Tag: ಕನ್ನಂಬಾಡಿ ಕಟ್ಟೆ

  • 45 ವರ್ಷಗಳ ಇತಿಹಾಸದಲ್ಲಿ ನೂತನ ದಾಖಲೆ ಬರೆಯಲು ಕೆಆರ್‌ಎಸ್ ಸಜ್ಜು

    45 ವರ್ಷಗಳ ಇತಿಹಾಸದಲ್ಲಿ ನೂತನ ದಾಖಲೆ ಬರೆಯಲು ಕೆಆರ್‌ಎಸ್ ಸಜ್ಜು

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟು (KRS Dam) ಅಂದರೆ ಈ ಭಾಗದ ರೈತರ ಜೀವಾಳ ಹಾಗೂ ಮಹಾನಗರಗಳಿಗೆ ದಣಿವು ಉಣಿಸುವ ಜೀವನಾಡಿ. ಸದ್ಯ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ (Rain) ಬೀಳುತ್ತಿರುವ ಹಿನ್ನೆಲೆ ಈ ಜಲಾನಯನ ಭರ್ತಿಯ ಅಂಚಿಗೆ ತಲುಪುತ್ತಿದೆ. ಈ ಸಂದರ್ಭದಲ್ಲಿ ಕನ್ನಂಬಾಡಿ (Kannambadi) ಕಟ್ಟೆ 45 ವರ್ಷಗಳ ಇತಿಹಾಸದಲ್ಲಿ ವಿಶೇಷ ದಾಖಲೆಯನ್ನು ಬರೆಯಲು ಕಾತುರದಲ್ಲಿದೆ.

    ಪ್ರತಿವರ್ಷ ಕೆಆರ್‌ಎಸ್ ಡ್ಯಾಂ ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಭರ್ತಿಯಾಗುತ್ತಿತ್ತು. ಆಗೊಮ್ಮೆ ಈಗೋಮ್ಮೆ ಜುಲೈ ತಿಂಗಳಿನಲ್ಲಿ ಭರ್ತಿಯಾಗಿರುವ ಒಂದೆರಡು ಉದಾಹರಣೆ ಇದೆ. ಆದರೆ ಈ ಬಾರಿ ಜೂನ್ ತಿಂಗಳಿನಲ್ಲಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಕೆಆರ್‌ಎಸ್ ಡ್ಯಾಂ ಭರ್ತಿಗೆ 9 ಅಡಿ ಅಂದ್ರೆ 12 ಟಿಎಂಸಿ ನೀರು ಅಷ್ಟೇ ಬೇಕಿರೋದು. ಹೀಗೆ ಮಳೆ ಬಿದ್ದರೆ ಕೆಆರ್‌ಎಸ್ ಡ್ಯಾಂ ಕೆಲ ದಿನಗಳಲ್ಲಿ ಭರ್ತಿಯಾಗಲಿದೆ. 1980 ರಿಂದ ಇಲ್ಲಿಯವರೆಗೆ ಜೂನ್ ತಿಂಗಳಿನಲ್ಲಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗಿರುವ ಉದಾಹರಣೆಯೇ ಇಲ್ಲ. ಇದೇ ತಿಂಗಳು ಕೆಆರ್‌ಎಸ್ ಭರ್ತಿಯಾದ್ರೆ ದಾಖಲೆಯ ಪುಟಕ್ಕೆ ಕನ್ನಂಬಾಡಿ ಕಟ್ಟೆ ಸೇರಲಿದೆ. ಇದನ್ನೂ ಓದಿ: ವಿದೇಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿಗೆ ವಾಪಸ್ – ಬರ್ತಿದ್ದಂತೆ ಕೇಂದ್ರದ ವಿರುದ್ಧ ವಾಗ್ದಾಳಿ

    ಒಟ್ಟಾರೆ ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಡ್ಯಾಂ ಜೂನ್ ತಿಂಗಳಿನಲ್ಲಿ ಭರ್ತಿಯತ್ತ ಸಾಗುತ್ತಿರೋದು ಈ ಭಾಗದ ಜನರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇದನ್ನೂ ಓದಿ: ಕಾಲ್ತುಳಿತ ತನಿಖೆಗೆ ಇನ್ನೊಂದು ವಾರ ಗಡುವು ಕೇಳಲು ಚಿಂತನೆ – ಸಿಸಿಟಿವಿ ಫೂಟೇಜ್ ನೀಡುವಂತೆ ಡಿಸಿ ಪತ್ರ

  • ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಏರಿಕೆ – 17,544 ಕ್ಯೂಸೆಕ್ ಒಳಹರಿವು

    ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಏರಿಕೆ – 17,544 ಕ್ಯೂಸೆಕ್ ಒಳಹರಿವು

    ಮಂಡ್ಯ: ಕಾವೇರಿ ಜಲಾನಯನ (Cauvery Basin) ಪ್ರದೇಶದಲ್ಲಿ ಮಳೆಯಾದ ಹಿನ್ನೆಲೆ ಕನ್ನಂಬಾಡಿ ಕಟ್ಟೆಗೆ 17 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕೆಆರ್‌ಎಸ್ ಡ್ಯಾಂನ (KRS Dam) ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದೆ.

    ಕೆಆರ್‌ಎಸ್ ಡ್ಯಾಂ 124.80 ಅಡಿ ಗರಿಷ್ಠ ಮಟ್ಟವನ್ನು ಹೊಂದಿದ್ದು, ಶನಿವಾರ 102.00 ಅಡಿ ಇದ್ದ ಡ್ಯಾಂನ ನೀರಿನ ಮಟ್ಟವು ಭಾನುವಾರ 103.70 ಅಡಿಗೆ ಏರಿಕೆಯಾಗಿದೆ. ಇಂದು ಡ್ಯಾಂಗೆ 17,544 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದನ್ನೂ ಓದಿ: PUBLiC TV Impact – ಯುವತಿ ಮೇಲೆ ಬಸ್ ಹತ್ತಿಸಲು ಯತ್ನಿಸಿದ್ದ BMTC ಬಸ್ ಡ್ರೈವರ್ ಅಮಾನತು

    ಡ್ಯಾಂನಿಂದ 735 ಕ್ಯೂಸೆಕ್ ನೀರಿನ ಹೊರಹರಿವಿದೆ. 49.452 ಟಿಎಂಸಿ ಸಾಮರ್ಥ್ಯವಿರುವ ಡ್ಯಾಂನಲ್ಲಿ 25.851 ಟಿಎಂಸಿ ನೀರು ಸಂಗ್ರಹವಾಗಿದೆ. ಇದೀಗ ಜೂನ್ ತಿಂಗಳ ಮೊದಲ ದಿನವೇ ಡ್ಯಾಂ ಅರ್ಧದಷ್ಟು ಭರ್ತಿಯಾಗಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ 11 ತಿಂಗಳ ಮಗುವಿಗೆ ಕೊರೊನಾ ಸೋಂಕು – ಮಂಡ್ಯದಲ್ಲೂ ಮೊದಲ ಕೇಸ್‌ ಪತ್ತೆ

    ಇಂದಿನ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ
    ಗರಿಷ್ಠ ಮಟ್ಟ – 124.80 ಅಡಿ.
    ಇಂದಿನ ಮಟ್ಟ – 103.70 ಅಡಿ.
    ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ.
    ಇAದಿನ ಸಾಮರ್ಥ್ಯ – 25.851 ಟಿಎಂಸಿ
    ಒಳ ಹರಿವು – 17,544 ಕ್ಯೂಸೆಕ್
    ಹೊರ ಹರಿವು – 735 ಕ್ಯೂಸೆಕ್

  • ಕನ್ನಂಬಾಡಿ ಕಟ್ಟೆ ಕಟ್ಟಿದ್ದು ವಿಶ್ವೇಶ್ವರಯ್ಯ ಅಲ್ವಂತೆ – ವಿವಾದಕ್ಕೆ ಎಡೆಮಾಡಿಕೊಟ್ಟ ನಂಜರಾಜ ಅರಸ್ ಪುಸ್ತಕ

    ಕನ್ನಂಬಾಡಿ ಕಟ್ಟೆ ಕಟ್ಟಿದ್ದು ವಿಶ್ವೇಶ್ವರಯ್ಯ ಅಲ್ವಂತೆ – ವಿವಾದಕ್ಕೆ ಎಡೆಮಾಡಿಕೊಟ್ಟ ನಂಜರಾಜ ಅರಸ್ ಪುಸ್ತಕ

    ಮೈಸೂರು: `ನಾನು ಕನ್ನಂಬಾಡಿ ಕಟ್ಟೆ’ ಹೀಗೊಂದು ಆತ್ಮಕಥೆ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮೈಸೂರಿನ ರಾಣಿಬಹದ್ದೂರು ಇನ್‍ಸ್ಟಿಟ್ಯೂಟ್ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.

    ಬಳಿಕ ಮಾತನಾಡಿದ ಸಿಎಂ, ಕೆಆರ್‍ಎಸ್ ಅಣೆಕಟ್ಟು ಪ್ರಮುಖವಾದ ಜಲಾಶಯ. ಅದರ ಇತಿಹಾಸದ ಸತ್ಯ ಎಲ್ಲರಿಗೂ ಗೊತ್ತಾಗಬೇಕಿತ್ತು. ಹೀಗಾಗಿ ನಂಜರಾಜ ಅರಸ್ ಸಂಶೋಧನೆ ನಡೆಸಿ ಸತ್ಯ ದರ್ಶನ ಮಾಡಿಸಿದ್ದಾರೆ. ನೀರಿನ ಹಂಚಿಕೆಯಲ್ಲಿ ಆದ ಒಪ್ಪಂದದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ಅನ್ಯಾಯದಿಂದ ಇವತ್ತು ಸಮಸ್ಯೆ ಇದೆ. ನಾವು ಈಗಲೂ ಕಷ್ಟ ಅನುಭವಿಸುತ್ತಿದ್ದೇವೆ. ಇದರ ಬಗ್ಗೆಯೂ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ ಅಂತಾ ಹೇಳಿದ್ರು.

    ಕೆಆರ್‍ಎಸ್ ಕಟ್ಟಿದ್ದು ಸರ್.ಎಂ. ವಿಶ್ವೇಶ್ವರಯ್ಯ ಅಲ್ಲ ಕ್ಯಾಪ್ಟನ್ ಡಾಸ್ ಅಂತಾ ಪುಸ್ತಕದಲ್ಲಿ ಹೇಳಲಾಗಿದೆ. ಸಂಶೋಧನೆ ಮಾಡಿ ನಂಜರಾಜ ಅರಸ್ ಪುಸ್ತಕ ಬರೆದಿರೋ ಕಾರಣ ಇದನ್ನು ಸತ್ಯ ಅಂತಾ ನಂಬಬಹುದು. ಪುಸ್ತಕದಲ್ಲಿನ ಅಂಶವನ್ನು ಒಪ್ಪಿಕೊಳ್ಳುವುದು ಬಿಡುವುದು ಅವರವರ ಇಚ್ಛೆಗೆ ಬಿಟ್ಟಿದ್ದು. ಸತ್ಯ ಸರ್ವ ಸಮ್ಮತವಾಗಿದ್ದರೆ ಅದನ್ನು ಒಪ್ಪಿಕೊಳ್ಳಬಹುದು ಎಂದು ಸಿಎಂ ಹೇಳಿದ್ದಾರೆ.

    ಇವತ್ತು ಜಲಾಶಯದಲ್ಲಿ ನೀರಿಲ್ಲ. ಅದರೂ ಪ್ರತಿ ದಿನ 2,000 ಕ್ಯೂಸೆಕ್ ನೀರು ಬಿಡಲು ಆದೇಶ ಮಾಡಲಾಗಿದೆ. ಆದರೆ ಜಲಾಶಯದಲ್ಲಿ ನೀರಿಲ್ಲದ ಕಾರಣ ಆದೇಶವನ್ನು ನಾವು ಪಾಲಿಸುತ್ತಿಲ್ಲ. ರಾಜ್ಯದಲ್ಲಿ ಕಂಡು ಕೇಳರಿಯದ ಬರ ಇದೆ. ಹೀಗಾಗಿ ಜಲಸಂಪನ್ಮೂಲ ಸಚಿವರು ಮಳೆಗಾಗಿ ಪೂಜೆ ಮಾಡುತ್ತಿದ್ದಾರೆ. ಈ ಪೂಜೆಗೂ ಸರ್ಕಾರಕ್ಕೂ ಸಂಬಂಧವಿಲ್ಲ. ನನಗೆ ಇಂತಹ ಪೂಜೆ ಮೇಲೆ ನಂಬಿಕೆ ಇಲ್ಲ ಸಚಿವರು ತಮ್ಮ ಸ್ವಂತ ಹಣದಲ್ಲಿ ಪೂಜೆ ಮಾಡುತ್ತಿದ್ದಾರೆ ಅಂದ್ರು.

    `ನಾನು ಕನ್ನಂಬಾಡಿ ಕಟ್ಟೆ’ ಪುಸ್ತಕದ ಬಗ್ಗೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಮಾತನಾಡಿ, ಊಹಾಪೂಹಗಳಿಗೆ ಅವಕಾಶ ನೀಡದಂತೆ ಪುಸ್ತಕ ಬರೆದಿದ್ದಾರೆ. ಕಾವೇರಿ ನದಿಯ ಪ್ರತಿ ಅಂಚನ್ನು ವಿವರಿಸಿದ್ದಾರೆ. ಅತ್ಯಂತ ಸ್ವಾರಸ್ಯಕರವಾಗಿ ಪುಸ್ತಕ ಮೂಡಿ ಬಂದಿದೆ. ನಾನು ಪುಸ್ತಕವನ್ನು ಸಂಪೂರ್ಣ ಓದಿದ್ದೇನೆ. ಸಿಎಂ ಸಿದ್ದರಾಮಯ್ಯ ಪುಸ್ತಕ ಬಿಡುಗಡೆ ಮಾಡಿರುವುದು ಔಚಿತ್ಯಪೂರ್ಣ. ಪ್ರೊ. ನಂಜರಾಜ ಅರಸು ನೇರ ಮಾತಿನವರು. ಅವರು ಮಾಡಿರುವ ಕೆಲಸಕ್ಕೆ ಸೂಕ್ತ ಸ್ಥಾನ ಮಾನ ಸಿಗಲಿ ಅಂತಾ ಹೇಳಿದರು.

    ವಿಶ್ವೇಶ್ವರಯ್ಯ ತೇಜೋವಧೆ: `ನಾನು ಕನ್ನಂಬಾಡಿ ಕಟ್ಟೆ’ ಆತ್ಮಕಥೆ ಪುಸ್ತಕದಲ್ಲಿ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ತೇಜೋವಧೆ ಮಾಡಲಾಗಿದೆ. ‘ನಾನು ಕನ್ನಂಬಾಡಿ ಕಟ್ಟೆ’ ಕೃತಿಯ ಕರ್ತೃ ಪ್ರೊ. ನಂಜರಾಜ ಅರಸ್ ಇತಿಹಾಸವನ್ನು ತಿರುಚಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಈ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಸೇನಾಪಡೆ ಸಂಘಟನೆ ಸಂಚಾಲಕ ಪ್ರೇಮಕುಮಾರ್ ಎಚ್ಚರಿಕೆ ನೀಡಿದ್ದಾರೆ.