Tag: ಕನ್ನಡನ್ಯೂಸ್

  • ಮನೆಯನ್ನು ಕೆಡವಿದ್ದಾರೆ ನ್ಯಾಯ ನೀಡಿ- ದೇವರ ಫೋಟೋ ಹಿಡಿದು ಕಣ್ಣೀರಿಟ್ಟ ವೃದ್ಧ

    ಮನೆಯನ್ನು ಕೆಡವಿದ್ದಾರೆ ನ್ಯಾಯ ನೀಡಿ- ದೇವರ ಫೋಟೋ ಹಿಡಿದು ಕಣ್ಣೀರಿಟ್ಟ ವೃದ್ಧ

    ನೆಲಮಂಗಲ: ನಾನು ವಾಸವಿರುವ ಬಾಡಿಗೆ ಮನೆಯನ್ನು ಕೆಡವಿ ಸಾಮಾಗ್ರಿಗಳನ್ನು ಹೊರಗೆ ಬಿಸಾಡಿದ್ದಾರೆ. ನನಗೆ ನ್ಯಾಯ ನೀಡಿ ಎಂದು ಮನೆಯ ಎದುರು ದೇವರ ಫೋಟೋ ಹಿಡಿದು ವೃದ್ಧ ಕಣ್ಣೀರಿಟ್ಟ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಜಕ್ಕಸಂದ್ರ ಗ್ರಾಮದಲ್ಲಿ ನಡೆದಿದೆ.

    ಚಿಕ್ಕ ಕೊಠಡಿಯಲ್ಲಿ ವಾಸವಾಗಿದ್ದ ವೃದ್ಧ ನಾಗಣ್ಣ ಮನೆಯ ಎದುರು ಕುಳಿತು ನ್ಯಾಯಕ್ಕಾಗಿ ಕಣ್ಣೀರಿಡುತಿದ್ದಾರೆ. ನಗರದ ಜಕ್ಕಸಂದ್ರದಲ್ಲಿನ ನಿವೇಶನದ ಜಾಗದಲ್ಲಿ ಸಿಮೆಂಟ್ ಇಟ್ಟಿಗೆಯಿಂದ ನಿರ್ಮಾಣವಾದ ಸಣ್ಣದೊಂದು ಬಾಡಿಗೆ ಮನೆಯಲ್ಲಿ ನಾಗಣ್ಣ ವಾಸವಿದ್ದರು. ನಿವೇಶನದ ಮಾಲೀಕ ಸಿದ್ದರಾಜು ಮನೆ ನಿರ್ಮಾಣ ಮಾಡಿದ್ದು, 2 ತಿಂಗಳ ಹಿಂದೆ 5,000 ಮುಂಗಡ ಹಣ ನೀಡಿ ಬಾಡಿಗೆ ಪಡೆದುಕೊಂಡಿದ್ದರು. ಇದನ್ನೂ ಓದಿ: ಫ್ಲೈಓವರ್ ಮೇಲಿಂದ ಬಿದ್ದು ಅಪಘಾತವಾದ ಸ್ಥಳದಲ್ಲೇ ಮತ್ತೊಂದು ಅಪಘಾತ

    ಕೆಲವು ವ್ಯಕ್ತಿಗಳು ನಿವೇಶನ ನನ್ನದು ನನ್ನ ಜಾಗದಲ್ಲಿ ನೀನು ವಾಸವಿರಲು ಸಾಧ್ಯವಿಲ್ಲ ಎಂದು ಮನೆಯನ್ನು ಅರ್ಧದಷ್ಟು ಕೆಡವಿ ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಹೊರಗೆ ಎಸೆದು ಹೋಗಿದ್ದಾರೆ. ಇದರಿಂದ ಮನನೊಂದ ನಾಗಣ್ಣ ಪೊಲೀಸರಿಗೆ ಮಾಹಿತಿ ನೀಡಿದ್ದು, ದೇವರ ಫೋಟೋ ಹಿಡಿದು, ನ್ಯಾಯಕ್ಕಾಗಿ ಬಾಡಿಗೆ ಮನೆಯ ಎದುರು ಪ್ರತಿಭಟನೆ ಮಾಡಿದ್ದಾರೆ. ಇದನ್ನೂ ಓದಿ:  ಎಲೆಕ್ಟ್ರಾನಿಕ್ಸ್ ಸಿಟಿ ಪ್ಲೈ ಓವರ್ ಮೇಲೆ ಭೀಕರ ಅಪಘಾತ

    ಕೂಲಿನಾಲಿ ಮಾಡಿ 10 ಸಾವಿರ ಹಣವನ್ನು ಕಪಾಟಿನಲ್ಲಿ ಇಟ್ಟುಕೊಂಡಿದೆ. ಅವರು ನಾನು ಇಲ್ಲದ ಸಮಯದಲ್ಲಿ ಮನೆಯನ್ನು ಕೆಡವಿ ಮನೆ ಸಾಮಾಗ್ರಿಯನ್ನು ಹೊರಗೆ ಹಾಕಿದ್ದು, ಹಣವೂ ಇಲ್ಲದಂತಾಗಿದೆ. ದುಡಿದು ಬದುಕುವ ನಮ್ಮ ಮೇಲೆ ಆ ವ್ಯಕ್ತಿಗಳು ಮನೆ ಕೆಡವಿ ಸಮಸ್ಯೆ ಮಾಡಿದ್ದು, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ನಾಗಣ್ಣ ಆರೋಪಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ- ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ

    ಪೊಲೀಸರು ಸ್ಥಳಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

     

  • ಲೋಕಸಭೆಯಲ್ಲಿ ದಿ.ಅಂಬರೀಶ್‍ಗೆ ಮತ್ತೆ ಅವಮಾನ!

    ಲೋಕಸಭೆಯಲ್ಲಿ ದಿ.ಅಂಬರೀಶ್‍ಗೆ ಮತ್ತೆ ಅವಮಾನ!

    ನವದೆಹಲಿ: ಲೋಕಸಭೆಯಲ್ಲಿ ಮಾಜಿ ಕೇಂದ್ರ ಸಚಿವ, ಸ್ಯಾಂಡಲ್‍ವುಡ್ ನಟ ದಿ.ಅಂಬರೀಶ್ ಅವರಿಗೆ ಮತ್ತೆ ಅವಮಾನವಾಗಿದೆ.

    ಕಲಾಪ ಆರಂಭದ ಮೊದಲ ದಿನ ನಿಧನ ಹೊಂದಿದ್ದ ಗಣ್ಯರಿಗೆ ಸಂತಾಪ ಸೂಚಿಸುವ ಸಂಪ್ರದಾಯವಿದೆ. ಮಂಗಳವಾರದಿಂದ ಆರಂಭಗೊಂಡಿರುವ ಚಳಿಗಾಲದ ಅಧಿವೇಶನದಲ್ಲಿ ಕಲಾಪ ಆರಂಭಗೊಂಡಾಗ ಮಾಜಿ ಸಚಿವ ಅನಂತ್ ಕುಮಾರ್ ಅವರಿಗೆ ಸಂತಾಪ ಸೂಚಿಸಲಾಗಿತ್ತು.

    ಸಂತಾಪದ ಬಳಿಕ ಕಲಾಪ ಆರಂಭಗೊಂಡಾಗ ಮಾಜಿ ಪ್ರಧಾನಿ ದೇವೇಗೌಡ ಅವರು ಪಟ್ಟಿಯಲ್ಲಿ ಜಾಫರ್ ಶರೀಫ್ ಮತ್ತು ಅಂಬರೀಶ್ ಹೆಸರು ಕೈ ಬಿಟ್ಟ ವಿಚಾರವನ್ನು ಪ್ರಸ್ತಾಪ ಮಾಡಿದರು. ಈ ವಿಚಾರ ಗಮನಕ್ಕೆ ಬಂದ ಕೂಡಲೇ ಸ್ಪೀಕರ್ ಸುಮಿತ್ರಾ ಮಹಾಜನ್ ಬುಧವಾರ ಸಂತಾಪ ಸೂಚಿಸುತ್ತೇನೆ ಎಂದು ತಿಳಿಸಿದ್ದರು. ಆದರೆ ಇಂದು ಮಾಜಿ ಕೇಂದ್ರ ರೈಲ್ವೇ ಸಚಿವ ಜಾಫರ್ ಶರೀಫ್ ಅವರಿಗೆ ಸಂತಾಪ ಸೂಚಿಸಿ ಅಂಬರೀಶ್ ಹೆಸರು ಕೈ ಬಿಡಲಾಯಿತು.

    ಈ ಸಂದರ್ಭದಲ್ಲಿ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಂಬರೀಶ್ ಅವರಿಗೆ ಸಂತಾಪ ಸೂಚಿಸುವಂತೆ ಮನವಿ ಮಾಡಿದರು. ಸ್ಪೀಕರ್ ಸುಮಿತ್ರಾ ಮಹಾಜನ್ ಗುರುವಾರ ಸಂತಾಪ ಸೂಚಿಸಲಾಗುವುದು ಎಂದು ಹೇಳಿ ಕಲಾಪ ಆರಂಭಕ್ಕೆ ಅನುಮತಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv