ್ಯತೆ ಇಲ್ಲ. ಇನ್ನು ಮುಂದೆ ಚಂದನ್ ಶೆಟ್ಟಿ ಯಾವುದೇ ವೇದಿಕೆ ಕಾರ್ಯಕ್ರಮ ಮಾಡಿದರೆ ಅವರಿಗೇ ಮಸಿ ಬಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ನಿಶ್ಚಿತಾರ್ಥ ಅಲ್ಲ, ನಮ್ಗೂ ಸರ್ಪ್ರೈಸ್ ಆಗಿದೆ- ನಿವೇದಿತಾ ಹೆತ್ತವರು

    ಮೈಸೂರು ದಸರಾಕ್ಕೆ ಇದು ಅವಮಾನ ಎಂದು ಅಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ದಸರಾ ವೇದಿಕೆಗೆ ಅವಮಾನ ಮಾಡಿದ ಚಂದನ್ ಶೆಟ್ಟಿಯನ್ನ ಬಂಧಿಸುವಂತೆ, ಅಲ್ಲದೆ ಚಂದನ್ ಮೇಲೆ ಕೇಸು ದಾಖಲಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ನಾಡ ದೇವತೆ ಚಾಮುಂಡೇಶ್ವರಿ ದೇವಿಗೆ ಇದು ಅಪಮಾನ ಮಾಡಿದ ಹಾಗೇ ಎಂದು ಅರೋಪ ಮಾಡಿದ್ದಾರೆ. ಚಂದನ್ ಶೆಟ್ಟಿ ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವೇದಿಕೆ ಮೇಲೆ ಮದುವೆ ಆಗಿದ್ರೆ ತಪ್ಪು ಅಂತ ಒಪ್ಪಿಕೊಳ್ಳುತ್ತಿದ್ದೆ: ನಿವೇದಿತಾ ಗೌಡ

    ಇದೇ ವೇಳೆ ಜಯಕರ್ನಾಟಕ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿ, ಐತಿಹಾಸಕ ಪರಂಪರೆ ಇರುವ ದಸರಾಕ್ಕೆ ಕಳಂಕ ತಂದಿದ್ದಾರೆ. ಹಿನ್ನಲೆ ಗಾಯಕ ಚಂದನ್ ಶೆಟ್ಟಿಯ ಮೈಸೂರು ದಸರಾ ವೇದಿಕೆಯನ್ನ ವೈಯುಕ್ತಿಕ ವಿಚಾರಕ್ಕೆ ಬಳಕೆ ಮಾಡಿಕೊಂಡಿದ್ದಾನೆ. ಇದು ಸರ್ಕಾರದ ವೇದಿಕೆ, ಏನ್ ಆ ವೇದಿಕೆ ಅವರಪ್ಪನದ್ದಾ, ಜಿಲ್ಲಾಡಳಿತ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇದು ನಮ್ಮ ದಸರಾಕ್ಕೆ ಮಾಡಿದ ಅಪಮಾನ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ತಪ್ಪಾಗಿದ್ದರೆ ಕ್ಷಮೆ ಇರಲಿ, ಸರ್ಪ್ರೈಸ್ ಕೊಡಲು ಈ ರೀತಿ ಮಾಡಿದೆ: ಚಂದನ್ ಶೆಟ್ಟಿ

    ಮೈಸೂರು ಯುವ ದಸರಾ ಕಾರ್ಯಕ್ರಮದ ವೇಳೆ ಶುಕ್ರವಾರ ವೇದಿಕೆಯಲ್ಲೇ ಸಾವಿರಾರು ಜನರ ಸಮ್ಮುಖದಲ್ಲಿ ಚಂದನ್ ಶೆಟ್ಟಿ, ನಿವೇದಿತಾ ಗೌಡಾಗೆ ಪ್ರೇಮ ನಿವೇದನೆ ಮಾಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಚಂದನ್ ಪ್ರತಿಕ್ರಿಯಿಸಿ, ನಾನು ಮಾಡಿದ್ದು ತಪ್ಪಾದರೆ ಕ್ಷಮೆಯಿರಲಿ ಎಂದು ಹೇಳಿದ್ದಾರೆ. ಇತ್ತ ನಿವೇದಿತಾ ಪ್ರತಿಕ್ರಿಯಿಸಿ, ವೇದಿಕೆ ಮೇಲೆ ಮದುವೆಯಾಗಿದ್ದರೆ ತಪ್ಪು ಅಂತ ನಾನೂ ಒಪ್ಪಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಂದನ್-ನಿವೇದಿತಾ ನಿಶ್ಚಿತಾರ್ಥ ಮಾಡ್ಕೊಂಡಿರೋದು ಅಕ್ಷಮ್ಯ ಅಪರಾಧ- ವಿ.ಸೋಮಣ್ಣ

  • ಇಂದಿರಾ ಕ್ಯಾಂಟೀನ್‍ಗಾಗಿ ಕನ್ನಡಪರ ಸಂಘಟನೆಯಿಂದ ಒತ್ತಾಯ!

    ಇಂದಿರಾ ಕ್ಯಾಂಟೀನ್‍ಗಾಗಿ ಕನ್ನಡಪರ ಸಂಘಟನೆಯಿಂದ ಒತ್ತಾಯ!

    ಬೆಂಗಳೂರು: ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಒತ್ತಾಯಿಸಿ ಕನ್ನಡಪರ ಸಂಘಟಕರು ಉಚಿತವಾಗಿ ತಿಂಡಿ ವಿತರಿಸಿ ಇಂದು ಬೆಳಗ್ಗೆ ವಿನೂತನ ಪ್ರತಿಭಟನೆ ನಡೆದಿದ್ದಾರೆ.

    ನೆಲಮಂಗಲ ಪಟ್ಟಣದ ಬಿಹೆಚ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಉದ್ಘಾಟನೆ ವಿಳಂಬ ಪ್ರಶ್ನಿಸಿ ವಿಶೇಷವಾಗಿ ನಮ್ಮ ಕರ್ನಾಟಕ ಜನಸೈನ್ಯ ಕಾರ್ಯಕರ್ತ ಪ್ರತಿಭಟನೆ ನಡೆಸಿದ್ದಾರೆ. ನೆಲಮಂಗಲ ಪುರಸಭೆಯು ಅಕ್ಟೋಬರ್ 22ರಂದು ಉದ್ಘಾಟನೆ ಮಾಡುವುದಾಗಿ ತಿಳಿಸಿತ್ತು. ಆದರೆ ತಿಳಿಸಿದಂತೆ ಉದ್ಘಾಟನೆ ನೆರವೇರದೆ ಮತ್ತೆ ದಿನಾಂಕ ಮುಂದೂಡಲಾಗಿದೆ. ಇದರಿಂದಾಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಇಂದು ಕ್ಯಾಂಟೀನ್ ಮುಂದಯೇ ಪಲಾವ್ ಹಾಗೂ ಮೊಸರು ಹಂಚಿ ಪ್ರತಿಭಟಿಸಿದ್ದಾರೆ.

    ಇಂದಿರಾ ಕ್ಯಾಂಟೀನ್ ಉದ್ಘಾಟನೆ ವಿಳಂಬದ ಕುರಿತು ಪಬ್ಲಿಕ್ ಟಿವಿಯಲ್ಲಿ ಗುರುವಾರ ವರದಿ ಮಾಡಲಾಗಿತ್ತು. ಈ ಕುರಿತು ಮಾಹಿತಿ ಪಡೆದ ಕನ್ನಡ ಪರ ಸಂಘಟನೆಗಳು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕಾಂಗ್ರೆಸ್‍ನ ಕೃಷ್ಣಬೈರೇಗೌಡ ಹಾಗೂ ನೆಲಮಂಗಲ ಜೆಡಿಎಸ್ ಶಾಸಕ ಶ್ರೀನಿವಾಸ್‍ಮೂರ್ತಿ ಅವರ ವಿರುದ್ಧ ಕಿಡಿಕಾರಿದ್ದಾರೆ. ಇದನ್ನು ಓದಿ: ಬಡವರ ಹಸಿವು ನೀಗಿಸುವ ಇಳದಿರಾ ಕ್ಯಾಂಟೀನ್ ರಾಜಕಾರಣಿಗಳ ಜಟಾಪಟಿಗೆ ಬಲಿ!

    ರಾಜಕಾರಣಿಗಳ ಒಳ ಜಗಳಕ್ಕೆ ಇಂದಿರಾ ಕ್ಯಾಂಟೀನ್ ಉದ್ಘಾಟನೆ ವಿಳಂಭವಾಗಿದ್ದು, ಖಂಡನೀಯ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು, ನಾಯಕರು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಮುಂದಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews