ಇಸ್ಲಾಮಾಬಾದ್: ತಾಲಿಬಾನ್ ಯುದ್ಧಕ್ಕೆ ಭಾರತ ಪ್ರಾಯೋಜಕತ್ವ ವಹಿಸಿದ್ದು, ಅಫ್ಘಾನಿಸ್ತಾನ ಭಾರತದ ಪ್ರಾಕ್ಸಿ ಯುದ್ಧದಲ್ಲಿ (Indias Proxy War) ಹೋರಾಡುತ್ತಿದೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif) ಆರೋಪಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಅಫ್ಘಾನಿಸ್ತಾನವು (Afghanistan) ಯುದ್ಧದ ನಿರ್ಧಾರಗಳನ್ನ ಕಾಬೂಲ್‌ನಲ್ಲಿ ಅಲ್ಲ ಭಾರತದ ನವದೆಹಲಿಯಲ್ಲಿ ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ. ಇದೇ ವೇಳೆ ಕದನ ವಿರಾಮದ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಫ್ಘಾನ್-ಪಾಕ್ ಮಧ್ಯೆ 48 ಗಂಟೆಗಳ ಕದನ ವಿರಾಮ ಜಾರಿ
ತಾಲಿಬಾನ್‌ನ (Taliban) ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಇತ್ತೀಚೆಗೆ ಭಾರತಕ್ಕೆ ಭೇಟಿ ನೀದ್ದಾಗ ಪ್ಲ್ಯಾನ್ ರೂಪಿಸಿದ್ದಾರೆ. ದೆಹಲಿಗೆ ಅವರ ಮೊದಲ ಭೇಟಿಯು ಅಧಿಕೃತವಾಗಿ ವ್ಯಾಪಾರ ಮತ್ತು ದ್ವಿಪಕ್ಷೀಯ ಸಂಬಂಧಗಳ ಮೇಲೆ ಕೇಂದ್ರೀಕೃತವಾಗಿತ್ತು. ಆದ್ರೆ ಈ ಸಭೆಯ ನಿಜವಾದ ಉದ್ದೇಶ ಬೇರೆಯದ್ದೇ ಆಗಿತ್ತು ಎಂದಿದ್ದಾರೆ ಖವಾಜ ಆಸಿಫ್. ಇದನ್ನೂ ಓದಿ: ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ, ಮೋದಿ ನನಗೆ ಭರವಸೆ ನೀಡಿದ್ದಾರೆ: ಟ್ರಂಪ್
48 ಗಂಟೆಗಳ ಕದನ ವಿರಾಮ
ಪಾಕಿಸ್ತಾನ ಮತ್ತು ಅಫ್ಘಾನ್ ನಡುವೆ 48 ಗಂಟೆಗಳ ಕದನ ವಿರಾಮ ಘೋಷಣೆಯಾಗಿದೆ. ಎರಡು ದೇಶಗಳ ಮಧ್ಯೆ ಸಂಭವಿಸಿದ ಸಂಘರ್ಷದಲ್ಲಿ ಕನಿಷ್ಠ 15 ಅಫ್ಘಾನ್ ನಾಗರಿಕರು, 6 ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ. ರಾತ್ರಿ ಅಫ್ಘಾನ್ ಪಡೆಗಳು, ಸ್ಥಳೀಯ ಉಗ್ರಗಾಮಿಗಳು ನಡೆಸಿದ ಗಡಿಯಾಚೆಗಿನ ಗುಂಡಿನ ದಾಳಿಗೆ ತನ್ನ ಸೇನೆಯು ಪ್ರತೀಕಾರ ತೀರಿಸಿಕೊಂಡಿದೆ ಎಂದು ಪಾಕಿಸ್ತಾನ ಹೇಳಿದೆ.
ಕಾಬೂಲ್/ಇಸ್ಲಾಮಾಬಾದ್: ಪಾಕಿಸ್ತಾನ (Pakistan) ಮತ್ತು ಅಫ್ಘಾನಿಸ್ತಾನ (Afghanistan) ನಡುವೆ ನಡೆದ ಹಿಂಸಾಚಾರದಲ್ಲಿ ಡಜನ್‌ಗಟ್ಟಲೇ ಜನ ಸಾವನ್ನಪ್ಪಿ ಮತ್ತು ಅನೇಕರು ಗಾಯಗೊಂಡ ನಂತರ ಎರಡು ದೇಶಗಳು 48 ಗಂಟೆಗಳ ಕದನ ವಿರಾಮಕ್ಕೆ (Ceasefire) ಒಪ್ಪಿಕೊಂಡಿವೆ.
ಭಾರತೀಯ ಕಾಲಮಾನ ಬುಧವಾರ ಸಂಜೆ 6 ಗಂಟೆಗೆ ಕದನ ವಿರಾಮ ಜಾರಿಯಾಗಿದೆ. ಅಫ್ಘಾನಿಸ್ತಾನ ಕದನ ವಿರಾಮವನ್ನು ಕೇಳಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಕದನ ವಿರಾಮದ ಬಗ್ಗೆಯಾಗಲಿ ಅಥವಾ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಮೊದಲು ಕೇಳಿದ್ದು ಯಾರು ಮತ್ತು ಪಾಕ್ ಹೇಳಿಕೆಯ ಬಗ್ಗೆಯಾಗಲಿ ಅಫ್ಘಾನಿಸ್ತಾನ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
After years of covert interference, Pakistan’s agenda in Afghanistan is now clear. Its reaction to the Taliban FM’s India visit exposes a policy driven by insecurity, not stability. Multiple sites in Kabul have been hit. Afghanistan will stand firm. May Allah have mercy on our… pic.twitter.com/nNz2mjQDGy
ನಮ್ಮ ನಡುವೆ ಸಂಕೀರ್ಣವಾಗಿರುವ ಸಮಸ್ಯೆಯಿದೆ. ಆದರೆ ಈ ಸಮಸ್ಯೆಗೆ ಮಾತುಕತೆಯ ಮೂಲಕ ಪರಿಹಾರವನ್ನು ಕಂಡುಹಿಡಿಯಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ ಪಾಕಿಸ್ತಾನ ಹೇಳಿದೆ. ಇದನ್ನೂ ಓದಿ: ಪಾಕ್ ವಿರುದ್ಧ ಸಿಡಿದೆದ್ದ ಪಿಒಕೆ – ಏನಿದು ವಿವಾದ?
ಇಂದು ಮುಂಜಾನೆ ನಡೆಸಿದ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಡಜನ್‌ಗಟ್ಟಲೆ ಅಫ್ಘಾನ್ ಸೈನಿಕರನ್ನು ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.
Afghan Taliban claims they used drones to target Pakistani border outposts. Dozens of Pakistani soldiers have been killed or are missing as of now. Deadliest clashes between Pakistan and Afghanistan in years. pic.twitter.com/Ig4raLRnVl
ಇತ್ತೀಚಿನ ವರ್ಷಗಳಲ್ಲಿ ಎರಡು ದೇಶಗಳ ಮಧ್ಯೆ ನಡೆದ ಅತ್ಯಂತ ಭೀಕರ ಘರ್ಷಣೆ ಇದಾಗಿದೆ. ಕಾಬೂಲ್ ಮೇಲೆ ಪಾಕಿಸ್ತಾನ ಏರ್ ಸ್ಟ್ರೈಕ್ ಮಾಡಿದ್ದಕ್ಕೆ ಪ್ರತಿಯಾಗಿ ಅಫ್ಘಾನಿಸ್ತಾನ ಗಡಿಯಲ್ಲಿ ದಾಳಿ ನಡೆಸಿತ್ತು.
– ಭಯೋತ್ಪಾದನೆ ತಡೆಗೆ ಪಾಕ್‌ನಲ್ಲಿ ಸ್ಥಾಪನೆಯಾಗಲಿದೆಯಂತೆ ಸ್ಪೆಷಲ್ ಕಮಾಂಡ್
– ಅಮೆರಿಕ-ಪಾಕ್ ನಡುವೆ ದ್ವಿಪಕ್ಷೀಪ ಒಪ್ಪಂದ
ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif), ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಶ್ವೇತಭವನದ ಓವಲ್ ಕಚೇರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಭೇಟಿಯಾಗಿದ್ದು, ಸುಮಾರು 90 ನಿಮಿಷಗಳ ಕಾಲ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ವಿಶ್ವಸಂಸ್ಥೆಯ (United Nations) ಸಾಮಾನ್ಯ ಸಭೆಯ 80ನೇ ಅಧಿವೇಶನದಲ್ಲಿ ಭಾಗಿಯಾಗಲು ಅಮೆರಿಕ ಪ್ರವಾಸದಲ್ಲಿರುವ ಷರೀಫ್ ಅವರಿಂದು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅದಕ್ಕೂ ಮುನ್ನವೇ ಸೇನಾ ಮುಖಸ್ಥರೊಟ್ಟಿಗೆ ಟ್ರಂಪ್ ಅವರನ್ನ ಭೇಟಿಯಾಗಿದ್ದು, ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. ಭದ್ರತೆ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಅನೇಕ ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ. ಭಯೋತ್ಪಾದನೆ ನಿಗ್ರಹ ಒಪ್ಪಂದಕ್ಕೂ ಸಹಿ ಮಾಡಲಾಗಿದ್ದು, ಪರಸ್ಪರ ಸಹಕಾರದೊಂದಿಗೆ ಮುಂದುವರಿಯಲು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಕೂಡ ಉಪಸ್ಥಿತರಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸುಂಕ ಸುಂಕ ಸುಂಕ; ಔಷಧಗಳ ಆಮದಿನ ಮೇಲೆ 100% ಸುಂಕ ಘೋಷಿಸಿದ ಟ್ರಂಪ್ – ಭಾರತಕ್ಕೇನು ಎಫೆಕ್ಟ್?
ಪಾಕ್‌ನಲ್ಲಿ ಜಂಟಿ ಭಯೋತ್ಪಾದನಾ ನಿಗ್ರಹ ಘಟಕ ಸ್ಥಾಪನೆ ಪಹಲ್ಗಾಮ್ ಉಗ್ರರಿಗೆ ಕುಮ್ಮಕ್ಕು ನೀಡಿದ್ದ ಪಾಕಿಸ್ತಾನ ಇದೀಗ ಅಮೆರಿಕದೊಟ್ಟಿಗೆ ಭಯೋತ್ಪಾದನೆ ನಿಗ್ರಹ ಒಪ್ಪಂದ ಮಾಡಿಕೊಂಡಿದೆ. ಅದಕ್ಕಾಗಿ ಪಾಕಿಸ್ತಾನದಲ್ಲಿ ಜಂಟಿ ಭಯೋತ್ಪಾದನಾ ನಿಗ್ರಹ ಘಟಕ ಸ್ಥಾಪಿಸುವ ನಿರ್ಧಾರವನ್ನೂ ಕೈಗೊಂಡಿದೆ. ಇದೇ ವೇಳೆ ಟ್ರಂಪ್ ಅಫ್ಘಾನ್‌ನಿಂದ ಬರುತ್ತಿರುವ ಉಗ್ರ ಬೆದರಿಕೆಗಳನ್ನು ಪರಿಹರಿಸುವುದಾಗಿ ಟ್ರಂಪ್ ಪಾಕ್ ಪ್ರಧಾನಿ, ಅಸಿಮ್ ಮುನೀರ್‌ಗೆ ಭರವಸೆ ನೀಡಿದ್ದಾರೆ.
ಕದನ ವಿರಾಮ ಹೇಳಿಕೆಗೆ ಪಾಕ್ ಪ್ರಧಾನಿ ಪ್ರತಿಧ್ವನಿ
ಟ್ರಂಪ್ ಭೇಟಿ ಬಳಿಕ ಮಾತನಾಡಿದ ಷರೀಫ್, ಕದನ ವಿರಾಮ ಉಲ್ಲೇಖಿಸಿ ಟ್ರಂಪ್ ಅವರನ್ನ ಶ್ಲಾಘಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಅವರ ದಿಟ್ಟತನ ಮತ್ತು ನಿರ್ಣಾಯಕ ನಾಯಕತ್ವ ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಅನುಕೂಲ ಮಾಡಿಕೊಟ್ಟಿತು. ಅಲ್ಲದೇ ಗಾಜಾದಲ್ಲಿನ ಸಂಘರ್ಷ ಕೊನೆಗೊಳಿಸಲು ಹಾಗೂ ಮಧ್ಯಪ್ರಾಚ್ಯದಲ್ಲಿ ಶಾಂತಿ ಪುನಸ್ಥಾಪಿಸುವ ನಿರ್ಧಾರ ಕೈಗೊಂಡಿರುವುದು ಶ್ಲಾಘನೀಯ ಎಂದು ಟ್ರಂಪ್ ಪರ ಹಾಡಿಹೊಗಳಿದರು.
ವಾಷಿಂಗ್ಟನ್: ಕಳೆದ 12 ದಿನಗಳಿಂದ ನಡೆಯುತ್ತಿದ್ದ ಇಸ್ರೇಲ್ (Israel) ಇರಾನ್ (Iran) ನಡುವಿನ ಯುದ್ಧ ಕೊನೆಗೂ ಅಂತ್ಯವಾಗಿದ್ದು ಎರಡು ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಅಮೆರಿಕ (USA) ಮತ್ತು ಕತಾರ್ (Qatar) ಪ್ರಯತ್ನದಿಂದ ಈ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿವೆ.
ಜೂನ್ 23 ರ ರಾತ್ರಿಯಿಡಿ ನಡೆದ ವಿದ್ಯಮಾನದಲ್ಲಿ ಅಮೆರಿಕ ಇಸ್ರೇಲ್ ಮನವೊಲಿಸಿದರೆ ಕತಾರ್ ಇರಾನ್ ಮನವೊಲಿಸಲು ಯಶಸ್ವಿಯಾಯಿತು.
ಕದನ ವಿರಾಮ ಹೇಗಾಯ್ತು?
ಆರಂಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಜೊತೆ ಮಾತನಾಡಿದರು. ಆರಂಭದಲ್ಲಿ ಕದನ ವಿರಾಮಕ್ಕೆ ಒಪ್ಪದ ಇಸ್ರೇಲ್ ಕೊನೆಗೆ ಇರಾನ್ ಮುಂದೆ ಯಾವುದೇ ದಾಳಿ ಮಾಡುವುದಿಲ್ಲ ಎಂದು ಒಪ್ಪಿಕೊಂಡರೆ ಮಾತ್ರ ಕದನ ವಿರಾಮಕ್ಕೆ ಒಪ್ಪುತ್ತೇನೆ ಎಂದು ಷರತ್ತು ವಿಧಿಸಿದರು.
ಬಾಂಬ್ ದಾಳಿ ನಡೆಸಿದ್ದರಿಂದ ಇರಾನ್ ತನ್ನ ಮಾತನ್ನು ಕೇಳುವುದಿಲ್ಲ ಎನ್ನುವುದು ಅಮೆರಿಕ್ಕೆ ಗೊತ್ತಿತ್ತು. ಈ ಕಾರಣಕ್ಕೆ ಟ್ರಂಪ್ ಇರಾನ್ ಆಪ್ತ ದೇಶವಾಗಿರುವ ಕತಾರ್ ಸಂಪರ್ಕಿಸಿದರು. ಕತಾರ್ ಎಮಿರ್ ಜೊತೆ ಮಾತನಾಡಿ ಕದನ ವಿರಾಮಕ್ಕೆ ಇರಾನ್ ಮನವೊಲಿಸುವಂತೆ ಕೇಳಿಕೊಂಡರು ನಂತರ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕತಾರ್ ಪ್ರಧಾನಿ ಕಚೇರಿಯೊಂದಿಗೆ ಸಮನ್ವಯ ಸಾಧಿಸಿದರು. ಇದನ್ನೂ ಓದಿ: 12 ದಿನಗಳ ಇಸ್ರೇಲ್-ಇರಾನ್ ಸಂಘರ್ಷಕ್ಕೆ ಅಂತ್ಯ – ಮೂರು ದೇಶಗಳಿಗೆ ಸಿಕ್ಕಿದ್ದೇನು?
ವ್ಯಾನ್ಸ್ ಜೊತೆಗೆ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ಯುಎಸ್ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಕೂಡ ಇರಾನ್ ಜೊತೆ ಮಾತುಕತೆಯಲ್ಲಿ ಭಾಗಿಯಾಗಿದ್ದರು. ಕತಾರ್ ಪ್ರಧಾನಿಯೊಂದಿಗೆ ಮಾತನಾಡಿದ ನಂತರ ಇರಾನ್ ಕದನ ವಿರಾಮ ಪ್ರಸ್ತಾಪಕ್ಕೆ ಒಪ್ಪಿಕೊಂಡಿತು.
ಅಮೆರಿಕ ಮೂರು ಪ್ರಮುಖ ಪರಮಾಣು ಕೇಂದ್ರಗಳಾದ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಮೇಲೆ ಬಾಂಬ್ ದಾಳಿ ಮಾಡಿದ್ದಕ್ಕೆ ಇರಾನ್ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಪ್ರತಿದಾಳಿ ನಡೆಸುವ ಎಚ್ಚರಿಕೆ ನೀಡಿತ್ತು. ಅದರಂತೆ ಸೋಮವಾರ ರಾತ್ರಿ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ದೊಡ್ಡ ವಾಯುನೆಲೆಯ ಮೇಲೆ ದಾಳಿ ಮಾಡಿತ್ತು. ಆದರೆ ಈ ದಾಳಿ ನಡೆಸುವ ಮೊದಲೇ ಇರಾನ್ ಕತಾರ್‌ಗೆ ತಿಳಿಸಿತ್ತು. ಈ ವಿಚಾರವನ್ನು ಕತಾರ್ ಅಮೆರಿಕಗೆ ಹೇಳಿತ್ತು. ಮೊದಲೇ ದಾಳಿ ನಡೆಸುವ ವಿಚಾರ ತಿಳಿದ ಕಾರಣ ಅಮೆರಿಕ ಎಲ್ಲದ್ದಕ್ಕೂ ಸನ್ನದ್ದವಾಗಿತ್ತು ಮತ್ತು ಯಾವುದೇ ಸಾವು ನೋವು ಸಂಭವಿಸಿಲ್ಲ. ಇದನ್ನೂ ಓದಿ: ದೇಶ ತೊರೆಯಿರಿ ಇಲ್ವೋ ಇಂದು ಸಾಯಲು ಸಿದ್ಧವಾಗಿರಿ – ಕರೆ ಮಾಡಿ ಇರಾನ್ ಕಮಾಂಡರ್‌ಗಳಿಗೆ ಮೊಸಾದ್ ಎಚ್ಚರಿಕೆ
ನಮಗೆ ಮುಂಚಿನ ಸೂಚನೆ ನೀಡಿದ್ದಕ್ಕಾಗಿ ಇರಾನ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದರಿಂದ ಯಾವುದೇ ಜೀವ ಹಾನಿ ಮತ್ತು ಯಾರು ಗಾಯಗೊಂಡಿಲ್ಲ ಎಂದು ಟ್ರಂಪ್ ಹೇಳಿದ್ದರು. ಒಂದು ವೇಳೆ ದಾಳಿಯಿಂದ ವಾಯುನೆಲೆಗೆ ಹಾನಿಯಾಗಿದ್ದರೆ ಅಮೆರಿಕ ಮತ್ತಷ್ಟು ದಾಳಿ ನಡೆಸುವ ಸಾಧ್ಯತೆ ಇತ್ತು. ಆದರೆ ಈ ಬಾರಿ ಶಾಂತಿ ಮಂತ್ರವನ್ನು ಜಪಿಸಿದ ಟ್ರಂಪ್ ಪ್ರತಿದಾಳಿ ನಡೆಸಲು ಮುಂದಾಗಲಿಲ್ಲ. ಹೀಗಾಗಿ ಕದನ ವಿರಾಮದ ಮಾತುಕತೆ ಯಶಸ್ವಿಯಾಯಿತು.
ಇಸ್ರೇಲಿ ದಾಳಿಯಿಂದ ಸುಮಾರು 600 ಜನ ಮೃತಪಟ್ಟಿದ್ದಾರೆ ಎಂದು ಇರಾನ್‌ನ ಆರೋಗ್ಯ ಸಚಿವಾಲಯ ಹೇಳಿದೆ. ಆದರೆ ಮಾನವ ಹಕ್ಕುಗಳ ಗುಂಪು 950ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಇಸ್ರೇಲ್ ನಗರಗಳ ಮೇಲೆ ಇರಾನ್ ಕ್ಷಿಪಣಿಗಳು ಬಿದ್ದ ಪರಿಣಾಮ 24 ಮಂದಿ ಮೃತಪಟ್ಟಿದ್ದಾರೆ.
ಟೆಹ್ರಾನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಇಸ್ರೇಲ್ (Israel) ತನ್ನ ಆಕ್ರಮಣವನ್ನು ನಿಲ್ಲಿಸಿದರೆ ಮಾತ್ರ ತಾನೂ ದಾಳಿ ಮಾಡುವುದನ್ನು ನಿಲ್ಲಿಸುತ್ತೇನೆ ಎಂದು ಇರಾನ್ (Iran) ಹೇಳಿದೆ.
As Iran has repeatedly made clear: Israel launched war on Iran, not the other way around.
As of now, there is NO “agreement” on any ceasefire or cessation of military operations. However, provided that the Israeli regime stops its illegal aggression against the Iranian people no…
ಈ ಸಂಬಂಧ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಪ್ರತಿಕ್ರಿಯಿಸಿ, ಇಸ್ರೇಲ್‌ನ ಆಕ್ರಮಣಕ್ಕೆ ಶಿಕ್ಷೆ ವಿಧಿಸಲು ನಮ್ಮ ಪ್ರಬಲ ಸಶಸ್ತ್ರ ಪಡೆಗಳ ಮಿಲಿಟರಿ ಕಾರ್ಯಾಚರಣೆಗಳು ಕೊನೆಯ ನಿಮಿಷದವರೆಗೆ, ಅಂದರೆ ಬೆಳಿಗ್ಗೆ 4 ಗಂಟೆಯವರೆಗೆ ಮುಂದುವರೆದವು. ಕೊನೆಯ ರಕ್ತದ ಹನಿಯವರೆಗೂ ಎಲ್ಲಾ ಇರಾನಿಯನ್ನರ ರಕ್ಷಿಸಲು ನಾವು ಸಿದ್ಧರಾಗಿದ್ದೇವೆ. ಶತ್ರುಗಳ ಯಾವುದೇ ದಾಳಿಗೆ ಕೊನೆಯ ಕ್ಷಣದವರೆಗೂ ಪ್ರತಿಕ್ರಿಯಿಸುವ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ವಾಷಿಂಗ್ಟನ್: ಕಳೆದ 12 ದಿನಗಳಿಂದ ಇಸ್ರೇಲ್ ಮತ್ತು ಇರಾನ್ ಮಧ್ಯೆ (Israel-Iran conflict) ನಡೆಯುತ್ತಿದ್ದ ಸಂಘರ್ಷಕ್ಕೆ ಕದನ ವಿರಾಮ ಘೋಷಣೆಯಾಗಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಸಾಮಾಜಿಕ ಜಾಲತಾಣದಲ್ಲಿ ಯುದ್ಧ ಅಧಿಕೃತವಾಗಿ ಅಂತ್ಯಗೊಂಡಿದೆ. ಎರಡೂ ದೇಶಗಳು ಕದನ ವಿರಾಮಕ್ಕೆ (Ceasefire) ಒಪ್ಪಿಗೆ ನೀಡಿವೆ ಎಂದು ಘೋಷಣೆ ಮಾಡಿವೆ. ಇದನ್ನೂ ಓದಿ: ಕತಾರ್‌ನಲ್ಲಿರುವ ಅಮೆರಿಕ ಸೇನಾ ನೆಲೆಯ ಮೇಲೆ ಇರಾನ್ ಪ್ರತೀಕಾರದ ದಾಳಿ
( @realDonaldTrump – Truth Social Post )
( Donald J. Trump – Jun 23, 2025, 6:02 PM ET )
CONGRATULATIONS TO EVERYONE! It has been fully agreed by and between Israel and Iran that there will be a Complete and Total CEASEFIRE (in approximately 6 hours from now, when Israel and Iran… pic.twitter.com/lWdRKVoZGI
— Donald J. Trump 🇺🇸 TRUTH POSTS (@TruthTrumpPosts) June 23, 2025
ಟ್ರಂಪ್ ಹೇಳಿದ್ದೇನು?
ಕದನ ವಿರಾಮಕ್ಕೆ ಇರಾನ್ ಮತ್ತು ಇಸ್ರೇಲ್ ಒಪ್ಪಿಕೊಂಡಿದೆ. 12 ನೇ ದಿನದ ಯುದ್ಧದ ಅಧಿಕೃತ ಅಂತ್ಯವನ್ನು ಜಗತ್ತು ಸ್ವಾಗತಿಸುತ್ತದೆ. ಕದನ ವಿರಾಮದ ಸಮಯದಲ್ಲಿ ಎರಡು ದೇಶಗಳು ಶಾಂತಿ ಮತ್ತು ಗೌರವದಿಂದ ಇರಬೇಕು.
ಇರಾನ್ ಮೊದಲು ಕದನ ವಿರಾಮವನ್ನು ಪ್ರಾರಂಭಿಸುತ್ತದೆ. 12 ಗಂಟೆಗಳ ನಂತರ ಇಸ್ರೇಲ್ ಕದನ ವಿರಾಮವನ್ನು ಪ್ರಾರಂಭಿಸುತ್ತದೆ. 24 ಗಂಟೆಗಳ ನಂತರ, 12 ದಿನಗಳ ಯುದ್ಧವು ಅಧಿಕೃತವಾಗಿ ಕೊನೆಗೊಳ್ಳುತ್ತದೆ.
ಈ ಯುದ್ಧ ವರ್ಷಗಳ ಕಾಲ ನಡೆಯುತ್ತಿತ್ತು ಮತ್ತು ಇಡೀ ಮಧ್ಯಪ್ರಾಚ್ಯವನ್ನು ನಾಶಮಾಡಬಹುದಿತ್ತು. ಈ ರೀತಿ ಆಗಲಿಲ್ಲ ಮತ್ತು ಎಂದಿಗೂ ಈ ರೀತಿ ಆಗುವುದು ಇಲ್ಲ. ದೇವರು ಇಸ್ರೇಲ್ ಮತ್ತು ಇರಾನ್ ಅನ್ನು ಆಶೀರ್ವದಿಸಲಿ, ದೇವರು ಮಧ್ಯಪ್ರಾಚ್ಯವನ್ನು ಆಶೀರ್ವದಿಸಲಿ, ದೇವರು ಅಮೆರಿಕವನ್ನು ಆಶೀರ್ವದಿಸಲಿ ಮತ್ತು ದೇವರು ಜಗತ್ತನ್ನು ಆಶೀರ್ವದಿಸಲಿ. ಎಲ್ಲರಿಗೂ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ಇಸ್ತಾನ್‌ಬುಲ್: ಯುದ್ಧಪೀಡಿತ ರಷ್ಯಾ-ಉಕ್ರೇನ್ ನಡುವೆ 2022ರ ಬಳಿಕ 2ನೇ ಸುತ್ತಿನ ಶಾಂತಿ ಮಾತುಕತೆ ಸೋಮವಾರ ಟರ್ಕಿಯ ರಾಜಧಾನಿ ಇಸ್ತಾನ್‌ಬುಲ್‌ನಲ್ಲಿ ನಡೆಯಿತು. ಸಭೆಯು ನಿಗದಿತ ಸಮಯಕ್ಕಿಂತ 2 ಗಂಟೆ ತಡವಾಗಿ ಶುರುವಾದ್ರೂ ಒಂದು ಗಂಟೆಗೆ ಮಾತುಕತೆ ಮುಕ್ತಾಯಗೊಂಡಿತು. ಉಭಯ ರಾಷ್ಟ್ರಗಳ ನಾಯಕರು ಪರಸ್ಪರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು ಕಂಡುಬಂದಿತು.
ರಷ್ಯಾ ಮೇಲೆ ಉಕ್ರೇನ್ ನಡೆಸಿದ ಭೀಕರ ಡ್ರೋನ್ ದಾಳಿಯೇ ಎಲ್ಲದಕ್ಕೂ ಕಾರಣ. ರಷ್ಯಾ ಪ್ರತಿನಿಧಿಗಳು ಉಕ್ರೇನ್‌ನ ಈ ದಾಳಿಯನ್ನು ಬಲವಾಗಿ ವಿರೋಧಿಸಿ, ಷರತ್ತುರಹಿತ ಕದನ ವಿರಾಮ ಮಾತುಕತೆಯನ್ನ ತಿರಸ್ಕರಿಸಿದರು. ʻಆಪರೇಷನ್ ಸ್ಪೈಡರ್ಸ್ ವೆಬ್ʼ ಎಂದು ಹೆಸರಿಸಲಾದ ಈ ರಹಸ್ಯ ಕಾರ್ಯಾಚರಣೆಯಲ್ಲಿ, ಉಕ್ರೇನ್ ಒಂದೂವರೆ ವರ್ಷದಿಂದ ಯೋಜನೆ ರೂಪಿಸಿತ್ತು. ಹೀಗಾಗಿ ಇಸ್ತಾನ್‌ಬುಲ್‌ನಲ್ಲಿ ನಡೆದ ಉಕ್ರೇನ್‌ನೊಂದಿಗಿನ ಶಾಂತಿ ಮಾತುಕತೆಯ ಸಮಯದಲ್ಲಿ ರಷ್ಯಾ ಬೇಷರತ್ ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ನಿರಾಕರಿಸಿದೆ ಎಂದು ಕೈವ್ ಸಂಧಾನಕಾರರು ತಿಳಿಸಿದ್ದಾರೆ.
ಸೇನಾ ದಾಳಿಯ ವಿಚಾರವಾಗಿ ಉಭಯ ದೇಶಗಳ ಪ್ರತಿನಿಧಿಗಳ ನಡುವಿನ ವಾಗ್ವಾದದಿಂದ ಸಭೆ ಅಪೂರ್ಣಗೊಂಡಿತು. ‘ಕದನ ವಿರಾಮ ಸಂಬಂಧ ಉಭಯ ದೇಶದ ಪ್ರತಿನಿಧಿಗಳ ನಡುವೆ ಮಾತುಕತೆ ನಡೆದಿದೆ. ಸಂಘರ್ಷ ಪರಿಸ್ಥಿತಿಯ ಬಗ್ಗೆ ಮೌಲ್ಯಮಾಪನ ಮಾಡಲಾಗಿದೆ. ಯುದ್ಧ ಕೈದಿಗಳ ಹಸ್ತಾಂತರದ ಬಗ್ಗೆಯೂ ಚರ್ಚಿಸಲಾಗಿದೆ. ಆದರೆ, ಸಂಘರ್ಷ ಕೊನೆಗೊಳಿಸುವ ವಿಷಯವಾಗಿ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಟರ್ಕಿ ವಿದೇಶಾಂಗ ಸಚಿವ ಹಕನ್ ಫಿಡಾನ್ ತಿಳಿಸಿದ್ದಾರೆ. ಇದನ್ನೂ ಓದಿ: America | ‘ಫ್ರೀ ಪ್ಯಾಲೆಸ್ತೀನ್’ ಎಂದು ಕೂಗುತ್ತಾ ಜನರತ್ತ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿ – 6 ಮಂದಿಗೆ ಗಾಯ
ಚರ್ಚೆ ವೇಳೆ ರಷ್ಯಾ ಪ್ರತಿನಿಧಿ ಮೆಡಿನ್ಸ್ಕಿ ಅವರು, ಯುದ್ಧದಲ್ಲಿ ಕೊಲಲ್ಪಟ್ಟ 6,000 ಉಕ್ರೇನಿಯನ್ ಸೈನಿಕರ ಶವಗಳನ್ನ ಹಿಂದಿರುಗಿಸುವುದಾಗಿ ತಿಳಿಸಿದರು. ಹಾಗಾಗಿ 2-3 ದಿನಗಳ ಸೀಮಿತ ಕದನ ವಿರಾಮ ಪ್ರಸ್ತಾಪಿಸಲಾಗಿದೆ. ಇದು ಸೈನಿಕರ ಮೃತದೇಹಗಳನ್ನು ಹಸ್ತಾಂತರಿಸುವ ಉದ್ದೇಶ ಮಾತ್ರ ಹೊಂದಿದೆ ಎಂದು ತಿಳಿಸಿದರು.
ಪರಸ್ಪರ 1,000 ಯುದ್ಧ ಕೈದಿಗಳ ವಿನಿಮಯ ಒಪ್ಪಂದ
ಉಕ್ರೇನ್ ಮತ್ತು ರಷ್ಯಾ ನಡುವೆ ತಲಾ 1,000 ಯುದ್ಧ ಕೈದಿಗಳ ವಿನಿಮಯದ ಕುರಿತು ರಷ್ಯಾ ಮತ್ತು ಉಕ್ರೇನ್ ಒಪ್ಪಂದಕ್ಕೆ ಬಂದಿವೆ. ಮುಂದುವರಿದು… ಯುದ್ಧ ಕೈದಿಗಳ ವಿನಿಮಯಕ್ಕಾಗಿ ಶಾಶ್ವತ ಸಮಿತಿ ರಚನೆಯ ಕುರಿತು ಒಪ್ಪಂದಕ್ಕೆ ಬರಲಾಗಿದೆ. ಇದರಿಂದ ಭವಿಷ್ಯದಲ್ಲಿ ಯುದ್ಧ ಕೈದಿಗಳ ಪ್ರಕ್ರಿಯೆಯನ್ನು ತ್ವರಿತವಾಗಿ ಮತ್ತು ಸರಾಗವಾಗಿ ಪೂರ್ಣಗೊಳಿಸಬಹುದು ಎಂದು ರಷ್ಯಾ ಪ್ರತಿನಿಧಿ ತಿಳಿಸಿದ್ರು.
ಅಲ್ಲದೇ, ಕ್ರೈಮಿಯಾ, ಡಾನ್‌ಬಾಸ್, ಖೆರ್ಸನ್ ಮತ್ತು ಜಪೊರೊಝೈಗಳನ್ನು ರಷ್ಯಾದ ಪ್ರದೇಶವೆಂದು ಅಂತಾರಾಷ್ಟ್ರೀಯವಾಗಿ ಗುರುತಿಸಬೇಕೆಂದು ಒತ್ತಾಯಿಸಿ ರಷ್ಯಾ ಉಕ್ರೇನ್‌ಗೆ ಶಾಂತಿ ಜ್ಞಾಪಕ ಪತ್ರವನ್ನ ಪ್ರಸ್ತಾಪಿಸಿದೆ ಎಂದು ತಿಳಿದುಬಂದಿದೆ. ಈ ನಡುವೆ ಎರಡೂ ದೇಶಗಳು ಹೊಸ ಕೈದಿಗಳ ವಿನಿಮಯಕ್ಕಾಗಿ ಒಪ್ಪಿಕೊಂಡಿರುವುದಾಗಿ ಹೇಳಿದರು. ಇದನ್ನೂ ಓದಿ: ರಷ್ಯಾ ವಾಯುನೆಲೆ ಮೇಲೆ ಉಕ್ರೇನ್ ಡ್ರೋನ್ ದಾಳಿ – ಅದ್ಭುತ ಕಾರ್ಯಾಚರಣೆ ಎಂದು ಶ್ಲಾಘಿಸಿದ ಝೆಲೆನ್ಸ್ಕಿ
ವಾಷಿಂಗ್ಟನ್: ಗಾಜಾದಲ್ಲಿ (Gaza) ಕದನ ವಿರಾಮ ಘೋಷಿಸುವಂತೆ ಕೋರಿ ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ (Steve Witkoff) ಮಂಡಿಸಿದ ಪ್ರಸ್ತಾವನೆಗೆ ಹಮಾಸ್ (Hamas) ಒಪ್ಪಿಕೊಂಡಿದೆ ಎಂದು ಪ್ಯಾಲೆಸ್ತೀನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಈ ಪ್ರಸ್ತಾವನೆಯನ್ನು ಮಧ್ಯವರ್ತಿಗಳ ಮೂಲಕ ಹಮಾಸ್‌ಗೆ ರವಾನಿಸಲಾಗಿದೆ. ಪ್ರಸ್ತಾವನೆಯಲ್ಲಿ 70 ದಿನಗಳ ಕದನ ವಿರಾಮಕ್ಕೆ ಪ್ರತಿಯಾಗಿ ಹತ್ತು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕೆಂದು ತಿಳಿಸಿರುವುದಾಗಿ ಅಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ಸರಣಿ ಮನೆಗಳ್ಳತನ ಮಾಡ್ತಿದ್ದ ಖದೀಮ ಅಂದರ್ – 6 ಲಕ್ಷ ಮೌಲ್ಯದ ಚಿನ್ನ ವಶಕ್ಕೆ
ಮಾತ್ರವಲ್ಲದೇ ಇಸ್ರೇಲ್‌ನಿಂದ ಬಂಧನದಲ್ಲಿರುವ ಹಲವಾರು ಪ್ಯಾಲೆಸ್ಟೀನಿಯನ್ ಕೈದಿಗಳನ್ನ ಬಿಡುಗಡೆ ಮಾಡುವುದನ್ನು ಸಹ ಈ ಪ್ರಸ್ತಾವನೆ ಒಳಗೊಂಡಿದೆ. ಇದರಲ್ಲಿ ನೂರಾರು ಜನರು ದೀರ್ಘ ಶಿಕ್ಷೆ ಅನುಭವಿಸುತ್ತಿದ್ದಾರೆ. ಸದ್ಯ ಈ ಪ್ರಸ್ತಾವನೆಗೆ ಇಸ್ರೇಲ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ 2 ದಿನ ರಜೆ ಘೋಷಣೆ
ನವದೆಹಲಿ: ಪಾಕಿಸ್ತಾನದಿಂದ ಯಾವುದೇ ಪರಮಾಣು ದಾಳಿಯ ಸೂಚನೆ ಬಂದಿಲ್ಲ, ಅಲ್ಲದೇ ʻಆಪರೇಷನ್ ಸಿಂಧೂರʼ (Operation Sindoor) ಕದನ ವಿರಾಮ ಮಾತುಕತೆಯಲ್ಲಿ ಅಮೆರಿಕದ ಪಾತ್ರ ಎಲ್ಲಿಯೂ ಇಲ್ಲ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಂ ಮಿಸ್ರಿ (Vikram Misri) ಸ್ಪಷ್ಟನೆ ನೀಡಿದ್ದಾರೆ.
ಆಪರೇಷನ್ ಸಿಂಧೂರ ಕದನ ವಿರಾಮ (Ceasefire) ಏರ್ಪಟ್ಟ ಬಳಿಕ ಡೊನಾಲ್ಡ್ ಟ್ರಂಪ್, ಭಾರತ (India) ಮತ್ತು ಪಾಕಿಸ್ತಾನದ (Pakistan) ಮಧ್ಯೆ ನಡೆಯಬಹುದಾಗಿದ್ದ ಪರಮಾಣು ಸಂಘರ್ಷವನ್ನು (Nuclear Conflict) ನಾವು ನಿಲ್ಲಿಸಿದ್ದೇವೆ ಎಂದು ಕ್ರೆಡಿಟ್ ಪಡೆಯಲು ಮುಂದಾಗಿದ್ದರು. ಪದೇ ಪದೇ ಈ ವಿಚಾರವನ್ನು ಒತ್ತಿ ಹೇಳುತ್ತಿದ್ದರು. ಈ ಕುರಿತು ವಿಕ್ರಂ ಮಿಸ್ರಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಭಾರತ, ಪಾಕ್ ಮಧ್ಯೆ ನಡೆಯಬಹುದಾಗಿದ್ದ ಪರಮಾಣು ಸಂಘರ್ಷ ನಿಲ್ಲಿಸಿದ್ದೇವೆ: ಟ್ರಂಪ್
ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಯ ಸದಸ್ಯರಿಗೆ ಪಾಕಿಸ್ತಾನದಿಂದ ಯಾವುದೇ ಪರಮಾಣು ದಾಳಿಯ ಸೂಚನೆ ಬಂದಿಲ್ಲ. ಕದನ ವಿರಾಮ ಮನವಿ ಇಸ್ಲಾಮಾಬಾದ್‌ನಿಂದ ಬಂದಿದೆ. ನಿರ್ದಿಷ್ಟವಾಗಿ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ದೆಹಲಿಯಲ್ಲಿರುವ ತಮ್ಮ ಹೈಕಮಿಷನ್ ಕಚೇರಿಯನ್ನ ಸಂಪರ್ಕಿಸಿದ್ದಾರೆ. ಇದರಲ್ಲಿ ಎಲ್ಲಿಯೂ ಅಮೆರಿಕದ ಮಧ್ಯಸ್ಥಿಕೆ ಇರಲಿಲ್ಲ ಎಂದು ಮಿಶ್ರಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡುವ ಧರ್ಮಶಾಲೆಯಲ್ಲ – ಸುಪ್ರೀಂ
ಕಳೆದ ಏಪ್ರಿಲ್ 22ರಂದು ನಡೆದ ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ʻಆಪರೇಷನ್ ಸಿಂಧೂರʼ ಕಾರ್ಯಾಚರಣೆ ನಡೆಸಿತ್ತು. ಮೇ 7ರ ಮಧ್ಯರಾತ್ರಿ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (PoK) 9 ಉಗ್ರ ನೆಲೆಗಳನ್ನು ಉಡೀಸ್ ಮಾಡಿತ್ತು. ಇದನ್ನೂ ಓದಿ: ಬೆಂಗಳೂರಿನ IISc ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್ ಉಗ್ರ ಪಾಕ್‌ನಲ್ಲಿ ಹತ್ಯೆ
ಇದಾದ ಬಳಿಕ ಪಾಕಿಸ್ತಾನ ಮೇ 8, 9 ಮತ್ತು 10 ರಂದು ಭಾರತದ ಸೇನಾ ನೆಲೆಗಳ ಮೇಲೆ ದಾಳಿಗೆ ಯತ್ನಿಸಿತ್ತು. ಆದ್ರೆ ಪಾಕ್‌ನ ಎಲ್ಲ ದಾಳಿಗಳನ್ನು ವಿಫಲಗೊಳಿಸಿದ್ದ ಭಾರತದ ವಾಯುರಕ್ಷಣಾ ವ್ಯವಸ್ಥೆ, ಮರುದಿನವೇ ಪಾಕಿಸ್ತಾನದ ಪ್ರಮುಖ 9 ವಾಯುನೆಲೆಗಳನ್ನ ಧ್ವಂಸಗೊಳಿಸಿತ್ತು, ಕರಾಚಿ ಬಂದರು, ನೂರ್ ಖಾನ್ ವಾಯುನೆಲೆಯ ಮೇಲೂ ದಾಳಿ ಮಾಡಿತ್ತು. ಜೊತೆಗೆ ಪಾಕ್‌ನ ರೆಡಾರ್ ಕೇಂದ್ರವನ್ನೇ ಛಿದ್ರಗೊಳಿಸಿತ್ತು. ಇದರಿಂದ ಕಂಗಾಲಾದ ಪಾಕ್ ಮೇ 10 ರಂದು ಕದನ ವಿರಾಮಕ್ಕೆ ಮನವಿ ಮಾಡಿತು.
ಬೆಂಗಳೂರು: ದೇಶದ ವಿದೇಶಾಂಗ ನೀತಿಯನ್ನು ಯಾರು ತೀರ್ಮಾನ ಮಾಡ್ತಾರೆ. ಪ್ರಧಾನಿ ಮೋದಿಯವರಾ ಅಥವಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಪ್ರಶ್ನಿಸಿದರು.
ಬೆಂಗಳೂರಿನಲ್ಲಿ(Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ(Operation Sindoor) ಬಗ್ಗೆ ಮಾತನಾಡಿದ ನಾಯಕರನ್ನ ಪಾಕಿಸ್ತಾನಕ್ಕೆ ಕಳಿಸಬೇಕೆಂದು ಬಿಜೆಪಿ ನಾಯಕರು ಹೇಳ್ತಾರೆ. ಬಹಳ ಸ್ಪಷ್ಟವಾಗಿ ಮೊದಲ ದಿನದಿಂದಲೂ ಯಾವುದೇ ನಿರ್ಧಾರ ಇದ್ದರೂ ಸರ್ಕಾರದ ಜೊತೆ ಇದ್ದೇವೆ ಎಂದು ಹೇಳಿದ್ದೇವೆ. ಕದನ ವಿರಾಮ ನಿಮ್ಮಿಂದ ಆಗಿದ್ರೆ ಬಹಳ ಸಂತೋಷ. ಅದನ್ನ ಡೊನಾಲ್ಡ್ ಟ್ರಂಪ್ ಯಾಕೆ ಘೋಷಣೆ ಮಾಡ್ತಾರೆ. ನಿಮ್ಮ ಹೇಳಿಕೆಗೆ, ಅಮೆರಿಕ ಅಧ್ಯಕ್ಷರ ಹೇಳಿಕೆಗೆ ವ್ಯತ್ಯಾಸ ಯಾಕಿದೆ ಎಂದರು. ಇದನ್ನೂ ಓದಿ: ಮಗನಿಗೆ ಇನ್ನೊಂದು ವಾರದಲ್ಲಿ ಮದುವೆ ನಿಶ್ಚಿತಾರ್ಥ ಇತ್ತು: ಹತ್ಯೆಯಾದ ಟೆಕ್ಕಿಯ ತಂದೆ ಕಣ್ಣೀರು
ನನ್ನಿಂದ ಕದನ ವಿರಾಮ(Ceasefire) ಆಗಿದೆ ಎಂದು ಏಳನೇ ಬಾರಿ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರ ಪ್ರೆಸ್ ಸೆಕ್ರೆಟರಿ, ಟ್ರಂಪ್ ಅವರಿಗೆ ಕದನ ವಿರಾಮದ ಕ್ರೆಡಿಟ್ ಸಿಗ್ತಿಲ್ಲ ಎಂದು ಅಫಿಶಿಯಲ್ ಆಗಿ ಹಾಕ್ತಾರೆ. ನಾವು ಕೇಳಿದ್ದು, ನಮ್ಮ ವಿದೇಶಾಂಗ ನೀತಿಯ ತೀರ್ಮಾನ ತೆಗೆದುಕೊಳ್ತಿರೋದು ಯಾರು? ನರೇಂದ್ರ ಮೋದಿಯವರಾ ಅಥವಾ ಡೊನಾಲ್ಡ್ ಟ್ರಂಪ್ ಅವರಾ ಎಂದು ಕೇಳಿದರು. ಇದನ್ನೂ ಓದಿ: ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬದಂದು ಪ್ರಶಾಂತ್ ನೀಲ್ ಜೊತೆಗಿನ ಚಿತ್ರದಿಂದ ಅಪ್‌ಡೇಟ್ ಸಿಗಲ್ಲ, ಯಾಕೆ?
ಆಪರೇಷನ್ ಸಿಂಧೂರದ ಬಗ್ಗೆ ಮಾತಾಡಿದ್ದೇವಾ. ಸೇನಾ ಪಡೆಗೆ ಇವರು ಕೊಟ್ಟಿರುವ ದಾಖಲೆ ಬಗ್ಗೆ ಮಾತಾಡಿದ್ದೇವಾ? ಸೈನಿಕರಿಗೆ ಅಗೌರವ ಮಾಡ್ತಿರೋದು ಬಿಜೆಪಿ. ಸೋಫಿಯಾ ಖುರೇಷಿ ಬಗ್ಗೆ ಮಧ್ಯಪ್ರದೇಶದ ಸಚಿವರು ಮಾತಾಡ್ತಾರೆ. ಯಾಕೆ ಅವರನ್ನ ಸಚಿವ ಸಂಪುಟದಿಂದ ವಜಾ ಮಾಡ್ತಿಲ್ಲ. ಇವರಿಂದ ನಾವು ಕಲಿಯಬೇಕಾ? ಅದರ ಬಗ್ಗೆ ಬಿಜೆಪಿಯವರು ಮಾತಾಡ್ತಾರಾ, ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಏರೋಸ್ಪೇಸ್ ಎಂಜಿನಿಯರ್ ಸಾವು
ವಿದೇಶಾಂಗ ನೀತಿ ಬಗ್ಗೆ ಅಮೆರಿಕದ ಅಧ್ಯಕ್ಷರು ಮಾತಾಡ್ತಾರೆ. 100 ದೇಶ ಸುತ್ತಿ 200 ಜನರನ್ನ ಅಪ್ಪಿಕೊಂಡ್ರಲ್ಲ ಏನಾಯ್ತು? ಮೇಕ್ ಇನ್ ಇಂಡಿಯಾ ಮಾಡಬಾರದು. ಆಪಲ್ ಮಾಡಬಾರದು ಅಂತ ನೇರವಾಗಿ ಹೇಳ್ತಾರೆ. ತೆರಿಗೆಯನ್ನ ಶೂನ್ಯ ಮಾಡಿದ್ದೀರಾ ಎಂದು ಡೊನಾಲ್ಡ್ ಟ್ರಂಪ್ ಹೇಳ್ತಾರೆ. ಅದಕ್ಕೆ ಯಾರಾದ್ರು ಉತ್ತರ ಕೊಟ್ಟಿದ್ದೀರಾ. ಇದಕ್ಕೆ ಉತ್ತರ ಕೊಡಬೇಕಾದವರು ಯಾರು? ಇದಕ್ಕೆ ವಿಜಯೇಂದ್ರ, ಅಶೋಕ್ ಉತ್ತರ ಕೊಡ್ತಾರಾ? ಉತ್ತರ ಕೊಡಬೇಕಾದವರು ಪ್ರಧಾನಿ ಮೋದಿ(Narendra Modi), ಎಲ್ಲಿದ್ದಾರೆ ಅವರು ಎಂದು ಪ್ರಶ್ನಿಸಿದ್ದಾರೆ.