Tag: ಕತ್ರಿನಾ ಕೈಫ್

  • ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ ಕೈಫ್‌, ವಿಕ್ಕಿ ಕೌಶಲ್‌

    ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ ಕೈಫ್‌, ವಿಕ್ಕಿ ಕೌಶಲ್‌

    ಬಾಲಿವುಡ್‌ ಸ್ಟಾರ್‌ಗಳಾದ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದಂಪತಿ ಈ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಆದಾಗ್ಯೂ, ಕತ್ರಿನಾ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಗು ಅಕ್ಟೋಬರ್-ನವೆಂಬರ್‌ನಲ್ಲಿ ಜನಿಸಲಿದೆ ಎಂದು ಮೂಲಗಳು ದೃಢಪಡಿಸಿವೆ.

    ಕತ್ರಿನಾ ಗರ್ಭಧಾರಣೆಯ ಬಗ್ಗೆ ಹಲವು ತಿಂಗಳುಗಳಿಂದ ಊಹಾಪೋಹಗಳು ಹರಡುತ್ತಿದ್ದವು. ಆದರೆ, ದಂಪತಿ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಫ್ಯಾನ್ಸ್‌ಗೆ ಕಿಚ್ಚ ಸುದೀಪ್ ಗುಡ್‌ನ್ಯೂಸ್

    ಬ್ಯಾಡ್ ನ್ಯೂಜ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕತ್ರಿನಾ ಕೈಫ್ ಗರ್ಭಧಾರಣೆಯ ವದಂತಿಯ ಬಗ್ಗೆ ವಿಕ್ಕಿ ಕೌಶಲ್ ಅವರನ್ನು ಪ್ರಶ್ನಿಸಲಾಯಿತು. ಈ ಬಗ್ಗೆ ಒಳ್ಳೆಯ ಸುದ್ದಿ ಬಂದರೆ, ನಾವು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಸಂತೋಷಪಡುತ್ತೇವೆ. ಆದರೆ ಸದ್ಯಕ್ಕೆ ಊಹಾಪೋಹಗಳಲ್ಲಿ ಯಾವುದೇ ಸತ್ಯವಿಲ್ಲ. ಅಲ್ಲಿಯವರೆಗೆ ಬ್ಯಾಡ್ ನ್ಯೂಜ್ ಚಿತ್ರವನ್ನು ಆನಂದಿಸಿ, ನಾವು ಒಳ್ಳೆಯ ಸುದ್ದಿಯೊಂದಿಗೆ ಖಂಡಿತ ನಿಮ್ಮ ಮುಂದೆ ಬರುತ್ತೇವೆ ಎಂದು ತಿಳಿಸಿದ್ದಾರೆ.

    ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ 2021 ರಲ್ಲಿ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದ ಸುಂದರವಾದ ಸ್ಥಳದಲ್ಲಿ ವಿವಾಹವಾದರು. ಕತ್ರಿನಾ-ವಿಕ್ಕಿ ಅವರ ವಿವಾಹದಲ್ಲಿ ಆಪ್ತರು ಹಾಜರಿದ್ದರು. ಇದನ್ನೂ ಓದಿ: ಉಪೇಂದ್ರ ದಂಪತಿ ಫೋನ್ ಹ್ಯಾಕ್ – ಸೈಬರ್ ವಂಚಕರು ದೋಚಿದ್ದೆಷ್ಟು ಹಣ?

  • ಭಾರತದ ಜೊತೆ ಸಂಘರ್ಷ ನಡೆಸಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಕತ್ರಿನಾ ಕೈಫ್‌ ರಾಯಭಾರಿ

    ಭಾರತದ ಜೊತೆ ಸಂಘರ್ಷ ನಡೆಸಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಕತ್ರಿನಾ ಕೈಫ್‌ ರಾಯಭಾರಿ

    ಭಾರತದೊಂದಿಗೆ ಸಂಘರ್ಷ ಮಾಡಿಕೊಂಡಿದ್ದ ಮಾಲ್ಡೀವ್ಸ್‌, ಬಾಲಿವುಡ್‌ ನಟಿ ಕತ್ರಿನಾ ಕೈಫ್‌ (Katrina Kaif) ಅವರನ್ನು ತನ್ನ ದೇಶದ ಜಾಗತಿಕ ಪ್ರವಾಸೋದ್ಯಮದ ರಾಯಭಾರಿಯಾಗಿ ಘೋಷಿಸಿದೆ.

    ಮಾಲ್ಡೀವ್ಸ್ ಮಾರ್ಕೆಟಿಂಗ್ ಮತ್ತು ಪಬ್ಲಿಕ್ ರಿಲೇಶನ್ಸ್ ಕಾರ್ಪೊರೇಷನ್ (MMPRC/Visit Maldives) ಇತ್ತೀಚೆಗೆ ಈ ಘೋಷಣೆ ಮಾಡಿದೆ. ನಟಿ ಕತ್ರಿನಾ ಕೈಫ್ ಅವರನ್ನು ವಿಸಿಟ್ ಮಾಲ್ಡೀವ್ಸ್‌ನ ಜಾಗತಿಕ ಬ್ರಾಂಡ್ ರಾಯಭಾರಿಯಾಗಿ ನೇಮಿಸಲಾಗಿದೆ. ಭಾರತದ ಜೊತೆ ರಾಜತಾಂತ್ರಿಕ ಸಂಬಂಧ ಸುಧಾರಣೆಗೆ ಈ ಕ್ರಮಕೈಗೊಳ್ಳಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಘೋಷಿಸಿದ ದೀಪಿಕಾ ಪಡುಕೋಣೆ

     

    View this post on Instagram

     

    A post shared by Visit Maldives (@visitmaldives)

    ನಮ್ಮ ಜಾಗತಿಕ ಬ್ರಾಂಡ್ ರಾಯಭಾರಿಯಾಗಿ ಕತ್ರಿನಾ ಅವರನ್ನು ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ. ಜನಪ್ರಿಯ ವ್ಯಕ್ತಿತ್ವ ಮತ್ತು ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅವರನ್ನು ಕಳೆದ 5 ವರ್ಷಗಳಿಂದ ಸತತ ವಿಶ್ವದ ಪ್ರಮುಖ ತಾಣವಾದ ಸನ್ನಿ ಸೈಡ್ ಆಫ್ ಲೈಫ್‌ಗೆ ಪರಿಪೂರ್ಣ ಪ್ರತಿನಿಧಿಯನ್ನಾಗಿ ಮಾಡುತ್ತದೆ. ವಿಶೇಷವಾಗಿ ನಾವು ಪ್ರಪಂಚದಾದ್ಯಂತ ಪ್ರಮುಖ ಮಾರುಕಟ್ಟೆಗಳಲ್ಲಿ ನಮ್ಮ ‘ಸಮ್ಮರ್‌ ಸೇಲ್ಸ್‌’ ಪ್ರಚಾರವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ವಿಸಿಟ್ ಮಾಲ್ಡೀವ್ಸ್‌ನ ಸಿಇಒ ಮತ್ತು ಎಂಡಿ ಇಬ್ರಾಹಿಂ ಶಿಯುರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಮಾಲ್ಡೀವ್ಸ್ ನೀಡುವ ನೈಸರ್ಗಿಕ ಸೌಂದರ್ಯ, ರೋಮಾಂಚಕ ಸಮುದ್ರ ಜೀವಿಗಳು ಮತ್ತು ವಿಶೇಷ ಐಷಾರಾಮಿ ಅನುಭವಗಳನ್ನು ಬಯಸುವ ಹೆಚ್ಚಿನ ಪ್ರಯಾಣಿಕರನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿರುವ ‘ಸಮ್ಮರ್‌ ಸೇಲ್ಸ್‌’ ಪ್ರಾರಂಭಿಸಿದ ನಂತರ ಕೈಫ್ ಅವರನ್ನು ಜಾಗತಿಕ ಬ್ರಾಂಡ್ ರಾಯಭಾರಿಯಾಗಿ ನೇಮಿಸಲಾಗಿದೆ. ಇದನ್ನೂ ಓದಿ: ನಟ ಸೂರ್ಯ ಜೊತೆಗೆ ಬಿಗ್‌ ಬಜೆಟ್‌ ಸಿನಿಮಾಗೆ ಕಮಲ್‌ ಪ್ಲ್ಯಾನ್‌

    ಸನ್ನಿ ಸೈಡ್ ಆಫ್ ಲೈಫ್‌ನ ಜಾಗತಿಕ ಬ್ರಾಂಡ್ ರಾಯಭಾರಿಯಾಗಿ ನೇಮಕವಾಗಿರುವ ಬಗ್ಗೆ ಮಾತನಾಡಿದ ಕತ್ರಿನಾ, ಮಾಲ್ಡೀವ್ಸ್ ಐಷಾರಾಮಿ ಮತ್ತು ನೈಸರ್ಗಿಕ ಸೌಂದರ್ಯದ ಪರಾಕಾಷ್ಠೆಯನ್ನು ಪ್ರತಿನಿಧಿಸುತ್ತದೆ. ಸೊಬಗು ಶಾಂತಿಯನ್ನು ಪೂರೈಸುವ ಸ್ಥಳ. ಸನ್ನಿ ಸೈಡ್ ಆಫ್ ಲೈಫ್‌ನ ಪ್ರತಿನಿಧಿಯಾಗಿ ಆಯ್ಕೆಯಾಗುವುದು ಒಂದು ಗೌರವ. ಜಾಗತಿಕ ಪ್ರೇಕ್ಷಕರಿಗೆ ಅತ್ಯುತ್ತಮ ಪ್ರಯಾಣ ಅನುಭವ ನೀಡುವ ಮತ್ತು ಪ್ರಪಂಚದಾದ್ಯಂತ ಜನರು ಈ ಅಸಾಧಾರಣ ತಾಣದ ವಿಶಿಷ್ಟ ಮೋಡಿ ಮತ್ತು ವಿಶ್ವ ದರ್ಜೆಯ ಕೊಡುಗೆಗಳನ್ನು ಸ್ವೀಕರಿಸಲು ಸಹಾಯ ಮಾಡಲು ನಾನು ಉತ್ಸುಕಳಾಗಿದ್ದೇನೆ ಎಂದು ತಿಳಿಸಿದ್ದಾರೆ.

    ಪ್ರಧಾನಿ ಮೋದಿ ಅವರ ಮಾಲ್ಡೀವ್ಸ್‌ ಪ್ರವಾಸಕ್ಕೂ ಮುನ್ನ ಈ ಘೋಷಣೆ ಹೊರಬಿದ್ದಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ದೇಶಕ್ಕೆ ಭೇಟಿ ನೀಡಲಿದ್ದಾರೆ.

  • ಫ್ಯಾಮಿಲಿ ಜೊತೆ ಹೋಳಿ ಹಬ್ಬ ಆಚರಿಸಿದ ಕತ್ರಿನಾ ಕೈಫ್

    ಫ್ಯಾಮಿಲಿ ಜೊತೆ ಹೋಳಿ ಹಬ್ಬ ಆಚರಿಸಿದ ಕತ್ರಿನಾ ಕೈಫ್

    ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ (Katrina Kaif) ಅವರು ಕುಟುಂಬದ ಜೊತೆ ಹೋಳಿ ಹಬ್ಬವನ್ನು (Holi Festival) ಸಂಭ್ರಮದಿಂದ ಆಚರಿಸಿದ್ದಾರೆ. ಹೋಳಿ ಸೆಲೆಬ್ರೇಷನ್‌ನ ಕಲರ್‌ಫುಲ್ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಪುನೀತ್‌ ಸರ್ ಫ್ಯಾನ್ಸ್‌ಗೆ ಇವತ್ತು ಹಬ್ಬ – ಅಪ್ಪು ರೀ-ರಿಲೀಸ್‌ ಬಗ್ಗೆ ಅನುಶ್ರೀ ಮಾತು

    ಪತಿ ವಿಕ್ಕಿ ಕೌಶಲ್, ಅತ್ತೆ ಮಾವನೊಂದಿಗೆ ಹೋಳಿ ಹಬ್ಬ ಆಚರಿಸಿ ಕತ್ರಿನಾ ಖುಷಿಪಟ್ಟಿದ್ದಾರೆ. ಮನೆಯ ಬಾಲ್ಕನಿಯಲ್ಲಿ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಇದನ್ನೂ ಓದಿ:‘ಬ್ರಹ್ಮಾಸ್ತ್ರ’ ಚಿತ್ರದ ನಿರ್ದೇಶಕ ಅಯಾನ್‌ ತಂದೆ ದೇಬ್ ಮುಖರ್ಜಿ ನಿಧನ

    ಇನ್ನೂ ಇತ್ತೀಚೆಗೆ ಕತ್ರಿನಾ ಕುಕ್ಕೆ ದೇಗುಲಕ್ಕೆ ಭೇಟಿ ನೀಡಿದ್ದರು. 2 ದಿನಗಳ ಕಾಲ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆ, ಸರ್ಪ ಸಂಸ್ಕಾರ ಸೇವೆ, ನಾಗ ಪ್ರತಿಷ್ಠಾ ಪೂಜೆ ಮಾಡಿಸಿದ್ದರು. ಸಂತಾನ, ವ್ಯವಹಾರಿಕ, ಕೌಟುಂಬಿಕ, ಜೀವನದ ಒಳಿತಿಗಾಗಿ ವಿಶೇಷ ಪೂಜೆ ಮಾಡಿಸಿದ್ದರು.

  • ಕುಕ್ಕೆ ದೇಗುಲದಲ್ಲಿ ಕತ್ರಿನಾ ಕೈಫ್- ಆಶ್ಲೇಷಾ ಬಲಿ ಪೂಜೆ ಮಾಡಿಸಿದ ನಟಿ

    ಕುಕ್ಕೆ ದೇಗುಲದಲ್ಲಿ ಕತ್ರಿನಾ ಕೈಫ್- ಆಶ್ಲೇಷಾ ಬಲಿ ಪೂಜೆ ಮಾಡಿಸಿದ ನಟಿ

    ಬಾಲಿವುಡ್ ನಟಿ ಕತ್ರಿನಾ ಕೈಫ್  (Katrina Kaif) ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ (Kukke Subramanya) ತಂಗಿದ್ದಾರೆ. ದೇವಸ್ಥಾನದಲ್ಲಿ ಇಂದು (ಮಾ.12) ಆಶ್ಲೇಷಾ ಬಲಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ:ನಟಿ ರನ್ಯಾ ಬೆನ್ನಲ್ಲೇ ಮತ್ತಿಬ್ಬರು ಸ್ಯಾಂಡಲ್‌ವುಡ್ ನಟಿಯರಿಗೆ ಮಾಸ್ಟರ್ ಸ್ಟ್ರೋಕ್

    ನಿನ್ನೆಯಿಂದ (ಮಾ.11) ಕತ್ರಿನಾ ದೇವಸ್ಥಾನದಲ್ಲಿ ವಿವಿಧ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಸರ್ಪ ಸಂಸ್ಕಾರ ಸೇವೆ, ನಾಗ ಪ್ರತಿಷ್ಠಾ ಸೇವೆಯಲ್ಲಿ ಭಾಗಿಯಾಗಿದ್ದಾರೆ. ಸಂತಾನ, ವ್ಯವಹಾರಿಕ, ಕೌಟುಂಬಿಕ, ಜೀವನದ ಒಳಿತಿಗಾಗಿ ಕತ್ರಿನಾ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ.

    ಸಾಮಾನ್ಯವಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮದುವೆಯಾಗದವರು, ಮಕ್ಕಳಾಗದವರು ಹೆಚ್ಚಾಗಿ ಭೇಟಿ ನೀಡುತ್ತಾರೆ. ದೋಷ ನಿವಾರಣೆಗೆ ಅನೇಕರು ಸರ್ಪ ಸಂಸ್ಕಾರ ಪೂಜೆ ನೆರವೇರಿಸುತ್ತಾರೆ. ಹಾಗಾಗಿ ಬಾಲಿವುಡ್ ನಟಿ ಕತ್ರಿನಾ ಕೂಡ ಸುಬ್ರಹ್ಮಣ್ಯನ ಮೊರೆ ಹೋಗಿದ್ದಾರೆ.

  • ಬಾಲಿವುಡ್ ನಟಿ ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ – ಸಂತಾನಕ್ಕಾಗಿ ಸರ್ಪ ಸಂಸ್ಕಾರ ಪೂಜೆ?

    ಬಾಲಿವುಡ್ ನಟಿ ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ – ಸಂತಾನಕ್ಕಾಗಿ ಸರ್ಪ ಸಂಸ್ಕಾರ ಪೂಜೆ?

    ಮಂಗಳೂರು: ಬಾಲಿವುಡ್ ನಟಿ ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಆದಿ ಸುಬ್ರಹ್ಮಣ್ಯದ ಸರ್ಪ ಸಂಸ್ಕಾರ ಯಾಗಶಾಲೆಯಲ್ಲಿ ಪೂಜೆ ನೆರವೇರಿಸಲು ನಟಿ ಆಗಮಿಸಿದ್ದಾರೆ. ಇಂದು ಮತ್ತು ನಾಳೆ ಕ್ಷೇತ್ರದಲ್ಲಿ ಸರ್ಪ ಸಂಸ್ಕಾರ ಪೂಜೆ ನೆರವೇರಿಸಲಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ.

    ಸಾಮಾನ್ಯವಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮದುವೆಯಾಗದವರು, ಮಕ್ಕಳಾಗದವರು ಹೆಚ್ಚಾಗಿ ಭೇಟಿ ನೀಡುತ್ತಾರೆ. ದೋಷ ನಿವಾರಣೆಗೆ ಅನೇಕರು ಸರ್ಪ ಸಂಸ್ಕಾರ ಪೂಜೆ ನೆರವೇರಿಸುತ್ತಾರೆ. ಇದೀಗ ಬಾಲಿವುಡ್ ನಟಿ ಕತ್ರಿನಾ ಕೂಡ ಸುಬ್ರಹ್ಮಣ್ಯನ ಮೊರೆ ಹೋಗಿದ್ದಾರೆ.

    ಸಂತಾನಕ್ಕಾಗಿ ನಟಿ ಸರ್ಪ ಸಂಸ್ಕಾರ ಪೂಜೆ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.

  • ಅನುಮತಿಯಿಲ್ಲದೇ ಕತ್ರಿನಾ ಕೈಫ್ ವಿಡಿಯೋ ಶೂಟ್ ಮಾಡಿದವರಿಗೆ ರವೀನಾ ಟಂಡನ್ ಕಿಡಿ

    ಅನುಮತಿಯಿಲ್ಲದೇ ಕತ್ರಿನಾ ಕೈಫ್ ವಿಡಿಯೋ ಶೂಟ್ ಮಾಡಿದವರಿಗೆ ರವೀನಾ ಟಂಡನ್ ಕಿಡಿ

    ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಕೆಲದಿನಗಳ ಹಿಂದೆ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ (Katrina Kaif) ಭಾಗಿಯಾಗಿದ್ದ ವಿಡಿಯೋ ಇದೀಗ ಟ್ರೋಲ್‌ ಆಗಿದೆ. ಅತ್ತೆಯೊಂದಿಗೆ ತ್ರಿವೇಣಿ ಸಂಗಮದಲ್ಲಿ ನಟಿ ಪವಿತ್ರಾಸ್ನಾನ ಮಾಡಿದ್ದ ವಿಡಿಯೋ ವೈರಲ್‌ ಆಗಿದೆ. ನಟಿ ಪವಿತ್ರಾಸ್ನಾನ ಮಾಡುತ್ತಿರುವ ವಿಡಿಯೋವನ್ನು ಕೆಲ ಪುರುಷರು ಶೂಟ್ ಮಾಡಿ ರೀಲ್ಸ್ ಮಾಡಿದ್ದಾರೆ. ಈ ಹಿನ್ನೆಲೆ ಕತ್ರಿನಾ ಅನುಮತಿಯಿಲ್ಲದೇ ವಿಡಿಯೋಶೂಟ್ ಮಾಡಿದ ಕಿಡಿಗೇಡಿಗಳಿಗೆ ‘ಕೆಜಿಎಫ್‌ 2’ (KGF 2) ಖ್ಯಾತಿಯ ರವೀನಾ ಟಂಡನ್ ಕಿಡಿಕಾರಿದ್ದಾರೆ.

    ವೈರಲ್ ಆಗಿರುವ ವಿಡಿಯೋದಲ್ಲಿ, ನಟಿ ಪವಿತ್ರಾಸ್ನಾನ ಮಾಡುತ್ತಿರುವ ಇಬ್ಬರೂ ಪುರುಷರು ನಗುತ್ತಾ ‘ಇದು ನಾನು, ಇದು ನನ್ನ ಸಹೋದರ, ಮತ್ತು ಹಿಂದೆ ಕತ್ರಿನಾ ಕೈಫ್ ಇದ್ದಾರೆ ಎಂದು ಹೇಳಿದ್ದಾರೆ. ನಟಿಯ ಅನುಮತಿಯಿಲ್ಲದೇ ವಿಡಿಯೋ ತೆಗೆದಿದಲ್ಲದೇ ನಟಿಯ ನೋಡಿ ನಗುತ್ತಿರುವ ಪುರುಷರ ನಡೆಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ವಿಡಿಯೋ ನೋಡಿ ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) ಕೂಡ ಪ್ರತಿಕ್ರಿಯಿಸಿ, ಇದು ಅಸಹ್ಯಕರ. ಈ ರೀತಿಯ ಜನರು ಶಾಂತಿಯು ಮತ್ತು ಅರ್ಥಪೂರ್ಣ ಕ್ಷಣವನ್ನು ಹಾಳು ಮಾಡುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಘಟನೆಗೆ ನಟಿ ಛೀಮಾರಿ ಹಾಕಿದ್ದಾರೆ. ರವೀನಾ ನಡೆಗೆ ಅನೇಕರು ಬೆಂಬಲಿಸಿದ್ದಾರೆ.

  • ವಿಕ್ಕಿ ಯಾವಾಗಲೂ ಕೂಲ್ ಆಗಿ ಇರುತ್ತಾರೆ: ದಾಂಪತ್ಯದ ಸೀಕ್ರೆಟ್ ಬಿಚ್ಚಿಟ್ಟ ಕತ್ರಿನಾ ಕೈಫ್

    ವಿಕ್ಕಿ ಯಾವಾಗಲೂ ಕೂಲ್ ಆಗಿ ಇರುತ್ತಾರೆ: ದಾಂಪತ್ಯದ ಸೀಕ್ರೆಟ್ ಬಿಚ್ಚಿಟ್ಟ ಕತ್ರಿನಾ ಕೈಫ್

    ಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ (Vicky Kaushal) ಬಾಲಿವುಡ್‌ನ ಬೆಸ್ಟ್ ಜೋಡಿಗಳಲ್ಲಿ ಒಬ್ಬರು ಎಂಬುದನ್ನು ಪ್ರೂವ್ ಮಾಡಿದ್ದಾರೆ. ವಿಕ್ಕಿ ಯಾವಾಗಲೂ ಕೂಲ್ ಆಗಿ ಇರುತ್ತಾರೆ ಎಂದು ಪತಿಯ ನಡೆಗೆ ಕತ್ರಿನಾ ಕೈಫ್ (Katrina Kaif) ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಹೃದಯಾಘಾತದಿಂದ ಬಹುಭಾಷಾ ನಟಿ ಶಕುಂತಲಾ ನಿಧನ

    ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನಟಿ, ತೂಕ ಹೆಚ್ಚಾಗುವ ಕುರಿತು, ಬ್ಯೂಟಿ, ಔಟ್‌ಫಿಟ್‌ಗಳ ಬಗ್ಗೆ ಮಾತನಾಡುವಾಗ ವಿಕ್ಕಿ ಕೌಶಲ್ ಹ್ಯಾಂಡಲ್ ಮಾಡುವ ರೀತಿಯನ್ನು ಕತ್ರಿನಾ ವಿವರಿಸಿದ್ದಾರೆ. ನಾನು ವಿಕ್ಕಿ ಜೊತೆ ಹೊರಗಡೆ ಹೋಗುವಾಗ ತೂಕ ಹೆಚ್ಚಾಗಿರುವ ಬಗ್ಗೆ ಲುಕ್ಸ್ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುತ್ತೇನೆ.

    ಆಗ ವಿಕ್ಕಿ, ನೀವು ಹೇಗಿದ್ದರೂ ಪರವಾಗಿಲ್ಲ. ನೀವು ನೀವಾಗಿರಿ, ನೀವು ಹೇಗಿದ್ದಿರೋ ಹಾಗೆ ಇರಿ ಎಂದು ಕೂಲ್ ಆಗಿ ಹೇಳುತ್ತಾರೆ. ಅವರು ಸದಾ ನನ್ನ ಬೆಂಬಲವಾಗಿ ನಿಂತಿದ್ದಾರೆ ಎಂದು ದಾಂಪತ್ಯದ ಬಗ್ಗೆ ಕತ್ರಿನಾ ಮಾತನಾಡಿದ್ದಾರೆ. ಇದನ್ನೂ ಓದಿ:ರಣ್‌ವೀರ್ ಸಿಂಗ್, ಅಕ್ಷಯ್ ಕುಮಾರ್ ಮನೆ ಪಕ್ಕ ಐಷಾರಾಮಿ ಅಪಾರ್ಟ್‌ಮೆಂಟ್‌ ಖರೀದಿಸಿದ ಪೃಥ್ವಿರಾಜ್

    ಅಂದಹಾಗೆ, 2021ರಲ್ಲಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ರಾಜಸ್ಥಾನದಲ್ಲಿ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು.

  • ಕತ್ರಿನಾ, ದೀಪಿಕಾ ಪಡುಕೋಣೆ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ರಣ್‌ಬೀರ್ ಕಪೂರ್

    ಕತ್ರಿನಾ, ದೀಪಿಕಾ ಪಡುಕೋಣೆ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ರಣ್‌ಬೀರ್ ಕಪೂರ್

    ‘ಅನಿಮಲ್’ (Animal) ಸಿನಿಮಾದ ಸಕ್ಸಸ್ ನಂತರ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ರಣ್‌ಬೀರ್ ನೀಡಿರುವ ಸಂದರ್ಶನವೊಂದರಲ್ಲಿ ಸ್ಟಾರ್ ನಟಿಯರ ಜೊತೆಗಿನ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ನನಗೆ ಸ್ತ್ರೀಲೋಲ, ಚೀಟರ್ ಎಂಬ ಹಣೆಪಟ್ಟಿ ಇದೆ. ಈಗಾಲೂ ಹಾಗೆಯೇ ಬದುಕುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ಧ್ರುವ ಸರ್ಜಾ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಜು.29ರಂದು ಹೊರಬೀಳಲಿದೆ ‘ಕೆಡಿ’ ಚಿತ್ರದ ಅಪ್‌ಡೇಟ್

    ಈ ಹಿಂದೆ ಕತ್ರಿನಾ ಕೈಫ್ (Katrina Kaif) ಮತ್ತು ದೀಪಿಕಾ ಪಡುಕೋಣೆ (Deepika Padukone) ಜೊತೆ ಡೇಟಿಂಗ್ ಮಾಡಿದ್ದರ ಕುರಿತು ರಣ್‌ಬೀರ್ ಕಪೂರ್ (Ranbir Kapoor) ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದಾರೆ. ನಾನು ಈ ಹಿಂದೆ ಇಬ್ಬರು ಯಶಸ್ವಿ ನಟಿಯರೊಂದಿಗೆ ಡೇಟ್ ಮಾಡಿದ್ದೆ. ಅದು ನನ್ನ ಐಡೆಂಟಿಟಿ ಆಗಿ ಹೋಯಿತು. ನನಗೆ ಚೀಟರ್, ಸ್ತ್ರೀಲೋಲ ಎನ್ನುವ ಟ್ಯಾಗ್ ಸಿಕ್ಕಿತು. ನನ್ನ ಜೀವನದ ಬಹುಪಾಲು ನಾನು ಮೋಸಗಾರ ಎಂಬ ಹಣೆಪಟ್ಟಿಯೊಂದಿಗೆ ಬದುಕಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಕುಟುಂಬಕ್ಕೆ 1 ಲಕ್ಷ ನೆರವು ನೀಡಿದ ನಟ ವಿನೋದ್ ರಾಜ್

    ಮಗಳು ರಾಹಾ ಮೇಲೆ ರಣ್‌ಬೀರ್‌ಗೆ ಅಪಾರ ಪ್ರೀತಿ ಇದೆ. ಈ ಮೂಲಕ ರಾಹಾ (Raha) ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಆಲಿಯಾ ಭಟ್ (Aliaa  Bhatt) ಜೊತೆ ಸುಂದರ ಬದುಕು ಕಂಡುಕೊಂಡಿದ್ದಾರೆ ರಣ್‌ಬೀರ್.

    ಅಂದಹಾಗೆ, ದೀಪಿಕಾ ಪಡುಕೋಣೆ ಜೊತೆ ನಟ ಡೇಟ್ ಮಾಡಿದ್ದರು. ಈ ರಿಲೇಷನ್‌ಶಿಪ್‌ಗೆ 2010ರಲ್ಲಿ ಬ್ರೇಕ್ ಬಿದ್ದಿತ್ತು. ಬಳಿಕ 6 ವರ್ಷಗಳ ಡೇಟಿಂಗ್ ನಂತರ 2016ರಲ್ಲಿ ಕತ್ರಿನಾ ಕೈಫ್ ಜೊತೆನೂ ರಣ್‌ಬೀರ್ ಬ್ರೇಕಪ್ ಮಾಡಿಕೊಂಡರು. ನಂತರ ಆಲಿಯಾ ಭಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  • ಕತ್ರಿನಾ ಕೈಫ್ ಜೊತೆ ಸಿನಿಮಾ ಮಾಡುವ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ವಿಕ್ಕಿ ಕೌಶಲ್

    ಕತ್ರಿನಾ ಕೈಫ್ ಜೊತೆ ಸಿನಿಮಾ ಮಾಡುವ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ವಿಕ್ಕಿ ಕೌಶಲ್

    ಬಾಲಿವುಡ್‌ನ ಸ್ಟಾರ್ ಜೋಡಿ ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಸಿನಿಮಾದಲ್ಲೂ ಜೊತೆಯಾಗಿ ನಟಿಸಬೇಕು ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಹೀಗಿರುವಾಗ ಸಂದರ್ಶನವೊಂದರಲ್ಲಿ ಕತ್ರಿನಾ ಜೊತೆ ಸಿನಿಮಾ ಮಾಡುವ ಕುರಿತು ಎದುರಾದ ಪ್ರಶ್ನೆಗೆ ವಿಕ್ಕಿ ಕೌಶಲ್ ರಿಯಾಕ್ಟ್ ಮಾಡಿದ್ದಾರೆ. ಈ ಕುರಿತು‌ ಇಂಟರೆಸ್ಟಿಂಗ್ ವಿಚಾರವೊಂದು ಬಿಚ್ಚಿಟ್ಟಿದ್ದಾರೆ.

    ಕತ್ರಿನಾ ಜೊತೆ ಸಿನಿಮಾ ಮಾಡಲು ಎದುರು ನೋಡುತ್ತಿದ್ದೇನೆ. ಹೊಸ ಕಥೆಗಳು ಅರಸಿ ಬರುತ್ತಿವೆ. ಆದರೆ ನಾವು ಆ ಸಿನಿಮಾ ಮಾಡಬೇಕು ಎಂಬುದಕ್ಕಿಂತ ಆ ಕಥೆಯೇ ನಮ್ಮನ್ನು ಆಯ್ಕೆ ಮಾಡುವ ಹಾಗಿರಬೇಕು. ಸ್ಕ್ರಿಪ್ಟ್‌ ನಮ್ಮ ಜೋಡಿಯನ್ನು ಡಿಮ್ಯಾಂಡ್ ಮಾಡುವ ಹಾಗಿರಬೇಕು ಎಂದು ವಿಕ್ಕಿ ಕೌಶಲ್ ಮಾತನಾಡಿದ್ದಾರೆ. ಇದನ್ನೂ ಓದಿ:ಅಜಿತ್‌ಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್- ‘ಕೆಜಿಎಫ್ 3’ಗೆ ಕನೆಕ್ಟ್ ಆಗಲಿದೆ ಈ ಚಿತ್ರ

    ಅಂದಹಾಗೆ, 2 ವರ್ಷಗಳ ಡೇಟಿಂಗ್ ನಂತರ 2021ರಲ್ಲಿ ಡಿ.9ರಂದು ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ:ಡಾಲಿ ಧನಂಜಯ ಅಜ್ಜಿ ಮಲ್ಲಮ್ಮ ನಿಧನ

    ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಬ್ಯಾಡ್‌ ನ್ಯೂಸ್‌’ ಸಿನಿಮಾ ಬಳಿಕ ರಶ್ಮಿಕಾ (Rashmika Mandanna) ಜೊತೆಗಿನ ‘ಚಾವಾ’ ಸಿನಿಮಾ ರಿಲೀಸ್‌ಗೆ ವಿಕ್ಕಿ ಕೌಶಲ್‌ ಎದುರು ನೋಡ್ತಿದ್ದಾರೆ. ಬಯೋಪಿಕ್‌ ಸಿನಿಮಾ ಆಗಿರೋದ್ರಿಂದ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿದೆ.

  • ಕೊರಗಜ್ಜನ ಕೋಲದಲ್ಲಿ ಕತ್ರಿನಾ ಕೈಫ್‌, ಕೆಎಲ್‌ ರಾಹುಲ್‌ ಭಾಗಿ

    ಕೊರಗಜ್ಜನ ಕೋಲದಲ್ಲಿ ಕತ್ರಿನಾ ಕೈಫ್‌, ಕೆಎಲ್‌ ರಾಹುಲ್‌ ಭಾಗಿ

    ಮಂಗಳೂರು: ಬಾಲಿವುಡ್‌ನ‌ ಖ್ಯಾತ ನಟಿ ಕತ್ರಿನಾ ಕೈಫ್‌(Katrina Kaif), ಕ್ರಿಕೆಟಿಗ ಕೆ.ಎಲ್‌. ರಾಹುಲ್‌ (KL Rahul) ಹಾಗೂ ನಟ ಸುನಿಲ್‌ ಶೆಟ್ಟಿ(Sunil Shetty) ಕುಟುಂಬ ಉಳ್ಳಾಲದ ಕುತ್ತಾರು ಕೊರಗಜ್ಜನ ಕಟ್ಟೆಯಲ್ಲಿ ಭಾನುವಾರ ನಡೆದ ಹರಕೆಯ ಕೋಲದಲ್ಲಿ ಭಾಗಿಯಾಗಿತ್ತು.

    ಕತ್ರಿನಾ ಕೈಫ್‌, ಸುನಿಲ್‌ ಶೆಟ್ಟಿ ಪುತ್ರ ಅಹಾನ್‌ ಶೆಟ್ಟಿ, ಪುತ್ರಿ ಅಥಿಯಾ ಶೆಟ್ಟಿ, ಮ್ಯಾಟ್ರಿಕ್ಸ್‌ ಎಂಟರ್‌ಟೈನ್‌ಮೆಂಟ್‌ನ ರೇಷ್ಮಾ ಶೆಟ್ಟಿ, ಕತ್ರಿನಾ ಪತಿ ವಿಕಿ ಕೌಶಲ್‌ ಹಾಗೂ ವಿ.ಎಂ. ಕಾಮತ್‌ ಸಹಿತ 9 ಮಂದಿಯ ಕೋಲವನ್ನು ಎರಡು ತಿಂಗಳ ಹಿಂದೆ ಬರೆಸಲಾಗಿತ್ತು. ವಿಕಿ ಕೌಶಲ್‌ ಹೊರತುಪಡಿಸಿ ಉಳಿದೆಲ್ಲರೂ ಕೋಲದಲ್ಲಿ ಭಾಗಿಯಾಗಿದ್ದರು.

     ಮಹಿಳೆಯರಿಗೆ ರಾತ್ರಿ ಹೊತ್ತು ಕಟ್ಟೆಯ ಒಳಗೆ ಪ್ರವೇಶ ಇಲ್ಲದ ಕಾರಣ ಕತ್ರಿನಾ, ಅಥಿಯಾ ಮತ್ತು ರೇಷ್ಮಾ ದೈವಸ್ಥಾನದ ಹೊರಗಡೆಯಿಂದ ಕೋಲವನ್ನು ವೀಕ್ಷಿಸಿದರು. ರಾಹುಲ್‌ ಮತ್ತು ಅಹಾನ್‌ ಕೋಲದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಕಸ ತೆಗೆಯಲು 30 ವರ್ಷಕ್ಕೆ ಗುತ್ತಿಗೆ – 45 ಸಾವಿರ ಕೋಟಿ ಟೆಂಡರ್‌ನಲ್ಲಿ 15 ಸಾವಿರ ಕಿಕ್‌ ಬ್ಯಾಕ್‌: ಹೆಚ್‌ಡಿಕೆ ಬಾಂಬ್‌

    ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ದೈವಸ್ಥಾನದ ಆಡಳಿತ ಮಂಡಳಿಯಲ್ಲಿ ಬಾಲಿವುಡ್‌ ಕುಟುಂಬ ಸದಸ್ಯರು ಮನವಿ ಮಾಡಿದ್ದರು. ಸಂಜೆ 6 ಗಂಟೆ ವೇಳೆಗೆ ಕುತ್ತಾರಿಗೆ ಆಗಮಿಸಿದ ಇವರು ಕೋಲ ಮುಗಿದ ನಂತರ ತೆರಳಿದರು.

    ಕುತ್ತಾರುನಲ್ಲಿ ಕೊರಗಜ್ಜನ ಕೋಲ ನೀಡುವ ಮೊದಲು ಟೀಂ‌ ಇಂಡಿಯಾ (Team India) ಆಟಗಾರ ಕೆ.ಎಲ್ ರಾಹುಲ್ ಮಂಗಳೂರು ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ(Bappanadu Sri Durga Parameshwari Temple) ಪತ್ನಿ ಸಮೇತರಾಗಿ ಭೇಟಿ ನೀಡಿದರು.

    ದೇವಿಯ ದರ್ಶನ ಪಡೆದ ಕೆ.ಎಲ್ ರಾಹುಲ್, ಪತ್ನಿ ಅಥಿಯಾ ಶೆಟ್ಟಿ‌ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು.