Tag: ಕನಾಟಕ ಚುನಾವಣೆ

  • 1 ಮತದ ಅಂತರದಿಂದ ಸೋತಿದ್ದ ಅಭ್ಯರ್ಥಿ 59 ಸಾವಿರ ದಾಖಲೆ ಮತಗಳಲ್ಲಿ ಗೆಲುವು

    1 ಮತದ ಅಂತರದಿಂದ ಸೋತಿದ್ದ ಅಭ್ಯರ್ಥಿ 59 ಸಾವಿರ ದಾಖಲೆ ಮತಗಳಲ್ಲಿ ಗೆಲುವು

    ಚಾಮರಾಜನಗರ: ಧ್ರುವನಾರಾಯಣ ವಿರುದ್ಧ 1 ಮತದ ಅಂತರದಿಂದ ಸೋತ ಬಳಿಕ ನಿರಂತರವಾಗಿ ಸೋಲು ಅನುಭವಿಸಿದ್ದ ಎ.ಆರ್.ಕೃಷ್ಣಮೂರ್ತಿ ಅವರಿಗೆ ಕೊಳ್ಳೇಗಾಲದ ಮತದಾರ ಭರ್ಜರಿ ಗೆಲುವನ್ನೇ ಕೊಟ್ಟಿದ್ದಾನೆ.

    ಹಾಲಿ ಬಿಜೆಪಿ (BJP)ಶಾಸಕ ಎನ್.ಮಹೇಶ್ ವಿರುದ್ಧ ಕಾಂಗ್ರೆಸ್ (Congress) ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಬರೋಬ್ಬರಿ 59,519 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ನಿರಂತರ ಸೋಲಿಗೆ ಫುಲ್ ಸ್ಟಾಪ್ ಇಟ್ಟು ರಾಜಕೀಯದಲ್ಲಿ ಮತ್ತೇ ಮೇಲೆದ್ದಿದ್ದಾರೆ. ಈ ಗೆಲುವು ಅವರ ಒಂದು ಮತದಿಂದ ಸೋತ ನೋವನ್ನು ಮರೆಸಿದೆ. ಬಿಎಸ್‌ಪಿ (BSP) ಬೆಂಬಲ, ಅನುಕಂಪ, ಜೊತೆಗೆ ಮಹೇಶ್ ಅವರಿಗಿದ್ದ ವ್ಯಾಪಕ ವಿರೋಧ ಎ.ಆರ್.ಕೃಷ್ಣಮೂರ್ತಿಯವರಿಗೆ ಅನುಕೂಲವಾಗಿದೆ. ಇದು ಮತಪೆಟ್ಟಿಗೆಯಲ್ಲಿ ಕೆಲಸ ಮಾಡಿದೆ. ಇದನ್ನೂ ಓದಿ: ಕಾಂಗ್ರೆಸ್ ಗೆದ್ದ ಬೆನ್ನಲ್ಲೇ ಕೇಸರಿ ಧ್ವಜದ ಪಕ್ಕ ಇಸ್ಲಾಂ ಬಾವುಟ ಹಾರಿಸಿದ ಯುವಕ

    ಇದಕ್ಕೆ ಪ್ರತಿಕ್ರಿಯಿಸಿರುವ ಕೃಷ್ಣಮೂರ್ತಿಯವರು, ಒಂದು ಮತದ ಅಂತರದಿಂದ ಸೋತ ನನಗೆ ಅಂತರ ಮುಖ್ಯವಲ್ಲ, ಗೆಲುವು ಮುಖ್ಯವಾಗಿದೆ. ಈಗ 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಈ ವಿಚಾರ ನನಗೆ ಖುಷಿ ತಂದಿದೆ. ಮತದಾರರು ನನಗೆ ಆಶಿರ್ವಾದ ಮಾಡಿದ್ದಾರೆ ಎಂದಿದ್ದಾರೆ.

    ಅವರು 1,08,363 ಮತಗಳನ್ನು ಗಳಿಸಿದ್ದಾರೆ. ಎನ್ ಮಹೇಶ್ 48,844 ಮತಗಳನ್ನು ಗಳಿಸಿ ಸೋಲು ಕಂಡಿದ್ದಾರೆ. 2004ರ ಚುನಾವಣೆಯಲ್ಲಿ ಕೃಷ್ಣಮೂರ್ತಿಯವರು ಒಂದು ಮತದಿಂದ ಸೋತಿದ್ದರು. ಇದೀಗ ದಾಖಲೆಯ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಬಿಜೆಪಿಗೆ 6ರಲ್ಲಿ ಜಯ – 2ರಲ್ಲಿ ಕಾಂಗ್ರೆಸ್ ಗೆಲುವು

  • ಮಂಡ್ಯ ಜೆಡಿಎಸ್ ಕೋಟೆಯನ್ನು ಪುಡಿಗೈದ ಕಾಂಗ್ರೆಸ್

    ಮಂಡ್ಯ ಜೆಡಿಎಸ್ ಕೋಟೆಯನ್ನು ಪುಡಿಗೈದ ಕಾಂಗ್ರೆಸ್

    ಮಂಡ್ಯ: ಕಳೆದ ಬಾರಿ 7ಕ್ಕೆ 7 ಕ್ಷೇತ್ರಗಳನ್ನು ಗೆದ್ದಿದ್ದ ಜೆಡಿಎಸ್ ಈ ಬಾರಿ ಕೇವಲ 1 ಸ್ಥಾನವನ್ನು ಮಾತ್ರ ಗೆದ್ದುಕೊಂಡಿದೆ.

    ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ಮತಗಳನ್ನು ವೃದ್ಧಿಸಿಕೊಂಡಿದ್ದು ಕಾಂಗ್ರೆಸ್ ಗೆಲುವಿಗೆ ಸಹಕಾರವಾಗಿದೆ. ಕಾಂಗ್ರೆಸ್ಸಿನ 5 ಮಂಂದಿ ಜೊತೆ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ. ಇದನ್ನೂ ಓದಿ: ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಐದು ಗ್ಯಾರಂಟಿ ಜಾರಿ : ಸಿದ್ದರಾಮಯ್ಯ

    ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿಕುಮಾರ್ ಗೌಡ 60,845 ಮತಗಳನ್ನು ಗಳಿಸಿ ಜಯಗಳಿಸಿದ್ದಾರೆ. ಜೆಡಿಎಸ್ ಬಿ.ಆರ್ ರಾಮಚಂದ್ರ ಅವರು 58,996 ಮತಗಳನ್ನು ಗಳಿಸಿ ಸೋಲು ಕಂಡರು. ಬಿಜೆಪಿ ಅಶೋಕ್ ಜಯರಾಂ 30,240 ಮತ ಗಳಿಸಿ ಪೈಪೋಟಿ ನೀಡಿದ್ದಾರೆ. ಗಣಿಗ ರವಿಕುಮಾರ್ ಅವರು 1,849 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

    ಕೆ.ಆರ್.ಪೇಟೆ ಜೆಡಿಎಸ್ ಅಭ್ಯರ್ಥಿ ಹೆಚ್.ಟಿ ಮಂಜು ಅವರು 79,844 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ. ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್ ದೇವರಾಜ್ ಅವರು 57,939 ಮತಗಳನ್ನು ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆಸಿ ನಾರಾಯಣ ಗೌಡ 37,793 ಮತಗಳಿಸಿದ್ದಾರೆ. 21,905 ಮತಗಳ ಅಂತರದಲ್ಲಿ ಹೆಚ್ ಟಿ ಮಂಜು ಗೆಲುವು ಸಾಧಿಸಿದ್ದಾರೆ.

    ನಾಗಮಂಗಲ: ಕಾಂಗ್ರೆಸ್ ಅಭ್ಯರ್ಥಿ ಚಲುವರಾಯಸ್ವಾಮಿ 89,801 ಮತಗಳಿಸಿ ಜಯ ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ಅವರು 85,688 ಮತಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸುಧಾ ಶಿವರಾಮ್ 7,683 ಮತ ಗಳಿಸಿದ್ದಾರೆ. 4,113 ಮತಗಳ ಅಂತರದಲ್ಲಿ ಚೆಲುವರಾಯಸ್ವಾಮಿ ಗೆಲುವು ಸಾಧಿಸಿದ್ದಾರೆ.

    ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯ 90,387 ಮತಗಳಿಸಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಿ.ಎಸ್ ಪುಟ್ಟರಾಜು ಅವರು 79,424 ಮತಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ.ಇಂದ್ರೇಶ್ 6,378 ಮತಗಳಿಸಿದ್ದಾರೆ. 10,963 ಮತಗಳ ಅಂತರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಗೆಲುವು ಸಾಧಿಸಿದ್ದಾರೆ.

    ಮಳವಳ್ಳಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿಎಂ ನರೇಂದ್ರ ಸ್ವಾಮಿ ಗೆಲುವು ಸಾಧಿಸಿದ್ದಾರೆ. ಇವರಿಗೆ ಜೆಡಿಎಸ್ ಅಭ್ಯರ್ಥಿ ಡಾ.ಕೆ ಅನ್ನದಾನಿ ಪೈಪೋಟಿ ನೀಡಿದ್ದಾರೆ.

    ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಂಡಿಸಿದ್ದೇಗೌಡ 72,234 ಮತಗಳಿಸಿ ಜಯ ಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಅವರು 61,273 ಮತಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ಅವರು 42,079 ಮತಗಳಿಸಿದ್ದಾರೆ. ಕಾಂಗ್ರೆಸ್ 10,961 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು?