Tag: ಕತ್ತು

  • ಪಾಸ್‍ಪೋರ್ಟ್ ಸುಟ್ಟುಹಾಕಿದ್ದಕ್ಕೆ ಪತ್ನಿ ಕತ್ತು ಸೀಳಿದ – ಆಕೆ ಕೈ ಹಿಡಿದು ಇಷ್ಟವಾದ ಹಾಡು ನುಡಿಸಿದ ಪಾಗಲ್

    ಪಾಸ್‍ಪೋರ್ಟ್ ಸುಟ್ಟುಹಾಕಿದ್ದಕ್ಕೆ ಪತ್ನಿ ಕತ್ತು ಸೀಳಿದ – ಆಕೆ ಕೈ ಹಿಡಿದು ಇಷ್ಟವಾದ ಹಾಡು ನುಡಿಸಿದ ಪಾಗಲ್

    ತಲ್ಲಹಸ್ಸೀ: ಪಾಸ್‍ಪೋರ್ಟ್ ಸುಟ್ಟುಹಾಕಿದ್ದಕ್ಕೆ ಪತ್ನಿ ಕತ್ತು ಸೀಳಿ ಕೊಂದು ಆಕೆ ಕೈ ಹಿಡಿದು ಇಷ್ಟವಾದ ಹಾಡು ನುಡಿಸಿದ ವಿಚಿತ್ರ ಘಟನೆ ಫ್ಲೋರಿಡಾದಲ್ಲಿ ನಡೆದಿದೆ.

    ಅಲ್ಟಾಮೊಂಟೆ ಸ್ಪ್ರಿಂಗ್ಸ್ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಕರೆ ಬಂದಿದ್ದು, ನಂತರ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಪಾಗಲ್ ಪತಿಯು ಪತ್ನಿಯ ಕತ್ತು ಸೀಳಿ ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    Man Kills Wife, Holds Hand And Plays Her Favourite Song After: Report

    ನಡೆದಿದ್ದೇನು?
    ಕ್ಸಿಚೆನ್ ಯಾಂಗ್(21) ಆರೋಪಿ. ಯಾಂಗ್‍ನ ಪತ್ನಿ ಆತನ ಪಾಸ್‍ಪೋರ್ಟ್ ಸುಟ್ಟು ಹಾಕಿದ್ದಾಳೆ. ಇದರಿಂದ ಯಂಗ್ ಅವರ ಬಾಸ್‍ನಿಂದ ಚೆನ್ನಾಗಿ ಬೈಯಿಸಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಆತ ಸಿಟ್ಟಿನಿಂದ ಪತ್ನಿಯನ್ನು ಬಾತ್‍ರೂಮ್‌ನಲ್ಲಿ ಗಂಟಲು ಕಟ್ ಮಾಡಿ ಸಾಯಿಸಿದ್ದಾನೆ. ಈ ವೇಳೆ ಆಕೆ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಕ್ಕೆ ಬಾತ್‍ರೂಂ ಟಾಬ್‍ಗೆ ಮುಳುಗಿಸಿದ್ದಾನೆ.

    ನಂತರ ಆಕೆಯ ಕೈ ಹಿಡಿದುಕೊಂಡು ಅವಳಿಗೆ ಇಷ್ಟವಾದ ಹಾಡನ್ನು ನುಡಿಸುತ್ತಿದ್ದ. ಇತ್ತ ಯಂಗ್‍ನ ಬಾಸ್ ಪೊಲೀಸರಿಗೆ, ಯಂಗ್ ಕೆಲಸಕ್ಕೆ ಬರುತ್ತಿಲ್ಲ ಎಂದು ದೂರು ನೀಡಿದ್ದಾರೆ. ನಂತರ ಪೊಲೀಸರು ಯಾಂಗ್ ಅಪಾರ್ಟ್‍ಮೆಂಟ್‍ಗೆ ಹೋಗಿದ್ದು, ದೃಶ್ಯ ನೋಡಿ ಶಾಕ್ ಆಗಿದ್ದಾರೆ.

    ಪೊಲೀಸರು ಯಂಗ್ ಮನೆಗೆ ಪ್ರವೇಶ ಮಾಡುತ್ತಿದ್ದಂತೆ ಬಾತ್‍ರೂಮ್‌ನಲ್ಲಿ ರಕ್ತದ ಮಡುವಿನ ಯಾಂಗ್‌ನ ಪತ್ನಿಯನ್ನು ನೋಡಿ ಶಾಕ್ ಆಗಿದ್ದಾರೆ. ಈ ಕುರಿತು ವಿಚಾರಣೆ ಮಾಡಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv

  • ಮಹಿಳೆ ಕತ್ತು ಹಿಸುಕಿ ಸಮಾಧಿ ಮಾಡಲು ಹೋಗಿ ತಾನೇ ಸತ್ತ

    ಮಹಿಳೆ ಕತ್ತು ಹಿಸುಕಿ ಸಮಾಧಿ ಮಾಡಲು ಹೋಗಿ ತಾನೇ ಸತ್ತ

    ವಾಷಿಂಗ್ಟನ್: ಮಹಿಳೆಯ ಕತ್ತು ಹಿಸುಕಿ 60ರ ವೃದ್ಧ ಕೊಂದಿದ್ದಾನೆ. ಆಕೆಯನ್ನು ಸಮಾಧಿ ಮಾಡಲು ಹೋಗಿ 60ರ ವೃದ್ಧನೂ ಸಾವನ್ನಪ್ಪಿರುವ ವಿಲಕ್ಷಣ ಘಟನೆ ಯುಎಸ್‍ನಲ್ಲಿ ನಡೆದಿದೆ.

    ದಕ್ಷಿಣ ಕೆರೊಲಿನಾದ ತನ್ನ ಮನೆಯ ಹಿಂಭಾಗದಲ್ಲಿ ಮಹಿಳೆಯನ್ನು 60 ವರ್ಷದ ವೃದ್ಧ ಕತ್ತು ಹಿಸುಕಿ ಸಾಯಿಸಿದ್ದಾನೆ. ನಂತರ ಮಹಿಳೆಯನ್ನು ಸಮಾಧಿ ಮಾಡುವಾಗ ವೃದ್ಧನಿಗೆ ಕಾರ್ಡಿಯಾಕ್ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: 80ಕ್ಕೂ ಹೆಚ್ಚು ಮಕ್ಕಳನ್ನ ಕಾಡುತ್ತಿದೆ ಟೊಮೆಟೊ ಜ್ವರ – ಏನಿದರ ಲಕ್ಷಣ? 

    ಈ ಕುರಿತು ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, 60 ವರ್ಷದ ಜೋಸೆಫ್ ಮೆಕಿನ್ನನ್ ಮೃತಪಟ್ಟಿದ್ದಾರೆ. ಮೆಕಿನ್ನನ್‍ಗೆ ಯಾವುದೇ ರೀತಿಯ ಆಘಾತದ ಲಕ್ಷಣಗಳಿರಲಿಲ್ಲ. ಆದರೆ ನೈಸರ್ಗಿಕ ಕಾರಣಗಳಿಂದ ಈ ಸಾವು ಸಂಭವಿಸಿದೆ. ಈ ಕುರಿತು ಜೋಸೆಫ್ ಸಂಬಂಧಿಕರಿಗೆ ತಿಳಿಸಿದ್ದೇವೆ ಎಂದು ತಿಳಿಸಿದರು.

    ಮೆಕಿನ್ನನ್ ಮನೆಯನ್ನು ಶೋಧಿಸುತ್ತಿರುವ ವೇಳೆ ಸಮಾಧಿಯೊಂದು ಸಿಕ್ಕಿದ್ದು, ಪಕ್ಕದಲ್ಲಿ 65 ವರ್ಷದ ವೃದ್ಧೆ ಮೃತದೇಹ ಪತ್ತೆಯಾಗಿದೆ. ಮೃತದೇಹದ ಬಗ್ಗೆ ತನಿಖೆ ಮಾಡಿದಾಗ ಆಕೆ ಪೆಟ್ರೀಷಿಯಾ ರುತ್ ಡೆಂಟ್ ಎಂದು ತಿಳಿಸಿದುಬಂದಿದೆ ಎಂದು ವಿವರಿಸಿದರು.

    ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಪೆಟ್ರೀಷಿಯಾ ರುತ್ ಡೆಂಟ್ ಸಹಜ ಸಾವಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಈ ಕುರಿತು ಪರಿಶೀಲಿಸಿದಾಗ ಮೆಕಿನ್ನನ್ ಅವರು ಪೆಟ್ರೀಷಿಯಾ ರುತ್ ಡೆಂಟ್ ಮೇಲೆ ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳು ಸಿಕ್ಕಿವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳಲು ಟವರ್ ಹತ್ತಿದ್ದ ಮಹಿಳೆ ಪ್ರಾಣ ಉಳಿಸಿದ ಕಣಜಗಳು

  • ದೇವಾಲಯಕ್ಕೆ ತೆರಳಿ ನಾಲಿಗೆ ಕತ್ತರಿಸಿ ದೇವರಿಗೆ ಅರ್ಪಿಸಿದ ಯುವಕ

    ದೇವಾಲಯಕ್ಕೆ ತೆರಳಿ ನಾಲಿಗೆ ಕತ್ತರಿಸಿ ದೇವರಿಗೆ ಅರ್ಪಿಸಿದ ಯುವಕ

    – ಇನ್ನೊಂದೆಡೆ ಕತ್ತು ಕುಯ್ದುಕೊಂಡ ವ್ಯಕ್ತಿ
    – ಇಬ್ಬರ ಆರೋಗ್ಯವೂ ಸ್ಥಿರ

    ಲಕ್ನೋ: ಅಚ್ಚರಿಯ ಘಟನೆ ಎಂಬಂತೆ 22 ವರ್ಷದ ಯುವಕನೊಬ್ಬ ದೇವಸ್ಥಾನಕ್ಕೆ ತೆರಳಿ ದೇವರ ಎದುರು ತನ್ನ ನಾಲಿಗೆಯನ್ನು ಕತ್ತರಿಸಿಕೊಂಡು ಅರ್ಪಣೆ ಮಾಡಿದ ಘಟನೆ ಉತ್ತರಪ್ರದೇಶದ ಬಬೇರು ಪ್ರದೇಶದಲ್ಲಿ ನಡೆದಿದೆ.

    ಯುವಕನನ್ನು ಆತ್ಮರಾಮ್ ಎಂದು ಗುರುತಿಸಲಾಗಿದೆ. ಈತ ಶನಿವಾರ ದೇವಸ್ಥಾನಕ್ಕೆ ತೆರಳಿದ್ದಾನೆ. ಬಳಿಕ ಅಲ್ಲಿ ದೇವರ ಮುಂದೆಯೇ ತನ್ನ ನಾಲಿಗೆಯನ್ನು ತಾನೇ ಕತ್ತರಿಸಿಕೊಂಡು ದೇವರಿಗೆ ಅರ್ಪಿಸಿದ್ದಾನೆ. ಘಟನೆಯ ಬಳಿಕ ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಯುವಕನ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ಆತ್ಮರಾಮ್ ತಂದೆ ಮಾತನಾಡಿ, ಮಗ ಮಾನಸಿಕ ಅಸ್ವಸ್ಥನಾಗಿದ್ದಾನೆ. ಆತ ನವರಾತ್ರಿ ಉಪವಾಸ ಮಾಡಿದ್ದು, ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ.

    ಇನ್ನೊಂದೆಡೆ 49 ವರ್ಷದ ವ್ಯಕ್ತಿಯೊಬ್ಬರು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಿವನಿಗೆ ತನ್ನನ್ನು ತಾನು ಅರ್ಪಿಸಿಕೊಳ್ಳುವ ಸಲುವಾಗಿ ಈ ಕೃತ್ಯ ಎಸಗಿದ್ದಾರೆ. ಈ ಘಟನೆ ಉತ್ತರಪ್ರದೇಶದ ಕುರಾರ ಪ್ರದೇಶದಲ್ಲಿ ನಡೆದಿದೆ.

    ವ್ಯಕ್ತಿಯನ್ನು ರುಕ್ಮಾನಿ ಮಿಶ್ರಾ ಎಂದು ಗುರುತಿಸಲಾಗಿದ್ದು, ಇವರು ಶನಿವಾರ ರಾತ್ರಿ ಕೋಟೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ತನ್ನ ಕತ್ತಿಗೆಯನ್ನು ಚೂರಿಯಿಂದ ಕೊಯ್ದುಕೊಂಡಿದ್ದಾರೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ ರುಕ್ಮಾನಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಇವರ ಆರೋಗ್ಯ ಕೂಡ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

    ಈ ಎರಡೂ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿರುವುದಾಗಿ ಎಸ್‍ಪಿ ತಿಳಿಸಿದ್ದಾರೆ.

  • ಕಣ್ಣುಗಳನ್ನು ಕಿತ್ತು, ಗಂಟಲು ಸೀಳಿ ಲಾರಿ ಚಾಲಕನನ್ನು ಫ್ಯಾನಿಗೆ ನೇತಾಕಿದ ಕ್ರೂರಿ

    ಕಣ್ಣುಗಳನ್ನು ಕಿತ್ತು, ಗಂಟಲು ಸೀಳಿ ಲಾರಿ ಚಾಲಕನನ್ನು ಫ್ಯಾನಿಗೆ ನೇತಾಕಿದ ಕ್ರೂರಿ

    – ಚಾಲಕನ ಪತ್ನಿ ಜೊತೆ ಕೊಲೆಗಾರನ ಅಕ್ರಮ ಸಂಬಂಧದ ಶಂಕೆ
    – ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ

    ಭೋಪಾಲ್: ಲಾರಿ ಚಾಲಕನೋರ್ವನ ಕತ್ತು ಸೀಳಿ, ಕಣ್ಣುಗಳನ್ನು ಕಿತ್ತು ಕೊಲೆಗೈದು, ಆತ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲು ಆತನನ್ನು ಫ್ಯಾನಿಗೆ ನೇತಾಕಿದ ಕೊಲೆಗಾರ ಪರಾರಿಯಾದ ಘಟನೆ ಮಧ್ಯಪ್ರದೇಶದ ಮನಪುರ ಪಟ್ಟಣದಲ್ಲಿ ನಡೆದಿದೆ.

    ಮನಪುರದ ಸೊಂದಿಯಾ ಮೊಹಲ್ಲಾದ ನಿವಾಸಿ ಲಾರಿ ಚಾಲಕ ರವಿ(27) ಮೃತ ದುರ್ದೈವಿ. ಆರೋಪಿ ಬಗ್ಗೆ ಇನ್ನು ಮಾಹಿತಿ ಲಭ್ಯವಾಗಿಲ್ಲ. ಸೊಂದಿಯಾ ಮೊಹಲ್ಲಾದ ಅಪಾರ್ಟ್‍ಮೆಂಟ್ ಒಂದರಲ್ಲಿ ರವಿ ತನ್ನ ಪತ್ನಿ ಕವಿತಾ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದನು. ಶುಕ್ರವಾರ ಪತ್ನಿ ಹಾಗೂ ಮಕ್ಕಳು ಸಂಬಂಧಿಕರ ಮನೆಗೆ ತೆರೆಳಿದ್ದ ವೇಳೆ ದುಷ್ಕರ್ಮಿ ಮನೆಗೆ ನುಗ್ಗಿ ರವಿಯನ್ನು ಬರ್ಬರವಾಗಿ ಕೊಲೆಗೈದಿದ್ದಾನೆ.

    ಮೊದಲು ರವಿಯ ಕತ್ತು ಸೀಳಿ ಕೊಲೆಗೈದು, ಬಳಿಕ ಆತನ ಎರಡು ಕಣ್ಣುಗಳನ್ನೂ ಕಿತ್ತು ಆರೋಪಿ ಕ್ರೂರತೆ ಮೆರೆದಿದ್ದಾನೆ. ಅಷ್ಟೇ ಅಲ್ಲದೆ ಇದು ಕೊಲೆಯಲ್ಲ ಆತ್ಮಹತ್ಯೆ ಎಂದು ಬಿಂಬಿಸಲು ರವಿಯ ಮೃತದೇಹವನ್ನು ಫ್ಯಾನಿಗೆ ನೇತಾಕಿ, ನೇಣಿಗೆ ಶರಣಾಗಿರುವ ರೀತಿ ಕಾಣುವಂತೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

    ಇತ್ತ ಅಕ್ಕಪಕ್ಕದ ಮನೆಯವರು ರವಿ ಕುಟುಂಬವೆಲ್ಲ ಸಂಬಂಧಿಕರ ಮನೆಗೆ ತೆರಳಿದ್ದಾರೆ, ಮನೆಯಲ್ಲಿ ಯಾರೂ ಇಲ್ಲ ಎಂದು ಭಾವಿಸಿದ್ದರು. ಆದರೆ ಘಟನೆ ನಡೆದ ಮರುದಿನ ರವಿ ಮನೆ ಬಳಿ ಹೋಗುತ್ತಿದ್ದ ನೆರೆ ಮನೆಯವರು ಅನುಮಾನ ಬಂದು ಕಿಟಕಿಯಲ್ಲಿ ನೋಡಿದಾಗ ರವಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

    ತಕ್ಷಣ ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಅಲ್ಲದೇ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ರವಿ ಪತ್ನಿ ಜೊತೆ ಕೊಲೆಗಾರನ ಅಕ್ರಮ ಸಂಬಂಧವಿರಬಹುದು ಎಂದು ಶಂಕಿಸಿದ್ದಾರೆ. ಜೊತೆಗೆ ಹಣ ಅಥವಾ ಆಸ್ತಿ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂಬ ಮಾತುಗಳು ಕೂಡ ಕೇಳಿಬಂದಿದೆ.

  • ಮೀಟರ್ ಬಡ್ಡಿ ದಂಧೆ- ಮೂವರು ಮಕ್ಕಳ ಕತ್ತು ಕೊಯ್ದು ತಾಯಿ ಆತ್ಮಹತ್ಯೆಗೆ ಯತ್ನ!

    ಮೀಟರ್ ಬಡ್ಡಿ ದಂಧೆ- ಮೂವರು ಮಕ್ಕಳ ಕತ್ತು ಕೊಯ್ದು ತಾಯಿ ಆತ್ಮಹತ್ಯೆಗೆ ಯತ್ನ!

    ಚಿಕ್ಕಬಳ್ಳಾಪುರ: ಮೀಟರ್ ಬಡ್ಡಿದಂಧೆಕೋರರ ಕಾಟದಿಂದ ಬೇಸತ್ತ ತಾಯಿ, ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

    ತಾಯಿ ರಾಜಮ್ಮ, ತನ್ನ ಮಕ್ಕಳಾದ ಮನೋಜ್, ಅಮೃತ, ಭೂಮಿಕಾಳ ಕತ್ತನ್ನು ಬ್ಲೇಡ್ ನಿಂದ ಕೊಯ್ದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಸದ್ಯ ನಾಲ್ವರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ರಾಜಮ್ಮ ತನ್ನ ಮೂವರು ಮಕ್ಕಳ ಕತ್ತನ್ನು ಬ್ಲೇಡ್ ನಿಂದ ಕೊಯ್ದು ಬಳಿಕ ಜಿರಳೆ ಔಷಧಿ ನುಂಗಿ, ತನ್ನ ಕತ್ತನ್ನು ಕೂಡ ಕೊಯ್ದುಕೊಳ್ಳುವ ಮೂಲಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕತ್ತು ಕೊಯ್ಯುವಾಗ ನೋವಿನಿಂದ ಚೀರಾಡುತ್ತಿರುವ ಮಕ್ಕಳ ಧ್ವನಿ ಅಕ್ಕ-ಪಕ್ಕದ ಮನೆಯವರಿಗೆ ಕೇಳಿಸಿದೆ. ಕೂಡಲೇ ನೆರೆಹೊರೆಯವರು ಸ್ಥಳಕ್ಕೆ ದೌಡಾಯಿಸಿ ಎಲ್ಲರನ್ನು ರಕ್ಷಿಸಿದ್ದಾರೆ. ಸದ್ಯ ತಾಯಿ ಸೇರಿ ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಂತಾಮಣಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಅಕ್ಕ-ಪಕ್ಕದ ಮನೆಯ ಮಹಿಳೆಯರು ಬಡ್ಡಿಗೆ ಹಣ ಕೊಡುತ್ತಿದ್ದರು. ಹೀಗಾಗಿ ನಾನು 1 ಲಕ್ಷದಷ್ಟು ಹಣವನ್ನು ಬಡ್ಡಿಗೆ ಪಡೆದುಕೊಂಡಿದ್ದೆ. ಆದ್ರೆ ಪತಿ ವೆಂಕಟೇಶ್ ಕುಡಿತದ ದಾಸನಾಗಿದ್ದರಿಂದ ಬಡ್ಡಿ ಕಟ್ಟಿಲ್ಲ. ಸದ್ಯ ನನಗೆ ಬಡ್ಡಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಬಡ್ಡಿಯವರು ಪದೇ ಪದೇ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದಾರೆ. ಪರಿಣಾಮ ಮನನೊಂದು ಈ ಕೃತ್ಯ ಎಸಗಿರುವುದಾಗಿ ಮಹಿಳೆ ತಿಳಿಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆಯನ್ನು ಹೋಗಲಾಡಿಸಬೇಕು ಅಂತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಪ್ರಯತ್ನ ಮಾಡುತ್ತಿದ್ದರೂ, ಕೆಲವೆಡೆ ದಂಧೆ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಇದೊಂದು ನೈಜ ಉದಾಹರಣೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆ ವೇಳೆ ಕೊಟ್ಟಿದ್ದ ಫ್ಲ್ಯಾಟ್ ತನ್ನ ಹೆಸರಿಗೆ ಬರೆದುಕೊಡದಿದ್ದಕ್ಕೆ ಪತ್ನಿಯನ್ನೇ ಕೊಂದ!

    ಮದ್ವೆ ವೇಳೆ ಕೊಟ್ಟಿದ್ದ ಫ್ಲ್ಯಾಟ್ ತನ್ನ ಹೆಸರಿಗೆ ಬರೆದುಕೊಡದಿದ್ದಕ್ಕೆ ಪತ್ನಿಯನ್ನೇ ಕೊಂದ!

    ಹೈದರಾಬಾದ್: ಹೆಚ್ಚಿನ ವರದಕ್ಷಿಣೆಗಾಗಿ ಪತಿಯೊಬ್ಬ ತನ್ನ ಪತ್ನಿಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಹೈದರಾಬಾದ್ ನ ಬಂಜಾರಾ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಅಸೀಮಾ(19) ಎಂಬಾಕೆಯೇ ತನ್ನ ಪತಿ ಸಿರಾಜ್ ನಿಂದ ಕೊಲೆಯಾದ ದುರ್ದೈವಿ ಮಹಿಳೆ. ಆರೋಪಿ ಸಿರಾಜ್ ಸನತ್ ನಗರ್ ಎಂಬಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದು, ಈತ ಕಳೆದ ವರ್ಷ ಶ್ರೀ ಕಷ್ಣ ನಗರದ ಅಸೀಮಾಳನ್ನು ಮದುವೆಯಾಗಿದ್ದನು.

    ಮದುವೆ ಸಂದರ್ಭದಲ್ಲಿ ಸಿರಾಜ್, ಅಸೀಮಾ ಮನೆಯಿಂದ 1.5 ಲಕ್ಷ ನಗದು, 200 ಗ್ರಾಂ ಚಿನ್ನ ಹಾಗೂ 50 ಲಕ್ಷ ಮೌಲ್ಯದ ಫ್ಲ್ಯಾಟ್ ನ್ನು ವರದಕ್ಷಿಣೆಯಾಗಿ ಪಡೆದಿದ್ದನು. ಇದುವರೆಗೆ ಆ ಫ್ಲ್ಯಾಟ್ ಅಸೀಮಾಳ ಹೆಸರಲ್ಲಿದೆ. ಇದೀಗ ಅದನ್ನು ತನ್ನ ಹೆಸರಿಗೆ ಬರೆದುಕೊಡಬೇಕಾಗಿ ಅಸೀಮಾ ತಂದೆಗೆ ಸಿರಾಜ್ ಪೀಡಿಸುತ್ತಿದ್ದನು.

    ಇದೇ ವಿಚಾರಕ್ಕೆ ಆಗಾಗ ಅಸೀಮಾ ಹಾಗೂ ಪತಿ ಸಿರಾಜ್ ಮಧ್ಯೆ ಜಗಳ ನಡೆಯುತ್ತಿತ್ತು. ಆಗಸ್ಟ್ 18ರಂದು ಕೂಡ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿತ್ತು. ಗಲಾಟೆ ತಾರಕಕ್ಕೇರಿದ್ದು, ಆಸೀಮಾಳಿಗೆ ಥಳಿಸಿ ಮನೆಯಿಂದ ಹೊರಗೆ ಹಾಕಿದ್ದನು. ಗಂಡನ ಕೃತ್ಯದಿಂದಾಗಿ ಮನೆಯಿಂದ ಹೊರಗಡೆಯಿದ್ದ ಅಸೀಮಾ ತನ್ನ 4 ತಿಂಗಳ ಗಂಡು ಮಗುವಿನೊಂದಿಗೆ ನೇರವಾಗಿ ತವರು ಮನೆಗೆ ತೆರಳಿದ್ದಾಳೆ.

    ಹೀಗೆ ಮನೆಗೆ ತೆರಳಿದ ಅಸೀಮಾ, ನಡೆದ ಘಟನೆಯನ್ನು ತನ್ನ ತಂದೆಯ ಬಳಿ ವಿವರಿಸಿದ್ದಾಳೆ. ಮಗಳ ಅಳಲನ್ನು ಆಲಿಸಿದ ತಂದೆ, ಅಳಿ ಸಿರಾಜ್ ಬಳಿ ಮಾತುಕತೆ ನಡೆಸಿ ಸಂಧಾನ ಮಾಡಿ ಮತ್ತೆ ಮಗಳನ್ನು ಗಂಡನ ಮನೆಗೆ ಕಳುಹಿಸಿದ್ದಾರೆ. ಆದ್ರೆ ಭಾನುವಾರ ಮುಂಜಾನೆ ಕುಟುಂಬಸ್ಥರು ಮಲಗಿದ್ದ ಸಂದರ್ಭದಲ್ಲಿ ಪತಿ ಸಿರಾಜ್ ತಾವು ಮಲಗಿದ್ದ ಕೊಣೆಯ ಬಾಗಿಲು ಹಾಕಿಕೊಂಡು ಪತ್ನಿ ಅಸೀಮಾಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅಸೀಮಾ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕೃತ್ಯದ ಬಳಿಕ ಸಿರಾಜ್ ಹಾಗೂ ಆತನ ಕುಟುಂಬಸ್ಥರು ತಲೆಮರೆಸಿಕೊಂಡಿದ್ದಾರೆ.

     

    ಇತ್ತ ಮಗಳ ಮೇಲಿನ ಕೃತ್ಯದ ವಿಚಾರ ತಿಳಿದ ಕೂಡಲೇ ಅಸೀಮಾ ತಂದೆ ಆಕೆಯ ಮನೆಯ ಅಕ್ಕಪಕ್ಕದವರಿಗೆ ಮಾಹಿತಿ ನೀಡಿ ಮಗಳನ್ನು ನೋಡಿ ಬರಲು ತಿಳಿಸಿದ್ದಾರೆ. ಆದ್ರೆ ಅದಾಗಲೇ ಮಗಳು ಸಾವನ್ನಪ್ಪಿದ್ದಾಳೆ ಎಂದು ತಿಳಿದು ಅವರು ಶಾಕ್ ಗೆ ಒಳಗಾಗಿದ್ದಾರೆ. ಕೂಡಲೇ ಬಂಜಾರಾ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮಾಹಿತಿ ಕಲೆಹಾಕಿದ್ದಾರೆ. ಸದ್ಯ ಅಸೀಮಾ ತಂದೆಯ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

    ತಲೆಮರೆಸಿಕೊಂಡಿರು ಆರೋಪಿ ಸಿರಾಜ್ ಗಾಗಿ ಪೊಲೀಸರು ಆತನ ಫೋನ್ ಟ್ರೇಸ್ ಮಾಡಿದ್ದಾರೆ. ಆದ್ರೆ ಅದಾಗಲೇ ಆತ ತಾನೆಲ್ಲಿದ್ದೇನೆ ಅನ್ನೋದು ಗೊತ್ತಾಗದಂತೆ ಸಿಗ್ನಲ್ ಡಿಸ್ ಕನೆಕ್ಟ್ ಮಾಡಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv