Tag: ಕನ್ನಡ ನ್ಯೂಸ್

  • ಈಗ ತಕ್ಷಣ ನಾನು ನಿಮಾನ್ಸ್‌ಗೆ ಹೋಗಿ ಚಿಕಿತ್ಸೆ ಪಡೆಯುತ್ತೇನೆ: ಡಿಕೆಶಿ

    ಈಗ ತಕ್ಷಣ ನಾನು ನಿಮಾನ್ಸ್‌ಗೆ ಹೋಗಿ ಚಿಕಿತ್ಸೆ ಪಡೆಯುತ್ತೇನೆ: ಡಿಕೆಶಿ

    ಬೆಂಗಳೂರು: ಕಾಂಗ್ರೆಸ್ ನವರು ಮಾನಸಿಕ ಚಿಕಿತ್ಸೆ ಪಡೆಯಲಿ ಎಂಬ ಸಿ.ಟಿ.ರವಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಕ್ಷಣ ನಿಮಾನ್ಸ್ ಗೆ ಹೋಗುವುದಾಗಿ ಪ್ರತಿಕ್ರಿಯಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೌದು ಸಿಟಿ ರವಿಯಿಂದಾಗಿಯೇ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಈಗ ತಕ್ಷಣ ನಾನು ನಿಮಾನ್ಸ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತೇನೆ. ಸಿಟಿ ರವಿ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಅವನ್ಯಾರೋ ಎಂಪಿ ಬಹಳ ಬುದ್ದಿವಂತ, ಅವನಷ್ಟು ನಾವು ಓದಿಲ್ಲ – ತೇಜಸ್ವಿ ಸೂರ್ಯಗೆ ಡಿಕೆಶಿ ಟಾಂಗ್


    ವಿನಯ ಕುಲಕರ್ಣಿ ಅವರನ್ನು ಪೂರ್ಣ ಪ್ರಮಾಣದಲ್ಲಿ ಪಕ್ಷದ ಕೆಲಸಕ್ಕೆ ಬಳಸಿಕೊಳ್ಳುತ್ತೇವೆ. ಅದರಲ್ಲಿ ಅನುಮಾನವೇ ಬೇಡ. ವಿನಯ್ ಕುಲಕರ್ಣಿ ನಮ್ಮ ಹಿರಿಯ ನಾಯಕರು, ಮಂತ್ರಿ ಆಗಿದ್ದವರು ಜಮೀರ್ ಹಾಗೂ ವಿನಯ್ ಕುಲಕರ್ಣಿ ಪರ ನಮ್ಮ ಪಕ್ಷ ಇದೆ. ವಿನಯ್ ಕುಲಕರ್ಣಿ ವಿರುದ್ಧ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ಕೇಸ್ ಮಾಡಿದ್ದಾರೆ. ಬಹಳ ಸಂತೋಷ, ಆದರೆ ಇವರ ಕೇಂದ್ರ ಮಂತ್ರಿಗಳು ಎಲ್ಲ ನಿಯಮ ಪಾಲನೆ ಮಾಡಿದ್ದಾರಾ? ಕೇಂದ್ರ ಸಚಿವರಿಗೆ ಒಂದು ಕಾನೂನು? ಇವರಿಗೊಂದು ಕಾನೂನಾ ಎಂದು ಹರಿಹಾಯ್ದಿದ್ದಾರೆ.  ಇದನ್ನೂ ಓದಿ: ಕೆಜಿಎಫ್‍ನಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡರೂ ಅದು ದೊಡ್ಡದೇ – ವಸಿಷ್ಠ ಸಿಂಹ 

    ಒಂದು ಸಮುದಾಯ ಟಾರ್ಗೆಟ್ ಮಾಡಿ ಇಡಿ ದಾಳಿ ಎಂಬ ಜಮೀರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಜಮೀರ್ ಅಹಮದ್ ಈಗಾಗಲೇ ನನ್ನ ತಪ್ಪಿಲ್ಲ ಅಂತ ಹೇಳಿಕೆ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ಹೆಚ್ಚು ಕಮೆಂಟ್ ಮಾಡಲು ಹೋಗುವುದಿಲ್ಲ. ಆದರೆ ಇಡೀ ದೇಶದಲ್ಲಿ ಎಲ್ಲ ಕಡೆಯೂ ಹೀಗೆ ಆಗುತ್ತಿದೆ. ಇದರ ವಿರುದ್ಧ ನಾವೂ ಕೂಡ ಹೋರಾಟ ಮಾಡುತ್ತಿದ್ದೇವೆ ಎಂದಿದ್ದಾರೆ.

  • ನಾಳೆ ಮೋದಿ ಕ್ಯಾಬಿನೆಟ್ ಪುನರ್‌ರಚನೆ – ಸ್ಪರ್ಧೆಯಲ್ಲಿ ಯಾರಿದ್ದಾರೆ?

    ನಾಳೆ ಮೋದಿ ಕ್ಯಾಬಿನೆಟ್ ಪುನರ್‌ರಚನೆ – ಸ್ಪರ್ಧೆಯಲ್ಲಿ ಯಾರಿದ್ದಾರೆ?

    ನವದೆಹಲಿ:  ನಾಳೆ  ಕೇಂದ್ರ ಕ್ಯಾಬಿನೆಟ್ ಪುನರ್‌ರಚನೆಯಾಗಲಿದ್ದು, ಕೆಲ ಸಚಿವರನ್ನು ಕೈಬಿಡುವ ಸಾಧ್ಯತೆಯಿದೆ. ಈ ಪೈಕಿ ಕರ್ನಾಟಕದಿಂದ ಇಬ್ಬರು, ಮೂವರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆಯಿದೆ.

    ಈಗಾಗಲೇ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿಯವರು ನಿಧನರಾದ ಹಿನ್ನೆಲೆಯಲ್ಲಿ ಒಂದು ಸ್ಥಾನ ಖಾಲಿಯಾಗಿದೆ. ಈ ಸ್ಥಾನಕ್ಕೆ ಇಬ್ಬರು ಲಿಂಗಾಯತ ಸಂಸದರ ಹೆಸರು ಸ್ಪರ್ಧೆಯಲ್ಲಿದೆ. ರಾಜ್ಯ ರಾಜಕಾರಣದ ದೃಷ್ಟಿಯಿಂದಲೂ ಮಂತ್ರಿ ಸ್ಥಾನ ಮಹತ್ವ ಪಡೆದಿದೆ.

     

    ಪಟ್ಟಿಯಲ್ಲಿ ಯಾರಿದ್ದಾರೆ?
    ಉಮೇಶ್ ಜಾಧವ್(ಕಲಬುರಗಿ), ಶಿವಕುಮಾರ್ ಉದಾಸಿ(ಹಾವೇರಿ), ಬಿ.ವೈ. ರಾಘವೇಂದ್ರ(ಶಿವಮೊಗ್ಗ), ಪ್ರತಾಪ್ ಸಿಂಹ(ಮೈಸೂರು-ಕೊಡಗು), ಶೋಭಾ ಕರಂದ್ಲಾಜೆ(ಉಡುಪಿ-ಚಿಕ್ಕಮಗಳೂರು), ಭಗವಂತ್ ಖೂಬಾ(ಬೀದರ್) ಪಿ.ಸಿ. ಗದ್ದಿಗೌಡರ್(ಬಾಗಲಕೋಟೆ), ಎ. ನಾರಾಯಣಸ್ವಾಮಿ(ಚಿತ್ರದುರ್ಗ). ಇದನ್ನೂ ಓದಿ: ಯಾರೂ ನಿರೀಕ್ಷೆ ಮಾಡದವರು ಸಿಎಂ ಆಗ್ತಾರೆ: ಯತ್ನಾಳ್

    ಬೇರೆ ಯಾರಿದ್ದಾರೆ?
    ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡ ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಬಿಜೆಪಿ ಜನರಲ್ ಸೆಕ್ರೆಟರಿ ಭೂಪೇಂದ್ರ ಯಾದವ್ ಹಾಗೂ ಕೈಲಾಶ್ ವಿಜಯವರ್ಗಿಯಾ, ಬಿಜೆಪಿ ವಕ್ತಾರ ಹಾಗೂ ಅಲ್ಪ ಸಂಖ್ಯಾತ ಮುಖಂಡ ಝಪರ್ ಇಸ್ಲಾಂ ಮೋದಿ ಸಂಪುಟ ಸೇರಿಕೊಳ್ಳುವ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ, ಅಸ್ಸಾಂ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನವಾಲ ಅವರಿಗೂ ಮಂತ್ರಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಿದೆ.

    ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಲ್ಲಿನ ನಾಯಕರಿಗೆ ಜಾಸ್ತಿ ಅವಕಾಶ ಸಿಗುವ ಸಾಧ್ಯತೆಯಿದೆ. ಈ ಪೈಕಿ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್, ಮಹಾರಾಜ ಗಂಜ್ ಸಂಸದ ಪಂಕಜ್ ಚೌಧರಿ, ವರುಣ್ ಗಾಂಧಿ ಹಾಗೂ ಮೈತ್ರಿ ಪಕ್ಷ ಅಪ್ನಾ ದಳದ  ಅನುಪ್ರಿಯಾ ಪಟೇಲ್ ಹೆಸರು ಮುಂಚೂಣಿಯಲ್ಲಿದೆ.

    ಒಡಿಶಾ ಸಂಸದ ಅಶ್ವಿನ್ ವೈಷ್ಣವ್, ಬಂಗಾಳದ ಮಾಜಿ ರೈಲ್ವೇ ಸಚಿವ ದಿನೇಶ್ ತ್ರಿವೇದಿ, ರಾಜ್ಯ ಸಭಾ ಸದಸ್ಯ ಅನಿಲ್ ಜೈನ್, ರಾಜಸ್ಥಾನದಿಂದ ಕಿರಿಯ ಸಂಸದ ಚೌಧರಿ, ರಾಹುಲ್ ಕಸ್ವಾನ್ ಮತ್ತು ಸಿಕಾರ್ ಸಂಸದ ಸುಮೇಧಾನಂದ ಸರಸ್ವತಿ ಕೂಡ ಕೇಂದ್ರ ಸಂಪುಟ ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ದೆಹಲಿಯಿಂದ ಸಂಸದೆ ಮೀನಾಕ್ಷಿ ಲೇಖಿ, ಬಿಹಾರದಲ್ಲಿ ಚಿರಾಗ್ ಪಾಸ್ವಾನ್ ವಿರುದ್ಧ ದಂಗೆ ಎದ್ದ ಪಶುಪತಿ ಪರಾಸ್, ಜೆಡಿಯು ನಾಮನಿರ್ದೇಶನಗಳಾದ ಆರ್.ಸಿ.ಪಿ. ಸಿಂಗ್ ಮತ್ತು ಸಂತೋಷ್ ಕುಮಾರ್ ಕೂಡ ಸಂಭಾವ್ಯ ಪಟ್ಟಿಯಲ್ಲಿದ್ದಾರೆ.

  • ಚಿತೆಗೆ ಹಚ್ಚಿದ ಜ್ವಾಲೆ ಆರಿಲ್ಲ -ಬಿಜೆಪಿ ನಾಯಕತ್ವ ಕಿತ್ತಾಟಕ್ಕೆ ಮಾಜಿ ಸಿಎಂ ಎಚ್‌ಡಿಕೆ ಕಿಡಿ

    ಚಿತೆಗೆ ಹಚ್ಚಿದ ಜ್ವಾಲೆ ಆರಿಲ್ಲ -ಬಿಜೆಪಿ ನಾಯಕತ್ವ ಕಿತ್ತಾಟಕ್ಕೆ ಮಾಜಿ ಸಿಎಂ ಎಚ್‌ಡಿಕೆ ಕಿಡಿ

    ಬೆಂಗಳೂರು : ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ನಡೆಯುತ್ತಿರೋ ಕಿತ್ತಾಯಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸರಣಿ ಟ್ವೀಟ್ ಮೂಲಕ ಬಿಜೆಪಿ ವಿರುದ್ದ ಆಕ್ರೋಶ ಹೊರ ಹಾಕಿರುವ ಕುಮಾರಸ್ವಾಮಿ, ಚಿತೆಗೆ ಹಚ್ಚಿದ ಜ್ವಾಲೆ ಆರಿಲ್ಲ. ಆಗಲೇ ಬಿಜೆಪಿ ಅಧಿಕಾರಕ್ಕಾಗಿ ಕಿತ್ತಾಡುತ್ತಿದೆ ಅಂತ ಆಕ್ರೋಶ ಹೊರ ಹಾಕಿದ್ದಾರೆ.

    ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಅದು ಎಂಥಾ ಸಂದರ್ಭದಲ್ಲಿ?ಕೋವಿಡ್‌ ಅಟ್ಟಹಾಸ ಮೆರೆಯುತ್ತಿರುವ ಹೊತ್ತಿನಲ್ಲಿ, ಬ್ಲಾಕ್‌ ಫಂಗಸ್‌ ಎಂಬ ಭಯಾನಕ ರೋಗ ಜನರನ್ನು ಆಪೋಷನ ತೆಗೆದುಕೊಳ್ಳುತ್ತಿರುವ ಗಳಿಗೆಯಲ್ಲಿ, ಮಕ್ಕಳು ಪಿಡುಗಿಗೆ ಸಿಲುಕಲಿದ್ದಾರೆಂಬ ಎಚ್ಚರಿಕೆಗಳ ನಡುವಿನಲ್ಲಿ, ಕನ್ನಡದ ಅಸ್ಮಿತೆಗೆ ದಕ್ಕೆಯಾಗಿರುವ ಕಾಲಘಟ್ಟದಲ್ಲಿ.ರಾಜ್ಯ ಸಂದಿಗ್ಧತೆಗೆ ಸಿಲುಕಿರುವ ಈ ಹೊತ್ತಿನಲ್ಲಿ ಇದೆಂಥ ರಾಜಕೀಯ? ಈಗ ರಾಜ್ಯದ ಎದುರಿಗೆ ಇರುವುದು ನಾಯಕತ್ವದ ಪ್ರಶ್ನೆಯೋ? ಅಥವಾ ಜನರ ಹಿತದ ಪ್ರಶ್ನೆಯೋ? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ವರಿಷ್ಠರ ಮಧ್ಯಪ್ರವೇಶಕ್ಕೆ ನಿಷ್ಠ ಬಣ ಆಗ್ರಹ

    ರಾಜ್ಯದಲ್ಲಿ ಚಿತೆಗಳಿಗೆ ಹಚ್ಚಿದ ಜ್ವಾಲೆ ಇನ್ನೂ ಆರಿಲ್ಲ. ಅದು ಎಂದು ಆರುತ್ತದೆ ಎಂಬುದೇ ಯಾರಿಗೂ ತಿಳಿಯುತ್ತಿಲ್ಲ. ಇಂಥ ಸಂದರ್ಭದಲ್ಲಿ ಇಂಥ ಕ್ಷುಲ್ಲಕ ರಾಜಕಾರಣ ಅಗತ್ಯವಿದೆಯೇ? ರಾಜ್ಯ ಸರ್ಕಾರ ಕೋವಿಡ್‌ ಸ್ಥಿತಿಯನ್ನು ನಿಭಾಯಿಸಿದ ರೀತಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.ಸರ್ಕಾರ ಇನ್ನಾದರೂ ತಿದ್ದಿಕೊಳ್ಳಲಿದೆ ಎಂದು ನಾವು ಭಾವಿಸಿದೆವು. ಇಂಥ ಸಂದರ್ಭದಲ್ಲಿ ಸರ್ಕಾರವನ್ನು ಟೀಕಿಸಿ ರಾಜಕೀಯ ಮಾಡುವುದು ಬೇಡ ಎಂದು ಜೆಡಿಎಸ್‌ ನಿರ್ಧರಿಸಿತ್ತು.ಆದರೆ, ಬಿಜೆಪಿ ಅಧಿಕಾರದ ಲಾಲಸೆ ಪ್ರದರ್ಶಿಸಿದರೆ ಸುಮ್ಮನಿರುವುದು ಹೇಗೆ? ಬಿಎಸ್‌ ಯಡಿಯೂರಪ್ಪನವರು ತಾವು ಖರೀದಿಸಿ ತಂದ ಕುದುರೆಗಳ ಮೇಲೆ ತಾವೇ ಸವಾರಿ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಲೇ ಇರಲಿಲ್ಲ. ಅದರ ಬದಲಿಗೆ ಮಾಧ್ಯಮಗಳು ಬಣ್ಣಿಸುವ ‘ಸೋಕಾಲ್ಡ್‌ ಹುಲಿ, ಬಾಹುಬಲಿ‘ ಮುಂತಾದವರನ್ನು ಮುಖ್ಯಮಂತ್ರಿ ಸೀಟಿನ ಮೇಲೆ ಕೂರಿಸಿದ್ದೇ ಸದ್ಯದ ರಾಜಕೀಯ ದುಸ್ಥಿತಿಗೆ ಕಾರಣ ಎಂದು ಟೀಕಿಸಿದ್ದಾರೆ.ಇದು ಯಡಿಯೂರಪ್ಪನವರ ಸ್ವಯಂಕೃತ ಅಪರಾಧ ಅಂತ ಲೇವಡಿ ಮಾಡಿದ್ದಾರೆ.

    ಇನ್ನೊಂದು ಕಡೆ ಕಾಂಗ್ರೆಸ್ ವಿರುದ್ದವೂ ಕಿಡಿಕಾರಿದ ಅವ್ರು, ಅನ್ನ ಹಳಸಿದೆ, ನಾಯಿ ಕಾದಿದೆ ಎಂಬಂತೆ ರಾಜ್ಯದ ಮತ್ತೊಂದು ರಾಜಕೀಯ ಪಕ್ಷ ಕಾದು ಕುಳಿತಿದೆ. ರಾಜ್ಯದಲ್ಲಿ ಹೊತ್ತಿರುವ ಚಿತೆಗಳ ಬೆಂಕಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಬೆಂದು ಹೋದರೆ, ನಂತರದ ದಿನಗಳಲ್ಲಿ ತನ್ನನ್ನು ಅಧಿಕಾರದಲ್ಲಿ ಪ್ರತಿಷ್ಠಾಪಿಸಿಕೊಳ್ಳಲು ಆ ರಾಷ್ಟ್ರೀಯ ಪಕ್ಷ ಪ್ರಯತ್ನಗಳನ್ನು ಪೈಪೋಟಿಗೆ ಬಿದ್ದು ನಡೆಸುತ್ತಿದೆ ಅಂತ ಆಕ್ರೋಶ ಹೊರ ಹಾಕಿದರು.

    ರಾಜ್ಯದ ಸಂಕಷ್ಟದ ಕಾಲದಲ್ಲಿ ಬಿಜೆಪಿಯಲ್ಲಿ ಉಂಟಾಗಿರುವ ಅಧಿಕಾರದ ಲಾಲಸೆ, ಅದನ್ನು ಬಳಸಿಕೊಂಡು ಅಧಿಕಾರಕ್ಕೆ ಬರಲು ಕೋವಿಡ್‌ ನಿಯಮಗಳನ್ನೆಲ್ಲ ಮೀರಿ ಬೀದಿಗೆ ಬಿದ್ದಿರುವ ಕಾಂಗ್ರೆಸ್‌ ಪಕ್ಷಗಳೆರಡೂ ಆತ್ಮಾವಲೋಕನೆ ಮಾಡಿಕೊಳ್ಳಬೇಕು. ಸಂಕಷ್ಟದ ಪರಿಸ್ಥಿತಿಯನ್ನೇ ಅಧಿಕಾರಕ್ಕೇರಲು ಏಣಿ ಮಾಡಿಕೊಳ್ಳುತ್ತಿರುವ ಈ ಪಕ್ಷಗಳ ನಡೆಯನ್ನು ಜನ ಗಮನಿಸಬೇಕು.ಆರೋಗ್ಯ ತುರ್ತು ಪರಿಸ್ಥಿತಿಯ ನಡುವೆ ಕನ್ನಡ, ಕರ್ನಾಟಕದ ಅಸ್ಮಿತೆ ಪ್ರಶ್ನೆ ಮಾಡುವಂಥ ಘಟನೆಗಳು ಒಂದರ ಹಿಂದೊಂದರಂತೆ ನಡೆದವು.ಈ ವಿಚಾರವಾಗಿ ಬಿಜೆಪಿ, ಕಾಂಗ್ರೆಸ್‌ ಏನು ಮಾಡಿದವು? ಇವರೆಲ್ಲ ರಾಜಕೀಯ ಮಾಡುತ್ತಿರುವುದು ಕರ್ನಾಟಕದಲ್ಲೇ ಅಲ್ಲವೇ?ಆದರೆ, ಕರ್ನಾಟಕದ ಸ್ವಾಭಿಮಾನಕ್ಕೆ ದಕ್ಕೆಯಾದಾಗ ಇವರೆಲ್ಲ ಅದ್ಯಾವ ಬಿಲದಲ್ಲಿ ಅಡಗಿದ್ದರು? ಎಂದು ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

  • ಜೀನಿ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

    ಜೀನಿ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

    – ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ
    – ರಾಜ್ಯವ್ಯಾಪಿ ಜನಪ್ರಿಯವಾಗುತ್ತಿದೆ ಸಿರಿಧಾನ್ಯಗಳ ಪೌಡರ್

    ಮೇಲ್ನೋಟಕ್ಕೆ ಎಷ್ಟೇ ಗಟ್ಟಿಮುಟ್ಟಾಗಿದ್ರು ಕಾಯಿಲೆಗಳು ಕಾಡಲು ಶುರು ಮಾಡಿವೆ. ಕಾಯಿಲೆ ಅಂದಾಕ್ಷಣ ದೊಡ್ಡದೊಡ್ಡ ಕಾಯಿಲೆಗಳೇ ಆಗಬೇಕೆಂದೇನಿಲ್ಲ. ದೊಡ್ಡ ಕಾಯಿಲೆಯಿಂದ ಹಿಡಿದು ಸಣ್ಣ ನೆಗಡಿ, ಕೆಮ್ಮೂ ಸಹ ಘಟಾನುಘಟಿಗಳನ್ನ ನಡುಗಿಸಿ ಬಿಡುತ್ತಿದೆ. ಇಷ್ಟಕ್ಕೆಲ್ಲ ಕಾರಣ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿರುವುದು.

    ರೋಗ ನಿರೋಧಕ ಶಕ್ತಿ ಕಡಿಮೆಯಾಗಲು ಕಾರಣ ಏನು ಅಂತ ನೋಡಿದರೆ ನಾವು ತಿನ್ನುತ್ತಿರುವ ಆಹಾರದಲ್ಲಿ ಯಾವುದೇ ಸತ್ವ ಇಲ್ಲ. ಜೊತೆಗೆ ಆಹಾರವೇ ಸ್ಲೋ ಪಾಯಿಸನ್ ಆಗಿ ನಮ್ಮನ್ನ ನಿಶ್ಯಕ್ತರನ್ನಾಗಿ ಮಾಡುತ್ತಿದೆ. ನಾವು ತಿನ್ನುತ್ತಿರುವ ಆಹಾರ ಬೆಳೆಯಲು ಭೂಮಿಗೆ ಹಾಕುತ್ತಿರುವ ರಸಗೊಬ್ಬರ, ಕೀಟಗಳಿಂದ ಕಾಪಾಡಲು ಕೀಟ ನಾಶಕ ಬಳಸುತ್ತಿದ್ದಾರೆ. ಬೆಳೆ ಬೆಳೆದ ಮೇಲೆ ಇದನ್ನು ನಾವು ಆಹಾರವಾಗಿ ಬಳಸುತ್ತಿದ್ದೇವೆ. ಇದರಲ್ಲಿ ಬಹುತೇಕ ಪೋಷಕಾಂಶಗಳು ನಾಶವಾಗಿ ನಮ್ಮ ದೇಹಕ್ಕೆ ರಸಗೊಬ್ಬರದ ಅಂಶ ಹಾಗೂ ಕೀಟ ನಾಶಕ ಅಂಶ ಸೇರ್ಪಡೆಯಾಗ್ತಿದೆ. ಇದು ನಮ್ಮ ಆರೋಗ್ಯ ಹಾಳಾಗಲು ಕಾರಣವಾಗಿದೆ.

    ಇದಕ್ಕೆಲ್ಲ ಪರಿಹಾರ ಏನು ಅಂತ ನೋಡೋದಾದ್ರೆ, ಮೊದಲು ನಮ್ಮ ಆಹಾರದ ಆರೋಗ್ಯವನ್ನ ಕಾಪಾಡಬೇಕು. ಅಂದ್ರೆ ರಸಗೊಬ್ಬರ ರಹಿತ, ಕೀಟ ನಾಶಕ ಬಳಸದೆ ಸಾವಯವ ಪದ್ಧತಿಯಲ್ಲಿ ಬೆಳೆದ ಆಹಾರವನ್ನ ಬಳಸಲು ಶುರು ಮಾಡಬೇಕು. ಇಷ್ಟಕ್ಕೆ ನಮ್ಮ ಆರೋಗ್ಯಕ್ಕೆ ಬೇಕಾದ ಅಂಶಗಳು ಸಿಗೋದು ಸ್ವಲ್ಪ ಕಷ್ಟ. ಯಾಕಂದ್ರೆ ನಮ್ಮಲ್ಲಿ ಒಂದೊಂದು ಧಾನ್ಯಗಳು ಒಂದೊಂದು ವಿಶೇಷ ಗುಣಗಳನ್ನ ಹೊಂದಿದೆ.

    ಸಿರಿಧಾನ್ಯಗಳು ಇತ್ತೇಚೆಗೆ ಸಾಮಾನ್ಯವಾಗಿ ಕಾಡುವ ಬಿಪಿ, ಶುಗರ್ ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ. ಬಿಜಾಪುರದಿಂದ ಬಿಳಿ ಜೋಳ, ಬಳ್ಳಾರಿ ನವಣೆ, ಹಾವೇರಿಯ ಕಡಲೆಕಾಳು, ಶಿರಾದ ಕೊರಲೆ, ಚಿಕ್ಕನಾಯಕನಹಳ್ಳಿಯ ಹೆಸರುಕಾಳು, ಚಿಕ್ಕಮಗಳೂರಿನ ಏಲಕ್ಕಿ, ಪುತ್ತೂರಿನ ಮೆಣಸು, ಬೆಳ್ತಂಗಡಿಯ ಗೋಡಂಬಿ, ಚಳ್ಳಕೆರೆಯ ಕಡಲೆ ಬೀಜ, ಕೋಲಾರದ ರಾಗಿ, ಮೈಸೂರಿನ ಹುರುಳಿಕಾಳು, ದಾವಣಗೆರೆಯ ಮುಸುಕಿನ ಜೋಳ, ಹೊಸದುರ್ಗದ ಸಾಮೆ ಊದಲು, ಕಲಬುರಗಿಯಿಂದ ತೊಗರಿಕಾಳು, ಬಾಗಲಕೋಟೆಯ ಸಜ್ಜೆ ಸೇರಿದಂತೆ 9 ಸಿರಿಧಾನ್ಯ ಹಾಗೂ 14 ಕಾಳುಗಳನ್ನ ಕರ್ನಾಟಕದ ಪ್ರತಿಯೊಂದು ಜಿಲ್ಲೆಯ ರೈತರಿಂದ ನೇರವಾಗಿ ಖರೀದಿ ಮಾಡಿ ಈ ಜೀನಿಯನ್ನ ತಯಾರಿಸಲಾಗುತ್ತದೆ. ರೈತರಿಂದ ನೇರವಾಗಿ ಸಿರಿಧಾನ್ಯಗಳನ್ನ ಖರೀದಿ ಮಾಡಿದ ನಂತರ ಅದನ್ನ ಅಕ್ಕಿ ಮಾಡಲಾಗುತ್ತದೆ.

    ಸಿರಿಧಾನ್ಯಗಳು ಸೇರಿದಂತೆ 14 ರೀತಿಯ ಕಾಳುಗಳನ್ನು ನೀರಿನಲ್ಲಿ ತೊಳೆದು ನೆರಳಿನಲ್ಲಿ ಒಣಗಿಹಾಕಲಾಗುತ್ತದೆ. ಒಣಗಿದ ಕಾಳುಗಳನ್ನ ಮಹಿಳೆಯರು ಕ್ಲೀನ್ ಮಾಡ್ತಾರೆ. ನಂತರ ಮಣ್ಣಿನ ಮಡಿಕೆಯಲ್ಲಿ ಹದವಾಗಿ ಹುರಿಯಲಾಗುತ್ತೆ. ಹುರಿದ ಕಾಳುಗಳನ್ನ ಸರಿಯಾದ ಪ್ರಮಾಣದಲ್ಲಿ ಒಟ್ಟಿಗೆ ಮಿಶ್ರಣ ಮಾಡಲಾಗುತ್ತದೆ.

    ನಂತರ ಹುರಿದ ಕಾಳುಗಳನ್ನ ಪೌಡರ್ ಮಾಡಿ ಪ್ಯಾಕ್ ಮಾಡಲಾಗುತ್ತದೆ. ನೀವು ಮನೆಯಲ್ಲಿ ಹೇಗೆ ಅಕ್ಕಿ ಹಿಟ್ಟು, ರಾಗಿ ಹಿಟ್ಟನ್ನ ಮಾಡುತ್ತಿರೋ ಅದೇ ರೀತಿ ಮಾಡಲಾಗುತ್ತದೆ. ಇದರ ಎಕ್ಸ್ಪೆರಿ ಡೇಟ್ ಕೇವಲ 5 ತಿಂಗಳು ಮಾತ್ರ. ನ್ಯಾಚುರಲ್ ಆಗಿ ಪೌಡರ್ ಪ್ಯಾಕೇಟ್ ಆದ 5 ತಿಂಗಳ ವರೆಗೆ ಕೆಡುವುದಿಲ್ಲ. ಓಪನ್ ಮಾಡಿದ ನಂತರ ಒಂದು ತಿಂಗಳಲ್ಲಿ ಖಾಲಿ ಮಾಡಬೇಕು. ಬಳಕೆ ಮಾಡುವಾಗ ಮಾತ್ರ ತೆರೆದು, ಉಳಿದ ಸಂದರ್ಭದಲ್ಲಿ ಪ್ಯಾಕೇಟ್ ಮುಚ್ಚಿಡಬೇಕು.

    ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಯರಗುಂಟೆ ಗ್ರಾಮದಲ್ಲಿ 200 ಜನರಿಗೆ ದಿಲೀಪ್ ಉದ್ಯೋಗ ನೀಡಿದ್ದಾರೆ. ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶದಿಂದಲೇ ಯಂತ್ರಗಳನ್ನ ಹಾಕದೇ ಕೈಯಿಂದಲೇ ಮಾಡಿಸಲಾಗುತ್ತಿದೆ. ಒಂದು ಯಂತ್ರ 20 ಜನರ ಕೆಲಸ ಕಸಿದುಕೊಳ್ಳುತ್ತದೆ. ಹಾಗಾಗಿ ನಾವು ಯಂತ್ರಗಳನ್ನ ಹಾಕೋದಿಲ್ಲ ಅಂತಾರೆ ದಿಲೀಪ್.

    ಮಧ್ಯಾಹ್ನ ಕಾರ್ಮಿಕರಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನೂ ಸಹ ದಿಲೀಪ್ ಮಾಡ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜೀನಿ ತಯಾರಿಕೆ ಮಾಡ್ತಿದ್ರು. ಬೆಂಗಳೂರಿನ ಕಂಪನಿಗಳಂತೆಯೇ ಕಾರ್ಮಿಕರಿಗೆ ಯೂನಿಫಾರಂ ಜೊತೆಗೆ ಹೈಜೆನಿಕ್ ಮೇಂಟೇನ್ ಮಾಡಲು ಹ್ಯಾಂಡ್ ಗ್ಲೌಸ್, ಮಾಸ್ಕ್, ಕ್ಯಾಪ್‍ಗಳನ್ನು ಇಲ್ಲಿನ ಕಾರ್ಮಿಕರು ಬಳಸ್ತಾರೆ. ಒಟ್ಟಾರೆ ಜೀನಿ ತಯಾರಿಕೆಯಲ್ಲಿ ಸುರಕ್ಷಿತಾ ಕ್ರಮಗಳನ್ನ ಜೀವಿತಾ ಎಂಟಪ್ರ್ರೈಸಸ್ ಅನುಸರಿಕೊಂಡು ಹೋಗುತ್ತಿದೆ.

  • ಖೋಡೆ ಉದ್ಯಮ ಸಮೂಹದಿಂದ ಕೋವಿಡ್-19 ವಿರುದ್ಧದ ಹೋರಾಟಕ್ಕೆ ‘ವೈರಾನಾರ್ಮ್’ ಬಿಡುಗಡೆ

    ಖೋಡೆ ಉದ್ಯಮ ಸಮೂಹದಿಂದ ಕೋವಿಡ್-19 ವಿರುದ್ಧದ ಹೋರಾಟಕ್ಕೆ ‘ವೈರಾನಾರ್ಮ್’ ಬಿಡುಗಡೆ

    ಬೆಂಗಳೂರು: ಬೆಂಗಳೂರು ಮೂಲದ ಖೋಡೆ ಉದ್ಯಮ ಸಮೂಹವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಸರ್ಗ ಸಹಜ ಗಿಡಮೂಲಿಕೆಗಳನ್ನು ಬಳಸಿ ಅಭಿವೃದ್ಧಿಪಡಿಸಿದ ಆಯುರ್ವೇದ ಔಷಧಿ ‘ವೈರಾನಾರ್ಮ್’ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ, ಖೋಡೆ ಸಮೂಹವು ಪರ್ಯಾಯ ಔಷಧ ಉದ್ಯಮ ಕ್ಷೇತ್ರವನ್ನು ಪ್ರವೇಶಿಸಿದೆ.

    ಕ್ಯಾಪ್ಯೂಲ್ ರೂಪದಲ್ಲಿ ಲಭ್ಯವಿರುವ ‘ವೈರಾನಾರ್ಮ್’ ಅನ್ನು ಅಥೆರಾ ಡಾಬರ್ ರೀಸರ್ಚ್ ಫೌಂಡೇಷನ್ (ಡಿ.ಆರ್.ಎಫ್.) ಲೈಫ್ ಸೈನ್ಸಸ್ ನ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಸುದೀರ್ಘಾವಧಿಯ 3ನೇ ಹಂತದ ಕ್ಲಿನಿಕಲ್ ಟ್ರಯಲ್ (ಚಿಕಿತ್ಸಾ ಪ್ರಯೋಗ)ಗೆ ಒಳಪಡಿಸಿದ ವಿಶಿಷ್ಟ ಆಯುರ್ವೇದ ಕ್ಯಾಪ್ಸೂಲ್ ಇದಾಗಿದೆ.

    ಕ್ಲಿನಿಕಲ್ ಟ್ರಯಲ್ ಗಳಲ್ಲಿ ಪರಿಣಾಮಕಾರಿ ಎಂದು ದೃಢಪಟ್ಟಿರುವ ‘ವೈರಾನಾರ್ಮ್’ ಅನ್ನು ಅಪೇಕ್ಷಿತ ಫಲಿತಾಂಶ ಪರೀಕ್ಷೆ ಹಾಗೂ ಸುರಕ್ಷತಾ ಅಧ್ಯಯನಗಳಿಗೆ ಒಳಪಡಿಸಲಾಗಿದೆ. ಇದು ದೇಹದಲ್ಲಿ ವೈರಾಣುಗಳ ಸಂಖ್ಯೆ ಹೆಚ್ಚುವುದನ್ನು ತಡೆಯುತ್ತದೆ. ಆದ್ದರಿಂದ, ರೋಗಲಕ್ಷಣವಿಲ್ಲದ ಹಾಗೂ ರೋಗಲಕ್ಷಣದೊಂದಿಗೆ ಅಲ್ಪ ಪ್ರಮಾಣದಿಂದ ಸಾಧಾರಣ ಪ್ರಮಾಣದವರೆಗಿನ ಕೋವಿಡ್ ಸೋಂಕಿತರಿಗೆ ಇದನ್ನು ಈಗಾಗಲೇ ನೀಡುತ್ತಿರುವ ಚಿಕಿತ್ಸೆಯ ಜೊತೆಗೆ ಹೆಚ್ಚುವರಿಯಾಗಿ ನೀಡಬಹುದು. ಅಲ್ಪ ಪ್ರಮಾಣದ ಸೋಂಕಿನ ಪ್ರಮಾಣವು ಸಾಧಾರಣ ಹಂತಕ್ಕೆ ಹೋಗದಂತೆ ತಡೆಯಲು ಇದು ಸಹಕಾರಿಯಾಗಿದೆ.

    ನ್ಯೂಟ್ರೋಫಿಲ್- ಲಿಂಫೋಸೈಟ್ ಅನುಪಾತ (ಎನ್.ಎಲ್.ಆರ್.) ಎಂಬುದು ಕೋವಿಡ್ ಬಾಧಿತರ ಸೋಂಕು ಉಲ್ಬಣವನ್ನು ತೋರಿಸುವ ಜೈವಿಕ ಸೂಚಕವಾಗಿದೆ. ಇದು ಅತ್ಯಂತ ಉಪಯುಕ್ತವಾದ, ತ್ವರಿತವಾದ ಹಾಗೂ ದುಬಾರಿಯಲ್ಲದ ವಿಧಾನವೂ ಆಗಿದೆ. ಎನ್.ಎಲ್.ಆರ್. ಅನುಪಾತ ಕಡಿಮೆಯಿದ್ದರೆ ಉರಿಯೂತ ಕಡಿಮೆ ಮಟ್ಟದಲ್ಲಿದೆ ಹಾಗೂ ಅಧಿಕ ಸೈಟೋಟಾಕ್ಸಿಕ್ ಟಿ ಜೀವಕೋಶ ಪ್ರತಿರೋಧಕತೆ ಎಂಬುದನ್ನು ಸೂಚಿಸುತ್ತದೆ. ಹೀಗೆಂದರೆ ವೈರಾಣುಗಳ ಸಂಖ್ಯೆ ಕಡಿಮೆ ಎಂದೂ ಹಾಗೆಯೇ ಚೇತರಿಕೆಗೆ ಪೂರಕ ಎಂಬುದು

    ಮನುಷ್ಯನ ದೇಹವು ಕಾಯಿಲೆಯ ವಿರುದ್ಧ ಎರಡು ಬಗೆಯ ಪ್ರತಿರೋಧಗಳನ್ನು ತೋರುತ್ತದೆ. ಮೊದಲನೆಯದು, ‘ಪ್ರತಿಜೈವಿಕ ಮಧ್ಯವರ್ತಿ ಪ್ರತಿರೋಧ’ವಾದರೆ, ಎರಡನೆಯದು, ‘ಜೀವಕೋಶ ಮಧ್ಯವರ್ತಿ ಪ್ರತಿರೋಧ’ವಾಗಿದೆ. ಸಾಮಾನ್ಯ ವಿಧಾನಗಳ ಮೂಲಕ ಮಾಪನ ಮಾಡಲಾಗದ ‘ಜೀವಕೋಶ ಮಧ್ಯವರ್ತಿ ಪ್ರತಿರೋಧ’ವು ವೈರಾಣುಗಳ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈಗ ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ ‘ವೈರಾನಾರ್ಮ್’ ಔಷಧಿಯು ವ್ಯಕ್ತಿಯ ‘ಜೀವಕೋಶ ಮಧ್ಯವರ್ತಿ ಪ್ರತಿರೋಧ’ವನ್ನು ಹೆಚ್ಚಿಸುವ ಮೂಲಕ ಬೇಗನೇ ಚೇತರಿಸಿಕೊಳ್ಳಲು ಹಾಗೂ ಸೋಂಕು ಹರಡುವುದನ್ನು ತಡೆಯಲು ಸಹಕರಿಸುತ್ತದೆ. ಇದು, ಕೋವಿಡ್ ಬಾಧಿತರ ಪ್ರಮುಖ ರೋಗಲಕ್ಷಣವಾದ ಕೆಮ್ಮಿನ ತೀವ್ರತೆ, ಅದರ ಅವಧಿ ಹಾಗೂ ದೀರ್ಘಶ್ವಾಸದ ಕೊರತೆಯನ್ನು ತಗ್ಗಿಸುತ್ತದೆ ಎಂಬುದು ಕ್ಲಿನಿಯಲ್ ಟ್ರಯಲ್ ಗಳಲ್ಲಿ ದೃಢಪಟ್ಟಿದೆ. ಈ ಔಷಧಿಗೆ ಬಳಸುವ ಗಿಡಮೂಲಿಕೆ ಅಂಶಗಳು ವೈರಾಣುವು ಮೂಗಿನಲ್ಲಾಗಲೀ ಅಥವಾ ಗಂಟಲಿನಲ್ಲಾಗಲೀ ಜೀವಕೋಶದೊಂದಿಗೆ ಬೆಸೆದುಕೊಳ್ಳುವುದಕ್ಕೆ ಅವಕಾಶ ನೀಡದಿರುವ ಮೂಲಕ ರಕ್ಷಣೆ ನೀಡುತ್ತವೆ.

    “ಕಡಿಮೆಯಾಗುವ ಎನ್.ಎಲ್.ಆರ್. ಅನುಪಾತವು ಕೋಶ ಮಟ್ಟದ ಉರಿಯೂತವನ್ನು ಹಾಗೂ ಕೋಶ ಮಧ್ಯವರ್ತಿ ಪ್ರತಿರೋಧದ ಹೆಚ್ಚಳವನ್ನು ಖಾತರಿಪಡಿಸುತ್ತದೆ. ಎನ್.ಎಲ್. ಅನುಪಾತವನ್ನು ಕಡಿಮೆಗೊಳಿಸುತ್ತದೆ ಎಂಬುದನ್ನು ಕ್ಲಿನಿಕಲ್ ಟ್ರಯಲ್ ನಲ್ಲಿ ಕ್ರಮಬದ್ಧವಾಗಿ ಸಾಬೀತುಪಡಿಸಿರುವ ಪರ್ಯಾಯ ಔಷಧಿ ಇದೊಂದೇ ಆಗಿದೆ. ರೋಗ ಪ್ರತಿರೋಧದ ಮೂಲಭೂತ ತತ್ತ್ವಗಳನ್ನು ಆಧರಿಸಿ ‘ವೈರಾನಾರ್ಮ್’ ಅಭಿವೃದ್ಧಿಪಡಿಸಿರುವುದರಿಂದ ವೈರಸ್ ನ ರೂಪಾಂತರಗಳಿಗೂ ಇದು ಪರಿಣಾಮಕಾರಿಯಾಗಿರುತ್ತದೆ” ಎನ್ನುತ್ತಾರೆ ಈ ಔಷಧಿಯನ್ನು ಸೂತ್ರೀಕರಿಸಿದ ಡಾ.ಕೆ.ಜಿ.ಪದ್ಮನಾಭನ್.

    ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ ಬಾಧಿತ ಗರ್ಭಿಣಿಯರಿಗೆ ಹಾಗೂ ಮಗುವಿಗೆ ಜನ್ಮ ನೀಡಿದ ತಾಯಂದಿರ ಮೇಲೆ ‘ವೈರಾನಾರ್ಮ್’ ಬೀರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಅನುಮತಿ ನೀಡಿದೆ ಎಂದು ಅಲ್ತಿಯಾ ಡಾಬರ್ ಸಂಶೋಧನಾ ಫೌಂಡೇಷನ್ ಲೈಫ್ ಸೈನ್ಸಸ್ ನ ಡಾ. ಮನು ಜಗ್ಗಿ ಒತ್ತಿ ಹೇಳುತ್ತಾರೆ.

    ರಾಷ್ಟ್ರೀಯ ಆಸ್ಪತ್ರೆಗಳ ಮೌಲ್ಯಾಂಕನ ಮಂಡಳಿಯ  ಮಾನ್ಯತೆ ಹೊಂದಿದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಸಿ.ಟಿ.ಆರ್.ಐ. (ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿ- ಇಂಡಿಯಾ) ಅನುಮೋದನೆ ಪಡೆದು ಈ ಕ್ಲಿನಿಕಲ್ ಟ್ರಯಲ್ ನಡೆಸಲಾಗಿದೆ. ಇದಕ್ಕಾಗಿ 250 ಕೋವಿಡ್ ಸೋಂಕು ಬಾಧಿತರನ್ನು ಆಯ್ಕೆ ಮಾಡಿ 6 ತಿಂಗಳ ಕಾಲ ಪರೀಕ್ಷೆಗಳನ್ನು ನಡೆಸಲಾಯಿತು. ಸಿ.ಟಿ.ಆರ್.ಐ. ಮಾರ್ಗದರ್ಶಿ ಸೂತ್ರದ ಪ್ರಕಾರ, ಇವರನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಇದರಲ್ಲಿ, ಒಂದು ಗುಂಪಿನ 125 ಜನರಿಗೆ ‘ವೈರಾನಾರ್ಮ್’ ಕೊಡಲಾಗುತ್ತಿತ್ತು. ಇನ್ನೊಂದು ಗುಂಪಿನ 125 ಜನರಿಗೆ ‘ವೈರಾನಾರ್ಮ್’ ಕೊಡುತ್ತಿರಲಿಲ್ಲ. ‘ವೈರಾನಾರ್ಮ್’ ಕೊಡದವರಿಗಿಂತ ಅದನ್ನು ಕೊಟ್ಟವರಲ್ಲಿ ಚೇತರಿಕೆಯು ಉತ್ತಮವಾಗಿರುವುದು ವಿವರವಾದ ವಿಶ್ಲೇಷಣೆಗಳಿಂದ ದೃಢಪಟ್ಟಿದೆ.

    ಗಮನ ಸೆಳೆದ ಮತ್ತೊಂದು ಅಂಶವೆಂದರೆ, ಇದು ಕಿರಿಯ ವಯಸ್ಕರು (40ಕ್ಕಿಂತ ಕಡಿಮೆ ವರ್ಷ) ಹಾಗೂ ಹಿರಿಯ ವಯಸ್ಕರು (60ಕ್ಕಿಂತ ಹೆಚ್ಚು ವರ್ಷ), ಎರಡೂ ವಯೋಮಾನದವರಲ್ಲಿ, ‘ಟಿ’ ಜೀವಕೋಶಗಳ ಪ್ರತಿರೋಧವನ್ನು ಉತ್ತೇಜಿಸುವ ಜೊತೆಗೆ ಜೀವಕೋಶೀಯ ಉರಿಯೂತವನ್ನು ಕಡಿಮೆಗೊಳಿಸುತ್ತದೆ ಎಂಬುದು ಕಂಡುಬಂದಿದೆ. ಕೋವಿಡ್ 2ನೇ ಅಲೆಯು ಹಿರಿಯ ವಯಸ್ಸಿನವರ ಜೊತೆಗೆ ಕಿರಿಯ ವಯಸ್ಸಿನವರನ್ನೂ ಬಾಧಿಸುತ್ತಿರುವ ಈ ಸನ್ನಿವೇಶದಲ್ಲಿ ಇದು ಹೆಚ್ಚು ಗಮನ ಸೆಳೆಯುವ ಸಂಗತಿಯಾಗಿದೆ.

    ಜೀವಕೋಶ ಪ್ರತಿರೋಧದಲ್ಲಿ ಆಗುವ ಹೆಚ್ಚಳವು ದೀರ್ಘಾವಧಿ ಚೇತರಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಅಲ್ಲದೇ, ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಗಳಂತಹ ಸಹವರ್ತಿ ರೋಗಗಳಿಂದ ಬಾಧಿತರಾದವರಿಗೂ ‘ವೈರಾನಾರ್ಮ್’ ಸುರಕ್ಷಿತವಾಗಿದೆ.

    ಖೋಡೆ ಉದ್ಯಮ ಸಮೂಹದ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಸ್ವಾಮಿ ಖೋಡೆ ಅವರು ಈ ಉತ್ಪನ್ನ ಬಿಡುಗಡೆಯಾಗುತ್ತಿರುವುದಕ್ಕೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. “ನಮ್ಮ ಕುಟುಂಬದ ಹಿರಿಯರ ಆಶೀರ್ವಾದ ಹಾಗೂ ದೂರದರ್ಶಿತ್ವದ ಬಲದಿಂದ ಈ ಉತ್ಪನ್ನ ರೂಪಿಸುವಲ್ಲಿ ನಾನು ಶಕ್ತಿ ಮೀರಿ ತೊಡಗಿಸಿಕೊಂಡಿದ್ದೇನೆ. ಕ್ಲಿನಿಕಲ್ ಟ್ರಯಲ್ ನಲ್ಲಿ ‘ವೈರಾನಾರ್ಮ್’ ಪರಿಣಾಮಕಾರಿ ಎಂದು ದೃಢಪಟ್ಟಿದ್ದು, ಅದರ ಹಿಂದಿನ ತಾಂತ್ರಿಕ ವಿವರಗಳನ್ನು ಜನರ ಮುಂದಿಡಲು ಸಂತೋಷವಾಗುತ್ತಿದೆ” ಎಂದು ಅವರು ಹೇಳುತ್ತಾರೆ.

    ವೈಜ್ಞಾನಿಕ ತತ್ತ್ವಾಧಾರಿಕ ನೈಸರ್ಗಿಕ ಅಂಶಗಳಿಂದ ಕೂಡಿರುವ ‘ವೈರಾನಾರ್ಮ್’, ಕಾಯಿಲೆಗಳಿಗೆ ಪ್ರತಿರೋಧ ಹೆಚ್ಚಿಸುವ ಮೂಲಕ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಗುಣಮುಖವಾಗಲು ಸಹಕರಿಸುತ್ತದೆ’ ಎಂದೂ ಸ್ವಾಮಿ ಹೇಳುತ್ತಾರೆ.

    ‘ವೈರಾನಾರ್ಮ್’ ರಾಜ್ಯ/ದೇಶದೆಲ್ಲೆಡೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಬೆಲೆ 60 ಕ್ಯಾಪ್ಸೂಲ್ ಗಳ ಬಾಟಲಿಗೆ ರೂ 2,100 ಇದೆ.

  • ಈಶ್ವರಪ್ಪ ರಾಜೀನಾಮೆಗೆ ಬಿಎಸ್‍ವೈ ಆಪ್ತ ಶಾಸಕರ ಪಟ್ಟು

    ಈಶ್ವರಪ್ಪ ರಾಜೀನಾಮೆಗೆ ಬಿಎಸ್‍ವೈ ಆಪ್ತ ಶಾಸಕರ ಪಟ್ಟು

    – ಬಿಎಸ್‍ವೈಯನ್ನು ಭೇಟಿಯಾದ 7 ಶಾಸಕರು
    – ಸರ್ಕಾರದ ವಿರುದ್ಧ ಹೇಳಿಕೆ ನೀಡುವುದು ಎಷ್ಟು ಸರಿ?

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಸಚಿವ ಈಶ್ವರಪ್ಪ ರಾಜೀನಾಮೆಗೆ ಬಿಎಸ್‍ವೈ ಆಪ್ತ ಶಾಸಕರು ಆಗ್ರಹಿಸಿದ್ದಾರೆ.

    ಬಿಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಮಧ್ಯೆ ನಡೆಯುತ್ತಿದ್ದ ಶೀತಲ ಸಮರ ಈಗ ಸ್ಫೋಟಗೊಂಡಿದೆ. ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಈಶ್ವರಪ್ಪ ಬರೆದಿರುವ ಪತ್ರ ಬೆಳಕಿಗೆ ಬಂದ ಬೆನ್ನಲ್ಲೇ ಇಲ್ಲಿಯವರೆಗೆ ತೆರೆ ಹಿಂದೆ ನಡೆಯುತ್ತಿದ್ದ ಕಿತ್ತಾಟ ಈಗ ಬಹಿರಂಗವಾಗಿದೆ.

    ಸಿಎಂ ಆಪ್ತ ಶಾಸಕರಾದ ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಅರುಣ್ ಕುಮಾರ್ ಪೂಜಾರ್, ಮಹದೇವಪ್ಪ ಯಾದವಾಡ, ಮಹೇಶ್ ಕುಮಟಹಳ್ಳಿ, ಪರಣ್ಣ ಮುನವಳ್ಳಿ, ದಿನಕರ್ ಶೆಟ್ಟಿ ಇಂದು ಬೆಳಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತುಕತೆ ನಡೆದಿದ್ದಾರೆ. ಈ ವೇಳೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿ ತಮ್ಮದೇ ಸರ್ಕಾರವನ್ನು ಪ್ರಶ್ನಿಸುವುದು ಎಷ್ಟು ಸರಿ ಎಂದು ಕೇಳಿದ್ದಾರೆ. ಅಷ್ಟೇ ಅಲ್ಲದೇ ಕೂಡಲೇ ಅವರ ರಾಜೀನಾಮೆಯನ್ನು ಪಡೆಯಬೇಕು ಎಂದು ಸಿಎಂಗೆ ಒತ್ತಾಯಿಸಿದ್ದಾರೆ.

    ಸಭೆಯಲ್ಲಿ ಸಹಿ ಸಂಗ್ರಹ: ಕೆಲ ದಿನಗಳ ಹಿಂದೆ ಸಿಎಂ ಸಹಿ ಹಾಕಿದ್ರೂ ಈಶ್ವರಪ್ಪ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ರೇಣುಕಾಚಾರ್ಯ ದೂರು ನೀಡಿದ್ದರು. ರೇಣುಕಾಚಾರ್ಯ ನೇತೃತ್ವದ ದೂರಿನ ಮೇರೆಗೆ ಯಡಿಯೂರಪ್ಪ ಮಾರ್ಚ್ 18 ರಂದು ಸಭೆ ಕರೆದಿದ್ದರು. ಈ ಸಭೆಯ ಬಳಿಕ ಒಟ್ಟು 48 ಜನರ ಸಹಿ ಸಂಗ್ರಹವಾಗಿದ್ದು, ಇದೇ ಸಹಿ ಸಂಗ್ರಹವನ್ನು ಹೈಕಮಾಂಡ್‍ಗೆ ಕಳುಹಿಸಲು ಯಡಿಯೂರಪ್ಪ ಬಣ ಮುಂದಾಗಿತ್ತು. ಈ ಸಭೆಯ ಬಳಿಕ ಇಬ್ಬರ ನಡುವೆ ನಡೆಯುತ್ತಿದ್ದ ಶೀತಲ ಸಮರ ಜೋರಾಗಿ ಈಗ ಸ್ಫೋಟಗೊಂಡಿದೆ.

    ಸಿಎಂ ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರೇಣುಕಾಚಾರ್ಯ, ಗ್ರಾಮೀಣಾಭಿವೃದ್ಧಿ ಸಚಿವರು ಹಿರಿಯರಾಗಿರುವ ಈಶ್ವರಪ್ಪ ಅರ್ಥ ಮಾಡಿಕೊಳ್ಳಬೇಕು. ರಾಜ್ಯಪಾಲರಿಗೆ ದೂರು ಕೊಡುವುದು ಎಷ್ಟರಮಟ್ಟಿಗೆ ಸರಿ? ಸರ್ಕಾರದ ವಿರುದ್ಧ ಹೇಳಿಕೆಗಳನ್ನ ಕೊಡುವುದು ಸರಿ ಅಲ್ಲ ಎಂದು ಹೇಳಿದರು.

    ಜೆಪಿ ನಡ್ಡಾ, ಅಮಿತ್ ಶಾ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ದಾಖಲೆಯನ್ನು ಬಿಡುಗಡೆ ಮಾಡುತ್ತೇವೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಬೇಕಾಬಿಟ್ಟಿ ಈ ಹಿಂದೆ ಬಿಡುಗಡೆ ಮಾಡಿದ್ದು ಇದನ್ನು ಪ್ರಶ್ನೆ ಮಾಡುತ್ತೇವೆ. ಮರಿಸ್ವಾಮಿ ಮನೆಗೆ ಹಣ ಬಿಡುಗಡೆ ಮಾಡಿಲ್ಲ. ಬೆಂಗಳೂರು ಜಿಲ್ಲಾ ಪಂಚಾಯತ್‍ಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಈಶ್ವರಪ್ಪ ಆರೋಪಕ್ಕೆ ತಿರುಗೇಟು ನೀಡಿ ಸಿಎಂ ನಿರ್ಧಾರವನ್ನು ಸಮರ್ಥಿಸಿಕೊಂಡರು.

    ಯಾರಿಗೆಲ್ಲ ದೂರು?
    ಲಿಖಿತ ರೂಪದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‍ಸಿಂಗ್, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ಈಶ್ವರಪ್ಪ 2 ಪುಟಗಳ ಪತ್ರ ಬರೆದಿದ್ದಾರೆ. ಜೊತೆಗೆ ಬುಧವಾರ ಮಧ್ಯಾಹ್ನ ರಾಜ್ಯಪಾಲರನ್ನೂ ಭೇಟಿಯಾಗಿ ಈಶ್ವರಪ್ಪ ದೂರು ಕೊಟ್ಟಿದ್ದಾರೆ.

    ಆರ್ಥಿಕ ಇಲಾಖೆ ಮುಖ್ಯಮಂತ್ರಿಗಳ ಬಳಿಯೇ ಇದೆ. ಆದರೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಹತ್ವದ ಯೋಜನೆಗಳಿಗೆ ಒಪ್ಪಿಗೆ ನೀಡುತ್ತಿಲ್ಲ. ಬದಲಿಗೆ ನಮ್ಮ ಗಮನಕ್ಕೆ ತರದೇ ಬೇರೆ ಶಾಸಕರಿಗೆ ಅನುದಾನ ರಿಲೀಸ್ ಮಾಡಿದ್ದಾರೆ ಎಂದು ದೂರಿದ್ದಾರೆ.

    ಆರೋಪಗಳು ಏನು?
    1. ಗ್ರಾಮೀಣ ಸುಮಾರ್ಗ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಕೊಟ್ಟಿಲ್ಲ.
    2. 32 ಬಿಜೆಪಿ ಶಾಸಕರಿಗೆ ತಲಾ 20ರಿಂದ 23 ಕೋಟಿ, 42 ಬಿಜೆಪಿ ಶಾಸಕರಿಗೆ ತಲಾ 10 ಕೋಟಿ ರೂ. ಬಿಡುಗಡೆಗೆ ಸೂಚನೆ.
    3. ಕಾಂಗ್ರೆಸ್‍ನ 30 ಶಾಸಕರಿಗೆ 5 ಕೋಟಿ ರೂ. ಜೆಡಿಎಸ್‍ನ 18 ಶಾಸಕರಿಗೆ ತಲಾ 5 ಕೋಟಿ ರೂ. ಬಿಡುಗಡೆಗೆ ಆದೇಶ.
    4: ಬಿಎಸ್‍ವೈ ಬೀಗರೂ ಆಗಿರುವ ಬೆಂಗಳೂರು ನಗರ ಜಿ.ಪಂ ಅಧ್ಯಕ್ಷ ಮರಿಸ್ವಾಮಿ ಪ್ರತಿನಿಧಿಸುವ ದಾಸರಹಳ್ಳಿ ಜಿ.ಪಂ.ಗೆ 65 ಕೋಟಿ ರೂ. ಅನುದಾನ.
    5. ಜಿ.ಪಂ.ಗಳಿಗೆ 2019-20ರಲ್ಲಿ 1 ಅಥವಾ 2 ಕೋಟಿ ಅನುದಾನ ಬಿಡುಗಡೆಗೆಯಾಗಿತ್ತು. ಆದರೆ ಈಗ ದಾಸರಹಳ್ಳಿ ಜಿ.ಪಂ.ಗೆ ಇಷ್ಟೊಂದು ದೊಡ್ಡ ಅನುದಾನ ಬಿಡುಗಡೆಯಾಗಿದೆ.
    6. ತಮ್ಮ ಇಲಾಖೆಗೆ ನೀಡಿದ ಅನುದಾನದಲ್ಲಿ, ತಮ್ಮ ಗಮನಕ್ಕೆ ಬಾರದೇ ಅನುದಾನ ಹಂಚಿಕೆ.

    ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಮ್ಮ ಕ್ಷೇತ್ರದ ಕೆಲಸಗಳು ಆಗುತ್ತಿಲ್ಲ. ಸಚಿವ ಈಶ್ವರಪ್ಪ ಅವರು ಅನುದಾನಗಳನ್ನು ಬಿಡುಗಡೆ ಮಾಡದೇ ಎಲ್ಲದಕ್ಕೂ ಕೊಕ್ಕೆ ಹಾಕ್ತಿದ್ದಾರೆ ಎಂದು ಬಜೆಟ್ ಅಧಿವೇಶನದ ಹೊತ್ತಲ್ಲಿ ಸುಮಾರು 40ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪಗೆ ದೂರಿದ್ದರು. ಶಾಸಕರ ದೂರು ಆಲಿಸಿದ್ದ ಸಿಎಂ ಬಿಎಸ್‍ವೈ, ಎರಡು ದಿನಗಳ ಬಳಿಕ ವಿಧಾನಸೌಧದಲ್ಲಿ ಸಚಿವರು, ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದರು.

  • ದಿನ ಭವಿಷ್ಯ 31-03-2021

    ದಿನ ಭವಿಷ್ಯ 31-03-2021

    ರಾಹುಕಾಲ:12.27 ರಿಂದ 1.59
    ಗುಳಿಕಕಾಲ :10.55 ರಿಂದ 12.27
    ಯಮಗಂಡಕಾಲ:7.51 ರಿಂದ 9.23

    ಬುಧವಾರ, ತೃತೀಯ ತಿಥಿ, ಸ್ವಾತಿ ನಕ್ಷತ್ರ, ಶ್ರೀ ಶಾರ್ವರಿ ನಾಮ ಸಂವತ್ಸರ,
    ಉತ್ತರಾಯಣ,ಶಿಶಿರ ಋತು,ಫಾಲ್ಗುಣ ಮಾಸ,ಕೃಷ್ಣಪಕ್ಷ.

    ಮೇಷ: ಹಣಕಾಸು ವಿಚಾರದಲ್ಲಿ ಕಲಹ, ಹೆತ್ತವರಲ್ಲಿ ಪ್ರೀತಿ-ವಾತ್ಸಲ್ಯ, ಸ್ತ್ರೀಯರಿಂದ ಶುಭ ಸಮಾಚಾರ, ಕೆಲಸ ಕಾರ್ಯಗಳಲ್ಲಿ ಎಚ್ಚರ.

    ವೃಷಭ: ಭೂ ವ್ಯವಹಾರದಲ್ಲಿ ಲಾಭ, ಅಕಾಲ ಭೋಜನ ಪ್ರಾಪ್ತಿ, ಸ್ನೇಹಿತರ ಭೇಟಿ, ಮಕ್ಕಳೊಂದಿಗೆ ಸಮಯ ಕಳೆಯುವಿರಿ.

    ಮಿಥುನ: ಉದ್ಯೋಗದಲ್ಲಿ ಬಡ್ತಿ, ಮನೆಯಲ್ಲಿ ಕಿರಿಕಿರಿ, ಇಲ್ಲ ಸಲ್ಲದ ಅಪವಾದ, ಹಿರಿಯರಿಂದ ಮನಶಾಂತಿ.

    ಕಟಕ: ದೇವತಾ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರಿಗೆ ಅನುಕೂಲ, ಚಿನ್ನಾಭರಣ ಪ್ರಾಪ್ತಿ, ಆರೋಗ್ಯದಲ್ಲಿ ಚೇತರಿಕೆ, ಪ್ರಯಾಣದಿಂದ ತೊಂದರೆ.

    ಸಿಂಹ: ಅನಿರೀಕ್ಷಿತ ಧನಲಾಭ, ಉದ್ಯೋಗದಲ್ಲಿ ಒತ್ತಡ, ಜೀವನದಲ್ಲಿ ಜಿಗುಪ್ಸೆ, ಸ್ತ್ರೀಯರಿಗೆ ಲಾಭ, ಪುಣ್ಯಕ್ಷೇತ್ರ ದರ್ಶನ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ಕನ್ಯಾ: ಪರರಿಂದ ಸಹಾಯ, ಮಾನಸಿಕ ನೆಮ್ಮದಿ, ಋಣಭಾದೆ ಮುಕ್ತಿ, ದೂರ ಪ್ರಯಾಣ, ದಾಂಪತ್ಯದಲ್ಲಿ ಸಂತಸ.

    ತುಲಾ: ಯತ್ನ ಕಾರ್ಯದಲ್ಲಿ ವಿಳಂಬ, ಆತ್ಮೀಯರೊಂದಿಗೆ ಕಲಹ, ಅಲ್ಪ ಲಾಭ, ಶತ್ರುಭಾದೆ, ಶ್ರಮಕ್ಕೆ ತಕ್ಕ ಫಲ.

    ವೃಶ್ಚಿಕ: ಅಲ್ಪ ಕಾರ್ಯ ಸಿದ್ದಿ, ಶರೀರದಲ್ಲಿ ತಳಮಳ, ಕೃಷಿಕರಿಗೆ ನಷ್ಟ, ಕಾರ್ಯ ಬದಲಾವಣೆ, ಯತ್ನ ಕಾರ್ಯದಲ್ಲಿ ನಿಧಾನ.

    ಧನಸ್ಸು: ಕೆಲಸದಲ್ಲಿ ಅಧಿಕ ಒತ್ತಡ, ಖರ್ಚುಗಳು ಹೆಚ್ಚು, ಗೆಳೆಯರಿಂದ ಸಹಾಯ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ.

    ಮಕರ: ವಾದ ವಿವಾದಗಳಿಂದ ದೂರವಿರಿ, ಕೌಟುಂಬಿಕ ಜೀವನದಲ್ಲಿ ನೆಮ್ಮದಿ, ಹಣಕಾಸು ತೊಂದರೆ, ಅನಗತ್ಯ ಖರ್ಚುಗಳ ನಿಯಂತ್ರಣ ಅಗತ್ಯ.

    ಕುಂಭ: ಧರ್ಮ ಕಾರ್ಯದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಚೇತರಿಕೆ,ಅಮೂಲ್ಯ ವಸ್ತುಗಳ ಖರೀದಿ, ಗೌರವ ಪ್ರಾಪ್ತಿ, ಸುಖ ಭೋಜನ.

    ಮೀನಾ: ಸ್ನೇಹಿತರಿಂದ ನಿಂದನೆ, ಮಾನಸಿಕ ಚಿಂತೆ, ಶುಭಕಾರ್ಯದ ಮಾತುಕತೆ, ಕೃಷಿಯಲ್ಲಿ ಉತ್ತಮ ಫಲ, ಚೋರಾಗ್ನಿ ಭೀತಿ.

  • ಕೆಆರ್‌ಪುರಂನಲ್ಲಿ ಸಾಯಿ ಗೋಲ್ಡ್‌ ಪ್ಯಾಲೇಸ್‌ – ಗ್ರಾಹಕರಿಗೆ ಹಲವು ಕೊಡುಗೆ

    ಕೆಆರ್‌ಪುರಂನಲ್ಲಿ ಸಾಯಿ ಗೋಲ್ಡ್‌ ಪ್ಯಾಲೇಸ್‌ – ಗ್ರಾಹಕರಿಗೆ ಹಲವು ಕೊಡುಗೆ

    ಬೆಂಗಳೂರು: ಚಿನ್ನಾಭರಣ ಮಾರಾಟದಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಿ ಇಡೀ ಕರ್ನಾಟಕ ರಾಜ್ಯಾದ್ಯಂತ ಮನೆ ಮಾತಾಗಿರುವಂತಹ ಡಾ. ಟಿಎ ಶರವಣ ಮಾಲೀಕತ್ವದ ಶ್ರೀ ಸಾಯಿ ಗೋಲ್ಡ್‌ ಪ್ಯಾಲೇಸಿನ 5ನೇ ನೂತನ ಮಳಿಗೆ ಮಾರ್ಚ್‌ 21ರ ಭಾನುವಾರ ಕೆಆರ್‌ಪುರಂನಲ್ಲಿ ಬೆಳಗ್ಗೆ 11 ಗಂಟೆಗೆ ಶುಭಾರಂಭಗೊಳ್ಳಲಿದೆ.

    ಈಗಾಗಲೇ ಬಸವನಗುಡಿಯಲ್ಲಿ 2 ಮಳಿಗೆ, ಎಚ್‌ಎಸ್‌ಆರ್‌ ಲೇಔಟ್‌, ಯಲಹಂಕದಲ್ಲಿ ಮಳಿಗೆ ತೆರೆದಿರುವ ಸಾಯಿಗೋಲ್ಡ್‌ ಪ್ಯಾಲೇಸ್‌ ಈಗ ಹಳೆ ಮದ್ರಾಸ್‌ ರಸ್ತೆ, ಕೆಆರ್‌ಪುರಂ ಸಬ್‌ ರಿಜಿಸ್ಟ್ರಾರ್‌ ಕಚೇರಿ ಬಳಿ ಮಾ. 21 ರಂದು ಉದ್ಘಾಟನೆಯಾಗಲಿದೆ.

    ಗುಣಮಟ್ಟ, ವಿನ್ಯಾಸ, ಗ್ರಾಹಕರ ಆಪೇಕ್ಷೆಗೆ ತಕ್ಕಂತೆ ಚಿನ್ನಾಭರಣಗಳು ಇಲ್ಲಿ ಇರುವುದು ವಿಶೇಷ. 25ನೇ ವರ್ಷದ ಆಚರಣೆಯ ಶುಭ ಸಮಾರಂಭದಲ್ಲಿ ದುಬೈ ಬೆಲೆಯಲ್ಲೇ ಚಿನ್ನದ ಆಭರಣವನ್ನು ಖರೀದಿ ಮಾಡುವಂತಹ ಸುವರ್ಣ ಅವಕಾಶ ಗ್ರಾಹಕರಿಗೆ ಸಿಕ್ಕಿದೆ.

    ಎಲ್ಲ ರೀತಿಯ ಆಂಟಿಕ್‌ ಜುವೆಲ್ಲರಿ, ಟೆಂಪಲ್‌ ಜುವೆಲ್ಲರಿ, ಹ್ಯಾಂಡ್‌ ಕ್ರಾಫ್ಟ್‌ ಜ್ಯುವೆಲ್ಲರಿ ಇಲ್ಲಿದೆ. ವಜ್ರ, ಬೆಳ್ಳಿ, ಬೆಳ್ಳಿಯ ಕಡಿಮೆ ಭಾರ ಹೊಂದಿರುವ ಆಭರಣದ ಜೊತೆ ಹೊಸ ವಿನ್ಯಾಸದ ಎಲ್ಲರೂ ಇಷ್ಟ ಪಡುವ ಆಭರಣಗಳು ಗ್ರಾಹಕರಿಗಾಗಿ ತಯಾರಾಗಿದೆ.

    ಗ್ರಾಹಕರಿಗೆ ಕೊಡುಗೆ:
    ವೈವಿಧ್ಯಮಯವಾದ ಆಭರಣಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಸಾಯಿ ಗೋಲ್ಡ್ ಪ್ಯಾಲೇಸ್‌ ತನ್ನ ಎಲ್ಲ ಮಳಿಗೆಗಳಲ್ಲಿ ವೇಸ್ಟೇಜ್‌ ಮತ್ತು ಸ್ಟೋನ್‌ ಶುಲ್ಕ ವಿಧಿಸುತ್ತಿಲ್ಲ. ಹೊಸದಾಗಿ ಆರಂಭಗೊಳ್ಳಲಿರುವ ಮಳಿಗೆಯಲ್ಲಿ ಗ್ರಾಹಕರು ದುಬೈ ದರದಲ್ಲಿ ಚಿನ್ನಾಭರಣ ಖರೀದಿ ಮಾಡಬಹುದು. ಪ್ರತಿ 1 ಕೆಜಿ ಬೆಳ್ಳಿ ವಸ್ತು ಖರೀದಿಸಿದರೆ 2 ಸಾವಿರ ರೂ. ರಿಯಾಯಿತಿ ಪಡೆಯಬಹುದು

    50 ಸಾವಿರಕ್ಕಿಂತ ಹೆಚ್ಚಿನ ವಜ್ರಾಭರಣ ಖರೀದಿಸಿದರೆ ಚಿನ್ನದ ನಾಣ್ಯ ಉಚಿತವಾಗಿ ಸಿಗಲಿದೆ. ಅಷ್ಟೇ ಅಲ್ಲದೇ ಬೆಳ್ಳಿ ಆಭರಣಗಳ ಖರೀದಿಯ ಮೇಲೆ ಶೇ.5 ರಷ್ಟು ರಿಯಾಯಿತಿ ಸಿಗಲಿದೆ.

    ಶ್ರೀ ಸಾಯಿ ಗೋಲ್ಡ್‌ ಪ್ಯಾಲೇಸ್‌ ಮಾಲೀಕರು ಮತ್ತು ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಷನ್‌ ಅಧ್ಯಕ್ಷ ಡಾ.ಟಿ.ಎ ಶರವಣ ಮಾತನಾಡಿ, ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಉತ್ತಮ ಸಂದರ್ಭ. ಚಿನ್ನದ ಬೆಲೆ ಯಾವ ಸಮಯದಲ್ಲಿ ಏರಿಕೆ ಆಗಲಿದೆ ಎಂದು ಊಹಿಸುವುದೇ ಕಷ್ಟ. ಹೀಗಾಗಿ ನಾವು ಕೆ.ಆರ್‌.ಪುರಂ ಮಳಿಗೆಯಲ್ಲಿ ಹೆಚ್ಚಿನ ರಿಯಾಯಿತಿಗಳನ್ನು ಪ್ರಕಟಿಸಿದ್ದು ಗ್ರಾಹಕರು ಇದರ ಲಾಭ ಪಡೆಯಬೇಕು ಎಂದು ಹೇಳಿದರು.

    ಡಾ. ಟಿಎ ಶರವಣರ ಬಗ್ಗೆ:
    ಬಡತನದಲ್ಲಿ ಹುಟ್ಟಿ ಬೆಳೆದ ಶರವಣ ಅವರು ಇಂದು ಚಿನ್ನದ ಮಳಿಗೆಗಳನ್ನು ತೆರೆದಿರಬಹುದು. ಆದರೆ ಈ ಸಾಧನೆಯ ಹಿಂದೆ ಕಠಿಣ ಪರಿಶ್ರಮವಿದೆ. ಸಾಧನೆಗೆ ಯಾವುದೇ ಶಾರ್ಟ್‌ಕಟ್‌ ಇಲ್ಲ ಎಂಬಂತೆ ಆರಂಭದಲ್ಲಿ ಸೇಲ್ಸ್‌ಮನ್‌ ಆಗಿ ಚಿನ್ನ ಉದ್ಯಮದ ಕ್ಷೇತ್ರಕ್ಕೆ ಪ್ರವೇಶ ಮಾಡಿದ ಶರವಣ ತನಗೆ ಎದುರಾಗಿದ್ದ ಸವಾಲುಗಳನ್ನು ಮೆಟ್ಟಿ ನಿಂತು ಇಂದು ʼಶ್ರೀ ಸಾಯಿ ಗೋಲ್ಡ್‌ ಪ್ಯಾಲೇಸ್‌ʼ ಕಟ್ಟಿದ್ದಾರೆ.

    ಐದು ಸಹೋದರಿಯರು ಮತ್ತು ಓರ್ವ ಸಹೋದರನಿದ್ದ ದೊಡ್ಡ ಕುಟುಂಬದಲ್ಲಿ ಜನಿಸಿದ್ದ ಶರವಣ ಅವರಿಗೆ ಆರಂಭದಲ್ಲೇ ಕುಟುಂಬದ ಹೊರೆ ಇತ್ತು. ಕುಟುಂಬದ ಹೊರೆ, ಉದ್ಯಮ ಎಲ್ಲವನ್ನು ನಿಭಾಯಿಸಿ ಈಗ ಯಶಸ್ವಿ ಚಿನ್ನದ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ.

    ಒಂದು ಕಡೆ ಉದ್ಯಮದಲ್ಲಿ ಬೆಳವಣಿಗೆ ಆಗುತ್ತಿದ್ದಂತೆ ಇನ್ನೊಂದು ಕಡೆ ಶರವಣ ಸಹಾಯ ಹಸ್ತ ನೀಡತೊಡಗಿದರು. ಶಿರಡಿ ಸಾಯಿ ಬಾಬಾ ಅವರ ಭಕ್ತರಾಗಿರುವ ಶರವಣ ವಿವಿಧ ದೇವಾಲಯ ಮತ್ತು ಮಠಗಳಿಗೆ ಸಹಾಯ ನೀಡಿದ್ದಾರೆ. ಸಾಯಿ ಬಾಬಾ ಹೆಸರಿನಲ್ಲಿ ಧಾರಾವಾಹಿ ನಿರ್ಮಿಸಿ ಪಾತ್ರವನ್ನೂ ಮಾಡಿದ್ದರು. ಇವರ ಸಮಾಜಮುಖಿ ಕೆಲಸಗಳಿಂದ ಇವರು ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.

     

  • 2,576 ಪಾಸಿಟಿವ್‌, 29 ಬಲಿ – 8,334 ಡಿಸ್ಚಾರ್ಜ್‌

    2,576 ಪಾಸಿಟಿವ್‌, 29 ಬಲಿ – 8,334 ಡಿಸ್ಚಾರ್ಜ್‌

    ಬೆಂಗಳೂರು: ಇಂದು 2,576 ಮಂದಿಗೆ ಸೋಂಕು ಬಂದಿದ್ದು, 8,334 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಇಂದು 29 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

    ಒಟ್ಟು ಸೋಂಕಿತರ ಸಂಖ್ಯೆ 8,29,640ಕ್ಕೆ ಏರಿಕೆಯಾಗಿದೆ. ಈ ಪೈಕಿ 7,73,595 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು 44,805 ಸಕ್ರಿಯ ಪ್ರಕರಣಗಳಿವೆ.

    ಇಲ್ಲಿಯವರೆಗೆ ಒಟ್ಟು 11,221 ಮಂದಿ ಸೋಂಕಿಗೆ ಬಲಿಯಾಗಿದ್ದು, ಐಸಿಯುನಲ್ಲಿ 931 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 13,481 ಆಂಟಿಜನ್‌ ಟೆಸ್ಟ್‌, 65,015 ಆರ್‌ಟಿ ಪಿಸಿಆರ್‌ ಇತ್ಯಾದಿ ಪರೀಕ್ಷೆ ಸೇರಿದಂತೆ ಒಟ್ಟು 78,496 ಕೋವಿಡ್‌19 ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 80,91,137 ಕೊರೊನಾ ಪರೀಕ್ಷೆ ಮಾಡಲಾಗಿದೆ.

    ಬೆಂಗಳೂರು ನಗರದಲ್ಲಿ 1,439, ತುಮಕೂರು 123,ಮೈಸೂರು 100, ಹಾಸನದಲ್ಲಿ 87 ಮಂದಿಗೆ ಸೋಂಕು ಬಂದಿದೆ. ಬೆಂಗಳೂರು ನಗರದಲ್ಲಿ 458, ಬಳ್ಳಾರಿ 50, ತುಮಕೂರು 40, ಕೋಲಾರ 36 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • 6 ತಿಂಗಳಲ್ಲಿ ರೈತರಿಗೆ ಹೇಗೆ ಒಳ್ಳೆದಾಗುತ್ತೆ ನೋಡಿ – ವಿರೋಧಿಗಳಿಗೆ ಸಿಎಂ ಸವಾಲು

    6 ತಿಂಗಳಲ್ಲಿ ರೈತರಿಗೆ ಹೇಗೆ ಒಳ್ಳೆದಾಗುತ್ತೆ ನೋಡಿ – ವಿರೋಧಿಗಳಿಗೆ ಸಿಎಂ ಸವಾಲು

    – ರೈತ ಈಗ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು
    – ಮಧ್ಯವರ್ತಿಗಳ ಹಾವಳಿ ಕೈತಪ್ಪಲಿದೆ
    – ಎಪಿಎಂಸಿಯಲ್ಲೂ ರೈತರು ಮಾರಾಟ ಮಾಡಬಹುದು

    ಬೆಂಗಳೂರು: ಆರು ತಿಂಗಳಲ್ಲಿ ರೈತರಿಗೆ ಯಾವ ರೀತಿ ಒಳ್ಳೆಯದು ಆಗುತ್ತದೆ ಎಂಬುದನ್ನು ನೋಡಿ ಎಂದು ಸಿಎಂ ಯಡಿಯೂರಪ್ಪ ಮಸೂಧೆ ವಿರೋಧಿಸಿ ಪ್ರತಿಭಟನೆ ನಡೆಸಿದವರಿಗೆ ಸವಾಲು ಎಸೆದಿದ್ದಾರೆ.

    ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೊಂದು ಐತಿಹಾಸಿಕ ನಿರ್ಣಯವಾಗಿದ್ದು. ಎಪಿಎಂಸಿಯ ಬಾಗಿಲು ಮುಚ್ಚಿಲ್ಲ. ರೈತರು ಈಗ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. 6 ತಿಂಗಳ ಕಾದು ನೋಡಿ. ರೈತರಿಗೆ ಇದರಿಂದ ಎಷ್ಟು ಅನುಕೂಲವಾಗಲಿದೆ ಎಂಬುದು ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಬಂದ್ ಎಫೆಕ್ಟ್ – ಗ್ರಾಹಕರಿಗಾಗಿ ಕಾದು ಸುಸ್ತಾಗಿ ನಿದ್ರೆಗೆ ಜಾರಿದ ವ್ಯಾಪಾರಸ್ಥರು

    ನಾನು ರೈತನ ಮಗ, ಅನ್ನ ಕೊಡುವ ರೈತನಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ಅಧಿಕಾರಕ್ಕೆ ಅಂಟಿಕೊಂಡು ಕೂರುವವನು ಅಲ್ಲ. ವಿಧಾನಸಭೆಯಲ್ಲಿ ಚರ್ಚೆ ಮಾಡಲಾಗಿದೆ. ನನ್ನ ಬೆಳೆ, ನನ್ನ ಹಕ್ಕು. ರೈತ ಈಗ ತಾನು ಬೆಳೆಯುವ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಅನಾವಶ್ಯಕವಾಗಿ ಬೇರೆ ರೈತರನ್ನು ಗೊಂದಲ ಮಾಡಬೇಡಿ ಎಂದು ರೈತರ ಜೊತೆ ಮನವಿ ಮಾಡುತ್ತೇನೆ. ನಾನು ನಿಮ್ಮ ಜೊತೆ ಇದ್ದೇನೆ. ನಿಮ್ಮ ಹಿತಕ್ಕೆ ಧಕ್ಕೆ ಆಗುವ ಕೆಲಸ ಈ ಯಡಿಯೂರಪ್ಪ ಮಾಡುವುದಿಲ್ಲ ಎಂದು ಹೇಳಿದರು. ಎಪಿಎಂಸಿ ಪೂರ್ಣ ಬಾಗಿಲು ಮುಚ್ಚಿಲ್ಲ. ಎಪಿಎಂಸಿಯಲ್ಲೂ ರೈತರು ಮಾರಾಟ ಮಾಡಬಹುದು. ಈ ಕಾಯ್ದೆಯಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು ಎಂದು ಸಮರ್ಥಿಸಿಕೊಂಡರು.

    ಕಾಯ್ದೆಯಿಂದ ಶೇ.70ರಿಂದ 80ರಷ್ಟು ಅನುಕೂಲ ಆಗಲಿದೆ. ನಾನು ಶೀಘ್ರದಲ್ಲೇ ರಾಜ್ಯ ಪ್ರವಾಸ ಮಾಡುತ್ತೇನೆ. ಆಗ ರೈತರು ಎಷ್ಟು ಮೆಚ್ಚುಗೆ ವ್ಯಕ್ತಪಡಿಸ್ತಾರೆ ಎಂಬುದು ಗೊತ್ತಾಗುತ್ತದೆ. ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿಯೇ ಈ ಕಾಯ್ದೆ ತರಲಾಗಿದೆ ಎಂದರು.

    ಕಾಂಗ್ರೆಸ್ ನಾಯಕರ ಕಥೆ ಏನು ಅಂತಾ ಗೊತ್ತಿದೆ. ಈ ಹಿಂದೆ ಕಾಂಗ್ರೆಸ್‍ನವರು ಕಾಯ್ದೆ ಜಾರಿ ಬಗ್ಗೆ ಏನೆಲ್ಲಾ ಮಾಡಿದ್ದರು ಎಂಬುದು ಗೊತ್ತಿದೆ. ಹಿಂದೆ ಇದನ್ನು ಜಾರಿ ಮಾಡಲು ಕಾಂಗ್ರೆಸ್ ಮುಂದಾಗಿದ್ದರು. ಈಗ ಅದನ್ನು ಪ್ರಾಮಾಣೀಕವಾಗಿ ಜಾರಿ ಮಾಡಲು ಮುಂದಾಗಿದ್ದೇವೆ. ಈ ಕಾಯ್ದೆಯಿಂದ ಎಲ್ಲಾ ವರ್ಗದ ಜನರಿಗೆ ಅನುಕೂಲ ಆಗಲಿದೆ ಎಂದು ಸಮರ್ಥಿಸಿಕೊಂಡರು.