Tag: ಕನಸು ರಮೇಶ್

  • ‘ಒಂದು ಮದುವೆ ಕಥೆ’ ಸಿನಿಮಾಗೆ ಮುಹೂರ್ತ

    ‘ಒಂದು ಮದುವೆ ಕಥೆ’ ಸಿನಿಮಾಗೆ ಮುಹೂರ್ತ

    ಸಂಪೂರ್ಣ ಹಾಸ್ಯ ಕಥೆ ಹೊಂದಿರುವ ’ಒಂದು ಮದುವೆ ಕಥೆ’ (Ondu Maduve Kathe) ಚಿತ್ರದ ಮುಹೂರ್ತ ಸಮಾರಂಭವು ಶ್ರೀ ಬಂಡೆ ಮಹಾಂಕಾಳಿ ಅಮ್ಮನ ಸನ್ನಿದಿಯಲ್ಲಿ ಅದ್ದೂರಿಯಾಗಿ ನಡೆಯಿತು. ಉದ್ಯಮಿ ಬಿ.ಎಂ.ಉಮೇಶ್ ಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ‘ತಪ್ದೇ ಎಲ್ಲರೂ ಬನ್ನಿ’ ಎಂಬ ಅಡಿಬರಹವಿದೆ. ಉದ್ಯಮಿ ಬೆಂಗಳೂರಿನ ವಿಜಿಯೇಂದ್ರಗೌಡ ಬಂಡವಾಳ ಹೂಡುತ್ತಿದ್ದಾರೆ. ರಾಯಚೂರು ಮೂಲದ ಟಿ.ಹೆಚ್.ಡುಳ್ಳಯ್ಯ ತುರುಕನ ಡೋಣ ಮತ್ತು ರಮೇಶ  ಸಲ್ಲೇದ ಉದ್ಬಾಲ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸುಮಾರು 250ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿರುವ ಹಿರಿಯ ರಂಗಕರ್ಮಿ ಕನಸು ರಮೇಶ್ (Kanasu Ramesh) ಎರಡನೇ ಅನುಭವ ಎನ್ನುವಂತೆ ಸಿನಿಮಾಕ್ಕೆ ರಚನೆ,ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

    ರಾತ್ರಿಯಿಂದ ನಾಳೆ ಸಾಯಂಕಾಲದವರೆಗೆ ನಡೆಯುವ ಘಟಾವಳಿಗಳು ನಗುವಂತೆ ಮಾಡುತ್ತದೆ. ಬದುಕಿನಲ್ಲಿ ಗಂಡು-ಹೆಣ್ಣುಗೆ ತಿರುವು ಅಂತ ಬರೋದು ಮದುವೆ ಆದಾಗ ಮಾತ್ರ. ಅದು ಆಗೋದಕ್ಕೆ ಏನೆಲ್ಲಾ ಪ್ರಯತ್ನಗಳು ನಡೆಯುತ್ತವೆ. ಯಾರ‍್ಯಾರು ಅಡ್ಡಿಪಡಿಸುತ್ತಾರೆ. ಇವತ್ತಿನ ವಸ್ತುಸ್ಥಿತಿಯಲ್ಲಿ ಹೆಣ್ಣು ಭ್ರೂಣಹತ್ಯೆಯಿಂದ ಹಳ್ಳಿಗಳಲ್ಲಿ ಹುಡುಗರಿಗೆ ಹುಡುಗಿ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ವಯಸ್ಸಾದವನಿಗೆ ಮದುವೆ ನಿಶ್ಚಯವಾಗುತ್ತದೆ. ಇದರಿಂದ ಅಲ್ಲಿದ್ದವರಿಗೆಲ್ಲಾ ಕುತೂಹಲ ಹೆಚ್ಚಾಗಿ ಆಹ್ವಾನವಿಲ್ಲದಿದ್ದರೂ ಕಲ್ಯಾಣ ಮಂಟಪಕ್ಕೆ ಬರುತ್ತಾರೆ. ಮುಂದೆ ಆಗಬಹುದಾದ ಘಟನೆಗಳು, ದಲ್ಲಾಳಿಗಳ ಆಟಾಟೋಪ, ಸರ್ಕಾರಿ ನೌಕರಿ ಇರುವವರಿಗೆ ಮಾತ್ರ ಹೆಣ್ಣು ಕೊಡುವುದು ಎಂಬ ಪೋಷಕರ ಧೋರಣೆ. ಇವೆಲ್ಲವು ಕಾಮಿಡಿ ರೂಪದಲ್ಲಿ ಸಾಗುತ್ತದೆ. ಪ್ರತಿಯೊಂದು ಹಂತದಲ್ಲಿ ಸಮಾಜಕ್ಕೆ ಸಂದೇಶ ಸಾರುವ ಹಾಗೂ ಸಿನಿಮಾವು ಕಾಲ್ಪನಿಕ ಆದರೂ ವಾಸ್ತವ ಎನ್ನುವಂತ ದೃಶ್ಯಗಳು ಇರುತ್ತದೆ. ಕ್ಲೈಮಾಕ್ಸ್‌ದಲ್ಲಿ ಆತ ತಾಳಿ ಕಟ್ಟುತ್ತಾನಾ ಇಲ್ಲವಾ ಎಂಬುದು ಒಂದು ಏಳೆಯ ಸಾರಾಂಶವಾಗಿದೆ.

    ರವಿಸಿರಿ, ಗಹನ ಮುಖ್ಯ ಪಾತ್ರದಲ್ಲಿದ್ದರೂ, ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ’ಬೌ ಬೌ ಬಿರಿಯಾನಿ’ ಖ್ಯಾತಿಯ ಜಯರಾಮ್ ಮೊದಲ ಬಾರಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಪೋಷಕ ಕಲಾವಿದರುಗಳು ಇಡೀ ಚಿತ್ರವನ್ನು ತೆಗೆದುಕೊಂಡು ಹೋಗುವುದು ವಿಶೇಷ. ಬಹುತೇಕ ಹಾಸ್ಯ ಕಲಾವಿದರ ದಂಡೇ ಇರಲಿದೆ. ತಾರಾಗಣದಲ್ಲಿ ಗಣೇಶ್‌ರಾವ್‌ಕೇಸರ್‌ಕರ್, ಕಿಲ್ಲರ್‌ವೆಂಕಟೇಶ್, ಮಿಮಿಕ್ರಿಗೋಪಿ, ರಂಜನ್‌ಸನತ್, ’ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಜಗ್ಗಪ್ಪ, ಸುಶ್ಮಿತ ಜಗ್ಗಪ್ಪ, ಗಿಲ್ಲಿನಟ ಇವರೊಂದಿಗೆ ಸಂತನಟರಾಜ್, ಸಿಲ್ಲಿಲಲ್ಲಿ ಶ್ರೀನಿವಾಸಗೌಡ, ಸಾಹಳ್ಳಿ ರಮೇಶ್, ಅನಿಲ್‌ಕುಮಾರ್, ಪ್ರಸನ್ನ, ಸುಜಾತ ಹಿರೇಮಠ್ ಮುಂತಾದವರು ನಟಿಸುತ್ತಿದ್ದಾರೆ.

    ರವಿಕುಮಾರ್ ಕಪ್ಪುಸೋಗೆ ಸಾಹಿತ್ಯದ ಮೂರು ಹಾಡುಗಳಿಗೆ ಮನು ರಾವ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ದೀಪಕ್‌ಕುಮಾರ್.ಜೆ.ಕೆ, ಸಂಕಲನ ಜಾಬ್ಸನ್, ಸಂಭಾಷಣೆ ದಿಲೀಪ್‌ಸಂಜೀವ್ ಅವರದಾಗಿದೆ. ಮೈಸೂರು ಮತ್ತು ಮಂಡ್ಯ ಸುಂದರ ತಾಣಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

  • ‘ಅಯುಕ್ತ’ ಟೀಸರ್ ಬಿಡುಗಡೆ ಮಾಡಿದ ಲಹರಿ ವೇಲು

    ‘ಅಯುಕ್ತ’ ಟೀಸರ್ ಬಿಡುಗಡೆ ಮಾಡಿದ ಲಹರಿ ವೇಲು

    ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ಅಯುಕ್ತ’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವು ಕಲಾವಿದರ ಸಂಘದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಲಹರಿವೇಲು ಮಾತನಾಡಿ ಇವತ್ತು ತುಂಬಾ ಭಾವುಕನಾಗಿದ್ದೇನೆ. ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯವೈಖರಿಯನ್ನು ಮೆಚ್ಚಲೇ ಬೇಕಾಗಿದೆ. ಅನಾಥ ಶವಗಳಿಗೆ ಮುಕ್ತಿ ನೀಡುವ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಇಂತಹವರಿಗೆ ಎಲ್ಲರ ಬೆಂಬಲ ಬೇಕಾಗಿದೆ. ಟೀಸರ್ ನೋಡಿದಾಗ ಹೊಸಬರ ಚಿತ್ರ ಅನಿಸಿವುದಿಲ್ಲ. ಒಳ್ಳೆಯದಾಗಲಿ ಎಂದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.

    ರಚನೆ,ಚಿತ್ರಕಥೆ ಮತ್ತು ನಿರ್ದೇಶನ ಮಾಡಿರುವ ಕನಸು ರಮೇಶ್ ಹೇಳುವಂತೆ ಈ ಹಿಂದೆ ಸುಮಾರು 250 ನಾಟಕಗಳನ್ನು ನಿರ್ದೇಶಿಸಿದ ಅನುಭವವಿದೆ. ಆದ್ದರಿಂದಲೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಸುಲಭವಾಯಿತು. ಸಿನಿಮಾದ ಕುರಿತು ಹೇಳುವುದಾದರೆ ಸಂಪಾದನೆಗೋಸ್ಕರ ಪದವಿ ಮಾಡಬೇಡಿ. ಜ್ಞಾನಾರ್ಜನೆಗೋಸ್ಕರ ಡಿಗ್ರಿ ಮಾಡುವುದು ಒಳಿತು. ಪೋಷಕರು ತಮ್ಮ ಧೋರಣೆಯನ್ನು ನೋಡದೆ ಮಕ್ಕಳು ಇಷ್ಟಪಡುವಂತ ಕೆಲಸಕ್ಕೆ ಸ್ವಾತಂತ್ರ ಕೊಡಬೇಕು. ಅದನ್ನು ಅನುಸರಿಸದೆ ಬಲವಂತ ಮಾಡಿದಾಗ, ಮಕ್ಕಳು ಯಾವ ರೀತಿ ದಿಕ್ಕು ತಪ್ಪುತ್ತಾರೆ. ಕೊನೆಗೆ ಏನಾಗುತ್ತಾರೆ ಎಂಬುದನ್ನು ಸೆಸ್ಪನ್ಸ್, ಥ್ರಿಲ್ಲರ್ ಹಾಗೂ ಪ್ರೀತಿಯೊಂದಿಗೆ ಹೇಳಲಾಗಿದೆ. ನೂರಾರು ತಿರುವುಗಳು ಇರಲಿದ್ದು ಒಂದೊಂದು ತಿರುವುಗಳಿಗೂ ಕಥೆ ಇರಲಿದೆ. ಮಂಡ್ಯ, ಕಿರುಗಾವಲು. ಮಳವಳ್ಳಿ, ಬೆಳಕವಾಡಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಾದ್ಯಮದ ಸಹಕಾರ ಬೇಕೆಂದು ಕೋರಿದರು. ಇದನ್ನೂ ಓದಿ:ಕಿಚ್ಚ ಸುದೀಪ್- ರಕ್ಷಿತ್ ಶೆಟ್ಟಿ ನಡುವೆ ಏನಿದು ಕೋಲ್ಡ್ ವಾರ್!

    ಫಯುಸುಪಿಯಾನ್, ಅದ್ದೂರಿಬಸವ, ರಮೇಶ್, ಜಾನ್ಸನ್, ರುತ್ವಿಕಾ, ಸೌಂದರ್ಯಗೌಡ, ಚನ್ನಬಸಪ್ಪ ಮುಂತಾದವರು ಪಾತ್ರದ ಪರಿಚಯ ಮಾಡಿಕೊಂಡು ಅವಕಾಶ ನೀಡಿದ್ದಕ್ಕೆ ಧನ್ಯವಾದ ತಿಳಿಸಿದರು. ಬಾಲಾಜಿ ಕ್ರಿಯೇಶನ್ಸ್ ಅಡಿಯಲ್ಲಿ ವಿಶ್ವಾಸ್ ಆರ್.ಗಂಗಡ್ಕರ್ ನಿರ್ಮಾಣ ಮಾಡಿದ್ದಾರೆ. ಸಂಗೀತ ವಿಲಿಯಂದೃತ್, ಛಾಯಾಗ್ರಹಣ ಅರಸಿಕೆರೆ ದೀಪು, ಸಂಕಲನ ನಿಶಿತ್‌ ಪೂಜಾರಿ ಅವರದಾಗಿದೆ.

    Live Tv
    [brid partner=56869869 player=32851 video=960834 autoplay=true]