Tag: ಕತ್ತೆಗಳು

  • ಕತ್ತೆಗಳ ಮೇಲೆ ಇವಿಎಂ ಸಾಗಿಸಿದ ಚುನಾವಣಾ ಅಧಿಕಾರಿಗಳು!

    ಕತ್ತೆಗಳ ಮೇಲೆ ಇವಿಎಂ ಸಾಗಿಸಿದ ಚುನಾವಣಾ ಅಧಿಕಾರಿಗಳು!

    ಚೆನ್ನೈ: ಚುನಾವಣಾ ಅಧಿಕಾರಿಗಳು ಕತ್ತೆಗಳ ಮೇಲೆ ಇವಿಎಂ ಹಾಗೂ ಚುನಾವಣಾ ಸಾಮಗ್ರಿಗಳನ್ನು ಸಾಗಿಸಿರುವ ಪ್ರಸಂಗ ನಿನ್ನೆ ತಮಿಳುನಾಡಿನಲ್ಲಿ ನಡೆದ್ದು, ಭಾರೀ ಸುದ್ದಿಯಾಗಿದೆ.

    ತಮಿಳುನಾಡಿನ ಧರ್ಮಪುರಿ, ದಿಂಡಿಗುಲ್, ಈರೋಡ್, ನಮಕ್ಕಲ್ ಹಾಗೂ ಥೇಣಿ ಭಾಗಗಳಲ್ಲಿ ಸರಿಯಾದ ರಸ್ತೆಗಳ ವ್ಯವಸ್ಥೆಯಿಲ್ಲ. ಹೀಗಾಗಿ ಚುನಾವಣಾ ಅಧಿಕಾರಿಗಳು ಸುಮಾರು 11 ಕಿ.ಮೀ. ವರೆಗೆ ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾಯಿತು. ಮತದಾನ ಸಾಮಗ್ರಿಗಳನ್ನು ಕತ್ತೆಗಳ ಮೇಲೆ ಸಾಗಿಸಬೇಕಾದ ವಿಪರ್ಯಾಸ ಅಧಿಕಾರಿಗಳಿಗೆ ಎದುರಾಯಿತು.

    ಗುಡ್ಡಗಾಡು ಪ್ರದೇಶದಲ್ಲಿ ಮತಗಟ್ಟೆಗಳಿದ್ದು, ಅಲ್ಲಿ ಸುಮಾರು 300 ರಿಂದ 1,000 ಮತದಾರರು ಮಾತ್ರ ಇರುತ್ತಾರೆ. ಅಂತಹ ಪ್ರದೇಶಗಳಿಗೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಕೂಡ ಇಲ್ಲ. ಹೀಗಾಗಿ ಅಧಿಕಾರಿಗಳು ಕಾಲ್ನಡಿಗೆಯ ಮೂಲಕವೇ ಮತಗಟ್ಟೆ ತಲುಪಿ, ಮತದಾನ ಪ್ರಕ್ರಿಯೆ ಮುಗಿಸಿಕೊಂಡು ಮರಳಿದ್ದಾರೆ.

    ಮತಗಟ್ಟೆಗೆ ಹೋಗುವಾಗ ಹಾಗೂ ಅಲ್ಲಿಂದ ಮರಳುವಾಗ ಇವಿಎಂ ಹಾಗೂ ಚುನಾವಣಾ ಸಾಮಗ್ರಿಗಳನ್ನು ಸಾಗಿಸಲು ಅಧಿಕಾರಿಗಳು ಕತ್ತೆಗಳನ್ನು ಬಳಸಿಕೊಂಡಿದ್ದಾರೆ. ಕೆಲವು ಸಾಮಗ್ರಿಗಳನ್ನು ಗೋಣಿ ಚೀಲಗಳಲ್ಲಿ ತುಂಬಿ ಕತ್ತೆಗಳ ಮೇಲೆ ಹಾಕಿದ್ದು, ಸ್ವಲ್ಪ ಸಾಮಗ್ರಿಗಳನ್ನು ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸಿದ್ದಾರೆ.

    ಈ ಮೂಲಕ ಕೊಡೈಕನಲ್ ಪರ್ವತ ಶ್ರೇಣಿಯ ದಿಂಡಿಗುಲ್, ಈರೋಡ್, ನಾಮಕ್ಕಲ್ ಗಳಲ್ಲಿನ ಮತಗಟ್ಟೆಗೆ ತಲುಪಿ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ದಟ್ಟವಾದ ಕಾಡುಗಳಲ್ಲಿ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ಪಡೆಯು ಚುನಾವಣಾ ಅಧಿಕಾರಿಗಳಿಗೆ ಭದ್ರತೆ ಒದಗಿಸಿತ್ತು.

  • ವರುಣರಾಯನಿಗಾಗಿ ಕತ್ತೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು!

    ವರುಣರಾಯನಿಗಾಗಿ ಕತ್ತೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು!

    ದಾವಣಗೆರೆ: ರಾಜ್ಯದ ವಿವಿದೆಡೆ ಮಳೆ ಸುರಿಯುತ್ತಿದ್ದು. ಕೆರೆ ಕಟ್ಟೆಗಳು ತುಂಬಿದ್ದು ಡ್ಯಾಂಗಳಿಂದ ನೀರನ್ನು ಹೊರ ಬಿಡಲಾಗುತ್ತಿದೆ. ಆದರೆ ದಾವಣಗೆರೆಯ ಸುತ್ತಮುತ್ತಲೂ ಮಳೆಯ ಛಾಯೆ ಇಲ್ಲ. ಹಾಗಾಗಿ ಗ್ರಾಮಸ್ಥರು ಮೂಢನಂಬಿಕೆಯ ಮೊರೆ ಹೋಗಿ ಕತ್ತೆಗಳಿಗೆ ಮದುವೆ ಮಾಡಿಸಿದ್ದಾರೆ.

    ಹರಪ್ಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಪ್ರದೇಶದಲ್ಲಿ ಕತ್ತೆಗಳ ಮದುವೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮಳೆ ಸುಳಿವಿಲ್ಲದ ಕಾರಣ ಮೂಢನಂಬಿಕೆಗಳ ಮೊರೆ ಹೋದ ಗ್ರಾಮಸ್ಥರು, ವರುಣದೇವ ಮುನಿಕೊಂಡಿದ್ದಾನೆ. ಕತ್ತೆಗಳಿಗೆ ಮದುವೆ ಮಾಡಿದರೆ ವರುಣ ದೇವ ಕೃಪೆ ತೋರಿ ರೈತರ ಮೇಲೆ ಕರುಣಿಸುತ್ತಾನೆ ಎನ್ನುವ ನಂಬಿಕೆಯನ್ನು ಹೊಂದಿದ್ದರು. ಇದರಿಂದ ಗ್ರಾಮದ ರೈತರು ಕತ್ತೆಗಳಿಗೆ ಮದುವೆ ಮಾಡಿಸಿ ಮೆರವಣಿಗೆ ನಡೆಸಿದ್ದಾರೆ.

    ಕೈಗೆ ಬಂದ ಫಸಲು ಸಹ ಮಳೆ ಇಲ್ಲದೆ ಒಣಗುತ್ತಿದ್ದು, ಆದಷ್ಟು ಬೇಗ ಮಳೆ ಬಂದರೆ ರೈತರ ಬೆಳೆಗಳು ಉಳಿಯುತ್ತವೆ. ಅದಕ್ಕೆ ವರುಣದೇವಾ ಕರುಣೆ ತೋರಲಿ ಎಂದು ರೈತರು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡರು.

  • ವಾದ್ಯ ಮೇಳಗಳೊಂದಿಗೆ ಕತ್ತೆಗಳ ಮದುವೆ ಮಾಡಿದ ಗ್ರಾಮಸ್ಥರು!

    ವಾದ್ಯ ಮೇಳಗಳೊಂದಿಗೆ ಕತ್ತೆಗಳ ಮದುವೆ ಮಾಡಿದ ಗ್ರಾಮಸ್ಥರು!

    ಬೆಳಗಾವಿ: ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಕತ್ತೆಗಳ ಮದುವೆ ಮಾಡಿಸಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿ ಸತತ ಮೂರು ವರ್ಷಗಳಿಂದ ಬರಗಾಲವಿರುವ ಹಿನ್ನೆಲೆಯಲ್ಲಿ ಈ ವರ್ಷ ಉತ್ತಮ ಮಳೆಗಾಗಿ ಕತ್ತೆಗಳ ಮದುವೆ ಮಾಡಿಸಿದ್ದಾರೆ. ವಾದ್ಯ ಮೇಳಗಳೊಂದಿಗೆ ಗ್ರಾಮಸ್ಥರು ಕತ್ತೆಗಳ ಮದುವೆ ಮಾಡಿಸಿದ್ದಾರೆ.

    ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಈ ಮದುವೆ ಮಾಡಿಸಿದ್ದು, ಗ್ರಾಮದ ಮಹಿಳೆಯರು ಹಾಗೂ ಪುರುಷರು ಮದುವೆಯಲ್ಲಿ ಭಾಗಿಯಾಗಿದ್ದರು.