Tag: ಕನ್ನಡ ಚಲನಚಿತ್ರ

  • ಚೇಸ್: ಕೊನೇ ಕ್ಷಣದ ಕುತೂಹಲಕ್ಕೆ ಕಿಚ್ಚು ಹೊತ್ತಿಸಿದ ಟ್ರೈಲರ್‌

    ಚೇಸ್: ಕೊನೇ ಕ್ಷಣದ ಕುತೂಹಲಕ್ಕೆ ಕಿಚ್ಚು ಹೊತ್ತಿಸಿದ ಟ್ರೈಲರ್‌

    ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಚಿತ್ರ ಜುಲೈ 15ರಂದು ತೆರೆಕಾಣಲಿದೆ. ತೆರೆಗೆ ಬರಲು ಇನ್ನೂ ಎರಡ್ಮೂರು ದಿನಗಳು ಬಾಕಿ ಇರುವಾಗಲೇ ಚಿತ್ರತಂಡ ಹೊಸ ಆವೇಗವನ್ನೇ ತನ್ನೊಳಗೆ ಬಚ್ಚಿಟ್ಟುಕೊಂಡಂತಿರೋ ಟ್ರೈಲರ್‌  ಅನ್ನು ಬಿಡುಗಡೆಗೊಳಿಸಿದೆ.

    ಇಷ್ಟು ದಿನ ಕಾದದ್ದೂ ಸಾರ್ಥಕವೆನಿಸುವಂಥಾ ಕಂಟೆಂಟ್ ಈ ಸಿನಿಮಾದಲ್ಲಿದೆ ಎಂಬ ನಿಖರ ಸುಳಿವು ಬಿಟ್ಟುಕೊಟ್ಟಿರುವ ಈ ಟ್ರೈಲರ್‌ಗೆ ವ್ಯಾಪಕ ಮೆಚ್ಚುಗೆಯೂ ಕೇಳಿ ಬರುತ್ತಿದೆ. ಅರೆಕ್ಷಣವೂ ತುದೀ ಸೀಟಿನಿಂದ ಆಚೀಚೆ ಕದಲದಂಥಾ ವೇಗದೊಂದಿಗೆ ಚೇಸ್ ಸಾಗಲಿದೆ ಎಂಬುದು ನೋಡುಗರೆಲ್ಲರಿಗೂ ಪಕ್ಕಾ ಆದಂತಾಗಿದೆ. ಇಂತಹದ್ದೊಂದು ಅಭಿಪ್ರಾಯ ಮೂಡಿಸುವ ಮೂಲಕ ಚಿತ್ರತಂಡದ ನಿಜವಾದ ಉದ್ದೇಶ ಸಾಕಾರಗೊಂಡಿದೆ. ಇದನ್ನೂ ಓದಿ: ಖ್ಯಾತ ರೂಪದರ್ಶಿ ಕಿಮ್ ಕಾರ್ಡಶಿಯನ್‍ನಂತೆ ಕಾಣಲು 40ಕ್ಕೂ ಹೆಚ್ಚು ಬಾರಿ ಪ್ಲಾಸ್ಟಿಕ್ ಸರ್ಜರಿಗೊಳಗಾದ ಮಾಡೆಲ್

    ಚೇಸ್ ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವನ್ನೊಳಗೊಂಡಿರೋ ಚಿತ್ರ. ಅದೆಲ್ಲವೂ ಈ ಟ್ರೈಲರ್‌ ಮೂಲಕ ಅದು ಮತ್ತಷ್ಟು ಸ್ಪಷ್ಟವಾಗಿದೆ. ಒಂದು ಮರ್ಡರ್ ಮಿಸ್ಟರಿ ಮತ್ತು ಅದರ ಸುತ್ತ ಬಿಚ್ಚಿಕೊಳ್ಳುವ ಚಿತ್ರವಿಚಿತ್ರ ಸನ್ನಿವೇಶಗಳು ಹಾಗೂ ಅತ್ಯಂತ ಚುರುಕಾದ ನಿರೂಪಣೆಯ ಸುಳಿವಿನೊಂದಿಗೆ ಈ ಟ್ರೈಲರ್‌ ಅನ್ನು ಸೆಳೆದುಕೊಂಡಿದೆ. ಬಿಡುಗಡೆಯಾದ ಕೆಲವೇ ಸಮಯದೊಳಗೆ ಈ ಟ್ರೈಲರ್‌ ಫೇಮಸ್ ಆಗಿ ಮುನ್ನುಗ್ಗುತ್ತಿದೆ.

    ಇಡೀ ಚಿತ್ರದ ಆಂತರ್ಯವನ್ನು ಸೀಮಿತ ಅವಧಿಯಲ್ಲಿ ಹಿಡಿದಿಟ್ಟು ಟ್ರೈಲರ್‌ ಮೂಲಕ ಕಟ್ಟಿ ಕೊಡೋದೊಂದು ಕುಸುರಿ ಕೆಲಸ. ಅದರಲ್ಲಿ ನಿರ್ದೇಶಕ ವಿಲೋಕ್ ಶೆಟ್ಟಿ ಗೆಲುವು ದಾಖಲಿಸಿದ್ದಾರೆ. ಇದುವರೆಗೆ ಚೇಸ್ ಬಗ್ಗೆ ಮೂಡಿದ್ದ ಕುತೂಹಲವನ್ನು ಈ ಮೂಲಕ ಮತ್ತಷ್ಟು ತೀವ್ರವಾಗುವಂತೆ ಮಾಡಿದ್ದಾರೆ. ಇದನ್ನೂ ಓದಿ: ದೂರು ನೀಡಿದರೂ ಕಿಚ್ಚ ಸುದೀಪ್ ಕುರಿತಾದ ಅವಹೇಳನ ನಿಲ್ಲಿಸಿಲ್ಲ ‘ಅಹೋರಾತ್ರ’ ಶಿಷ್ಯ ಚರಣ್

    ಹೀಗೆ ಹಬ್ಬಿಕೊಂಡಿರುವ ಸದಭಿಪ್ರಾಯಗಳ ಹಿಂದೆ ನಿರ್ದೇಶಕ ವಿಲೋಕ್ ಶೆಟ್ಟಿ ಮತ್ತವರ ತಂಡದ ವರ್ಷಾಂತರಗಳ ಪರಿಶ್ರಮವಿದೆ. ಅದು ಈ ಟ್ರೈಲರ್‌ಮೂಲಕವೇ ಸಾರ್ಥಕ ಕಂಡಿದೆ. ಯಶಸ್ವಿ ಟ್ರೈಲರ್ ಒಂದು ಯಾವ ಸ್ವರೂಪದಲ್ಲಿ ಸದ್ದು ಮಾಡಬಹುದೋ ಅಂಥಾ ರೀತಿಯಲ್ಲಿಯೇ ಈ ಟ್ರೈಲರ್‌ ಜನಮಾನಸವನ್ನು ಸೆಳೆದುಕೊಂಡಿದೆ. ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ರಾಜೇಶ್ ನಟರಂಗ, ಶೀತಲ್ ಶೆಟ್ಟಿ, ಸುಶಾಂತ್ ಪೂಜಾರಿ ಮುಂತಾದವರ ಪಾತ್ರಗಳೂ ಇದರಲ್ಲಿ ತೆರೆದುಕೊಂಡಿವೆ. ಹೀಗೆ ಮತ್ತಷ್ಟು ಪ್ರೇಕ್ಷಕರನ್ನು ಫಿದಾ ಆಗಿಸಿಕೊಂಡಿರುವ ಚೇಸ್ ಇದೇ 15ರಂದು ತೆರೆ ಕಾಣುತ್ತಿದೆ. ಇದನ್ನೂ ಓದಿ: ಕಾಳಿ ವಿವಾದ: ಆ.6ರಂದು ಹಾಜರಾಗುವಂತೆ ಲೀನಾಗೆ ದೆಹಲಿ ಹೈಕೋರ್ಟ್ ಸಮನ್ಸ್

    ಈ ಚಿತ್ರವನ್ನು ಮನೋಹರ್ ಸುವರ್ಣ ನಿರ್ಮಾಣ ಮಾಡಿದ್ದು, ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಶಿವ್‌ಶೆಟ್ಟಿ ಕಾರ್ಯನಿರ್ವಹಿಸಿದ್ದು, ಅನಂತ್ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶನ, ಶ್ರೀ ಕ್ರೇಜಿಮೈಂಡ್ಸ್ ಸಂಕಲನ, ಅವಿನಾಶ್ ಎಸ್.ದಿವಾಕರ್ ಕಲಾ ನಿರ್ದೇಶನ, ಸುನೀಲ್ ಕಟಾಬು ಉಪ ನಿರ್ದೇಶನ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಶಿ ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನ, ವಿಜಯ ರಾಣಿ ಮತ್ತು ಸುಶಾಂತ್ ಪೂಜಾರಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

    ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಸುಂದರ್, ಸತೀಶ್ ಸಿದ್ಧಾರ್ಥ ಮಾಧ್ಯಮಿಕ, ಪ್ರಿಯಾ ಶಟಮರ್ಶನ್ ಮುಂತಾದವರ ಬೃಹತ್ ತಾರಾಗಣವಿದೆ.

    Live Tv
    [brid partner=56869869 player=32851 video=960834 autoplay=true]

  • ಭೂತಯ್ಯನ ಮಗ ಅಯ್ಯು ನೆನಪು – ಇಂದಿಗೂ ಹಾಗೆಯೇ ಇದೆ ಮನೆ, ಹೋಟೆಲ್

    ಭೂತಯ್ಯನ ಮಗ ಅಯ್ಯು ನೆನಪು – ಇಂದಿಗೂ ಹಾಗೆಯೇ ಇದೆ ಮನೆ, ಹೋಟೆಲ್

    – ಮೆರವಣಿಗೆ ಜಾಗಕ್ಕೆ ಭೂತಯ್ಯನ ಸರ್ಕಲ್ ಹೆಸರು
    – ಕಟ್ಟೆ ಕಟ್ಟಿ ಹೂವಿನ ಗಿಡ ನೆಟ್ಟು ಮರ ರಕ್ಷಣೆ

    ಚಿಕ್ಕಮಗಳೂರು: ಭೂತಯ್ಯನ ಮಗ ಅಯ್ಯು. ಭಾರತೀಯ ಚಿತ್ರರಂಗದ ಜೀವಂತ ದಂತಕಥೆ. 50 ವರ್ಷಗಳಲ್ಲಿ ಸಾವಿರಾರು ಸಿನಿಮಾಗಳು ಬಂದರೂ ಜನಮಾನಸದಲ್ಲಿ ಹಚ್ಚಹಸಿರಾಗಿರೋ ಸಿನಿಮಾ. ಆ ಚಿತ್ರದ ಒಂದೊಂದು ದೃಶ್ಯವೂ ಒಂದೊಂದು ಇತಿಹಾಸ. ದೇವಯ್ಯ ನೇಣು ಹಾಕಿಕೊಂಡಿದ್ದು, ಭೂತಯ್ಯನ ಮೃತನ ದೇಹವನ್ನ ಊರಲ್ಲಿ ಮೆರವಣಿಗೆ ಮಾಡಿದ್ದು, ಎರಡು ರೂಪಾಯಿಯಲ್ಲಿ ನಾಲ್ವರು ಅನ್ನ… ಅನ್ನ…. ಅಂತ ಊಟ ಮಾಡಿದ್ದು. ಎಷ್ಟೇ ಬಾರಿ ನೋಡಿದ್ರು ಮತ್ತೆ ಮತ್ತೆ ನೋಡ್ಬೇಕು ಎನ್ನುವ ದೃಶ್ಯಗಳವು. ಆದ್ರೆ, ದೇವಯ್ಯ ನೇಣು ಹಾಕಿಕೊಂಡ ಮರ, ನಾಲ್ವರು ಊಟ ಮಾಡಿದ ಆ ಮನೆ ಇಂದಿಗೂ ಹಾಗೆಯೇ ಇದೆ.

    ಕಳಸಾಪುರ ಗ್ರಾಮದ ಮಧ್ಯೆ ಇರೋ ಈ ಮರವನ್ನ ಊರಿನ ಯುವಕರು ಮರದ ಸುತ್ತಲೂ ಕಟ್ಟೆ ಕಟ್ಟಿ ಮರದ ಸುತ್ತಲೂ ಹೂವಿನ ಗಿಡ ಹಾಕಿ ರಕ್ಷಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಭೂತಯ್ಯನನ್ನ ಮೆರವಣಿಗೆ ಮಾಡಿದ ಬೀದಿ ಕೂಡ ಹಾಗೆ ಇದ್ದು, ಮನೆಗಳಿಗೆ ಸುಣ್ಣ ಬಣ್ಣ ಬಳಿದಿರುವುದರಿಂದ ಹೊಸತು ಎಂದು ಅನ್ನಿಸಿಕೊಳ್ಳುತ್ತಿದೆ. ಊರಿನ ಜನ ಭೂತಯ್ಯನನ್ನ ಮೆರವಣಿಗೆ ಮಾಡಿದ ಬೀದಿಗೆ ಭೂತಯ್ಯನ ಸರ್ಕಲ್ ಎಂದೇ ಹೆಸರಿಟ್ಟಿದ್ದಾರೆ. ಅಂದು ಚಿಕ್ಕ ಹುಡುಗರಾಗಿದ್ದವರು ವೃದ್ಧರಾಗಿ ಎಲ್ಲಾ ಜಾಗವನ್ನು ನೆನೆದು “ಇದೇ ಆ ಜಾಗ, ಇದೇ ಜಾಗ” ಎಂದು ಚಿತ್ರಕ್ಕಾಗಿ ಸಹಕರಿಸಿದ್ದನ್ನ ನೆನೆಯುತ್ತಿದ್ದಾರೆ. ಇದೇ ಚಿತ್ರದಲ್ಲಿ ವಿಷ್ಣುವರ್ಧನ್ ತಂದೆ ದೇವಯ್ಯನ ಪಾತ್ರಧಾರಿ ನೇಣು ಬಿಗಿದುಕೊಂಡಿದ್ದು ಇದೇ ಮರದಲ್ಲಿ.

    1974 ರಲ್ಲಿ ತೆರೆಕಂಡ ಸಿದ್ದಲಿಂಗಯ್ಯ ನಿರ್ದೇಶನದ ಭೂತಯ್ಯನಮಗ ಅಯ್ಯು ಚಿತ್ರದಲ್ಲಿ ಎರಡು ರೂಪಾಯಿಗೆ ನಾಲ್ವರು “ಅನ್ನ ಅನ್ನ” ಅಂತ ಊಟ ಮಾಡಿದ ಹೋಟೆಲ್ ಈಗಲೂ ಹಾಗೆಯೇ ಇದೆ. ಮನೆ ಚಿತ್ರಕ್ಕಾಗಿ ಹೋಟೆಲ್ ಮಾಡಿಕೊಂಡಿದ್ದರು. ಹೊಟೇಲ್ ಮಾಲೀಕನೊಂದಿಗೆ ನಟ ದಿನೇಶ್ ಹಾಗೂ ಸಹಚರರು ಕೂರುವುದಕ್ಕೂ ದುಡ್ ಕೊಡ್ಬೇಕಾ ಸ್ವಾಮಿ ಅಂದಿದ್ದು ಇದೇ ಜಾಗದಲ್ಲಿ. ಇಂದಿಗೂ ಆ ದೃಶ್ಯ ಕಂಡು ಜನ ಹುಸಿ ನಗ್ತಾರೆ. ಲೋಕನಾಥ್ ಉಪ್ಪಿನಕಾಯಿ ಜಾಡಿ ಕದಿಯುತ್ತಿದ್ದದ್ದು ಮನೆ, ವಿಷ್ಣುವರ್ಧನ್ ಮಚ್ಚನ್ನ ಮಸೆದ ಜಾಗ ಸೇರಿ ಚಿತ್ರದ ಒಂದೊಂದು ದೃಶ್ಯದ ಜಾಗ ಕಂಡು ಸಿನಿಮಾವನ್ನ ನೆನೆಯುತ್ತಿದ್ದಾರೆ.

    ಹತ್ತಾರು ಕೋಟಿ ಬಂಡವಾಳ ಹೂಡಿ ತೆಗೆದ ಸಿನಿಮಾಗಳು ನೂರು ದಿನ ಓಡುವಷ್ಟರಲ್ಲಿ ಮಕಾಡೆ ಮಲಗಿರುತ್ತದೆ. ಸಾಲದಕ್ಕೆ ಸಿನಿಮಾದ ಗೆಲುವಿಗಾಗಿ ಚಿತ್ರತಂಡ ಐಟಂ ಸಾಂಗ್, ಅದು-ಇದು ಅಂತೆಲ್ಲಾ ಸರ್ಕಸ್ ಮಾಡಿರುತ್ತದೆ. ಆದರೆ ಅಪ್ಪಟ ಹಳ್ಳಿ ಸೊಗಡಿನ ಈ ಚಿತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. 45 ವರ್ಷವಾದ್ರು ಈ ಚಿತ್ರದ ಒಂದೊಂದು ದೃಶ್ಯ ಕೂಡ ಗ್ರಾಮಸ್ಥರಿಗೆ ಕಣ್ಣಿಗೆ ಕಟ್ಟಿದಂತಿದೆ.