Tag: ಕನಕಪುರ ಕ್ಷೇತ್ರ

  • ಶಾಸಕರ ಆದಾಯ ಕೋಟಿ ಕೋಟಿ ಹೆಚ್ಚಾದ್ರೂ ಕನಕಪುರ ಅಭಿವೃದ್ಧಿಯಾಗಿಲ್ಲ: ಪರೋಕ್ಷವಾಗಿ ಡಿಕೆಶಿ ತಿವಿದ ಯತ್ನಾಳ್‌

    ಶಾಸಕರ ಆದಾಯ ಕೋಟಿ ಕೋಟಿ ಹೆಚ್ಚಾದ್ರೂ ಕನಕಪುರ ಅಭಿವೃದ್ಧಿಯಾಗಿಲ್ಲ: ಪರೋಕ್ಷವಾಗಿ ಡಿಕೆಶಿ ತಿವಿದ ಯತ್ನಾಳ್‌

    – ಶೂನ್ಯವೇಳೆಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಕೇಸ್ ಪ್ರಸ್ತಾಪ
    – ಕಿಡಿಗೇಡಿಗಳ ಮನೆ ಮೇಲೆ ಬುಲ್ಡೋಜರ್ ಪ್ರಯೋಗಿಸಲು ಬಿಜೆಪಿ ಶಾಸಕರ ಒತ್ತಾಯ

    ಬೆಳಗಾವಿ: ಸದನದ ಕಲಾಪದಲ್ಲಿಂದು ಉತ್ತರ ಕರ್ನಾಟಕದ ಚರ್ಚೆ ವೇಳೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal), ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ಪರೋಕ್ಷವಾಗಿ ಲೇವಡಿ ಮಾಡಿದ ಪ್ರಸಂಗ ನಡೆಯಿತು.

    ಉತ್ತರಕರ್ನಾಟಕದ (UttarKarnataka) ಸಮಗ್ರ ಅಭಿವೃದ್ಧಿಯಾಗ್ತಿಲ್ಲ. ಹಳೇ ಮೈಸೂರು ಭಾಗ ಮಾತ್ರ ಅಭಿವೃದ್ಧಿಯಾಗ್ತಿದೆ. ಅದಕ್ಕೆ ಮೈಸೂರು ಮಹಾರಾಜರು ಕಾರಣ. ಹಾಗೆಯೇ ಕನಕಪುರ ಕ್ಷೇತ್ರವೂ (Kanakapura Constituency) ಅಭಿವೃದ್ಧಿಯಾಗಿಲ್ಲ. ಅಲ್ಲಿರುವ ಶಾಸಕರ ಆದಾಯ ಮಾತ್ರ ವರ್ಷವರ್ಷವೂ ಹೆಚ್ಚಾಗ್ತಿದೆ. 50 ಕೋಟಿ ರೂ. ನಿಂದ 100 ಕೋಟಿ ರೂ., 1,583 ಕೋಟಿ ರೂ. ವರೆಗೂ ಹೆಚ್ಚಾಗಿದೆ. ಆದ್ರೆ ಕನಕಪುರದ ಅಭಿವೃದ್ಧಿ ಮಾತ್ರ ಕುಂಠಿತವಾಗಿದೆ ಎಂದು ಪರೋಕ್ಷವಾಗಿ ಕುಟುಕಿದರು.

    ಮುಂದುವರಿದು, ಸುವರ್ಣಸೌಧಕ್ಕೆ ಲೈಟಿಂಗ್, ಫೌಂಟೇನ್ ಹಾಕೋದ್ರಿಂದ ಉತ್ತರ ಕರ್ನಾಟಕದ ಅಭಿವೃದ್ಧಿಯಾಗಲ್ಲ. 10 ದಿನಗಳ ಕಾಟಾಚಾರದ ಸದನದಿಂದ ಪ್ರಯೋಜನವಿಲ್ಲ. ಈ ಭಾಗದಲ್ಲಿ ಕಚೇರಿಗಳನ್ನ ಪ್ರಾರಂಭಿಸಿ, ಹೆಚ್ಚಿನ ಅನುದಾನ ಒದಗಿಸಿ ಅಂತ ಸರ್ಕಾರಕ್ಕೆ ಯತ್ನಾಳ್ ಒತ್ತಾಯಿಸಿದರು. ಇದನ್ನೂ ಓದಿ: ದಶಪಥ ಹೆದ್ದಾರಿಯಲ್ಲಿ ನಿರ್ಮಾಣವಾಗದ ಸ್ಕೈವಾಕ್ – ಜೀವ ಭಯದಲ್ಲಿ ರಸ್ತೆ ದಾಟುವ ಸಾರ್ವಜನಿಕರು

    ಬುಲ್ಡೋಜರ್ ಪ್ರಯೋಗಿಸಿ: ಬೆಳಗಾವಿಯ (Belagavi) ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಸದ್ದು ಮಾಡಿತು. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸುನೀಲ್ ಕುಮಾರ್ ಹಾಗೂ ಶಶಿಕಲಾ ಜೊಲ್ಲೆ ಇದೊಂದು ಅಮಾನವೀಯ ಕೃತ್ಯ. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ನಡೆಯಬಾರದು ಅಂತ ಆಕ್ರೋಶ ಹೊರಹಾಕಿದರು.

    ಕೃತ್ಯ ಎಸಗಿದ ಕಿಡಿಗೇಡಿಗಳ ಮನೆ ಮೇಲೆ ಯುಪಿ ಮಾದರಿಯಲ್ಲಿ ಬುಲ್ಡೋಜರ್ ಪ್ರಯೋಗ ಮಾಡಬೇಕು ಎಂದು ಸುನೀಲ್ ಕುಮಾರ್ ಆಗ್ರಹಿಸಿದರು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಬೇಕು. ಯಾವುದೇ ಕಾರಣಕ್ಕೂ ಅವರಿಗೆ ಬೇಲ್ ಸಿಗದಂತೆ ನೋಡಿಕೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು. ಈ ವೇಳೆ ಪ್ರಕರಣದ ಬಗ್ಗೆ ವಿವರಣೆ ನೀಡಿದ ಗೃಹ ಸಚಿವ ಪರಮೇಶ್ವರ್, ಇದನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ‘ಸಲಾರ್’ ಸಿನಿಮಾಗೆ ಐದೂ ಭಾಷೆಗಳಿಗೂ ತಾವೇ ಡಬ್ ಮಾಡಿದ ಪೃಥ್ವಿರಾಜ್

    ಮಹಿಳೆ ಮತ್ತು ಅವರ ಕುಟುಂಬಕ್ಕೆ ರಕ್ಷಣೆ ಕೊಡಲಾಗುತ್ತದೆ. ಪ್ರಕರಣದಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಏಳು ಆರೋಪಿಗಳನ್ನ ಬಂಧಿಸಿದ್ದೇವೆ, ಅದೇ ರೀತಿ ಓಡಿಹೋದ ಹುಡಗ-ಹುಡುಗಿಯನ್ನು ಹುಡುಕುವ ಪ್ರಯತ್ನ ನಡೆದಿದೆ ಎಂದು ಉತ್ತರಿಸಿದರು. ಇದನ್ನೂ ಓದಿ: ನಾಯಿ ಬೊಗಳಿದ್ದಕ್ಕೆ ಮಾಲೀಕನಿಗೆ ಚಾಕು ಇರಿದ ದುಷ್ಕರ್ಮಿಗಳು

  • ಕನಕಪುರ ಕ್ಷೇತ್ರದ ಶಿಕ್ಷಕರಿಗಿಲ್ಲ ವರ್ಗಾವಣೆ ಭಾಗ್ಯ- ಸಿಎಂ ಹೇಳಿದ್ರೂ ಟ್ರಾನ್ಸ್‌ಫರ್‌ಗೆ ತಡೆ

    ಕನಕಪುರ ಕ್ಷೇತ್ರದ ಶಿಕ್ಷಕರಿಗಿಲ್ಲ ವರ್ಗಾವಣೆ ಭಾಗ್ಯ- ಸಿಎಂ ಹೇಳಿದ್ರೂ ಟ್ರಾನ್ಸ್‌ಫರ್‌ಗೆ ತಡೆ

    ರಾಮನಗರ: ನೂತನ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಶಿಕ್ಷಣ ಇಲಾಖೆಯಲ್ಲಿ ಕಳೆದ ಕೆಲ ವರ್ಷಗಳಿಂದ ನಿಂತಿದ್ದ ವರ್ಗಾವಣೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಶಿಕ್ಷಣ ಇಲಾಖೆಯ (Education Department) ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಕೌನ್ಸಿಲಿಂಗ್ ಮೂಲಕ 30 ಸಾವಿರಕ್ಕೂ ಅಧಿಕ ಶಿಕ್ಷಕರ ವರ್ಗಾವಣೆಗೆ ಕಳೆದ ಜೂನ್‍ನಲ್ಲಿ ಕೌನ್ಸಿಲಿಂಗ್ ನಡೆದಿತ್ತು.

    ಕೌನ್ಸಿಲಿಂಗ್‍ನಲ್ಲಿ ತಮಗೆ ಬೇಕಾದ ಊರುಗಳಿಗೆ ಶಿಕ್ಷಕರು ವರ್ಗಾವಣೆ ಮಾಡಿಸಿಕೊಂಡಿದ್ರು. ಇಷ್ಟು ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ಮಾಡಿದ ಸರ್ಕಾರ ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಂಡು 43 ಸಾವಿರ ಅತಿಥಿ ಶಿಕ್ಷಕರ ನೇಮಕವನ್ನ ಸಹ ಮಾಡಿಕೊಂಡಿದೆ. ಇದರಿಂದ ಕನಿಷ್ಠ 10 ವರ್ಷಗಳ ಕಾಲ ಒಂದೇ ಕಡೆ ಸೇವೆ ಸಲ್ಲಿಸಿದ್ದ ತಮ್ಮ ಊರು ಕುಟುಂಬವನ್ನ ಬಿಟ್ಟಿದ್ದ ಶಿಕ್ಷಕರು ತಮಗೆ ಬೇಕಾದ ಜಾಗಗಳಿಗೆ ವರ್ಗಾವಣೆ ಪತ್ರ ಪಡೆದು ಅಲ್ಲಿ ಸೇವೆ ಶುರು ಮಾಡಿದ್ದಾರೆ.

    ಇಡೀ ರಾಜ್ಯಕ್ಕೆ ಅನ್ವಯವಾಗಿದ್ದ ರೂಲ್ಸ್ ಮಾನ್ಯ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತವರು ಕ್ಷೇತ್ರ, ಸಂಸದ ಡಿಕೆ ಸುರೇಶ್ (DK Suresh) ಅವರ ಸ್ವಕ್ಷೇತ್ರವಾದ ಕನಕಪುರ ತಾಲೂಕಿನ ಶಿಕ್ಷಕರಿಗೆ ಮಾತ್ರ ವರ್ಗಾವಣೆ ಆಗಿದ್ರು ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಇದಕ್ಕೆ ಕಾರಣವಾಗಿರೋದು ಡಿಸಿಎಂ ಡಿಕೆಶಿ, ಮತ್ತು ಸಂಸದ ಡಿ.ಕೆ ಸುರೇಶ್, ತಮ್ಮ ತಾಲೂಕಿನ ಮಕ್ಕಳ ಹಿತ ದೃಷ್ಟಿಯಿಂದ ಶೈಕ್ಷಣಿಕ ವರ್ಷ ಮುಗಿಯೋವರೆಗೆ ಬಿಡುಗಡೆ ಮಾಡದಂತೆ ತಡೆಹಿಡಿದಿದ್ದಾರೆ ಅನ್ನೋ ಮಾತುಗಳು ತಾಲೂಕಿನ ಶಿಕ್ಷಕರಿಂದ ಕೇಳಿ ಬರುತ್ತಿದೆ. ಇದನ್ನೂ ಓದಿ: ಬೆಂಗಳೂರಲ್ಲಿ 12 ಪಬ್‌, ಬಾರ್‌ಗಳಿಗೆ ಬೀಗ

    ಸಿಎಂಗೂ ಈ ಬಗ್ಗೆ ಗಮನಕ್ಕೆ ತಂದಿರೋ ಶಿಕ್ಷಕರು, ಶಿಕ್ಷಣ ಸಚಿವರಿಗೂ, ವರ್ಗಾವಣೆ ತಡೆದಿರೋದನ್ನ ತಿಳಿಸಿದ್ದಾರೆ. ಸಿಎಂ ಖುದ್ದು ಆದೇಶ ಹೊರಡಿಸಿದ್ದು, ಅಕ್ಟೋಬರ್ 5 ರೊಳಗೆ ಅತಿಥಿ ಶಿಕ್ಷಕರ ನೇಮಕ ಮಾಡಿಕೊಂಡು ವರ್ಗಾವಣೆ ಆಗಿರೋ ಶಿಕ್ಷಕರನ್ನ ಬಿಡುಗಡೆ ಮಾಡಿ ಎಂದು ಸೂಚಿಸಿದ್ದಾರೆ. ಆದರೂ ಇನ್ನೂ ಇಲ್ಲಿನ ಶಿಕ್ಷಕರಿಗೆ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಡಿಸಿಎಂ ಹಾಗೂ ಸಂಸದ ಡಿಕೆ ಸುರೇಶ್ ಅವ್ರಿಗೂ ಶಿಕ್ಷಕರು ಮನವಿ ಮಾಡಿದ್ದು, ಅದಷ್ಟು ಬೇಗ ಬಿಡುಗಡೆಯ ಪತ್ರ ನೀಡಿ ಎಂದು ಕೇಳಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • DCM ಡಿಕೆಶಿ ಮನೆದೇವರು ಕೆಂಕೇರಮ್ಮ ದೇವಾಲಯದಲ್ಲಿ ಚಿನ್ನ, ಬೆಳ್ಳಿ ಕಳ್ಳತನ‌!

    DCM ಡಿಕೆಶಿ ಮನೆದೇವರು ಕೆಂಕೇರಮ್ಮ ದೇವಾಲಯದಲ್ಲಿ ಚಿನ್ನ, ಬೆಳ್ಳಿ ಕಳ್ಳತನ‌!

    ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಮನೆದೇವರಾದ ಕೆಂಕೇರಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿದೆ.

    ಕನಕಪುರ ಪಟ್ಟಣದಲ್ಲಿರುವ ಕೆಂಕೇರಮ್ಮ ದೇವಾಲಯದಲ್ಲಿ (Kenkeramma Temple) ಸೋಮವಾರ ಬೆಳಗ್ಗೆ ಅರ್ಚಕರು ಊಟಕ್ಕೆ ಹೋಗಿದ್ದಾಗ ದೇವಿಯ ಮೈಮೇಲೆ ಇದ್ದ 8 ಗ್ರಾಂ ತೂಕ ಚಿನ್ನದ ತಾಳಿ ಹಾಗೂ 50 ಗ್ರಾಂ ನಷ್ಟು ಬೆಳ್ಳಿ ಆಭರಣಗಳನ್ನ ಕದ್ದು ಕಳ್ಳ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಸ್ವಾತಂತ್ರ‍್ಯ ದಿನಕ್ಕೆ ವೆಂಕಟೇಶ್ ‘ಸೈಂಧವ್’ ಟೀಮ್‌ನಿಂದ ಸ್ಪೆಷಲ್ ಗಿಫ್ಟ್- ಡಿಸೆಂಬರ್‌ 22ಕ್ಕೆ ಸಿನಿಮಾ ರಿಲೀಸ್

    ಖದೀಮನ ಕೈಚಳಕ ದೇವಾಲಯದ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಿದ ಸ್ಯಾಂಡಲ್‌ವುಡ್ ತಾರೆಯರು

    ಕೂಡಲೇ ಕಳ್ಳನನ್ನ ಬಂಧಿಸುವಂತೆ ಭಕ್ತರು ಆಗ್ರಹಿಸಿದ್ದಾರೆ. ಪ್ರತಿವರ್ಷವೂ ಈ ದೇವಾಲಯದಲ್ಲಿ ಅದ್ಧೂರಿ ಕೊಂಡೋತ್ಸವ ಜರುಗಲಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅಲ್ಲದೇ ಡಿ.ಕೆ ಶಿವಕುಮಾರ್ ಚುನಾವಣಾ ಸಂದರ್ಭದಲ್ಲಿ ಕುಟುಂಬ ಸಮೇತ ಆಗಮಿಸಿ ಕೆಂಕೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ‌.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]