Tag: ಕನಾಟಕ ಚುನಾವಣೆ 2018

  • ಮೋದಿ ಸಮಾವೇಶದಿಂದಾದ ಡ್ಯಾಮೇಜ್ ಕಂಟ್ರೋಲ್ ಮಾಡಲು ಸಿಎಂ ಮಾಸ್ಟರ್ ಪ್ಲಾನ್

    ಮೋದಿ ಸಮಾವೇಶದಿಂದಾದ ಡ್ಯಾಮೇಜ್ ಕಂಟ್ರೋಲ್ ಮಾಡಲು ಸಿಎಂ ಮಾಸ್ಟರ್ ಪ್ಲಾನ್

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದ ಪ್ರಧಾನಿ ಮೋದಿ ಸಮಾವೇಶದಿಂದ ಕಾಂಗ್ರೆಸ್ ಗೆ ಆಗಿರುವ ಡ್ಯಾಮೇಜನ್ನು ಕಂಟ್ರೋಲ್ ಮಾಡಲು ಇದೀಗ ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ಮಾತ್ರ ಸಮಾವೇಶ ನಡೆಸಿದ್ರೆ, ಸಿಎಂ ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ರೋಡ್ ಶೋ ಹಾಗೂ ಸಮಾವೇಶವನ್ನು ನಡೆಸಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಸಿಎಂಗೆ 2+1 ಫಾರ್ಮುಲಾ, ಇತರೆ ಮಂತ್ರಿಗಳಿಗೆ 1+1 ಫಾರ್ಮುಲಾ: ಮೋದಿ ವಾಗ್ದಾಳಿ

    ಹನೂರು, ಕೊಳ್ಳೆಗಾಲ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಕ್ಷೇತ್ರಗಳಿಗೆ ಸೋಮವಾರ ಭೇಟಿ ನೀಡಲಿರುವ ಸಿಎಂ, ನಾಲ್ಕು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ರೋಡ್ ಶೋ ಮತ್ತು ಸಮಾವೇಶ ಮಾಡಲಿದ್ದಾರೆ. ಈ ಮೂಲಕ ಮೋದಿ ಸಮಾವೇಶದಿಂದ ಕಾಂಗ್ರೆಸ್ ಗೆ ಆಗಿರುವ ಡ್ಯಾಮೇಜ್ ನ್ನು ಕಂಟ್ರೋಲ್ ಮಾಡಲಿದ್ದಾರೆ ಎನ್ನಲಾಗಿದೆ.

    ಈ ಚುನಾವಣಾ ಪ್ರಚಾರದಲ್ಲಿ ಮೋದಿ ಚಾಮರಾಜನಗರಕ್ಕೆ ಬರದೇ ಇರೋದನ್ನಾ ಪ್ರಮುಖ ಅಸ್ತ್ರವನ್ನಾಗಿ ಸಿಎಂ ಬಳಸಿಕೊಳ್ಳಲಿದ್ದಾರೆ. ನಾಲ್ಕು ಕ್ಷೇತ್ರಗಳಲ್ಲೂ ಮೋದಿ ಅಧಿಕಾರ ಹೋಗುತ್ತೆ ಅಂತಾ ಚಾಮರಾಜನಗರಕ್ಕೆ ಬರಲಿಲ್ಲಾ ಅಂತಾ ಪ್ರಸ್ತಾಪ ಮಾಡಲಿದ್ದಾರೆ. ಈ ಮೂಲಕ ಗಡಿ ಜಿಲ್ಲೆಯಲ್ಲಿ ಎದ್ದಿದ್ದ ಮೋದಿ ಅಲೆಯನ್ನು ಕಟ್ಟಿಹಾಕಲಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಅದಾಗಿನಿಂದ ಚಾಮರಾಜನಗರಕ್ಕೆ ಇದು 11 ನೇ ಬಾರಿಯ ಪ್ರವಾಸವಾಗಲಿದೆ.

  • ನಡುರಸ್ತೆಯಲ್ಲೇ ಸಚಿವ ತನ್ವೀರ್ ಸೇಠ್ ಗೆ ಫುಲ್ ಕ್ಲಾಸ್- ತಡೆಯಲು ಬಂದ ಆಪ್ತನಿಗೆ ಅವಾಜ್ ಹಾಕಿದ ಮತದಾರ

    ನಡುರಸ್ತೆಯಲ್ಲೇ ಸಚಿವ ತನ್ವೀರ್ ಸೇಠ್ ಗೆ ಫುಲ್ ಕ್ಲಾಸ್- ತಡೆಯಲು ಬಂದ ಆಪ್ತನಿಗೆ ಅವಾಜ್ ಹಾಕಿದ ಮತದಾರ

    ಮೈಸೂರು: ಮತ ಕೇಳಲು ಬಂದ ಸಚಿವರಿಗೆ ಮತದಾರ ಕ್ಲಾಸ್ ತೆಗೆದುಕೊಂಡ ಘಟನೆ ಮೈಸೂರಿನ ಎನ್ ಆರ್ ಕ್ಷೇತ್ರದಲ್ಲಿ ನಡೆದಿದೆ.

    ಮೈಸೂರಿನ ಎನ್ ಆರ್ ಕ್ಷೇತ್ರದ ಶಾಸಕ ಹಾಗೂ ಸಚಿವ ತನ್ವೀರ್ ಸೇಠ್ ಮತದಾರನಿಂದ ತರಾಟೆಗೆ ಒಳಗಾಗಿದ್ದಾರೆ. ಮತದಾರ ರಸ್ತೆಯಲ್ಲಿ ಏಕಾಂಗಿಯಾಗಿ ನಿಂತು ಸಚಿವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಇದನ್ನು ತಡೆಯಲು ಬಂದ ಸಚಿವರ ಆಪ್ತ ಕಾರ್ಯದರ್ಶಿಯನ್ನು ಲೆಕ್ಕಿಸದೆ ಅವಾಜ್ ಹಾಕಿದ್ದಾರೆ.

    ಮೈಸೂರಿನ ಕನ್ನಡಪರ ಹೋರಾಟಗಾರ ಪರಮೇಶ್, ತನ್ವೀರ್ ಸೇಠ್ ಗೆ ಕ್ಲಾಸ್ ತೆಗೆದುಕೊಂಡ ವ್ಯಕ್ತಿ. ಎನ್.ಆರ್. ಕ್ಷೇತ್ರದ ರಾಘವೇಂದ್ರ ನಗರದಲ್ಲಿ ಮತಯಾಚನೆಗಾಗಿ ತನ್ವೀರ್ ಸೇಠ್ ಪಾದಯಾತ್ರೆ ನಡೆಸುತ್ತಿದ್ದರು. ಈ ವೇಳೆ ಎದುರಾದ ಮತದಾರ ಪರಮೇಶ್, ತನ್ವೀರ್ ಸೇಠ್‍ಗೆ ಹಲವು ನಿಮಿಷಗಳ ಕಾಲ ಪ್ರಶ್ನೆಗಳ ಸುರಿಮಳೆಗೈದರು.

    ರಸ್ತೆ ರೀಪೇರಿ ಮಾಡಿಸಿಲ್ಲ. ನಾನು ಅಂದಿನಿಂದಲೂ ನಿಮಗೆ ನಿಮ್ಮ ತಂದೆ ಹಾಗೂ ನಿಮಗೆ ಮತ ಹಾಕ್ತಿದ್ದೀವಿ. ಆದ್ರೆ ಮನೆ ಬಳಿ ಕೆಲಸ ಮಾಡಿಕೊಡಿ ಅಂತ ಬಂದ್ರೆ ಕ್ಯಾರೇ ಅನ್ನೊಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.