Tag: ಕನ್ನಡ ನಾಮಫಲಕ

  • ಸರ್ಕಾರದ ಎಲ್ಲಾ ಇಲಾಖೆಗಳ ನಾಮಫಲಕವನ್ನ ಕಡ್ಡಾಯವಾಗಿ ಕನ್ನಡದಲ್ಲೇ ಪ್ರದರ್ಶಿಸಬೇಕು – CS ಆದೇಶ

    ಸರ್ಕಾರದ ಎಲ್ಲಾ ಇಲಾಖೆಗಳ ನಾಮಫಲಕವನ್ನ ಕಡ್ಡಾಯವಾಗಿ ಕನ್ನಡದಲ್ಲೇ ಪ್ರದರ್ಶಿಸಬೇಕು – CS ಆದೇಶ

    ಬೆಂಗಳೂರು: ಸರ್ಕಾರದ ಎಲ್ಲಾ ಇಲಾಖೆಗಳ ನಾಮಫಲಕ ಕಡ್ಡಾಯವಾಗಿ ಕನ್ನಡದಲ್ಲಿ (Kannada Nameplate) ಇರುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajneesh) ಆದೇಶ ಹೊರಡಿಸಿದ್ದಾರೆ.

    ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರುತ್ತದೆ. ರಾಜ್ಯದಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022 ಹಾಗೂ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಅಧಿನಿಯಮ, 2024 ಜಾರಿಗೆ ಬಂದಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022 ರನ್ವಯ ಕನ್ನಡ ಭಾಷೆಯು ರಾಜ್ಯದ ಹಾಗೂ ಸ್ಥಳೀಯ ಪ್ರಾಧಿಕಾರದ ಅಧಿಕೃತ ಭಾಷೆಯಾಗಿದೆ. ಆದ್ದರಿಂದ, ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಇಲಾಖೆಗಳ ಅಧೀನದಲ್ಲಿ ಬರುವ ಎಲ್ಲಾ ಕ್ಷೇತ್ರ ಇಲಾಖೆಗಳಲ್ಲಿ, ಆಯುಕ್ತಾಲಯ, ನಿರ್ದೇಶನಾಲಯ, ನಿಗಮ, ಮಂಡಳಿ, ಪ್ರಾಧಿಕಾರಗಳ ಆವರಣಗಳಲ್ಲಿನ ಹೆಸರು, ಪದನಾಮ, ಸೇವಾ ಅವಧಿಯ ನಾಮಫಲಕಗಳು, ಮಾರ್ಗಗಳ ಸೂಚನಾ ಫಲಕಗಳು, ಇನ್ನಿತರೆ ಯಾವುದೇ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಪ್ರದರ್ಶಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಟೀಚರ್ ಹೊಡೆದ್ರು ಅಂತಾ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ – ಶಾಲಾ ಬಿಲ್ಡಿಂಗ್‌ನ 3ನೇ ಫ್ಲೋರ್‌ನಿಂದ ಏಕಾಏಕಿ ಜಿಗಿದ ವಿದ್ಯಾರ್ಥಿನಿ!

    ತೀರಾ ಅನಿವಾರ್ಯವಿದ್ದಲ್ಲಿ ಮಾತ್ರ ಕಡ್ಡಾಯವಾಗಿ ಕನ್ನಡ ಭಾಷೆಯು ಶೇ.60 ರಷ್ಟು ನಾಮಫಲಕದ ಮೇಲ್ಬಾಗದಲ್ಲಿರುವಂತೆ ಹಾಗೂ ಶೇ.40 ರಷ್ಟು ಆಂಗ್ಲಭಾಷೆಯಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ವಹಿಸುವಂತೆ ಸರ್ಕಾರದ ‌ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ಗೆ ಮೋದಿ ಭೇಟಿ – ಝೆಲೆನ್ಸ್ಕಿ ಜೊತೆ ಮಾತುಕತೆ; ಯುದ್ಧದಲ್ಲಿ ಮಡಿದ ಮಕ್ಕಳ ಸ್ಮಾರಕ ವೀಕ್ಷಿಸಿದ ಪ್ರಧಾನಿ!

  • ಕಡ್ಡಾಯ ಕನ್ನಡ ನಾಮಫಲಕ ಗಡುವು ಒಂದು ದಿನ ವಿಸ್ತರಣೆ

    ಕಡ್ಡಾಯ ಕನ್ನಡ ನಾಮಫಲಕ ಗಡುವು ಒಂದು ದಿನ ವಿಸ್ತರಣೆ

    – ನಾಳೆಯೊಳಗೆ ನಾಮಫಲಕ ಹಾಕದಿದ್ದರೆ ನಾವೇ ತೆರವು ಮಾಡ್ತೀವಿ
    – ಅಂಗಡಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಎಚ್ಚರಿಕೆ

    ಬೆಂಗಳೂರು: ಕಡ್ಡಾಯ ಕನ್ನಡ ನಾಮಫಲಕ (Kannada Name Board) ಅಳವಡಿಕೆಗೆ ಇಂದು ಕೊನೆಯ ದಿನವಾಗಿದ್ದು, ಈ ಗಡುವನ್ನು ಒಂದು ದಿನ ವಿಸ್ತರಣೆ ಮಾಡಿ ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಆದೇಶ ಹೊರಡಿಸಿದ್ದಾರೆ.

    ಇಂದು ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಗಡುವು ನೀಡಲಾಗಿತ್ತು. ಆದರೆ ಇದನ್ನು ಕಮೀಷನರ್ ಒಂದು ದಿನ ವಿಸ್ತರಣೆ ಮಾಡಿದ್ದಾರೆ. 3,000 ಅಂಗಡಿಗಳು ಇನ್ನೂ ಕನ್ನಡ ನಾಮಫಲಕ ಹಾಕಿಲ್ಲ. ನಾಳೆಯೊಳಗೆ (ಫೆ.29) ನಾಮಫಲಕ ಹಾಕದಿದ್ದರೆ ನಾವೇ ತೆರವು ಮಾಡುತ್ತೇವೆ. ಕೂಡಲೇ ನಾಮಫಲಕ ಬದಲಾಯಿಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಕೇಸ್‌ – ಅಖಿಲೇಶ್‌ ಯಾದವ್‌ಗೆ ಸಿಬಿಐ ಸಮನ್ಸ್‌

    ಕಡ್ಡಾಯ ಕನ್ನಡ ನಾಮಫಲಕ ಬಳಸದವರಿಗೆ ಮತ್ತೊಂದು ದಿನ ಅವಕಾಶ ನೀಡಲಾಗಿದೆ. ನಾಳೆ ಸಂಜೆಯವರೆಗೆ ನಾಮಫಲಕ ಬದಲಾವಣೆಗೆ ಅವಕಾಶ ನೀಡಿದ್ದು, ನಾಳೆಯೊಳಗೆ ಬದಲಾಯಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ಕೊಡಲಾಗಿದೆ. ಈಗಾಗಲೇ 90% ರಷ್ಟು ನಾಮಫಲಕ ಬದಲಾಗಿದೆ. ಇನ್ನು ಉಳಿದಿರೋದು 3 ಸಾವಿರ ನಾಮಫಲಕ ಮಾತ್ರ. ಅವರು ನಾಳೆ ಸಂಜೆಯೊಳಗೆ ಬದಲಾಯಿಸಬೇಕು. ಕೆಲವು ಅಂತಾರಾಷ್ಟ್ರೀಯ ಕಂಪನಿಗಳು ಹಾಗೂ ಎಸ್‌ಬಿಐ, ಕೆನರಾ ಬ್ಯಾಂಕ್ ಮನವಿ ಕೊಟ್ಟಿವೆ. ನಾಮಫಲಕ ಅಳವಡಿಕೆಗೆ ಮತ್ತಷ್ಟು ಗಡುವು ಕೇಳಿದ್ದಾರೆ. ಈ ಬಗ್ಗೆ ನಾಳೆ ಸಂಜೆ ತೀರ್ಮಾನ ಮಾಡುತ್ತೇವೆ ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರೋ ಭಾರತೀಯರಿಗೂ ರಕ್ಷಣೆ ಸಿಕ್ತಿದೆ: ಜೈಶಂಕರ್ ಶ್ಲಾಘನೆ

    ಇನ್ನು ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಮಾತನಾಡಿದ್ದು, ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಮೂಲಕ ಬಿಬಿಎಂಪಿ ಹಾಗೂ ಸರ್ಕಾರ ನಾಮಫಲಕ ಜಾರಿಗೊಳಿಸಲು ಇವತ್ತಿನವರೆಗೂ ಗಡುವು ಕೇಳಿತ್ತು. ಒಟ್ಟು 50,216ಗಳಲ್ಲಿ 40,600 ಉದ್ಯಮಿಗಳಿಗೆ ನೋಟಿಸ್ ಕೊಟ್ಟಿದ್ದೇವೆ. 3,600 ಉದ್ಯಮಿಗಳು ಕನ್ನಡ ನಾಮಫಲಕ ಹಾಕಿಕೊಳ್ಳಬೇಕು. ಒಂದು ವೇಳೆ ನಾಳೆಯೊಳಗೆ ಕನ್ನಡ ನಾಮಫಲಕ ಜಾರಿಯಾಗದಿದ್ದರೆ ಅವರ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಬಿಬಿಎಂಪಿ ಕಮೀಷನರ್ ಹೇಳಿದ್ದಾರೆ. 100% ಕನ್ನಡೀಕರಣ ಆಗದಿದ್ದರೇ ಮತ್ತೆ ಬೀದಿಗೆ ಇಳಿಯುತ್ತೇವೆ ಎಂದರು. ಇದನ್ನೂ ಓದಿ: ಲೋಕಸಭಾ ಚುನಾವಣೆಗೂ ಮುನ್ನ I.N.D.I.A ಒಕ್ಕೂಟದಲ್ಲಿ ಒಡಕು – ಚೂರನ್ನು ಮತ್ತೆ ಜೋಡಿಸುತ್ತಾ ಕಾಂಗ್ರೆಸ್‌?

    ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಬಾರದು. ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಕನ್ನಡ ನಾಮಫಲಕಗಳು ಇರಬೇಕು. ಇಲ್ಲದಿದ್ದರೆ ಎಲ್ಲಾ ಜಿಲ್ಲೆಗಳಲ್ಲಿ ಕರವೇ ಕಾರ್ಯಕರ್ತರು ಬೀದಿಗಿಳಿಯುತ್ತಾರೆ. ಬೆಂಗಳೂರಲ್ಲಿ 3,500-4,000 ಉದ್ಯಮಿಗಳು ಕನ್ನಡ ಬಳಸದೇ ಇರೋರು ನಾಮಫಲಕದಲ್ಲಿ 60% ಕನ್ನಡ ನಾಮಫಲಕ ಹಾಕಬೇಕು. ನುಡಿದಂತೆ ನಡೆಯದಿದ್ದರೇ, ಕನ್ನಡ ಬಳಸದೇ ಇದ್ದರೇ ಮತ್ತೆ ಬೆಂಗಳೂರಲ್ಲಿ ಕರವೇ ಕಾರ್ಯಕರ್ತರು ಬೀದಿಗೆ ಇಳಿಯುತ್ತೇವೆ. ನಾಮಫಲಕ ಹಾಕದೇ ಇರೋರ ಮೇಲೆ ಮಾರ್ಚ್ 1 ರವರೆಗೂ ಬಿಬಿಎಂಪಿ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದುನೋಡುತ್ತೇವೆ. ಬಿಬಿಎಂಪಿಯಿಂದ ಯಾವುದೇ ಕ್ರಮ ಆಗದಿದ್ದರೇ ಮತ್ತೆ ಮಾರ್ಚ್ 5 ರಂದು ಬೀದಿಗಿಳಿಯುತ್ತೇವೆ. ಮಾರ್ಚ್ 5 ರಂದು ಬಿಬಿಎಂಪಿ ವಿರುದ್ಧ ಕರವೇ ಪ್ರೊಟೆಸ್ಟ್ ಮಾಡುವುದಾಗಿ ನಾರಾಯಣ ಗೌಡರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶ: 15 ಬಿಜೆಪಿ ಶಾಸಕರ ಅಮಾನತುಗೊಳಿಸಿದ ಸ್ಪೀಕರ್‌

  • ಕರ್ನಾಟಕದಲ್ಲಿ ಕನ್ನಡ ಕಡ್ಡಾಯಕ್ಕೂ ಕ್ಯಾತೆ – ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮಹಾರಾಷ್ಟ್ರ ಸರ್ಕಾರ ತೀರ್ಮಾನ

    ಕರ್ನಾಟಕದಲ್ಲಿ ಕನ್ನಡ ಕಡ್ಡಾಯಕ್ಕೂ ಕ್ಯಾತೆ – ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮಹಾರಾಷ್ಟ್ರ ಸರ್ಕಾರ ತೀರ್ಮಾನ

    ಮುಂಬೈ/ಬೆಳಗಾವಿ: ಕನ್ನಡ ನಾಮಫಲಕ (Kannada Nameplate) ವಿಚಾರವಾಗಿ ಕರ್ನಾಟಕದೊಂದಿಗೆ ಮಹಾರಾಷ್ಟ್ರ ಸರ್ಕಾರ ಮತ್ತೊಮ್ಮೆ ಕ್ಯಾತೆಗೆ ಮುಂದಾಗಿದೆ.

    ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಮಾಡಿದ ರಾಜ್ಯ ಸರ್ಕಾರದ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಪ್ರಶ್ನಿಸಲು ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಸರ್ಕಾರ ಸಜ್ಜಾಗ್ತಿದೆ. ಇದನ್ನೂ ಓದಿ: Loksabha Election 2024: ದೆಹಲಿಯಲ್ಲಿ ಕೈಗೆ 3 ಸ್ಥಾನ ಬಿಟ್ಟು ಕೊಟ್ಟು 4 ಸ್ಥಾನಗಳಲ್ಲಿ AAP ಸ್ಪರ್ಧೆ?

    ವಿಧಾನ ಪರಿಷತ್‌ನಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಮಸೂದೆ ಅಂಗೀಕರಿಸಿದ ಮರುದಿನವೇ ಅಂದ್ರೆ ಮುಂಬೈನಲ್ಲಿ ಸಭೆ ನಡೆಸಿದ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ, ಸುಪ್ರೀಂ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದ್ದಾರೆ.

    ಇದಕ್ಕೆ ಕನ್ನಡ ಸಂಸ್ಕೃತಿ ಸಚಿವರು ಪ್ರತಿಕ್ರಿಯಿಸಿ, ನಾವೇನು ಮಹಾರಾಷ್ಟ್ರದಲ್ಲಿ (Maharashtra) ಕನ್ನಡ ಬೋರ್ಡ್ ಹಾಕಿ ಅಂತಾ ಹೇಳಿಲ್ವಲ್ಲ ಎಂದಿದ್ದಾರೆ. ಮಹಾರಾಷ್ಟ್ರದವರು ಏನೇ ಕ್ಯಾತೆ ತೆಗೆದರೂ, ನಾಡು ನುಡಿ ಜಲದ ವಿಚಾರದಲ್ಲಿ ರಾಜೀ ಇಲ್ಲ, ನಮ್ಮ ರಾಜ್ಯದ ತಂಟೆಗೆ ಬಂದ್ರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: IPL ಸ್ಟಾರ್‌ ಜೊತೆ ಗೆಳೆತನ ಹೊಂದಿದ್ದ ರೂಪದರ್ಶಿ ನಿಗೂಢ ಸಾವು – ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌!

    ಇನ್ನೂ, ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕಿದ ತಕ್ಷಣವೇ ನಾಮಫಲಕದಲ್ಲಿ ಕನ್ನಡ ಕಡ್ಡಾಯ ನಿಯಮವನ್ನು ಬೆಂಗಳೂರಲ್ಲಿ ಜಾರಿ ಮಾಡುವಂತೆ ಬಿಬಿಎಂಪಿಗೆ ಶಿವರಾಜ್ ತಂಗಡಗಿ ಸೂಚಿಸಿದ್ದಾರೆ. ಇದನ್ನೂ ಓದಿ: 40,000 ರೈಲು ಬೋಗಿಗಳಿಗೆ ಸಿಗಲಿದೆ ವಂದೇ ಭಾರತ್‌ನಂತೆ ಹೈಟೆಕ್‌ ಸ್ಪರ್ಶ – ಏನೆಲ್ಲಾ ವಿಶೇಷತೆ ಇರಲಿದೆ?  

  • ಕನ್ನಡ ನಾಮಫಲಕ ಕಡ್ಡಾಯ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಬೇಕು: ಡಿಕೆಶಿ ಒತ್ತಾಯ

    ಕನ್ನಡ ನಾಮಫಲಕ ಕಡ್ಡಾಯ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಬೇಕು: ಡಿಕೆಶಿ ಒತ್ತಾಯ

    ಬೆಂಗಳೂರು: ರಾಜ್ಯಪಾಲರು (Governer) ಕನ್ನಡ ಕಡ್ಡಾಯ ನಾಮಫಲಕ (Kannada Mandatory Nameplate) ಸುಗ್ರೀವಾಜ್ಞೆಗೆ (Ordinance) ಸಹಿ ಹಾಕಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಒತ್ತಾಯಿಸಿದ್ದಾರೆ.

    ಕನ್ನಡ ಕಡ್ಡಾಯ ನಾಮಫಲಕ ಸುಗ್ರೀವಾಜ್ಞೆ ರಾಜ್ಯಪಾಲರು ವಾಪಸ್ ಕಳಿಸಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಅಧಿವೇಶನ ಘೋಷಣೆ ಮಾಡುವ ಮುಂಚೆ ಸುಗ್ರೀವಾಜ್ಞೆ ಮಾಡಿದ್ದೆವು. ದೇಶದ ರಕ್ಷಣೆ ವಿಚಾರ ಹೇಗೆ ಕಾಪಾಡುತ್ತೇವೋ ಅದೇ ರೀತಿ ರಾಜ್ಯದ ಗೌರದ ವಿಚಾರ ಇದು. ನಾವು ಅದಕ್ಕೆ 60% ಕನ್ನಡ ಇರಬೇಕು ಎಂದು, ಯಾವುದೇ ಗೊಂದಲ ಇರಬಾರದು ಎಂದು ಸುಗ್ರೀವಾಜ್ಞೆ ಹೊರಡಿಸಿದ್ದೆವು. ಅಸ್ಮಿತೆ, ಸ್ವಾಭಿಮಾನ, ಭಾಷೆ, ಸಂಸ್ಕೃತಿ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಅ ದೃಷ್ಟಿಯಿಂದ ಗಲಾಟೆ, ಚಳವಳಿ ನಡೆಯುತ್ತಿತ್ತು. ಹೀಗಾಗಿ ಕನ್ನಡ (Kannada) ಕಡ್ಡಾಯ ಎಂದು ಮಾಡಿದ್ದೇವೆ ಎಂದರು. ಇದನ್ನೂ ಓದಿ: ಲೋಕಸಭೆಯಲ್ಲಿ ಜನ ಮತ ಹಾಕಿಲ್ಲ ಎಂದರೆ ಗ್ಯಾರಂಟಿ ಅವಶ್ಯಕತೆ ಇಲ್ಲಾ ಎಂದರ್ಥ: ಕಾಂಗ್ರೆಸ್ ಶಾಸಕ

    ರಾಜ್ಯಪಾಲರು ಯಾಕೆ ವಾಪಸ್ ಕಳಿಸಿದ್ರೋ ಗೊತ್ತಿಲ್ಲ. ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಸುಗ್ರೀವಾಜ್ಞೆಯನ್ನು ನಾವು ಅಧಿವೇಶನದಲ್ಲಿ ಪಾಸ್ ಮಾಡುತ್ತೇವೆ. ರಾಜ್ಯಪಾಲರು ಅಧಿವೇಶನದವರೆಗೆ ಕಾಯಬಾರದು. ಅಧಿವೇಶನದಲ್ಲಿ ನಾವು ಪಾಸ್ ಮಾಡೇ ಮಾಡ್ತೀವಿ. ಸರ್ಕಾರದ ಪರವಾಗಿ ಅಪೀಲ್ ಮಾಡುತ್ತೇನೆ. ಯಾರು ಇದಕ್ಕೆ ವಿರೋಧ ಮಾಡುತ್ತಿಲ್ಲ. ಯಾಕೆ ರಾಜ್ಯಪಾಲರು ವಿರೋಧ ಮಾಡಿದ್ರೋ ಗೊತ್ತಿಲ್ಲ. ಕರ್ನಾಟಕದಲ್ಲಿ ಇದ್ದೀರಿ. ಕರ್ನಾಟಕದಲ್ಲಿ ರಾಜ್ಯಪಾಲರು ಆಗಿದ್ದೀರಿ. ಇದೊಂದು ಭಾವನಾತ್ಮಕ ವಿಚಾರ. ಈ ವಿಚಾರವಾಗಿ ಸರ್ಕಾರದಲ್ಲಿ ನೀವು ತಪ್ಪು ಕಂಡು ಹಿಡಿಯಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಇಂದಿನಿಂದ ಬಜೆಟ್‌ ಅಧಿವೇಶನ; ಹೊಸ ಸಂಸತ್‌ನಲ್ಲಿ ರಾಷ್ಟ್ರಪತಿ ಮೊದಲ ಭಾಷಣ

    ಸುಗ್ರೀವಾಜ್ಞೆಗೆ ನಾಗರಿಕರು ಯಾರಾದ್ರು ವಿರೋಧ ಮಾಡಿದ್ದಾರಾ? ಯಾರಾದ್ರು ಪಕ್ಷದವರು ವಿರೋಧ ಮಾಡಿದ್ದಾರಾ? ಯಾರೂ ವಿರೋಧ ಮಾಡಲ್ಲ. ಹೀಗಾಗಿ ರಾಜ್ಯಪಾಲರು ಸುಗ್ರೀವಾಜ್ಞೆ ವಾಪಸ್ ಕಳಿಸಿರೋ ಬಗ್ಗೆ ಮರುಚಿಂತನೆ ಮಾಡಿ ಸಹಿ ಹಾಕಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಡಾ.ಮಂಜುನಾಥ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿ: ಸಿಎಂಗೆ ಆರ್‌.ಅಶೋಕ್‌ ಮನವಿ

  • ಬೆಳಗಾವಿಯಲ್ಲಿ MES ಪುಂಡರ ದಾಂಧಲೆ – ರಾತ್ರಿ ಏನೇನು ಮಾಡಿದ್ದಾರೆ?

    ಬೆಳಗಾವಿಯಲ್ಲಿ MES ಪುಂಡರ ದಾಂಧಲೆ – ರಾತ್ರಿ ಏನೇನು ಮಾಡಿದ್ದಾರೆ?

    – ಪೆಟ್ರೋಲ್ ಬಾಟಲಿ ಹಿಡಿದು ಬಸ್ಸಿಗೆ ಬೆಂಕಿ ಹಚ್ಚಲು ಯತ್ನ
    – ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪ

    ಬೆಳಗಾವಿ: ಕಳೆದ ರಾತ್ರಿ ಎಂಇಎಸ್ ಕಾರ್ಯಕರ್ತರು ನಡೆಸಿದ್ದ ದಾಂಧಲೆ ಕುರಿತ ಇಂಚಿಂಚೂ ಮಾಹಿತಿಯ ವೀಡಿಯೋಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ

    ಶುಕ್ರವಾರ ರಾತ್ರಿ 10:0ರ ವೇಳೆಗೆ ಮುಖಕ್ಕೆ ಮಾಸ್ಕ್ ಹಾಗೂ ಟೋಪಿ ಹಾಕಿಕೊಂಡು ಬಂದ 6-7 ಜನರಿದ್ದ 5 ಎಂಇಎಸ್ ಗ್ಯಾಂಗ್ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕನ್ನಡದ ನಾಮಫಲಕಗಳನ್ನು ಕೆಳಕ್ಕುರುಳಿಸಿ ಕಾಲಿನಿಂದ ಹಾನಿಗೊಳಿಸಿ ಹೋಟೆಲ್‍ಗಳ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಕಾರಿನ ಮೇಲೆ ಶಿವಸೇನೆ ಪುಂಡರಿಂದ ಕಲ್ಲು ತೂರಾಟ

    ದುಷ್ಕರ್ಮಿಗಳು ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಹಾನಿಪಡಿಸಿ ಖಡ್ಗ, ಗುರಾಣಿ ಬೇರೆ, ಬೇರೆ ಕಡೆ ಇಟ್ಟು ವಿಕೃತಿಗೊಳಿಸಿ ದುಷ್ಕೃತ್ಯವೆಸಗಿದ್ದಾರೆ. ಜೊತೆಗೆ ಅಧಿವೇಶನದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ 20ಕ್ಕೂ ಹೆಚ್ಚು ವಾಹನಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಹಿಂಸಾಚಾರ ಕೃತ್ಯವೆಸಗಿದ್ದಾರೆ.

    MES

    ನಗರದ ವಿವಿಧೆಡೆ ಲಾಡ್ಜ್‌ಗಳ ಮುಂದೆ ನಿಲ್ಲಿಸಿದ್ದ ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಲಾಗಿದ್ದು, ಆರ್‌ಟಿಓ ವೃತ್ತದ ಬಳಿಯ ನಿರ್ಮಾಣ ಹಂತದ ಪೊಲೀಸ್ ಕಾಂಪ್ಲೆಕ್ಸ್‌ನ ಪಾರ್ಕಿಂಗ್‍ನಲ್ಲಿ ವಾಹನಗಳನ್ನು ಜಖಂಗೊಳಿಸಿದ್ದಾರೆ. ಇದನ್ನೂ ಓದಿ: ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರೋಲ್ಲ, ಕನ್ನಡಿಗರ ಶಕ್ತಿ ಪ್ರದರ್ಶಿಸುವ ಕಾಲ ಬಂದಿದೆ: ಹೆಚ್‍ಡಿಕೆ

    ಬೆಳಗಾವಿ ಹೊರವಲಯದಲ್ಲಿ ಕೂಡ ಕೆಎಸ್ಆರ್‌ಟಿಸಿ ಬಸ್ ಮೇಲೆ ಕಿಡಿಕೇಡಿಗಳು ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಓರ್ವ ಕೈಯಲ್ಲಿ ಪೆಟ್ರೋಲ್ ಬಾಟಲಿ ಹಿಡಿದುಕೊಂಡು ಬಸ್‍ಗೆ ಬೆಂಕಿ ಹಚ್ಚಲು ಯತ್ನಿಸಿದ್ದಾನೆ.

    ಈ ಘಟನೆಯ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದು, ಬೆಳಗಾವಿಯಲ್ಲಿ ನಡೆದ ಪುಂಡಾಟಿಕೆ ಖಂಡನೀಯ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ತೆಗೆದುಕೊಳ್ಳಲು ಗೃಹಸಚಿವರಿಗೆ ಸೂಚನೆ ನೀಡಲಾಗಿದ್ದು, ಹಲವರ ಬಂಧನವೂ ಆಗಿದೆ. ಕಲ್ಲು ತೂರಾಟ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು ಕಾನೂನುಬಾಹಿರ. ಇಂತಹ ಘಟನೆ ನಡೆಯದಂತೆ ದೀರ್ಘಾವಧಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ಇದನ್ನೂಓದಿ:  ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ರಾಷ್ಟ್ರಭಕ್ತರ ಪ್ರತಿಮೆಗೆ ಭಂಗ ತರುವುದು ಸರಿಯಲ್ಲ. ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಗೌರವಿಸಬೇಕು. ನಾಡಿಗೆ ಹೋರಾಡಿದವರ, ತ್ಯಾಗ ಮಾಡಿದವರ ಗೌರವ ಉಳಿಸಬೇಕು. ನಾಡಿನಲ್ಲಿ ಕ್ಷೋಭೆ ಉಂಟುಮಾಡುವುದು ಸರಿಯಲ್ಲ. ಕೆಲವೇ ಕೆಲವು ಪುಂಡರು ಇಂತಹ ದುಷ್ಕೃತ್ಯ ಮಾಡುತ್ತಿದ್ದು, ಅವರನ್ನು ಸದೆಬಡಿಯುತ್ತೇವೆ”

  • ಮಾಡಿದ್ದ ತಪ್ಪನ್ನು ತಿದ್ದಿಕೊಂಡ ಬಿಬಿಎಂಪಿ

    ಮಾಡಿದ್ದ ತಪ್ಪನ್ನು ತಿದ್ದಿಕೊಂಡ ಬಿಬಿಎಂಪಿ

    ಬೆಂಗಳೂರು: ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ, ಬಿಬಿಎಂಪಿ ಹಾಕಿದ್ದ ಸ್ವಾಗತ ಫಲಕದಲ್ಲಿ ಕನ್ನಡವನ್ನು ಬಳಸದೆ ಸುದ್ದಿಯಾಗಿತ್ತು.

    ಮೋದಿ ಅವರು ಕಳೆದ ವಾರ ರಾಜಭವನದಲ್ಲಿ ಒಂದು ದಿನ ವಾಸ್ತವ್ಯ ಹೂಡಿದ್ದರು. ಆ ಸಮಯದಲ್ಲಿ ಬಿಬಿಎಂಪಿ ರಾಜಭವನದ ಹೊರಭಾಗದಲ್ಲಿ ದೊಡ್ಡದಾಗಿ ಹೂವಿನಿಂದ ಅಲಂಕಾರ ಮಾಡಿದ್ದ ಸ್ವಾಗತ ಫಲಕವನ್ನ ಹಾಕಿತ್ತು. ಆ ಸ್ವಾಗತ ಫಲಕದಲ್ಲಿ ಕನ್ನಡವನ್ನೇ ಬಳಸದೇ ಇಂಗ್ಲಿಷ್‍ನಲ್ಲಿ ಮೋದಿಗೆ ವೆಲ್‍ಕಮ್ ಹೇಳಿತ್ತು. ಆ ಸ್ವಾಗತ ಫಲಕದ ಫೋಟೋ ಸಿಕ್ಕಪಟ್ಟೆ ವೈರಲ್ ಆಗಿ ಬಿಬಿಎಂಪಿಯ ಕನ್ನಡ ದ್ರೋಹಿ ಕೆಲಸಕ್ಕೆ ಕನ್ನಡಿಗರು ಛೀಮಾರಿ ಹಾಕಿದ್ದರು.

    ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಸಹ ಬಿತ್ತರವಾಗಿತ್ತು. ಈಗ ಎಚ್ಚೆತ್ತಿರೋ ಬಿಬಿಎಂಪಿ ರಾಜ್ಯಕ್ಕೆ ಇಂದು ಆಗಮಿಸುತ್ತಿರೋ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ಕನ್ನಡದಲ್ಲೇ ಸ್ವಾಗತ ಫಲಕ ಹಾಕಿದ್ದಾರೆ. ಬೆಂಗಳೂರಿಗೆ ಆಗಮಿಸುತ್ತಿರೋ ಉಪರಾಷ್ಟ್ರಪತಿಗಳಿಗೆ ರಾಜಭವನದ ಮುಂದೆ ದೊಡ್ಡ ಹೂವಿನ ಸ್ವಾಗತ ಫಲಕ ಹಾಕಿರೋ ಬಿಬಿಎಂಪಿ ಸಂಪೂರ್ಣವಾಗಿ ಕನ್ನಡದಲ್ಲೇ ಸ್ವಾಗತ ಫಲಕ ಹಾಕಿ ತನ್ನ ಹಿಂದಿನ ತಪ್ಪನ್ನು ತಿದ್ದಿಕೊಂಡಿದೆ.

  • ನಾಮಫಲಕ ಗುಮ್ಮ – ಕನ್ನಡವಿಲ್ಲದ ನಾಮಫಲಕ್ಕೆ ಶಾಸಕರ ಬೆಂಬಲ

    ನಾಮಫಲಕ ಗುಮ್ಮ – ಕನ್ನಡವಿಲ್ಲದ ನಾಮಫಲಕ್ಕೆ ಶಾಸಕರ ಬೆಂಬಲ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕನ್ನಡಕ್ಕೆ ಅಗ್ರಸ್ಥಾನ ನೀಡದ ಅಂಗಡಿ ಮುಂಗಟ್ಟುಗಳ ನಾಮಫಲಕಗಳ ತೆರವು ಕಾರ್ಯಾಚರಣೆ ಇಂದು ನಗರದ ಹಲವೆಡೆ ನಡೆಯಿತು.

    ಆರೋಗ್ಯಾಧಿಕಾರಿ ಭಾಗ್ಯಲಕ್ಷ್ಮಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ತಂಡ ಭೇಟಿ ನೀಡಿದಾಗ ಕನ್ನಡ ನಾಮಫಲಕ ಹಾಕದ ಮಳಿಗೆಗಳ ಬೋರ್ಡ್ ತೆರವು ಮಾಡಲಾಯಿತು. ಈ ವೇಳೆ ಶಾಸಕರಿಂದ ಕರೆ ಮಾಡಿಸಿ ವ್ಯಾಪಾರಿಗಳು ಸಮಯವಾಕಾಶ ನೀಡುವಂತೆ ಒತ್ತಡ ತಂತ್ರವನ್ನು ಪ್ರಯೋಗಿಸಿದರು. ಆದರೆ ನಿಯಮವನ್ನು ವಿವರಿಸಿದ್ದೇವೆ ಎಂದು ಭಾಗ್ಯಲಕ್ಷ್ಮಿ ತಿಳಿಸಿದರು.

    ಈ ಮಧ್ಯೆ ತೆರವಿನ ಭಯದಿಂದ ಹಲವು ವ್ಯಾಪಾರಿಗಳು ಖುದ್ದು ಅವರೇ ನಾಮಫಲಕ ತೆರವು ಮಾಡಿದ್ದರು. ಇನ್ನೂ ಕೆಲವರು ನಾಮಫಲಕದಲ್ಲಿನ ಇಂಗ್ಲಿಷ್ ಅಕ್ಷರ ಇರುವ ಭಾಗಕ್ಕೆ ಪೇಪರ್ ಹಾಕಿ ಮುಚ್ಚಿದ ಸನ್ನಿವೇಶವೂ ಎದುರಾಯಿತು. ಇತ್ತ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಸಂಬಂಧಿಗಳ ಜೈಲ್ ಹೋಟೆಲ್ ನಾಮಫಲಕದಲ್ಲೂ ಇಂಗ್ಲೀಷ್ ಕಾರುಬಾರು ಜೋರಾಗಿತ್ತು. ಈ ನಾಮಫಲಕವನ್ನು ಸಹ ತೆರವು ಮಾಡಲಾಯಿತು. ನಗರಾದ್ಯಂತ ಸುಮಾರು 800ಕ್ಕೂ ಹೆಚ್ಚು ಬೋರ್ಡ್ ಗಳನ್ನು ತೆರವು ಮಾಡಲಾಗಿದೆ ಎಂದು ವಲಯ ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ಮಾಹಿತಿ ನೀಡಿದರು.

    ಇಷ್ಟೆಲ್ಲ ಹೈಡ್ರಾಮಾದ ನಡುವೆ ಒತ್ತಡಕ್ಕೆ ಮಣಿದ ಅಧಿಕಾರಿಗಳು ತೆರವು ಮಾಡಿದ ನಾಮಫಲಕಗಳನ್ನು ಮತ್ತೆ ವ್ಯಾಪಾರಿಗಳಿಗೆ ಹಿಂತಿರುಗಿಸಿದ ಸನ್ನಿವೇಶ ನಡೆಯಿತು. ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡಕ್ಕೆ ಆದ್ಯತೆ ಕಡ್ಡಾಯ ವಿಚಾರ ಮುಂದಿನ ದಿನಗಳಲ್ಲಿ ಎಷ್ಟರಮಟ್ಟಿಗೆ ಅಳವಡಿಕೆಯಾಗುತ್ತದೆ? ಈ ಕಾರ್ಯಚರಣೆ ಹೇಗೆ ಫಲ ನೀಡುತ್ತದೆ ಎಂದು ಕಾದುನೋಡಬೇಕಿದೆ.

  • ಕನ್ನಡ ಕಡ್ಡಾಯ ಎನ್ನುವ ಬಿಬಿಎಂಪಿ ನೋಟಿಸ್ ಇಂಗ್ಲೀಷ್‌ಮಯ

    ಕನ್ನಡ ಕಡ್ಡಾಯ ಎನ್ನುವ ಬಿಬಿಎಂಪಿ ನೋಟಿಸ್ ಇಂಗ್ಲೀಷ್‌ಮಯ

    ಬೆಂಗಳೂರು: ಹೇಳುವುದೊಂದು ಮಾಡೋದು ಮತ್ತೊಂದು ಎಂಬ ಮಾತಿಗೆ ಬಿಬಿಎಂಪಿ ಮಾಡುವ ಕೆಲಸ ಸರಿಯಾಗಿ ಹೋಲಿಕೆಯಾಗುತ್ತದೆ. ಎಲ್ಲರಿಗೂ ಕನ್ನಡ ಕಡ್ಡಾಯ, ನಾಮಫಲಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕೆಂದು ಹೇಳುವ ಪಾಲಿಕೆಯೇ ಇಂಗ್ಲಿಷ್‍ನಲ್ಲಿ ನೋಟಿಸ್ ಕೊಟ್ಟು ಎಡವಟ್ಟು ಮಾಡಿದೆ.

    ಅಕ್ರಮ ಮಳಿಗೆಗಳ ತೆರವಿಗೆ ಕೆ.ಆರ್ ಮಾರುಕಟ್ಟೆಯಲ್ಲಿ ನೋಟಿಸ್ ನೀಡುವಾಗ ಬಿಬಿಎಂಪಿ ಎಡವಟ್ಟು ಮಾಡಿದೆ. ಇಂಗ್ಲಿಷ್‍ನಲ್ಲಿ ಪತ್ರ ಬರೆದು ಈಗ ಆಕ್ಷೇಪಕ್ಕೆ ಸಿಲುಕಿದೆ. ವೆಸ್ಟ್ ಸಹಾಯಕ ಕಂದಾಯಾಧಿಕಾರಿಗೆ ನೋಟಿಸ್ ನೀಡುವಾಗ ಇಡೀ ಪತ್ರವನ್ನ ಇಂಗ್ಲಿಷ್‍ನಲ್ಲಿ ಬರೆಯಲಾಗಿದೆ. ಒಂದೆಡೆ ಜನರಿಗೆ ಕನ್ನಡದ ಪಾಠ ಮಾಡೋ ಪಾಲಿಕೆ ಈಗ ತಾನೇ ತಪ್ಪು ಮಾಡಿ ಪೇಚಿಗೆ ಸಿಲುಕಿದೆ.

    ಈ ಹಿಂದೆ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡುವ ವಿಚಾರವಾಗಿ ಎಫ್‍ಕೆಸಿಸಿಐ(ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ) ಬಿಬಿಎಂಪಿಗೆ ಪತ್ರ ಬರೆದಿತ್ತು. ಸದ್ಯ ಸಿಲಿಕಾನ್ ಸಿಟಿಯಲ್ಲಿ 10 ಸಾವಿರ ಕೈಗಾರಿಕೋದ್ಯಮ ಮತ್ತು 20 ಸಾವಿರ ವ್ಯಾಪಾರೋದ್ಯಮಿಗಳು ಈ ನಿಯಮಕ್ಕೆ ಒಳಪಡಲಿದ್ದಾರೆ. ಹೀಗಾಗಿ ವಾಣಿಜ್ಯ ಮಳಿಗೆಗಳು ಕನ್ನಡದಲ್ಲಿ ನಾಮಫಲಕ ಅಳವಡಿಕೆಗೆ ಏಪ್ರಿಲ್ 30ರವರೆಗೂ ಸಮಯಾವಕಾಶ ಬೇಕಾಗಿದೆ ಎಂದು ಬಿಬಿಎಂಪಿಗೆ ಎಫ್‍ಕೆಸಿಸಿಐ ಪತ್ರದಲ್ಲಿ ತಿಳಿಸಿತ್ತು.

    ಪತ್ರದಲ್ಲಿ ಸಮಯಾವಕಾಶದ ಜೊತೆಗೆ ಬಿಬಿಎಂಪಿಗೆ ಚುರುಕು ಸಹ ಮುಟ್ಟಿಸಿತ್ತು. ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ, ಕಸ ನಿರ್ವಹಣೆ, ಟ್ರಾಫಿಕ್ ಸಮಸ್ಯೆ, ಕಳಪೆ ಕಾಮಗಾರಿ ಒತ್ತಡ, ಮಳೆ ನೀರು ನಿರ್ವಹಣೆ ಹೀಗೆ ಸಮಸ್ಯೆಗಳ ಪಟ್ಟಿ ಮಾಡಿ, ಇದನ್ನು ಬಿಬಿಎಂಪಿ ಸೂಕ್ತವಾಗಿ ನಿರ್ವಹಿಸಬೇಕಾಗಿದೆ. ಅಲ್ಲದೆ ಬಿಬಿಎಂಪಿ ಕನ್ನಡ ನಾಮಫಲಕ ಅಳವಡಿಕೆ ಹೆಸರಲ್ಲಿ ಕಿರುಕುಳ ಸೃಷ್ಟಿಸಬಾರದೆಂದು ಎಫ್‍ಕೆಸಿಸಿಐ ಪತ್ರದಲ್ಲಿ ಉಲ್ಲೇಖಿಸಿತ್ತು.

  • ರಾಜಧಾನಿಯಲ್ಲಿ ಕನ್ನಡ ನಾಮಫಲಕದ ಕುರಿತು ಬಿಬಿಎಂಪಿಗೆ ಎಫ್‍ಕೆಸಿಸಿಐ ಪತ್ರ

    ರಾಜಧಾನಿಯಲ್ಲಿ ಕನ್ನಡ ನಾಮಫಲಕದ ಕುರಿತು ಬಿಬಿಎಂಪಿಗೆ ಎಫ್‍ಕೆಸಿಸಿಐ ಪತ್ರ

    ಬೆಂಗಳೂರು: ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡುವ ವಿಚಾರವಾಗಿ ಎಫ್‍ಕೆಸಿಸಿಐ(ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ) ಬಿಬಿಎಂಪಿಗೆ ಪತ್ರ ಬರೆದಿದೆ.

    ಸದ್ಯ ಸಿಲಿಕಾನ್ ಸಿಟಿಯಲ್ಲಿ 10 ಸಾವಿರ ಕೈಗಾರಿಕೋದ್ಯಮ ಮತ್ತು 20 ಸಾವಿರ ವ್ಯಾಪಾರೋದ್ಯಮಿಗಳು ಈ ನಿಯಮಕ್ಕೆ ಒಳಪಡಲಿದ್ದಾರೆ. ಹೀಗಾಗಿ ವಾಣಿಜ್ಯ ಮಳಿಗೆಗಳು ಕನ್ನಡದಲ್ಲಿ ನಾಮಫಲಕ ಅಳವಡಿಕೆಗೆ ಏಪ್ರಿಲ್ 30ರವರೆಗೂ ಸಮಯಾವಕಾಶ ಬೇಕಾಗಿದೆ ಎಂದು ಬಿಬಿಎಂಪಿಗೆ ಎಫ್‍ಕೆಸಿಸಿಐ ಪತ್ರ ಬರೆದಿದೆ.

    ಈ ಪತ್ರದಲ್ಲಿ ಸಮಯಾವಕಾಶದ ಜೊತೆಗೆ ಬಿಬಿಎಂಪಿಗೆ ಚುರುಕು ಸಹ ಮುಟ್ಟಿಸಿದೆ. ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ, ಕಸ ನಿರ್ವಹಣೆ, ಟ್ರಾಫಿಕ್ ಸಮಸ್ಯೆ, ಕಳಪೆ ಕಾಮಗಾರಿ ಒತ್ತಡ, ಮಳೆ ನೀರು ನಿರ್ವಹಣೆ ಹೀಗೆ ಸಮಸ್ಯೆಗಳ ಪಟ್ಟಿ ಮಾಡಿ, ಇದನ್ನು ಬಿಬಿಎಂಪಿ ಸೂಕ್ತವಾಗಿ ನಿರ್ವಹಿಸ ಬೇಕಾಗಿದೆ. ಅಲ್ಲದೆ ಬಿಬಿಎಂಪಿ ಕನ್ನಡ ನಾಮಫಲಕ ಅಳವಡಿಕೆ ಹೆಸರಲ್ಲಿ ಕಿರುಕುಳ ಸೃಷ್ಟಿಸಬಾರದೆಂದು ಎಫ್‍ಕೆಸಿಸಿಐ ಪತ್ರದಲ್ಲಿ ಉಲ್ಲೇಖಿಸಿದೆ.

  • ನವೆಂಬರ್ 1 ರಿಂದಲೇ ಕನ್ನಡ ನಾಮಫಲಕ ಕಡ್ಡಾಯ

    ನವೆಂಬರ್ 1 ರಿಂದಲೇ ಕನ್ನಡ ನಾಮಫಲಕ ಕಡ್ಡಾಯ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕನ್ನಡ ನಾಮಫಲಕವನ್ನು ಕಡ್ಡಾಯಗೊಳಿಸಿ ಬಿಬಿಎಂಪಿ ಆಯುಕ್ತರಾದ ಅನಿಲ್ ಕುಮಾರ್ ಅವರು ಆದೇಶ ನೀಡಿದ್ದು, ಅಂಗಡಿ, ಮುಂಗಟ್ಟು ಸೇರಿದಂತೆ ಕಂಪನಿಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಇರುವುದು ಕಡ್ಡಾಯಗೊಳಿಸಿ ಆದೇಶಿಸಲಾಗಿದೆ.

    ಈ ಕುರಿತು ಆಯುಕ್ತ ಅನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದು, ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಮಾಡಲಾಗಿದ್ದು, ಕನ್ನಡದಲ್ಲಿ ನಾಮಫಲಕ ಇಲ್ಲದೇ ಹೋದಲ್ಲಿ ಟ್ರೇಡ್ ಲೈಸೆನ್ಸ್ ರದ್ದು ಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಟ್ರೇಡ್ ಲೈಸೆನ್ಸ್ ರದ್ದು ಮಾಡುವ ಆದೇಶವನ್ನು ಬಿಬಿಎಂಪಿ ನೀಡಿರಲಿಲ್ಲ. ಇದೀಗ ಜಾಹೀರಾತು ನಿಯಮದ ಜೊತೆಯಲ್ಲೇ ಇದನ್ನು ಸೇರಿಸಲು ನಿರ್ಧಾರ ಮಾಡಲಾಗಿದೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಕನ್ನಡ ನಾಮಫಲಕ ಆದೇಶ ಈ ಹಿಂದೆ ನೀಡಿದ್ದರು ಕೂಡ ಈ ಬಾರಿ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಅಂಗಡಿ ಮುಗ್ಗಟ್ಟುಗಳು, ಹೋಟೆಲ್, ಕಂಪನಿಗಳು ಹಾಗೂ ಇತರೇ ಪರವಾನಗಿ ಪಡೆದಿರುವ ವ್ಯಾಪಾರಿಗಳು ತಮ್ಮ ಶಾಖೆಯ ಎದುರು ಕನ್ನಡ ನಾಮಫಲಕ ಕಡ್ಡಾಯ ಮಾಡಿ ಪರವಾನಗಿದಾರರುಗಳಿಗೆ ಸೂಚನೆ ನೀಡಲಾಗಿದೆ. ಹೊಸದಾಗಿ ಪರವಾನಗಿ ಅರ್ಜಿ ಸಲ್ಲಿಸುವವರು ಕೂಡ ಕನ್ನಡ ಭಾಷೆ ನಾಮಫಲಕ ಬಳಕೆ ಮಾಡುವುದು ಕಡ್ಡಾಯ ಮಾಡಲಾಗಿದೆ.

    ಶೇ.60ರಷ್ಟು ಕನ್ನಡ ಕಡ್ಡಾಯವಾಗಿದ್ದು ಉಳಿದ ಪ್ರಮಾಣದಲ್ಲಿ ಯಾವುದೇ ಭಾಷೆಯನ್ನು ಬಳಕೆ ಮಾಡಬಹುದು. ನಂ.1 ರಿಂದಲೇ ಇದು ಜಾರಿಯಾಗಲಿದ್ದು, ಮುಂದಿನ 1 ತಿಂಗಳ ಅವಧಿಯನ್ನು ಪರವಾನಗಿದಾರರಿಗೆ ನೀಡಲಾಗಿದೆ.