Tag: ಕನಕಪುರ

  • ಇನ್ಮುಂದೆ ಡಿಕೆ ಶಿವಕುಮಾರ್ ಕೇವಲ ಅರ್ಜಿ ಹಾಕಿ ರಾಜ್ಯ ಸುತ್ತಲು ಆಗಲ್ಲ: ಸಿಪಿ ಯೋಗೇಶ್ವರ್

    ಇನ್ಮುಂದೆ ಡಿಕೆ ಶಿವಕುಮಾರ್ ಕೇವಲ ಅರ್ಜಿ ಹಾಕಿ ರಾಜ್ಯ ಸುತ್ತಲು ಆಗಲ್ಲ: ಸಿಪಿ ಯೋಗೇಶ್ವರ್

    ರಾಮನಗರ: ಕೆಲವು ಪಕ್ಷದ ನಾಯಕರು ಕ್ಷೇತ್ರಗಳಲ್ಲಿ ವಿರೋಧ ಇಲ್ಲದಂತೆ ಮಾಡಿಕೊಂಡಿದ್ದರು. ಅಂತಹ ಕ್ಷೇತ್ರಗಳಲ್ಲಿ ಅವರ ವಿರುದ್ಧ ಬಲಿಷ್ಠ ನಾಯಕರನ್ನು ಬಿಜೆಪಿಯಿಂದ ಕಣಕ್ಕಿಳಿಸಲಾಗಿದೆ. ಈಗ ಅಂತಹ ನಾಯಕರು ಕೇವಲ ಅರ್ಜಿ ಹಾಕಿ ರಾಜ್ಯ ಸುತ್ತುವುದಕ್ಕೆ ಆಗುವುದಿಲ್ಲ. ಕ್ಷೇತ್ರದಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (C.P.Yogeshwara) ಚಾಟಿ ಬೀಸಿದ್ದಾರೆ.

    ಡಿ.ಕೆ ಶಿವಕುಮಾರ್ ಕ್ಷೇತ್ರಕ್ಕೆ ಪ್ರಬಲ ಒಕ್ಕಲಿಗ ನಾಯಕನನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ (BJP) ಹೊಸ ಪ್ರಯೋಗಕ್ಕೆ ಮುಂದಾಗಿದೆ. ಕನಕಪುರದಲ್ಲಿ (Kanakapur) ಸಚಿವ ಆರ್.ಅಶೋಕ್ (R.Ashoka) ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಲಾಗಿದೆ. ಈ ಮೂಲಕ ಆಶೋಕ್‍ಗೆ ಬಿಗ್ ಟಾಸ್ಕ್ ನೀಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್‍ಗೆ ಬೀದರ್ ಉತ್ತರ, ಭಾಲ್ಕಿ ಟಿಕೆಟ್ ಆಯ್ಕೆಯ ಭಾರಿ ಟೆನ್ಶನ್

    ಕನಕಪುರದ ಜೆಡಿಎಸ್ (JDS) ಅಭ್ಯರ್ಥಿಯೇ ಕಾಂಗ್ರೆಸ್ ಸೇರಿದ್ದರು. ಹೀಗಾಗಿ ಕಾಂಗ್ರೆಸ್‍ಗೆ ವಿರೋಧಿಗಳೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಬಿಜೆಪಿಯಿಂದ ಪ್ರಬಲ ನಾಯಕನನ್ನು ಆಯ್ಕೆ ಮಾಡಿರುವುದು ಗೆಲ್ಲುವ ಅವಕಾಶ ಇದೆ. ಜೊತೆಗೆ ರಾಮನಗರದಲ್ಲೂ ಅವಕಾಶ ಇತ್ತು. ಆದರೂ ಒಂದಷ್ಟು ಹೊಸ ಪ್ರಯೋಗ ಒಳ್ಳೆಯದು ಎಂದು ಹೇಳಿದ್ದಾರೆ.

    ಮಂಡ್ಯದಲ್ಲೂ ನಾನೇ ಕರೆತಂದ ಇಬ್ಬರಿಗೆ ಟಿಕೆಟ್ ಸಿಕ್ಕಿದೆ. ಇಂಡವಾಳು ಸಚ್ಚಿದಾನಂದ ಹಾಗೂ ಅಶೋಕ್ ಜಯರಾಂಗೆ ಟಿಕೆಟ್ ಹಂಚಿಕೆಯಾಗಿದೆ. ರಾಮನಗರದಲ್ಲೂ (Ramanagara) ಇಬ್ಬರು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ರಾಮನಗರದಲ್ಲಿ ಕನಿಷ್ಠ ಎರಡು ಸೀಟ್ ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.

    ಹಿರಿಯ ನಾಯಕರಿಗೆ ಟಿಕೆಟ್ ಕೈತಪ್ಪಿದ ವಿಚಾರದ ಬಗ್ಗೆ ಮಾತನಾಡಿ, ನಮ್ಮ ಪಕ್ಷ ಬೇರೆ ಬೇರೆ ರಾಜ್ಯಗಳಲ್ಲಿ ಹಲವು ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಹೊಸಬರಿಗೆ ಅವಕಾಶ ನೀಡುವ ಕೆಲಸ ಮಾಡಿದ್ದಾರೆ. ಕೆಲವರಿಗೆ ವಯಸ್ಸಿನ ಕಾರಣ ಹಾಗೂ ಇನ್ನಿತರ ಕಾರಣಗಳಿಂದ ಟಿಕೆಟ್ ನೀಡಿಲ್ಲ. ಆದರೆ ಹಿರಿಯ ನಾಯಕರಿಗೆ ಪರ್ಯಾಯ ಅವಕಾಶಗಳಿವೆ ಅವರನ್ನೂ ಗೌರವದಿಂದ ನಡೆಸಿಕೊಳ್ಳುವ ಕೆಲಸ ಆಗಲಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಲಕ್ಷ್ಮಣ ಸವದಿ ಗುಡ್‍ಬೈ – ಶೀಘ್ರವೇ ಕಾಂಗ್ರೆಸ್ ಸೇರ್ಪಡೆ?

  • ಪದ್ಮನಾಭನಗರದಿಂದ ಅಶೋಕ್‌ ವಿರುದ್ಧ ಡಿಕೆ ಸುರೇಶ್‌ ಕಣಕ್ಕೆ?

    ಪದ್ಮನಾಭನಗರದಿಂದ ಅಶೋಕ್‌ ವಿರುದ್ಧ ಡಿಕೆ ಸುರೇಶ್‌ ಕಣಕ್ಕೆ?

    ಬೆಂಗಳೂರು: ಕಂದಾಯ ಸಚಿವ ಅಶೋಕ್‌ಗೆ (R Ashok) ಠಕ್ಕರ್‌ ನೀಡಲು ಪದ್ಮನಾಭನಗರದಿಂದ ಡಿಕೆ ಶಿವಕುಮಾರ್‌ (DK Shivakumar) ಸಹೋದರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್‌ (DK Suresh) ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

    ಕನಕಪುರದಲ್ಲಿ ಡಿಕೆ ಶಿವಕುಮಾರ್‌ ಅವರನ್ನು ಕಟ್ಟಿ ಹಾಕಲು ಬಿಜೆಪಿ ಹೈಕಮಾಂಡ್‌ ಅಶೋಕ್‌ ಅವರಿಗೆ ಟಿಕೆಟ್‌ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ಅಶೋಕ್‌ ವಿರುದ್ಧ ಡಿಕೆ ಸುರೇಶ್‌ ಅವರನ್ನು ಕಣಕ್ಕೆ ಇಳಿಸಿದರೆ ಉತ್ತಮ ಎಂಬ ಸಲಹೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಲಕ್ಷ್ಮಣ ಸವದಿ ಗುಡ್‍ಬೈ – ಶೀಘ್ರವೇ ಕಾಂಗ್ರೆಸ್ ಸೇರ್ಪಡೆ?

    ಈಗಾಗಲೇ ಪದ್ಮನಾಭನಗರದಿಂದ (Padmanabhanagar) ರಘುನಾಥ್ ನಾಯ್ಡು ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಒಂದು ಬಾರಿ ಟಿಕೆಟ್‌ ನೀಡಿದ ಬಳಿಕ ಬದಲಾವಣೆ ಮಾಡಿದರೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್‌ ತನ್ನ ನಿರ್ಧಾರವನ್ನು ಬದಲಾವಣೆ ಮಾಡುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್‌, ಸದ್ಯಕ್ಕೆ ಏನು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ರಾಮನಗರದಿಂದ ಡಿಕೆ ಸುರೇಶ್‌ ಸ್ಪರ್ಧೆ ಮಾಡಬೇಕು ಎಂಬ ಬೇಡಿಕೆ ಕಾಂಗ್ರೆಸ್‌ನಿಂದ ಬಂದಿತ್ತು. ಈ ಬೇಡಿಕೆಗೆ ಪ್ರತಿಕ್ರಿಯಿಸಿದ ಸುರೇಶ್‌, ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ, ಆಸಕ್ತಿಯೂ ಇಲ್ಲ. ಸಂಸದನಾಗಿಯೇ ಮುಂದುವರೆಯುತ್ತೇನೆ ಎಂದು ತಿಳಿಸಿದ್ದರು.

    ಈಗ ಸಹೋದರನ ವಿರುದ್ಧವೇ ಅಶೋಕ್‌ ಕಣಕ್ಕೆ ಇಳಿಯುತ್ತಿರುವ ಕಾರಣ ಕಾಂಗ್ರೆಸ್‌ ಮುಂದಿನ ನಡೆ ಏನು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

  • ಪುನೀತ್ ಕೆರೆಹಳ್ಳಿ ಬಂಧನಕ್ಕೆ ನಾಲ್ಕು ತಂಡ ರಚನೆ, ಪ್ರಕರಣದಲ್ಲಿ 3 ಎಫ್‌ಐಆರ್ – ಎಸ್ಪಿ ಕಾರ್ತಿಕ್ ರೆಡ್ಡಿ

    ಪುನೀತ್ ಕೆರೆಹಳ್ಳಿ ಬಂಧನಕ್ಕೆ ನಾಲ್ಕು ತಂಡ ರಚನೆ, ಪ್ರಕರಣದಲ್ಲಿ 3 ಎಫ್‌ಐಆರ್ – ಎಸ್ಪಿ ಕಾರ್ತಿಕ್ ರೆಡ್ಡಿ

    ರಾಮನಗರ: ಕನಕಪುರ (Kanakapura) ತಾಲೂಕಿನ ಸಾತನೂರು ಬಳಿ ಜಾನುವಾರು ರಕ್ಷಣೆ ವೇಳೆ ವ್ಯಕ್ತಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ಹಿನ್ನೆಲೆ ಮೃತ ವ್ಯಕ್ತಿ ಇದ್ರೀಷ್ ಪಾಷ ಸಾವಿಗೆ ನಿಖರ ಕಾರಣ ಏನೆಂಬುದು ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ (FSL) ವರದಿ ಬಂದ ಬಳಿಕವಷ್ಟೇ ತಿಳಿಯಲಿದೆ ಎಂದು ರಾಮನಗರ (Ramanagara) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕಾರ್ತಿಕ್ ರೆಡ್ಡಿ (Karthik Reddy) ಮಾಹಿತಿ ನೀಡಿದ್ದಾರೆ.

    ಪ್ರಕರಣ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕನಕಪುರ ವೈದ್ಯರ ತಂಡವು ಇದ್ರೀಷ್ ಅವರ ಮರಣೋತ್ತರ ಪರೀಕ್ಷೆ ನಡೆಸಿದೆ. ಅವರಿಂದ ಎಫ್‌ಎಸ್‌ಎಲ್ ವರದಿಯನ್ನು ಪಡೆಯಲಾಗುತ್ತದೆ. ಸದ್ಯ ತನಿಖೆ ಪ್ರಗತಿಯಲ್ಲಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತೇವೆ. ಪ್ರಕರಣದ ಪ್ರಮುಖ ಆರೋಪಿ ಪುನೀತ್ ಕೆರೆಹಳ್ಳಿ ಹಾಗೂ ಸಹಚರರ ಬಂಧನಕ್ಕೆ ಈಗಾಗಲೇ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಆರೋಪಿ ಇನ್ನೂ ಪತ್ತೆಯಾಗಿಲ್ಲ. ಇಡೀ ಪ್ರಕರಣ ಕುರಿತು ಸಾತನೂರು ಠಾಣೆಯಲ್ಲಿ ಮೂರು ಎಫ್‌ಐಆರ್‌ಗಳು (FIR) ದಾಖಲಾಗಿವೆ ಎಂದರು. ಇದನ್ನೂ ಓದಿ: ಜನಾರ್ದನ ರೆಡ್ಡಿ ಸಮ್ಮುಖದಲ್ಲೇ ಅಭ್ಯರ್ಥಿಗೆ 1 ಲಕ್ಷ ಹಣ ನೀಡಿದ ಸ್ವಾಮೀಜಿ 

    ಮೊದಲಿಗೆ ಅಕ್ರಮ ಗೋವು ಸಾಗಣೆಗೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ದೂರು ನೀಡಿದ್ದರು. ಬಳಿಕ ಗೋವು ಸಂರಕ್ಷಣೆ ನೆಪದಲ್ಲಿ ನಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಕ್ಯಾಂಟರ್ ಚಾಲಕ ಪ್ರತಿ ದೂರು ನೀಡಿದ್ದು, ಮರು ದಿನ ಬೆಳಗ್ಗೆ 8 ಗಂಟೆಯ ಸುಮಾರಿಗೆ ಘಟನೆ ನಡೆದ ಸ್ಥಳದ 100 ಮೀಟರ್ ದೂರದಲ್ಲಿ ಇದ್ರೀಷ್ ಪಾಷಾ ಅವರ ಶವ ಪತ್ತೆ ಆಗಿದೆ. ಈ ಕುರಿತು ಅವರ ಸಹೋದರ ಯೂನುಸ್ ಪಾಷಾ ನೀಡಿದ ದೂರಿನ ಅನ್ವಯ ಮತ್ತೊಂದು ಎಫ್‌ಐಆರ್ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 70 ಸೀಟ್ ಬಂದ್ರೆ ಲಿಂಗಾಯತರು ಸಿಎಂ ಆಗ್ತಾರೆ: ಶಾಮನೂರು ಸ್ಫೋಟಕ ಹೇಳಿಕೆ

  • ಜಾನುವಾರು ರಕ್ಷಣೆ ವೇಳೆ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣ – ಸಾತನೂರಿಗೆ ಐಜಿಪಿ ಭೇಟಿ

    ಜಾನುವಾರು ರಕ್ಷಣೆ ವೇಳೆ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣ – ಸಾತನೂರಿಗೆ ಐಜಿಪಿ ಭೇಟಿ

    ರಾಮನಗರ: ಕನಕಪುರ (Kanakapura) ತಾಲೂಕಿನ ಸಾತನೂರಿನಲ್ಲಿ (Sathanur) ಗೋವುಗಳ ಸಾಗಣೆ ವೇಳೆ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣದ ತನಿಖೆ ಚುರುಕು ಗೊಂಡಿದೆ. ಈ ಬೆನ್ನಲ್ಲೇ ಸೋಮವಾರ ಸಂಜೆ ಐಜಿಪಿ (IGP) ರವಿಕಾಂತೇಗೌಡ ಸಾತನೂರಿಗೆ ಭೇಟಿ ನೀಡಿ ಘಟನಾ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದು, ಸಾರ್ವಜನಿಕರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ.

    ಮಂಡ್ಯ (Mandya) ಮೂಲದ ಇದ್ರೀಷ್ ಪಾಷಾ ಸಾವಿಗೆ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಕಾರಣ ಎಂದು ಪಾಷಾ ಕುಟುಂಬಸ್ಥರ ದೂರಿನ ಅನ್ವಯ ಎಫ್‌ಐಆರ್ (FIR) ದಾಖಲಾಗಿದ್ದು, ಪುನೀತ್ ಕೆರೆಹಳ್ಳಿ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಬಂಧಿಸುವಂತೆ ಒತ್ತಾಯಿಸಿ, ಕೂಡಲೇ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಬಕಾರಿ ಇಲಾಖೆ ಅಧಿಕಾರಿಗಳಿಂದ ಲಕ್ಷಾಂತರ ರೂ. ಮೌಲ್ಯದ ಮದ್ಯ ವಶಕ್ಕೆ 

    ಇತ್ತ ತನಿಖೆ ಚುರುಕುಗೊಳ್ಳುತ್ತಿದ್ದಂತೆಯೇ ಪುನೀತ್ ಕೆರೆಹಳ್ಳಿ ಕೂಡಾ ಪ್ರಕರಣ ಕುರಿತು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಬಿಟ್ಟಿದ್ದಾರೆ. ಇಡೀ ಪ್ರಕರಣದ ಯಾವುದೇ ರೀತಿಯ ತನಿಖೆಗೆ ನಾನು ಸಿದ್ಧನಿದ್ದೇನೆ. ಅನವಶ್ಯಕವಾಗಿ ನನ್ನನ್ನು ತಪ್ಪಿತಸ್ಥ ಎಂದು ದೂರಲಾಗುತ್ತಿದೆ. ಜೆಡಿಎಸ್ (JDS) ಹಾಗೂ ಕಾಂಗ್ರೆಸ್ (Congress) ನಾಯಕರು ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಇಡೀ ಘಟನೆಯನ್ನು ನಾನು ಫೇಸ್‌ಬುಕ್ (Facebook) ಲೈವ್ ಮಾಡಿದ್ದೇನೆ. ಆದರೆ ಪೊಲೀಸರು ನನ್ನ ಲೈವ್ ವೀಡಿಯೋ ಡಿಲೀಟ್ ಮಾಡಿದ್ದಾರೆ. ಎಫ್‌ಐಆರ್ ಅನ್ನು ಎಡಿಟ್ ಮಾಡಿ ನನ್ನ ಮೇಲೆ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ VIP ಅಭ್ಯರ್ಥಿ ಹಾಕಲು ತಯಾರಿ

  • ಕುತೂಹಲ ಕೆರಳಿಸಿದ ಸುರೇಶ್- ವಿ.ಸೋಮಣ್ಣ ಗುಪ್ತ ಮಾತುಕತೆ

    ಕುತೂಹಲ ಕೆರಳಿಸಿದ ಸುರೇಶ್- ವಿ.ಸೋಮಣ್ಣ ಗುಪ್ತ ಮಾತುಕತೆ

    ರಾಮನಗರ: ಸಂಸದ ಡಿ.ಕೆ.ಸುರೇಶ್ (D. K. Suresh) ಹಾಗೂ ಸಚಿವ ಸೋಮಣ್ಣನವರು (V.Somanna) ಗುಪ್ತ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿದ್ದಾರೆ.

    ಕನಕಪುರ (Kanakapura) ತಾಲೂಕಿನ ರಾಯಸಂದ್ರದಲ್ಲಿ ಕುವೆಂಪು ಸಂಯುಕ್ತ ವಸತಿ ಬಡಾವಣೆಯ ಮುಖ್ಯದ್ವಾರ ಉದ್ಘಾಟನೆಗೆಂದು ವಿ.ಸೋಮಣ್ಣ ಹಾಗೂ ಡಿ.ಕೆ.ಸುರೇಶ್ ಆಗಮಿಸಿದ್ದರು. ಈ ವೇಳೆ ಮಾಧ್ಯಮ ಹಾಗೂ ಆಪ್ತರನ್ನು ದೂರವಿಟ್ಟು ಯಾವುದೋ ಪತ್ರವನ್ನು ಕೈಯಲ್ಲಿ ಹಿಡಿದುಕೊಂಡು ಡಿ.ಕೆ.ಸುರೇಶ್ ಅವರು ಸಚಿವ ಸೋಮಣ್ಣನವರೊಂದಿಗೆ ಮಾತುಕತೆಯನ್ನು ನಡೆಸಿದ್ದಾರೆ. ಇದನ್ನೂ ಓದಿ: ನಾನು ಸರಳ, ಸಜ್ಜನ ರಾಜಕಾರಣಿ, ಹಣ ವಾಪಸ್ ಪಡೆದೇ ಪಡೀತಿನಿ – ಮಾಡಾಳ್

    ಮಾಧ್ಯಮ ಹಾಗೂ ಆಪ್ತರಿಂದ ದೂರ ನಿಂತು ಈ ಇಬ್ಬರು ನಾಯಕರು ಆಪ್ತ ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು. ಸೋಮಣ್ಣ ಮತ್ತು ಬಿಜೆಪಿ ನಾಯಕರ ಮಧ್ಯೆ ಸಂಬಂಧ ಹಳಸಿದ್ದು ಅವರು ಪಕ್ಷ ತೊರೆಯಲಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಈ ಮಧ್ಯೆ ಸುರೇಶ್ ಅವರನ್ನು ಭೇಟಿ ಮಾಡಿ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ: ಹಿಟ್ಲರ್ ಪಕ್ಷ ಎಂದು ಕರೆಸಿಕೊಳ್ಳಲು ನಮಗೆ ಹೆಮ್ಮೆಯಿದೆ- ಕಾಂಗ್ರೆಸ್‌ಗೆ ವಿಜಯೇಂದ್ರ ಟಾಂಗ್

  • ಒಬ್ಬರಿಗೆ ಒಂದೇ ಟಿಕೆಟ್ ಎನ್ನುತ್ತಿರುವ ಡಿಕೆಶಿ ಎರಡು ಕ್ಷೇತ್ರದ ಕಡೆ ಕಣ್ಣು ಹಾಕಿದ್ರಾ?

    ಒಬ್ಬರಿಗೆ ಒಂದೇ ಟಿಕೆಟ್ ಎನ್ನುತ್ತಿರುವ ಡಿಕೆಶಿ ಎರಡು ಕ್ಷೇತ್ರದ ಕಡೆ ಕಣ್ಣು ಹಾಕಿದ್ರಾ?

    ಬೆಂಗಳೂರು: ಸಿಎಂ ಕುರ್ಚಿಯ ಕನಸು ಕಾಣುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar,) ಹೆಸರು ಈಗ ಎರಡು ಕ್ಷೇತ್ರಗಳಲ್ಲಿ ಕೇಳಿ ಬರುತ್ತಿದೆ. ನಿರ್ಣಾಯಕ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಅಂತಹ ರಿಸ್ಕ್ ತಗೆದುಕೊಳ್ತಾರಾ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

    ಕನಕಪುರ ಬಿಟ್ಟು ಮದ್ದೂರಿಗೆ (Maddur) ಹೋಗುವ ರಿಸ್ಕನ್ನ ಕೆಪಿಸಿಸಿ (KPCC) ಅಧ್ಯಕ್ಷರು ತಗೆದುಕೊಳ್ತಾರಾ? ಕನಕಪುರ ಬಿಟ್ಟು ಬೇರೆ ಕಡೆಯಿಂದ ಸ್ಪರ್ಧಿಸುವ ಡಿಕೆಶಿ ಕುರಿತ ವದಂತಿ ಕೇವಲ ವದಂತಿ ಅಷ್ಟೇನಾ? ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಮದುವೆ ಬಳಿಕ ಮಕ್ಕಳನ್ನು ಕರೆದುಕೊಂಡು ಬರುತ್ತೇನೆ – ಪಾಪರಾಜಿಗಳಿಗೆ ಸುನೀಲ್ ಶೆಟ್ಟಿ ಭರವಸೆ

    ಮದ್ದೂರಿನಿಂದ (Maddur Assembly Constituency) ಸ್ಪರ್ಧೆ ಮಾಡಬೇಕು ಎಂಬ ಒತ್ತಾಯವನ್ನ ಡಿಕೆಶಿ ಬೆಂಬಲಿಗರು ಹೇರತೊಡಗಿದ್ದಾರೆ. ಡಿಕೆಶಿ ಮದ್ದೂರಿನಿಂದ ಸ್ಪರ್ಧೆ ಮಾಡ್ತಾರೆ ಅನ್ನೋದು ಕೇವಲ ವದಂತಿ ಅಷ್ಟೆ. ಕನಕಪುರ ಬಿಟ್ಟು ಬೇರೆ ಕಡೆಯಿಂದ ಡಿಕೆಶಿ ಸ್ಪರ್ಧೆ ಕೇವಲ ವದಂತಿ ಅಷ್ಟೆ. ಬೇರೇನೂ ಇಲ್ಲಾ ಎನ್ನುತ್ತಿದೆ ಆಪ್ತ ವಲಯ. ಜೊತೆಗೆ ತವರು ಕ್ಷೇತ್ರ ಬಿಟ್ಟು ಡಿಕೆಶಿ ಹೊರ ಹೋಗುವುದು ಅನುಮಾನ ಎನ್ನಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ `ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಶೈಲಿಯಲ್ಲಿ ಮರ್ಡರ್ – ಫ್ಲೈಟ್‌ ಟಿಕೆಟ್ ಬುಕ್ ಮಾಡಿ ಸಿಕ್ಕಿಬಿದ್ದ ಆರೋಪಿ!

    ಈ ಬಾರಿ ಸಿಎಂ ಕುರ್ಚಿ ಮೇಲೆ ಡಿಕೆಶಿ ಕಣ್ಣಿಟ್ಟು ಕುಳಿತಿದ್ದಾರೆ. ಇಂತಹ ನಿರ್ಣಾಯಕ ಹಂತದಲ್ಲಿ ಡಿಕೆಶಿ ಕನಕಪುರದಿಂದ ಹೊರ ಹೋಗುವ ರಿಸ್ಕ್ ತಗೆದುಕೊಳ್ಳುವುದು ಅನುಮಾನ. ಮದ್ದೂರು ಸ್ಪರ್ಧೆ ಡಿಕೆಶಿ ಬೆಂಬಲಿಗರ ಕೂಗೇ ಹೊರತು, ಅದಕ್ಕೆ ಡಿಕೆಶಿ ಸಮ್ಮತಿಯಿಲ್ಲ ಅನ್ನೋದೆ ಸಧ್ಯದ ಬೆಳವಣಿಗೆ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಂಸದ ರಾಘವೇಂದ್ರರ ಫೋಟೋಗ್ರಾಫರ್ ಕೆರೆಯಲ್ಲಿ ಮುಳುಗಿ ದರ್ಮರಣ

    ಸಂಸದ ರಾಘವೇಂದ್ರರ ಫೋಟೋಗ್ರಾಫರ್ ಕೆರೆಯಲ್ಲಿ ಮುಳುಗಿ ದರ್ಮರಣ

    ರಾಮನಗರ: ಸಂಸದ ಬಿ. ವೈ ರಾಘವೇಂದ್ರ (B.Y Raghavendra)ಅವರ ಫೋಟೋಗ್ರಾಫರ್ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದ್ದು, ಸಂಸದರು ಸಂತಾಪ ಸೂಚಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಂಸದರು, ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುತ್ತಿದ್ದ ಸ್ನೇಹಜೀವಿ ಹಾಗೂ ನನ್ನ ಫೋಟೋಗ್ರಾಫರ್ ಆಗಿದ್ದ ಪ್ರಸನ್ನ ಭಟ್ (Prasanna Bhat) ಅವರ ಅಕಾಲಿಕ ನಿಧನದ ಸುದ್ದಿಯಿಂದ ದುಃಖಿತನಾಗಿದ್ದೇನೆ. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಹಾಗೂ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

    ಇವರು ಶಿವಮೊಗ್ಗ (Shivamogga) ಜಿಲ್ಲೆ ಹೊಸನಗರ ನಿವಾಸಿಯಾಗಿರುವ ಪ್ರಸನ್ನ ಭಟ್ (25) ಕನಕಪುರ ತಾಲೂಕಿನ ಮಾವತ್ತೂರು ಕೆರೆಯಲ್ಲಿ ಸಂಜೆ ಈಜಲು ಹೋಗಿದ್ದ ಸಂದರ್ಭದಲ್ಲಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಪ್ರಸನ್ನ ಭಟ್ ಆರು ಜನರ ತಂಡ ಕನಕಪುರದ ಸ್ನೇಹಿತನ ಮನೆಗೆ ಬಂದಿದ್ದರು. ಅಂತೆಯೇ ಸಂಜೆ ಈಜಾಡಲು ಎಂದು ಮಾವತ್ತೂರು ಕೆರೆ ತೆರಳಿದ್ದರು. ಈಜಾಡುವ (Swimming) ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಪತ್ನಿಯೊಂದಿಗೆ ಜಗಳ – ಕೋಪದ ಭರದಲ್ಲಿ ತನ್ನ ನವಜಾತ ಶಿಶುವನ್ನು ನೆಲಕ್ಕೆ ಎಸೆದ

    ಕೂಡಲೇ ವಿಷಯ ತಿಳಿದು ಕನಕಪುರ ಗಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ದಯಾನಂದ ಸಾಗರ್ ಆಸ್ಪತ್ರೆಗೆ ರವಾನಿಸಲಗಿತ್ತು. ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಾಡಬಂದೂಕು ಹಿಡಿದು ಆಡುತ್ತಿದ್ದ ಮಕ್ಕಳು – ಆಕಸ್ಮಿಕವಾಗಿ ಗುಂಡು ಹಾರಿ ಬಾಲಕ ಸಾವು

    ನಾಡಬಂದೂಕು ಹಿಡಿದು ಆಡುತ್ತಿದ್ದ ಮಕ್ಕಳು – ಆಕಸ್ಮಿಕವಾಗಿ ಗುಂಡು ಹಾರಿ ಬಾಲಕ ಸಾವು

    ರಾಮನಗರ: ತೋಟದ ಮನೆಯಲ್ಲಿ ಇಟ್ಟಿದ್ದ ನಾಡಬಂದೂಕು ಹಿಡಿದು ಆಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ಬಾಲಕ (Boy) ಮೃತಪಟ್ಟಿರುವ ಘಟನೆ ಕನಕಪುರ (Kanakapura) ತಾಲೂಕಿನ ಕೋಡಿಹಳ್ಳಿ ಠಾಣೆ ವ್ಯಾಪ್ತಿಯ ಕಾಡುಶಿವನಹಳ್ಳಿಯಲ್ಲಿ ನಡೆದಿದೆ.

    ಇಬ್ಬರು ಸಹೋದರರು ಆಟವಾಡುತ್ತಿದ್ದಾಗ ಸಾದಿಕ್ (16) ಎಂಬವನು ಬಂದೂಕಿನ ಟ್ರಿಗರ್ ಒತ್ತಿದ ಪರಿಣಾಮ ಗುಂಡು ತಗುಲಿ ಶಮಾ (7) ಎಂಬ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾಡುಶಿವನಹಳ್ಳಿ ಮಲ್ಲೇಶ್ ಅವರ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಬಂದ ಸಾದಿಕ್  ಪೋಷಕರು ಮಲ್ಲೇಶ್‌ನ ತೋಟದ ಮನೆಯಲ್ಲಿದ್ದರು. ಮೃತನ ತಂದೆ, ತಾಯಿ ತೋಟದ ಕೆಲಸದಲ್ಲಿ ನಿರತರಾಗಿದ್ದಾಗ, ಮಕ್ಕಳಾದ ಸಾದಿಕ್ ಮತ್ತು ಶಮಾ ಮನೆಯಲ್ಲಿ ಆಟವಾಡುತ್ತಿದ್ದರು. ಈ ವೇಳೆ ತೋಟದ ಮನೆಯಲ್ಲಿದ್ದ ಬಂದೂಕನ್ನು ಕಂಡ ಮಕ್ಕಳು ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: MES ಪುಂಡರನ್ನು ಹದ್ದುಬಸ್ತಿನಲ್ಲಿ ಇಡುವುದು ನಮಗೆ ಗೊತ್ತಿದೆ : ಬೊಮ್ಮಾಯಿ

    ಇಬ್ಬರು ಆಟವಾಡುತ್ತಿದ್ದಾಗ ಸಾದಿಕ್ ಬಂದೂಕಿನ ಟ್ರಿಗರ್ ಒತ್ತಿದ್ದಾನೆ. ಗುಂಡು ಶಮಾಗೆ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ವಿಷಯ ತಿಳಿದ ಕೋಡಿಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಸುರಕ್ಷತಾ ಕ್ರಮ ಪಾಲಿಸದೆ ಮನೆಯಲ್ಲಿ ಬಂದೂಕು ಇಟ್ಟಿದ್ದ ಮಾಲೀಕ ಮಲ್ಲೇಶ್‌ ಮೇಲೆ ನಿರ್ಲಕ್ಷ್ಯ ಆರೋಪ ಹಾಗೂ ಗುಂಡು ಹಾರಿಸಿದ ಸಾದಿಕ್ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಪಕ್ಕದ ಮನೆಯವರ ಕೋಳಿಗಳು ಕೂಗೋದ್ರಿಂದ ನಿದ್ರೆ ಮಾಡೋಕಾಗ್ತಿಲ್ಲ – ಬೆಂಗಳೂರು ಪೊಲೀಸರಿಗೆ ವ್ಯಕ್ತಿ ದೂರು

    Live Tv
    [brid partner=56869869 player=32851 video=960834 autoplay=true]

  • ಪತ್ನಿ ಬಗ್ಗೆ ಅವಾಚ್ಯವಾಗಿ ಮಾತನಾಡ್ತಿದ್ದ ಸ್ನೇಹಿತನ ಕೊಲೆ ಮಾಡಿದ್ದ ಆರೋಪಿ ಬಂಧನ

    ಪತ್ನಿ ಬಗ್ಗೆ ಅವಾಚ್ಯವಾಗಿ ಮಾತನಾಡ್ತಿದ್ದ ಸ್ನೇಹಿತನ ಕೊಲೆ ಮಾಡಿದ್ದ ಆರೋಪಿ ಬಂಧನ

    ಬೆಂಗಳೂರು: ಪತ್ನಿ ಬಗ್ಗೆ ಅವಾಚ್ಯವಾಗಿ ಮಾತನಾಡುತ್ತಿದ್ದಕ್ಕೆ ಸ್ನೇಹಿತನ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ. ಮೂಲತಃ ಕನಕಪುರದವನಾಗಿರುವ ಈತನನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಆಪ್‌ ಗೆದ್ದರೂ ದೆಹಲಿ ಮೇಯರ್‌ ಹುದ್ದೆ ಬಿಜೆಪಿಗೆ ಸಿಗುತ್ತಾ?

    ಗದಗ (Gadag) ಮೂಲದವನಾಗಿದ್ದ ಬಸವರಾಜ್ ಮತ್ತು ಅಭಿಷೇಕ್ 2 ವರ್ಷಗಳಿಂದ ಪ್ಲಂಬಿಂಗ್, ಪೈಯಿಂಟಿಂಗ್ ಕೆಲಸ ಮಾಡಿಕೊಂಡಿದ್ದರು. ಆದರೆ ಬಸವರಾಜ್ ಮನೆಗೆ ಹೋಗುತ್ತಿರಲಿಲ್ಲ. ಅಭಿಷೇಕ್ ಪತ್ನಿಗೆ ಬಸವರಾಜ್ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ ಜೊತೆ ಅಪಪ್ರಚಾರ ಮಾಡುತ್ತಿದ್ದ. ಇದರಿಂದ ಕೋಪಗೊಂಡ ಅಭಿಷೇಕ್ ಎಣ್ಣೆ ಮತ್ತಿನಲ್ಲೆ ಬಸವರಾಜ್ ನನ್ನ ಕೊಲೆ ಮಾಡಿರೊದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ಸದ್ಯ ಆರೋಪಿಯನ್ನ ಬಂಧಿಸಿರುವ ಪುಟ್ಟೆನಹಳ್ಳಿ ಪೊಲೀಸರು (Puttenahalli Police) ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನ ‘ರೆಸಾರ್ಟ್ ಬಂಧನ’ದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು: ಆ ನಾಲ್ವರ ಸುಳಿವು ಪತ್ತೆ

    ಬೆಂಗಳೂರಿನ ‘ರೆಸಾರ್ಟ್ ಬಂಧನ’ದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು: ಆ ನಾಲ್ವರ ಸುಳಿವು ಪತ್ತೆ

    ಬಿಗ್ ಬಾಸ್ ಓಟಿಟಿಯ (Bigg Boss OTT) ಆವೃತ್ತಿಯಲ್ಲಿ ಆಯ್ಕೆಯಾಗಿರುವ ಸಾನ್ಯ ಅಯ್ಯರ್, ಆರ್ಯವರ್ಧನ್ ಗುರೂಜಿ (Aryavardhan Guruji), ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ (Rupesh Shetty) ಇನ್ನೂ ತಮ್ಮ ತಮ್ಮ ಮನೆ ತಲುಪಿಲ್ಲ. ಸದ್ಯಕ್ಕೆ ಅವರು ತಲುವುದೂ ಇಲ್ಲ. ಅಂದು ಓಟಿಟಿ ಫಿನಾಲೆ ಮುಗಿದ ತಕ್ಷಣವೇ ಈ ನಾಲ್ವರನ್ನೂ ನಿಗೂಢ ಜಾಗಕ್ಕೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿಯೇ ಅವರು ದಿನಗಳನ್ನು ಕಳೆಯುತ್ತಿದ್ದಾರೆ. ಸೆ.24ರವರೆಗೂ ಅವರು ಈಗಿರುವ ಸ್ಥಳದಲ್ಲೇ ಇರಬೇಕಾಗಿದೆ.

    ಈ ಮೊದಲು ಬೆಂಗಳೂರಿನ (Bangalore) ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಆ ನಾಲ್ವರನ್ನೂ ಇಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಅಸಲಿಯಾಗಿ ಅವರು ಇರುವುದು ಬೆಂಗಳೂರು ಕನಕಪುರ (Kanakpur) ರಸ್ತೆಯಲ್ಲಿರುವ ರೆಸಾರ್ಟ್ ವೊಂದರಲ್ಲಿ ಎಂದು ಗೊತ್ತಾಗಿದೆ. ಯಾರ ಸಂಪರ್ಕಕ್ಕೂ ಸಿಗದೇ ಇರುವ ರೀತಿಯಲ್ಲಿ ಅವರನ್ನು ರೆಸಾರ್ಟ್ನಲ್ಲಿ ಇಡಲಾಗಿದ್ದು, ಬಿಗ್ ಬಾಸ್ ಸೀಸನ್ 9 ವೇದಿಕೆಯ ಮೇಲೆಯೇ ಈ ನಾಲ್ವರು ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    ಬೆಂಗಳೂರು ಕನಪುರ ರಸ್ತೆಯಲ್ಲಿನ ಪೈಪ್ ಲೈನ್ ರೋಡಿನಲ್ಲಿರುವ ಐಷಾರಾಮಿ ರೆಸಾರ್ಟ್ ನಲ್ಲಿ (Resort) ನಾಲ್ವರು ಇದ್ದರು, ಅವರನ್ನು ಯಾರಿಂದಲೂ ಸಂಪರ್ಕಿಸಲು ಸಾಧ್ಯವಾಗದಂತೆ ನೋಡಿಕೊಳ್ಳಲಾಗಿದೆ. ಅಲ್ಲದೇ, ರೆಸಾರ್ಟ್ಗೆ ಹೋಗುವ ದಾರಿಯಲ್ಲಿ ಕಾವೇರಿ ನೀರು ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ ಸುಲಭಕ್ಕೆ ಹೋಗುವುದು ಅಸಾಧ್ಯ ಎನ್ನುವ ಕಾರಣಕ್ಕಾಗಿ ಆ ರೆಸಾರ್ಟ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.

    ಈ ಮಧ್ಯೆಯೂ ನಿನ್ನೆ ಸಾನ್ಯ ಐಯ್ಯರ್ ಅವರ ಹುಟ್ಟು ಹಬ್ಬವನ್ನು ಅದೇ ರೆಸಾರ್ಟ್ ನಲ್ಲಿ ಆಚರಿಸಲಾಗಿದೆ. ರೂಪೇಶ್, ರಾಕೇಶ್ ಅಡಿಗ (Rakesh Adiga) ಮತ್ತು ಆರ್ಯವರ್ಧನ್ ಗುರೂಜಿ ಕೇಕ್ ತರಿಸಿ, ಸಾನ್ಯ (Sanya Iyer) ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕುಟುಂಬಕ್ಕೆ ಅವಕಾಶವನ್ನು ನಿರಾಕರಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಮೊನ್ನೆಯಷ್ಟೇ ಈ ನಾಲ್ವರು ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದಾರೆ ಎನ್ನುವುದು ಮತ್ತೊಂದು ಮಾಹಿತಿ.

    Live Tv
    [brid partner=56869869 player=32851 video=960834 autoplay=true]