Tag: ಕನ್ನಡ ಅಭಿವೃದ್ಧಿ ಪ್ರಾಧಿಕಾರ

  • ಅನ್ಯ ಭಾಷಿಕರಿಗೆ ಬಿಬಿಎಂಪಿ, ಕನ್ನಡ ಪ್ರಾಧಿಕಾರದಿಂದ ಕನ್ನಡ ಕಲಿಸಲು ನಿರ್ಧಾರ

    ಅನ್ಯ ಭಾಷಿಕರಿಗೆ ಬಿಬಿಎಂಪಿ, ಕನ್ನಡ ಪ್ರಾಧಿಕಾರದಿಂದ ಕನ್ನಡ ಕಲಿಸಲು ನಿರ್ಧಾರ

    ಬೆಂಗಳೂರು: ನಮ್ಮ ಬೆಂಗಳೂರಿನಲ್ಲಿ (Bengaluru) ಕನ್ನಡಿಗರಿಗಿಂತ ಅನ್ಯ ಭಾಷೆ ಮಾತನಾಡುವವರೇ ಹೆಚ್ಚು. ಭಾಷೆಯ ವಿಚಾರವಾಗಿ ಆಗಾಗ ಗಲಾಟೆಗಳು ಆಗುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ (Kannada Development Authority) ಕ್ರಮವೊಂದನ್ನು ಕೈಗೊಂಡಿದೆ.

    ರಾಜಧಾನಿ ಬೆಂಗಳೂರಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆ. ಅನ್ಯ ಭಾಷಿಕರೇ ತುಂಬಿರುವ ಬೆಂಗಳೂರಿನಲ್ಲಿ ಕನ್ನಡವನ್ನ ಉಳಿಸುವ, ಬೆಳೆಸುವ ಪ್ರಯತ್ನಕ್ಕೆ ಬಿಬಿಎಂಪಿ ಹಾಗೂ ಕನ್ನಡ ಪ್ರಾಧಿಕಾರ ಮುಂದಾಗಿದೆ. ನಗರದಲ್ಲಿರುವ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಮಹತ್ವದ ತೀರ್ಮಾನವನ್ನು ಪಾಲಿಕೆ ಮತ್ತು ಕನ್ನಡ ಪ್ರಾಧಿಕಾರ ತೆಗೆದುಕೊಂಡಿದೆ. ಇದನ್ನೂ ಓದಿ: HAL ವಿಮಾನ ನಿಲ್ದಾಣವನ್ನು ಆದಷ್ಟು ಬೇಗ ತೆರೆಯಬೇಕು: ತೇಜಸ್ವಿ ಸೂರ್ಯ

    ವಾರಕ್ಕೆ ಮೂರು ದಿನ ಒಂದೊಂದು ಗಂಟೆಯಂತೆ, ತಿಂಗಳಿಗೆ 36 ಘಂಟೆಗಳಲ್ಲಿ ಕನ್ನಡವನ್ನು ಕಲಿಸಿ ಕೊಡುವ ಬಗ್ಗೆ ಚಿಂತನೆ ನಡೆದಿದೆ. ಇದಕ್ಕಾಗಿ ಪಾಲಿಕೆಯ ಜೊತೆಯೂ ಕನ್ನಡ ಪ್ರಾಧಿಕಾರ ಮಾತುಕತೆ ನಡೆಸಿದೆ.

    ಪ್ರತಿನಿತ್ಯ ಬಳಸುವ ಕನ್ನಡ ಪದಗಳು, ವಾಕ್ಯಗಳನ್ನು ಸರಳವಾಗಿ ಹೇಳಿಕೊಡಲಾಗುತ್ತದೆ. ಕನ್ನಡ ಕಲಿಸಲು 75 ಶಿಕ್ಷಕರನ್ನ ಹೊರಗುತ್ತಿಗೆ ಆಧಾರದಲ್ಲಿ ಪಾಲಿಕೆ ನೇಮಕ ಮಾಡಿಕೊಳ್ಳಲಿದೆ. ಕನ್ನಡ ಪ್ರಾಧಿಕಾರದಿಂದಲೂ ಖಾಸಗಿ ಕಂಪನಿ, ಇತರೆ ಜಾಗಗಳಲ್ಲಿ ಕೆಲಸ ಮಾಡುವವರಿಗೆ ಕನ್ನಡ ಕಲಿಸುವ ಕೆಲಸವನ್ನು ಮಾಡಲಾಗುತ್ತದೆ. ಆಯಾ ಕಚೇರಿ, ಕಂಪನಿಗಳಲ್ಲಿ 30 ಜನರ ತಂಡ ಕನ್ನಡವನ್ನು ಕಲಿಯುತ್ತೇವೆ ಎಂದು ಪಾಲಿಕೆ, ಪ್ರಾಧಿಕಾರಕ್ಕೆ ತಿಳಿಸಿದರೆ ಆ ಜಾಗಕ್ಕೂ ಹೋಗಿ ಶಿಕ್ಷಕರು ಹೇಳಿಕೊಡುತ್ತಾರೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಅಂಕುಶ – ಸಂಜೆ 5 ಗಂಟೆಯ ನಂತರ ವಸೂಲಿ ಮಾಡುವಂತಿಲ್ಲ

    ಬಿಬಿಎಂಪಿಯ ಎಂಟು ವಲಯಗಳಲ್ಲಿ, ಅನ್ಯ ಭಾಷಿಕರಿಗೆ ಕನ್ನಡ ಕಲಿಸಿಕೊಡಲು, ಕನ್ನಡ ಘಟಕಗಳನ್ನ ರಚಿಸುವಂತೆ ಪಾಲಿಕೆಗೆ ಕನ್ನಡ ಪ್ರಾಧಿಕಾರ ಮನವಿ ಮಾಡಿದೆ. ಕನ್ನಡ ಕಲಿಕೆಗೆ ಪ್ರತ್ಯೇಕ ಪಠ್ಯವನ್ನೂ ತಯಾರು ಮಾಡಿದೆ. ಇದಕ್ಕೆ ಸಮ್ಮತಿ ಸೂಚಿಸಿರುವ ಬಿಬಿಎಂಪಿ, ಈ ಕುರಿತು ತನ್ನ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸುವ ನಿರ್ಧಾರಕ್ಕೆ ಬಂದಿದೆ.

  • ಇನ್ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆ ಕಡ್ಡಾಯ

    ಇನ್ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆ ಕಡ್ಡಾಯ

    ಬೆಂಗಳೂರು: ಇನ್ಮುಂದೆ ರಾಜ್ಯದಲ್ಲಿ ನಡೆಯುವ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳಲ್ಲೂ ಕನ್ನಡ ಕಡ್ಡಾಯ ಬಳಕೆಗೆ ಸೂಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಕೇಂದ್ರ ಸರ್ಕಾರ ಪ್ರಾಯೋಜಕತ್ವದ ಕಾರ್ಯಕ್ರಮಗಳಲ್ಲಿ ಕನ್ನಡ ಮಾಯವಾಗುತ್ತಿದೆ ಎನ್ನುವ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವಂತೆ ಸರ್ಕಾರದಿಂದ ಇಂದು ಸುತ್ತೋಲೆ ಪ್ರಕಟಿಸಿದೆ. ಇದನ್ನೂ ಓದಿ: ಬೊಮ್ಮಾಯಿ ಕಾಂಗ್ರೆಸ್ ದೂಷಿಸಿ ಮೋದಿ ಶಿಷ್ಯರೆನಿಸಿಕೊಳ್ಳಲು ಹೊರಟಿದ್ದಾರೆ – ಕಾಂಗ್ರೆಸ್ ಟೀಕೆ

    ಸುತ್ತೋಲೆಯಲ್ಲಿ ಏನಿದೆ?
    ಕನ್ನಡವನ್ನು ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಿ ಇರತಕ್ಕದ್ದೆಂದು ಕರ್ನಾಟಕ ರಾಜ್ಯ ಭಾಷಾ ಅಧಿನಿಯಮ- 1953ರಲ್ಲಿ ಸ್ಪಷ್ಟಪಡಿಸಲಾಗಿದೆ. ಕರ್ನಾಟಕದಲ್ಲಿ ಕನ್ನಡವು ಆಡಳಿತ ಭಾಷೆಯ ಜೊತೆಗೆ ಸಾರ್ವಭೌಮ ಭಾಷೆಯಾಗಿದೆ. ಕನ್ನಡವನ್ನು ರಾಜ್ಯದಲ್ಲಿ ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸುವ ಸಂಬಂಧ ಕನ್ನಡ ಭಾಷೆ ಮತ್ತು ಕನ್ನಡಿಗರ ಹಿತಾಸಕ್ತಿಯನ್ನು ಕಾನೂನಿನನ್ವಯ ಸಂರಕ್ಷಿಸುವ ಸಲುವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿರುತ್ತದೆ.

    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಪತ್ರದಲ್ಲಿ ಆಗಸ್ಟ್ 6ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆ ಬಳಸದಿರುವ ಬಗ್ಗೆ ಪ್ರಸ್ತಾಪಿಸಿದ್ದರು. ಜೊತೆಗೆ ವೇದಿಕೆ ಮೇಲೆ ಅಳವಡಿಸಲಾಗುವ ಪರದೆ, ಫಲಕಗಳು ಸೇರಿದಂತೆ ಒಟ್ಟಾರೆ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಸರ್ಕಾರದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಕೋರಿದ್ದರು. ಇದನ್ನೂ ಓದಿ: ಕೊನೆಗೂ ಫಿಕ್ಸ್ ಆಯ್ತು ಕೆ.ಎಲ್ ರಾಹುಲ್- ಅಥಿಯಾ ಶೆಟ್ಟಿ ಮದುವೆ ದಿನಾಂಕ

    ಕನ್ನಡ ಭಾಷೆ ನಮಗೆ ಆದ್ಯತೆ ಆಗಬೇಕೇ ಹೊರತು ಆಯ್ಕೆಯಾಗಬಾರದು. ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಪ್ರಸ್ತಾವನೆಯ ಅನ್ವಯ, ಇನ್ನು ಮುಂದೆ ರಾಜ್ಯದಲ್ಲಿ ಜರುಗುವ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಆಯೋಜನೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸತಕ್ಕದ್ದೆಂದು ಈ ಮೂಲಕ ಸೂಚಿಸಿದೆ ಎಂದು ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಭಾಷೆ, ಸಂಸ್ಕೃತಿಯಿಂದಲೇ ಸಮುದಾಯಗಳು ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದು: ಟಿ.ಎಸ್.ನಾಗಾಭರಣ

    ಭಾಷೆ, ಸಂಸ್ಕೃತಿಯಿಂದಲೇ ಸಮುದಾಯಗಳು ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದು: ಟಿ.ಎಸ್.ನಾಗಾಭರಣ

    ಬೆಂಗಳೂರು: ಭಾಷೆ ಮತ್ತು ಸಂಸ್ಕೃತಿಯಿಂದಲೇ ಸಮುದಾಯಗಳು ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಹೇಳಿದ್ದಾರೆ.

    ನಾಯರಿ ಜನಾಂಗೀಯ ಅಧ್ಯಯನ ಮತ್ತು ಸಂಶೊಧನಾ ಪ್ರತಿಷ್ಠಾನದ ಕಾರ್ಯಗಳಿಗೆ ಸೆ.9 ಗುರುವಾರದಂದು ಟಿ.ಎಸ್.ನಾಗಾಭರಣ ಚಾಲನೆ ನೀಡಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಂದಾಗನ್ನಡದ ಮೂಲ ಪರಿಕಲ್ಪನೆಯ ಅಧ್ಯಯನದಲ್ಲಿ ನಾಯರಿ ಜನಾಂಗ ಬಹುಮುಖ್ಯವಾಗಲಿದೆ. ಕುಂದಾಗನ್ನಡದ ಮೂಲ ಸ್ವರೂಪದ ಅಂಶಗಳು ದೊರಕುವುದು ನಾಯರಿ ಜನಾಂಗ ಬಳಸುವ ಭಾಷೆಯಿಂದ ಎಂದರು.  ಇದನ್ನೂ ಓದಿ: ಫುಲ್ ಒಳ್ಳೆ ಹುಡುಗನ ರೀತಿ ಡವ್ ಎಂದ ಬ್ರೊ ಗೌಡ

    ಭಾಷೆ ಮತ್ತು ಸಂಸ್ಕೃತಿಯಿಂದಲೇ ಸಮುದಾಯಗಳೆಲ್ಲ ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದು. ಹೀಗೆ ನಾಯರಿ ಜನಾಂಗದ ಅಸ್ಮಿತೆ ಕುಂದಾಗನ್ನಡದ ಮೂಲ ಭಾಷೆಯಾಗಿದೆ. ಈ ಬಗ್ಗೆ ಸಂಶೋಧನೆಗಳು ನಡೆಯಬೇಕು. ಕುಂದಾಗನ್ನಡದ ಮೂಲ ಅಸ್ಮಿತೆಯ ಸಂಶೋಧನಾ ಕಾರ್ಯಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪೂರಕವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು. ವಿನಾಶದ ಅಂಚಿನಲ್ಲಿರುವ ನಾಯರಿ ಜನಾಂಗದ ಅಸ್ಮಿತೆಯನ್ನು ರಕ್ಷಿಸುವಂತೆ ಕೋರಿ ಮನವಿ ಮಾಡಿದರು. ಇದನ್ನೂ ಓದಿ: ನಿಫಾ ತಡೆಯಲು ಮುನ್ನೆಚ್ಚೆರಿಕೆ ವಹಿಸೋಣ, ಸೋಂಕು ತಡೆಯೋಣ ನಾಣ್ಣುಡಿಯೊಂದಿದೆ ಗಡಿಯಲ್ಲಿ ಜಾಗೃತಿ

    ಈ ಸಂದರ್ಭದಲ್ಲಿ ಮಾತನಾಡಿದ ನಾಯರಿ ಜನಾಂಗೀಯ ಅಧ್ಯಯನ ಮತ್ತು ಸಂಶೋಧನಾ ಪ್ರತಿಷ್ಠಾನದ ಸಲಹಾ ನಿರ್ದೇಶಕರಾದ ಗೋಪಾಲಕೃಷ್ಣ ನಾಯರಿ, ಉಡುಪಿ ಜಿಲ್ಲೆಯ ಕುಂದಗನ್ನಡದ ಸಂಸ್ಕøತಿಯಷ್ಟೇ ಮೂಲದ ಮಿತಿಯಿಂದ ಏಕೈಕ ಬುಡಕಟ್ಟಿನ ನಾವು ನಾಯರಿ ಜನಾಂಗದವರಾಗಿದ್ದು, ಸಾಂಖ್ಯಿಕವಾಗಿ ರಾಜ್ಯದಲ್ಲೇ ಸರಿಸುಮಾರು ಮೂರರಿಂದ ನಾಲ್ಕು ಸಾವಿರದ ಗಡಿಯನ್ನು ದಾಟದವರು. ಮೂಲತಃ ಕುಂದಗನ್ನಡದ ಮಾತೃಭಾಷಿಕರಾದ ನಮ್ಮನ್ನು ಮುಖ್ಯ ವಾಹಿನಿಗಳು ಸಾಮಾನ್ಯವಾಗಿ ಕೇರಳದ ನಾಯರ್‍ಗಳು ಎಂದು ಗ್ರಹಿಸಿಕೊಂಡು ಬಂದಿರುವುದು ವಿಷಾದದ ಸಂಗತಿ ಎಂದರು.

    ಉಡುಪಿಯ ಹತ್ತಾರು ಕಡೆಗಳಲ್ಲಿ ನಾಯರಿಕೆರೆ, ನಾಯರಿಬೆಟ್ಟು, ನಾಯರಿಹಾಡಿ, ನಾಯರಿಅಡಿ, ನಾಯರಿಮಠ, ನಾಯರಿಕೇರಿ ಮುಂತಾದ ಪ್ರದೇಶ ಸೂಚಿಗಳಿದ್ದು, ಬಹುತೇಕ ಕೇರಳದ ನಾಯರ್‍ಗಳೊಂದಿಗೆ ವಿಕೃತಿ ಸ್ವರೂಪವನ್ನು ಪಡೆದಿರುವುದು ಶೋಚನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ:  ರಾಜ್ಯದ ಏಕೈಕ ಸ್ವರ್ಣ ಗೌರಿ ದೇವಾಲಯದಲ್ಲಿಲ್ಲ ಪೂಜೆ, ಪುನಸ್ಕಾರ

    ಏನಿದು ನಾಯರಿ?

    12ನೇ ಶತಮಾನದ ನನ್ನಿದೇವನು ಉಡುಪಿಯ ನಾಯರಿ ಎಂಬ ಬಂಟನೊಂದಿಗೆ ಕಠ್ಮಂಡುವಿನಲ್ಲಿ ಸಾಮ್ರಾಜ್ಯ ಸ್ಥಾಪನೆ ಮಾಡಿ ಪಶುಪತಿ ದೇವಸ್ಥಾನದ ಪ್ರಸಿದ್ಧಿಗೆ ಕಾರಣಕರ್ತನಾಗಿರುವುದನ್ನು ಶಾಸನಗಳ ಸಾಕ್ಷ್ಯಗಳೊಂದಿಗೆ ಹಿರಿಯ ಸಂಶೋಧಕ ಡಾ.ಚಿದಾನಂದಮೂರ್ತಿ ಅವರು ಪ್ರಸ್ತಾಪಿಸಿರುತ್ತಾರೆ ಎಂದು ಮಾಹಿತಿ ನೀಡಿದರು.

    ನಮ್ಮ ಜನಾಂಗದ ಬಗ್ಗೆ ವಸಾಹತು ಭಾರತದಲ್ಲಿ ಸೌತ್ ಕೆನರಾ ಡಿಸ್ಟ್ರಿಕ್ಟ್ ನ ಗೆಜೆಟಿಯರ್ ಪ್ರಕಾರ ನಾ-ಯಿರಿ ಎಂದರೆ ಭೂಮಿಯನ್ನು ಉಳುವವನು ಎಂಬರ್ಥ ಇರುವುದಾಗಿ ನಮೂದಿಸಿದೆ. ಭೂಮಿಕಾಣಿಕೆಯ ವಿಷಯದಲ್ಲೂ ನಾಯರಿ ಮೂಲ ಮತ್ತು ದೇವ ಮೂಲವೇ ಪ್ರಧಾನವಾಗಿ ಇರುವುದನ್ನು ಕಾಣುತ್ತೆ. ನಾವು ನಾಯಿರಿಗಳು ಕುಂದಗನ್ನಡದ ಮೂಲ ಅಥವಾ ಆದಿವಾಸಿಗಳೆಂಬುದರಲ್ಲಿ ಸಂಶಯವಿಲ್ಲ. ಕನ್ನಡದ ಕಡಲತೀರದ ಭಾರ್ಗವ ಶಿವರಾಮಕಾರಂತ ಹಾಗೂ ಅವರ ಸಹೋದರ ಕೋ.ಲ.ಕಾರಂತರು ಕೂಡ ಹಲವು ಬಾರಿ ನಮ್ಮನ್ನು ಕನ್ನಡದ್ದೇ ಆದ ವಿಶಿಷ್ಟ ಜನಾಂಗ ಎಂದು ಕರೆದಿರುವುದು ಮತ್ತು ಗುರುತಿಸಿರುವುದನ್ನು ಅಲ್ಲಗಳೆಯುವಂತಿಲ್ಲ ಎಂದರು. ಇದನ್ನೂ ಓದಿ: ಸಿಲಿಂಡರ್ ಸ್ಫೋಟ- ಮೊಮ್ಮಗಳ ಸಮಯ ಪ್ರಜ್ಞೆಯಿಂದ ಉಳೀತು ಅಜ್ಜಿ ಜೀವ

    ಕನ್ನಡಿಗರಾಗಿದ್ದರೂ ಪರಭಾಷಿಕರು!

    ಮೂಲತಃ ಕುಂದಗನ್ನಡದ ನಾಡಾಡಿಗಳೇ ಆದ ನಾವು, ಕೇವಲ ನಮ್ಮ ಜನಾಂಗೀಯ ಹೆಸರಿನ ಸಾಮ್ಯತೆಯು ಕೇರಳದ ನಾಡಿಗಂಟಿದೆ. ಈ ಕಾರಣ ನಾವುಗಳು ಕರ್ನಾಟಕದಲ್ಲಿದ್ದು, ನೂರಕ್ಕೆ ನೂರರಷ್ಟು ಕನ್ನಡಿಗರಾಗಿದ್ದರೂ ಪರಭಾಷಿಕರಾಗಿ ಗುರುತಿಸಲ್ಪಡುತ್ತಿರುವುದು ವಿಷಾದದ ಸಂಗತಿ. ನಮ್ಮದು ಮಾತೃ ಪ್ರಧಾನ ಕುಟುಂಬದ ಸಂಸ್ಕøತಿಯಾಗಿದ್ದು, ಸೋದರಿಕೆಯ ಅಳಿ ಸಂತನ. ಬಂಟರಲ್ಲಿರುವ ಅಳಿ ಸಂತನದ ಪರಿಕಲ್ಪನೆಗೂ ನಾಯರಿ ಸಮುದಾಯದಲ್ಲಿರುವ ಸೋದರಿಕೆಯ ಅಳಿ ಸಂತನಕ್ಕೆ ವ್ಯತ್ಯಾಸವಿದೆ ಎಂದು ತಿಳಿಸಿದರು.

    ವಿನಾಶದ ಅಂಚಿಗೆ ಸರಿದಿರುವ ನಮ್ಮನ್ನು ನಾಡಾಡಿ ಕನ್ನಡಿಗರನ್ನಾಗಿ ಉಳಿಸಿಕೊಡಲು ಯೋಜಿಸಿ ಅನುಷ್ಠಾನಕ್ಕೆ ತಂದು ಕನ್ನಡದ್ದೇ ಆದ ವಿಶಿಷ್ಟ ಅಸ್ಮಿತೆಯನ್ನು ನಮ್ಮೊಂದಿಗೆ ಕಾಪಾಡಿಕೊಡಬೇಕೆಂದು ಮನವಿ ಮಾಡಿದರು. ಇದನ್ನೂ ಓದಿ: ಊಸರವಳ್ಳಿಯಂತೆ ಬಣ್ಣ ಬದಲಾಗುವ ಚರ್ಮ ಮನುಷ್ಯನಿಗೂ ಬಂತು

    ಕನ್ನಡಪರ ಚಿಂತಕರಾದ ರಾ.ನಂ.ಚಂದ್ರಶೇಖರ್, ನಾಯರಿ ಜನಾಂಗೀಯ ಅಧ್ಯಯನ ಮತ್ತು ಸಂಶೋಧನಾ ಪ್ರತಿಷ್ಠಾನದ ಉಪಾಧ್ಯಕ್ಷರಾದ ಕೆ.ಶಂಕರ್, ವಿ.ಸೂರ್ಯಕಲಾ, ಸಹ ಕಾರ್ಯದರ್ಶಿಗಳಾದ ಕೆ.ಎಂ.ರಾಮಚಂದ್ರ ನಾಯರಿ, ಸಂಪಾದನ-ದಾಖಲಾ ಮಂಡಳಿಯ ವೆಂಕಟೇಶ್ ಜಿ.ನಾಯರಿ ಅವರು ಈ ವೇಳೆ ಹಾಜರಿದ್ದರು.

  • ಮೆಟ್ರೋ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ- ಶಿಸ್ತು ಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹ

    ಮೆಟ್ರೋ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ- ಶಿಸ್ತು ಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹ

    ಬೆಂಗಳೂರು: ಕೆಂಗೇರಿ ಮಾರ್ಗದ ಮೆಟ್ರೋ ವಿಸ್ತರಿತ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ಭಾರೀ ವಿರೋಧಕ್ಕೆ ಕಾರಣವಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಸರ್ಕಾರಕ್ಕೆ ಪತ್ರ ಬರೆದು ನಿಯಮ ಉಲ್ಲಂಘಿಸಿ ಕನ್ನಡ ಕಡೆಗಣನೆಗೆ ಕಾರಣರಾದ ಅಧಿಕಾರಿ ನೌಕರರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಮೆಟ್ರೋ ವತಿಯಿಂದ ಈ ಬಗ್ಗೆ ಕ್ಷಮೆ ಕೇಳಿದ್ದು, ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ ಎಲ್ಲಾ ಫಲಕಗಳು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿಯೇ ಇದ್ದು, ಮುಖ್ಯ ವೇದಿಕೆಯ ಫಲಕವು ಮಾತ್ರ ಆಂಗ್ಲ ಭಾಷೆಯಲ್ಲಿ ಇದ್ದುದರಿಂದ ಹಲವಾರು ಆಕ್ಷೇಪಣೆಗಳು ಮಾಧ್ಯಮ ಮತ್ತು ಇತರೆ ಸಾಮಾಜಿಕ ಜಾಲಗಳಲ್ಲಿ ಬಂದಿರುತ್ತವೆ. ಈ ತಪ್ಪು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಇದರ ಸಂಪೂರ್ಣ ಹೊಣೆ ನನ್ನದೆ ಎಂದು, ಆಗಿರುವ ತಪ್ಪಿಗೆ ವಿಷಾದಿಸುತ್ತಾ, ಇನ್ನು ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ಕ್ರಮ ವಹಿಸುತ್ತೇನೆ ಮತ್ತು ಈ ತಪ್ಪನ್ನು ಮನ್ನಿಸಬೇಕೆಂದು ಈ ಮೂಲಕ ಕೋರಲಾಗಿದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.

    ಟಿ.ಎಸ್ ನಾಗಾಭರಣ ಅವರು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ ಪತ್ರ ಬರೆದು, ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಬರುವ ಎಲ್ಲಾ ಸರ್ಕಾರಿ, ಸರ್ಕಾರೇತರ, ಖಾಸಗಿ ಸಂಸ್ಥೆಗಳು ತಮ್ಮ ಆಡಳಿತದಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನ ಮಾಡಬೇಕೆಂದು ಈಗಾಗಲೇ ಸಾಕಷ್ಟು ಆಜ್ಞೆ, ಆದೇಶ, ಸೂತ್ತೋಲೆಗಳು ಬಂದಿದ್ದರೂ ಪದೇ ಪದೇ ಕನ್ನಡ ಭಾಷೆಯ ಕಡೆಗಣನೆ ಅಖಂಡ ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡುತ್ತಿದೆ. ಈಗ ನಮ್ಮ ಹೆಮ್ಮೆಯ ಸಾರಿಗೆ ಸಂಸ್ಥೆಗಳಲ್ಲೊಂದಾದ ಮೆಟ್ರೋ ಸಂಸ್ಥೆ ತಮ್ಮ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ಮಾಡಿದೆ. ಇದನ್ನೂ ಓದಿ: ಸೆ. 6ರಿಂದ 6 ರಿಂದ 8ನೇ ತರಗತಿ ಶಾಲೆ ಆರಂಭ – ದಕ್ಷಿಣ ಕನ್ನಡ, ಕೊಡಗಿನಲ್ಲಿ ನಿರ್ಬಂಧ ಮುಂದುವರಿಕೆ

    ದಿನಾಂಕ 29-08-2021ರಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸಂಸ್ಥೆಯ ವತಿಯಿಂದ ನಡೆದ ಕಾರ್ಯಕ್ರಮದ ವೇದಿಕೆಯ ಪರದೆ (ಬ್ಯಾನರ್)ಯ ಮೇಲೆ ಆಡಳಿತ ಭಾಷೆಯಾದ ಕನ್ನಡವನ್ನು ಕಡೆಗಣಿಸಿ ಕೇವಲ ಆಂಗ್ಲ ಭಾಷೆಯನ್ನು ಹಾಕಿರುವ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಾಕಷ್ಟು ಮೌಖಿಕ ಹಾಗೂ ಲಿಖಿತ ದೂರುಗಳು ಸಲ್ಲಿಕೆಯಾಗಿವೆ. ಅಲ್ಲದೇ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಗುರಿಯಾಗಿಸಿಕೊಂಡು ಟೀಕೆ ಟಿಪ್ಪಣಿಗಳನ್ನು ಮಾಡಿರುವುದು ತಾವು ಕೂಡ ಗಮನಿಸಿರಲು ಸಾಧ್ಯವಿದೆ. ಆಡಳಿತದಲ್ಲಿ ಕನ್ನಡವನ್ನು ಬಳಸುವಂತೆ ಈ ಹಿಂದೆ ನಡೆದ 2-3 ಪರಿಶೀಲನಾ ಸಭೆಗಳಲ್ಲಿ ತಮಗೆ ಸೂಚಿಸಲಾಗಿತ್ತು. ಮೇಲಾಗಿ ದಿನಾಂಕ 23, 24 ಮತ್ತು 25ರಂದು ಪ್ರಾಧಿಕಾರದಿಂದ ನಡೆದ ಸಾರಿಗೆ ವಲಯದಲ್ಲಿ ಕನ್ನಡ ಅನುಷ್ಠಾನದ ಅಭಿಯಾನದ ನಿಮಿತ್ತ ತಮ್ಮನ್ನು ಖುದ್ದು ಭೇಟಿ ಮಾಡಿ ಆಡಳಿತದಲ್ಲಿ ಶೇ.100ಕ್ಕೆ 100ರಷ್ಟು ಕನ್ನಡವನ್ನು ಬಳಸುವಂತೆ ಕೋರಲಾಗಿತ್ತು. ಆದಾಗ್ಯೂ ಕೂಡ ನಿಗಮದ ವರ್ತನೆ ಅಖಂಡ ಕನ್ನಡಿಗರ ಮನಸ್ಸಿಗೆ ನೋವುಂಟುಮಾಡಿದೆ. ಇದನ್ನೂ ಓದಿ: 2023ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವುದೇ ನಮ್ಮ ಗುರಿ: ಅರುಣ್ ಸಿಂಗ್

    ಇದು ಮೇಲ್ಕಾಣಿಸಿದ ರಾಜ್ಯ ಸರ್ಕಾರದ ಆಡಳಿತ ಕನ್ನಡಪರ ಆಜ್ಞೆ-ಆದೇಶಗಳ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿ/ನೌಕರರ ಮೇಲೆ ಸುತ್ತೋಲೆ ಸಂಖ್ಯೆ:ಸಂಕಇ 39ಕೆಒಎಲ್ 2002, ದಿನಾಂಕ:13-06-2002ರನ್ವಯ ಶಿಸ್ತುಕ್ರಮವನ್ನು ಜಾರಿಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾನ್ಯ ಅಧ್ಯಕ್ಷರಾದ ಟಿ.ಎಸ್. ನಾಗಾಭರಣರು ಮೆಟ್ರೋ ರೈಲ್ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಶಿಸ್ತುಕ್ರಮಕ್ಕೆ ಪತ್ರ ಬರೆಯುವ ಮೂಲಕ ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಪತ್ರ ಬರೆದಿದ್ದಾರೆ.

  • ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸಾರಿಗೆ ವಲಯದಲ್ಲಿ ಕನ್ನಡ ಬಳಕೆ ಜಾಗೃತಿ ಅಭಿಯಾನ

    ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸಾರಿಗೆ ವಲಯದಲ್ಲಿ ಕನ್ನಡ ಬಳಕೆ ಜಾಗೃತಿ ಅಭಿಯಾನ

    ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸಾರಿಗೆ ವಲಯದಲ್ಲಿ ಕನ್ನಡ ಬಳಕೆ ಜಾಗೃತಿ ಅಭಿಯಾನಕ್ಕೆ ಶಾಂತಿನಗರದಲ್ಲಿರುವ ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕರ ಕಚೇರಿಯಲ್ಲಿ ಇಂದು ಚಾಲನೆ ನೀಡಲಾಯಿತು.

    ಶಾಂತಿನಗರದಲ್ಲಿರುವ ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕರ ಕಚೇರಿಯಲ್ಲಿ ಚಾಲನೆ ನೀಡಿದ ಬಳಿಕ ಬೈಯಪ್ಪನಹಳ್ಳಿಯಲ್ಲಿರುವ ಮೆಟ್ರೋ ಆಡಳಿತ ಕಚೇರಿಗೂ ಭೇಟಿ ನೀಡಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮೆಟ್ರೋ ಸಂಸ್ಥೆಯಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಗಬೇಕಾದ ಕಾರ್ಯಗಳು ಹಾಗೂ ಹಕ್ಕೋತ್ತಾಯ ಪತ್ರಗಳನ್ನು ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಬೈಯಪ್ಪನಹಳ್ಳಿಯಲ್ಲಿರುವ ಮೆಟ್ರೋ ಆಡಳಿತ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸಲ್ಲಿಸಲಾಯಿತು. ಇದನ್ನೂ ಓದಿ: ಕನ್ನಡ ಭಾಷಾ ಕಲಿಕೆ ಪರಿಣಾಮಕಾರಿ ಅನುಷ್ಠಾನವಾಗಲಿ – ಶಿಕ್ಷಣ ಸಚಿವರಿಗೆ ಮನವಿ

    ಮೆಟ್ರೋ ನಿಲ್ದಾಣಗಳಲ್ಲಿ ಕನ್ನಡ ಪುಸ್ತಕ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡುವುದು. ಸಾರ್ವಜನಿಕ ದೂರುಗಳು, ಸಲಹೆಗಳ ನಮೂನೆಗಳು ಮತ್ತು ಅರ್ಜಿಗಳು ಕನ್ನಡದಲ್ಲಿರಬೇಕು. ನಿಲ್ದಾಣಗಳಲ್ಲಿ ಮತ್ತು ಕಚೇರಿಗಳಲ್ಲಿ ನಿರ್ವಹಣೆ ಮಾಡುವ ದಾಖಲಾತಿ ಪುಸ್ತಕಗಳನ್ನು ಕನ್ನಡದಲ್ಲಿ ನಿರ್ವಹಣೆ ಮಾಡುವುದು. ಸಂಸ್ಥೆ ನೀಡುವ ಗುರುತಿನ ಚೀಟಿಯಲ್ಲಿ ಕನ್ನಡ ಭಾಷೆ ಬಳಸುವುದು. ಮಾನವ ಸಂಪನ್ಮೂಲ ಕೇಂದ್ರ ಕಚೇರಿಯ ಉದ್ಯೋಗಕ್ಕೆ ಸಂಬಂಧಿಸಿದ ಕಚೇರಿ ಆದೇಶಗಳಲ್ಲಿ ಕನ್ನಡ ಬಳಕೆ ಮಾಡುವುದು. ಮೆಟ್ರೋ ರೈಲುಗಳಲ್ಲಿ ಪ್ರದರ್ಶನಗೊಳ್ಳುವ 31 ಜಿಲ್ಲೆಗಳ ವಿಶೇಷತೆ, ಪ್ರಸಿದ್ಧ ಸ್ಥಳಗಳ ಮಾಹಿತಿ ನಿಲ್ದಾಣಗಳಲ್ಲಿಯೂ ಇರಬೇಕು. ಅಗ್ನಿ ಅವಘಡ ಸೇರಿದಂತೆ ಇತರೆ ತುರ್ತು ಸಂದರ್ಭಗಳ ಬಗ್ಗೆ ಮಾಹಿತಿ ನೀಡುವ ನಾಮಫಲಕಗಳು ಕನ್ನಡದಲ್ಲಿರಬೇಕು. ಕನ್ನಡ ಕಲಿಕಾ ತರಬೇತಿ ಕೇಂದ್ರ ನಿರಂತರವಾಗಿ ನಡೆಸಬೇಕೆಂದು ಮೆಟ್ರೋ ಸಂಸ್ಥೆಗೆ ನೀಡಿದ ಪತ್ರದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಐರ್ಲೆಂಡ್‍ನಲ್ಲಿದ್ದರೂ ಬಿಡದ ನಂಟು- ಮಕ್ಕಳಿಗೆ ನಿರಂತರ ಕನ್ನಡ ಪಾಠ

    ಸಾರಿಗೆ ವಲಯದ ಮುಖೇನ ಇಂದು ತೀವ್ರಗತಿಯಲ್ಲಿ ರಾಜ್ಯದ ಹೊರಗಿನ ಜನತೆಯ ಆಗಮನ-ನಿರ್ಗಮನ, ವಲಸೆ ಹೆಚ್ಚುತ್ತಿದೆ. ಸಾರಿಗೆ ವಲಯದಲ್ಲೂ ಕನ್ನಡ ಭಾಷೆಯ ಬಳಕೆ ಕುಂದದೇ ಗಟ್ಟಿಯಾಗಿ ನೆಲೆಯಾಗಬೇಕು. ಟಿಕೆಟ್, ಬಸ್, ಮೆಟ್ರೋದಂತಹ ಬೆರಳೆಣಿಕೆಯ ಪದಗಳನ್ನು ಬಿಟ್ಟರೆ ಉಳಿದ ಕಡೆ ಕನ್ನಡ ಪದಗಳನ್ನು ಬಳಸಬೇಕು. ಈ ಸದುದ್ದೇಶಕ್ಕಾಗಿ ಕನ್ನಡಿಗರೆಲ್ಲರೂ ಬದ್ಧರಾಗಿರಬೇಕು. ಕರ್ನಾಟಕವೆಂದು ನಾಮಕರಣ ಮಾಡಿದ, ಹಿಂದುಳಿದ ವರ್ಗಗಳ ಆಶಾಕಿರಣ, ಉಳುವವನಿಗೆ ಭೂಮಿ ಕೊಡಿಸಿದ, ನಾಡಿನ ಜನಪ್ರಿಯ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಜನ್ಮದಿನದ ಸಂದರ್ಭ ಸಾರಿಗೆ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಸಾರಿಗೆ ವಲಯ ಅಂದರೆ ಕರಾರಸಾಸಂ(ಕೆಎಸ್‍ಆರ್‍ ಟಿಸಿ), ಬೆಂಮಸಾಸಂ(ಬಿಎಂಟಿಸಿ), ಮೆಟ್ರೋ, ಬೇಂದ್ರೆ ಸಾರಿಗೆ ಮತ್ತು ವಿಮಾನ ನಿಲ್ದಾಣಗಳಲ್ಲಿ ಮೂರು ದಿನಗಳ ಕಾಲ ಕನ್ನಡ ಬಳಕೆ ಜಾಗೃತಿ ಅಭಿಯಾನವನ್ನು ಪ್ರಾಧಿಕಾರವು ಹಮ್ಮಿಕೊಂಡಿದೆ. ಕನ್ನಡನಾಡಿನಲ್ಲಿ ನೆಲೆಸಿದವರು ಕನ್ನಡದಲ್ಲೇ ಮಾತು, ಸಂವಹನ ನಡೆಸುವಷ್ಟು ಕನ್ನಡ ಕಲಿತು, ಮಾತನಾಡಬೇಕು. ಈ ಸದಾಶಯ, ಸದುದ್ದೇಶವೇ ನಮ್ಮ ಹಕ್ಕೊತ್ತಾಯ ಮತ್ತು ಮನವಿ ಎಂದು ಮೆಟ್ರೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಹಕ್ಕೊತ್ತಾಯ ಹಾಗೂ ಮನವಿ ಪತ್ರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಲ್ಲಿಸಲಾಯಿತು.

    ಇದೇ ಸಂದರ್ಭದಲ್ಲಿ ಮೆಟ್ರೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಮ್ ಪರ್ವೇಜ್ ಅವರು ನಮ್ಮ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿರುವ ಅನ್ಯರಾಜ್ಯದ ಸಿಬ್ಬಂದಿ ಕನ್ನಡ ಕಲಿಯಲು ಉತ್ಸುಕರಾಗಿದ್ದು, ಇವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ತರಬೇತಿ ಶಿಬಿರ ಅಥವಾ ಜಾಲತಾಣ ಕನ್ನಡ ಕಲಿಕೆ ಕುರಿತು . ಪೋರ್ಟಲ್‍ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.

    ಬೈಯಪ್ಪನಹಳ್ಳಿ ಮೆಟ್ರೋ ಆಡಳಿತ ಕಚೇರಿಯ ಎಲ್ಲ ವಿಭಾಗಗಳಿಗೂ ಭೇಟಿ ನೀಡಿ ಮೆಟ್ರೋ ರೈಲಿನ ಒಳಭಾಗದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ವಿಶೇಷತೆಗಳ ಪ್ರದರ್ಶನ, ಕನ್ನಡದ ದಿಕ್ಸೂಚಿ, ಸೂಚನಾ ಫಲಕಗಳು, ಸಿಬ್ಬಂದಿಯು ಪ್ರಯಾಣಿಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಲು ಅನುಕೂಲವಾಗುವಂತೆ ತರಬೇತಿ ಕಾರ್ಯಕ್ರಮಗಳು ಹಾಗೂ ತಾಂತ್ರಿಕ ನಲೆಗಟ್ಟಿನಲ್ಲಿ ಕನ್ನಡದ ಬಳಕೆಗೆ ಅನುಕೂಲವಾಗುವಂತೆ ಈಗಾಗಲೇ ಕೈಗೊಂಡಿರುವ ಶ್ಲಾಘನೀಯ ಕ್ರಮಗಳನ್ನು ಪರಿವೀಕ್ಷಿಸಲಾಯಿತು. . ಇದನ್ನೂ ಓದಿ: ಡೇವಿಡ್ ವಾರ್ನರ್ ಕನ್ನಡ ಪ್ರೀತಿಗೆ ಕನ್ನಡಿಗರು ಫಿದಾ

    ಈ ಸಂದರ್ಭದಲ್ಲಿ ಬೈಯಪ್ಪನಹಳ್ಳಿಯಲ್ಲಿರುವ ಮೆಟ್ರೋ ಆಡಳಿತ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಎ.ಎಸ್.ಶಂಕರ್, ಕನ್ನಡ ಕೋಶ ಬೆಂಗಳೂರು ಮೆಟ್ರೋ ಮುಖ್ಯಸ್ಥರಾದ ಮಧುಶ್ರೀ, ಮೆಟ್ರೋ ಸಾರ್ವಜನಿಕಾ ಸಂಪರ್ಕಾಧಿಕಾರಿ ಭಾರತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರಾದ ಡಾ.ಸಂತೋಷ ಹಾನಗಲ್ಲ ಮತ್ತಿತರರು ಹಾಜರಿದ್ದರು.

  • ಕನ್ನಡ ಕಲಿಯದ ಬ್ಯಾಂಕ್ ಉದ್ಯೋಗಿಗಳ ವಿವರ ನೀಡಿ: ನಾಗಾಭರಣ

    ಕನ್ನಡ ಕಲಿಯದ ಬ್ಯಾಂಕ್ ಉದ್ಯೋಗಿಗಳ ವಿವರ ನೀಡಿ: ನಾಗಾಭರಣ

    ಬೆಂಗಳೂರು: ಬ್ಯಾಂಕ್ ಗಳಲ್ಲಿ ಕನ್ನಡ ಬಳಕೆ ಅಭಿಯಾನದ ಭಾಗವಾಗಿ ಎಟಿಎಂ ಗಳಲ್ಲಿ ಕನ್ನಡ ಬಳಕೆಯಾಯಿತು. ಆದರೆ ಕನ್ನಡ ಕಲಿಯದ ಬ್ಯಾಂಕ್ ಉದ್ಯೋಗಿಗಳ ವಿವರವನ್ನು ಆಡಳಿತಾಧಿಕಾರಿಗಳು ನೀಡುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ವಿಷಾದ ವ್ಯಕ್ತಪಡಿಸಿದರು.

    ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಕನ್ನಡ ಕಾಯಕದ ವರುಷದ ಸರಿಗನ್ನಡ ಬಳಕೆ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎರಡನೇ ಅಭಿಯಾನ ನಾಮಫಲಕಗಳಲ್ಲಿ ಶುದ್ಧ ಕನ್ನಡ ಬಳಕೆ, ಮೂರನೇಯದಾಗಿ ಶಕ್ತಿ ಕೇಂದ್ರಗಳಲ್ಲಿ ಕನ್ನಡ ಬಳಕೆ, ನಾಲ್ಕನೇಯದಾಗಿ ಸರಿಗನ್ನಡ ಬಳಕೆ ಅಭಿಯಾನ ನಡೆಸಲಾಗುತ್ತಿದೆ. ಹಿರಿಯ ಪತ್ರಕರ್ತೆ ಆರ್.ಕಲ್ಯಾಣಮ್ಮ ಅವರ ಜನ್ಮ ದಿನದ ಅಂಗವಾಗಿ ಇಂದು ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆಗೆ ಚಾಲನೆ ನೀಡಲಾಗುತ್ತಿದೆ ಎಂದು ನಾಗಾಭರಣ ತಿಳಿಸಿದರು.

    ನಂತರ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, 1980ರಲ್ಲಿ ನಾನು ಮೊದಲು ಸದಸ್ಯರಾಗಿ ಆಯ್ಕೆಯಾದೆ. ಅಂದಿನ ದಿನಗಳಲ್ಲಿ ಕಲಾವಿದರು, ಸಾಹಿತಿಗಳು ಆಯ್ಕೆಯಾಗಿ ಬರುತ್ತಿದ್ದರು. ಆದರೆ ಇಂದು ರಾಜಕಾರಣಿಗಳ ಬೆಂಬಲಿಗರು, ವಿಧಾನಸಭೆ ಚುನಾವಣೆಯಲ್ಲಿ ಸೋತವರು, ಬೇರೆ ಲಾಬಿಯಿಂದ ಅಯ್ಕೆಯಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

    ನಾನು ಸಭಾಪತಿಯಾದ ನಂತರ ಸದನದೊಳಗೆ ಮೊಬೈಲ್ ನಿಷೇಧಿಸಿದೆ. ಅದರೂ ಕೆಲ ಸದಸ್ಯರು ಮೊಬೈಲ್ ತರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸದನದಲ್ಲಿ ಚರ್ಚೆಯೇ ಆಗುತ್ತಿಲ್ಲ. ಈ ಆಧಿವೇಶನದಲ್ಲಿ ಎಷ್ಟು ಗಂಟೆ ಚರ್ಚೆಯಾಗಿದೆ, ಎಷ್ಟು ಹಣ ಖರ್ಚಾಗಿದೆ. ಒಂದು ಪ್ರಶ್ನೆಗೆ ಸುಮಾರು 14 ಲಕ್ಷ ರೂ. ಖರ್ಚಾಗಿದೆ. ಇದನ್ನೆಲ್ಲ ಮಾಧ್ಯಮದವರು ಬರೆಯುತ್ತಲೇ ಇಲ್ಲ. ಶಬ್ದಗಳ ಬಳಕೆಯಲ್ಲಿ ಕನ್ನಡ ಬಳಕೆಯನ್ನು ಹೆಚ್ಚಾಗಿ ಬಳಸಬೇಕು ಎಂದರು.

    ಈ ಕಾರ್ಯಕ್ರಮದಲ್ಲಿ ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿಲೋಕೇಶ, ನಗರ ಜಿಲ್ಲಾ ಅಧ್ಯಕ್ಷ ಎಸ್.ಸೋಮಶೇಖರ ಗಾಂಧಿ ಉಪಸ್ಥಿತರಿದ್ದರು.

  • ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಎಡವಟ್ಟು: ಕೇಂದ್ರ ನೀಡಿದ ಪುಸ್ತಕದಲ್ಲಿ ಆರ್‌ಎಸ್‌ಎಸ್ ಪತ್ರ- ‘ಕೈ’ ಸಂಸದರ ವಿರೋಧ

    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಎಡವಟ್ಟು: ಕೇಂದ್ರ ನೀಡಿದ ಪುಸ್ತಕದಲ್ಲಿ ಆರ್‌ಎಸ್‌ಎಸ್ ಪತ್ರ- ‘ಕೈ’ ಸಂಸದರ ವಿರೋಧ

    ನವದೆಹಲಿ: ಆರ್‌ಎಸ್‌ಎಸ್ ಶಿಫಾರಸುಗಳುಳ್ಳ ಹೊತ್ತಿಗೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿವಾದಕ್ಕೆ ಗುರಿಯಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಡೆ ವಿರೋಧಿಸಿ ಕಾಂಗ್ರೆಸ್ ಸಂಸದರು ಸಭಾ ತ್ಯಾಗ ಮಾಡಿದ್ದಾರೆ.

    ದೆಹಲಿಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ನಿವಾಸದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗಿಯಾಗಿದ್ದ ರಾಜ್ಯಸಭಾ ಸಂಸದ ಬಿ.ಕೆ. ಹರಿಪ್ರಸಾದ್, ರಾಜೀವ್ ಗೌಡ, ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್, ನಾಸೀರ್ ಹುಸೇನ್ ಲೋಕಸಭಾ ಸಂಸದ ಡಿ.ಕೆ.ಸುರೇಶ್ ಸಭಾ ತ್ಯಾಗ ಮಾಡಿದರು.

    ವಿವಿಧ ವಲಯಗಳಲ್ಲಿ ಕನ್ನಡ ಅಭಿವೃದ್ಧಿ ಸಂಬಂಧ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್.ನಾಗಭರಣ ನೇತೃತ್ವದಲ್ಲಿ ನಿಯೋಗವೊಂದು ಕೇಂದ್ರ ಸಚಿವರ ಭೇಟಿಗೆ ದೆಹಲಿಗೆ ಆಗಮಿಸಿತ್ತು. ನಿಯೋಗದಲ್ಲಿ ಮಾಳವಿಕಾ ಅವಿನಾಶ್, ಪ್ರಕಾಶ್ ಬೆಳವಾಡಿ, ಗುರುರಾಜ್ ಕರ್ಜಗಿ ಸೇರಿ ಹಲವು ಸದಸ್ಯರು ಒಳಗೊಂಡಿದ್ದರು. ಕೇಂದ್ರ ಸಚಿವರ ಭೇಟಿಗೂ ಮುನ್ನ ಡಿ.ವಿ.ಸದಾನಂದ ಗೌಡ ನಿವಾಸದಲ್ಲಿ ಸರ್ವ ಸಂಸದರ ಸಭೆ ಕರೆಯಲಾಗಿತ್ತು.

    ಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಲು ತಂದಿದ್ದ ಹೊತ್ತಿಗೆಯಲ್ಲಿ ಆರ್‍ಎಸ್‍ಎಸ್ ಶಿಫಾರಸು ಪತ್ರವನ್ನು ಕಂಡು ಸಂಸದರಾದ ಬಿ.ಕೆ.ಹರಿಪ್ರಸಾದ್, ರಾಜೀವ್ ಗೌಡ ವಿರೋಧಿಸಿದರು. ಸರ್ಕಾರ ಸಂಸ್ಥೆವೊಂದರ ಪುಸ್ತಕದಲ್ಲಿ ಆರ್‌ಎಸ್‌ಎಸ್ ಪತ್ರ ಬಳಕೆ ಮಾಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸಭಾ ತ್ಯಾಗ ಮಾಡಿದರು.

    ಬಳಿಕ ಮಾತನಾಡಿದ ಎಲ್.ಹನುಮಂತಯ್ಯ, ಆರ್‌ಎಸ್‌ಎಸ್ ನೋಂದಣಿಯಾಗದ ಸಂಸ್ಥೆ. ಅದರಲ್ಲೂ ಬಹು ಸಂಖ್ಯೆ ಜನರಿಂದ ಟೀಕೆಗೆ ಒಳಗಾಗಿರುವ ಸಂಘಟನೆ. ಇದು ಹಿಂದಿ ಮತ್ತು ಸಂಸ್ಕೃತವನ್ನು ಪ್ರತಿಪಾದಿಸುವ ಸಂಸ್ಥೆಯಾಗಿದ್ದು, ಇದರ ಶಿಫಾರಸು ಪತ್ರ ಬಳಸಿದ್ದು ಸರಿಯಲ್ಲ ಎಂದು ಹರಿಹಾಯ್ದರು. ಈ ಸಂಘಟನೆ ಪತ್ರ ಸರ್ಕಾರ ದಾಖಲೆಯಲ್ಲಿ ತುರುಕಲಾಗಿದೆ ಆಡಳಿತರೂಢ ಸರ್ಕಾರವನ್ನು ಮೆಚ್ಚಿಸಲು ಪ್ರಾಧಿಕಾರ ಹೀಗೆ ಮಾಡಿದೆ ಎಂದು ದೂರಿದರು.

    ಜಿ.ಸಿ.ಚಂದ್ರಶೇಖರ್ ಮಾತಾನಾಡಿ, ನಾವು ಹಿಂದೆ ಕನ್ನಡದ ಅಭಿವೃದ್ಧಿ ಬಗ್ಗೆ ಸಂಸತ್‍ನಲ್ಲಿ ಸಾಕಷ್ಟು ಚರ್ಚಿಸಿದ್ದೇವೆ. ಇತರೆ ಕನ್ನಡದ ಸಂಘ ಸಂಸ್ಥೆಗಳು ಅನೇಕ ಶಿಫಾರಸು ಮಾಡಿದೆ. ಅದು ಯಾವುದನ್ನು ಬಳಸದೇ ಆರ್‌ಎಸ್‌ಎಸ್ ಶಿಫಾರಸು ತುರುಕುವ ಪ್ರಯತ್ನ ಮಾಡಿದೆ ಎಂದರು.

    ಈ ಬಗ್ಗೆ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಭರಣ, ಮಾಹಿತಿಯನ್ನು ಅರ್ಥೈಸುವ ದೃಷ್ಟಿಯಿಂದ ಕೆಲವು ಪ್ರಮುಖ ಮಾಹಿತಿಯಷ್ಟೆ ಹೊತ್ತಿಕೆಯಲ್ಲಿ ಸೇರಿಸಿದೆ. ಕೇವಲ ಬುಲೆಟ್ ಪಾಯಿಂಟ್‍ಗಳನ್ನು ಮಾಡಿದ್ದೇವೆ. ಇದಕ್ಕಾಗಿ ಆರ್‌ಎಸ್‌ಎಸ್ ಪತ್ರವೊಂದನ್ನು ಮಾತ್ರ ಸೇರಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ಇತರೆ ಸಂಸ್ಥೆಗಳ ಶಿಫಾರಸುಗಳನ್ನು ಸೇರಿಸಲಾಗುವುದು. ಕನ್ನಡ ಅಭಿವೃದ್ಧಿಯೇ ಪ್ರಾಧಿಕಾರದ ಮುಖ್ಯ ಉದ್ದೇಶ ಎಂದು ಸ್ಪಷ್ಟನೆ ನೀಡಿದರು.

    ಸಂಘ ಪರವಾರಕ್ಕೂ ಎಲ್ಲ ಭಾಷೆಯ ಪ್ರಮುಖ್ಯತೆ ಅರ್ಥವಾಗಿದೆ. ಮಾತೃಭಾಷೆಗೆ ಹೆಚ್ಚಿನ ಅವಕಾಶ ಬೇಕು ಎಂದು ಆರ್‌ಎಸ್‌ಎಸ್ ಹೇಳಿದೆ. ಸಂಘ ಪರಿವಾರದ ಸಿದ್ಧಾಂತಗಳನ್ನು ಕೇಂದ್ರ ಸರ್ಕಾರ ಒಪ್ಪಿದೆ ಅವರದೇ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಒಪ್ಪಬಹುದು. ಹೀಗಾಗಿ ಆರ್‌ಎಸ್‌ಎಸ್ ಪತ್ರವನ್ನು ಪುಸ್ತಕದಲ್ಲಿ ಸೇರಿಸಿದೆ ಎಂದು ನಿಯೋಗ ಸದಸ್ಯ ಪ್ರಕಾಶ ಬೆಳವಾಡಿ ಹೇಳಿದರು.

  • ಇಂಗ್ಲಿಷ್‍ನಲ್ಲಿ ಫೈಲ್ ಕಳುಹಿಸಿ ಎಂದು ದರ್ಪ ಮೆರೆದ ಅಧಿಕಾರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಚಾಟಿ ಬೀಸಿದ್ದು ಹೀಗೆ

    ಇಂಗ್ಲಿಷ್‍ನಲ್ಲಿ ಫೈಲ್ ಕಳುಹಿಸಿ ಎಂದು ದರ್ಪ ಮೆರೆದ ಅಧಿಕಾರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಚಾಟಿ ಬೀಸಿದ್ದು ಹೀಗೆ

    – ಕನ್ನಡದಲ್ಲಿ ಫೈಲ್ ಕೊಟ್ರೆ ವಾಪಸ್ಸು ಕಳಿಸ್ತೀನೆಂದು ದರ್ಪ

    ಬೆಂಗಳೂರು: ಕನ್ನಡದ ವಿರುದ್ಧ ಕ್ಯಾತೆ ತೆಗೆದ ದೆಹಲಿ ಮೂಲದ ಐಎಎಸ್ ಅಧಿಕಾರಿ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಚಾಟಿ ಬೀಸಿದೆ.

    ಸಾರ್ವಜನಿಕ ಉದ್ದಿಮೆಗಳ ಕಾರ್ಯದರ್ಶಿಯಾಗಿರುವ ಐಎಎಸ್ ಅಧಿಕಾರಿ ಶ್ರೀವತ್ಸ ಕೃಷ್ಣಾ ಕನ್ನಡದಲ್ಲಿ ಫೈಲ್ ಕೊಟ್ಟರೆ ವಾಪಸ್ಸು ಕಳಸ್ತಿನಿ ಅಂತಾ ದರ್ಪ ತೋರಿಸಿದ್ದಾರೆ. ಶ್ರೀವತ್ಸಾ ಕೃಷ್ಣಾಗೆ ಕನ್ನಡ ಭಾಷೆ ಬಾರದ ಹಿನ್ನಲೆಯಲ್ಲಿ ಇಲಾಖಾ ಕಡತಗಳನ್ನು ಇಂಗ್ಲಿಷ್‍ನಲ್ಲೆ ಕೊಡುವಂತೆ ಕಿರಿಯ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.

    ಕಳೆದ ಮಾರ್ಚ್ 04 ರಂದು ಶ್ರೀವತ್ಸಾ ಕೃಷ್ಣಾ ಅಧಿಕಾರಿಗಳಿಗೆ ಈ ಆದೇಶ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ಶ್ರೀವತ್ಸಾಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ ಎಸ್.ಜಿ ಸಿದ್ದರಾಮಯ್ಯ ನೋಟಿಸ್ ನೀಡಿದ್ದಾರೆ.

                                      

    ಕಳೆದ ಹತ್ತು ವರ್ಷಗಳಿಂದ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀವತ್ಸ ಕೃಷ್ಣಾ, ಕನ್ನಡ ಕಲಿಯದಿದ್ದಕ್ಕೆ ಈ ಹಿಂದೆ ಎರಡು ಬಾರಿ ಸಿಎಂ ಬೈದಿದ್ದರು.