Tag: ಕನ್ನಡ ಟ್ರೇಲರ್

  • ತಾಯಿಗೆ ತಕ್ಕ ಮಗ ಪ್ರೇಕ್ಷಕರ ಮುಂದೆ ಬರೋದ್ಯಾವಾಗ ಗೊತ್ತಾ?

    ತಾಯಿಗೆ ತಕ್ಕ ಮಗ ಪ್ರೇಕ್ಷಕರ ಮುಂದೆ ಬರೋದ್ಯಾವಾಗ ಗೊತ್ತಾ?

    ಜೇಯ್ ರಾವ್ ಅಂದ್ರೆ ಲವರ್ ಬಾಯ್ ಲುಕ್ಕೇ ಕಣ್ಮುಂದೆ ಬರುತ್ತದಲ್ಲಾ? ಅದನ್ನು ಸಂಪೂರ್ಣವಾಗಿ ಅದಲು ಬದಲು ಮಾಡೋ ಸಕಾರಾತ್ಮಕ ಸೂಚನೆಗಳಿರೋ ಚಿತ್ರ ತಾಯಿಗೆ ತಕ್ಕ ಮಗ. ಶಶಾಂಕ್ ತಮ್ಮದೇ ಬ್ಯಾನರಿನಲ್ಲಿ ನಿರ್ಮಾಣ ಮಾಡಿ, ನಿರ್ದೇಶನವನ್ನೂ ಮಾಡಿರುವ ಈ ಚಿತ್ರ ಅಜೇಯ್ ರಾವ್ ಅವರ 25ನೇ ಚಿತ್ರವೂ ಹೌದು. ಈ ಚಿತ್ರವೀಗ ಬಿಡುಗಡೆಯಾಗೋ ಮುಹೂರ್ತ ನಿಗದಿಯಾಗಿದೆ.

    ಟ್ರೈಲರ್ ಮತ್ತು ಹಾಡುಗಳ ಮೂಲಕವೇ ಕುತೂಹಲದ ಜ್ವರ ಏರಿಸಿರುವ ಈ ಚಿತ್ರ ನವೆಂಬರ್ 16ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲಿದೆ.

    ಸುಮಲತಾ ಅಂಬರೀಶ್ ಅವರು ಬಹು ಕಾಲದ ನಂತರ ಈ ಚಿತ್ರದ ಮೂಲಕ ಅಜೇಯ್ ರಾವ್ ಅಮ್ಮನಾಗಿ, ವಿಶೇಷವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅಜೇಯ್ ರಾವ್ ಅಭಿನಯಿಸಿದ್ದ ಎಕ್ಸ್‍ಕ್ಯೂಸ್ ಮಿ ಚಿತ್ರದಲ್ಲಿ ಸುಮಲತಾ ಅಮ್ಮನಾಗಿ ನಟಿಸಿದ್ದರು. ಆ ಪಾತ್ರ ಮನ ಮಿಡಿಯುವಂತಿತ್ತು. ಈ ಚಿತ್ರದಲ್ಲಿಯೂ ಕೂಡಾ ಈ ಅಮ್ಮ ಮಗನ ಜೋಡಿ ಸಖತ್ತಾಗಿಯೇ ಮೋಡಿ ಮಾಡುವ ಎಲ್ಲ ಲಕ್ಷಣಗಳೂ ಇವೆ.

    ಈಗಾಗಲೇ ಈ ಚಿತ್ರದ ಹಾಡುಗಳು ಹಿಟ್ ಆಗಿವೆ. ಟ್ರೈಲರ್ ಸೂಪರಾಗಿದೆ. ಇದರಲ್ಲಿ ಅಜೇಯ್ ರಾವ್ ಅವರ ಮಾಸ್ ಲುಕ್ಕಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದರೆ ಈ ಚಿತ್ರ ತೆರೆ ಕಾಣೋದ್ಯಾವಾಇಉಗ ಎಂಬ ಪ್ರಶ್ನೆ ಮಾತ್ರ ಎಲ್ಲರನ್ನೂ ಕೊರೆಯುತ್ತಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕನ್ನಡದಲ್ಲಿ ಮೊದಲ ಬಾರಿಗೆ ಹಾಲಿವುಡ್ ಸ್ಪೈಡರ್‍ಮ್ಯಾನ್ ಟ್ರೇಲರ್ ರಿಲೀಸ್

    ಕನ್ನಡದಲ್ಲಿ ಮೊದಲ ಬಾರಿಗೆ ಹಾಲಿವುಡ್ ಸ್ಪೈಡರ್‍ಮ್ಯಾನ್ ಟ್ರೇಲರ್ ರಿಲೀಸ್

    ಮುಂಬೈ: ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಹಾಲಿವುಡ್ ಟ್ರೇಲರ್ ರಿಲೀಸ್ ಆಗಿದೆ. ಸ್ಪೈಡರ್‍ಮ್ಯಾನ್ ಹೋಮ್‍ಕಮಿಂಗ್ ಟ್ರೇಲರ್ ಯೂಟ್ಯೂಬ್‍ನಲ್ಲಿ ರಿಲೀಸ್ ಆಗಿದೆ.

    ಮೂಲ ಇಂಗ್ಲಿಷ್ ಭಾಷೆಯಲ್ಲಿರುವ ಈ ಚಿತ್ರ ಕನ್ನಡ ಸೇರಿದಂತೆ, ಹಿಂದಿ, ತಮಿಳು, ತೆಲುಗು, ಮರಾಠಿ, ಗುಜರಾತ್ ನಲ್ಲಿ ಬಿಡುಗಡೆಯಾಗಿದೆ. ಜನ್ ವಾಟ್ಸ್ ನಿರ್ದೇಶನದ ಟಾಪ್ ಹಾಲಂಡ್, ಮೈಕಲ್ ಕೀಟನ್ ಅಭಿನಯದ ಈ ಚಿತ್ರ ಜುಲೈ 7 ರಂದು ಬಿಡುಗಡೆಯಾಗಲಿದೆ.

    ಕನ್ನಡದಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದನ್ನು ಡಬ್ಬಿಂಗ್ ಪರ ನಿಲುವ ಹೊಂದಿರುವ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಯೂ ಟ್ಯೂಬ್ ಲಿಂಕ್ ಶೇರ್ ಮಾಡಿ ಸ್ವಾಗತಿಸಿದ್ದಾರೆ. ಈ ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗುವುದನ್ನು ನಾವು ಕಾಯುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

    ತೀವ್ರ ವಿರೋಧದ ಮಧ್ಯೆಯೂ ಮೊದಲ ಬಾರಿಗೆ ಕರ್ನಾಟಕದಲ್ಲಿ ಕಳೆದ ಮಾರ್ಚ್ ಮೊದಲ ವಾರದಲ್ಲಿ ತಮಿಳಿನ ಡಬ್ ಸಿನಿಮಾ ಸತ್ಯದೇವ್ ಐಪಿಎಸ್ ರಿಲೀಸ್ ಆಗಿತ್ತು.

    https://twitter.com/nanuramu/status/849136306667913216

    https://twitter.com/AnanthaJois/status/849143952682831872