Tag: ಕದನ ವಿರಾಮ

  • ಕದನ ವಿರಾಮ ಉಲ್ಲಂಘಿಸಿ ಮತ್ತೆ ಉದ್ಧಟತನ ಮೆರೆದ ಪಾಕ್

    ಕದನ ವಿರಾಮ ಉಲ್ಲಂಘಿಸಿ ಮತ್ತೆ ಉದ್ಧಟತನ ಮೆರೆದ ಪಾಕ್

    ಶ್ರೀನಗರ: ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ಉದ್ಧಟತನ ಮೆರೆದಿದೆ. ಸೋಮವಾರ ನಸುಕಿನಜಾವ 3:30ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಕೃಷ್ಣ ಘಾಟಿ ಹಾಗೂ ನೌಶೇರಾ ವಲಯಗಳಲ್ಲಿ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿದೆ.

    ಪಾಕಿಸ್ತಾನವು ಮತ್ತೆ ಬೆಳಗ್ಗೆ 5:30ರ ಸುಮಾರಿಗೆ ನೌಶೇರಾ ಸೆಕ್ಟರ್‌ನ ನಿಯಂತ್ರಣ ರೇಖೆಯಲ್ಲಿ (ಎಲ್‍ಒಸಿ) ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತು. ಇದಕ್ಕೆ ಭಾರತೀಯ ಸೇನೆಯು ಸರಿಯಾದ ಪ್ರತ್ಯುತ್ತರ ನೀಡಿದೆ.

    ಭಯೋತ್ಪಾದಕರು ಭಾರತಕ್ಕೆ ಪ್ರವೇಶಿಸಲು ಪಾಕಿಸ್ತಾನವು ಆಗಾಗ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮಾಡುತ್ತದೆ. ಈ ವರ್ಷ ಇದಕ್ಕೆ ಸರಿಯಾಗಿ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆಯು ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳನ್ನು ಹೊಡೆದುರುಳಿಸಿವೆ.

    ಈ ವರ್ಷ ಇಲ್ಲಿವರೆಗೂ 100ಕ್ಕೂ ಹೆಚ್ಚು ಭಯೋತ್ಪಾದಕರು ಭಾತರದ ಯೋಧರು ಹತ್ಯೆ ಮಾಡಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಜೂನ್ 19ರಂದು ಹೇಳಿದ್ದರು. ಈ ಪೈಕಿ 50 ಮಂದಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ್ದರೆ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದ ತಲಾ 20 ಮಂದಿ ಭಾರತೀಯ ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ. ಉಳಿದವರು ಅನ್ಸಾರ್-ಘಜ್ವಾತುಲ್ ಹಿಂದ್ ಅಲ್-ಬದ್ರ್ ನಂತಹ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದವರು ಎಂದು ಡಿಜಿಪಿ ತಿಳಿಸಿದ್ದರು.

  • ಪಾಕಿನಿಂದ ಕದನವಿರಾಮ ಉಲ್ಲಂಘನೆ – ಗುಂಡಿನ ದಾಳಿಗೆ ಓರ್ವ ಸೈನಿಕ ಹುತಾತ್ಮ

    ಪಾಕಿನಿಂದ ಕದನವಿರಾಮ ಉಲ್ಲಂಘನೆ – ಗುಂಡಿನ ದಾಳಿಗೆ ಓರ್ವ ಸೈನಿಕ ಹುತಾತ್ಮ

    ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಸೈನಿಕರ ಮಧ್ಯೆ ಇಂದು ಮಧ್ಯಾಹ್ನ ಗುಂಡಿನ ಚಕಮಕಿ ನಡೆದಿದ್ದು, ಪಾಕ್ ನಡೆಸಿದ ಶೆಲ್ ದಾಳಿಗೆ ಓರ್ವ ಯೋಧ ಹುತಾತ್ಮರಾಗಿದ್ದಾರೆ.

    ಇಂದು ಮಧ್ಯಾಹ್ನ ಪಾಕಿಸ್ತಾನ ಉತ್ತರ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯ ತಂಗ್ಧರ್ ಸೆಕ್ಟರ್‍ನಲ್ಲಿ ಭಾರೀ ಶೆಲ್ ದಾಳಿ ನಡೆಸಿದೆ. ಪಾಕ್ ನಡೆಸಿದ ಶೆಲ್ ದಾಳಿಗೆ ಒರ್ವ ಸೈನಿಕ ಹುತಾತ್ಮರಾಗಿದ್ದಾರೆ. ನಂತರ ಭಾರತೀಯ ಸೈನಿಕರು ಸಹ ಪ್ರತಿ ದಾಳಿ ನಡೆಸಿದ್ದು, ಪಾಕಿನ ಇಬ್ಬರು ಸೈನಿಕರು ಹತರಾಗಿದ್ದಾರೆ.

    ಪಾಕ್ ದಾಳಿಗೆ 34 ವರ್ಷದ ಭಾರತೀಯ ಸೈನಿಕ ನಾಯ್ಕ್ ಕ್ರಿಶನ್ ಲಾಲ್ ಅವರು ಸುಂದರ್‍ಬನಿ ಪ್ರದೇಶದಲ್ಲಿ ಹುತಾತ್ಮರಾಗಿದ್ದಾರೆ. ಇವರು ಜಮ್ಮು ಕಾಶ್ಮೀರದ ತೇಹ್ಸಿಲ್ ಅಖ್ನೂರ್ ಜಿಲ್ಲೆಯ ಘಗ್ರಿಯಾಲ್ ಗ್ರಾಮದವರಾಗಿದ್ದಾರೆ. ನಾಯಕ್ ಕ್ರಿಶನ್ ಲಾಲ್ ಅವರು ಧೈರ್ಯಶಾಲಿ, ಹೆಚ್ಚು ಪರಾಕ್ರಮಿ ಮತ್ತು ಪ್ರಾಮಾಣಿಕ ಸೈನಿಕರಾಗಿದ್ದರು. ಅವರ ತ್ಯಾಗ ಹಾಗೂ ಕರ್ತವ್ಯ ನಿಷ್ಠೆಗಾಗಿ ರಾಷ್ಟ್ರ ಅವರಿಗೆ ಚಿರರುಣಿಯಾಗಿರುತ್ತದೆ ಎಂದು ಭಾರತೀಯ ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಭಾರತದ ಕೆಣಕಿದ್ದಕ್ಕೆ ನಾವು ಪ್ರತಿದಾಳಿ ನಡೆಸಿದ್ದು, ಪಾಕ್ ಸೈನಿಕರು ಗಂಭೀರ ಗಾಯಗೊಂಡಿದ್ದು, ಸಾವು, ನೋವು ಸಂಭವಿಸಿದೆ ಎಂದು ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

  • ಕಾಶ್ಮೀರದಲ್ಲಿ ಮತ್ತೆ ಪಾಕ್‍ನಿಂದ ಗುಂಡಿನ ದಾಳಿ: ಬಿಎಸ್‍ಎಫ್ ಯೋಧ ಹುತಾತ್ಮ

    ಕಾಶ್ಮೀರದಲ್ಲಿ ಮತ್ತೆ ಪಾಕ್‍ನಿಂದ ಗುಂಡಿನ ದಾಳಿ: ಬಿಎಸ್‍ಎಫ್ ಯೋಧ ಹುತಾತ್ಮ

    ಶ್ರೀನಗರ: ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ನಡೆಸಿಸಿದ ಅಪ್ರಚೋದಿತ ಗುಂಡಿನ ದಾಳಿಗೆ ಬಿಎಸ್‍ಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

    ಶುಕ್ರವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಆರ್.ಎಸ್.ಪುರದ ಬಳಿಯಿರುವ ಅರ್ನಿಯಾ ಅಂತಾರಾಷ್ಟ್ರೀಯ ಗಡಿ ಪ್ರದೇಶ ದಲ್ಲಿ ಏಕಾಏಕಿ ಭಾರತೀಯ ಸೇನೆ ಮೇಲೆ ಗುಂಡಿನ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಉತ್ತರಪ್ರದೇಶ ಮೂಲಕದ ಬಿಎಸ್‍ಎಫ್ ಕಾನ್‍ಸ್ಟೇಬಲ್ ಬ್ರಿಜೇಂದ್ರ ಬಹದ್ದೂರ್ ಸಿಂಗ್ ಹುತಾತ್ಮರಾಗಿದ್ದಾರೆ.

    ಪಾಕ್ ದಾಳಿಯಲ್ಲಿ ಒಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಇದು ಐದು ದಿನಗಳಲ್ಲಿ ಆರನೇ ಬಾರಿ ಕದನ ವಿರಾಮವನ್ನು ಪಾಕಿಸ್ತಾನ ಉಲ್ಲಂಘನೆ ಮಾಡಿದೆ ಎಂದು ಬಿಎಸ್‍ಎಫ್ ಮೂಲಗಳು ಹೇಳಿವೆ.

    ಪಾಕ್ ದಾಳಿಗೆ ಪತ್ರಿಯಾಗಿ ಭಾರತೀಯ ಸೇನೆಯು ಗುಂಡಿನ ದಾಳಿ ನಡೆಸಿದೆ. ಗುಂಡಿನ ಚಕಮಕಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿರುವ ಜನರು ಭಯಗೊಂಡಿದ್ದಾರೆ.