Tag: ಕನಕಪುರ

  • ತಾಯಿ ಕಳೆದುಕೊಂಡ ನೋವಲ್ಲಿ ಏಕಾಂಗಿಯಾಗಿ ಅಲೆಯುತ್ತಿದ್ದ ಆನೆ ಮರಿ ರಕ್ಷಣೆ

    ತಾಯಿ ಕಳೆದುಕೊಂಡ ನೋವಲ್ಲಿ ಏಕಾಂಗಿಯಾಗಿ ಅಲೆಯುತ್ತಿದ್ದ ಆನೆ ಮರಿ ರಕ್ಷಣೆ

    ರಾಮನಗರ: ತಾಯಿ ಆನೆಯನ್ನು ಕಳೆದುಕೊಂಡ ನೋವಲ್ಲಿ ಏಕಾಂಗಿಯಾಗಿ ಅಲೆಯುತ್ತಿದ್ದ ಆನೆ ಮರಿಯನ್ನು ಕನಕಪುರದ ಕೊಂಡನಗುಂದಿಗೆ ರೈತರು ರಕ್ಷಣೆ ಮಾಡಿದ್ದಾರೆ.

    ಸಂಗಮ ವಲಯಾರಣ್ಯದ ಕುದುರೆ ಹಾದಿಯಲ್ಲಿ ಬರುವಾಗ ತಾಯಿಯಾನೆ ಕಾಲುಜಾರಿ ಸಾವನ್ನಪ್ಪಿತ್ತು. ಅನಾಥವಾದ ಮರಿ ಮೂರು ದಿನಗಳಿಂದ ಕಾಡಿನಲ್ಲಿ ಅಲೆದು ಅಲೆದು ಸುಸ್ತಾಗಿತ್ತು. ಇದನ್ನು ಹಸು ಮೇಯಿಸಲು ಹೋದವರು ಗಮನಿಸಿ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಗಣಪತಿ ಶೋಭಾಯಾತ್ರೆ ವೇಳೆ ರಾಷ್ಟ್ರೀಯ ಲಾಂಛನಕ್ಕೆ ಅಪಮಾನ

    ತಾಯಿಗಾಗಿ ಕಣ್ಣೀರಿಟ್ಟು ನಿತ್ರಾಣ ಸ್ಥಿತಿಯಲ್ಲಿದ್ದ ಆನೆ ಮರಿಗೆ ಹಾಲು, ಆಹಾರ ನೀಡಿ ಮೈತೊಳೆದು ರಾತ್ರಿಯಿಡಿ ಆರೈಕೆ ಮಾಡಿದ್ದಾರೆ. ಸ್ವಲ್ಪ ಚೇತರಿಸಿಕೊಂಡ ಮೇಲೆ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸದ್ಯ ಆನೆ ಮರಿಗೆ ಮುತ್ತತ್ತಿ ಚೆಕ್ ಪೋಸ್ಟ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಮಕ್ಕಳಂತೆ ಚೆಲ್ಲಾಟವಾಡುತ್ತಾ ಕಾಲ ಕಳೆಯುತ್ತಿರುವ ಮರಿ ಆನೆಯನ್ನ ಕಂಡು ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ. ಆನೆ ಮರಿ ಜತೆಗೆ ಆಟವಾಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ACB ರದ್ದು ತೀರ್ಪಿನ ಅನುಷ್ಠಾನ‌ ಮಾಡಿ ಸರ್ಕಾರದಿಂದ ಆದೇಶ

    Live Tv
    [brid partner=56869869 player=32851 video=960834 autoplay=true]

  • ಡಿಕೆಶಿ ರಾಜಕೀಯ ಸಾಮರ್ಥ್ಯ ಕನಕಪುರಕಷ್ಟೆ: ಸಿಟಿ ರವಿ

    ಡಿಕೆಶಿ ರಾಜಕೀಯ ಸಾಮರ್ಥ್ಯ ಕನಕಪುರಕಷ್ಟೆ: ಸಿಟಿ ರವಿ

    ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವೈಯಕ್ತಿಕ ಸಾಮರ್ಥ್ಯದ ಬಗ್ಗೆ ಮಾತನಾಡಲ್ಲ. ಆದರೆ, ಅವರ ರಾಜಕೀಯ ಸಾಮರ್ಥ್ಯ ಕೇವಲ ಕನಕಪುರಕಷ್ಟೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಡಿ.ಕೆ.ಶಿವಕುಮಾರ್‌ಗೆ ಟಾಂಗ್ ನೀಡಿದರು.

    ಪಬ್ಲಿಕ್ ಟಿವಿಯ ಸಂದರ್ಶನದಲ್ಲಿ ಮಾತನಾಡಿದ್ದ ಡಿ.ಕೆ.ಶಿವಕುಮಾರ್, 2022 ಆಗಸ್ಟ್ ಬಳಿಕ ಬಿಜೆಪಿ ನನ್ನನ್ನು ಟಾರ್ಗೆಟ್ ಮಾಡುತ್ತದೆ ಎಂದು ಹೇಳಿದ್ದರು. ಡಿಕೆಶಿಯವರ ಈ ಹೇಳಿಕೆಗೆ ನಗರದ ಸಿಂಡಿಕೇಟ್ ಸರ್ಕಲ್‍ನಲ್ಲಿ ಮಾತನಾಡಿದ ಅವರು, ದೇಶದ ಜನರೇ ಕಾಂಗ್ರೆಸನ್ನು ಟಾರ್ಗೆಟ್ ಮಾಡಿದ್ದಾರೆ. ನಮಗೆ ಡಿ.ಕೆ.ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡುವ ಅವಶ್ಯಕತೆ ಇಲ್ಲ ಎಂದು ವ್ಯಂಗ್ಯ ಮಾಡಿದರು.

    ಡಿ.ಕೆ.ಶಿವಕುಮಾರ್ ಅವರು, ತಮ್ಮನ್ನು ತಾವು ವೈಭವೀಕರಿಸಿಕೊಳ್ಳಬಹುದು. ನಾನು ಅವರ ವೈಯಕ್ತಿಕ ಸಾಮರ್ಥ್ಯದ ಬಗ್ಗೆ ಮಾತನಾಡಲ್ಲ. ಪ್ರಶ್ನೆ ಮಾಡಲ್ಲ. ಆದರೆ, ಅವರ ರಾಜಕೀಯ ಸಾಮರ್ಥ್ಯ ಸಾಬೀತು ಮಾಡಿರೋದು ಕೇವಲ ಕನಕಪುರದಲ್ಲಷ್ಟೆ ಎಂದ ಅವರು, ಉಪ್ಪು ತಿಂದವರು ನೀರು ಕುಡಿಯುತ್ತಾರೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಅವರು ಏನೂ ತಪ್ಪು ಮಾಡಿಲ್ಲ ಎಂದಾದರೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.

    ಒಂದು ರಾಜಕೀಯ ಪಕ್ಷದಲ್ಲಿ ಇದ್ದೇನೆ ಎಂದು ಶೆಲ್ಟರ್ ತೆಗೆದುಕೊಳ್ಳಲು ಆಗುವುದಿಲ್ಲ. ತಪ್ಪು ಮಾಡದೆ ಜೈಲಿಗೆ ಹೋದರೆ ಅದೊಂದು ಶಕ್ತಿಯಾಗುತ್ತದೆ. ತಪ್ಪು ಮಾಡಿದವರದ್ದು ರಾಜಕೀಯ ಅಂತ್ಯವಾಗುತ್ತದೆ ಎಂದು ಹೇಳಿದರು.

    ಬಿಜೆಪಿಗೆ ಡಿಕೆಶಿಯವರನ್ನು ಟಾರ್ಗೆಟ್ ಮಾಡುವ ಅವಶ್ಯಕತೆ ಇಲ್ಲ. ದೇಶದ ಜನರೇ ಕಾಂಗ್ರೆಸನ್ನು ಟಾರ್ಗೆಟ್ ಮಾಡಿದ್ದಾರೆ. ಉತ್ತರಪ್ರದೇಶದಲ್ಲಿ ಮೈ ಲಡಕಿ ಹೂಂ, ಲಡ್ ಸಕ್ತಾ ಹೈ ಹೇ ಎಂದು ಪ್ರಿಯಾಂಕ ಗಾಂಧಿ ಅವರೇ ಚುನಾವಣೆ ನೇತೃತ್ವ ವಹಿಸಿದ್ದರು. ಅದು ಏನಾಯ್ತು. 387 ಕ್ಷೇತ್ರದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿತು ಎಂದು ಕಾಂಗ್ರೆಸ್ ಕಾಲೆಳೆದರು. ಇದನ್ನೂ ಓದಿ: ರೈತ ಸಂಘದಿಂದ ಕೊಡಗು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ

    ಕಾಂಗ್ರೆಸ್ ಅವರೇ ಅಧಿಕಾರದಲ್ಲಿದ್ದ ಪಂಜಾಬ್‍ನಲ್ಲಿ ಹೀನಾಯವಾಗಿ ಸೋತರು. ಆಮ್ ಆದ್ಮಿ ಪಕ್ಷಕ್ಕೆ ರೆಡ್ ಕಾರ್ಪೆಟ್ ಹಾಸಿ ಕಕೊರ್ಂಡ್ ಬಂದು ಕೂರಿಸಿದ್ದಾರೆ. ದೇಶದ ಜನರೇ ಕಾಂಗ್ರೆಸ್ ಪಕ್ಷವನ್ನ ಟಾರ್ಗೆಟ್ ಮಾಡಿರುವಾಗ, ಡಿಕೆಶಿ ಟಾರ್ಗೆಟ್ ಮಾಡಿ ಏನಾಗಬೇಕೆಂದು ಪ್ರಶ್ನಿಸಿದರು. ಇದನ್ನೂ ಓದಿ: ಚಂಡಮಾರುತ ಎಫೆಕ್ಟ್- ಸಮುದ್ರದಲ್ಲಿ ತೇಲಿ ಬಂತು ಚಿನ್ನದ ರಥ!

  • ಕನಕಪುರದಲ್ಲಿ ಕಲ್ಲು ಕರಗಿಸಿದ ರೌಡಿ ಸಹೋದರರು, ಬೀದಿಯಲ್ಲಿ ಭಾರತದ ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ: ಬಿಜೆಪಿ

    ಕನಕಪುರದಲ್ಲಿ ಕಲ್ಲು ಕರಗಿಸಿದ ರೌಡಿ ಸಹೋದರರು, ಬೀದಿಯಲ್ಲಿ ಭಾರತದ ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ: ಬಿಜೆಪಿ

    – ವಿದೇಶಾಂಗ ನೀತಿ ಎಂದರೆ ಕದ್ದು ಗ್ರಾನೈಟ್ ವ್ಯಾಪಾರ ಮಾಡುವಂಥದಲ್ಲ

    ಬೆಂಗಳೂರು: ಉಕ್ರೇನ್ ವಿಚಾರದಲ್ಲಿ ಭಾರತದ ವಿದೇಶಾಂಗ ನೀತಿ ವಿಫಲವಾಗಿದೆ ಎಂದು ಸಂಸದ ಡಿ.ಕೆ ಸುರೇಶ್ ಅವರು ಹೇಳಿದ್ದರು. ಮೋದಿ ಸರ್ಕಾರದ ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವ ಡಿ.ಕೆ ಸುರೇಶ್ ಅವರ ಹೇಳಿಕೆ ಕುರಿತಾಗಿ ಬಿಜೆಪಿ ಸರಣಿ ಟ್ವೀಟ್ ಮಾಡುವ ಮೂಲವಾಗಿ ಆಕ್ರೋಶ ಹೊರಹಾಕಿದೆ.

    ಟ್ವೀಟ್‍ನಲ್ಲಿ ಏನಿದೆ?: ರಾಜ್ಯದ ಕಾಂಗ್ರೆಸ್ಸಿನ ಏಕೈಕ ಸಂಸದ ಡಿ.ಕೆ. ಸುರೇಶ್ ಅವರೇ, ವಿದೇಶಾಂಗ ನೀತಿ ಎಂದರೆ ಹಾದಿಬೀದಿಯಲ್ಲಿ ನಿಂತು ಮಾತನಾಡುವ ವಿಚಾರವಲ್ಲ. ಅದು ಕಪ್ಪು ಹಣ ಸಂಗ್ರಹಿಸಿ ತಿಹಾರ್ ಜೈಲು ಸೇರಿದ ನಿಮ್ಮ ಸಹೋದರನಿಗೆ ಜಾಮೀನು ಪಡೆದಂತಲ್ಲ. ರಾಜತಾಂತ್ರಿಕ ವಿಚಾರವನ್ನು ಹೇಗೆ ನಿಭಾಯಿಸಬೇಕೆಂದು ಮೋದಿ ಸರ್ಕಾರ ನಿಮ್ಮಿಂದ ಕಲಿಯಬೇಕಾದ್ದೇನಿಲ್ಲ ಎಂದು ಕಿಡಿ ಕಾರಿದೆ.

    ಕನಕಪುರದಲ್ಲಿ ಕಲ್ಲು ಕರಗಿಸಿದ ರೌಡಿ ಸಹೋದರರು, ಈಗ ಹಾದಿಬೀದಿಯಲ್ಲಿ ನಿಂತು ಭಾರತದ ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ. ವಿದೇಶಾಂಗ ನೀತಿ ಎಂದರೆ ಕದ್ದು ಗ್ರಾನೈಟ್ ವ್ಯಾಪಾರ ಮಾಡುವಂಥದಲ್ಲ, ಕಂಡವರ ಭೂಮಿಗೆ ಬೇಲಿ ಸುತ್ತುವುದಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ಧಾಳಿ ಮಾಡಿದ್ದಾರೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

    ಪುಡಿ ರೌಡಿಗಳ ಗುಂಪು ಕಟ್ಟಿಕೊಂಡು ಸರ್ಕಾರಿ ಕಾರ್ಯಕ್ರಮದಲ್ಲಿ ದಾಂಧಲೆ ಸೃಷ್ಟಿಸುವುದೂ ಅಲ್ಲ. ಮೋದಿ ಸರ್ಕಾರದ ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವ ಡಿ.ಕೆ ಶುರೇಶ್ ಅವರೇ, ನಿಮ್ಮ ಐವತ್ತು ವರ್ಷದ ರಾಷ್ಟ್ರೀಯ ಯುವ ನಾಯಕ ಚೀನಾ ದೇಶದ ಜೊತೆ ರಹಸ್ಯ ಒಪ್ಪಂದಕ್ಕೆ ಸಹಿ ಹಾಕಿ ಬಂದರಲ್ಲ, ಅದು ಯಾವ ವಿದೇಶಾಂಗ ನೀತಿ? ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿ ನೆರೆ ರಾಷ್ಟ್ರದ ಜೊತೆಗೆ ಗುಪ್ತ ಒಡನಾಟ ಇಟ್ಟುಕೊಳ್ಳುವ ಬಗ್ಗೆ ನಿಮ್ಮ ನಿಲುವೇನು? ಎಂದು ಕಾಂಗ್ರೆಸ್‍ಗೆ ಪ್ರಶ್ನೆ ಮಾಡಿದ್ದಾರೆ.

    ರಾಹುಲ್ ಗಾಂಧಿಯವರು ಚೀನಾ ಜೊತೆ ಒಪ್ಪಂದವೊಂದಕ್ಕ ಮಾಡಿದ ಸಹಿ ಯಾವ ವಿಚಾರಕ್ಕೆ? ಕನಕಪುರದ ಬಂಡೆ ಮಕ್ಕಳು ಕದ್ದು ಸಂಗ್ರಹಿಸಿರುವ ಗ್ರಾನೈಟ್ ಕಲ್ಲಿನ ರಫ್ತಿಗೆ ಚೀನಾ ಜೊತೆ ಮಾಡಿಕೊಂಡ ಒಡಂಬಡಿಕೆ ಅದಾಗಿರಬಹುದೇ? ಎಂದು ಟ್ವೀಟ್ ಮಾಡುವ ಮೂಲಕವಾಗಿ ಕಾಂಗ್ರೆಸ್‍ಗೆ ಬಿಸಿ ಮುಟ್ಟಿಸಿದ್ದಾರೆ.

  • ಡಿ.ಕೆ. ಶಿವಕುಮಾರ್ ಅವರ ಶತಾಯುಷಿ ಅಜ್ಜಿ ನಿಂಗಮ್ಮ ಇನ್ನಿಲ್ಲ

    ಡಿ.ಕೆ. ಶಿವಕುಮಾರ್ ಅವರ ಶತಾಯುಷಿ ಅಜ್ಜಿ ನಿಂಗಮ್ಮ ಇನ್ನಿಲ್ಲ

    ಬೆಂಗಳೂರು: ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಅವರ ಅಜ್ಜಿ ನಿಂಗಮ್ಮ ಅವರು ಕನಕಪುರದ ಹಾರೋಹಳ್ಳಿಯ ದಯಾನಂದಸಾಗರ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗಿವ ಜಾವ ನಿಧನರಾಗಿದ್ದಾರೆ.

    ನಿಂಗಮ್ಮ ಅವರಿಗೆ (106) ವರ್ಷಗಳಾಗಿದ್ದು, ಅವರ ಅಂತ್ಯಕ್ರಿಯೆ ಕನಕಪುರದ ಸಾತನೂರಿನ ದೊಡ್ಡಾಲಹಳ್ಳಿಯಲ್ಲಿ ಶುಕ್ರವಾರ ಸಂಜೆ 4.30ಕ್ಕೆ ನಡೆಯಲಿದೆ. ಸದ್ಯ ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರದ ಕಲಾಪದಲ್ಲಿ ಭಾಗವಹಿಸುವುದನ್ನು ಮೊಟಕುಗೊಳಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ 150 ಹಂದಿಗಳ ಸಜೀವ ದಹನ ಮಾಡಿದ ದುಷ್ಕರ್ಮಿಗಳು!

    ಕೂಡಲೇ ಬೆಳಗಾವಿಯಿಂದ 12 ಗಂಟೆ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ ನಂತರ ಅಲ್ಲಿಂದ ದೊಡ್ಡಾಲಹಳ್ಳಿಗೆ ತೆರಳಿ, ಅಜ್ಜಿಯವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ನಂಬರ್ ನಕಲು ಮಾಡಿ ಜಾಕ್ವೆಲಿನ್ ಸ್ನೇಹ ಮಾಡಿದ್ದ ವಂಚಕ ಸುಕೇಶ್

  • ಕಾರ್ ಸ್ಫೋಟ ಪ್ರಕರಣ, ಕ್ವಾರಿಯಲ್ಲಿ ಜಿಲೆಟಿನ್ ಬಳಸ್ತಿರಲಿಲ್ಲ: ಎಸ್‍ಪಿ ಗಿರೀಶ್

    ಕಾರ್ ಸ್ಫೋಟ ಪ್ರಕರಣ, ಕ್ವಾರಿಯಲ್ಲಿ ಜಿಲೆಟಿನ್ ಬಳಸ್ತಿರಲಿಲ್ಲ: ಎಸ್‍ಪಿ ಗಿರೀಶ್

    ಬೆಂಗಳೂರು: ಶಿವಮೊಗ್ಗದ ಹುಣಸೋಡು ಮತ್ತು ಚಿಕ್ಕಬಳ್ಳಾಪುರದ ಗುಡಿಬಂಡೆ ಸ್ಫೋಟ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಸ್ಫೋಟ ಸಂಭವಿಸಿದೆ. ಕನಕಪುರ ತಾಲೂಕಿನ ಸಂಗಮ ರಸ್ತೆಯ ಮರಳೇಗವಿ ಮಠದ ಕಲ್ಲು ಕ್ವಾರಿ ಬಳಿ ಕಾರ್ ಸ್ಫೋಟಗೊಂಡು ವ್ಯಕ್ತಿಯೊಬ್ಬ ಛಿದ್ರ ಛಿದ್ರವಾಗಿ ಸಾವನ್ನಪ್ಪಿದಾನೆ. ಆದರೆ ಕ್ವಾರಿಯಲ್ಲಿ ಜಿಲೆಟಿನ್ ಬಳಸುತ್ತಿರಲಿಲ್ಲ ಎಂದು ಅಲ್ಲಿನ ಎಸ್‍ಪಿ ಗಿರೀಶ್ ಹೇಳಿಕೆ ನೀಡಿದ್ದಾರೆ.

    ಕನಕಪುರದ ಮಹೇಶ್ ಎಂಬವರು ಸಾವನ್ನಪ್ಪಿರುವ ದುರ್ದೈವಿ. ಮರಳೇಗವಿ ಮಠದ ಕ್ವಾರಿಯಲ್ಲಿ ಮಹೇಶ್ ಅವರು ಕ್ವಾರಿಗೆ ಕಬ್ಬಿಣದ, ಸಲಕರಣೆಗಳನ್ನು ಸಾಗಿಸುವ ಕೆಲಸ ಮಾಡಿಕೊಂಡಿದ್ದರು. ಯಾವ ಕಾರಣಕ್ಕೆ ಕಾರು ಸ್ಫೋಟವಾಗಿದೆ ಅನ್ನೋದು ಗೊತ್ತಾಗಿಲ್ಲ. ಆದರೆ ಮಠದ ಕ್ವಾರಿಯಲ್ಲಿ ಜಿಲೆಟಿನ್ ಬಳಸುತ್ತಿರಲಿಲ್ಲ ಎಂದು ಎಸ್‍ಪಿ ಗಿರೀಶ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಬೂಲ್‍ನಿಂದ ಭಾರತೀಯರ ಕರೆತರಲು ಕಸರತ್ತು

    ಕ್ವಾರಿಯಲ್ಲಿ ಕಲ್ಲು ಕಟ್ ಮಾಡುವ ಕೆಲಸ ಮಾಡಲಾಗುತ್ತಿದೆ. ಕಲ್ಲು ಕಟ್ ಮಾಡಲು ಜಿಲೆಟಿನ್ ಬೇಕಾಗಿಲ್ಲ. ಕ್ವಾರಿಯಿಂದ ಎರಡು ಕಿಮೀ ದೂರದಲ್ಲಿ ಕಾರು ಸ್ಫೋಟವಾಗಿದೆ. ಕ್ವಾರಿಯಿಂದ ವಾಪಸ್ ಎರಡು ಕಿಮೀ ದೂರದವರೆಗೆ ಮಹೇಶ್ ಕಾರನ್ನು ಓಡಿಸಿಕೊಂಡು ಹೋಗಿದ್ದಾರೆ, ಆ ಬಳಿಕ ಕಾರು ಸ್ಫೋಟವಾಗಿದ್ದು ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಸ್ಫೋಟದ ರಭಸಕ್ಕೆ ಮಹೇಶ್ ಅವರ ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿದ್ದು, ಘಟನಾ ಸ್ಥಳಕ್ಕೆ ಬಾಂಬ್ ಸ್ಕ್ಯಾಡ್ ಕರೆಸಿ ಪರಿಶೀಲನೆ ಮಾಡುವ ಕೆಲಸ ಮಾಡಲಾಗುತ್ತಿದೆ. ಅವರ ತನಿಖೆಯ ಬಳಿಕ ಸ್ಫೋಟದ ಕಾರಣ ತಿಳಿಯಲಿದೆ.ಈ ನಡುವೆ ಕಾರ್ ನಲ್ಲಿ ಜಿಲೆಟಿನ್ ಇತ್ತಾ, ಇಲ್ವಾ ಅನ್ನೋದು ಸದ್ಯಕ್ಕೆ ಗೊತ್ತಾಗಿಲ್ಲ. ಈ ಬಗ್ಗೆ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ನಾಳೆ ಬಹುದೊಡ್ಡ ಘೋಷಣೆ ಮಾಡಲಿದ್ದೇನೆ: ಅರವಿಂದ್ ಕೇಜ್ರಿವಾಲ್

  • ಸಿಡಿ ಗ್ಯಾಂಗ್‌ಗೆ ಲಕ್ಷ ಲಕ್ಷ ಹಣ – ಶಿವಕುಮಾರ್ ಬೆನ್ನು ಬಿದ್ದ ಎಸ್‍ಐಟಿ

    ಸಿಡಿ ಗ್ಯಾಂಗ್‌ಗೆ ಲಕ್ಷ ಲಕ್ಷ ಹಣ – ಶಿವಕುಮಾರ್ ಬೆನ್ನು ಬಿದ್ದ ಎಸ್‍ಐಟಿ

    ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ(ಎಸ್‍ಐಟಿ) ಈಗ ಶಿವಕುಮಾರ್ ಬೆನ್ನು ಬಿದ್ದಿದೆ.

    ಅಸಲಿಗೆ ಈ ಪ್ರಕರಣದಲ್ಲಿರುವ ಶಿವಕುಮಾರ್ ಕನಕಪುರ ಮೂಲದ ವ್ಯಕ್ತಿಯಾಗಿದ್ದು, ಗ್ರಾನೈಟ್ ಉದ್ಯಮ ನಡೆಸುತ್ತಿದ್ದಾನೆ. ಈತನಿಗೆ ಸಿಡಿ ಸೂತ್ರದಾರರ ಜೊತೆ ನಂಟು ಇರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಸಿಡಿ ಹುಡುಗರಿಗೆ 10 ಲಕ್ಷ ಹಣ ಸಂದಾಯ ಮಾಡಿದ್ದ ಶಿವಕುಮಾರ್ ಸಿಡಿ ರಿಲೀಸ್ ಬಳಿಕ ಯುವತಿಯ ಗೆಳೆಯನಿಗೆ 50 ಸಾವಿರ ಕೊಟ್ಟಿದ್ದಾನೆ. ಯುವತಿಯನ್ನು ಗೋವಾಗೆ ಕರೆದೊಯ್ಯಲು 50 ಸಾವಿರ ರೂ. ಕೊಟ್ಟಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

    ಸದ್ಯ ಕೊಚ್ಚಿಯಲ್ಲಿ ಶಿವಕುಮಾರ್ ತಲೆ ಮರೆಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆತನ ಪತ್ತೆಗೆ ಈಗ ಬಲೆ ಬೀಸಲಾಗಿದೆ. ಕಾಲ್‌ ಡಿಟೈಲ್ಸ್‌ನಲ್ಲಿ ಈತ ಸಿಡಿ ಗ್ಯಾಂಗ್‌ ಸದಸ್ಯರ ಜೊತೆ ನಿಖಟ ಸಂಪರ್ಕ ಹೊಂದಿದ್ದ ಮಾಹಿತಿಯೂ ಸಿಕ್ಕಿದೆ.

    ಎಸ್‍ಐಟಿ ಪೊಲೀಸರು ಈಗ ವಿಚಾರಣೆಗೆ ಒಳಪಟ್ಟವರ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡುತ್ತಿದ್ದಾರೆ. ಎರಡು ದಿನ ಬ್ಯಾಂಕ್ ಮುಷ್ಕರ ಇದ್ದ ಹಿನ್ನೆಲೆಯಲ್ಲಿ ಮಾಹಿತಿ ಸಿಕ್ಕಿರಲಿಲ್ಲ. ಬುಧವಾರ ವಿಚಾರಣೆಗೆ ಒಳಪಟ್ಟವರ ಬ್ಯಾಂಕ್ ಮಾಹಿತಿ ಲಭ್ಯವಾಗಿದ್ದು, ಈ ವೇಳೆ ಗ್ಯಾಂಗ್ ಸದಸ್ಯರ ಖಾತೆಗೆ ಈತ ಹಣ ಹಾಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

  • ರಮಣೀಯ ಪರಿಸರದಲ್ಲಿ ಫಾರಂ ಲ್ಯಾಂಡ್‌

    ರಮಣೀಯ ಪರಿಸರದಲ್ಲಿ ಫಾರಂ ಲ್ಯಾಂಡ್‌

    – ಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಸಂಸ್ಥೆಯ ಪರಿಸರ ಸ್ನೇಹಿ ಫಾರಂ

    ಬೆಂಗಳೂರು: ಹಸಿರಿನಿಂದ ಕಂಗೊಳಿಸುತ್ತಿರುವ ರಮಣೀಯ ಪರಿಸರದಲ್ಲಿ ಮನೆ ನಿರ್ಮಿಸುವ ಆಸೆ ಹಲವರಿಗಿರುತ್ತದೆ. ಆದರೆ ಆ ಕನಸಿನ ಮನೆ ಕಟ್ಟಲು ಭೂಮಿ ಬೇಕು. ಅದು ಬೆಂಗಳೂರಿನ ಕೂಗಳತೆ ದೂರದಲ್ಲಿ ಸಿಕ್ಕರೆ ಮತ್ತಷ್ಟು  ಖುಷಿ.

    ರಾಮನಗರ ಜಿಲ್ಲೆಯ ಕನಕಪುರ ಬಳಿಯ ಗೇರುಹಳ್ಳಿಯ ಪರಿಸರ ಸ್ನೇಹಿ ವಾತಾವರಣದಲ್ಲಿ ʼಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಸಂಸ್ಥೆʼ ಪರಿಸರ ಸ್ನೇಹಿ ಫಾರಂ ಲ್ಯಾಂಡ್‌ ಅನ್ನು ಸಿದ್ಧಪಡಿಸಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಭೂಮಿಯನ್ನು ಅಭಿವೃದ್ಧಿಪಡಿಸಲಾಗಿದೆ.

    ಬೆಂಗಳೂರು ಸಮೀಪವೇ ಕನಕಪುರ ಜಂಕ್ಷನ್‌ ನೈಸ್‌ ರಸ್ತೆಯಿಂದ ಕೇವಲ 50 ಕಿ.ಮೀ. ದೂರದಲ್ಲಿ ಈ ಜಾಗವಿದೆ. ಕನಕಪುರ-ಕಬ್ಬಾಳ ರಸ್ತೆಯ ಸಮೀಪದಲ್ಲಿ ಫಾರಂ ಲ್ಯಾಂಡ್‌ ನಿರ್ಮಾಣವಾಗಿದ್ದು, ಕನಕಪುರದಿಂದ ಕೇವಲ 9 ಕಿ.ಮೀ ದೂರದಲ್ಲಿದೆ.

    ಗೇರುಹಳ್ಳಿ ಹಸಿರು ಪ್ರದೇಶದಲ್ಲಿ ಜಾಗವನ್ನು ಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಖರೀದಿಸಿದೆ. ಇಲ್ಲಿ ಮಾವು, ಹಲಸು, ನೇರಳೆ, ಕಿತ್ತಳೆ ಸೇರಿದಂತೆ ಹಲವು ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಭೂಮಿ ಖರೀದಿಸುವ ಗ್ರಾಹಕರಿಗೆ ಭವಿಷ್ಯದಲ್ಲಿ ಸಹಾಯವಾಗಲೆಂದು ಶ್ರೀಗಂಧ, ತೇಗದ ಜೊತೆಗೆ ರಕ್ತ ಚಂದನ, ಅಡಿಕೆ, ತೆಂಗಿನ ಗಿಡಗಳನ್ನು ನೆಡಲಾಗಿದೆ. ಈಗಾಗಲೇ ಸುಮಾರು 20 ಜಾತಿಯ ವಿವಿಧ ಹಣ್ಣಿನ ಗಿಡಗಳು ತಲೆ ಎತ್ತಿವೆ. ಇಷ್ಟೇ ಅಲ್ಲದೇ 20 ವರ್ಷದಷ್ಟು ಹಳೆಯಾದಾದ ಮಾವಿನ ಮರಗಳು ಈ ಜಾಗದಲ್ಲಿದೆ.

    ಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಮಾಲೀಕ ಜಿ.ಆರ್‌. ತಿರುಮಲೇಶ್‌(ಭಾಸ್ಕರ್‌) ಮಾತನಾಡಿ, ಹಸಿರು ಪರಿಸರದಲ್ಲಿ ಮನೆ ಕಟ್ಟಬೇಕೆಂದು ಕನಸು ಕಾಣುತ್ತಿರುವ ಜನರಿಗಾಗಿ ಈ ಭೂಮಿಯನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಶಿಂಷಾ, ಮುತ್ತತ್ತಿ ಸೇರಿದಂತೆ ಅನೇಕ ಪ್ರವಾಸಿ ತಾಣಗಳು ಈ ಪ್ರದೇಶಕ್ಕೆ ಹತ್ತಿರದಲ್ಲಿವೆ ಎಂದಿದ್ದಾರೆ.

    ಹನಿ ನೀರಾವರಿ ವ್ಯವಸ್ಥೆ
    ಈ ಜಾಗದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅವಕಾಶವಿದೆ. ಖರೀದಿದಾರರು ತಮಗೆ ಬೇಕಾದ ತರಕಾರಿಗಳನ್ನು ಮನೆಯ ಮುಂಭಾಗದಲ್ಲಿ ಬೆಳೆಸಬಹುದು. ಈ ಕಾರಣಕ್ಕೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಕೆ ಮಾಡಲಾಗಿದೆ. ಸುರಕ್ಷತೆಗಾಗಿ 24*7 ಭದ್ರತೆ, ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಕ್ರೀಡಾ ಚಟುವಟಿಕೆಗಳಿಗೆ ಜಾಗ ಮೀಸಲಿಡಲಾಗಿದೆ.

    ದರ ಎಷ್ಟು?
    ಪ್ರತಿ ಚದುರ ಮೀಟರ್‌ಗೆ 199 ರೂ. ದರ ನಿಗದಿ ಮಾಡಲಾಗಿದೆ. 5 ಗುಂಟೆ ಮತ್ತು 12 ಗುಂಟೆ ಪ್ಲಾಟ್‌ಗಳು ಕೂಡ ಖರೀದಿಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ 98805 64557 ನಂಬರ್‌ ಸಂಪರ್ಕಿಸಬಹುದು ಅಥವಾ www.peacewood.in ವೆಬ್‌ಸೈಟಿಗೆ ಭೇಟಿ ನೀಡಬಹುದು.

    ಏಕೆ ಹೂಡಿಕೆ ಮಾಡಬೇಕು?
    ಭೂಮಿ ಒಂದು ಚರಾಸ್ತಿ ಆಗಿದ್ದು, ಬಹಳ ಬೇಡಿಕೆ ಇರುತ್ತದೆ. ವರ್ಷದಿಂದ ವರ್ಷಕ್ಕೆ ಇದರ ಮೌಲ್ಯ ಹೆಚ್ಚಾಗುತ್ತಿರುತ್ತದೆ.

    ದೀರ್ಘಾವಧಿಯ ಹೂಡಿಕೆ
    ಪ್ಲಾಟ್‌ಗಳು ದೀರ್ಘಕಾಲದವರೆಗೆ ಇರುತ್ತದೆ. ಭೂಮಿಯಲ್ಲಿ ಹೂಡಿಕೆ ಮಾಡಿದರೆ ಅದು ದೀರ್ಘಕಾಲದ ಹೂಡಿಕೆ ಆಗಿರುತ್ತದೆ.

    ಹೊಂದಿಕೊಳ್ಳುವಿಕೆ ಮತ್ತು ಗ್ರಾಹಕೀಕರಣ
    ವಸತಿ ಪ್ಲಾಟ್‌ಗಳ ಸಂಪೂರ್ಣ ನಿಯಂತ್ರಣ ಗ್ರಾಹಕರ ಕೈಯಲ್ಲೇ ಇರುತ್ತದೆ. ಇಲ್ಲಿ ನಿಮ್ಮ ಸ್ವಂತ ಮನೆಯನ್ನು ನಿಮಗೆ ಇಷ್ಟ ಬಂದ ರೀತಿಯಲ್ಲಿ ವಿನ್ಯಾಸ ಮಾಡಬಹುದು.

    ವಿಶ್ವಾಸಾರ್ಹತೆ ಮತ್ತು ಸಾಗಣೆ
    ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ (ರೇರಾ) ಜಾರಿಯಲ್ಲಿರುವುದರಿಂದ ಪ್ರತಿ ಕನಿಷ್ಠ ದಾಖಲಾತಿಗಳು ಮತ್ತು ನಿಯಂತ್ರಕ ನೀತಿಗಳಿಂದಾಗಿ ಭೂ ಹೂಡಿಕೆಗಳ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಿವೆ.

    ಹಣಕಾಸು ಸುರಕ್ಷತೆ
    ಭೂಮಿ ಮೇಲೆ ಹೂಡಿಕೆ ಮಾಡುವುದರಿಂದ ಹಣಕ್ಕೂ ಭದ್ರತೆ ಸಿಗುತ್ತದೆ. ಇದು ನಿಮ್ಮ ಹಣವನ್ನು ಸುರಕ್ಷಿತಗೊಳಿಸಲು ಮತ್ತು ಆರ್ಥಿಕ ಪರಿಪಕ್ವತೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಬೇರೆ ಕಡೆ ಹಣವನ್ನು ಹೂಡಿಕೆ ಮಾಡಿದರೆ ಅದಕ್ಕೆ ಭದ್ರತೆ ಇರುವುದಿಲ್ಲ. ಆದರೆ ಭೂಮಿಯಲ್ಲಿ ಹೂಡಿಕೆ ಮಾಡಿದರೆ ಹಣ ಸುರಕ್ಷಿತವಾಗಿರುತ್ತದೆ. ಇದು ನಿಮ್ಮ ಆಸ್ತಿಯೇ ಆಗಿರುವ ಕಾರಣ ಭಯಪಡುವ ಅಗತ್ಯವಿಲ್ಲ.

    ಕನಕಪುರ ರಸ್ತೆಯಲ್ಲಿ ಯಾಕೆ?
    ಪ್ರಕೃತಿಯ ಸೌಂದರ್ಯ ಇರುವ ಕನಕಪುರ ಮುಖ್ಯ ರಸ್ತೆಯಲ್ಲಿ ಈ ಭೂಮಿ ಇದ್ದು, ಮಂದಿನ ದಿನಗಳಲ್ಲಿ ಹತ್ತಿರದ ಪ್ರದೇಶಗಳು ಬೆಳವಣಿಗೆಯಾಗಲಿದೆ. ಅಲ್ಲದೇ ಹತ್ತಿರದ ಪ್ರದೇಶಗಳಿಗೆ ಕಡಿಮೆ ಸಮಯದಲ್ಲಿ ತೆರಳಬಹುದಾಗಿದೆ.

  • ರಮಣೀಯ ಪರಿಸರದಲ್ಲಿ ಮನೆ ನಿರ್ಮಿಸಿ

    ರಮಣೀಯ ಪರಿಸರದಲ್ಲಿ ಮನೆ ನಿರ್ಮಿಸಿ

    ಬೆಂಗಳೂರು: ಹಸಿರಿನಿಂದ ಕಂಗೊಳಿಸುತ್ತಿರುವ ರಮಣೀಯ ಪರಿಸರದಲ್ಲಿ ಮನೆ ನಿರ್ಮಿಸುವ ಆಸೆಯನ್ನು ನೀವು ಹೊಂದಿದ್ದೀರಾ? ಬೆಂಗಳೂರಿನ ಕೂಗಳತೆ ದೂರದಲ್ಲಿ ಜಾಗ ಬೇಕೇ? ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಎಂಬಂತೆ ಪೀಸ್‌ವುಡ್‌ ಇಕೋ ಫಾರಂ ಸಂಸ್ಥೆ ಜಾಗ ಅಭಿವೃದ್ಧಿ ಪಡಿಸಿದೆ.

    ರಾಮನಗರ ಜಿಲ್ಲೆಯ ಕನಕಪುರ ಬಳಿಯ ಗೇರುಹಳ್ಳಿಯ ಪರಿಸರ ಸ್ನೇಹಿ ವಾತಾವರಣದಲ್ಲಿ ಪೀಸ್‌ವುಡ್‌ ಇಕೋ ಫಾರಂ ಸಂಸ್ಥೆ ಪರಿಸರ ಸ್ನೇಹಿ ಫಾರಂ ಲ್ಯಾಂಡ್‌ ಅನ್ನು ಸಿದ್ಧಪಡಿಸಿದೆ.

    ಕನಕಪುರ ಜಂಕ್ಷನ್‌ ನೈಸ್‌ ರಸ್ತೆಯಿಂದ ಕೇವಲ 50 ಕಿ.ಮೀ. ದೂರದಲ್ಲಿ ಈ ಜಾಗವಿದೆ. ಕನಕಪುರ-ಕಬ್ಬಾಳ ರಸ್ತೆಯ ಸಮೀಪದಲ್ಲಿ ಫಾರಂ ಲ್ಯಾಂಡ್‌ ನಿರ್ಮಾಣವಾಗಿದ್ದು, ಕನಕಪುರದಿಂದ ಕೇವಲ 9 ಕಿ.ಮೀ ದೂರದಲ್ಲಿದೆ.

    ಈ ಜಾಗದಲ್ಲಿ ಮಾವು, ಹಲಸು, ನೇರಳೆ, ಕಿತ್ತಳೆ ಸೇರಿದಂತೆ ಹಲವು ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಭೂಮಿ ಖರೀದಿಸುವ ಗ್ರಾಹಕರಿಗೆ ಭವಿಷ್ಯದಲ್ಲಿ ಸಹಾಯವಾಗಲೆಂದು ಶ್ರೀಗಂಧ, ತೇಗದ ಜೊತೆಗೆ ರಕ್ತ ಚಂದನ, ಅಡಿಕೆ, ತೆಂಗಿನ ಗಿಡಗಳನ್ನು ನೆಡಲಾಗಿದೆ. ಈಗಾಗಲೇ ಸುಮಾರು 20 ಜಾತಿಯ ವಿವಿಧ ಹಣ್ಣಿನ ಗಿಡಗಳು ತಲೆ ಎತ್ತಿವೆ. ಇಷ್ಟೇ ಅಲ್ಲದೇ 20 ವರ್ಷದಷ್ಟು ಹಳೆಯಾದಾದ ಮಾವಿನ ಮರಗಳು ಈ ಜಾಗದಲ್ಲಿರುವುದು ವಿಶೇಷ.

    ಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಮಾಲೀಕ ಜಿ.ಆರ್‌. ತಿರುಮಲೇಶ್‌(ಭಾಸ್ಕರ್‌) ಮಾತನಾಡಿ,ಹಸಿರು ಪರಿಸರದಲ್ಲಿ ಮನೆ ಕಟ್ಟಬೇಕೆಂದು ಕನಸು ಕಾಣುತ್ತಿರುವ ಜನರಿಗಾಗಿ ಈ ಭೂಮಿಯನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಜಾಗದ ಹತ್ತಿರದಲ್ಲೇ ಪ್ರವಾಸ ಯೋಗ್ಯ ಸ್ಥಳಗಳು ಇದೆ. ಶಿಂಷಾ, ಮುತ್ತತ್ತಿ ಸೇರಿದಂತೆ ಅನೇಕ ಪ್ರವಾಸಿ ತಾಣಗಳು ಈ ಪ್ರದೇಶಕ್ಕೆ ಹತ್ತಿರದಲ್ಲಿವೆ ಎಂದಿದ್ದಾರೆ.

    ಹನಿ ನೀರಾವರಿ ವ್ಯವಸ್ಥೆ
    ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಇಲ್ಲಿ ಅವಕಾಶವಿದೆ. ಖರೀದಿದಾರರು ತಮಗೆ ಬೇಕಾದ ತರಕಾರಿಗಳನ್ನು ಮನೆಯ ಮುಂಭಾಗದಲ್ಲಿ ಬೆಳೆಸಬಹುದು. ಈ ಕಾರಣಕ್ಕೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಕೆ ಮಾಡಲಾಗಿದೆ. ಸುರಕ್ಷತೆಗಾಗಿ 24*7 ಭದ್ರತೆ, ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಕ್ರೀಡಾ ಚಟುವಟಿಕೆಗಳಿಗೆ ಜಾಗ ಮೀಸಲಿಡಲಾಗಿದೆ.

    ದರ ಎಷ್ಟು?
    ಪ್ರತಿ ಚದುರ ಮೀಟರ್‌ಗೆ 199 ರೂ. ದರ ನಿಗದಿ ಮಾಡಲಾಗಿದೆ. 5 ಗುಂಟೆ ಮತ್ತು 12 ಗುಂಟೆ ಪ್ಲಾಟ್‌ಗಳು ಕೂಡ ಖರೀದಿಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ 98805 64557 ನಂಬರ್‌ ಸಂಪರ್ಕಿಸಬಹುದು ಅಥವಾ www.peacewood.in ವೆಬ್‌ಸೈಟಿಗೆ ಭೇಟಿ ನೀಡಬಹುದು.

  • ಡಿ.ಕೆ.ಬ್ರದರ್ಸ್‍ಗೆ ನಿಖಿಲ್ ಕುಮಾರಸ್ವಾಮಿ ಓಪನ್ ಚಾಲೆಂಜ್

    ಡಿ.ಕೆ.ಬ್ರದರ್ಸ್‍ಗೆ ನಿಖಿಲ್ ಕುಮಾರಸ್ವಾಮಿ ಓಪನ್ ಚಾಲೆಂಜ್

    ರಾಮನಗರ: ಡಿಕೆ ಸೋದರರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಬಹಿರಂಗವಾಗಿ ಚಾಲೆಂಜ್ ಹಾಕಿದ್ದಾರೆ.

    ರಾಮನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಪಕ್ಷದಲ್ಲಿ ಸ್ವಲ್ಪ ಗೊಂದಲಗಳಿರೋದು ನಿಜ. ಅದನ್ನ ಪರಿಹರಿಸುವ ಕೆಲಸವನ್ನ ಕುಮಾರಸ್ವಾಮಿ ಅವರು ಮಾಡುತ್ತಿದ್ದಾರೆ. ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷನಾಗಿ 30 ಜಿಲ್ಲೆಗಳ ಪ್ರವಾಸ ನಡೆಸುತ್ತಿದ್ದೇನೆ. ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳನ್ನ ಮಾಡಿದ್ದು, ಅದನ್ನ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡಲಾಗುತ್ತೆ. ಪಕ್ಷ ಸಂಘಟನೆಯ ಜವಾಬ್ದಾರಿಯನ್ನ ಹಿರಿಯರು ನನಗೆ ನೀಡಿದ್ದು, ಅದನ್ನ ನಿರ್ವಹಿಸುತ್ತಿದ್ದೇನೆ ಎಂದರು.

    ಎಚ್ಚರಿಕೆ ಅಂತ ಹೇಳಿದ್ಯಾರಿಗೆ?: ಕನಕಪುರ ಕ್ಷೇತ್ರದಲ್ಲಿ ಜೆಡಿಎಸ್ ಮತದಾರರು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಮ್ಮದೇ ಮತಗಳು ಕನಕಪುರದಲ್ಲಿ, 2023ಕ್ಕೆ ಇಲ್ಲಿ ಸೂಕ್ತ ಅಭ್ಯರ್ಥಿ ಇಲ್ಲಿಂದ ಸ್ಪರ್ಧೆ ಮಾಡಲಿದ್ದಾರೆ. ಕೆಲವರು ನಮ್ಮ ಕ್ಷೇತ್ರಗಳಿಗೆ ಕೈ ಹಾಕ್ತಿದ್ದಾರೆ. ಹಾಗಾಗಿ ನಾವು ಸಹ ಅವರ ಕ್ಷೇತ್ರಕ್ಕೆ ಕೈ ಹಾಕಬೇಕಾಗುತ್ತೆ ಅಂತ ಎಚ್ಚರಿಕೆ ಕೊಡಲು ಇಷ್ಟಪಡುತ್ತೇನೆ ಅಂದ್ರು.

  • ಇಂದಿನಿಂದ ಕನಕಪುರದಲ್ಲಿ ಸ್ವಯಂ ಪ್ರೇರಿತ ಲಾಕ್‍ಡೌನ್

    ಇಂದಿನಿಂದ ಕನಕಪುರದಲ್ಲಿ ಸ್ವಯಂ ಪ್ರೇರಿತ ಲಾಕ್‍ಡೌನ್

    ರಾಮನಗರ: ರಾಮನಗದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಕೊರೊನಾ ರಣಕೇಕೆಗೆ ಕನಕಪುರ ಜನ ಆತಂಕಗೊಂಡಿದ್ದಾರೆ. ಹೀಗಾಗಿ ಇಂದಿನಿಂದ ಕನಕಪುರದಲ್ಲಿ ಸ್ವಯಂ ಪ್ರೇರಿತ ಲಾಕ್‍ಡೌನ್ ಮಾಡಲಾಗಿದೆ.

    ಕೊರೊನಾ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಕನಕಪುರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ನೀಡಲಾಗಿದೆ. 11 ಗಂಟೆಯ ನಂತರ ಕನಕಪುರ ಸಂಪೂರ್ಣ ಲಾಕ್‍ಡೌನ್ ಆಗಲಿದೆ. ಲಾಕ್‍ಡೌನ್ ಆಗಿದ್ದ ವೇಳೆ ಜನರು ಓಡಾಟ ಕೂಡ ಮಾಡುವಂತಿಲ್ಲ.

    ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಕನಕಪುರ ಲಾಕ್‍ಡೌನ್ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜುಲೈ 1ರ ವರೆಗೂ ಲಾಕ್‍ಡೌನ್ ಮಾಡಲು ನಿರ್ಧಾರ ಮಾಡಲಾಗಿದೆ.

    ಬೆಳ್ಳಂಬೆಳಗ್ಗೆ ಕನಕಪುರದಲ್ಲಿ ಅಗತ್ಯ ವಸ್ತುಗಳ ಮಾರಾಟ ಜೋರಾಗಿದ್ದು, ಕೆಲ ಅಂಗಡಿಗಳು ಓಪನ್ ಆಗಿವೆ. ಆದರೆ ಅನೇಕ ಅಂಗಡಿಗಳು ಮುಚ್ಚಲಾಗಿದೆ. 11 ಗಂಟೆಯ ಬಳಿಕ ಕನಕಪುರ ಕಂಪ್ಲೀಟ್ ಲಾಕ್‍ಡೌನ್ ಆಗಲಿದೆ. ಹೀಗಾಗಿ ಜನರು ಅಗತ್ಯ ವಸ್ಯಗಳನ್ನು ಖರೀದಿ ಮಾಡುತ್ತಿದ್ದಾರೆ.