Tag: ಕದಂಬ ನೌಕಾನೆಲೆ

  • ಕಾರವಾರ ಬಂದರು, ನೌಕಾನೆಲೆಯಲ್ಲಿ ಹೈ ಅಲರ್ಟ್ – ಕ್ರೂಶಿಪ್‌ನಲ್ಲಿ ಚೀನಾ, ಪಾಕಿಸ್ತಾನ ಸಿಬ್ಬಂದಿಗೆ ನಿರ್ಬಂಧ

    ಕಾರವಾರ ಬಂದರು, ನೌಕಾನೆಲೆಯಲ್ಲಿ ಹೈ ಅಲರ್ಟ್ – ಕ್ರೂಶಿಪ್‌ನಲ್ಲಿ ಚೀನಾ, ಪಾಕಿಸ್ತಾನ ಸಿಬ್ಬಂದಿಗೆ ನಿರ್ಬಂಧ

    ಕಾರವಾರ: ಪಾಕಿಸ್ತಾನದ ಉಗ್ರರ ನೆಲೆಯ ಮೇಲೆ ಭಾರತ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆ ಬೆನ್ನಲ್ಲೇ ಕಾರವಾರದಲ್ಲಿ (Karwar) ಕದಂಬ ನೌಕಾನೆಲೆ (Kadamba Naval Base) ಹಾಗೂ ಬಂದರಿನಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

    ಭಾರತೀಯ ತಟರಕ್ಷಕ ದಳ ಕೂಡ ಅರಬ್ಬಿ ಸಮುದ್ರದಲ್ಲಿ ಕೂಂಬಿಗ್ ಕಾರ್ಯಾಚರಣೆ ಹೆಚ್ಚಿಸಿದ್ದು, ಕಾರವಾರದ ಬಂದರಿಗೆ ಬರುವ ಅನ್ಯ ದೇಶದ ಕ್ರೂಶಿಪ್‌ನಲ್ಲಿ ಪಾಕಿಸ್ತಾನ, ಚೀನಾ ದೇಶದ ಸಿಬ್ಬಂದಿಗಳಿದ್ದರೆ ಅಂತಹ ಹಡಗುಗಳಿಗೂ ನಿರ್ಬಂಧ ವಿಧಿಸಲಾಗಿದೆ. ಇದನ್ನೂ ಓದಿ: ರಾಷ್ಟ್ರಪತಿ ಭೇಟಿಯಾಗಿ ‘ಆಪರೇಷನ್‌ ಸಿಂಧೂರ’ ಬಗ್ಗೆ ವಿವರಿಸಿದ ಮೋದಿ

    ಕರಾವಳಿ ಕಾವಲು ಪಡೆ ಪೊಲೀಸರು ಬಂದರಿಗೆ ಬಂದ ಹಡಗಿನಲ್ಲಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೇ ಮೀನುಗಾರಿಕಾ ಬೋಟ್‌ಗಳನ್ನು ಸಹ ತಪಾಸಣೆ ಮಾಡಲಾಗುತ್ತಿದೆ. 12 ನಾಟಿಕಲ್ ಮೈಲೂ ದೂರದಿಂದ ಹೊರ ಹೋಗದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. 12 ನಾಟಿಕಲ್ ಮೈಲು ದೂರದಲ್ಲೇ ಮೀನುಗಾರಿಕೆ ನಡೆಸಲು ಮೀನುಗಾರಿಕಾ ಇಲಾಖೆ ಸೂಚನೆ ನೀಡಿದ್ದು, ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ಕೊಟ್ಟಿದೆ. ಇದನ್ನೂ ಓದಿ: ಭಾರತದ ವಿರುದ್ಧ ಪ್ರತಿದಾಳಿಗೆ ಪಾಕ್‌ ಕುತಂತ್ರ – ಸೇನೆಗೆ ಪರಮಾಧಿಕಾರ ನೀಡಿದ ಪ್ರಧಾನಿ ಶೆಹಬಾಜ್ ಶರೀಫ್

  • ಪಾಕಿಸ್ತಾನದ ಬೇಹುಗಾರಿಕಾ ಏಜೆನ್ಸಿಯಿಂದ ಕದಂಬ ನೌಕಾ ನೆಲೆಯ ಯುದ್ಧ ಹಡಗುಗಳ ಮಾಹಿತಿ ಪಡೆಯಲು ಯತ್ನ!

    ಪಾಕಿಸ್ತಾನದ ಬೇಹುಗಾರಿಕಾ ಏಜೆನ್ಸಿಯಿಂದ ಕದಂಬ ನೌಕಾ ನೆಲೆಯ ಯುದ್ಧ ಹಡಗುಗಳ ಮಾಹಿತಿ ಪಡೆಯಲು ಯತ್ನ!

    – ಇಬ್ಬರು ನೌಕಾ ನೆಲೆಯ ಸಿಬ್ಬಂದಿಗೆ ಕರೆ

    ಕಾರವಾರ: ಪಹಲ್ಗಾಮ್‌ ದಾಳಿಯ (Pahalgam Terrorist Attack) ಬಳಿಕ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಪಾಕಿಸ್ತಾನವನ್ನು ತತ್ತರಿಸುವಂತೆ ಮಾಡಿದೆ. ಆದರೀಗ ಕುತಂತ್ರಿ ಪಾಕಿಸ್ತಾನ ತನ್ನ ಬೇಹುಗಾರಿಕಾ ಏಜಂಟರನ್ನು ಬಳಸಿ ಕಾರವಾರದ ಕದಂಬ ನೌಕಾನೆಲೆಯ (Kadamba Naval Base) ಯುದ್ಧ ನೌಕೆಗಳು ಹಾಗೂ ವಿಶಾಖಪಟ್ಟಣಂ ನಲ್ಲಿರುವ ನೌಕೆಗಳ ಮಾಹಿತಿ ಪಡೆಯಲು ಯತ್ನಿಸಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

    ಭಾರತೀಯ ನೌಕಾದಳದ ಅಧಿಕಾರಿಗಳ ಹೆಸರು ಬಳಸಿ ಕರೆ ಮಾಡುವ ಮೂಲಕ ಐಎನ್‌ಎಸ್ ವಿಕ್ರಾಂತ್ (INS Vikrant) ಹಾಗೂ ಇತರ ಯುದ್ಧನೌಕೆಯ ಮಾಹಿತಿ ಪಡೆಯಲು ಯತ್ನ ನಡೆಸುತ್ತಿರುವುದು ಉನ್ನತ ಮೂಲಗಳಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಯುರೋಪಿಯನ್ ದೇಶಗಳಿಂದ ಪಾಕ್‌ಗೆ ಶಾಕ್ – ಪಾಕಿಸ್ತಾನ ವಾಯು ಪ್ರದೇಶದಲ್ಲಿ ವಿಮಾನ ಹಾರಾಟಕ್ಕೆ ಹಿಂದೇಟು

    ಕಾರವಾರ (Karwar) ಹಾಗೂ ವಿಶಾಖಪಟ್ಟಣಂ ನಲ್ಲಿ ಕೆಲಸ ಮಾಡುವ ಇಬ್ಬರು ನೌಕಾದಳದ ಸಿಬ್ಬಂದಿಗೆ ಪಾಕಿಸ್ತಾನದ ಏಜೆಂಟರು (Pakistan Agent) ಕರೆ ಮಾಡಿ ತಾವು ನೌಕಾದಳದ ಅಧಿಕಾರಿಗಳು ಎಂದು ಹೇಳಿ ಐಎನ್‌ಎಸ್ ವಿಕ್ರಾಂತ್, ಐಎನ್‌ಎಸ್ ವಿಕ್ರಮಾದಿತ್ಯ, ಐಎನ್‌ಎಸ್ ಸುಭದ್ರ ಮುಂತಾದವುಗಳ ಮಾಹಿತಿ ಪಡೆಯಲು ಯತ್ನಿಸಿದ್ದಾರೆ. ಈ ಬಗ್ಗೆ ನೌಕಾದಳದ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅರ್ಜೆಂಟೀನಾದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

    ಇನ್ನೂ ಕೆಲ ಅಧಿಕಾರಿಗಳನ್ನು ಹನಿಟ್ರ್ಯಾಪ್‌ ಮಾಡಲು ಸಹ ಪ್ರಯತ್ನ ಪಟ್ಟಿರುವುದು ಬೆಳಕಿಗೆ ಬಂದಿದೆ. ಎಚ್ಚೆತ್ತ ಅಧಿಕಾರಿಗಳು ನೌಕಾದಳದ ಯಾವ ಮಾಹಿತಿಯನ್ನೂ ನೀಡದಂತೆ ಸಂಬಂಧಪಟ್ಟ ನೌಕಾ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಈ ಬಗ್ಗೆ ಕಾರವಾರದ ನೌಕಾದಳದ ಅಧಿಕಾರಿಗಳ ಗ್ರೂಪ್‌ನಲ್ಲಿ ಸಂದೇಶ ಹಾಕಿದ್ದು ಎಚ್ಚರಿಕೆಯಿಂದ ಇರಲು ತಿಳಿಸಲಾಗಿದೆ.

    2024ರ ಆಗಸ್ಟ್‌ನಲ್ಲಿ ಹಣಕ್ಕಾಗಿ ಕದಂಬ ನೌಕಾನೆಲೆಯ ಹಾಗೂ ವಿಕ್ರಮಾಧಿತ್ಯ ನೌಕೆಯ ಮಾಹಿತಿ ಹಾಗೂ ಫೋಟೋ ಹಂಚಿಕೊಂಡಿದ್ದ ಕಾರವಾರ ತಾಲೂಕಿನ ತೋಡೂರು ಗ್ರಾಮದ ಸುನೀಲ್ ನಾಯ್ಕ್, ಮುದ್ಗಾ ಗ್ರಾಮದ ವೇತನ್ ರಂಡೇಲ್ ಮತ್ತು ಹಳವಳ್ಳಿ ಗ್ರಾಮದ ಅಕ್ಷಯ್ ರವಿ ನಾಯ್ಕ್ ಎಂಬ ಮೂರು ಜನರನ್ನು ಎನ್‌ಐಎ ಬಂಧಿಸಿತ್ತು. ಇದನ್ನೂ ಓದಿ: ವಿದೇಶಿ ಕಂಪನಿಗಳಿಂದಲೂ ಶಾಕ್‌ – ಭಾರತಕ್ಕೆ ಬಿಸಿ ಮುಟ್ಟಿಸಲು ಹೋಗಿ ಕೈ ಸುಟ್ಟುಕೊಂಡ ಪಾಕ್‌!

    ಈ ಘಟನೆ ನಂತರ ಕದಂಬ ನೌಕಾನೆಲೆಯ ವ್ಯಾಪ್ತಿಯೊಳಗೆ ಮೊಬೈಲ್ ನನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ.

  • ಪಾಕ್‌ ಸೇರಿ ಇತರ ವಿದೇಶಿ ಏಜೆಂಟರಿಗೆ ನೌಕಾದಳದ ರಹಸ್ಯ ಫೋಟೋ ಹಂಚಿಕೆ – NIAಯಿಂದ ಮೂವರು ವಶಕ್ಕೆ

    ಪಾಕ್‌ ಸೇರಿ ಇತರ ವಿದೇಶಿ ಏಜೆಂಟರಿಗೆ ನೌಕಾದಳದ ರಹಸ್ಯ ಫೋಟೋ ಹಂಚಿಕೆ – NIAಯಿಂದ ಮೂವರು ವಶಕ್ಕೆ

    ಕಾರವಾರ: ಹಣದ ಆಮಿಷಕ್ಕೆ ಒಳಗಾಗಿ ಇಲ್ಲಿನ ಕದಂಬ ನೌಕಾನೆಲೆಯ (Kadamba Naval Base Karwar) ಶಿಪ್‌ಗಳ ಮಾಹಿತಿ ಹಾಗೂ ನೌಕಾದಳದ ಫೋಟೋಗಳನ್ನು ಪಾಕಿಸ್ತಾನ (Pakistan) ಹಾಗೂ ವಿದೇಶಿ ಗುಪ್ತಚರ ಏಜೆಂಟರಿಗೆ ನೀಡಿರುವ ಆರೋಪದ ಮೇಲೆ ಮೂವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಶಕ್ಕೆ ಪಡೆದಿದೆ.

    ಎನ್‌ಐಎಯ ಡಿವೈಎಸ್‌ಪಿ ಹಾಗೂ ಮೂವರು ಇನ್ಸ್‌ಪೆಕ್ಟರ್‌ಗಳ ತಂಡ ಕಾರವಾರಕ್ಕೆ ಆಗಮಿಸಿ, ನೌಕಾದಳದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಾಲೂಕಿನ ತೋಡೂರಿನ ಸುನೀಲ್ ನಾಯ್ಕ್, ಮುದುಗಾದ ವೇತನ್ ತಾಂಡೇಲ್ ಹಾಗೂ ಹಳವಳ್ಳಿಯ ಅಕ್ಷಯ್ ರವಿ ನಾಯ್ಕ್ ಮೂವರನ್ನು ವಶಕ್ಕೆ ಪಡೆದಿದೆ. ರಾಷ್ಟ್ರವಿರೋಧಿ ಚಟುವಟಿಕೆ ಅಡಿ 2023ರಲ್ಲಿ ಹೈದ್ರಾಬಾದ್‌ನಲ್ಲಿ NIA ದೀಪಕ್ ಹಾಗೂ ಇತರರನ್ನು ಬಂಧಿಸಲಾಗಿತ್ತು.

    ಪಾಕಿಸ್ತಾನ ಹಾಗೂ ವಿದೇಶಿ ಏಜೆಂಟರು, ಅಧಿಕಾರಿಗಳಿಗೆ ಕದಂಬ ನೌಕಾನೆಯ ಮಾಹಿತಿ ರವಾನಿಸುತ್ತಿದ್ದ ದೀಪಕ್ ವಿಚಾರಣೆ ವೇಳೆ ಸುನೀಲ್ ನಾಯ್ಕ್, ವೇತನ್ ತಾಂಡೇಲ್ ಹಾಗೂ ಅಕ್ಷಯ್ ನಾಯ್ಕ್ ಹೆಸರನ್ನು ಬಾಯ್ಬಿಟ್ಟಿದ್ದ. ನೌಕಾದಳದ ಶಿಪ್‌ಗಳು, ಸ್ಥಳದ ಮಾಹಿತಿ ಫೋಟೋ ಹಾಗೂ ಇತರ ಮಾಹಿತಿಗಳನ್ನ ದೀಪಕ್ ಹಾಗೂ ಇತರರಿಗೆ ಈ ಮೂವರು ರವಾನಿಸಿದ್ದರು. ಇದನ್ನೂ ಓದಿ: ನಮ್ಮ ಆಸ್ತಿ ಬಗ್ಗೆ ದಾಖಲೆ ಇದ್ದರೆ ಬಹಿರಂಗ ಪಡಿಸಲಿ: ಛಲವಾದಿ ಮಾತಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

    ಅಲ್ಲದೇ, ಮಾಹಿತಿ ನೀಡಿದ್ದಕ್ಕೆ ಸುನೀಲ್ ನಾಯ್ಕ್, ವೇತನ್ ತಾಂಡೇಲ್ ಹಾಗೂ ಅಕ್ಷಯ್ ನಾಯ್ಕ್‌ ಖಾತೆಗೆ ಹಣ ಕೂಡ ಜಮೆ ಮಾಡಲಾಗಿತ್ತು. ಅಕ್ಷಯ್ ನಾಯ್ಕ್ ಈ ಹಿಂದೆ ಸೀ ಬರ್ಡ್ ಒಳಗೆ ಕೆಲಸ ಮಾಡ್ತಿದ್ದನಾದರೂ ಬಳಿಕ ಗೋವಾದಲ್ಲಿ ಕ್ಯಾಂಟೀನ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಇದನ್ನೂ ಓದಿ: ಮದುಮಗನ ಗೆಟಪ್‌ನಲ್ಲಿ ನಾಗಚೈತನ್ಯ- ಸೀಕ್ರೆಟ್ ಆಗಿ ಶೋಭಿತಾ ಜೊತೆ ಮದುವೆಗೆ ರೆಡಿಯಾದ್ರಾ ಸಮಂತಾ ಮಾಜಿ ಪತಿ?

    ಸದ್ಯ ಅಕ್ಷಯ್‌ಗೆ ಸೇರಿದ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಸುನೀಲ್‌ ನಾಯ್ಕ್‌ಗೆ ನೋಟೀಸ್ ನೀಡಿ ಹೊರಗೆ ಬಿಟ್ಟಿದ್ದಾರೆ. ಆದ್ರೆ ವೇತನ್ ತಾಂಡೇಲ್‌‌ನನ್ನು ಹಾಗೂ ಅಕ್ಷಯ್ ನಾಯ್ಕ್‌ನನ್ನು ಗೌಪ್ಯ ಸ್ಥಳದಲ್ಲಿರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹೆಂಡತಿ ಕೊಂದು ದೃಶ್ಯ ಸಿನಿಮಾ ಮಾದರಿಯಲ್ಲಿ ಹೂತಿಟ್ಟ; ಸ್ನೇಹಿತನ ಹೆಂಡತಿ ಕೊಲೆಯಲ್ಲಿ ಭಾಗಿಯಾಗಿ ಹಳೇ ಕೇಸಲ್ಲೂ ತಗ್ಲಾಕೊಂಡ ಖತರ್ನಾಕ್ 

  • ಕಾರವಾರದ ನೌಕಾನೆಲೆಗೆ ರಾಜನಾಥ್ ಸಿಂಗ್ ಭೇಟಿ – ರಕ್ಷಣಾ ಸಿಬ್ಬಂದಿ ಕುಟುಂಬದೊಂದಿಗೆ ಸಂವಾದ

    ಕಾರವಾರದ ನೌಕಾನೆಲೆಗೆ ರಾಜನಾಥ್ ಸಿಂಗ್ ಭೇಟಿ – ರಕ್ಷಣಾ ಸಿಬ್ಬಂದಿ ಕುಟುಂಬದೊಂದಿಗೆ ಸಂವಾದ

    ಕಾರವಾರ: ದೇಶದ ಪ್ರತಿಷ್ಠಿತ ನೌಕಾ ನೆಲೆಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿರುವ ಕದಂಬ ನೌಕಾನೆಲೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಭೇಟಿ ನೀಡಿದರು.

    ರಕ್ಷಣಾ ಸಚಿವರನ್ನು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿ ಕುಮಾರ್ ಮತ್ತು ವೈಸ್ ಅಡ್ಮಿರಲ್ ಅಜೇಂದ್ರ ಬಹದ್ದೂರ್ ಸಿಂಗ್, ಕಮಾಂಡಿಂಗ್ ಇನ್ ಚೀಫ್ ವೆಸ್ಟರ್ನ್ ನೇವಲ್ ಕಮಾಂಡ್ ಜೊತೆಗೆ ರಿಯರ್ ಅಡ್ಮಿರಲ್ ಅತುಲ್ ಆನಂದ್, ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಕರ್ನಾಟಕ ನೇವಲ್ ಏರಿಯಾ (ಎಫ್‍ಒಕೆ) ಬರಮಾಡಿಕೊಂಡರು. ಇದನ್ನೂ ಓದಿ: ಎಲ್‍ ನಿನೋ ಎಫೆಕ್ಟ್ – ಕೇರಳಕ್ಕೆ ಮುಂಗಾರು ನಾಲ್ಕು ದಿನ ವಿಳಂಬ

    ರಕ್ಷಣಾ ಸಚಿವರು ಕದಂಬ ನೌಕಾ ಪ್ರದೇಶದ ರಕ್ಷಣಾ ಸಿಬ್ಬಂದಿ ಮತ್ತು ಅವರ ಕುಟುಂಬಗಳೊಂದಿಗೆ ಸಂವಾದ ನಡೆಸಿದರು. ಎರಡು ದಿನದ ಕಾರ್ಯಕ್ರಮದ ನಿಮಿತ್ತ ಆಗಮಿಸಿರುವ ರಾಜನಾಥ್ ಸಿಂಗ್ ಮೆ 27 ರಂದು ಐಎನ್‍ಎಸ್ ವಿಕ್ರಮಾದಿತ್ಯ ನೌಕೆಯ ಜಲಾಂತರ್ಗಾಮಿ ಸಮುದ್ರಯಾನದಲ್ಲಿ ಪಾಲ್ಗೊಳ್ಳುವ ಜೊತೆ ಕದಂಬ ನೌಕಾನೆಲೆಯ ಫೇಸ್-2 ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ. ಇದನ್ನೂ ಓದಿ: ಬೆಂಗಳೂರು – ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ಶಂಕು: ವಿಶೇಷ ಏನು?

  • ನೌಕಾನೆಲೆ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರೆಂದು ಘೋಷಿಸಿ: ರಾಜನಾಥ್ ಸಿಂಗ್‍ಗೆ ಶಾಸಕಿ ರೂಪಾಲಿ ನಾಯ್ಕ ಮನವಿ

    ನೌಕಾನೆಲೆ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರೆಂದು ಘೋಷಿಸಿ: ರಾಜನಾಥ್ ಸಿಂಗ್‍ಗೆ ಶಾಸಕಿ ರೂಪಾಲಿ ನಾಯ್ಕ ಮನವಿ

    – ಕುಟುಂಬಕ್ಕೆ ಉದ್ಯೋಗ ನೀಡಿ

    ಕಾರವಾರ: ಕಾರವಾರದ ಅರಗಾದಲ್ಲಿರುವ ಕದಂಬ ನೌಕಾನೆಲೆಗೆ ತಮ್ಮ ಜಮೀನನ್ನು ನೀಡಿದ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರು ಎಂದು ಘೋಷಣೆ ಮಾಡಿ. ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸಲು ಶಿಪ್ ಯಾರ್ಡ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಇಂದು ಕಾರವಾರದ ಕದಂಬಾ ನೌಕಾನೆಲೆಗೆ ಆಗಮಿಸಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್ ರವರಿಗೆ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಮನವಿ ಮಾಡಿದ್ದಾರೆ.

    ಕಾರವಾರ ಮತ್ತು ಅಂಕೋಲಾ ಈ ಎರಡೂ ತಾಲೂಕಿನಲ್ಲಿ 4,604 ಕುಟುಂಬಗಳು ನೌಕಾನೆಲೆಯಲ್ಲಿ ನಿರಾಶ್ರಿತರಾಗಿದ್ದಾರೆ. ಈ ಕುಟುಂಬಗಳು ನಿರಾಶ್ರಿತವಾಗಿ 3 ದಶಕಗಳಾದರೂ ಸಮಾಜದಲ್ಲಿ ಗೌರವಯುತ ಬದುಕು ಕಂಡುಕೊಳ್ಳುವಲ್ಲಿ ಇದುವರೆಗೂ ಸಾಧ್ಯವಾಗಿಲ್ಲ. ಸದ್ಯ ಕೇವಲ 968 ಕುಟುಂಬಗಳಿಗೆ ಮಾತ್ರ ಉದ್ಯೋಗ ನೀಡಲಾಗಿದೆ.

    ನೌಕಾನೆಲೆ ನಿರಾಶ್ರಿತರು ದೇಶಕ್ಕಾಗಿ, ದೇಶದ ರಕ್ಷಣೆಗಾಗಿ ತಮ್ಮ ಮನೆ, ಭೂಮಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಈ ಕಾರಣದಿಂದ ನಿರಾಶ್ರಿತರು ಉದ್ಯೋಗ, ಗೌರವಯುತ ಬದುಕಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ಹೊಂದಿ ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರ್ಪಡೆಯಾಗುವಂತಾಗಬೇಕು.

    ಇದಕ್ಕಾಗಿ ನೌಕಾನೆಲೆ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರು ಎಂದು ಘೋಷಣೆ ಮಾಡಬೇಕು. ನಾಲ್ಕು ಸಾವಿರಕ್ಕೂ ಹೆಚ್ಚು ನಿರಾಶ್ರಿತ ಪ್ರತಿ ಕುಟುಂಬದ ಓರ್ವ ಸದಸ್ಯನಿಗೆ ಒಂದು ಉದ್ಯೋಗ ಕೊಡಬೇಕು. ಅವರಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ದೊರಕಿಸಿಕೊಡುವ ಮೂಲಕ ದೇಶಕ್ಕಾಗಿ ತ್ಯಾಗ ಮಾಡಿದವರ ಬದುಕು ಹಸನಾಗುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಶಾಸಕಿ ರೂಪಾಲಿ ನಾಯ್ಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗಾಯಾಳುಗಳನ್ನ ಶಾಸಕರೇ ಕರೆತಂದ್ರೂ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ – ವೈದ್ಯರನ್ನ ತರಾಟೆ ತೆಗದುಕೊಂಡ ಶಾಸಕಿ ರೂಪಾಲಿ ನಾಯ್ಕ

    ಇನ್ನು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ನೌಕಾನೆಲೆ, ಕೈಗಾ ಅಣು ವಿದ್ಯುತ್ ಸ್ಥಾವರ, ಕೊಂಕಣ ರೈಲ್ವೆ, ಚತುಷ್ಪಥ ಹೆದ್ದಾರಿ, ಕದ್ರಾ, ಕೊಡಸಳ್ಳಿ ಜಲ ವಿದ್ಯುತ್ ಯೋಜನೆಗಳು ಹೀಗೆ ವಿವಿಧ ಕಾರಣಗಳಿಂದ ನಿರಾಶ್ರಿತರಾದ ಕುಟುಂಬಗಳ ಸಂಖ್ಯೆ ಹೆಚ್ಚಿದೆ. ಸೀಬರ್ಡ್ ನೌಕಾನೆಲೆಯ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ನೌಕಾನೆಲೆಗೆ ಅಗತ್ಯ ಸಾಮಗ್ರಿಗಳ ತಯಾರಿಕೆಗೆ ಇಲ್ಲಿ ಯಾವುದೆ ಕೈಗಾರಿಕೆಗಳಿಲ್ಲ. ಸ್ಥಳೀಯ ಜನತೆಗೆ ಉದ್ಯೋಗ ಕೊಡುವ ಕೈಗಾರಿಕೆಗಳೂ ಇಲ್ಲಿಲ್ಲ. ಈ ಕಾರಣಕ್ಕಾಗಿ ಸರ್ಕಾರಿ ಸ್ವಾಮ್ಯದಲ್ಲಿ ರಕ್ಷಣಾ ಇಲಾಖೆ ನೌಕಾನೆಲೆಯಲ್ಲಿ ಶಿಪ್ ಯಾರ್ಡ ಹಾಗೂ ಪೂರಕ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕಿ ರೂಪಾಲಿ ನಾಯ್ಕರವರು ರಕ್ಷಣಾ ಸಚಿವರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕದಂಬ ನೌಕಾನೆಲೆಯ ವೈಮಾನಿಕ ಸಮಿಕ್ಷೆ ನಡೆಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

  • ಕದಂಬ ನೌಕಾನೆಲೆಯ ವೈಮಾನಿಕ ಸಮಿಕ್ಷೆ ನಡೆಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

    ಕದಂಬ ನೌಕಾನೆಲೆಯ ವೈಮಾನಿಕ ಸಮಿಕ್ಷೆ ನಡೆಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

    ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಗೆ ಇಂದು ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಭೇಟಿ ನೀಡಿದರು. ನೌಕಾಪಡೆಯ ಮುಖ್ಯಸ್ಥ, ಅಡ್ಮಿರಲ್ ಕರಂಬೀರ್ ಸಿಂಗ್‍ರೊಂದಿಗೆ ಗೋವಾದಿಂದ ಹೆಲಿಕಾಪ್ಟರ್ ಮೂಲಕ ಐಎನ್‍ಎಸ್ ಕದಂಬ ನೌಕಾನೆಲೆಯ ಹೆಲಿಪ್ಯಾಡ್‍ಗೆ ಆಗಮಿಸುವ ವೇಳೆ ಕದಂಬ ನೌಕಾನೆಲೆಯ ಎರಡನೇಯ ಹಂತದ ವಿಸ್ತರಣಾ ಕಾಮಗಾರಿಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು.

    ನೌಕಾನೆಲೆಗೆ ಆಗಮಿಸಿದ ರಕ್ಷಣಾ ಸಚಿವರನ್ನ ವೆಸ್ಟರ್ನ್ ನೇವಲ್ ಕಮಾಂಡ್, ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ವೈಸ್ ಅಡ್ಮಿರಲ್ ಆರ್.ಹರಿ ಕುಮಾರ್ ಮತ್ತು ಕರ್ನಾಟಕ ನೌಕಾ ಪ್ರದೇಶದ ಧ್ವಜ ಅಧಿಕಾರಿ, ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಸ್ವಾಗತಿಸಿದರು. ಬಳಿಕ ನೌಕಾಪ್ರದೇಶದ ಸರ್ವೇಕ್ಷಣೆ ನಡೆಸಿದ ಸಚಿವ ರಾಜನಾಥ ಸಿಂಗ್ ರಿಗೆ ಅಧಿಕಾರಿಗಳು ಎರಡನೇಯ ಹಂತದ ಕಾಮಗಾರಿ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಹಡಗುಗಳ ರಿಪೇರಿ ಕಾರ್ಯ ಕೈಗೊಳ್ಳುವ ಲಿಫ್ಟಿಂಗ್ ಯಂತ್ರಗಳ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತು. ಇದನ್ನೂ ಓದಿ: ಕೋವಿಡ್ ವಾರ್ಡ್‍ನಲ್ಲಿ ಆಮ್ಲಜನಕ ಸೋರಿಕೆ ತಡೆಗೆ ನೌಕಾದಳದ ತಾಂತ್ರಿಕ ತಂಡ ನಿಯೋಜನೆ

    ಜೊತೆಗೆ ನೌಕಾ ಜಟ್ಟಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನ ಪರಿಶೀಲಿಸಿದರು. ಬಳಿಕ ನೌಕಾನೆಲೆ ಸಿಬ್ಬಂದಿಗಾಗಿ ನೂತನವಾಗಿ ನಿರ್ಮಿಸಲಾದ ವಸತಿಗೃಹಕ್ಕೆ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿದ್ದು ಅಲ್ಲಿನ ಮೂಲಭೂತ ಸೌಕರ್ಯಗಳು, ಇಂಧನ ದಕ್ಷತೆ, ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಸ್ನೇಹಿ ವ್ಯವಸ್ಥೆಗಳನ್ನು ವೀಕ್ಷಿಸಿದರು. ಈ ವೇಳೆ ನೌಕಾನೆಲೆಯ ಎರಡನೇಯ ಹಂತದ ಕಾಮಗಾರಿಯ ಕಾಂಟ್ರ್ಯಾಕ್ಟರ್, ಎಂಜಿನಿಯರ್, ಅಧಿಕಾರಿಗಳು ಹಾಗೂ ನೌಕಾನೆಲೆ ಸಿಬ್ಬಂದಿಯೊಂದಿಗೂ ರಾಜನಾಥ್ ಸಿಂಗ್ ಮಾತುಕತೆ ನಡೆಸಿದರು. ಇದನ್ನೂ ಓದಿ: ಕದಂಬ ನೌಕಾನೆಲೆಗೆ ಸಂಸದೀಯ ಸಮಿತಿ ಸದಸ್ಯರ ಭೇಟಿ

  • ಕದಂಬ ನೌಕಾನೆಲೆಗೆ ಸಂಸದೀಯ ಸಮಿತಿ ಸದಸ್ಯರ ಭೇಟಿ

    ಕದಂಬ ನೌಕಾನೆಲೆಗೆ ಸಂಸದೀಯ ಸಮಿತಿ ಸದಸ್ಯರ ಭೇಟಿ

    – ರಾಹುಲ್ ಗಾಂಧಿ, ಪ್ರತಾಪ್ ಸಿಂಹ ಗೈರು

    ಕಾರವಾರ: ಕದಂಬ ನೌಕಾದಳದ ಎರಡನೇ ಹಂತದ ಕಾಮಗಾರಿ ಪರಿಶೀಲನೆಗೆ ಕೇಂದ್ರ ಸರ್ಕಾರದ ಸಂಸದೀಯ ರಕ್ಷಣಾ ಸ್ಥಾಯಿ ಸಮಿತಿ ಸದಸ್ಯರು ಇಂದು ಕಾರವಾರದ ಅರಗದಲ್ಲಿರುವ ಕದಂಬ ನೌಕಾ ನೆಲೆಗೆ ಭೇಟಿ ನೀಡಿದರು.

    ಜುವಾಲ್ ಓರಮ್ ಅಧ್ಯಕ್ಷತೆಯಲ್ಲಿ ಆಗಮಿಸಿದ ಮೂವತ್ತು ಜನರ ಕಮಿಟಿಯಲ್ಲಿ ರಾಜ್ಯಸಭಾ ಸದಸ್ಯ ಶರದ್ ಪವಾರ್, ವಿಜಯೇಂದ್ರ ಸಿಂಗ್, ಡಾ.ಅಶೋಕ್, ವಾಜಪೇಯಿ, ಪ್ರೇಮಚಂದ್ ಗುಪ್ತಾ, ಸಂಸದರಾದ ಕುಮಾರ್ ಡ್ಯಾನಿಷ್ ಅಲಿ, ಅಜಯ್ ಭಟ್, ಕರ್ನಾಟಕದ ಅಣ್ಣಾಸಾಬ್ ಜೊಲ್ಲೆ, ರಾಮ್ ಶಂಕರ್ ಕಟಾರಿಯ, ಪಿ.ಆರ್.ಫಣಿವೇಂದ್ರ ಮುಂತಾದವರು ಆಗಮಿಸಿದ್ದಾರೆ. ಇಂದು ಕದಂಬ ನೌಕಾ ನೆಲೆಯಲ್ಲಿ ಎರಡನೇ ಹಂತದ ಕಾಮಗಾರಿ ಹಾಗೂ ಭದ್ರತೆ ಕುರಿತು ಸಭೆ ನಡೆಸಿ ಮಾಹಿತಿ ಪಡೆಯಲಿದ್ದಾರೆ.

    ರಾಹುಲ್ ಗಾಂಧಿ, ಪ್ರತಾಪ್ ಸಿಂಹ ಗೈರು:
    ಏಷ್ಯದ ಎರಡನೇ ಅತೀ ದೊಡ್ಡ ನೌಕಾನೆಲೆ ಎಂಬ ಖ್ಯಾತಿ ಹೊಂದಿರುವ ಕಾರವಾರದ ಕದಂಬ ನೌಕಾ ನೆಲೆಯಲ್ಲಿ 2018 ರಲ್ಲಿ ಎರಡನೇ ಹಂತದ 13,500 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ಇದರ ಖರ್ಚು ವೆಚ್ಚ, ಕಾಮಗಾರಿ ಗುಣಮಟ್ಟ, ಪ್ರಸಕ್ತ ಸ್ಥಿತಿಗಳ ಬಗ್ಗೆ ಅಧ್ಯಯನ ನೆಡೆಸಿ ಕಮಿಟಿಯು ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ. ಜೊತೆಗೆ ಹಣ ಬಿಡುಗಡೆ ಮತ್ತು ಗುಣಮಟ್ಟದಲ್ಲಿ ಸಹ ಈ ಸಮಿತಿಯ ಪಾತ್ರ ಮುಖ್ಯವಾಗಿರುತ್ತದೆ. ಆದ್ರೆ ಈ ಸಮಿತಿಯಲ್ಲಿದ್ದ ರಾಹುಲ್ ಗಾಂಧಿ ಹಾಗೂ ಪ್ರತಾಪ್ ಸಿಂಹ ಸೇರಿದಂತೆ ಅನೇಕ ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಗೈರಾಗಿದ್ದಾರೆ.

    ಗೋವಾದಿಂದ ಆಗಮಿಸಿರುವ ಈ ಕಮಿಟಿಯಲ್ಲಿ ಅಧಿಕಾರಿಗಳು ಸೇರಿ ಒಟ್ಟು ಮೂವತ್ತು ಜನರಿದ್ದು, ಇಂದು ಕದಂಬ ನೌಕಾನೆಲೆಯಲ್ಲಿ ಸಭೆ ನಡೆಸಿ ಕಾಮಗಾರಿ ಪರಿಶೀಲನೆ ಕೈಗೊಂಡು ಸಂಜೆ ಆರು ಗಂಟೆಗೆ ಗೋವಾಕ್ಕೆ ಮರಳಲಿದ್ದಾರೆ.

  • ಕದಂಬ ನೌಕಾನೆಲೆಯಿಂದ 15 ಲಕ್ಷ ರೂ. ಸಾಗಿಸುತ್ತಿದ್ದ ಅಧಿಕಾರಿ ವಶಕ್ಕೆ

    ಕದಂಬ ನೌಕಾನೆಲೆಯಿಂದ 15 ಲಕ್ಷ ರೂ. ಸಾಗಿಸುತ್ತಿದ್ದ ಅಧಿಕಾರಿ ವಶಕ್ಕೆ

    ಕಾರವಾರ: ಸೂಟ್‍ಕೇಸ್‍ನಲ್ಲಿ 15 ಲಕ್ಷ ರೂ.ಗೂ ಅಧಿಕ ಹಣ ಸಾಗಿಸುತ್ತಿದ್ದ ಕದಂಬ ನೌಕಾನೆಲೆಯ ಅಧಿಕಾರಿಯನ್ನು ನೌಕಾನೆಲೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ನೌಕಾನೆಲೆಯಲ್ಲಿರುವ ಮಿಲಿಟರಿ ಎಂಜಿನಿಯರಿಂಗ್ ಸರ್ವಿಸ್‍ನ ಅಧಿಕಾರಿಯೋರ್ವ ನೇವಲ್ ಬೇಸ್‍ನಲ್ಲೇ 15 ಲಕ್ಷ ರೂ.ಗಿಂತಲೂ ಹೆಚ್ಚಿನ ಹಣವನ್ನು ಸೂಟ್‍ಕೇಸ್‍ನಲ್ಲಿ ಬೇಸ್‍ನ ಹೊರಗಡೆ ಕೊಂಡೊಯ್ಯುತ್ತಿದ್ದ. ಈ ವೇಳೆ ಸೂಟ್‍ಕೇಸ್ ಜತೆ ಹೊರ ಬರುತ್ತಿದ್ದ ಎಂಇಎಸ್ ಅಧಿಕಾರಿಯನ್ನು ನೇವಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಎಂಇಎಸ್ ಅಧಿಕಾರಿಯನ್ನು ಹಿಡಿದು ನೇವಲ್ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಭಾರೀ ಮೊತ್ತದ ಹಣ ಎಲ್ಲಿಂದ ಬಂತು? ಎಲ್ಲಿಗೆ ಸಾಗಾಟವಾಗುತ್ತಿದೆ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಈ ಹಿಂದೆ ಅಧಿಕಾರಿಯೋರ್ವರು ಲಂಚ ಪಡೆದ ಪ್ರಕರಣ, ಬಳಿಕ ಸಿಬ್ಬಂದಿ ಪಾಕಿಸ್ತಾನಕ್ಕೆ ಮಾಹಿತಿ ನೀಡುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಪ್ರಸ್ತುತ ಎಂಇಎಸ್ ಅಧಿಕಾರಿಯಲ್ಲಿ ದೊರೆತಿರುವ ಹಣ ಹಲವು ಅನುಮಾನಗಳಿಗೆ ಎಡೆಮಾಡಿದ್ದು, ವಿಚಾರಣೆಯ ಬಳಿಕವೇ ಸತ್ಯಾಂಶ ತಿಳಿದುಬರಬೇಕಷ್ಟೇ ಎನ್ನಲಾಗಿದೆ.

  • ಕೊರೊನಾ ಭೀತಿಗೆ ಕಾರವಾರ ಬಂದರಿನಲ್ಲಿ ಹೈ ಅಲರ್ಟ್ – ಜಿಲ್ಲಾಸ್ಪತ್ರೆಗೆ ಕದಂಬ ನೌಕಾ ನೆಲೆಯಿಂದ 100 ಹಾಸಿಗೆ

    ಕೊರೊನಾ ಭೀತಿಗೆ ಕಾರವಾರ ಬಂದರಿನಲ್ಲಿ ಹೈ ಅಲರ್ಟ್ – ಜಿಲ್ಲಾಸ್ಪತ್ರೆಗೆ ಕದಂಬ ನೌಕಾ ನೆಲೆಯಿಂದ 100 ಹಾಸಿಗೆ

    ಕಾರವಾರ: ವಿಶ್ವದೆಲ್ಲೆಡೆ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಕರ್ನಾಟಕಕ್ಕೂ ಕಾಲಿಟ್ಟಿದೆ. ಕೊರೊನಾ ಭೀತಿಗೆ ಮುಂಜಾಗೃತ ಕ್ರಮವಾಗಿ ಕಾರವಾರ ಬಂದರು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪ್ರವಾಸಿ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ಸೂಚಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್‍ನಲ್ಲಿ ಕೊರೊನಾ ಸೋಂಕು ತಡೆಗಟ್ಟುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಆಸ್ಪತ್ರೆ ಮುಖ್ಯಸ್ಥರು, ವೈದ್ಯಕೀಯ ಕಾಲೇಜು ಮುಖ್ಯಸ್ಥರು, ನೌಕಾ ನೆಲೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್‍ರವರು ಸಭೆ ನಡೆಸಿದರು. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯ ಸಾದಿಸಿ ಕೊರೊನಾ ಸೋಂಕು ಜಿಲ್ಲೆಗೆ ಯಾವುದೇ ಮಾರ್ಗದಲ್ಲಿ ಬರದಂತೆ ಸೂಕ್ತ ಕ್ರಮ ಕೈಗೊಂಡು ಕಟ್ಟೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.

    ಕಾರವಾರ ಬಂದರಿನಲ್ಲಿ ವಿದೇಶಿ ಹಡಗುಗಳು ಆಗಮಿಸುವುದರಿಂದ ಮುಖ್ಯವಾಗಿ ಅಲ್ಲಿ ತೀವ್ರ ನೀಗಾ ಇರಿಸಬೇಕು. ಆಗಮಿಸಿದ ಹಡಗುಗಳಲ್ಲಿ ವೈದ್ಯಕೀಯ ತಪಾಸಣೆಯನ್ನು ಮಾಡುವುದು ಕಡ್ಡಾಯವಾಗಿದ್ದು, ಇದರ ಮಾಹಿತಿಯನ್ನು ಪ್ರತಿ ದಿನ ಜಿಲ್ಲಾ ಆರೋಗ್ಯ ಅಧಿಕಾರಿಗಳು ಪಡೆದು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

    ಈ ಬಗ್ಗೆ ಕದಂಬ ನೌಕಾ ನೆಲೆ ಅಧಿಕಾರಿ ಮಾತನಾಡಿ, ನೌಕಾ ನೆಲೆಯಲ್ಲಿ ರೋಗಿಗಳ ಆರೈಕೆಗಾಗಿ ಸಾಕಷ್ಟು ಹಾಸಿಗೆಗಳ ವ್ಯವಸ್ಥೆ ಇರುವುದರಿಂದ ಜಿಲ್ಲಾಸ್ಪತ್ರೆಗೆ 100 ಹಾಸಿಗೆಗಳನ್ನು ನೀಡಲು ನಿರ್ಧರಿಸಿದ್ದೇವೆ. ಅಲ್ಲದೆ ಈಗಾಗಲೇ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ವಿದೇಶದಿಂದ ಬರುವ ಹಡಗುಗಳಲ್ಲಿರುವ ಪ್ರಯಾಣಿಕರು ಮತ್ತು ನಾವಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಮುಂಚಿತವಾಗಿಯೇ ಎಲ್ಲ ಹಡಗುಗಳಲ್ಲಿ ವೈದ್ಯಕೀಯ ತಂಡವನ್ನು ಇರಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮಾತನಾಡಿ, ಪ್ರಮುಖವಾಗಿ ಗೋಕರ್ಣದಲ್ಲಿ ವಿದೇಶಿ ಪ್ರವಾಸಿಗರು ಆಗಮಿಸುವುದರಿಂದ ಅಲ್ಲಿ ವೈದ್ಯರ ತಂಡ ರಚಿಸಿಕೊಂಡು ಮನೆ ಮನೆಗೆ ಭೇಟಿ ನೀಡಿ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕೆಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ, ಪೊಲೀಸ್ ಇಲಾಖೆಯಿಂದ ತೆಗೆದುಕೊಳ್ಳಬಹುದಾದ ಎಲ್ಲಾ ಮುಂಜಾಗೃತ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದು, ಗೋವಾ ಮತ್ತು ಮಂಗಳೂರು ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರನ್ನು ವೈದ್ಯರ ಸಹಾಯದೊಂದಿಗೆ ತಪಾಸಣೆ ಮಾಡುವ ಮೂಲಕ ಹೆಚ್ಚಿನ ಜಾಗೃತಿ ವಹಿಸಲಾಗುವುದು ಎಂದರು.

    ಸಭೆಯಲ್ಲಿ ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದು, ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಕ್ರಮ ಕೈಗೊಂಡಿದ್ದಾರೆ.

    ಕಾರವಾರ ಜಿಲ್ಲಾಸ್ಪತ್ರೆಯಲ್ಲಿ 10 ಹಾಸಿಗೆ ಮೀಸಲು:
    ಕಾರವಾರ ಗಡಿ ಪ್ರದೇಶವಾಗಿರುವ ಹಿನ್ನೆಲೆ ನೆರೆಯ ಗೋವಾ, ಮುಂಬೈನಿಂದ ವಿದೇಶಿ ಪ್ರಜೆಗಳು ಈ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದರ ಜೊತೆಗೆ ಸಮುದ್ರದ ಮೂಲಕವು ಹಡಗುಗಳು ಬರುವುದರಿಂದ ತೀವ್ರ ನಿಗಾ ಬಹಿಸಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಕಟ್ಟಡವನ್ನು ಮೀಸಲಿಡಲಾಗಿದೆ. 5 ಮಹಿಳೆಯರು, 5 ಪುರುಷರಿಗಾಗಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಲಾಗಿದ್ದು, ಪ್ರತ್ಯೇಕ ಸಿಬ್ಬಂದಿಗಳನ್ನು ಆರೋಗ್ಯ ಇಲಾಖೆ ನೇಮಿಸಿದೆ.

  • ಕಾರವಾರಕ್ಕೆ ಬರಲಿದೆ ಟ್ಯುಪೊಲೆವ್ ಯುದ್ಧ ವಿಮಾನ- ಜಿಲ್ಲಾಡಳಿತದೊಂದಿಗೆ ಭಾರತೀಯ ನೌಕಾದಳ ಒಪ್ಪಂದ

    ಕಾರವಾರಕ್ಕೆ ಬರಲಿದೆ ಟ್ಯುಪೊಲೆವ್ ಯುದ್ಧ ವಿಮಾನ- ಜಿಲ್ಲಾಡಳಿತದೊಂದಿಗೆ ಭಾರತೀಯ ನೌಕಾದಳ ಒಪ್ಪಂದ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಿರುವ ಬಹು ನಿರೀಕ್ಷಿತ ಟ್ಯುಪೊಲೆವ್-142 ಎಂ ಯುದ್ಧ ವಿಮಾನ ಮ್ಯೂಸಿಯಂ ಸ್ಥಾಪಿಸಲು ನೌಕಾನೆಲೆಯ ಕರ್ನಾಟಕ ಪ್ಲಾಗ್ ಆಫೀಸರ್ ಮಹೇಶ್‍ಸಿಂಗ್ ಹಾಗೂ ರಾಜ್ಯ ಸರ್ಕಾರದ ಪರವಾಗಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ನಡುವೆ ಒಪ್ಪಂದಕ್ಕೆ ಸಹಿ ಹಾಕಿಕೊಳ್ಳಲಾಯಿತು.

    ಟ್ಯುಪೊಲೆವ್ ಯುದ್ಧ ವಿಮಾನವನ್ನು ಕಾರವಾರದಲ್ಲಿ ಇರುವ ಐ.ಎನ್.ಎಸ್.ಚಾಪೆಲ್ ಯುದ್ಧ ನೌಕೆ ಮ್ಯೂಸಿಯಂ ಪಕ್ಕದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಹಿಂದೆಯೇ ಮ್ಯೂಸಿಯಂ ಸ್ಥಾಪನೆಗೆ ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕುರಿತು ಕೇಂದ್ರ ರಕ್ಷಣಾ ಇಲಾಖೆಗೆ ಪತ್ರ ಬರೆದಿದ್ದರು. ಆದರೆ ಅತೀ ವೆಚ್ಚ ಸೇರಿದಂತೆ ನಾನಾ ಕಾರಣಕ್ಕೆ ವಿಮಾನ ಮ್ಯೂಸಿಯಂ ಸ್ಥಾಪನೆ ಪ್ರಕ್ರಿಯೆಗೆ ತೊಡಕಾಗಿತ್ತು.

    10 ಕೋಟಿ ವೆಚ್ಚ: ಚೆನ್ನೈನಿಂದ ವಿಮಾನದ ಬಿಡಿ ಭಾಗಗಳನ್ನು ನಗರಕ್ಕೆ ತಂದು, ನೌಕಾಪಡೆಯಿಂದಲೇ ಜೋಡಿಸಿ ಕೊಡುವ ಕಾರ್ಯ ಮಾಡಲಾಗುತ್ತದೆ. ಬಳಿಕ ಅದರಲ್ಲಿ ನೌಕಾಪಡೆಯ ಕಾರ್ಯಾಚರಣೆಗೆ ಸಂಬಂಧಿಸಿದ ವಿವಿಧ ಮಾದರಿಗಳನ್ನು ಇಟ್ಟು ವಸ್ತು ಸಂಗ್ರಹಾಲಯವನ್ನಾಗಿ ರೂಪಿಸಲಾಗುತ್ತದೆ. ವಿಮಾನದ ಬಿಡಿ ಭಾಗವನ್ನು ಚನ್ನೈನಿಂದ ತರಲು 10 ಕೋಟಿ ರೂ. ವೆಚ್ಚ ತಗಲಿದೆ. ಈ ವೆಚ್ಚದಲ್ಲಿ ಅರ್ಧ ನೌಕಾದಳ ಇನ್ನರ್ಧ ರಾಜ್ಯ ಸರ್ಕಾರ ಭರಿಸಬೇಕೆಂಬ ಷರತ್ತು ವಿಧಿಸಲಾಗಿತ್ತು. ಆದರೆ ಕಾರವಾರದಲ್ಲಿ ಕದಂಬ ನೌಕಾನೆಲೆ ಇರುವುದರಿಂದ ಹಾಗೂ ಸ್ಥಳೀಯರು ನೌಕಾನೆಲೆಗೆ ಸ್ಥಳ ನೀಡಿದ್ದರಿಂದ ಎಲ್ಲಾ ವೆಚ್ಚವನ್ನು ಭಾರತೀಯ ನೌಕಾದಳವೇ ಭರಿಸುತ್ತಿದೆ.

    ಈ ವರ್ಷದ ಡಿಸೆಂಬರ್ ನಲ್ಲಿ ನಡೆಯಲಿರುವ ನೌಕಾ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರದ ಸಚಿವರನ್ನು, ನೌಕಾನೆಲೆಯ ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಿ ಉದ್ಘಾಟಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಸದ್ಯ ಜಾಗವನ್ನು ನೀಡಿರುವ ಜಿಲ್ಲಾಡಳಿತ ನೌಕಾದಳದೊಂದಿಗೆ ಎರಡು ವರ್ಷದ ಒಪ್ಪಂದ ಮಾಡಿಕೊಂಡಿದ್ದು, ಒಂದು ವರ್ಷಕ್ಕೆ ಆರು ಲಕ್ಷ ನಿರ್ವಹಣಾ ವೆಚ್ಚ ತಗುಲಲಿದ್ದು ಬರುವ ಪ್ರವಾಸಿಗರ ಮೂಲಕ ಭರಿಸುವ ಯೋಜನೆ ರೂಪಿಸಲಾಗಿದೆ.

    ಟ್ಯುಪೊಲೆವ್ ಯುದ್ಧ ವಿಮಾನದ ವಿಶೇಷತೆ:
    ಟ್ಯುಪೊಲೆವ್ ಯುದ್ಧ ವಿಮಾನವು 29 ವರ್ಷಗಳ ಕಾಲ ಭಾರತೀಯ ನೌಕಾದಳದಲ್ಲಿ ಸೇವೆ ಸಲ್ಲಿಸಿದೆ. 30 ಸಾವಿರ ಗಂಟೆಗಳ ಕಾಲ ಅಪಘಾತ ರಹಿತ ಹಾರಾಟವನ್ನು ನಡೆಸಿದೆ. ಸೋವಿಯತ್ ಒಕ್ಕೂಟದ ಕಾಲದಲ್ಲಿ 1988 ರಲ್ಲಿ ಭಾರತ ಈ ಯುದ್ಧ ವಿಮಾನವನ್ನು ಖರೀದಿ ಮಾಡಿತ್ತು. ಒಮ್ಮೆ ಇಂಧನ ತುಂಬಿದರೆ 1,300 ಕಿಲೋ ಮೀಟರ್ ಸಾಗಬಲ್ಲ ಟ್ಯುಪೊಲೆವ್ ಯುದ್ಧ ವಿಮಾನ 11 ರಿಂದ 15 ಸೈನಿಕರನ್ನು ಕೂರಿಸಿಕೊಂಡು 711 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿತ್ತು. ಸುಮಾರು 1,500 ಮೀಟರ್ ಉದ್ದವಿರುವ ಟ್ಯುಪೊಲೆವ್ ಅನ್ನು ಭಾರತೀಯ ನೌಕಾಪಡೆಯು 2017ರ ಮಾರ್ಚ್ ನಲ್ಲಿ ಡಿ-ಕಮಿಷನ್ (ನಿವೃತ್ತಿ) ಮಾಡಿದೆ.